ವಿಭಾಗಗಳು

ಸುದ್ದಿಪತ್ರ


 

Archive for December, 2008

ಸಾಂಸ್ಕೃತಿಕ ಆಕ್ರಮಣಗಳು ಮತ್ತು ಪರಿಣಾಮಗಳು

Tuesday, December 23rd, 2008

ರಾಷ್ಟ್ರವೆಂದರೇನು? ಬರಿಯ ಕಲ್ಲು – ಮಣ್ಣೇ? ನಾವು ಕಟ್ಟಿ ನಿಲ್ಲಿರುವ ಕಟ್ಟಡಗಳೇ? ಹರಿಯುವ ನದಿಯೇ? ಎದೆಯೆತ್ತಿ ನಿಂತಿರುವ ಪರ್ವತ ಸಮೂಹಗಳೇ? ಅಲ್ಲಿ ಜನಿಸಿರುವ ಮಹಾಪುರುಷರೇ? ಅಥವಾ ಅವರು ಬರೆದಿರುವ ಗ್ರಂಥಗಳೇ? ಊಹೂಂ… ಉತ್ತರ ಅಷ್ಟು ಸುಲಭವೇನಲ್ಲ. ಬಹಳ ಬಾರಿ ರಾಷ್ಟ್ರವೆಂದೊಡನೆ ನಾವು ಇಂಥ ವಿಷಯಗಳ ಸುತ್ತಲೇ ಅಡ್ಡಾಡುತ್ತಿರುತ್ತೇವೆ. ವಾಸ್ತವವಾಗಿ, ರಾಷ್ಟ್ರ ಸಂಸ್ಕೃತಿಯ ಪ್ರವಾಹ. ಸಂಸ್ಕೃತಿ ಇವುಗಳೆಲ್ಲವನ್ನೂ ಒಳಗೊಂಡಂತಹ, ಇವುಗಳನ್ನೂ ಮೀರಿದಂತಹ ಅಂಶ. ರಾಷ್ಟ್ರಕವಿ ಕುವೆಂಪು ಇದನ್ನು ಸಮರ್ಥವಾಗಿ ಚಿತ್ರಿಸುತ್ತಾರೆ. ಮಾನವನನ್ನು ದೃಷ್ಟಿಯಲ್ಲಿರಿಸಿಕೊಂಡು ಅವರು ಪ್ರಗತಿಯ ಬಗೆಗಳನ್ನು ವಿವರಿಸುತ್ತಾರೆ.  […]

ಬುಡವೇ ಭದ್ರವಿಲ್ಲದ ಮೇಲೆ ಕಟ್ಟಡ ಮಜಬೂತಾಗುವುದು ಹೇಗೆ?

Wednesday, December 3rd, 2008

( ‘ನೆಹರೂ ಪರದೆ ಸರಿಯಿತು’ ಪುಸ್ತಕದಿಂದ ಆಯ್ದ ಭಾಗ) ಥೂ! ಗಾಂಧೀಜಿ ಹೇಳ್ತಾರಲ್ಲ , ಗ್ರಾಮ ಸ್ವರಾಜ್ಯ-ಸ್ವದೇಶೀ … ಇವೆಲ್ಲ  ಯೋಚಿಸಲಿಕ್ಕೂ  ಅನರ್ಹವಾದವು’ ಹೀಗೆನ್ನುತ್ತಿದ್ದವರು ಯಾರಿರಬಹುದು ಹೇಳಿ? ಸಾವರ್ಕರಾ? ಅಂಬೇಡ್ಕರಾ? ಜಿನ್ನಾನಾ? ಪಟೇಲರಾ? ಖಂಡಿತಾ ಅಲ್ಲ, ಹಾಗೆನ್ನುತ್ತಿದ್ದವರು, ಸ್ವತಃ ಗಾಂಧೀಜಿಯವರ ಅನುಯಾಯಿ ನೆಹರೂ! ಯಾರನ್ನು  ಗಾಂಧೀಜಿ ‘ನನ್ನ  ನಂತರ ನನ್ನ  ಮಾತನಾಡುವವ’ ಎಂದು ಕರೆಯುತ್ತಿದ್ದರೋ ಅದೇ ವ್ಯಕ್ತಿ. ಯಾರನ್ನು  ಇಡಿಯ ದೇಶ ಗಾಂಧೀಜಿಯ ಚಿಂತನೆಗಳ ಶಾಶ್ವತ ರೂಪ ಎಂದು ಭಾವಿಸುತ್ತಿದ್ದರೋ ಆತ. ಹೌದು ಅದೇ ನೆಹರೂ ಸ್ವದೇಶಿ […]

ಭಯೋತ್ಪಾದನಾ ನಿಗ್ರಹ- ಕೆಲವು ವೈಫಲ್ಯಗಳು

Monday, December 1st, 2008

ಮತ್ತೊಂದು ಮಾಯದ ಗಾಯ! ಸುಖಾಂತ್ಯವಾಯ್ತೆಂದು ಬೀಗಿದ್ದಷ್ಟೆ ಬಂತು. ಸತ್ಯ ಹೇಳಿ. ಒಂಭತ್ತು ಉಗ್ರಗಾಮಿಗಳನ್ನು ಕೊಲ್ಲಲು ೬೨ ಗಂಟೆಗಳಷ್ಟು ದೀರ್ಘ ಕಾಲ ಸವೆಸಿದ್ದನ್ನು (ಅದೂ ಭಾರತದ ಪ್ರಮುಖ ನಗರಿ ಮುಂಬಯ್ ನೊಳಗೆ) ಯಾರಾದರೂ ಹೆಮ್ಮೆಯಿಂದ ಹೇಳಿಕೊಳ್ಳಬಹುದೇನು? ಧಿಕ್ಕಾರವಿರಲಿ ಸರ್ಕಾರಗಳಿಗೆ! ಧಿಕ್ಕಾರವಿರಲಿ ನಮ್ಮ ರಕ್ಷಣಾ ಪಡೆಗಳಿಗೆ!! ಮೊದಲನೆಯದೇನೋ ಸರಿ. ಈ ಎರಡನೆಯದೇಕೆ ಎನ್ನುವಿರೇನೋ? ಹೌದು. ಆ ಸಾಲು ಬರೆಯಬೇಕಾದರೆ ನನಗೂ ವಿಪರೀತ ನೋವಿದೆ. ಆದರೆ ಬರೆಯದೇ ವಿಧಿಯಿಲ್ಲ. ಕಾದಾಟದಲ್ಲಿ ಸತ್ತವರಿಗೆ ಶ್ರದ್ಧಾಂಜಲಿ ಅರ್ಪಿಸುವ ಭರದಲ್ಲಿ ಆದದ್ದನ್ನು ಮರೆತುಬಿಟ್ಟರೆ… ಮುಂದಿನ ವರ್ಷ […]