ವಿಭಾಗಗಳು

ಸುದ್ದಿಪತ್ರ


 

Archive for July, 2012

ನಿರ್ಜೀವ ಹಿಮಬೆಟ್ಟದಲ್ಲಿ ಜೀವಕಳೆಯ ಹೀರೋ

Saturday, July 28th, 2012

ಇತ್ತೀಚೆಗೆ ಮೈಸೂರಿನ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ, ಹುತಾತ್ಮ ಸಂದೀಪ್ ಉನ್ನಿಕೃಷ್ಣನ್‌ರ ತಂದೆ ಸಿಕ್ಕಿದ್ದರು. ಸಾವಿರಾರು ಜನರೆದುರಿಗೆ ಮಗನನ್ನು ನೆನಪಿಸಿಕೊಂಡು ಭಾವುಕರಾದರು. ಅಪ್ಪ, ಸ್ವಂತ ದುಡ್ಡಿನಿಂದ ನಮ್ಮನ್ನು ಸಾಕಿದ್ದೀ ಸರಿ. ಆದರೆ ಸಮಾಜಕ್ಕೇನು ಮಾಡಿದ್ದೀಯ? ದೇಶಕ್ಕೇನಾದರೂ ಮಾಡಿರುವೆಯಾ?ಅಂತ ಆರನೇ ತರಗತಿಯ ಹುಡುಗನಾಗಿದ್ದಾಗ ಕೇಳಿದ್ದನಂತೆ. ಮುಂದೆ ಪ್ರತಿಭಾವಂತ ಹುಡುಗ ಎಲ್ಲವನ್ನೂ ಧಿಕ್ಕರಿಸಿ ಸೇನೆಯೆದುರು ನಿಂತ. ಕಮಾಂಡೋ ಪಡೆ ಸೇರಿಕೊಂಡ. ತಾಜ್‌ನೆದುರು ದೇಶದ ರಕ್ಷಣೆ ಮಾಡುತ್ತಲೇ ಪ್ರಾಣ ತ್ಯಾಗ ಮಾಡಿದ. ನ್ನ ಮಗ ಸೈನಿಕನಾಗಬಾರದಿತ್ತು. ಅವನೊಳಗಿನ ದೇಶದ ಕಾಳಜಿ ಅದೆಷ್ಟಿತ್ತೆಂದರೆ, ಅವನು ಬದುಕಿದ್ದರೆ […]

ದೇಶ ಮೊದಲೆಂದ ಸೈನಿಕರಿಗೆ ಸಲಾಮ್‌

Thursday, July 26th, 2012

ಮೊದಲು: ೧೯೭೭ರಲ್ಲಿ ಪಾಕಿಸ್ತಾನ ಮತ್ತು ಭಾರತದ ರಕ್ಷಣಾ ಸಚಿವರು ಎದುರು ಬದುರು ಕುಂತು ಒಂದು ಒಪ್ಪಂದ ಮಾಡಿಕೊಂಡರು. ಇನ್ನಾದರೂ ಸೌಹಾರ್ದವಾಗಿರೋಣ ಅನ್ನೋ ಜೆಂಟಲ್‌ಮನ್ಸ್ ಒಪ್ಪಂದ ಅದು. ಸೆಪ್ಟೆಂಬರ್ ೧೫ರಿಂದ ಏಪ್ರಿಲ್ ೧೫ರವರೆಗೆ ಯಾರೊಬ್ಬರೂ ಮತ್ತೊಬ್ಬರ ಬೇಲಿ ಹಾರಿ ಗುಡ್ಡಗಳನ್ನು ಆಕ್ರಮಿಸಬಾರದು ಅಂತ. ಅಷ್ಟೇ ಅಲ್ಲ, ಆ ವೇಳೆಯಲ್ಲಿ ತಮ್ಮ ತಮ್ಮ ಠಾಣ್ಯಗಳನ್ನೂ ಬಿಡಬೇಕೆಂದು ಒಪ್ಪಂದದಲ್ಲಿ ಸೇರಿಸಲಾಗಿತ್ತು. ಆ ವೇಳೆಯಲ್ಲಿ ಸುರಿಯುವ ಮಂಜು ಸೈನಿಕರ ಜೀವ ಹರಣ ಮಾಡಿಬಿಡುತ್ತದೆಂಬುದು ಆ ಒಪ್ಪಂದದ ಹಿಂದಿನ ಮರ್ಮವಾಗಿತ್ತು. ಆಮೇಲೆ: ೧೯೯೮ರಲ್ಲಿ ಪಾಕಿಸ್ತಾನದ […]

ಗಡಿಪಡೆಯಲ್ಲಿ ಮಂಜಿನಬೆಟ್ಟದ ಮುದ್ದಿನ ಹುಡುಗ

Saturday, July 21st, 2012

ಕರ್ನಲ್ ಚೆವಾಂಗ್ ರಿಂಚೆನ್. ಇದು ಆತನ ಹೆಸರು. ಜಗತ್ತಿನ ಅತ್ಯಂತ ಎತ್ತರದ ವಾಹನ ಸಂಚರಿಸುವ ಖರ್ದುಂಗ್ಲಾ ಪಾಸ್ ಅನ್ನೋ ಜಾಗದಲ್ಲಿ ಆತನ ಚಿತ್ರ ತೂಗುಬಿಟ್ಟಿದ್ದರು. ಎರಡು ಮಹಾವೀರ ಚಕ್ರ, ಒಂದು ಸೇನಾ ಮೆಡಲ್ ಪಡೆದ ಅಪರೂಪದ ಸೈನಿಕ ಅಂತ ಬರೆದಿದ್ದರು. ಅಲ್ಲಿಗೆ ನನ್ನನ್ನೊಯ್ದ ಗೆಳೆಯ ಜಿಮ್ಮಿಯನ್ನು ‘ಇವರ್ಯಾರು’ ಎಂದು ಕೇಳಿದ್ದಕ್ಕೆ ‘ನಮ್ಮ ದೇವರು’ ಅಂದ. ಅವನ ಕಣ್ಣು ಒದ್ದೆಯಾಗಿತ್ತು. ನೀವೆಲ್ಲ ಇಲ್ಲಿ ಅಡ್ಡಾಡುತ್ತಿದ್ದೀರಿ ಎಂದರೆ ಆತನೇ ಕಾರಣ ಎಂದ. ಕೊನೆಗೆ ಇಂದು ಲಡಾಖ್ ಪಾಕಿಸ್ತಾನವಾಗದೆ ಭಾರತವಾಗಿಯೇ ಉಳಿದಿದೆಯೆಂದರೆ […]

ಜುಲೈ – ಆಗಸ್ಟ್ ತಿಂಗಳ ಕಾರ್ಯಕ್ರಮಗಳು

Sunday, July 15th, 2012

ಜುಲೈ 21: ಪಾವಗಡ ರಾಮಕೃಷ್ಣ ಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಜಾಗೋಭಾರತ್ 22, 23: ಹಂಪಿ ಪ್ರವಾಸ 24: ಕಾಲೇಜ್ ವಿದ್ಯಾರ್ಥಿಗಳಿಗೆ ಉಪನ್ಯಾಸ; ತುಮಕೂರು 29,30,31: ಸ್ವಾಮಿ ವಿವೇಕಾನಂದರ ಕುರಿತು ಉಪನ್ಯಾಸ ಮಾಲೆ; ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಬೆಂಗಳೂರು ಆಗಸ್ಟ್ 4: ಜಾಗೋ ಭಾರತ್, ಬಾಗಲಕೋಟೆ 5: ಖಾಸಗಿ ಕಾರ್ಯಕ್ರಮ, ಬೆಂಗಳೂರು 7: ದೆಹಲಿ (ಬಾಬಾ ರಾಮದೇವ್ ಆಂದೋಲನ) 12: ಉಪನ್ಯಾಸ, ಶಿವಮೊಗ್ಗ 14: ಜಾಗೋಭಾರತ್, ಗುಲ್ಬರ್ಗ 18: ಉಪನ್ಯಾಸ; ಶಾರದಾ ಮಂದಿರ, ಬೆಂಗಳೂರು 19: ರಾಷ್ಟ್ರಶಕ್ತಿ […]

ಅವರೂ ದಲಿತರೇ… ಆದರೆ ಅವರೇಕೆ ಇನ್ನೂ ಹೀಗೆ?

Saturday, July 14th, 2012

ವರ್ಷದ ಹಿಂದೆ ನುಸುಳಿ ಬಂದ ಬಾಂಗ್ಲಾ ದೇಶೀಯನೂ ಈಗ ಭಾರತೀಯ! ೬೫ ವರ್ಷಗಳ ಹಿಂದೆ ತನ್ನ ಧರ್ಮ ಉಳಿಸಿಕೊಳ್ಳಲು ಪಾಕಿಸ್ತಾನದಿಂದ ಆಸ್ತಿ ಪಾಸ್ತಿಗಳನ್ನೂ ಮನೆ ಮಠಗಳನ್ನೂ ತೊರೆದು ಬಂದ ಹಿಂದೂ ಮಾತ್ರ ಇಂದಿಗೂ ಅತಂತ್ರ…. ಹೀಗ್ಯಾಕೆ? ಇದು ನಿಜಕ್ಕೂ ಅನ್ಯಾಯ. ಕಳೆದ ೬೫ ವರ್ಷಗಳಿಂದ ಇದೇ ದೇಶದ ಒಂದಷ್ಟು ಲಕ್ಷ ಜನ ನಾಗರಿಕ ಹಕ್ಕು ಪಡೆಯಲು ಹರಸಾಹಸ ನಡೆಸುತ್ತಿದ್ದಾರೆ. ಜಮೀನು ಕೊಂಡುಕೊಳ್ಳುವ, ಜಮೀನು ಮಾರುವ ಅಧಿಕಾರ ನಮಗೂ ಕೊಡಿ ಎಂದು ಗೋಗರೆಯುತ್ತಿದ್ದಾರೆ. ಚುನಾವಣೆಗಳಲ್ಲಿ ಮತ ಚಲಾಯಿಸುವ ಅಧಿಕಾರ […]

ಶಿಳಕೆವಾಡಿಯ ಮಾದರಿ ಸಂತ

Saturday, July 7th, 2012

ಸಂತರುಗಳ ಬಗ್ಗೆ ವ್ಯಾಪಕವಾದ ಚರ್ಚೆ ಶುರುವಾಗಿದೆ. ಸಿಕ್ಕಿದ್ದೇ ಛಾನ್ಸು ಎಂದುಕೊಂಡು ದೇವರ ಬಗ್ಗೆ, ಸಾಧುಗಳ ಬಗ್ಗೆ ಬೇಕಾಬಿಟ್ಟಿ ಭಾಷೆಯಲ್ಲಿ ಮಾತನಾಡುವವರೂ ಕಂಡುಬರುತ್ತಿದ್ದಾರೆ. ಧರ್ಮವನ್ನು ಅಫೀಮು ಎಂದು ಜರಿಯುವವರಿಗಂತೂ ಈಗ ಹಬ್ಬ. ಈ ಹೊತ್ತಿನಲ್ಲಿಯೇ ನಾವೊಬ್ಬ ಅಪರೂಪದ ಸಂತರೊಬ್ಬರನ್ನು ಪರಿಚಯ ಮಾಡಿಕೊಳ್ಳಬೇಕಿದೆ. ಬೆಳಗಾವಿಯಿಂದ ನೂರು ಕಿ.ಮೀ.ದೂರದ ಕೊಲ್ಲಾಪುರದ ಬಳಿಯ ಕಾಣ್ಹೇರಿ ಮಠದ ಅಧಿಪತಿ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು. ಸ್ವಾಮೀಜಿಗೆ ಈಗ ನಲವತ್ತೆಂಟು ವರ್ಷ. ವಿಶೇಷವೆಂದರೆ ಅತ್ಯಂತ ದೊಡ್ಡ ಭಕ್ತಗಣವನ್ನು ಹೊಂದಿರುವ ಸ್ವಾಮೀಜಿ ಕಳೆದ ವರ್ಷವೇ ಇಪ್ಪತ್ತೆರಡರ ತರುಣನಿಗೆ ಮಠದ ಉತ್ತರಾಧಿಕಾರತ್ವ […]

ಬರೆದಂತೆ ಬದುಕೋದು ಬಹಳ ಕಷ್ಟ

Saturday, July 7th, 2012

ಇದೊಂಥರಾ ವಿಚಿತ್ರ. ಕೆಲವೊಮ್ಮೆ ಸಿನಿಮಾ ಥಿಯೇಟರಿನಲ್ಲಿಯೂ ಸಮಯ ಓಡೋದಿಲ್ಲ. ಇನ್ನು ಕೆಲವೊಮ್ಮೆ ಪ್ರವಚನಗಳಲ್ಲೂ ಸಮಯ ಜಾರಿದ್ದು ಗೊತ್ತಾಗೋಲ್ಲ. ಮನಸಿಗೆ ಯಾವುದು ಇಷ್ಟವಾಗುತ್ತೋ ಅದು ಆನಂದವನ್ನೂ ಕೊಡುತ್ತೆ. ಮೊನ್ನೆ ಮಂಗಳೂರಿನಲ್ಲಿ ಹಿರೇಮಗಳೂರು ಕಣ್ಣನ್ ಮತ್ತು ಬಿಕೆಎಸ್ ವರ್ಮರ ಮಾತು  ಚಿತ್ರಗಳ ಜುಗಲ್‌ಬಂದಿ ಹಾಗೆಯೇ ಇತ್ತು. ಎರಡೂವರೆ ತಾಸು ಕಳೆದದ್ದು ಗೊತ್ತಾಗಲೇ ಇಲ್ಲ. ವೈಚಾರಿಕ ಚಿಂತನೆಗೆ ಬಗೆಬಗೆಯ ಪ್ರಯೋಗಗಳು ನಡೆಯುತ್ತವೆನ್ನುವುದಕ್ಕೆ ಸಾಕ್ಷಿಯಾಯ್ತು ಈ ಕಾರ್ಯಕ್ರಮ. ಆದರೆ ಮಹತ್ವದ ವಿಚಾರ ಅದಲ್ಲ. ತಮ್ಮ ತಮ್ಮ ಕ್ಷೇತ್ರದಲ್ಲಿ ದಿಗ್ಗಜರಾಗಿರುವ ಇಬ್ಬರು ಕಲಾವಿದರು ಒಬ್ಬರೊಬ್ಬರಿಗೆ […]