ವಿಭಾಗಗಳು

ಸುದ್ದಿಪತ್ರ


 

Archive for December, 2012

ವಿಶ್ವಮಾನವ ತತ್ವದ ಶ್ರೇಷ್ಠ ಹರಿಕಾರ

Friday, December 28th, 2012

ವಿವೇಕಾನಂದರು ಕುವೆಂಪುರವರ ನರನಾಡಿಗಳಲ್ಲಿ ಪ್ರವಹಿಸುತ್ತಿದ್ದುದರಿಂದ ಅವರ ವ್ಯಕ್ತಿತ್ವಕ್ಕೆ ವಿಶೇಷವಾದ ಮೆರುಗಿತ್ತು. ಯಾರಿಗೂ ಜಗ್ಗದ, ಬಾಗದ ಧೀರ ವ್ಯಕ್ತಿತ್ವ ಸಿದ್ಧಿಸಿತ್ತು ಅವರಿಗೆ. ಕನ್ನಡ ಸಾಹಿತ್ಯ ಸಮ್ಮೇಳನ. ಶಿವಮೊಗ್ಗದಲ್ಲಿ ನಡೆಯುತ್ತಿತ್ತು. ಎಡಪಂಥೀಯ ವಿಚಾರಧಾರೆಯ ಪುಸ್ತಕಗಳನ್ನು ಮಾರುತ್ತಿದ್ದ ಅಂಗಡಿಯದು. ’ನೂರು ದೇವರನೆಲ್ಲ ನೂಕಾಚೆ ದೂರ – ಕುವೆಂಪು’ ಎಂದು ದೊಡ್ಡದಾಗಿ ಬರೆಸಿ ತೂಗು ಹಾಕಿತ್ತು. ಯಾಕೋ ಕುವೆಂಪುರವರ ದೈವ ವಿರೋಧಿ ನಿಲುವು ಸಹಿಸಿಕೊಳ್ಳಲು ಆಗಲಿಲ್ಲ. ಕೆಲವು ದಿನಗಳ ಅನಂತರ ಆ ಕವನ ಓದುವ ಅವಕಾಶ ಸಿಕ್ಕಿತು. ಓದಿ ಗಾಬರಿಯೂ ಆಯ್ತು! ಆ […]

ಜನವರಿ ತಿಂಗಳ ಕಾರ್ಯಕ್ರಮಗಳು

Thursday, December 27th, 2012

3 ರಿಂದ 5 : ಉಪನ್ಯಾಸ ಮಾಲೆ, ಹೊನ್ನಾವರ 6: ಶರಣ್ಯ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮ, ಶಿವಮೊಗ್ಗ 7: ವಿವೇಕಾನಂದ ಜಯಂತಿ, ಕೇಶವ ಕೃಪ 8: ಯಲಹಂಕ ಸತ್ಸಂಗ ಕೇಂದ್ರ, ಬೆಂಗಳೂರು 12: ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಜಾಗೋಭಾರತ್, ಬಸವನಗುಡಿ, ಬೆಂಗಳೂರು (ಮಧ್ಯಾಹ್ನ 2.30ರಿಂದ) 13: ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ರಕ್ತದಾನ ಶಿಬಿರ, ಜಿಗಣಿ- ಬೆಂಗಳೂರು (ಬೆಳಗ್ಗೆ 8ಗಂಟೆಗೆ) ಯೋಗ ಶಿಬಿರ (9.30ರಿಂದ) 14: ಸ್ಪಂದನ ಚಾನೆಲ್ ಉದ್ಘಾಟನೆ ಕಾರ್ಯಕ್ರಮ, ಶಿವಮೊಗ್ಗ 15: ಜಾಗೋಭಾರತ್, […]

ದೆಹಲಿಯ ಗದ್ದುಗೆಯಲುಗಿ ನೂರು ವರ್ಷ!

Saturday, December 22nd, 2012

ಬಂಗಾಳ ವಿಭಜನೆ ಪ್ರಸ್ತಾಪ ಹಿಂಪಡೆದ ಹಾರ್ಡಿಂಜ್, ಅದನ್ನು ಸರಿದೂಗಿಸಲು ರಾಜಧಾನಿಯನ್ನು ಕಲ್ಕತ್ತೆಯಿಂದ ದೆಹಲಿಗೆ ವರ್ಗಾಯಿಸುವ ಯೋಜನೆ ರೂಪಿಸಿದ. ಮೊಘಲರ ಆಡಳಿತ ಕೇಂದ್ರವಾಗಿದ್ದ ದೆಹಲಿಗೆ ರಾಜಧಾನಿ ಪಟ್ಟ ದೊರೆತ ಸಂತೋಷ ಮುಸ್ಲಿಮರ ಪಾಲಿಗೆ, ಬಂಗಾಳ ವಿಭಜನೆ ತಪ್ಪಿದ ಸಂತೋಷ ಬಂಗಾಳಿಗಳಿಗೆ. ಆದರೆ ಬಂಗಾಳಿಗಳು ವಿಭಜನೆಯನ್ನು ಹಿಂದೆಗೆದುಕೊಂಡಿದ್ದಕ್ಕೆ ವಿಜಯೋತ್ಸವ ಆಚರಿಸುವಂತಿಲ್ಲ. ಏಕೆಂದರೆ ರಾಜಧಾನಿಯೆಂಬ ಪಟ್ಟ, ಆಡಳಿತದ ಅಧಿಕಾರಗಳು ಕಳೆದವಲ್ಲ! ಇದು, ಬ್ರಿಟಿಷರ ಒಡೆದಾಳುವ ರೀತಿಯದೊಂದು ತುಣುಕಷ್ಟೆ! ಇದು ನಿಜಕ್ಕೂ ಕಾಕತಾಳೀಯವೇ. ಕಲ್ಕತ್ತದಿಂದ ದಿಲ್ಲಿಗೆ ರಾಜಧಾನಿಯನ್ನು ಬ್ರಿಟಿಷ್ ಸರ್ಕಾರ ವರ್ಗಾಯಿಸಿ ನೂರು […]

ಜಾತಿಗೊಂದು ನೀತಿ…. ಹಿಂದುವಾಗಿರೋದೇ ತಪ್ಪಾ!?

Friday, December 14th, 2012

೨೦೦೯ರ ಜುಲೈ ೧೯ಕ್ಕೆ ಎಲ್ಲ ಮಾಧ್ಯಮಗಳಿಗೂ ಜೈಲಿನಿಂದ ಬಂಧಿತ ಭಯೋತ್ಪಾದಕರ (!) ಪತ್ರವೊಂದು ಬಂತು. “ನನ್ನನ್ನು ಅತ್ಯಂತ ದಾರುಣವಾಗಿ ಹಿಂಸಿಸಲಾಗುತ್ತಿದೆ. ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಹೀಗೇ ಆದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ”. ಮಾಧ್ಯಮಗಳ ಪ್ರತಿಕ್ರಿಯೆ ನೀರಸವಾಗಿತ್ತು. ಆ ಪತ್ರದ ಮೇಲೆ ಗಂಭೀರ ಚರ್ಚೆಗಳು ನಡೆಯಲೇ ಇಲ್ಲ. ಹೀಗಾಗಿ ಜನರಿಗೂ ವಿಷಯ ಮುಟ್ಟಲಿಲ್ಲ. ಮಾರ್ಚ್ ೨೦೧೦ರ ವೇಳೆಗೆ ಸುದ್ದಿ ಹೊರಬಂತು. “ಒಂದು ವಾರ ಕಾಲ ಊಟ ನಿರಾಕರಿಸಿ ಅನಾರೋಗ್ಯಪೀಡಿತರಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಿ ಆತ್ಮಹತ್ಯೆಯ ಆರೋಪ ಹೊರಿಸಲಾಗಿದೆ’. ಆದರೆ ಈ […]

ಗಡಿಗಳೇ ಇಲ್ಲದ ವಸುಧೆಯ ಕನಸು…

Friday, December 7th, 2012

“ರಾತ್ರಿ ಎಂದಿನಂತೆ ಮಲಗಿದ್ದೆ. ಬೆಳಗ್ಗೆ ಏಳುವುದರೊಳಗೆ ನಾನು ಪಾಕಿಸ್ತಾನಿಯಾಗಿಬಿಟ್ಟಿದ್ದೆ! ಅವತ್ತಿನ ರಾತ್ರಿ ನನ್ನನ್ನು ಈಗಲೂ ಕಾಡುತ್ತಿದೆ.” ಹಾಗಂತ ನತದೃಷ್ಟನೊಬ್ಬ ಹೇಳಿಕೊಳ್ಳುತ್ತಾನೆ. ಭಾರತಕ್ಕೂ ಪಾಕಿಸ್ತಾನಕ್ಕೂ ಒಂದೇ ರಾತ್ರಿಯ ಅಂತರ. ಮಲಗುವ ಮುನ್ನ ಇದ್ದ ಸಂಬಂಧ, ಗೆಳೆತನ, ಬಾಂಧವ್ಯಗಳಾವುವೂ ಎದ್ದ ನಂತರ ಇರಲೇ ಇಲ್ಲ. ಅರೆರೆ! ಅದೆಂತಹ ಭಯಾನಕ ರಾತ್ರಿಯಿರಬಹುದು? ಒಮ್ಮೆ ನಮ್ಮನ್ನು ಆ ಪರಿಸ್ಥಿತಿಯಲ್ಲಿ ಕಲ್ಪಿಸಿಕೊಂಡು ನೋಡಿ. ನಿರಾಶೆಯದೊಂದು ನಿಟ್ಟುಸಿರು ಹೊರಬರದಿದ್ದರೆ ಕೇಳಿ. ಭಾರತ- ಬಾಂಗ್ಲಾದ ಗಡಿರೇಖೆಯಲ್ಲಿ ನಿಲ್ಲುವವರೆಗೆ ನನಗೆ ಇಂತಹ ಸಾಧ್ಯತೆಯ ಅಂದಾಜೂ ಇರಲಿಲ್ಲ. ಗಡಿಯಗುಂಟ ಇದ್ದೂ […]

‘ಲೈಫ್ ಆಫ್ ಪೈ’ ಎಲ್ಲರಲ್ಲೂ ಕಾಡುವಂತಾಗಲಿ…

Saturday, December 1st, 2012

ಒಂದು ನಾಟಕ, ಸಿನಿಮಾ, ಕೊನೆಗೆ ಸಂಗೀತವೂ ಕೂಡ.. ಮುಗಿಸಿ ಬಂದ ನಂತರವೂ ಎಷ್ಟು ಹೊತ್ತು ನಿಮ್ಮನ್ನು ಕಾಡುತ್ತಿರುತ್ತದೆ ಎಂಬುದರ ಮೇಲೆ ಅದರ ಸಫಲತೆಯನ್ನು ಅಂದಾಜಿಸಬಹುದು. ಕಾಕತಾಳೀಯ ಅಂತಾದರೂ ಹೇಳಿ, ವಿಶ್ವಪ್ರಜ್ಞೆಯ ಪ್ರೇರಣೆ ಅಂತಲಾದರೂ ಕರೀರಿ. ಓಹ್ ಮೈ ಗಾಡ್ ನೋಡಿದ ಮರುವಾರವೇ ಲೈಫ್ ಆಫ್ ಪೈ ನೋಡುವ ಅವಕಾಶ ದಕ್ಕಿದ್ದು ನನ್ನ ಪಾಲಿಗೆ ವಿಶೇಷವೇ ಸರಿ. ಚಿತ್ರ ರಾತ್ರಿಯಿಡೀ ಕಾಡಿದೆ. ಕೆಲವು ಮಾತುಗಳು ಮತ್ತೆ ಮತ್ತೆ ನೆನಪಾಗುತ್ತಿವೆ. ದೃಶ್ಯಗಳ ವೈಭವದ ಹಿಂದೆ ಅಡಗಿ ಕುಳಿತಿರುವ ಬದುಕಿನ ಸೂಕ್ಷ್ಮ […]