ವಿಭಾಗಗಳು

ಸುದ್ದಿಪತ್ರ


 

Archive for February, 2013

ಮಾರ್ಚ್‌ ತಿಂಗಳ ಕಾರ್ಯಕ್ರಮಗಳು

Thursday, February 28th, 2013

2: ಸಂಸ್ಕಾರ ಭಾರತಿ ಸಭೆ; ಮೈಸೂರು 3: ಸತ್ಸಂಗ, ಶಾರದಾಶ್ರಮ; ಹುಬ್ಬಳ್ಳಿ 4: ಬೆಳಗ್ಗೆ 6.30ಕ್ಕೆ ಸಿದ್ಧೇಶ್ವರ ಸ್ವಾಮಿಗಳ ಪ್ರವಚನ; 11ಗಂಟೆಗೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸ; 12.30ಕ್ಕೆ ಹುಬ್ಬಳ್ಳಿ ಆಶ್ರಮದಲ್ಲಿ ಕಾರ್ಯಕ್ರಮ 5,6,7: ಗುಲ್ಬರ್ಗ 8: ವಿವೇಕಾನಂದ ಜಯಂತಿ ಪ್ರಯುಕ್ತ ಯುವ ಸಮಾವೇಶ; ಶಿವಮೊಗ್ಗ 9: ಜಾಗೋಭಾರತ್‌, ಚಂದಾಪುರ; ಬೆಂಗಳೂರು 10: ಶಿವರಾತ್ರಿ; ಸ್ವಾಮೀಜಿ ಜಯಂತಿ ಪ್ರಯುಕ್ತ ಸಾಮೂಹಿಕ ಸೂರ್ಯ ನಮಸ್ಕಾರ; ಸೂಲಿಬೆಲೆ 12: ಜಾಗೋ ಭಾರತ್‌; ಬೆಳಗಾವಿ 13: ಸಿಂಡಿಕೇಟ್ ಸಭೆ; ಹಂಪಿ 14; ಶಿಕ್ಷಕರ ಸಮಾವೇಶ; […]

ಯಾವ ದಿಕ್ಕಿನಿಂದ ನೋಡಿದರೂ ಹೊಡೆತ ಸೈನ್ಯಕ್ಕೇ…

Sunday, February 24th, 2013

ರಕ್ಷಣಾ ಸಚಿವ ಆಂಟನಿ ಡಿಆರ್‌ಡಿಓ ಅನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆಗಲೇ ಸುದ್ದಿ ಹೊರಬಂದಿದ್ದು… ಈಗ ಅರ್ಪಣೆಯಾಗುತ್ತಿರುವ ವಿಮಾನ ಇಪ್ಪತ್ತು ವರ್ಷಗಳ ಹಿಂದೆಯೇ ತಯಾರಾಗಿ ಸೈನ್ಯಕ್ಕೆ ದಕ್ಕಬೇಕಿತ್ತು.. ನಮ್ಮ ಸೈನಿಕರು ಇಪ್ಪತ್ತು ವರ್ಷಗಳಷ್ಟು ಹಳೆಯ ತಂತ್ರಜ್ಞಾನವನ್ನು ಬಳಸಬೇಕಿರೋದು ಚೀನಾದಂತಹ ಅತ್ಯಾಧುನಿಕ ಡ್ರ್ಯಾಗನ್ನಿನ ಎದುರು! ಜನರಲ್ ವಿ.ಕೆ.ಸಿಂಗ್ ಮತ್ತೆ ನೆನಪಾಗುತ್ತಿದ್ದಾರೆ. ಸೈನ್ಯಕ್ಕೆ ಟಾಟ್ರಾ ಟ್ರಕ್ ಖರೀದಿಸುವ ವಿಚಾರದಲ್ಲಿ ತನಗೆ ೧೪ ಕೋಟಿ ರೂಪಾಯಿಗಳ ಆಮಿಷ ಒಡ್ಡಿದ್ದರೆಂದು ಆತ ಹೇಳಿದ್ದೇ ತಡ ಕೇಂದ್ರ ಸರ್ಕಾರ ಕೆಟ್ಟದಾಗಿ ಗುರಾಯಿಸಿತ್ತು. ಅಯೋಗ್ಯ ಟ್ರಕ್ಕುಗಳನ್ನು […]

ಅಮೆರಿಕಾದಿಂದ ಕಲಿಯಬೇಕಾದ್ದು…

Friday, February 15th, 2013

ಅಂತಾರಾಷ್ಟ್ರೀಯ ಒತ್ತಡ, ಅಂತಾರಾಷ್ಟ್ರೀಯ ಯುದ್ಧ ಒಪ್ಪಂದ- ಈ ದೊಡ್ಡ ದೊಡ್ಡ ಪದಗಳೆಲ್ಲ ಬಡ ಮತ್ತು ಹೇಡಿ ರಾಷ್ಟ್ರಗಳಿಗಾಗಿ. ಗಟ್ಟಿ ಮನಸ್ಸಿನ ರಾಷ್ಟ್ರಗಳು ನುಗ್ಗಿದ್ದೇ ಹಾದಿ ಎನ್ನುತ್ತವೆ. ಎಷ್ಟೊಂದು ವ್ಯತ್ಯಾಸ ಅಲ್ವೆ? ತನ್ನ ನಾಡಿಗೆ ಕಂಟಕನಾಗಿದ್ದವನನ್ನು ಅಮೆರಿಕಾ ದೂರದ ದೇಶವನ್ನು ಹೊಕ್ಕು ಸುಟ್ಟು ಬಿಸಾಡುತ್ತದೆ. ನಾವು ಸಂಸತ್ತಿನ ಮೇಲೆ ದಾಳಿಗೈದವನನ್ನು ದಶಕಗಳ ಕಾಲ ಸಾಕಿಕೊಂಡು ನಮ್ಮದೇ ನೆಲದಲ್ಲಿ ಹೆದರುತ್ತ ನೇಣಿಗೇರಿಸಿಬಿಡುತ್ತೇವೆ. ಅಮೆರಿಕನ್ನರು ಲಾಡೆನ್ನನನ ಶವವನ್ನು ಸಮುದ್ರಕ್ಕೆಸೆದು ಸಶರೀರಿಯಾಗಿ ಸ್ವರ್ಗಕ್ಕೇರುವ ಅವನ ಕನಸನ್ನು ಪುಡಿಗೈಯುತ್ತಾರೆ. ನಾವಾದರೋ ಧೂರ್ತನಿಗೆ ಗೋರಿ ಕಟ್ಟಿಸಿಕೊಡುತ್ತೇವೆ. […]

ಕುಂಭಮೇಳದಿಂದ ನೇರ ಪ್ರಸಾರ

Friday, February 8th, 2013

ಒಂದೆಡೆ ದೇಶಾದ್ಯಂತ ಹಿಂದೂ ಶಕ್ತಿಯನ್ನು ಬೂದಿ ಮಾಡಲು ಹವಣಿಸುವ ಭಸ್ಮಾಸುರ ಅಡ್ಡಾಡುತ್ತಿದ್ದರೆ, ಇಲ್ಲಿ ಮಾತ್ರ ವಿಷ್ಣು ತನ್ನ ಆನಂದದಲ್ಲಿ ತಾನೇ ಮಗ್ನನಾಗಿ ಮಲಗಿರುವಂತೆ ತೋರುತ್ತಿದೆ. ನಾಗಾ ಸಾಧುಗಳೆಂದರೆ ಸಹಜವಾದ ಕುತೂಹಲವಿದ್ದೇ ಇರುತ್ತದೆ. ಜನ ಅತೀವ ಭಕ್ತಿಯಿಂದ ನಮಸ್ಕರಿಸೋದು ಅವರಿಗೇ. ಕೈಲಿ ಕಮಂಡಲ ಹಿಡಿದಿದ್ದ ಸಾಧುವೊಬ್ಬರ ಕಾಲಿಗೆ ನಮಸ್ಕರಿಸಿದೆ. ಆತನನ್ನು ಮಾತನಾಡಿಸಬಹುದು ಎನ್ನಿಸಿತು. ’ಇಷ್ಟೊಂದು ಕಠಿಣ ವ್ರತದ ಇಚ್ಛೆ ಹೇಗಾಯ್ತು?’ ಎಂದೆ. ಬದಿಯಲ್ಲೆ ಇದ್ದ ಮತ್ತೊಬ್ಬ ನಾಗಾ ಸಾಧು ’ಇಚ್ಛೆಯಿಂದ ನೀನು ಹುಟ್ಟಿರೋದು. ನಮಗೆ ಇಚ್ಛೆ ಇಲ್ಲ’ ಎಂದುಬಿಟ್ಟ. […]

ಕುಂಭಮೇಳದಿಂದ ನೇರ ಪ್ರಸಾರ

Friday, February 8th, 2013

ಒಂದೆಡೆ ದೇಶಾದ್ಯಂತ ಹಿಂದೂ ಶಕ್ತಿಯನ್ನು ಬೂದಿ ಮಾಡಲು ಹವಣಿಸುವ ಭಸ್ಮಾಸುರ ಅಡ್ಡಾಡುತ್ತಿದ್ದರೆ, ಇಲ್ಲಿ ಮಾತ್ರ ವಿಷ್ಣು ತನ್ನ ಆನಂದದಲ್ಲಿ ತಾನೇ ಮಗ್ನನಾಗಿ ಮಲಗಿರುವಂತೆ ತೋರುತ್ತಿದೆ. ನಾಗಾ ಸಾಧುಗಳೆಂದರೆ ಸಹಜವಾದ ಕುತೂಹಲವಿದ್ದೇ ಇರುತ್ತದೆ. ಜನ ಅತೀವ ಭಕ್ತಿಯಿಂದ ನಮಸ್ಕರಿಸೋದು ಅವರಿಗೇ. ಕೈಲಿ ಕಮಂಡಲ ಹಿಡಿದಿದ್ದ ಸಾಧುವೊಬ್ಬರ ಕಾಲಿಗೆ ನಮಸ್ಕರಿಸಿದೆ. ಆತನನ್ನು ಮಾತನಾಡಿಸಬಹುದು ಎನ್ನಿಸಿತು. ’ಇಷ್ಟೊಂದು ಕಠಿಣ ವ್ರತದ ಇಚ್ಛೆ ಹೇಗಾಯ್ತು?’ ಎಂದೆ. ಬದಿಯಲ್ಲೆ ಇದ್ದ ಮತ್ತೊಬ್ಬ ನಾಗಾ ಸಾಧು ’ಇಚ್ಛೆಯಿಂದ ನೀನು ಹುಟ್ಟಿರೋದು. ನಮಗೆ ಇಚ್ಛೆ ಇಲ್ಲ’ ಎಂದುಬಿಟ್ಟ. […]

’ವಿಶ್ವರೂಪ’ ದರ್ಶನವಂತೂ ಆಗುತ್ತಿದೆ….!

Friday, February 1st, 2013

ಸೆಕ್ಯುಲರ್ ಭಾರತ! ಇನ್ನಾದರೂ ಹಾಗೆ ಕರೆಯೋಕೆ ನಾಚ್ಕೋಬೇಕು. ಇಸ್ಲಾಮ್ ಭಾರತ ಅಂತಾನೋ ಹಿಂದೂ ವಿರೋಧಿ ಭಾರತ ಅಂತಾನೋ ಕರೆದರೆ ಒಂದಷ್ಟು ಅತೃಪ್ತ ಆತ್ಮಗಳು ತೃಪ್ತಿಗೊಂಡಾವು. ಕಳೆದ ಎಂಟ್ಹತ್ತು ದಿನಗಳ ನಾಟಕ ನೋಡಿದರೆ ಹಾಗನ್ನಿಸುವುದು ಸಹಜವೇ . ‘ವಿಶ್ವರೂಪಮ್’ ಬಿಡುಗಡೆಗೆ ಕಿರಿಕ್ ಅಯ್ತು. ಹತ್ಯೆ ಮಾಡುವ ಮುನ್ನ ಭಯೋತ್ಪಾದಕ ಅಲ್ಲಾಹನಿಗೆ ವಂದಿಸಿ ಹೊರಡುವುದನ್ನು ತೋರಿಸಿರುವುದೇ ಗಲಾಟೆಗೆ ಕಾರಣವಂತೆ. ತಮಿಳುನಾಡು ಸರ್ಕಾರ ಸಿನೆಮಾ ತಡೆಹಿಡಿಯಿತು. ಬೇರೆಬೇರೆ ರಾಜ್ಯಗಳಲ್ಲಿ ಬಿಡುಗಡೆಗೆ ಮುನ್ನ ಮುಸಲ್ಮಾನ ಸಂಘಟನೆಗಳು ಪ್ರತಿಭಟನೆ ಮಾಡಿದವು. ದಾವಣಗೆರೆಯಲ್ಲಿ ಕೋಮು ಗಲಭೆಯೇ […]