ವಿಭಾಗಗಳು

ಸುದ್ದಿಪತ್ರ


 

Archive for April, 2013

ಒಂದು ಕಣ್ಣಿಗೆ ಸುಣ್ಣ, ಇದ್ಯಾವ ನ್ಯಾಯ!?

Friday, April 26th, 2013

ಯಡ್ಯೂರಪ್ಪನವರಿಗೆ ಅಧಿಕಾರ ಸಿಗದಾದಾಗ ಬೀದಿಗಿಳಿದ ಮಠಾಧೀಶರೊಬ್ಬರ ಬಗ್ಗೆ ವ್ಯಂಗ್ಯವಾಗಿ, ಅಸಹ್ಯಕರವಾಗಿ ಮಾತನಾಡಿದ ದೆಹಲಿಯ ಮಾಧ್ಯಮಗಳು ಈಗೇಕೋ ಇದನ್ನು ಮಾತ್ರ ಬೇರೆಯೇ ದೃಷ್ಟಿಯಿಂದ ನೋಡತೊಡಗಿದವು. ಹೌದು. ಮಠಾಧೀಶರು ವ್ಯಕ್ತಿಯೊಬ್ಬನನ್ನು ಬೆಂಬಲಿಸಿ ಬೀದಿಗಿಳಿಯುವುದು ಸಮ್ಮತವಲ್ಲ ನಿಜ, ಹಾಗಂತ ಬುಖಾರಿ ಬೀದಿಗಿಳಿದಿದ್ದು ಕೂಡ ಅಸಂಬದ್ಧವೇ. ಅದ್ಯಾಕೆ ಆ ಕಣ್ಣಿಗೆ ಮಾತ್ರ ಸುಣ್ಣ? ಗಮನಿಸಬೇಕಾದ ಸುದ್ದಿಯನ್ನ ನಾವು ನೋಡೋದೇ ಇಲ್ಲ. ಅರ್ಥೈಸಿಕೊಳ್ಳಬೇಕಾದ ರೀತಿಯಲ್ಲಿ ಸ್ವೀಕರಿಸೋದಿಲ್ಲ. ಉತ್ತರ ಪ್ರದೇಶದ ಮುಖ್ಯ ಮಂತ್ರಿ ಅಖಿಲೇಶ್ ಯಾದವ್‌ಗೆ ಗಂಭೀರ ಸಮಸ್ಯೆಯೊಂದು ತಗುಲಿಕೊಂಡಿದೆ. ಎಂದಿನಂತೆ ಮುಸಲ್ಮಾನರದ್ದೇ. ಹೌದು, ಉತ್ತರ […]

ತಬಸ್ಸುಮ್ ಮೊದಲು ಹೆಣ್ಣು, ಆಮೇಲೆ ಮುಸ್ಲಿಮ್…

Friday, April 19th, 2013

ಈಗ ಸಜ್ಜನ ಮುಸಲ್ಮಾನರು ಜಾಗೃತಗೊಳ್ಳಬೇಕಿದೆ. ಬೀದಿಗೆ ಬರಬೇಕಿರೋದು ವಿಶ್ವರೂಪಮ್‌ನ ವಿಚಾರಕ್ಕೋ ದೂರದರ್ಶನದಲ್ಲಿ ಪ್ರಸಾರಗೊಂಡ ಹಂದಿಮಾಂಸದ ಅಡುಗೆಯ ವಿಚಾರಕ್ಕೋ ಅಲ್ಲ. ಹೊರಾಟ ನಡೀಬೇಕಿರೋದು ಇಂತಹ ವಿಚಾರಕ್ಕೆ. ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಭಾರತ ಮತ್ತೆ ಸುದ್ದಿಯಾಗಿದೆ. ಖಂಡಿತವಾಗಿಯೂ ಒಳ್ಳೆಯ ವಿಚಾರಕ್ಕಾಗಿಯಲ್ಲ; ತೀರಾ ಕೆಟ್ಟ ವಿಚಾರಕ್ಕೆ. ಹದರಾಬಾದಿಗೆ ಆಫ್ರಿಕಾದ, ಈಜಿಪ್ಟಿನ ಮುಸ್ಲಿಮ್ ಪ್ರವಾಸಿಗರು ವಿಪರೀತ ಸಂಖ್ಯೆಯಲ್ಲಿ ಬರಲಾರಂಭಿಸಿದ್ದಾರೆ. ದೇಶ ಸುತ್ತಾಡುವ ನೆಪದಲ್ಲಿ ಬಂದು ಬಡ ಮುಸ್ಲಿಮ್ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಇದು ದೀರ್ಘಕಾಲದ ಗಟ್ಟಿ ಮದುವೆಯಲ್ಲ; ಒಂದು ತಿಂಗಳ ಅವಧಿಯ […]

ನಮ್ಮ ಅಧ್ಯಕ್ಷ ಪತ್ನಿಯರೇಕೆ ಹಾಗಿಲ್ಲ!?

Friday, April 12th, 2013

ನಮ್ಮ ಪ್ರಧಾನ ಮಂತ್ರಿಗಳ ಮನೆಗೆ ಯಾರಾದರೂ ಹೋಗುತ್ತಾರೇನು? ನಮ್ಮೆಲ್ಲ ರಾಜಕಾರಣಿಗಳು ಅಷ್ಟಷ್ಟು ದೊಡ್ಡ ಬಂಗಲೆಗಳಲ್ಲಿ ಇರುತ್ತಾರಲ್ಲ, ಅದನ್ನು ಎಂದಾದರೂ ಸಾಮಾಜಿಕ ಚಟುವಟಿಕೆಗೆ ಬಳಸಿದ್ದಾರ? ನಮ್ಮಲ್ಲಿ ರಾಜಪತ್ನಿಯರೆಂದರೆ ಸಹಿ ಹಾಕಲು ಗಂಡನ ಮೇಲೆ ಪ್ರಭಾವ ಬೀರುವವರು ಅಂತಲಷ್ಟೆ! ಪ್ರಧಾನಿ ಮನಮೋಹನ ಸಿಂಗರ ಪತ್ನಿಯ ಹೆಸರೇನು? ಎಂದು ಕೇಳಿದರೆ ಈ ದೇಶದ ಅದೆಷ್ಟು ಮಂದಿ ಸರಿಯಾದ ಉತ್ತರ ಕೊಡಬಲ್ಲರು ಹೇಳಿ? ರಾಜ್ಯದಲ್ಲಿ ಜಗದೀಶ್ ಶೆಟ್ಟರ್ ಹಲವಾರು ತಿಂಗಳಿಂದ ಮುಖ್ಯಮಂತ್ರಿಯಾಗಿದ್ದಾರಲ್ಲ, ಅವರ ಶ್ರೀಮತಿಯವರ ಬಗ್ಗೆ ಯಾರಿಗಾದರೂ ಗೊತ್ತಿದೆಯಾ? ಸಿ.ಎಮ್, ಪಿ.ಎಮ್‌ಗಳ ಹೆಂಡತಿಯರ […]

ಏಪ್ರಿಲ್ ತಿಂಗಳ ಕಾರ್ಯಕ್ರಮಗಳು

Saturday, April 6th, 2013

೯: ಬೆಂಗಳೂರು ಯೂನಿವರ್ಸಿಟಿಯಲ್ಲಿ ವಿವೇಕಾನಂದ ಜಯಂತಿ ಕಾರ್ಯಕ್ರಮ ೧೩: ರಾಷ್ಟ್ರಶಕ್ತಿ ಕೇಂದ್ರ ವಿದ್ಯಾರ್ಥಿ ಶಿಬಿರ ಉದ್ಘಾಟನೆ ೧೬: ಜಾಗೋ ಭಾರತ್, ಬಾಗಲಕೋಟೆ ೧೯: ಸಿಂಡಿಕೇಟ್ ಸಭೆ, ಹಂಪಿ ೨೧: ತರುಣ ಸಮಾವೇಶ, ರಾಷ್ಟ್ರಶಕ್ತಿ ಕೇಂದ್ರ ವಿದ್ಯಾರ್ಥಿ ಶಿಬಿರ ೨೨: ಭಾಲ್ಕಿ ಮಠದಲ್ಲಿ ಕಾರ್ಯಕ್ರಮ ೨೫: ಜಾಗೋ ಭಾರತ್, ಮಂಗಳೂರು ೨೭: ಶಿಬಿರದಲ್ಲಿ ಉಪನ್ಯಾಸ, ಸುತ್ತೂರು ೨೮: ಭಗವದ್ಗೀತಾ ಶಿಬಿರ, ಯೋಗಶ್ರೀ ೨೯: ಜಾಗೋ ಭಾರತ್, ಶಿರೂರು

ಔಷಧ ಮಾಫಿಯಾಕ್ಕೆ ಸೆಡ್ಡು ಹೊಡೆಯಿತು ಭಾರತ

Friday, April 5th, 2013

’ಭಾರತದ ಪೇಟೆಂಟ್ ಕಾನೂನನ್ನೆ ಜಗತ್ತಿನ ಇತರ ರಾಷ್ಟ್ರಗಳೂ ಒಪ್ಪಿಕೊಳ್ಳುತ್ತಿರುವುದು ಗಾಬರಿಯ ಸಂಗತಿ. ಇದು ಮುಂಬರುವ ದಿನಗಳಲ್ಲಿ ಅಮೆರಿಕಾದ ಔಷಧ ತಯಾರಿಕಾ ಮಾರುಕಟ್ಟೆಗಷ್ಟೇ ಅಲ್ಲ, ಅಮೆರಿಕಾದ ಆರ್ಥಿಕತೆಗೂ ಸಾಕಷ್ಟು ಸಂಕಷ್ಟ ತಂದೊಡ್ಡಲಿದೆ’ ಎಂದು ಅಮೆರಿಕನ್ ವಕೀಲ ವಾಲ್ಡ್ರನ್ ಅಲವತ್ತುಕೊಂಡಿದ್ದ. ಭಾರತದ ಶಕ್ತಿ ಮತ್ತೆ ಸಾಬೀತಾಗಿದೆ. ನೊವಾರ್ಟಿಸ್ ಎನ್ನುವ ಕ್ಯಾನ್ಸರ್ ಔಷಧ ತಯಾರಿಕಾ ಕಂಪನಿಗೆ ಸುಪ್ರೀಮ್ ಕೋರ್ಟ್ ಪೇಟೆಂಟ್ ಮುಂದುವರಿಸಲು ನಿರಾಕರಿಸಿದ ನಂತರ ಜಗತ್ತಿನಲ್ಲಿ ಸಂಚಲನವೇ ಶುರುವಾಗಿಬಿಟ್ಟಿದೆ. ಅರ್ಜೆಂಟೈನಾ, ಬ್ರೆಜಿಲ್ ಥರದ ಥರದ ರಾಷ್ಟ್ರಗಳನ್ನು ಬಿಡಿ, ಆಸ್ಟ್ರೇಲಿಯಾ, ಯುರೋಪಿಯನ್ ಯೂನಿಯನ್‌ಗಳು […]