ವಿಭಾಗಗಳು

ಸುದ್ದಿಪತ್ರ

Archive for March, 2014

ಅವನೆಡೆಗೆ ನಾನೊಬ್ಬನೇ!

Wednesday, March 26th, 2014

ನೈವೇದ್ಯಕ್ಕೆಂದು ತುಪ್ಪ ಕಾಸಿ ಗಡಿಗೆಗೆ ತುಂಬಿಟ್ಟೆ ಆರಲೆಂದು ಬಿಟ್ಟೆ! ಮರಳಿ ನೋಡುವಾಗ ಅರ್ಧ ತುಪ್ಪ ಗಡಿಗೆ ಕುಡಿದಿತ್ತು, ಇನ್ನರ್ಧ ಬೀದಿ ನಾಯಿ!! ನಾಯಿಯಲ್ಲೂ ದೇವರಿದ್ದಾನಲ್ಲ, ಗಡಿಗೆ ಕೊಟ್ಟು ದೇವರೆಡೆ ನಡೆದೆ ‘ನಾನೊಬ್ಬನೇ!’

ನಾನೆಷ್ಟು ಬೆಳೆದುಬಿಟ್ಟೆ!!

Friday, March 21st, 2014

ಕಣ್ಣು ಅರಳಿಸಿದ್ದು ನೀನು, ಮಮ್ಮು ಉಣಿಸಿದ್ದು ನೀನು ಕಂಕುಳಲ್ಲಿಟ್ಟು ನಕ್ಷತ್ರಗಳ ತೋರಿದವಳು ನೀನು, ಕೈ ಹಿಡಿದು ಹೆಜ್ಜೆ ಇಡಿಸಿದ್ದು ನೀನು, ಮಾತ್ರ ನೀನು! ನಿನ್ನ ಸೆರಗ ತುದಿಯಲ್ಲೇ ಜಗವ ಕಂಡ ನಾನು ಯಾವಾಗಲೋ ಬೆಳೆದುಬಿಟ್ಟೆ ನೀ ಅರಳಿಸಿದ ಕಣ್ಣು ಹೊಲಸ ಕಂಡಿತು ತಿನ್ನಬಾರದ ತಿಂದೆ, ನಕ್ಷತ್ರಗಳ ಹಿಂದೆ ಬಿದ್ದೆ ನೀ ಹಿಡಿದ ಕೈ ಒದರಿ ಓಡಿದೆ, ನಾನೇ ಓಡಿದೆ.. ಓಡುತ್ತಲೇ ಇದ್ದೇನೆ, ಇನ್ನೂ.. ನಿಂತು ಹಿಂದಿರುಗಿದರೆ ಬೆಳೆದಿದ್ದಾದರೂ ಏಕೆ? ಎನಿಸುತ್ತಿದೆ..