ವಿಭಾಗಗಳು

ಸುದ್ದಿಪತ್ರ


 

Archive for March, 2015

‘ಮತ’ಮತ್ತರ ಆಟಾಟೋಪ ಮತ್ತು ಕೆಲವು ಮಾಧ್ಯಮಗಳ ಜಾಣಕುರುಡು

Monday, March 30th, 2015

ಯಾವುದೋ ಅಗೋಚರ ಶಕ್ತಿ ಕೆಲಸ ಮಾಡುತ್ತಿದೆ. ಎರಡಕ್ಕೆ ಎರಡು ಸೇರಿದರೆ ನಾಲ್ಕಾಗುತ್ತದೆ ಎನ್ನುತ್ತದೆ ಗಣಿತ ಲೋಕದ ಲೆಕ್ಕಾಚಾರ. ಭಗವಂತನ ಲೋಕ ಹಾಗೆನ್ನಲು ಮನಸೊಪ್ಪದಿದ್ದರೆ ಪ್ರಕೃತಿಯ ಲೆಕ್ಕಾಚಾರದಲ್ಲಿ ಅಂತಲೇ ಇಟ್ಟುಕೊಳ್ಳಿ. ಅದು ನಾಲ್ಕು ನೂರು, ನಾಲ್ಕು ಲಕ್ಷವೂ ಆಗಿಬಿಡಬಹುದು. ಜಗತ್ತನ್ನು ಇಸ್ಲಾಮ್ ಮತ್ತು ಕ್ರಿಶ್ಚಿಯನ್ನರ ಬರ್ಬರತೆ ಆಕ್ರಮಿಸಿಕೊಳ್ಳುವ ವೇಗ ನೋಡಿದರೆ ವಿಶ್ವವೇ ಏಕದೇವ ಆರಾಧನೆಯತ್ತ ಹೊರಳಿಬಿಡುವುದೇನೋ ಎನ್ನಿಸಿತ್ತು. ಜಾಗತಿಕ ಬದಲಾವಣೆಗಳು ಸ್ವಲ್ಪ ಉಸಿರಾಡಲು ಜಾಗ ತೋರಿಸಿವೆ. ಯಾರನ್ನು ಬೇಕಾದರೂ ಬಡಿದು ಕೊಲ್ಲಬಲ್ಲೆ, ಹೆದರಿಸಿಯೇ ಜಗತ್ತನ್ನು ಆಳಬಲ್ಲೆನೆಂದು ಹೊರಟಿದ್ದ ಇಸ್ಲಾಮಿನ […]

‘ಬ್ರೂನಿ’ಯ ಮೂಕ ಮಾತುಗಳು…

Thursday, March 19th, 2015

ಮಾನ್ಯ ಮುಖ್ಯಮಂತ್ರಿಗಳಿಗೆ ನಮಸ್ಕಾರ. ನನ್ನ ಯಜಮಾನನ ಸಾವಿಗೆ ನಾಲ್ಕು ದಿನ ಕಳೆದೇ ಹೋಯಿತು. ಮೊದಲ ದಿನದಿಂದಲೂ ಇದನ್ನು ಆತ್ಮಹತ್ಯೆಯೆಂದೇ ಸಾಬೀತು ಪಡಿಸಲು ಹೆಣಗಾಡುತ್ತಿದ್ದ ನಿಮಗೂ-ನಿಮ್ಮ ವ್ಯವಸ್ಥೆಗೂ ನಾಲ್ಕು ದಿನವಾದರೇನು? ನಲ್ವತ್ತು ದಿನವಾದರೇನು? ನನಗಿರುವ ನಿಯತ್ತಿನ ಹತ್ತು ಪರ್ಸೆಂಟು ನಿಮ್ಮ ವ್ಯವಸ್ಥೆಗೆ ಇದ್ದಿದ್ದರೆ ಇವತ್ತು ನಮ್ಮ ಯಜಮಾನರು ಸಾಯುವ ಸ್ಥಿತಿ ಬರುತ್ತಿರಲಿಲ್ಲ. ನಮ್ಮ ಮನೆಗೆ ಬಂದಾಗಲೆಲ್ಲ ಅವರು ಮೊದಲು ನನ್ನತ್ತಲೇ ಬರಬೇಕಿತ್ತು. ಪ್ರೀತಿಯಿಂದ ನೇವರಿಸಿ ನನ್ನೊಡನೆ ಹತ್ತು ನಿಮಿಷ ಆಡಿದ ಮೇಲೆಯೇ ಮನೆಯೊಳಗೆ ಹೋಗುತ್ತಿದ್ದರು. ಅವರು ಮುಟ್ಟುವಾಗ,ಮುದ್ದಿಸುವಾಗ ಅವರೊಬ್ಬ […]

ಬೀದಿಗೆ ಬಂದದ್ದು ಭಾರತದ ಗಂಡಸರಲ್ಲ, ಕ್ರಿಶ್ಚಿಯನ್ನರ ಬುದ್ಧಿ

Monday, March 9th, 2015

ಕಳೆದ ಕೆಲವು ದಿನಗಳಲ್ಲಿ ನಡೆದ ಘಟನೆಗಳನ್ನು ಗಮನಿಸಿ. ಬರಾಕ್ ಒಬಾಮಾ ಭಾರತಕ್ಕೆ ಬಂದು ಅನವಶ್ಯಕವಾಗಿ ಧರ್ಮ ಸಹಿಷ್ಣುತೆಯ ಮಾತುಗಳನ್ನಾಡಿ ಗದ್ದಲವೆಬ್ಬಿಸಿದರು. ಅದು ಭಾರತದಲ್ಲಿ ಅನ್ಯಮತೀಯರ ಮೇಲೆ ಹಿಂಸಾ ಪ್ರಹಾರ ಆಗುತ್ತಿದೆಯೆಂಬ ಹುಯಿಲೆಬ್ಬಿಸುವ ಮೊದಲ ಹೆಜ್ಜೆ. ಅದರ ಆಜೂಬಾಜೂ ಭಾರತದ ಸಾಧುಗಳು ನಾಲ್ಕು ಮಕ್ಕಳನ್ನು , ಎಂಟು ಮಕ್ಕಳನ್ನು ಹೆರಬೇಕೆಂದು ಹೇಳಿದ್ದು ಮಾಧ್ಯಮಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿತು! ಸತ್ಯ ಹೇಳಿ. ಯಾವ್ಯಾವುದೋ ಸಾಧುಗಳು ಬಿಡಿ, ಪ್ರಮುಖ ಮಠದ ಪೀಠಾಧೀಶರೂ ಈ ಹಿಂದೆ ಇಂತಹ ಮಾತುಗಳನ್ನಾಡಿಲ್ಲವಾ? (ಹಾಗೇ, ಅನ್ಯ ಮತದವರು […]