ವಿಭಾಗಗಳು

ಸುದ್ದಿಪತ್ರ


 

Archive for November, 2017

ಮುಖ್ಯಮಂತ್ರಿಗಳೇ ನಮ್ಮದೂ ಒಂದು ಕನಸಿದೆ!

Sunday, November 26th, 2017

ಹೆಂಡದ ಮಾರಾಟ ನಿಲ್ಲಿಸೋದು ಏಕಾಕಿ ನಡೆಯಬಹುದಾದ ಪ್ರಕ್ರಿಯೆಯಲ್ಲ. ಹಂತಹಂತವಾಗಿ ಅದನ್ನು ಜಾರಿಗೆ ತರಬೇಕು. ಹಳ್ಳಿಗಳಲ್ಲಿನ ಮಾರಾಟ ಮೊದಲು ನಿಲ್ಲಿಸಿ ಆನಂತರ ಪಟ್ಟಣಗಳಿಗೆ ವ್ಯಾಪಿಸಬೇಕು. ಸಿದ್ದರಾಮಯ್ಯನವರು ಮದ್ಯಪಾನ ನಿಷೇಧದ ವದಂತಿ ಹಬ್ಬಿಸಿದಷ್ಟೇ ಧೈರ್ಯವಾಗಿ ನಿಷೇಧವನ್ನೂ ಮಾಡಿ ನಮ್ಮ ಕನಸಿನ ಕನರ್ಾಟಕ ನಿಮರ್ಿಸುವರೇ? ಅಥವಾ ಅಧಿಕಾರಕ್ಕೇರಿದ 24 ಗಂಟೆಗಳಲ್ಲಿ ವೈದ್ಯ ವಿರೋಧಿ ಕಾನೂನನ್ನು ತಡೆಹಿಡಿಯುವೆನೆಂದ ಯಡ್ಯೂರಪ್ಪನವರು ಈ ವಿಚಾರವಾಗಿಯೂ ಅಷ್ಟೇ ಬಲವಾದ ನಿಲುವನ್ನು ಘೋಷಿಸುವರೇ? ‘ಮದ್ಯಪಾನ ನಿಷೇಧವಂತೆ’ ಎಂಬ ಸುದ್ದಿ ಇದ್ದಕ್ಕಿದ್ದಂತೆ ಮಾಧ್ಯಮಗಳಲ್ಲಿ ಹರಡಿ ಸಾಕಷ್ಟು ಸದ್ದು ಮಾಡಿತು. ಅನೇಕರಿಗೆ […]

ಗುಜರಾತೇನು? ಮೋದಿ ಜಾಗತಿಕ ಚುನಾವಣೆಗಳನ್ನೂ ಗೆಲ್ಲಬಲ್ಲರು.

Saturday, November 25th, 2017

ಮೋದಿಯವರ ವಿದೇಶ ಪ್ರವಾಸದ ಕುರಿತಂತೆ ಮನಬಂದಂತೆ ಮಾತನಾಡುತ್ತಿದ್ದವರಿಗೆಲ್ಲ ಈಗ ಸಮರ್ಥವಾದ ಉತ್ತರ ದಕ್ಕಿದೆ. 1946ರ ನಂತರ ಮೊದಲ ಬಾರಿಗೆ ಯುನೈಟೆಡ್ ಕಿಂಗ್ಡಂನ ವ್ಯಕ್ತಿಯೊಬ್ಬರು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರತಿನಿಧಿತ್ವವನ್ನು ಕಳೆದು ಕೊಂಡಿದ್ದಾರೆ! ಅದೂ ಅವರೇ ಆಳಿದ ಭಾರತೀಯರೆದುರು ಅನುಭವಿಸಿದ ಹೀನಾಯ ಸೋಲು. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸು ಗುಜರಾತಿನಲ್ಲಿ ಆಲೂಗಡ್ಡೆಯನ್ನು ಚಿನ್ನವಾಗಿ ಪರಿವತರ್ಿಸುವ ಗಿಮಿಕ್ಕಿನಲ್ಲಿ ಕಾಲ ಕಳೆಯುತ್ತಿರುವಾಗ, ಆಮ್ ಆದ್ಮಿಯ ನೇತಾರ ಅರವಿಂದ್ ಕೇಜ್ರಿವಾಲ್ ದೆಹಲಿಯ ವಾಯುಮಾಲಿನ್ಯ ತಡೆಗಟ್ಟಲು ಸಮ-ಬೆಸಗಳ ಸಂಶೋಧನೆ ನಡೆಸುತ್ತಿರುವಾಗ, ಸಿದ್ದರಾಮಯ್ಯನವರು ಪಾನ ನಿಷೇಧದ ವದಂತಿ […]

ಚುನಾವಣೆಯ ಹೊಸ್ತಿಲಲ್ಲಿ ವೈದ್ಯರ ಬಲಿ!

Sunday, November 19th, 2017

ಸಕರ್ಾರಿ ಆಸ್ಪತ್ರೆಗಳಲ್ಲಿ ಇಂದು ಮೂಲಸೌಕರ್ಯಗಳ ಕೊರತೆಯಿದೆ. ಅನೇಕ ಆಸ್ಪತ್ರೆಗಳಲ್ಲಿ ಉತ್ತಮ ಆರೋಗ್ಯಕ್ಕೆ ಅತ್ಯಗತ್ಯವಾಗಿ ಬೇಕಾದ ಶುದ್ಧ ಕುಡಿಯುವ ನೀರೇ ದಕ್ಕುವುದಿಲ್ಲ; ಇಪ್ಪತ್ನಾಲ್ಕು ಗಂಟೆ ವಿದ್ಯುತ್ತನ್ನಂತೂ ಯೋಚಿಸುವಂತೆಯೂ ಇಲ್ಲ. ಸಾಮಥ್ರ್ಯಕ್ಕೂ ಮೀರಿದ ರೋಗಿಗಳ ಸಂಖ್ಯೆ. ಸಿಬ್ಬಂದಿಗಳ ಕೊರತೆಯಂತೂ ಎಂತಹ ದೊಡ್ಡ ಸಮಸ್ಯೆಯೆಂದರೆ ಸಂಜೆಯ ವೇಳೆಗೆ ಆಸ್ಪತ್ರೆಗಳಲ್ಲಿ ವೈದ್ಯರಿರುವುದಿಲ್ಲ. ಕೆಲವು ಕಡೆ ನಸರ್್ಗಳಾದರೂ ಇರುತ್ತಾರೆ ಇನ್ನೂ ಕೆಲವು ಕಡೆಗಳಲ್ಲಿ ಅವರೂ ಇಲ್ಲದೇ ಸಹಾಯಕರದ್ದೇ ಸರ್ವಸ್ವ. ತಮ್ಮ ಮಕ್ಕಳನ್ನು ಆರೋಗ್ಯ ತಪ್ಪಿದರೆ ವಿದೇಶಕ್ಕೊಯ್ಯುವ, ಸಾರ್ವಜನಿಕರ ತೆರಿಗೆ ಹಣದಲ್ಲಿ ವಿದೇಶದಲ್ಲಿ ಚಿಕಿತ್ಸೆ ಪಡೆಯುವ […]

ಬೆಂಗಳೂರು ಕೇಂದ್ರಿತ ಅಭಿವೃದ್ಧಿ ಮಾಡೆಲ್ಲು ಮುರಿದು ಬೀಳಲಿದೆ!

Sunday, November 12th, 2017

ಹಾಗೇ ಸುಮ್ಮನೆ ಕನರ್ಾಟಕದ ಕುರಿತಂತೆ ಪ್ರಶ್ನೆ ಕೇಳಿಕೊಂಡು ನೋಡಿ. ತಮಿಳುನಾಡಿನಲ್ಲಿ ಬಟ್ಟೆಗೆಂದೇ ತಿರುಪುರ್, ಪಟಾಕಿಗೆಂದೇ ಶಿವಕಾಶಿ ಇರುವಂತೆ ನಮ್ಮಲ್ಲಿರುವ ವಿಶೇಷ ನಗರಗಳನ್ನು ಹೆಸರಿಸಿ ನೋಡೋಣ. ಬೆಂಗಳೂರು ಹುಬ್ಬಳ್ಳಿ ನಡುವೆ ದಾವಣಗೆರೆ-ಚಿತ್ರದುರ್ಗಗಳಿವೆಯಲ್ಲ ಅದನ್ನು ಬೆಂಗಳೂರಿನ ಐಟಿ ಹೊರೆ ಇಳಿಸಲು ಬಳಸಬಹುದಿತ್ತಲ್ಲ ಸಕರ್ಾರಗಳು. ಬೆಂಗಳೂರು ಕೇಂದ್ರಿತ ಕನರ್ಾಟಕದ ವಿಕಾಸದ ಮಾಡೆಲ್ಲು ಮುರಿದು ಬೀಳಲು ಇನ್ನು ನಾಲ್ಕಾರು ವರ್ಷ ಸಾಕಷ್ಟೇ. ದೆಹಲಿಯ ಪರಿಸ್ಥಿತಿ ಬಲು ಭಯಾನಕವಾಗಿದೆ. ದೀಪಾವಳಿಗೆ ಅಲ್ಲಿ ಪಟಾಕಿಗಳನ್ನು ನಿಷೇಧಿಸಿದ್ದು ಒಳ್ಳೆಯದೇ ಆಯ್ತು. ಇಲ್ಲವಾದರೆ ಎಲ್ಲ ಬುದ್ಧಿಜೀವಿಗಳಿಗೆ ಹಿಂದೂ ಧರ್ಮವನ್ನು ವಿರೋಧಿಸಲು ಒಂದು […]

ಈ ಬಾರಿ ಪರೀಕ್ಷೆ ಮೋದಿಗಲ್ಲ, ನಮಗೇ!

Saturday, November 11th, 2017

ಒಗ್ಗಟ್ಟಾಗಿ ನಿಲ್ಲುವ ಸಮಯ ಬಂದಿರೋದು ಈಗಲೇ. ನರೇಂದ್ರ ಮೋದಿಯವರಂತಹ ನಾಯಕ ಆಗಾಗ ಬರಲಾರ. ಅದು ಅಪರೂಪಕ್ಕೊಮ್ಮೆ ಸಿದ್ಧಿಸುವ ರತ್ನ. ಬಿಡಬಾರದಷ್ಟೇ. ಗುಜರಾತಿನ ಚುನಾವಣೆ ಈ ನಿಟ್ಟಿನಲ್ಲಿ ಬಲು ದೊಡ್ಡ ಪರೀಕ್ಷೆ, ನರೇಂದ್ರ ಮೋದಿಗಲ್ಲ ಬದಲಿಗೆ ನಾವು ಭಾರತದ ವಿಕಾಸದೊಟ್ಟಿಗೆ ನಡೆಯುವೆವಾ ಎಂಬುದಕ್ಕೆ. ಸಮಸ್ಯೆಗಳು ಸರಮಾಲೆಯಾಗಿ ಬರುತ್ತವೆ ಅನ್ನೋದು ಖಂಡಿತ ಸುಳ್ಳಲ್ಲ. ಎದುರಿಸಬಲ್ಲವ ಛಾತಿ ಅಗಲಿಸಿ ನಿಂತಿರಬೇಕಷ್ಟೇ. ಇಲ್ಲವಾದಲ್ಲಿ ಸಂಕಟದ ಹೊತ್ತಲ್ಲಿ ಎಂಥವನೂ ಕುಗ್ಗಿ ಹೋಗಿ ಬಿಡಬಲ್ಲ. ಭಾರತಕ್ಕೆ ಒಂದು ಬಗೆಯಲ್ಲಿ ಸವಾಲಿನ ದಿನಗಳು ಶುರುವಾಗಿವೆ. 2014ರ ಚುನಾವಣೆಯಲ್ಲಿ […]

ವಸ್ತ್ರೋದ್ಯಮ ವೈಭವಕ್ಕೆ ಮರಳೋದು ಯಾವಾಗ?

Sunday, November 5th, 2017

ನಮ್ಮ ಬಟ್ಟೆ ಉದ್ಯಮ ನಾಶವಾಗಲಿಕ್ಕೆ ನಾವು ತಂತ್ರಜ್ಞಾನದಿಂದ ದೂರವಿದ್ದುದೇ ಕಾರಣವೆಂದು ಕೆಲವು ಬುದ್ಧಿಜೀವಿಗಳು ವಾದಿಸುವುದುಂಟು. ಹಾಗೇ ಅವರು ಬ್ರಿಟೀಷರಿಗೆ ಕವರಿಂಗ್ ಫೈರ್ ಕೊಡೋದು. ಯಂತ್ರಗಳನ್ನೇ ಆವಿಷ್ಕರಿಸಲು ಹಣ ಕೊಟ್ಟು, ಉತ್ಪಾದನೆಗೆ ಬೇಕಾದ ಮೂಲದ್ರವ್ಯ ಮತ್ತು ಕಚ್ಚಾವಸ್ತುವನ್ನು ಕೈಗಿಟ್ಟು, ತಯಾರಾದ ವಸ್ತುವನ್ನು ಅತಿ ಹೆಚ್ಚಿನ ಬೆಲೆಗೆ ಕೊಂಡುಕೊಳ್ಳುವ ಜನರಿದ್ದರೆ ಎಂತಹ ರಾಷ್ಟ್ರವಾದರೂ ಬಲು ದೊಡ್ಡ ಸೌಧ ನಿಮರ್ಾಣ ಮಾಡೀತು. ತಂತ್ರಜ್ಞಾನದ ಮಾತಾಡುವವರಿಗೆ ಗೊತ್ತಿರಲಿ ಜಗತ್ತಿನ ಜನ ಎಲೆಗಳಿಂದ ಮಾನ ಮುಚ್ಚಿಕೊಳ್ಳುವ ಕಲ್ಪನೆಯಲ್ಲಿರುವಾಗಲೇ ಭಾರತ ಅತ್ಯುತ್ಕೃಷ್ಟ ನೇಯ್ಗೆಯ ಕಲ್ಪನೆಯನ್ನು ಸಾಕಾರಗೊಳಿಸಿತ್ತು. ಇಳಕಲ್ಲು […]