ವಿಭಾಗಗಳು

ಸುದ್ದಿಪತ್ರ


 

Archive for November, 2020

ಶ್ರೇಷ್ಠಮಾರ್ಗದಲ್ಲಿ ನಡೆಯಲೂ ‘ಛಾತಿ’ ಬೇಕು!

Thursday, November 19th, 2020

ಇತ್ತೀಚೆಗೆ ಅನೇಕರು ಮತಾಂತರವಾಗುತ್ತಿರುವ ಸುದ್ದಿ ಬರುತ್ತಿದೆ. ಲವ್ ಜಿಹಾದ್ನ ಭರಾಟೆಯೂ ಜೋರಾಗಿಯೇ ನಡೆದಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತೂ ಮತಾಂತರ ನಿಷೇಧಕ್ಕೆ ಕಾಯಿದೆ ರೂಪಿಸುವ ಆಲೋಚನೆಯನ್ನೂ ಹೊರಹಾಕಿಯಾಗಿದೆ. ಹಿಂದೂ ಹೆಣ್ಣುಮಕ್ಕಳು ಮುಸ್ಲೀಂ ತರುಣರ (ಕೆಲವೊಮ್ಮೆ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿರುವವರ) ಪ್ರೇಮಪಾಶಕ್ಕೆ ಬಲಿಬಿದ್ದು ಮತಾಂತರಗೊಂಡು ಮದುವೆಯಾಗುವ ಪ್ರಕ್ರಿಯೆ ತೀವ್ರವಾಗುವಂತೆ; ಹಳ್ಳಿಯಲ್ಲಿ ಕ್ರಿಶ್ಚಿಯನ್ನರು ಅನಾಮತ್ತು ಕೇರಿ-ಕೇರಿಗಳನ್ನೇ ಆಪೋಶನ ತೆಗೆದುಕೊಳ್ಳುತ್ತಿದ್ದಾರೆ. ಹೀಗೇಕೆ? ಹಿಂದೂಧರ್ಮವನ್ನು ಬಿಟ್ಟು ಅನ್ಯ ಮತಗಳಿಗೆ ಜನ ಪರಿವತರ್ಿತರಾಗುತ್ತಿರುವುದಾದರೂ ಏಕೆ? ಒಂದೇ ಧರ್ಮದ ಸತ್ತ್ವ ಅರಿಯದೇ ಮತಾಂತರಗೊಳ್ಳುವವರಿರಬಹುದು […]

ಒಳಗೊಳಗೇ ಕುಸಿಯುತ್ತಿದೆ ಚೀನಾ!

Thursday, November 19th, 2020

ಗಡಿಯಲ್ಲಿ ಚೀನಾ ತಗಾದೆ ತೆಗೆದು ತಾನೇ ಕೆಟ್ಟದ್ದಾಗಿ ಸಿಕ್ಕುಹಾಕಿಕೊಂಡಿರುವುದು ಎಂಥವನಿಗೂ ಗೋಚರವಾಗುತ್ತಿದೆ. ತೀರಾ ಇತ್ತೀಚೆಗೆ ಚುಷೂಲ್ ಕಣಿವೆಯಲ್ಲಿ ಭಾರತೀಯ ಸೈನಿಕರು ಚೀನಾಕ್ಕೆ ಕೊಟ್ಟಿರುವ ಅಚಾನಕ್ಕು ಆಘಾತದಿಂದ ಹೊರಬರಲು ಅದಕ್ಕೆ ಸಾಕಷ್ಟು ಸಮಯವೇ ಬೇಕಾಗಬಹುದೇನೋ. ಚೀನಾ ಸುಮ್ಮನಂತೂ ಕೂಡುವುದಿಲ್ಲ. ಆದರೆ ತತ್ಕ್ಷಣಕ್ಕೆ ಪ್ರತಿಕ್ರಿಯಿಸಬೇಕಾದ ಭಯಾನಕವಾದ ಆಂತರಿಕ ಒತ್ತಡಕ್ಕೆ ಸಿಲುಕಿ ಅದು ತಪ್ಪುಗಳ ಮೇಲೆ ತಪ್ಪು ಮಾಡುತ್ತಲೇ ಸಾಗುತ್ತಿದೆ. ಗಾಲ್ವಾನ್ ಕಣಿವೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಚೀನೀ ಸೈನಿಕರು ಹತರಾದುದರ ಬಗ್ಗೆ ಅದಾಗಲೇ ಒಳಗೊಂದು ಬೇಗುದಿ ಭುಗಿಲೇಳುತ್ತಿದೆ. ಮತ್ತೊಂದೆಡೆ ತೈವಾನ್, ಹಾಂಕಾಂಗುಗಳಷ್ಟೇ […]

ಆಲೋಚನಗೆ ಅವಕಾಶವಿರುವುದು ಹಿಂದೂಧರ್ಮದಲ್ಲಿ ಮಾತ್ರ!

Thursday, November 19th, 2020

‘ವ್ಯಕ್ತಿಯೊಬ್ಬ ಪಶ್ಚಿಮದ ಮಾದರಿಯ ವಿದ್ಯೆಯನ್ನು ಸಾಕಷ್ಟು ಪಡೆದಿರಬಹುದು. ಆದರೆ ಅವನಿಗೆ ಧರ್ಮದ ಎ ಬಿ ಸಿಯೂ ಗೊತ್ತಿರಬೇಕೆಂದಿಲ್ಲ. ಅವನನ್ನು, ನಿನಗೆ ಆತ್ಮವನ್ನು ಊಹಿಸಿಕೊಳ್ಳಲು ಸಾಧ್ಯವೇ? ಆತ್ಮವಿಜ್ಞಾನದಲ್ಲಿ ಸಾಕಷ್ಟು ಮುಂದುವರೆದಿರುವಿಯಾ? ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿದೆಯೇ? ಎಂದೆಲ್ಲಾ ಕೇಳಿ ನೋಡಿ. ಉತ್ತರ ಇಲ್ಲವೆಂದಾದಲ್ಲಿ ಆತನ ಪಾಲಿನ ಧರ್ಮ ಬರಿ ಮಾತು, ಪುಸ್ತಕ ಮತ್ತು ವೈಭವದ ಬದುಕು ಅಷ್ಟೇ’. ಹಾಗೆಂದು ಸ್ವಾಮಿ ವಿವೇಕಾನಂದರು ಪಶ್ಚಿಮದ ಜನರೆದುರು ಉದ್ಘೋಷಿಸಿದ್ದರು. ಹೀಗೆ ಹೇಳುವುದು ಅಂದಿನ ದಿನಗಳಲ್ಲಿ ಸುಲಭವಾಗಿತ್ತೆಂದು ಭಾವಿಸಬೇಡಿ. ತನ್ನ ಪ್ರಾಪಂಚಿಕ ಗೆಲುವುಗಳಿಂದ, ವೈಜ್ಞಾನಿಕ […]