ವಿಭಾಗಗಳು

ಸುದ್ದಿಪತ್ರ


 

ಶಾಲೆಗಳ ಮೇಲೆ ಅವರಿಗೇಕೆ ಕೋಪ ಗೊತ್ತಾ!?

ಬೆಂಚು-ಕುರ್ಚಿಗಳು ಮುರಿದು ಬಿದ್ದಿದ್ದವು, ಪಾಲಕರು ಮಕ್ಕಳನ್ನು ಕರೆತರಲು ಹೆದರುತ್ತಿದ್ದರು. ಅಲ್ಲೊಂದು ಸ್ಮಶಾನ ಸದೃಶ ವಾತವರಣವಿತ್ತು. ಘಟನೆ ಎಳೆ ಎಳೆಯಾಗಿ ತೆರೆದುಕೊಂಡಿತ್ತು ಹೃದಯದ ತೊಂದರೆಯಿರುವ ಹುಡುಗನನ್ನು ತಂದೆ ತಾಯಿ ಇಲ್ಲಿಗೆ ತಂದು ಸೇರಿಸಿದ್ದರು. ಈ ರೀತಿಯ ಸಮಸ್ಯೆ ಇದೆ ಎನ್ನುವುದನ್ನು ಮುಚ್ಚಿಟ್ಟಿದ್ದರು. ಘಟನೆ ನಡೆದ ದಿನ ಹುಡುಗ ಶಾಲೆಗೆ ತಡವಾಗಿ ಬಂದಿದ್ದ. ದೈಹಿಕ ಶಿಕ್ಷಕರು ಸಹಜವಾಗಿಯೇ ಶಿಕ್ಷೆ ಕೊಟ್ಟಿದ್ದರು. ವಾಲಿಬಾಲ್ ಅಂಕಣವನ್ನು ಎರಡು ಸುತ್ತು ತಿರುಗುವ ಶಿಕ್ಷೆ. ಹುಡುಗ ಎರಡನೆ ಸುತ್ತಿಗೆ ಕುಸಿದ. ಮೆಷ್ಟ್ರು ಅವನನ್ನು ಆಸ್ಪತ್ರೆಗೆ ಒಯ್ದರು. ಶಾಲೆಯ ದುರಾದೃಷ್ಟಕ್ಕೆ ಆತ ಮುಸಲ್ಮಾನನಾಗಿದ್ದ. ಸಹಜವಾಗಿಯೆ ಪುಂಡರ ಗುಂಪು ಒಟ್ಟಾಯಿತು. ಮಾಡಲು ಕೆಲಸವಿಲ್ಲದೆ ತಿಂದುಂಡು ಪೊಗದಸ್ತಾಗಿ ಬೆಳೆದಿದ್ದ ಐದುನೂರಕ್ಕು ಹೆಚ್ಚು ಪೊಕರಿಗಳು ಶಾಲೆಗೆ ದಾವಿಸಿದರು. ಬೆಂಚು ಟೇಬಲ್ಲುಗಳನ್ನು ಮುರಿದೆಸೆದರು. ಮಕ್ಕಳಿಗೂ ಹೊಡೆದರು. ಶಿಕ್ಷಕರ ಮೇಲೆ ಕೈ ಮಾಡಿದರು. ಸಾಕಷ್ಟು ಹೆಸರುಗಳಿಸಿ ಗೌರವದಿಂದಿದ್ದ ದೈಹಿಕ ಶಿಕ್ಷಕರ ಅಂಗಿ ಹರಿದರು. ಹೋ ಅದೊಂದು ಭಯನಕ ಪರಿಸ್ಥಿತಿ. ಕಳೆದ ವರ್ಷ ಅಗಸ್ಟ್ ತಿಂಗಳ ಘಟನೆ ನೆನಪಿದೆ ತಾನೆ?
ಉತ್ತರಪ್ರದೇಶದ ಸರ್ಸಾವಾದ ಶುತುಬ್ ಪುರ ಎಂಬ ಹಳ್ಳಿಯಲ್ಲಿ ಶಾಲೆಚಿi ಮಕ್ಕಳ ಮೇಲೆ ದಾಳಿಯಾಗಿತ್ತು; ಹೌದು ಸ್ವಾತಂತ್ರ್ಯ ದಿನಾಚರಣೆಯ ದಿವಸ ಶಾಲಾ ಮಕ್ಕಳು ವಂದೇ ಮಾತರಂ ಹೇಳಿದರೆಂಬ ಕಾರಣಕ್ಕೆ ಮೆರವಣಿಗೆಯ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ಮಕ್ಕಳನ್ನು ಲಾಟಿಯಿಂದ, ಚೂಪಾದ ವಸ್ತುಗಳಿಂದ ಥಳಿಸಿದ್ದರು. ಮಕ್ಕಳು ಚೀರಾಡುತ್ತ ಚೆಲ್ಲಾಪಿಲ್ಲಿಯಾಗಿದ್ದರು. ಹಿಂದಿ ಪತ್ರಿಕೆ ’ದೈನಿಕ ಜಾಗರಣ್’ – ಸೇರಿದ್ದ ಜನರು ’ಭಾರತವನ್ನು ಮುಸಲ್ಮಾನ್ ರಾಷ್ಟ್ರಮಾಡುತ್ತೇವೆ; ನಾವು ಜಾತ್ಯತೀತ ಮೌಲ್ಯಗಳ ಮತ್ತು ಪ್ರಜಾಪ್ರಭುತ್ವದ ವಿರೋಧಿಗಳು ಎಂದು ಅರಚಾಡುತಿದ್ದುದನ್ನು ದಾಖಲಿಸಿತ್ತು.
ಪಾಕಿಸ್ತಾನದ ಲಾಹೋರ್‌ನ ಪೂರ್ವಕ್ಕಿರುವ ಜೋಸೆಫ್ ಕಾಲೋನಿಯ ಮಿಶನರಿ ಶಾಲೆಚಿi ಮೇಲೂ ಕಳೆದ ವರ್ಷ ಹೀಗೆ ದಾಳಿಯಾಗಿತ್ತು.
ಆ ಭಾಗದ ಒಳ್ಳೆಯ ಶಾಲೆಯೆಂಬ ಹೆಗ್ಗಳಿಕೆ ಸಹಿಸದ ಮೂರು ಸಾವಿರ ಜನ ಕ್ಷುಲ್ಲಕ ಕಾರಣ ಕೊಟ್ಟು ಏಕಾಏಕಿ ಮುಗಿ ಬಿದ್ದರು. ಶಾಲೆಯನ್ನು ದ್ವಂಸಗೊಳಿಸಿದರು. ಪೀಠೋಪಕರಣಗಳು ಮುರಿದುಬಿದ್ದವು. ಶಿಕ್ಷಕರಿಗೆ ಥಳಿಸಲಾಯಿತು. ಶಾಲೆಯನ್ನು ವಿರೂಪಗೊಳಿಸಿ ಇನ್ನು ಮುಂದೆ ಶಾಲೆ ನಡೆಸಲು ಧೈರ್ಯವಿರದಂತೆ ದೇಶಾದ್ಯಾಂತ ಮಿಷನರಿಗಳು ಪ್ರತಿಭಟನೆ ನಡೆಸಿದರು ಪ್ರಯೋಜನವಾಗಲಿಲ್ಲ.
ಬಹಳ ಹಿಂದೆ ರಷ್ಯಾದಲ್ಲಿ ಉಗ್ರರು ಶಾಲೆಗೆ ನುಗ್ಗಿ ಅಡಗಿದ್ದು, ಅನಂತರ ಆ ಮಕ್ಕಳನ್ನು ಕೊಂದು ಸರ್ಕಾರವನ್ನು ಬೆದರಿಸಲು ಯತ್ನಿಸಿದ್ದು ನೆನಪಿಲ್ಲವೇ. ಪಾಕಿಸ್ತಾನದಲ್ಲಿಯೇ ಶಾಲೆಗೆ ನುಗ್ಗಿದ ಉಗ್ರರು ೧೩೨ ವಿದ್ಯಾರ್ಥಿಗಳ ತಲೆ ಕಡಿದು ರಕ್ತದ ಕೊಡಿಹರಿಸಿದ್ದು ಇನ್ನೂ ಹಸಿರು ಹಸಿರಾಗಿದೆ.
ಅದಕ್ಕೆ ಹೊಸ ಸೇರ್ಪಡೆ ಬೆಂಗಳೂರಿನ ಗುಡ್ದದ ಹಳ್ಳಿ ಪ್ರಕರಣ. ೫೦ ವರ್ಷದ ದೈಹಿಕ ಶಿಕ್ಷಕರು ೭ ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ನೀಡಿದರಂತೆ. ಈ ಸುದ್ದಿ ಅದೆಷ್ಟು ಬೇಗನೆ ಹಬ್ಬಿತೋ ನೋಡಿ. ಸಾವಿರಕ್ಕೆ ಹತ್ತಿರ ಹತ್ತಿರ ಜನ ಬಂದು ಸೇರಿದರು. ಹಿಂದಿನ ಎಲ್ಲಾ ಘಟನೆಗಳೆಲ್ಲಾದರಂತೆ ಶಾಲೆಯ ಪೀಠೋಪಕರಣಗಳನ್ನು ಪುಡಿಗೈಯ್ಯಲಾಯಿತು. ದೈಹಿಕ ಶಿಕ್ಷಕರನ್ನು ಪ್ರಾಣಿಗೆ ಬಡಿಯುವಂತೆ ಬಡಿಯಲಾಯಿತು. ಹೆಚ್ಚುವರಿಯಾಗಿ ಸೇರಿದ್ದ ಪೋಲಿಸರ ಹಿಡಿತಕ್ಕೂ ಸಿಕ್ಕದ ರೀತಿಯ ಪುಂಡಾಟಿಕೆ ಅದು. ಶಾಲೆಯ ಹೊರಗೆ ನಿಂತಿದ್ದ ಸ್ಕೂಟರ್ ಬೈಕುಗಳಿಗೆ ಬೆಂಕಿ ಹಚ್ಚಿ ತಂಪು ಪಾನೀಯಗಳ ಬಾಟಲುಗಳನ್ನು ಶಾಲೆಯೊಳಗೆ ಎಸೆಯಲಾಯಿತು. ಉಳಿದವರು ಮೂಕ ಪ್ರೇಕ್ಷಕರಷ್ಟೇ. ಪತ್ರಿಕೆಗಳು ಲೈಂಗಿಕ ಕಿರುಕುಳದ ವರದಿ ಬರೆದು ಸುಮ್ಮನಾದವು ೩೦-೩೫ ವರ್ಷದ ಅನುಭವದಲ್ಲಿ ಎಂದಿಗೂ ಕೆಟ್ಟ ಹೆಸರು ಗಳಿಸದ ಮೇಷ್ಟ್ರೊಬ್ಬರೂ ೭ ವರ್ಷದ ಹುಡುಗಿಯ ಮೇಲೆ ತನ್ನ ೫೦ನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳ ಕೊಡಬೇಕಾದ ಅಗತ್ಯ ಬಂದಿದ್ದಾದರು ಏಕೆ? ಎಂಬುದನ್ನು ಯಾರು ಯೋಚಿಸಲೇ ಇಲ್ಲ. ಇವರು ಹೊರಗಿನಿಂದ ಬಂದು ನಮ್ಮ ಹೆಸರು ಕೆಡಸುತ್ತಿದ್ದಾರೆಂದುದು ಯಾರಿಗೂ ಕೇಳಿಸಲೇ ಇಲ್ಲ.
ಮುಸ್ಲಿಂ ಸಮಾಜಕ್ಕೆ ಏನಾಗುತ್ತಿದೆ? ಪ್ರಭುತ್ವದೊಂದಿಗೆ ಸೈನಿಕರೊಂದಿಗೆ ಕಿತ್ತಾಟ ಸರಿ. ಪುಟ್ಟ ಮಕ್ಕಳನ್ನು ಕೊಲ್ಲುವ, ಶಾಲೆಗಳನ್ನು ಹುಡಿಯೆಬ್ಬಿಸುವ ಈ ಕ್ರೂರ ಮನಸ್ಥಿತಿ ಏಕೆ? ಸಮಸ್ಯೆಇರುವುದು ಎಲ್ಲಿ, ಅವರ ಶಾಸ್ತ್ರದಲ್ಲೆ? ಅದನ್ನು ಅರ್ಥೈಸಿಕೊಳ್ಳುವ ಮನಸ್ಥಿತಿಯಲ್ಲೋ?
ಇಸ್ಲಾಂ ಕಳೆದ ಅನೇಕ ದಶಕಗಳಿಂದ ತನ್ನ ಚಿಂತನೆಯನ್ನು ಜಗತ್ತಿನ ಮೇಲೆ ಹೇರುವ ಪಂಥವಾಗಿ ಬೆಳೆದು ನಿಂತಿದೆ. ಜಾಗತಿಕ ಪ್ರವಾಹದಲ್ಲಿ ಅದರ ಗುರುತು ಕ್ರೌರ್ಯ ಮಾತ್ರ. ಬುದ್ಧನ ಅನುಯಾಯಿಗಳನ್ನು ನೀವು ಆಂತರ್ಯದ ಶಕ್ತಿಗಳಿಂದ ಗುರುತಿಸಬಹುದು. ಮಹಾವೀರನ ಅನುಯಾಯಿಗಳು ಕಠೋರ ಅಚರಣೆಯಿಂದ. ಹಾಗೆಯೇ ಮುಸಲ್ಮಾನರು ತಮ್ಮ ಭಯೋತ್ಪಾದಕ ಚಟುವಟಿಕೆಗಳಿಂದ; ಹೀಗಾಗಿಯೇ ಇಸ್ಲಾಂ ಕಳೆದ ಅನೇಕ ದಶಕಗಳಿಂದ ಜಗತ್ತು ನಡಗುವ ದಾಳಿಕೋರರನ್ನು ಉತ್ಪಾದಿಸಿದೆ ಹೊರತು ಗಾಂಧಿ, ಬಸವ, ಅಂಬೇಡ್ಕರರನಲ್ಲ. ಹಾಗೆಂದು ಮಿಡ್ಲ್ ಈಸ್ಟ್ ಕ್ವಾರ್ಟರ‍್ಲಿ ಪತ್ರಿಕೆಯ ಅಂಕಣಕಾರ ಅರೋನ್ ಸೀಗಲ್ ಬಲು ಹಿಂದೆಯೇ ಬರೆದಿದ್ದರು. ಇಸ್ಲಾಂ ಜಗತ್ತು ವೈಜ್ಞಾನಿಕ ಲೋಕಕ್ಕೆ ನೀಡಿರುವ ಕೊಡುಗೆ ನಗಣ್ಯ. ೪೧ ಮುಸ್ಲಿಂ ರಾಷ್ಟ್ರಗಳು ಜಗತ್ತಿನ ೨೦ ಪ್ರತಿಶತ ಜನಸಂಖ್ಯೆ ಹೊಂದಿರುವ ಜಗತ್ತಿನ ಒಟ್ಟಾರೆ ವೈಜ್ಞಾನಿಕರ ಸಂಖೈಯಲ್ಲಿ ಶೇಕಡಾ ೫ನ್ನು ದಾಟುವುದಿಲ್ಲ; ಹಾಗೆಂದು ಅವರ ಅಭಿಪ್ರಾಯ.
ಶಾಸ್ರ್ತಗಳು ಮತಗ್ರಂಥಗಳು ನಿತ್ಯದ ಬದುಕಿಗೆ ತೊಡಕಾಗಬಾರದು. ಬದುಕು ಎಲ್ಲಾಕ್ಕಿಂತಲು ದೊಡ್ಡದು. ಈ ಬದುಕನ್ನು ಸುಂದರಗೊಳಿಸಲು ಧರ್ಮ ಬೇಕು. ಆದರೆ ಈ ಧರ್ಮವೇ ಈ ಸುಂದರ ಬದುಕಿಗೆ ಅಡ್ಡಿಗಾಲಾಗುವುದಾದರೆ ಅದನ್ನು ಬಿಟ್ಟು ಮುಂದುವರಿಯುವುದೆ ಸರಿಯಾದ ಮಾರ್ಗ. ಆಧುನಿಕ ಶಿಕ್ಷಣದಿಂದ ಮಕ್ಕಳನ್ನು ದೂರವಿರಿಸಬೇಕೆಂಬ ದೊಡ್ಡ ಪ್ರಯತ್ನವನ್ನು ಪ್ರತ್ಯೇಕವಾದಿಗಳು ಭಯೋತ್ಪಾದಕರು ಮಾಡುತ್ತಿರುವುದು ಏಕೆ ಗೊತ್ತೇ? ಸುಶಿಕ್ಷಿತ ಜನಾಂಗ ಇವರ ಮಾತು ಕೇಳಲಾರದು ಅಂತ. ಮುಖ್ಯವಾಹಿನಿಗೆ ಸಮಾಜವನ್ನು ತರುವ ಏಕೈಕ ಮಾರ್ಗ ಶಿಕ್ಷಣ. ಈ ಶಿಕ್ಷಣಕೊಡುವ ಸಂಸ್ಥೆಗಳನ್ನೆ ನಾಶಮಾಡಿಬಿಟ್ಟರೆ ಉಳಿಯುವುದು ಏನು ಹೇಳಿ? ಅರೆಬೆಂದ ಜಿಹಾದಿನಿಂದ ಉನ್ಮತ್ತ ಕ್ರೌರ್ಯವೇ ಮೂರ್ತಿವೆತ್ತ ಜನಾಂಗ. ಇಂಥವರು ಚಿಂತನೆ ಮಾಡದೆ ಹೇಳಿದ್ದನ್ನು ಕೇಳುವವರು. ಕ್ರೌರ್ಯ ಜಗದ್ವ್ಯಾಪಿಯಾಗಲು ಇಂತಹುದೇ ಲಗಾಮಿಲ್ಲದ ಹುಚ್ಚು ಕುದುರೆಗಳು ಬೇಕು. ಅದಕ್ಕೆ ಅವರು ಶಿಕ್ಷಣದಿಂದ ದೂರವಿರಬೇಕು.
ಅನೇಕ ಇಸ್ಲಾಂ ರಾಷ್ಟ್ರಗಳಲ್ಲಿ ಈಗಲೂ ಇಂಗ್ಲೀಷ್ ಶಿಕ್ಷಣಕ್ಕೆ ಅವಕಾಶವಿಲ್ಲ. ಬೀದರ್‌ನ ಮಿತ್ರರೊಬ್ಬರು ಮುಸ್ಲಿಂ ರಾಷ್ಟ್ರವೊಂದರಲ್ಲಿ ಔಷಧಿ ಮಾರಾಟಗಾರರಾಗಿ ಕೆಲಸ ಮಾಡುತ್ತಿದ್ದರು. ಅವರು ಸ್ವಯಂ ನಿವೃತ್ತಿಗೊಂಡು ಮರಳಿ ಬಂದರು. ಅವರೊಡನೆ ಮಾತನಾಡುತ್ತಿರುವಾಗ ಕಣ್ಣರಳಿಸಿ ಹೇಳುತ್ತಿದ್ದರು. ಅಲ್ಲಿನ ಪ್ರತಿಯೊಬ್ಬ ತಂದೆಗೂ ತಮ್ಮ ಮಗಳಿಗೆ ಆಧುನಿಕ ಶಿಕ್ಷಣ ಕೊಡಿಸಿ ವಿದ್ಯಾವಂತೆಯಾಗಿಸುವ ಬಯಕೆಯಂತೆ. ಅದಕ್ಕೆ ಭಾರತೀಯರ ಬಳಿ ಕದ್ದು ಮುಚ್ಚಿ ಪಾಠಕ್ಕೆ ಕಳಿಸುತಿದ್ದರಂತೆ. ಅದರೆ ಪ್ರಭುತ್ವಕ್ಕೆ ಹೀಗೊಂದು ಶಿಕ್ಷಣ ನಡೆಯುತ್ತಿದೆಯೆಂದು ಗೊತ್ತಾದರೆ ಅಂಥವರ ಕತೆ ಮುಗಿದಂತೆಯೇ! ಮುಲಾಜಿಲ್ಲದೆ ಗಲ್ಲಿಗೇರಿಸಲಾಗುತ್ತದೆ.
ಅತ್ಯಂತ ಅಧುನಿಕವಾದ ೨೧ನೇ ಶತಮಾನದಲ್ಲಿ ನಾವಿದ್ದೇವೆ. ದೂರದ ಮುಸ್ಲಿಂ ರಾಷ್ಟ್ರ ಬಿಡಿ, ಸ್ವತಃ ಭಾರತದಲ್ಲಿ ಅನೇಕ ಹೆಣ್ಣು ಮಕ್ಕಳು ಪದವಿ ಶಿಕ್ಷಣಕ್ಕೆ ಹೊಗುತ್ತಿಲ್ಲ. ಅವರಲ್ಲೂ ಕೆಲವು ಜನ ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಾರೆ. ಏಕೆ ಹೀಗೆ? ಇಸ್ಲಾಂನ ಶಿಕ್ಷಣ ಮತ್ತು ಹೆಣ್ಣು ಮಕ್ಕಳ ಕುರಿತಂತಹ ಭಾವನೆಗಳು. ಧರ್ಮ ಶಿಕ್ಷಣ ಬೇಕು ನಿಜ ಆದರೆ ಅದೇ ಎಲ್ಲಾ ಅಲ್ಲ. ಸಮಾಜದೊಂದಿಗೆ ಬೆರೆಯಬಲ್ಲ ಶಿಕ್ಷಣ ಬೇಕು. ಹಾಗಾಗದಿದ್ದಲ್ಲಿ ಬರುವ ದಿನಗಳು ಇಸ್ಲಾಂ ಪಾಲಿಗೆ ಭೀಕರವೇ. ಈಗಾಗಲೆ ಐಸಿಸ್, ಬೊಕೊಹರಾಮ್, ತಾಲಿಬಾನಿಗಳಿಂದೇ ಗುರುತಿಸಲ್ಪಡುವ ಇಸ್ಲಾಂ ಬರುಬರುತ್ತಾ ಕ್ರೌರ್ಯದ ಪ್ರತಿರೂಪವೇ ಆಗಿಬಿಡುತ್ತದೆ. ಒಮ್ಮೆ ಭೂಮಿ ಮೈ ಕೊಡವಿತೆಂದರೆ ಯಾರು ಯಾರನ್ನು ರಕ್ಷಿಸಲು ಸಾದ್ಯವಿಲ್ಲ.
ಆದರೇನು, ಅದೇ ಸಮಾಜದ ಧೈರ್ಯವಂತರು ಮುಂದೆ ಬರುವುದೇ ಇಲ್ಲ. ಹಿಂದೆ ಹಿಂದೂ ಧರ್ಮದ ಅಪಸವ್ಯಗಳನ್ನು ತೆಗೆದೊಗೆಯಲು ರಾಜರಾi ಮೋಹನರಾಯ, ದಯಾನಂದ, ವಿವೇಕಾನಂದರಂಥವರು ಒಳಗಿನಿಂದಲೆ ಧಾವಿಸಿ ಬಂದರು. ಹಾಗೆಯೇ ಅವರೊಳಗಿಂದಲೂ ಧೈರ್ಯವಂತ ನಾಯಕರು ಎದ್ದು ಬರಬೇಕಿದೆ. ಆದರೇನು? ಎದ್ದ ಪ್ರತಿಯೊಬ್ಬರನ್ನು ಕೊಲ್ಲಬೇಕೆಂದು ನಿಶ್ಚಯಿಸಿಬಿಡುತ್ತಾರಲ್ಲಾ! ಒಬ್ಬನ ವಿರುದ್ಧ ನೂರು ಜನ ನಿಂತು ಬಿಡುತ್ತಾರೆ. ಅಲ್ಲಲ್ಲಿ ಬೆಂಬಲದ ಸರ್ಕಾರಗಳು ಬೇರೆ. ಹ್ಞಾಂ! ಸಿದ್ದರಾಮಯ್ಯ ಐದು ವರ್ಷ ಕುರ್ಚಿಯಲ್ಲಿ ಕೂತು ಬೆಂಬಲಕ್ಕೆ ನಿಲ್ಲಬಹುದು. ಆದರೆ ಅನಂತರವಾದರೂ ಬೇರೊಬ್ಬ ಬರುತ್ತಾನಲ್ಲ. ಅಷ್ಟು ಹೊತ್ತಿಗೆ ಒಳಗೊಳಗೆ ಕುದಿಯುವ ಇತರ ಸಮಾಜ ಆದೇನು ಮಾಡಬಹುದೊ ದೇವರೆ ಬಲ್ಲ! ಎಚ್ಚರಿಕೆಯಿರಲಿ.
ಮುಸಲ್ಮಾನ ಹುಡುಗರನ್ನು ಶಾಲೆಗೆ ಸೇರಿಸಿಕೊಳ್ಳುವುದೇ ಬೇಡವೆಂದು ಕೆಲವು ಶಾಲೆಗಳು ನಿಶ್ಚಯಮಾಡುತ್ತಿವೆ. ಅವರಿಗೆ ಕೆಲಸ ಕೊಡುವುದು ಬೇಡವೆಂದು ಅನೇಕ ಸಾಪ್ಟ್ವೇರ್ ಕಂಪನಿಗಳು ನಿಯಮ ಮಾಡಿಕೊಂಡಿದೆ. ಅವರ ಆಟೋ ಹತ್ತಬಾರದೆಂದು, ಅವರ ಬಳಿ ವಸ್ತುಗಳನ್ನೆ ಖರೀದಿಸಬಾರದೆಂದು ಸಮಾಜದ ನಡುವೆ ಅಘೋಷಿತ ಸಂಕಲ್ಪವಿದೆ. ಇದು ಭಾರತದ ಮುಸಲ್ಮಾನರ ಪಾಲಿಗೆ ಒಳ್ಳೆಯ ಬೆಳವಣಿಗೆ ಅಲ್ಲ.

Comments are closed.