ವಿಭಾಗಗಳು

ಸುದ್ದಿಪತ್ರ


 

ಕುಂಡಲಿನಿ, ನಮ್ಮೊಳಗಿನ ಸುಪ್ತ ಶಕ್ತಿ ಸಂಜೀವಿನಿ

ಶಿವನಿಗೆ ಮೂರನೇ ಕಣ್ಣು ಇರೋದು ಕಲಾವಿದನ ಕಲ್ಪನೆಯಾ ಅಥವಾ ಹಾಗೊಂದು ಸಾದ್ಯತೆ ಇದೆಯಾ? ಹೌದು, ಪುರಾಣದ ಕಥೆಗಳು ನಮ್ಮನ್ನು ಪ್ರಗತಿಂದ ದೂರ ತಳ್ಳಿಬಿಡುವ ಭಯ ಯಾವಾಗಲೂ ಇದ್ದದ್ದೇ. ಆದರೆ ಪ್ರಾಮಾಣಿಕವಾಗಿ ಹೇಳಿ, ಅನೇಕ ಬಗೆಯ ಅತೀಂದ್ರಿಯ ಶಕ್ತಿಗಳು ನಮಗೂ ಇಲ್ಲವೇ?
ಉದಾಹರಣೆಗೆ ಕೆಲವು ಅಪರೂಪದ ಘಟನೆಗಳು ಆಗಾಗ ನಮ್ಮ ಅನುಭವಕ್ಕೆ ಬರುತ್ತಲೇ ಇರುತ್ತವೆ. ಯಾರನ್ನೋ ಉತ್ಕಟವಾಗಿ ನೆನಪಿಸಿಕೊಳ್ಳುತ್ತಿರುತ್ತೇವೆ, ಅವರ ಫೋನ್ ಕಾಲ್ ಬರುತ್ತೆ ಅಥವಾ ಅವರೇ ಹಾಜರಾಗಿಬಿಡ್ತಾರೆ. ಆಗೆಲ್ಲ ನಿಮಗೆ ನೂರು ವರ್ಷ ಆಯಸ್ಸು ಅಂತೀವಿ. ದೂರದೂರಿನಲ್ಲಿ ಮಗ ತೊಂದರೆಗೆ ಸಿಕ್ಕಿ ಹಾಕಿಕೊಂಡಿರ್ತಾನೆ, ಇಲ್ಲಿ ಯಾವುದರ ಅರಿವಿಲ್ಲದಿದ್ದರೂ ತಾಯ ಎದೆ ಬಡಿತ ಜೋರಾಗಿರುತ್ತೆ. ಇವತ್ತು ಆಫೀಸಿನಲ್ಲಿ ಅವಘಡ ನಡೆದೇ ನಡೆಯುತ್ತೆ ಅಂತ ಮನಸ್ಸು ಹೇಳುತ್ತಿರುತ್ತೆ; ಸಂಜೆಯೊಳಗೆ ರಾದ್ದಾಂತವೇ ಆಗಿಬಿಟ್ಟಿರುತ್ತೆ. ಹೇಗೆ ಇದೆಲ್ಲ? ಪ್ರತೀಬಾರಿ ‘ಆಕಸ್ಮಿಕ’ವೇ ಉತ್ತರವೇ. ಅಥವಾ ಕಾಕತಾಳೀಯವೆಂದು ತಳ್ಳಿಬಿಡೋಣವೆ? ಪ್ರಾಮಾಣಿಕವಾಗಿ ಯೋಚಿಸಿ ಇವೆಲ್ಲ ಹೇಗೆ ಸಾಧ್ಯ?

10299003_925107604219059_9062761733252944909_nವಿಜ್ಞಾನದ ಮರೆಯಲಿ ನಿಂತು ಹಿಂದು ಧರ್ಮದ ಮೇಲೆ ಕಲ್ಲೆಸೆಯುವವರಿಗೆ ಒಂದು ಅಚ್ಚರಿಯ ಸಂಗತಿ ಹೇಳಲೇಬೇಕು. ಕಳೆದ ಕೆಲವಾರು ವರ್ಷಗಳ ಹಿಂದೆ ಮೆದುಳಿನ ಬರೋಬ್ಬರಿ ಮಧ್ಯ ಭಾಗದಲ್ಲಿ ವಿಜ್ಞಾನಿಗಳು ‘ಪಿನಿಯಲ್ ಗ್ಲ್ಯಾಂಡ್’ನ್ನು ಗುರುತಿಸಿದರು. ಇದು ಗೋಧಿಯ ಕಾಳಿನ್ಟದ್ದು ನಮ್ಮ ಪಾಲಿಗೆ ನಿದ್ದೆಯ ನಿಯಂತ್ರಣಕ್ಕೆ ಕಾರಣವಾಗುವುದಷ್ಟೇ ಅಲ್ಲ, ಅದ್ಭುತವಾದ ಆಧ್ಯಾತ್ಮಿಕ ಅನುಭೂತಿಗಳಿಗೂ ಪ್ರಮುಖ ತಾಣವಾಗಿದೆಯೆಂದು ಒಪ್ಪಿದ ಅನೇಕರು ಇದನ್ನು ‘ಮೂರನೇ ಕಣ್ಣು’ ಎಂತಲೇ ಕರೆದರು! ಭೌತಿಕ ಮತ್ತು ಆಧ್ಯಾತ್ಮಿಕ ಅನುಭವಗಳ ನಡುವಿನ ಕೊಂಡಿ ಇದು ಎಂಬುದು ಅವರ ಅಂಬೋಣ. ಅದಕ್ಕೆಂದೇ ಭ್ರೂ ಮಧ್ಯೆ ಭಸ್ಮವಿಟ್ಟು ಗೌರವ ಸಲ್ಲಿಸುವ ರೂಢಿ ನಮ್ಮದು. ಪಿನಿಯಲ್ ಗ್ರಂಥಿ ಚುರುಕಾದಾಗಲೆಲ್ಲ ಅತೀಂದ್ರಿಯವಾದ ಘಟನೆಗಳು ಸಹಜವೆಂಬಂತೆ ನಡೆಯುತ್ತವೆ.
ಇಷ್ಟಕ್ಕೂ ಅದೇಕೆ ಅಸಾಧ್ಯವಾಗಬೇಕು ಹೇಳಿ? ಹಾಗೇ ಗಮನಿಸಿ. ಜೋಗ್‌ನಲ್ಲಿ ಉತ್ಪಾದನೆಯಾಗುವ “ದ್ಯುತ್ ನಮ್ಮ ಮನೆಗೆ ತಲುಪಲು ವಾಹಕ ತಂತಿಗಳು ಬೇಕೇಬೇಕು. ಹಾಗೆಂದಮಾತ್ರಕ್ಕೆ ತಂತಿಗಳಿಲ್ಲದೇ “ದ್ಯುತ್ ಹರಿಯುವುದು ಅಸಾಧ್ಯವೆಂದಿರೋ ಜೋಕೆ. “ದ್ಯುತ್ತಿನ ಪ್ರಖರ ರೂಪವಾದ “ಂಚು ಭೂ”ಗೆ ತಲುಪಲು ಯಾವ ತಂತಿಯೂ ಇಲ್ಲವಲ್ಲ, ಅದು ಹೇಗೆ? ಬಲು ಸರಳ. ಮನೆಯಲ್ಲಿ ಹರಿಯುವ ವಿದ್ಯುತ್ ೧೨೦ ವೋಲ್ಟ್ ಸಾಮರ್ಥ್ಯದ್ದಾದರೆ, ಭೂಮಿಗೆ ಅಪ್ಪಳಿಸಲೆಂದು ಧಾವಿಸುವ ಮಿಂಚಿನದ್ದು ಹತ್ತು ಕೋಟಿ ವೋಲ್ಟ್‌ಗಳು! ಹರಿಯುವ ವಿದ್ಯುತ್ತಿನ ಸಾಮರ್ಥ್ಯ ಅಪಾರವಾಗಿದ್ದರೆ ಅದಕ್ಕೆ ವಾಹಕವೇ ಬೇಕಿಲ್ಲ. ಹಾಗಾದರೆ ಉತ್ಕಟವಾದ ಇಚ್ಛೆಯೊಂದು ತಂತಿಲ್ಲದೇ ಮತ್ತೊಬ್ಬ ವ್ಯಕ್ತಿಯನ್ನು ಮುಟ್ಟುವುದದೇಕೆ ಸಾಧ್ಯವಿಲ್ಲ?
ಸಾಮಾನ್ಯವಾಗಿ ಪ್ರೇಮಿಗಳಲ್ಲಿ ಈ ಬಗೆಯ ಉತ್ಕಟ ಭಾವವಿರುತ್ತದೆ. ಅದು ತಾಯ ಪ್ರೇಮವಿರಬಹುದು, ನಲ್ಲ-ನಲ್ಲೆಯರದ್ದೂ ಆಗಿರಬಹುದು. ಈ ಪ್ರವಾಹ ಏಕಮುಖವಾದಷ್ಟೂ ಪಿನಿಯಲ್ ಗ್ರಂಥಿ ಜಾಗೃತವಾಗುತ್ತದೆ. ಈ ಕಾರಣಕ್ಕೆ ನಮ್ಮಲ್ಲಿ ಮೂರ್ತಿಪೂಜೆ ಹುಟ್ಟಿಕೊಂಡಿದ್ದು. ಹುಟ್ಟುವ ಅಷ್ಟೂ ಪ್ರೇಮವನ್ನು ಆ ಮೂರ್ತಿಯ ಹಿಂದಿನ ತತ್ವಕ್ಕೆ ಸಮರ್ಪಿಸಿದರೆ ಈ ಗ್ರಂಥಿ ಜಾಗೃತವಾಗಿ ಆಗ ಹುಟ್ಟುವ ಆಲೋಚನೆಗಳು ಅಸಾಮಾನ್ಯವಾಗಿರುತ್ತವೆ. ‘ನಿಮಗೆ ನಿಮ್ಮ ಗಂಡ ದೇವರಾಗಬಹುದಾದರೆ, ನಾನೇಕೆ ದೇವರನ್ನೇ ಗಂಡನೆನ್ನಬಾರದು’ ಎಂದು ಮೀರಾ ಪ್ರಶ್ನಿಸುವಾಗ ಅವಳಲ್ಲಿದ್ದ ಭಾವ ಇದೇ. ಅಕ್ಕ ಮಹಾದೇವಿಯ ಚನ್ನಮಲ್ಲಿಕಾರ್ಜುನನ ಪ್ರೇಮವೂ ಇದೇ ಬಗೆಯದ್ದು. ಹೀಗಾಗಿಯೇ ಇಂದಿಗೂ ಅನೇಕರ ಮನಸ್ಸಿನ ಕದ ಅವರು ತಟ್ಟುತ್ತಲೇ ಇರುತ್ತಾರೆ! ಸುಮ್ಮನೆ ಯೋಚಿಸಿ. ಅವರು ಹುಟ್ಟು ಹಾಕಿದ ಆಲೋಚನಾ ತರಂಗಗಳ ಸಾಮರ್ಥ್ಯದೆದುರು ಮಿಂಚಿನ ದಶಕೋಟಿ ವೋಲ್ಟೂ ತೃಣ ಮಾತ್ರ! ಹೀಗಿರುವಾಗ ಹತ್ತು ಸಾವಿರ ವರ್ಷಗಳ ಹಿಂದೆ ತನ್ನ ಆಲೋಚನೆಗಳನ್ನು ಜಗತ್ತಿಗೆ ಕೊಟ್ಟ ಋಗಳ ಚಿಂತನಾ ತರಂಗಗಳ ಸಾಮರ್ಥ್ಯ ಅಂದಾಜು ಮಾಡಿ ನೋಡಿ!
ವಿಜ್ಞಾನ ಯಾವುದನ್ನು ವಿವರಿಸಲು ಹೆಣಗಾಡುತ್ತಿದೆಯೋ, ತಂತ್ರಶಾಸ್ತ್ರ ಕುಂಡಲಿನಿ ಶಕ್ತಿಯ ಮೂಲಕ ಸರಳವಾಗಿ “ವರಿಸಿದೆ. ಬಹುಶಃ ಅದು ಉಲ್ಲೇಖಿಸಿರುವ ಆಜ್ಞಾ ಚಕ್ರ ಪಿನಿಯಲ್ ಗ್ರಂಥಿಯೇ ಇರಬೇಕೆನ್ನಿಸುತ್ತದೆ.
ವಾಸ್ತವವಾಗಿ ಕುಂಡಲಿನಿ ಬೆನ್ನು ಮೂಳೆಯ ಕೆಳಭಾಗದಲ್ಲಿ ಸುಪ್ತವಾಗಿರುವುದಂತೆ. ಕುಂಡಲ ಅಂದರೆನೇ ಸುರುಳಿಯಾಕಾರದ್ದು ಅಂತ. ಈ ಶಕ್ತಿ ಹಾವಿನ ರೂಪದಲ್ಲಿ ಸುರುಳಿ ಸಿಂಬೆಯಾಗಿರುತ್ತದೆ. ಯೋಗದ ಮೂಲಕ ಈ ಹಾವನ್ನು ಜಾಗೃತಗೊಳಿಸಿ ಒಂದೊಂದೇ ಚಕ್ರದ ಮೂಲಕ ಹಾದುಹೋಗುವಂತೆ ಮಾಡಿದರೆ ಕೊನೆಗೆ ಮೆದುಳಿಗೆ ಬಂದು ಸೇರಿಕೊಳ್ಳುತ್ತದೆ. ಆಗ ಪರಮಾನುಭೂತಿ. ಅದಕ್ಕೇ ನಮ್ಮಲ್ಲಿ ಜಾಗೃತ ಕುಂಡಲಿನಿಯ ಪ್ರತೀಕವಾದ ನಾಗರ ಕಟ್ಟೆಗಳನ್ನು ಆರಾಧಿಸುವುದು.
ಈ ಇಡಿಯ ಪ್ರಕ್ರಿಯೆಯನ್ನು ಮತ್ತೊಂದು ಬಗೆಯಲ್ಲಿಯೂ ರಸವತ್ತಾಗಿ ಬಣ್ಣಿಸುತ್ತಾರೆ. ಮೂಲಾಧಾರದಲ್ಲಿರುವ ಕುಂಡಲಿನಿ ಎಲ್ಲ ಶಕ್ತಿಯ ಕೇಂದ್ರ. ಈ ಶಕ್ತಿಯೇ ದುರ್ಗೆ! ಬಹುಪಾಲು ಸಮಯ ಆಕೆ ಶಾಂತಳಾಗಿಯೇ ಇರುತ್ತಾಳೆ. ಪ್ರಯತ್ನಪೂರ್ವಕವಾಗಿ ಆಕೆಯನ್ನು ಜಾಗೃತಗೊಳಿಸಿದರೆ ಆಕೆ ಆರು ಚಕ್ರಗಳ ಮೂಲಕ ಹಾದು ಸಹಸ್ರಾರದಲ್ಲಿ ಕುಳಿತಿರುವ ಶಿವನೊಡನೆ ಒಂದಾಗುತ್ತಾಳೆ. ಯೋಗಿಯೊಬ್ಬ ಅನುಭವಿಸುವ ಪರಮಾನಂದವನ್ನು ಶಿವ-ಶಿವೆಯರ ಮಿಲನಕ್ಕೆ ಹೋಲಿಸಿದ್ದಾರೆ ನಮ್ಮವರು.
ಕುಂಡಲಿನಿಯ ಶಕ್ತಿಗೂ ಬೆನ್ನಹುರಿಗೂ ನಿಕಟವಾದ ಸಂಪರ್ಕವಿದೆ. ಹೀಗಾಗಿಯೇ ಯೊಗಾಸನಗಳಲ್ಲೂ ಬೆನ್ನಹುರಿ ನೇರವಾಗಿಟ್ಟುಕೊಳ್ಳುವ ಅಭ್ಯಾಸಕ್ಕೇ ಮೊದಲ ಪ್ರಾಶಸ್ತ್ಯ. ನೀರು ಹರಿಯುವ ಪೈಪು ಬಾಗಿ ಬೆಂಡಾಗಿದ್ದರೆ ನೀರು ಸರಾಗವಾಗಿ ಹರಿಯಲು ಹೇಗೆ ಅಡಚಣೆಯಾಗುವುದೋ ಹಾಗೆಯೇ ಬೆನ್ನಹುರಿ ನೇರವಾಗಿಲ್ಲದಿದ್ದರೆ ಕುಂಡಲಿನಿಯೂ ಸರಾಗವಾಗಿ ಮೇಲೇರಲಾರದು. ಈ ಬೆನ್ನಹುರಿಗೆ ಹೊಂದಿಕೊಂಡಂತೆ ಇರುವುದೇ ಇಡಾ ಮತ್ತು ಪಿಂಗಳವೆಂಬ ನಾಡಿಗಳು. ಇವೆರಡೂ ನಾಡಿಗಳ ನಡುವಿನ ಖಾಲಿ ಸ್ಥಳವೇ ಸುಷುಮ್ನಾ. ಈ ಸುಷುಮ್ನಾದ ಮೂಲಕವೇ ಏರೋದು ಕುಂಡಲಿನಿ.
ಇವಿಷ್ಟೂ ತುಂಬಾ ಟೆಕ್ನಿಕಲ್ ಆಯ್ತು. ಮೂಲಭೂತ ಪ್ರಶ್ನೆ ಮಾತ್ರ ಹಾಗೆಯೇ ಉಳಿತು. ಕುಂಡಲಿನಿಯಲ್ಲಿ ಶಕ್ತಿ ಇರೋದು ನಿಜವಾ? ವಿಜ್ಞಾನ ಅಧಿಕೃತವಾಗಿ ಈ ಕುರಿತಂತೆ ಏನೂ ಹೇಳಿಲ್ಲವಾದರೂ ಧಿಕ್ಕರಿಸುವ ಧೈರ್ಯವನ್ನೂ ತೋರುತ್ತಿಲ್ಲ. ಆದರೆ ಅನುಭವಕ್ಕೆ ಬರುವ ಕೆಲವು ಸಂಗತಿಗಳ ಆಧಾರದ ಮೇಲೆ ಕುಂಡಲಿನಿ ಶಕ್ತಿಯ ಇರುವನ್ನು ಅಂದಾಜಿಸಬಹುದು.
ಹಾಗೇ ಯೋಚಿಸಿ. ಮನಸ್ಸಿನಲ್ಲಿ ಬಗೆಬಗೆಯ ಆಸೆಗಳು ಭುಗಿಲೇಳುತ್ತಲೇ ಇರುತ್ತವೆ. ತಿನ್ನುವ, ಕುಡಿಯುವ, ನೋಡುವ, ಸ್ಪರ್ಶಿಸುವ, ಭೋಗಿಸುವ ಬಗೆ-ಬಗೆಯ ಬಯಕೆಗಳು. ಆದರೆ ನೀವೊಂದು ಮುಖ್ಯವಾದ ಪರೀಕ್ಷೆ ಬರೆಯಬೇಕಾದ ದಿನ ಬಂದಿದೆಯೆಂದುಕೊಳ್ಳಿ, ಅವತ್ತು ಹಸಿವಿದ್ದರೂ ತಿನ್ನಬೇಕೆನಿಸುತ್ತಿಲ್ಲ; ಭೋಗದ ಬಯಕೆಗಳು ಹತ್ತಿರಕ್ಕೂ ಸುಳಿಯುತ್ತಿಲ್ಲ. ಹೀಗೇಕೆ? ಒಳ್ಳೆಯ ಭಜನೆಯೊಂದನ್ನು ಕೇಳಿದ ಮೇಲೆ ಸ್ವಲ್ಪ ಹೊತ್ತು ಕಣ್ಣುಮುಚ್ಚಿ ಕೂರಬೇಕೆನಿಸುತ್ತಲ್ಲ!! ಆಗೆಲ್ಲಾ ನಾವೂ ಉದ್ಗರಿಸುತ್ತೇವೆ, ‘ಮನಸ್ಸು ಅದೆಷ್ಟು ಎತ್ತರಕ್ಕೇರಿತ್ತಲ್ಲ’ ಅಂತ. ನಿಜ ಹೇಳಿ. ಮನಸ್ಸು ಕೆಳಕ್ಕಿಳಿಯುವುದು, ಎತ್ತರಕ್ಕೇರುವುದು ಅಂತೆಲ್ಲ ಮಾತಾಡುವ ನಮಗೆ ನಿಜವಾಗಿಯೂ ಮನಸ್ಸು ಎಲ್ಲಿದೆ ಎಂಬುದು ಗೊತ್ತೇನು? ವಾಸ್ತವವಾಗಿ ಕುಂಡಲಿನಿ ಮೂಲಾಧಾರದಲ್ಲಿದ್ದಾಗ ಮನಸ್ಸು ಭೋಗದ ಚಿಂತನೆಯಲ್ಲಿ ಲೀನವಾಗಿರುತ್ತದೆ. ಅಲ್ಲಿಂದ ಅದು ಒಂದೊಂದು ಹಂತ ಮೇಲೇರಿದಂತೆಲ್ಲ ಮನೋಭಾವನೆಗಳು ಬದಲಾಗುತ್ತ ಸಾಗುತ್ತದೆ.
ಋಗಳು ಕುಂಡಲಿನಿ ಸಾಗುವ ಹಾದಿಯನ್ನು ಗಮನಿಸಿ ಮಾರ್ಗದುದ್ದಕ್ಕೂ ಚಕ್ರಗಳನ್ನು ಗುರುತಿಸಿದ್ದಾರೆ. ಅತ್ಯಂತ ಕೆಳಮಟ್ಟದ್ದು ಮೂಲಾಧಾರ. ಇಲ್ಲಿಯೇ ಕುಂಡಲಿನಿ ಸದಾ ಸುರುಳಿಯಾಗಿರೋದು. ಇಲ್ಲಿಂದ ಮೇಲೆ ಮಣಿಪೂರ, ಆಮೇಲೆ ಸ್ವಾಧಿಷ್ಠಾನ. ಮತ್ತೂ ಸ್ವಲ್ಪ ಮೇಲೇರಿದರೆ ಅನಾಹತ. ಆನಂತರ “ಶುದ್ಧ, ಭ್ರೂ ಮಧ್ಯೆ ಆಜ್ಞಾ. ಈ ಆರು ಚಕ್ರಗಳನ್ನು ದಾಟಿದರೆ ಸೇರೋದು ಮೆದುಳಿನಲ್ಲಿನ ಸಹಸ್ರಾರ. ಪ್ರತಿಯೊಂದು ಚಕ್ರವೂ ಒಂದೊಂದು ಕಮಲದಂತೆ ಚಿತ್ರಿಸಲ್ಪಟ್ಟಿದೆ. ಅದಕ್ಕಿರುವ ದಳಗಳ ಸಂಖ್ಯೆಯೂ ಬೇರೆ-ಬೇರೆ. ಸಹಸ್ರಾರ ಕೆಳಮುಖವಾಗಿ ಇನ್ನೂ ಅರಳದಿರುವ ಸಾ”ರ ದಳಗಳ ಕಮಲವಂತೆ. ಕುಂಡಲಿನಿ ಒಂದೊಂದೇ ಚಕ್ರವನ್ನು ಹಾದು ಹೋಗುತ್ತಿದ್ದಂತೆ ಆಯಾ ಕಮಲಗಳು ಅರಳುತ್ತವೆ. ಆಗೆಲ್ಲ ಬಗೆಬಗೆಯ ಶಕ್ತಿಗಳು ಸಿದ್ಧಿಯಾಗುತ್ತವೆ. ಕೆಲವರಿಗೆ ನೀರಿನ ಮೇಲೆ ನಡೆಯುವ, ಗಾಳಿಯಲ್ಲಿ ತೇಲುವ ಶಕ್ತಿ ದೊರೆತರೆ ಇನ್ನೂ ಕೆಲವರಿಗೆ ಇತರರ ಮನಸ್ಸನ್ನೇ ಓದಿಬಿಡುವ ಶಕ್ತಿ ಬಂದೀತು. ಈ ಕುಂಡಲಿನಿ ಸಹಸ್ರಾರವನ್ನು ಮುಟ್ಟಿದೊಡನೆ ಕೆಳಮುಖವಾಗಿರುವ ಆ ಕಮಲ ಊರ್ಧ್ವಮುಖಿಯಾಗಿ ಅರಳಿ ನಿಲ್ಲುವುದಂತೆ. ಆಗಲೇ ಯೋಗಿಯೊಬ್ಬ ಪರಿಪೂರ್ಣ ಆನಂದವನ್ನು ತನ್ನದಾಗಿಸಿಕೊಳ್ಳುವುದು. ಆಗಲೇ ಆತನಿಗೆ ಬಾಹ್ಯ ಪ್ರಜ್ಞೆ ಕಳೆದುಹೋಗಿ ಪೂರ್ಣ ಸಮಾಧಿಯ ಅನುಭೂತಿಯಾಗೋದು.
ಇಂತಹ ಸ್ಥಿತಿಗೇರಲು ಎರಡು ಮಾರ್ಗಗಳಿವೆ. ಮೊದಲನೆಯದು ಅರಿ”ಗೇ ಬರದಂತೆ ಅಚಾನಕ್ಕಾಗಿ ಜ್ಞಾನದ ಹೊಸ್ತಿಲನ್ನು ಎಡವಿ ಬಿದ್ದು ಸಮಾಧಿಗೇರಿಬಿಡುವುದು, ಮತ್ತೊಂದು ನಿರಂತರ ಅಭ್ಯಾಸದಿಂದ ಹಂತ-ಹಂತವಾಗಿ ಮೇಲೇರಿ, ಬೇಕೆಂದಾಗ ಈ ಅನುಭವದ ಸವಿ ಸವಿಯುವುದು. ನಮ್ಮ ಋಷಿಗಳು ಎರಡನೇ ಸಾಲಿಗೆ ಸೇರಿದವರು. ಅಷ್ಟೇಅಲ್ಲ, ಇತರರು ಇದನ್ನು ಸಾಧಿಸಿಕೊಳ್ಳಲು ಬೇಕಾದ ಕ್ರಮವನ್ನೂ ನಿರೂಪಿಸಿಕೊಟ್ಟರು. ಅಚಾನಕ್ಕಾಗಿ ಕುಂಡಲಿನಿ ಮೇಲೇರಿದ ಕೆಲವರಿಗೆ ಪೊದೆಯಲ್ಲಿ, ಗುಹೆಯಲ್ಲಿ ದೇವತೆಗಳು ಕಂಡರು; ದೇವದೂತರು ಅನ್ನ-ನೀರು ಕೊಟ್ಟರು. ಅನಕ್ಷರಸ್ಥ ಓದುವಂತೆ ಮಾಡಿದರು. ಈ ಬಗೆಯ ಅನುಭವಗಳ್ಯಾವುವೂ ಸುಳ್ಳಾಗಿರಲಿಕ್ಕಿಲ್ಲ. ಆದರೆ ಕುಂಡಲಿನಿ ಅಚಾನಕ್ಕು ಸಹಸ್ರಾರ ಮುಟ್ಟಿದ ಆನಂದವನ್ನು ಜೀರ್ಣಿಸಿಕೊಳ್ಳಲಾಗಲಿಲ್ಲ ಅಷ್ಟೇ. ಇಂಥವರು ಹುಟ್ಟುಹಾಕಿದ ಮತ ಪಂಥಗಳು ಕೆಲವಷ್ಟು ಒಳ್ಳೆಯ ಅಂಶಗಳನ್ನು ಹೊಂದಿದ್ದರೂ ಅವು ಸಮಾಜಕ್ಕೆ ಉಂಟುಮಾಡಿದ ಅನಾಹುತವೇ ಹೆಚ್ಚು. ಹಾಗೆಂದು ಸ್ವಾಮಿ ವಿವೇಕಾನಂದರ ಅಭಿಮತ.
ಭಾರತ ಈ ಕುಂಡಲಿನಿಯ ಜಾಗೃತಿಗೆ ರೂಪಿಸಿದ ವೈಜ್ಞಾನಿಕಕ್ರಮವನ್ನು ಯೋಗ ಎಂದು ಕರೆತು. ಶಕ್ತಿ ಉತ್ಪಾದನೆಯ ತೀವ್ರ ಪ್ರಯತ್ನಕ್ಕೆ ಧ್ಯಾನ ಎಂಬ ಹೆಸರು ಕೊಟ್ಟಿತು. ಹಾಗಂತ ಯೋಗ ಸಲೀಸಾದುದಲ್ಲ. ಮನಸ್ಸು ಕೇಳಮುಖವಾಗಿದೆಯೆಂದರೆ ಕುಂಡಲಿನಿ ಕೆಳ ಚಕ್ರದಲ್ಲಿದೆ ಅಂತರ್ಥ ತಾನೇ? ಅದಕ್ಕೆ ಮೊದಲು ಮನಸ್ಸನ್ನು ಅಭ್ಯಾಸಪೂರ್ವಕವಾಗಿ ಮೇಲೆತ್ತಬೇಕು. ಅಂದರೆ ಭೋಗದ ವಾಸನೆ ಬಿಡಬೇಕು. ಈ ಬಗೆಯ ವಿರಾಗಿಯಲ್ಲಿ ಕುಂಡಲಿನಿ ಸುಮ್ಮನಿರುವುದಕ್ಕೆ ಸಾಧ್ಯವೇ ಇಲ್ಲ ಮತ್ತು ಜಾಗೃತಗೊಂಡ ಕುಂಡಲಿನಿಗೆ ಸುಷುಮ್ನಾದ ಮೂಲಕ ಮೇಲೇರದೇ ಬೇರೆ ವಿಧಿಲ್ಲ. ಆಗ ಅವನದ್ದು ಧ್ಯಾನಕ್ಕೆ ಮೊದಲ ಹೆಜ್ಜೆ. ಇವಿಷ್ಟೂ ಆಗುವ ವೇಳೆಗೆ ಮನಸ್ಸು ಸಾಕಷ್ಟು ಮೆತ್ತಗಾಗಿರುತ್ತದೆ. ತನ್ನ ಹಾರಾಟವನ್ನು ಕಡಿಮೆ ಮಾಡಿ ಹೇಳಿದಂತೆ ಕೇಳಿಕೊಂಡು ಬಿದ್ದಿರುತ್ತದೆ. ಈಗ ಇದನ್ನು ಬೇಕಾದೆಡೆ ಕೇಂದ್ರೀಕರಿಸುವ ಪ್ರಯತ್ನ ಮಾಡಬೇಕು. ಇದನ್ನು ದೀರ್ಘಕಾಲ ಅಭ್ಯಾಸ ಮಾಡಿದರೆ ಇದು ಧ್ಯಾನವಾಗಿಬಿಡುತ್ತದೆ.
ಹೀಗೆ ಧ್ಯಾನದಿಂದ ಶೇಖರಿಸಲ್ಪಟ್ಟ ಅಷ್ಟೂ ಶಕ್ತಿಯು ಸುಷುಮ್ನಾ ನಾಳದ ಮೂಲಕ ಹರಿಯಲು ಶುರುವಾತೆಂದರೆ ಅಪರೂಪದ ಅನುಭವಗಳಾಗುತ್ತವೆ. ಇವು ನಮ್ಮ ಕಲ್ಪನೆಯನ್ನು, ಕನಸನ್ನೂ ಮೀರಿಸಬಹುದಾದ ವೈಭವದ ಅನುಭವಗಳು. ಒಂದೊಂದು ಚಕ್ರದ ಕಮಲವೂ ಕುಂಡಲಿನಿ ಶಕ್ತಿ ಪ್ರವಾಹದಿಂದ ಅರಳುತ್ತ ಹೋದಂತೆ ಸೃಷ್ಟಿಯ ರಹಸ್ಯ ತೆರೆದುಕೊಳ್ಳುತ್ತ ಹೋಗುವುದು. ಅಪಾರವಾದ ಶಕ್ತಿ ಹರಿಯಲಾರಂಭಿಸುವುದು. ಹೀಗೆ ಕ್ರಮಬದ್ಧ ಸಾಧನೆಂದ ಶಕ್ತಿ ಸಂಚಯ ಮಾಡಿಕೊಂಡವರು ಋಗಳೆನಿಸಿದರು. ಅವರೇ ವೇದಗಳನ್ನು ಬೆಳಕಿಗೆ ತಂದರು. ಭೂಗೋಳ, ಖಗೋಳ, ಅಣು ವಿಜ್ಞಾನ, ಆಯುರ್ವೇದವೇ ಮೊದಲಾದವುಗಳ ಅಂತರಂಗವನ್ನು ಅರಿತು ನಮ್ಮೆದುರಿಗಿಟ್ಟರು. ಇಷ್ಟು ಶ್ರೇಷ್ಠ “ಚಾರಗಳನ್ನು ಸಮಾಜಕ್ಕೆ ನೀಡುವಾಗ ಇದಕ್ಕೊಂದು ಪೇಟೆಂಟ್ ಪಡೆಯಬೇಕೆಂದು ಅವರಿಗೆಂದೂ ಅನಿಸಲಿಲ್ಲ. ತಮ್ಮ ವಿಚಾರಗಳನ್ನು ಉಳಿಸುವುದಕ್ಕೋಸ್ಕರ “ರೋಧಿಗಳ ದಮನ ಮಾಡಲು ಅವರು ಕತ್ತಿ ಹಿಡಿಯಲಿಲ್ಲ. ಏಕೆಂದರೆ ಅವರು ಯೋಗಿಗಳಾಗಿದ್ದರು, ಭೋಗಿಗಳಲ್ಲ!
ಅಂದಹಾಗೆ ಒಂದು ಮಾತು. ವ್ಯಕ್ತಿಯೊಬ್ಬ ಕುಂಡಲಿನಿ ಜಾಗೃತಗೊಳಿಸಿಕೊಂಡು ವಿಶೇಷ ಜ್ಞಾನ ಪಡೆದು ಋಷಿಯಾಗುತ್ತಾನೆ, ಗುರುವಾಗುತ್ತಾನೆ. ಹಾಗೆಯೇ ರಾಷ್ಟ್ರಕ್ಕೂ ಕುಂಡಲಿನಿ ಇದೆಯಾ? ಏಕಿಲ್ಲ. ರಾಷ್ಟ್ರಕ್ಕೆ ಆತ್ಮಇರಬಹುದಾದರೆ ಕುಂಡಲಿನಿಯೂ ಇರಲೇಬೇಕು. ಒಮ್ಮೆ ಭಾರತದ ಭೂಪಟವನ್ನು ಕಣ್ಣೆದುರಿಗಿಟ್ಟುಕೊಂಡು ನೋಡಿ. ಮೂಲಾಧಾರವಾದ ಕನ್ಯಾಕುಮಾರಿಯಲ್ಲಿ ಸುಪ್ತಳಾಗಿರುವ ದುರ್ಗೆಯು ಮೈಕೊಡವಿ ಎದ್ದು ನಿಂತು ಸಹಸ್ರಾರವಾದ ಹಿಮಾಲಯದಲ್ಲಿ ನೆಲೆ ನಿಂತಿರುವ ಶಿವನನ್ನು ಸೇರಿಕೊಂಡುಬಿಟ್ಟರೆ ರಾಷ್ಟ್ರದ ಕುಂಡಲಿನಿ ಷಟ್ಚಕ್ರಗಳನ್ನು ಭೇದಿಸಿದಂತೆಯೇ. ವಿಶ್ವಗುರುವಾಗುವ ಕೊನೆಯ ಹಂತ ಅದೇ!

Comments are closed.