ವಿಭಾಗಗಳು

ಸುದ್ದಿಪತ್ರ


 

ಹೊನ್ನಾವರ ಶಾಂತವಾಗಲು ಇನ್ನೆಷ್ಟು ಪರೇಶ್ ಮೇಸ್ತರು ಹೆಣವಾಗಬೇಕು?

ನಿಧಾನವಾಗಿ ಕೇರಳದ ಮುಸ್ಲೀಮರು ನಮ್ಮೂರಿಗೆ ಕಾಲಿಟ್ಟರು. ಅವರು ಬರುವಾಗಲೇ ತಮ್ಮೊಂದಿಗೆ ಇಸ್ಲಾಂನ ಕಟ್ಟರತೆಯನ್ನು ಹೊತ್ತುಕೊಂಡೇ ಬಂದಿದ್ದರು. ಶರಾವತಿಗೆ ಅಂಗಾತ ಮೈ ತೆರೆದುಕೊಂಡ ಬ್ರಿಡ್ಜಿನ ಆ ಬದಿಯ ಕಾಸರಕೋಡಿನಲ್ಲಿ ಅವರು ನೆಲೆಸಿದ್ದರೆಂದು ನಾನೂ ಕೇಳಿದ್ದೆ. ಅವರು ನಮ್ಮೂರಿನ ನಮ್ಮೊಂದಿಗೇ ಬೆಳೆದ ಮುಸಲ್ಮಾನರಂತಲ್ಲ. ಅವರ ಮಾತು, ಬಟ್ಟೆ, ವ್ಯವಹಾರ ಎಲ್ಲವೂ ಭಯಾನಕವೇ!

ನಮ್ಮ ಹೊಟೆಲ್ಲಿನಲ್ಲಿ ಬನ್ಸ್ ಭಾಳ ಫೇಮಸ್ಸು. ಅದಕ್ಕೆ ಕಳಿತ ಬಾಳೇ ಹಣ್ಣು ಹಾಕಲೇಬೇಕು. ರಜಕ್ಕೆ ಊರಿಗೆ ಹೋದಾಗ ಬಾಳೇಹಣ್ಣು ತರುವ ಕೆಲಸ ನ್ನದ್ದು. ಆಗಿನ್ನು ನಾನು ಐದನೇ ಕ್ಲಾಸು ದಾಟಿರಲಿಲ್ಲ. ನಮ್ಮ ತಾತ ಫಾಯಸ್ ಮಾಮನ ಅಂಗಡಿಯಿಂದ ಹಣ್ಣು ತರುವಂತೆ ಹೇಳಿ ನನ್ನ ಕಳಿಸುತ್ತಿದ್ದರು. ನಾನೂ ಖುಶಿಯಿಂದಲೇ ಓಡುತ್ತಿದ್ದೆ. ಅವನಂಗಡಿಯಿಂದ ಪೊಟ್ಟಣದ ತುಂಬಾ ಹಣ್ಣುಗಳನ್ನು ತರುವುದು ಒಂದೆಡೆಯಾದರೆ ಲೆಕ್ಕದಾಚೆಗೆ ನಾಲ್ಕಾರು ಹಣ್ಣುಗಳನ್ನು ಅವನೇ ಬಿಡಿಸಿಕೊಟ್ಟಿದ್ದನ್ನು ತಿಂದು ಬರುತ್ತಿದ್ದೆ. ಅವನಿಗೂ ಮಾಮಾ ಎಂದು ಸಂಬೋಧಿಸುವ ನಮ್ಮನ್ನು ಕಂಡರೆ ವಿಶೇಷ ಪ್ರೀತಿ, ಅಕ್ಕರೆ. ಈಗ ಅವನಿಗೆ ವಯಸ್ಸಾಗಿದೆ, ನಾವು ಆಳೆತ್ತರ ಬೆಳೆದುಬಿಟ್ಟಿದ್ದೇವೆ. ಸಿಕ್ಕಾಗೆಲ್ಲ ರಸ್ತೆಯ ಮಧ್ಯೆಯೆ ನಿಂತು ಕೈ ಹಿಡಿದು ಮಾತನಾಡಿಸಿದರೇನೇ ಅವನಿಗೆ ಸಮಾಧಾನ.

ನಮ್ಮ ಹೋಟೆಲಿಗೆ ಹೊಂದಿಕೊಂಡ ಮನೆಗೇ ಆತುಕೊಂಡ ನಮ್ಮದೇ ಅಂಗಡಿಯೊಂದನ್ನು ಬಾಡಿಗೆಗೆ ಕೊಟ್ಟಿದ್ದೆವು. ಮುನ್ನಾ ಅಂತ ಅದರ ಮಾಲೀಕ. ಸೈಕಲ್ ಅಂಗಡಿ ಇಟ್ಟುಕೊಂಡಿದ್ದ. ಅವನನ್ನೂ ಮುನ್ನಾ ಮಾಮ್ ಅಂತಾನೇ ಕರೀತಿದ್ದುದು. ಗಂಟೆಗಟ್ಟಲೆ ಅವನಂಗಡಿಯಲ್ಲಿ ಕುಳಿತು ಸೈಕಲ್ ಶಾಪಿನ ಗುಜರಿಗಳಲ್ಲಿ ಕಣ್ಣುಗಳನ್ನೇ ಮೈಕ್ರೋಸ್ಕೋಪು ಮಾಡಿಕೊಂಡು ನಮಗೆ ಬೇಕಾದ ವಸ್ತುಗಳನ್ನು ಅರಸುತ್ತ ಕೂತಿರುತ್ತಿದ್ದೆ. ಟ್ಯೂಬ್ಗೆ ಏರ್ ತುಂಬಿಸುವ ಯಂತ್ರ ಹೊಸದಾಗಿ ಅವನಂಗಡಿಗೆ ಬಂದಾಗ ಅದರ ಕಾರ್ಯಶೈಲಿಯನ್ನು ಕಣ್ಣರಳಿಸಿಕೊಂಡು ಗಮನಿಸುತ್ತಿದ್ದೆ. ಈಗಲೂ ಆತ ಅದೇ ಆವರಣದಲ್ಲಿದ್ದಾನೆ. ಅವನ ಸೋದರ ಸಂಬಂಧಿ ಅವನಂಗಡಿಗೆ ಬಂದಿದ್ದಾನೆ.

ನಾ ಹೇಳಿದ ಇವರಿಬ್ಬರೂ ಮುಸಲ್ಮಾನರು ಅಂತ ನನಗೆ ಬಹಳ ಕಾಲದವರೆಗೆ ಗೊತ್ತೇ ಇರಲಿಲ್ಲ. ನಮ್ಮ ಮನೆಯ ಯಾವ ಧಾಮರ್ಿಕ ಕಾರ್ಯಕ್ರಮಗಳಿಗೂ ಇವರೆಲ್ಲರೂ ಊಟಕ್ಕೆ ಬರುತ್ತಿದ್ದರು. ಚೌತಿಯ ಸಂಭ್ರಮ ನಮ್ಮಷ್ಟೇ ಇವರಿಗೂ. ಕಾಲಕ್ರಮದಲ್ಲಿ ನಮ್ಮ ಹೊಟೆಲ್ಲಿನೆದುರಿಗಿದ್ದ ಮಸೀದಿ ವಿಸ್ತಾರವಾಯಿತು, ಅಲ್ಲಿಯೂ ಒಂದಷ್ಟು ಅಂಗಡಿಗಳೆದ್ದವು. ಮುಸಲ್ಮಾನರನ್ನೇ ಹುಡುಹುಡುಕಿ ಅಂಗಡಿ ಕೊಟ್ಟಿತು ಮಸೀದಿ. ಆದರೆ ಎಲ್ಲಿಯೂ ಸಂಬಂಧ ಕೆಡುವಂತಹ ವಾತಾವರಣವೇ ಇರಲಿಲ್ಲ. ನಮ್ಮಣ್ಣನ ಮಿತ್ರ ಅಝೀಮ್ ಗಂಟೆಗಟ್ಟಲೆ ನಮ್ಮ ಮನೆಯಲ್ಲಿರುತ್ತಿದ್ದ. ಅವನ ಆಕರ್ೆಸ್ಟ್ರಾ ತಂಡದಲ್ಲಿದ್ದ ಅರ್ಷದ್ ನನಗೆಂದಿಗೂ ಬೇರೆಯವರೆನಿಸಲೇ ಇಲ್ಲ. ಒಂಥರಾ ಹಿತವಾದ ವಾತಾವರಣ ಅದು.

ನಿಧಾನವಾಗಿ ಪರಿಸ್ಥಿತಿ ಬದಲಾಯಿತು. ಜಾಗತಿಕವಾದ ಇಸ್ಲಾಂನ ಬೆಳವಣಿಗೆ ಅದರ ಪ್ರಭಾವವನ್ನು ಹೊನ್ನಾವರಕ್ಕೂ ಹೊತ್ತು ತಂತು. ಫಾಯೆಸ್ನ, ಮುನ್ನಾನ ಇಂದಿನ ಪೀಳಿಗೆ ಅವರಷ್ಟು ಜೊತೆಗೂಡಿ ಬಾಳ್ವೆ ನಡೆಸುವ ಮನಸ್ಥಿತಿಯಲ್ಲಿರಲಿಲ್ಲ. ಅಷ್ಟಾದರೂ ಅದು ಬದುಕಲಸಾಧ್ಯವಾದ ವಾತಾವರಣವಂತೂ ಆಗಿರಲಿಲ್ಲ. ಭಟ್ಕಳಕ್ಕೆ ಹತ್ತಿರವಿದ್ದುದರಿಂದ ಅಲ್ಲಿನ ನವಾಯತಿಗಳ ಪ್ರಭಾವ ಮತ್ತು ಅದನ್ನೆದುರಿಸಲು ಪೂರ್ಣಶಕ್ತಿಯೊಂದಿಗೆ ಸಟೆದು ನಿಂತ ಹಿಂದೂ ಸಂಘಟನೆಗಳ ಪ್ರಭಾವ ಹೊನ್ನಾವರದ ಮೇಲೆ ಆಗಲೇ ಬೇಕಿತ್ತು. ಆದರೂ ಅದು ಅಂದುಕೊಂಡಷ್ಟು ವೇಗವಾಗಿಯೇನೂ ಆಗಲಿಲ್ಲ. ಹೊನ್ನಾವರದ ಸರ್ಕಲ್ಲುಗಳಲ್ಲಿ ಆಗಾಗ ಕದನಗಳು ಮತ್ತು ಬಸ್ಸ್ಟ್ಯಾಂಡಿನ ಬಳಿಯ ಗುಡ್ಲಕ್ ಹೋಟೆಲ್ಲಿನೆದುರಿಗೆ ನಡೆಯುವ ಗಲಾಟೆಗಳಿಗೆ ಸೀಮಿತವಾಗಿತ್ತು ಅಲ್ಲಿನ ಹಿಂದೂ-ಮುಸ್ಲೀಂ ಕದನ. ಒಂದೆರಡು ಬಾರಿ ಈ ಕದನ ತೀವ್ರಗೊಂಡು ಇಡಿಯ ಹೊನ್ನಾವರ ಉರಿದದ್ದು ಬಿಟ್ಟರೆ ಉಳಿದಂತೆ ಆ ಊರು ಯಾವಾಗಲೂ ಶಾಂತವೇ.

ನಿಧಾನವಾಗಿ ಕೇರಳದ ಮುಸ್ಲೀಮರು ನಮ್ಮೂರಿಗೆ ಕಾಲಿಟ್ಟರು. ಅವರು ಬರುವಾಗಲೇ ತಮ್ಮೊಂದಿಗೆ ಇಸ್ಲಾಂನ ಕಟ್ಟರತೆಯನ್ನು ಹೊತ್ತುಕೊಂಡೇ ಬಂದಿದ್ದರು. ಶರಾವತಿಗೆ ಅಂಗಾತ ಮೈ ತೆರೆದುಕೊಂಡ ಬ್ರಿಡ್ಜಿನ ಆ ಬದಿಯ ಕಾಸರಕೋಡಿನಲ್ಲಿ ಅವರು ನೆಲೆಸಿದ್ದರೆಂದು ನಾನೂ ಕೇಳಿದ್ದೆ. ಅವರು ನಮ್ಮೂರಿನ ನಮ್ಮೊಂದಿಗೇ ಬೆಳೆದ ಮುಸಲ್ಮಾನರಂತಲ್ಲ. ಅವರ ಮಾತು, ಬಟ್ಟೆ, ವ್ಯವಹಾರ ಎಲ್ಲವೂ ಭಯಾನಕವೇ! ಅವರುಡುವ ಲುಂಗಿಯ ಶೈಲಿಯಲ್ಲಿಯೇ ಅವರ ಮೂಲವನ್ನು ಗುರುತಿಸಬಹುದಿತ್ತು. ನಿಧಾನವಾಗಿ ಕಟ್ಟರತೆ ಮುಸಲ್ಮಾನರಲ್ಲಿ ಹರಡಲಾರಂಭಿಸಿತು. ಅದಕ್ಕೆ ಪ್ರತಿಯಾಗಿ ಹಿಂದೂ ತರುಣರು ಇಡಿಯ ಊರನ್ನು ಹೆಚ್ಚುಹೆಚ್ಚು ಕೇಸರಿಮಯವಾಗಿಸುವ ಪ್ರಯತ್ನಕ್ಕೆ ನಿಂತರು. ಈ ಓಟ ನಿಲ್ಲಲೇ ಇಲ್ಲ.

ಅಲ್ಲಿನ ಅನೇಕ ಮುಸಲ್ಮಾನರೂ ಓದಿದ ನ್ಯೂ ಇಂಗ್ಲಿಷ್ ಶಾಲೆಯಲ್ಲೊಂದು ಅವಘಡ ನಡೆದಾಗಲೇ ಮುಸಲ್ಮಾನರು ಈ ಹಂತಕ್ಕೆ ಹೋಗಿಬಿಟ್ಟಿದ್ದಾರೆಂಬ ಹೆದರಿಕೆ ಆವರಿಸಿಕೊಂಡಿದ್ದು. ಬಹಳ ಜನರಿಗೆ ಆ ಘಟನೆ ಮರೆತು ಹೋಗಿರಬಹುದು. ಶಾಲೆಯ ದೈಹಿಕ ಶಿಕ್ಷಕರು ಪ್ರಾರ್ಥನೆಗೆ ಬರದ ಮುಸ್ಲೀಂ ಹುಡುಗನೊಬ್ಬನನ್ನು ವಾಲಿಬಾಲ್ ಕೋಟರ್ಿನ ಸುತ್ತ ಮೂರುಸುತ್ತು ಹಾಕುವ ಶಿಕ್ಷೆಕೊಟ್ಟು ಕೋಣೆಯೊಳಗೆ ಹೋದರು. ನೆನಪಿಡಿ ವಾಲಿಬಾಲ್ ಕೋರ್ಟನ್ನು ಸುತ್ತುವ ಶಿಕ್ಷೆ ಅದು. ಒಬ್ಬ ವಿದ್ಯಾಥರ್ಿಗೆ ಕೊಡಬಹುದಾದ ಅತಿ ಕಡಿಮೆ ಶಿಕ್ಷೆ. ಎರಡನೆ ಸುತ್ತು ಹಾಕುವ ವೇಳೆಗೇ ಹುಡುಗ ಕುಸಿದು ಬಿದ್ದ. ಸುದ್ದಿ ತಿಳಿದ ಮೇಷ್ಟ್ರು ಧಾವಿಸಿ ಬಂದು ಆ ಹುಡುಗನನ್ನು ಆಸ್ಪತ್ರೆಗೆ ಒಯ್ದರು. ಆತ ಪ್ರಾಣ ಕಳಕೊಂಡಿದ್ದ. ಆಗಲೇ ಗೊತ್ತಾಗಿದ್ದು ಆ ಹುಡುಗನಿಗೆ ಹೃದಯದ ಕಾಯಿಲೆ ಇದ್ದುದರಿಂದ ಆತ ಆಗಾಗ ಸಮಸ್ಯೆ ಒಡ್ಡುತ್ತಿದ್ದ. ಹೀಗಾಗಿಯೇ ಒಂದು ಶಾಲೆ ಬಿಡಿಸಿ ಅವನನ್ನು ಇಲ್ಲಿಗೆ ತಂದು ಸೇರಿಸಿದ್ದರು. ಹಾಗೆ ಸೇರಿಸುವಾಗ ಇವನ ಹೃದಯದ ಸಮಸ್ಯೆಯನ್ನು ಹೇಳದೇ ಮುಚ್ಚಿಟ್ಟಿದ್ದರು. ಆದರೆ ಇವ್ಯಾವುವೂ ಆ ಹೊತ್ತಿನಲ್ಲಿ ಗಣನೆಗೇ ಬರಲಿಲ್ಲ. ಒಂದೆರಡು ಗಂಟೆಗಳಲ್ಲಿಯೇ ಸುಮಾರು ಸಾವಿರದಷ್ಟು ಜನ ಜಮಾಯಿಸಿದರು. ಶಾಲೆಯ ಆವರಣಕ್ಕೆ ನುಗ್ಗಿ ದೈಹಿಕ ಶಿಕ್ಷಕರನ್ನು ಹಿಡಿದೆಳೆದರು. ಅವರ ಜೇಬು ಹರಿದರು; ಅಟ್ಟಾಡಿಸಿಕೊಂಡು ಹೋದರು. ಅವರನ್ನು ಅಲಲಿಂದ ಪಾರು ಮಾಡುವ ವೇಳೆಗೆ ಉಳಿದವರೆಲ್ಲ ಸುಸ್ತೋ, ಸುಸ್ತು. ಕುಪಿತ ಕ್ರೂರಿಗಳ ಪಡೆ ಶಾಲೆಯ ಪೀಠೋಪಕರಣಗಳನ್ನೆಲ್ಲ ಧ್ವಂಸ ಮಾಡಿತು. ಮಕ್ಕಳಿಗೆ ಜ್ಞಾನದಾಸೋಹದ ಕೇಂದ್ರವಾಗಿದ್ದ ಶಾಲೆ ಸ್ಮಶಾನವಾಯ್ತು. ಪಾಪ ನಾಲ್ಕಾರು ದಶಕಗಳಿಂದ ಹಿಂದೂ-ಮುಸಲ್ಮಾನ ಭೇದವಿಲ್ಲದೇ ಸಮಾನ ಶಿಕ್ಷಣ ನೀಡಿದ್ದ ಶಾಲೆ ಇಂದು ರಕ್ಕಸರ ಕ್ರೌರ್ಯಕ್ಕೆ ಚಿಂದಿಚಿಂದಿಯಾಗಿತ್ತು. ನಲಂದಾ ಖಿಲ್ಜಿಯ ಕ್ರೌರ್ಯಕ್ಕೆ ಹೀಗೆ ನಾಶವಾಗಿರಲಿಕ್ಕೆ ಸಾಕು. ಆ ಪರಿಯ ಕ್ರೌರ್ಯ ನನ್ನೂರಿನ ಮುಸಲ್ಮಾನರಿಗಿರಲು ಸಾಧ್ಯವೇ ಇಲ್ಲವೆಂದು ನಾನು ಈಗಲೂ ವಾದಿಸುತ್ತೇನೆ. ಆದರೆ ಅಂದು ಅಷ್ಟೆಲ್ಲ ಗಲಾಟೆಯಾದಾಗ ಕೇರಳದಿಂದ ಬಂದು ಧಾಂಧಲೆಯೆಬ್ಬಿಸಿದ ತಮ್ಮವರನ್ನು ಖಂಡಿಸಲು ನನ್ನೂರಿನ ಮುಸಲ್ಮಾನರ್ಯಾರೂ ಸೇರಲೇ ಇಲ್ಲವಲ್ಲ; ಶಾಲೆಯ ಪೀಠೋಪಕರಣಗಳನ್ನು ನಾವು ಮತ್ತೆ ಸರಿ ಮಾಡೋಣವೆಂದು ಅವರೇ ಮುಂದೆ ನಿಲ್ಲಲಿಲ್ಲವಲ್ಲ. ಅಂದು ಸ್ಥಳೀಯ ಮುಸಲ್ಮಾನರ ಪ್ರತಿಕ್ರಿಯೆ ಹಾಗಿದ್ದಿದ್ದರೆ ಇಂದು ಈ ಹಂತಕ್ಕೆ ಹಂತಕರು ಬಂದು ನಿಲ್ಲುತ್ತಿರಲಿಲ್ಲ. ಪೊಲೀಸರು ಖದೀಮರನ್ನು ಬಂಧಿಸಿ ಒಳತಳ್ಳುವ ಸೂಕ್ತ ಪ್ರತಿಕ್ರಿಯೆ ನೀಡಲಿಲ್ಲ. ಅತ್ತ ಪತ್ರಿಕೆಗಳು ಬಲುವಾದ ಸಂಯಮ ಕಾಯ್ದುಕೊಂಡು ಈ ವಿಚಾರವನ್ನು ಜಗಜ್ಜಾಹೀರು ಮಾಡದಂತೆ ಕುಳಿತವು. ಮುಸಲ್ಮಾನರ ಪುಂಡಾಟಿಕೆಗೆ ಮೂಗುದಾರ ಹಾಕಲು ಅದೇಕೋ ಅವರಿಗೆಲ್ಲ ಅಂಜಿಕೆ.

ಬಹುಶಃ ಅದಾದ ಆರೇಳು ತಿಂಗಳ ನಂತರದ ಘಟನೆ. ನನ್ನ ತಮ್ಮನ ಮದುವೆಗೆ ಜೋರಾದ ತಯಾರಿ ನಡೆಯುತ್ತಿತ್ತು. ರಾತ್ರಿ ಹೋಟೆಲೊಂದರಲ್ಲಿ ಊಟ ಮಾಡುತ್ತಿರುವಾಗಲೇ ಅಲ್ಲಿನ ಆಟೋ ಸ್ಟ್ಯಾಂಡಿನಲ್ಲಿ ಹಿಂದೂ-ಮುಸ್ಲೀಂ ಜಗಳ ಶುರುವಾಗಿರುವ ಮಾಹಿತಿ ಒಬ್ಬ ಕೊಟ್ಟ. ಸಹಜವಾಗಿ ಬದುಕಿದ್ದ ಹೊನ್ನಾವರದಲ್ಲಿ ಮತೀಯ ಸಂಘರ್ಷಗಳೂ ಅಷ್ಟೇ ಸಹಜವೆನಿಸುವ ವಾತಾವರಣ ಈಗ ರೂಪುಗೊಂಡಿತ್ತು. ಲಗುಬಗನೆ ಊಟ ಮುಗಿಸಿ ಬದಿಯಲ್ಲೇ ಇದ್ದ ಆಟೋ ಸ್ಟ್ಯಾಂಡಿಗೆ ದೌಡಾಯಿಸಿದರೆ ಅಲ್ಲಿ ರಿಕ್ಷಾ ಚಾಲಕನೊಂದಿಗೆ ನಡೆದ ವಾಗ್ವಾದ ಮತೀಯ ಕದನವಾಗಿ ದಿಕ್ಕು ಬದಲಾಯಿಸಿಕೊಂಡಿತ್ತು. ಆಗಲೇ ನಾನು ಮೊದಲ ಬಾರಿಗೆ ಮಲಬಾರಿ ಮುಸಲ್ಮಾನರನ್ನು ಅಷ್ಟೊಂದು ಸಂಖ್ಯೆಯಲ್ಲಿ ನೋಡಿದ್ದು. ಧಾಂಡಿಗರಂತಿದ್ದ ಅಷ್ಟೂ ಜನರಲ್ಲಿ ನನ್ನ ಪರಿಚಯದವರು ಒಬ್ಬರೂ ಇರಲಿಲ್ಲ. ಮರುದಿನ ಹೊನ್ನಾವರ ಬಂದ್ ಆಯ್ತು. ಅಂದೇ ನನ್ನ ತಮ್ಮನ ಮದುವೆ. ಮತ್ತೆ ಆ ಮದುವೆಗೆ ಮುನ್ನಾ, ಫಯಾಜ್é್ ಎಲ್ಲರೂ ಬಂದಿದ್ದರು. ಆ ಪೀಳಿಗೆ ಆಗಲೂ ಸಹಜವಾಗಿಯೇ ಇತ್ತು.

2

ಈ ಒಟ್ಟಾರೆ ಬೆಳವಣಿಗೆಯಲ್ಲಿ ರಾಜಕೀಯದ ಚಿತಾವಣೆಯೇನೂ ಇಲ್ಲವೆನ್ನಲಾರೆ. ಚುನಾವಣೆಯ ಸಂದರ್ಭದಲ್ಲಿ ಹಿಂದೂ-ಮುಸ್ಲೀಂ ಗಲಾಟೆಯಾದರೆ ಉಗ್ರ ಭಾಷಣಕ್ಕೆ ಓಡಿ ಬರುವ ಕೆಲವು ನಾಯಕರು ಆನಂತರ ಹಿಂದೂ ಹುಡುಗರು ಗೋಕಳ್ಳರನ್ನು ಹಿಡಿದು ತಾವೇ ಜೈಲಿಗೆ ಹೋಗುವ ಸ್ಥಿತಿ ಬಂದಾಗ ಬಂದು ಮಾತನಾಡಿಸುವುದು ಬಿಡಿ, ಕಾರ್ಯಕರ್ತರ ಕರೆಗಳನ್ನು ಸ್ವೀಕರಿಸುವುದನ್ನೂ ಬಿಟ್ಟುಬಿಡುತ್ತಾರೆ. ಕಾಂಗ್ರೆಸ್ಸಿಗರದಾದರೋ ಪೂತರ್ಿ ಉಲ್ಟಾ. ಅವರು ಗಲಾಟೆಯ ಹೊತ್ತಲ್ಲಿ ಪೂತರ್ಿ ಶಾಂತ. ಆದರೆ ಆನಂತರ ಪೊಲೀಸರ ಮೇಲೆ ಪ್ರಭಾವ ಬೀರಿ ಅವರು ಬಂಧಿಸಿ ತಂದ ಪುಂಡರನ್ನು ಬಿಡಿಸುವುದರಲ್ಲಿ ಎತ್ತಿದ ‘ಕೈ’ ಅವರದ್ದು. ಇವರೀರ್ವರ ನಡುವೆ ನರಳಿದ್ದು ಮಾತ್ರ ಹೊನ್ನಾವರ.

ಮತ್ತೊಬ್ಬರನ್ನು ಸುಡುವ ಬೆಂಕಿ ನಮ್ಮನ್ನೇ ಮೊದಲು ಸುಡೋದು ಅಂತ ಅನೇಕರಿಗೆ ಗೊತ್ತೇ ಇಲ್ಲ. ಇಂದು ಕಟ್ಟರ್ ಪಂಥೀ ಇಸ್ಲಾಂ ಅಲ್ಲಿನ ಮನೆ ಮನೆಯ ತರುಣರನ್ನು ಆಕಷರ್ಿಸುತ್ತಿದೆ. ಅವರೆಲ್ಲ ಬಡಿಯುವ, ಕಡಿಯುವ, ಕೊಲ್ಲುವ ಮಾತುಗಳನ್ನಾಡುತ್ತಿದ್ದಾರೆ. ಇತ್ತಲಿನವರೇನೂ ಸುಮ್ಮನಿದ್ದಾರೆಂದಲ್ಲ. ಹಿಂದೂ ತರುಣರೂ ಉತ್ಸವಗಳನ್ನು ಜೋರಾಗಿ ಮಾಡುತ್ತಾರೆ; ಅವರ ಹಬ್ಬಕ್ಕೆ ಹಸಿರು ರಾರಾಜಿಸಿದರೆ ಇವರ ಹಬ್ಬಕ್ಕೆ ಕೇಸರೀ!

ಕೇರಳದ ಮುಸಲ್ಮಾನರು ಕಾಲಿಟ್ಟೆಡೆಯಲ್ಲ ಕೊಲೆ, ಸುಲಿಗೆಗಳೇ. ಮಡಿಕೇರಿಗೆ ಬಂದು ಕುಟ್ಟಪ್ಪನನ್ನು ಕೊಂದು ಓಡಿದುದರ ಹಿಂದೆ ಇದ್ದದ್ದು ಇವರೇ. ಶಿವಮೊಗ್ಗದಲ್ಲಿ ಸಮಾವೇಶ ಮುಗಿಸಿ ಮರಳಿ ಹೋಗುವಾಗ ಗಾಜನೂರಿನ ಬಳಿ ಹಿಂದುವೊಬ್ಬನಿಗೆ ಇರಿದು ಹೋದದ್ದು ಇವರೇ. ಬೆಂಗಳೂರಿನ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಲ್ಲಿ ಮಹತ್ವದ ಪಾತ್ರಕ್ಕೆ ಕೇರಳದ್ದೇ ಲಿಂಕು. ಹುಡುಕಿದರೆ ಹೊನ್ನಾವರದ ಈಗಿನ ಕೃತ್ಯದಲ್ಲೂ ಇವರೇ ಪಾಲುದಾರರಾಗಿರುವುದರಲ್ಲಿ ಯಾವ ಅನುಮಾನವೂ ಇಲ್ಲ. ಶನಿ ಮಂದಿರದೆದುರಿಗೆ ನಿಮರ್ಾಣಗೊಂಡ ಮುಸ್ಲೀಂ ಆಕೃತಿಯ ಕುರಿತಂತೆ ಶುರುವಾದ ಗಲಾಟೆ ಕೆಲವು ನಿಮಿಷಗಳಲ್ಲಿಯೇ ಹದಿನೇಳರ ಪೋರನ ಬರ್ಬರ ಹತ್ಯೆಯಲ್ಲಿ ಕೊನೆಯಾಗುತ್ತದೆಯೆಂದರೆ ನಂಬುವುದಾದರೂ ಹೇಗೆ? ಮೀಸೆ ಬಲಿಯದ ಪುಟ್ಟ ಪೋರನನ್ನು ಸೆಳೆದೊಯ್ದು ಅವನ ಮಮರ್ಾಂಗವನ್ನೂ ಪುಡಿಗಟ್ಟಿ ತಮ್ಮ ಜೀಹಾದೀ ವಾಂಛೆಯನ್ನು ತೀರಿಸಿಕೊಂಡಿದ್ದಾರೆಂದರೆ ಇದು ಬಲು ಅಪಾಯಕಾರಿ ಸಂದೇಶ. ಹೊರಗಿನಿಂದ ಬಂದ ಮತೋನ್ಮತ್ತರು ಇದನ್ನು ಮಾಡಿದ್ದಾರೆಂದರೆ ಮುಂದೊಮ್ಮೆ ಇದನ್ನು ತಡೆಯಬಹುದೇನೋ? ಆದರೆ ಮಲಬಾರೀ ಮುಸಲ್ಮಾನರ ಪ್ರೇರಣೆಯಿಂದ ಈ ಪೈಶಾಚಿಕ ಕೃತ್ಯವನ್ನು ಒಳಗಿನವರೇ ಮಾಡಿದ್ದಾರೆಂದರೆ ಇದಕ್ಕೊಂದು ಸರ್ಜರಿಯ ಅಗತ್ಯವೇ ಇದೆ. ಹಿಂದೂಗಳಿಗೆ ಎಚ್ಚರಿಕೆಯಂತೂ ಹೌದೇ ಹೌದು; ಮುಸಲ್ಮಾನರಿಗೂ ಕೂಡ. ಜಾಗತಿಕವಾಗಿ ಹುಟ್ಟಿದ ನಾಡಿನಲ್ಲಿಯೇ ನೆಲೆ ಕಳೆದುಕೊಂಡ ಐಸಿಸ್ ಈಗ ಪಾಕೀಸ್ತಾನದ, ನೇಪಾಳದ ಮೂಲಕ ಭಾರತದೊಳಕ್ಕೆ ನುಸುಳುತ್ತಿದೆ. ಸಮುದ್ರ ಮಾರ್ಗ ಹಿಡಿದರೆ ಅವರಿಗೆ ಕೇರಳ, ಮಂಗಳೂರು, ಭಟ್ಕಳಗಳು ರಾಜಮಾರ್ಗ. ಹಾಗೇನಾದರೂ ಒಳಕ್ಕೆ ಬಂದರೆ ನಾವುಗಳಂತೂ ಎದುರಿಸಿ ನಿಲ್ಲಲೇ ಬೇಕು; ಆದರೆ ಈ ಮಾರ್ಗದಲ್ಲಿ ತಮ್ಮ ಕಟ್ಟರ್ ಸಿದ್ಧಾಂತವನ್ನೊಪ್ಪದ ಮುಸಲ್ಮಾನರನ್ನೂ ಬಿಡದೇ ಕೊಲ್ಲುತ್ತಾರಲ್ಲ ಅವರು, ಆಗೇನು? ಅದಾಗಲೇ ವಹಾಬಿಗಳು ಮುಸಲ್ಮಾನರ ಬದುಕನ್ನು ದುರ್ಭರಗೊಳಿಸಿಯಾಗಿದೆ. ಐಸಿಸ್ ಅವರಪ್ಪನಂತೆ ಅಷ್ಟೇ.
ಇದು ಸಕಾಲ. ರಾಜಕಾರಣಿಗಳು ಬೆಂಕಿಯಲ್ಲಿ ಮೈಚಳಿ ಕಾಯಿಸಿಕೊಳ್ಳುತ್ತಾರೆ. ಪೊಲೀಸರು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ. ಇವೆಲ್ಲದರ ನಡುವೆ ಹೊನ್ನಾವರ ಬರಡಾಗಬಾರದಷ್ಟೇ. ಈಗಿನ ಸರದಿ ಮುಸಲ್ಮಾನರದ್ದೇ. ಶಾಲೆಯಲ್ಲಿ ಗಲಾಟೆಯಾದಾಗ ಮತ್ತೆ ಸಂಬಂಧ ಬೆಸೆಯುವ ಅವಕಾಶವನ್ನು ಕಳಕೊಂಡ ಅವರು ಈಗ ಭಸ್ಮಾಸುರ ಮಾರಿಯನ್ನು ಮನೆಯೆದುರಿಗೇ ನಿಲ್ಲಿಸಿಕೊಂಡಿದ್ದಾರೆ. ಈ ಕ್ರೌರ್ಯ ಪರ್ವ ಆರಂಭಿಸಿದವರನ್ನು ಬಡಿದು ಊರಿನಿಂದಾಚೆಗಟ್ಟಿ ಹಳೆಯ ಬದುಕನ್ನು ಮತ್ತೆ ರೂಢಿಸಿಕೊಳ್ಳುವ ಯತ್ನ ಮಾಡಲಿಲ್ಲವೆಂದರೆ ಭವಿಷ್ಯ ಬಲು ಕೆಟ್ಟದ್ದಿದೆ!

ಯಾಕೋ ಇಂದು ಫಾಯಸ್ ಮತ್ತು ಮುನ್ನಾ ಇಬ್ಬರೂ ಬಲುವಾಗಿ ನೆನಪಾಗುತ್ತಿದ್ದಾರೆ.

Comments are closed.