ವಿಭಾಗಗಳು

ಸುದ್ದಿಪತ್ರ


 

ಮುಂದೇನು ಮಾಡಬಹುದು?

ಶ್ವೇತಾಳ ಸಮಸ್ಯೆಗೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದ.
ಬೇಸರದ ಸಂಗತಿಯೆಂದರೆ, ಹಾಗೆ ಸಧ್ಯಕ್ಕೆ ಹಣ ನೀಡು, ಮುಂದೆ ಹೀಗಾಗದಂತೆ ತಡೆಯಲು ಖಂಡಿತವಾಗಿಯೂ ಪ್ರಯತ್ನ ಪಡುವೆವು ಎಂದು ಹೇಳಿದ ನಂತರ ಆಕೆ ಕರೆ ಮಾಡಲೇ ಇಲ್ಲ. ಬಹಳ ನಿರಾಸೆಯಾಗಿರಬೇಕು. ಪ್ರತಿರೋಧ, ಹೋರಾಟಗಳು ತತ್ ಕ್ಷಣದ ಪ್ರಕ್ರಿಯೆ ಆಗಿಬಿಟ್ಟರೆ ಅದರಲ್ಲಿ ಜೋಶ್ ಏನೋ ಇರುವುದು.. ಆದರೆ ಅದು ದೀರ್ಘಕಾಲಿಕ ಪರಿಣಾಮ ಉಳಿಸುವುದು ಕಷ್ಟವೇ.

ಈಗ ನಾನಂತೂ ಸುಮ್ಮನೆ ಕುಳಿತುಕೊಳ್ಳುವವನಲ್ಲ. ಆದರೆ ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಕೇವಲ ಒಬ್ಬ ಶಿಕ್ಷಕನ ವಿರುದ್ಧ ಹೋರಾಡಲೂ ನನಗೆ ಮನಸಿಲ್ಲ. ಹಾಗೆ ಮಾಡುವಂತೆ, ಭ್ರಷ್ಟಾಚಾರವನ್ನು ವಿರೋಧಿಸಿ ಪ್ರಾಮಾಣಿಕತೆ ಕಾಯ್ದುಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ. ಅದನ್ನು ಮಾಡಬಲ್ಲೆ ಎನ್ನುವುದು ನನ್ನ ವಿಶ್ವಾಸ.
ಇದರ ಜೊತೆಗೇ, ಲೋಕಾಯುಕ್ತಕ್ಕೆ ದೂರು ಸಲ್ಲಿಸಬೇಕಿದೆ. ಈ ಬಗೆಯ ಚಟುವಟಿಕೆಗಳನ್ನು ಅವರ ಗಮನಕ್ಕೆ ತಂದು ಕಾನೂನಾತ್ಮಕವಾದ ದಾರಿಯಲ್ಲಿ ನಡೆಯಬೇಕಿದೆ. ಈ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು. ಲೋಕಾಯುಕ್ತದ ಗಮನ ಸೆಳೆಯುವ ಕೆಲಸ ನಾನು ಮಾಡಬಲ್ಲೆನಾದರೂ ನನ್ನ ದೂರಿಗಿಂತ ವಿದ್ಯಾರ್ಥಿಗಳ ದೂರಿಗೆ ಮಾನ್ಯತೆ ಹೆಚ್ಚು. ಈ ದೆಸೆಯಲ್ಲಿ ಅವರೊಡನೆ ಸಂಪರ್ಕಕ್ಕೆ ಯತ್ನಿಸುತ್ತಿದ್ದೇನೆ.
ಈ ಬಗೆಯ ಸಂಗತಿಗಳು ಪಾಲಕರ ಗಮನಕ್ಕೂ ಬರಬೇಕು. ಇದಕ್ಕೆ ಮುದ್ರಣ ಮಾಧ್ಯಮ ಬಹಳ ಸಹಕಾರಿಯಾಗಬಲ್ಲದು. ಈ ಬಗೆಯ ಪರೀಕ್ಷಾ ಕೊಠಡಿಯ ಲಂಚ ಪ್ರಕರಣಗಳು ಸರ್ವೇಸಾಮಾನ್ಯವೆಂದು ಈಗ ಗೊತ್ತಾಗಿರುವುದರಿಂದ ಮಾಹಿತಿ ಸಂಗ್ರಹಕ್ಕೇನೂ ಕೊರತೆಯಾಗದೆನಿಸುತ್ತದೆ. ನಾನೂ ಒಂದಷ್ಟು ಸಂಗ್ರಹಿಸಿಕೊಡಬಲ್ಲೆ. ಪತ್ರಕರ್ತ ಮಿತ್ರರು ಈ ಕುರಿತು ಬರೆಯುವುದಾದರೆ ಸಂತೋಷ.

ಪ್ರತಿಕ್ರಿಯಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದ.
ಈ ಕುರಿತ ಹೆಚ್ಚಿನ ಸಲಹೆಗಳಿಗೆ ಸ್ವಾಗತವಿದೆ.
ನನ್ನ ಸಂಪರ್ಕ ಸಂಖ್ಯೆ: 9448423963- ಇದಕ್ಕೆ ಕರೆ ಮಾಡಬಹುದು.

ವಂದೇ,
ಚಕ್ರವರ್ತಿ ಸೂಲಿಬೆಲೆ.

Comments are closed.