ವಿಭಾಗಗಳು

ಸುದ್ದಿಪತ್ರ


 

ಅಕ್ರಮ ವಲಸಿಗರನ್ನು ಕಂಡರೆ ದೀದಿಗೇಕೆ ಇಷ್ಟೊಂದು ಪ್ರೇಮ?!

ಒಳನುಸುಳಿಬರುತ್ತಿರುವವರ ಪರವಾಗಿ ಮಾತನಾಡುತ್ತಿರುವವರಿಗೆ ನಾವೆಲ್ಲ ಕೇಳಬೇಕಾಗಿರೋದು ಒಂದೇ ಪ್ರಶ್ನೆ. ಮತ ಆಧಾರದ ಮೇಲೆ ಸ್ವಾತಂತ್ರ್ಯದ ಹೊತ್ತಲ್ಲಿ ದೇಶವನ್ನು ವಿಭಜಿಸಿ ಅಲ್ಲಿಗೆ ಹೋದವರಲ್ಲವೇ ಇವರು? ಆಸೆ ಪಟ್ಟು ಪಡೆದ ರಾಷ್ಟ್ರದಲ್ಲಿ ಇರಲಾಗುತ್ತಿಲ್ಲವೆಂದರೆ ತಪ್ಪು ಯಾರದ್ದು? ಒಂದೋ ದೇಶ ವಿಭಜಿಸಿದ ತಪ್ಪಿಗೆ ಅಲ್ಲಿಯೇ ಹೊಂದಿಕೊಂಡು ಇರಬೇಕು ಅಥವಾ ಯಾವ ಆಧಾರದ ಮೇಲೆ ವಿಭಜಿಸಿದರೋ ಅದರಿಂದಲಾದರೂ ಮುಕ್ತವಾಗಬೇಕು!

ಆ ನೆನಪುಗಳಿನ್ನು ಹಸಿಯಾಗಿವೆ. ಮಿಜೋರಾಮ್ಗೆ ಹೊಂದಿಕೊಂಡಂಥ ಬಾಂಗ್ಲಾದೇಶದ ಗಡಿಗೆ ನಾವೊಂದು ತಂಡವಾಗಿ ಹೋಗಿದ್ದೆವು. ಅಲ್ಲಿನ ಜನಜೀವನ, ಬಾಂಗ್ಲಾ ಮತ್ತು ಭಾರತದವರ ನಡುವಿನ ಬೇರ್ಪಡಿಸಲಾಗದ ಸಂಬಂಧ ಕಣ್ಣೆದುರು ಕಟ್ಟಿದಂತಿದೆ. ಹೊಟ್ಟೆಯ ಪಾಡು ಉಳಿದೆಲ್ಲಕ್ಕಿಂತಲೂ ದೊಡ್ಡದ್ದೆಂಬ ತಥ್ಯದರ್ಶನ. ಎಲ್ಲವೂ ಅಲ್ಲೇ ಆಗಿದ್ದು. ಬಾಂಗ್ಲಾ ಮತ್ತು ಭಾರತವನ್ನು ಒಂದು ನದಿ ಬೇರ್ಪಡಿಸುತ್ತದೆ. ಎರಡೂ ಕಡೆ ಕಾವಲು ನಿಂತ ಗಸ್ತು ಪಡೆಗಳು. ಇವುಗಳ ನಡುವೆಯೂ ಒಬ್ಬರಿಗೊಬ್ಬರು ಕಾಣದಂತೆ ನುಸುಳಿಕೊಂಡು ಗಡಿ ದಾಟಿ ಒಳಹೊಕ್ಕುವುದು ಅಪರೂಪದ ಸಂಗತಿಯೇನಲ್ಲ. ಎರಡೂ ಭಾಗದ ಜನರ ನಡುವೆ ಬಲವಾದ ವ್ಯಾಪಾರಿ ಸಂಬಂಧವಿದೆ. ಮದುವೆಯ ಸಂಬಂಧಗಳೂ ಇಲ್ಲವೆನ್ನುವಂತಿಲ್ಲ. ಭಾರತದ ಬಾವುಟ ಸಿಕ್ಕಿಸಿಕೊಂಡ ದೋಣಿ ಭಾರತದ್ದಾದರೆ ಬಾಂಗ್ಲಾ ಬಾವುಟ ಇಟ್ಟುಕೊಂಡದ್ದು ಅತ್ತಲಿನದ್ದು. ನಡುದಾರಿಯಲ್ಲಿ ಬಾವುಟಗಳನ್ನು ಅದಲು ಬದಲು ಮಾಡಿಕೊಳ್ಳುವುದೂ ಕೂಡ ಹೊಸತೇನಲ್ಲ. ಹಾಗೆ ನೋಡಿದರೆ ಗಡಿಯನ್ನು ಕಾಯ್ದುಕೊಳ್ಳಬೇಕಾಗಿದ್ದು ಭಾರತೀಯ ಸೈನ್ಯವೇ. ಏಕೆಂದರೆ ಇತ್ತಲಿನಿಂದ ಅತ್ತ ನುಸುಳಿ ಹೋಗಿ ಬದುಕು ನಡೆಸುವ ಧೈರ್ಯ ಯಾರೂ ಮಾಡಲಾರರು. ಏಕೆಂದರೆ ಬಾಂಗ್ಲಾದ ಜನರಿಗೆ ತಮಗೇ ಬದುಕಲು ಸಾಲುವಷ್ಟು ವ್ಯವಸ್ಥೆ ಇಲ್ಲ. ಇನ್ನು ಇಲ್ಲಿಂದ ಹೋದವರನ್ನು ಅದೇನು ಬದುಕಿಸಿಯಾರು?!

2

ಬಾಂಗ್ಲಾದೊಂದಿಗೆ 4156 ಕಿ.ಮೀ ಗಡಿಯನ್ನು ನಾವು ಹೊಂದಿದ್ದೇವೆ. ಇದರಲ್ಲಿ 262 ಕಿ.ಮೀನಷ್ಟು ಅಸ್ಸಾಂನೊಂದಿಗೆ, 856.ಕಿ.ಮೀ ನಷ್ಟು ತ್ರಿಪುರಾದೊಂದಿಗೆ, 180 ಕಿ.ಮೀ ನಷ್ಟು ಮಿಜೋರಾಮ್ನೊಂದಿಗೆ, 443 ಕಿ.ಮೀ ನಷ್ಟು ಮೇಘಾಲಯದೊಂದಿಗೆ, 2217 ಕಿ.ಮೀ ನಷ್ಟು ಪಶ್ಚಿಮ ಬಂಗಾಳದೊಂದಿಗೆ ನಾವು ಗಡಿ ಹಂಚಿಕೊಂಡಿದ್ದೇವೆ. ಬಾಂಗ್ಲಾದಿಂದ ನುಗ್ಗಿ ಬರುವಂಥ ಈ ಮುಸಲ್ಮಾನರು ಯಾವತ್ತಿದ್ದರೂ ರಾಷ್ಟ್ರಕ್ಕೆ ತಲೆನೋವೇ. ಇವರು ಬರಿ ಇಲ್ಲಿ ಕೆಲಸಕ್ಕೆಂದು ಬಂದು ಸುಮ್ಮನಾಗುವುದಿಲ್ಲ. ಬದಲಿಗೆ ಇಲ್ಲಿನ ಕಾಂಗ್ರೆಸ್ಸಿಗರ ಸಂಪರ್ಕವನ್ನು ಗಟ್ಟಿ ಮಾಡಿಕೊಂಡು ಅವರಿಗೇ ವೋಟು ನೀಡುವ ಭರವಸೆ ಕೊಟ್ಟು ಇಲ್ಲಿನ ಅಧಿಕೃತ ನಾಗರಿಕರಾಗಿಬಿಡುತ್ತಾರೆ. ಬರು-ಬರುತ್ತಾ ಜನಸಂಖ್ಯಾ ಅಂಕಿಯೇ ಏರುಪೇರಾಗಿ ಬಾಂಗ್ಲಾದೇಶೀಯರು ತಮಗೆ ಬೇಕಾದ ವ್ಯಕ್ತಿಯನ್ನು ಆರಿಸಿಕೊಳ್ಳುವ ಮಟ್ಟಿಗೆ ಭಾರತದ ಪರಿಸ್ಥಿತಿ ನಿಮರ್ಾಣವಾಗಿಬಿಡುತ್ತದೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಈ ಪರಿಸ್ಥಿತಿ ಅದಾಗಲೇ ವಿಕಟ ಸ್ವರೂಪ ಪಡೆದುಕೊಂಡಿದೆ. ನರೇಂದ್ರಮೋದಿ 2014 ರ ಚುನಾವಣೆಗೂ ಮುನ್ನವೇ ಈ ನುಸುಳುಕೋರರನ್ನು ಸಂಪೂರ್ಣ ತಡೆಯುವುದಾಗಿ ಮತ್ತು ಒಳ ಬಂದವರನ್ನು ಹೊರಗೆ ದಬ್ಬುವುದಾಗಿ ಭರವಸೆ ಕೊಟ್ಟಿದ್ದರು. ಅಷ್ಟೇ ಅಲ್ಲ. ಅಸ್ಸಾಂನ ಚುನಾವಣೆಗೂ ಮುನ್ನ ಅಲ್ಲಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಭರಾನಂದ್ ಸೋನೊವಾಲ್ ಅಸ್ಸಾಂ ಇಲ್ಲಿನ ಅಧಿಕೃತ ನಾಗರಿಕರಿಗಾಗಿ ಮೀಸಲು ಎಂಬ ಹೇಳಿಕೆಯಿಂದ ಸಾಕಷ್ಟು ಗೌರವವನ್ನು ಪಡೆದುಕೊಂಡಿದ್ದರು. ನರೇಂದ್ರಮೋದಿಯೂ ಸುಮ್ಮನಿದ್ದವರೇನಲ್ಲ. ಅಧಿಕಾರಕ್ಕೆ ಬಂದ ಮೇಲೆ ಬಾಂಗ್ಲಾ ಮತ್ತು ಭಾರತದ ನಡುವಿನ ಗಡಿಯಲ್ಲಿ ಬೇಲಿ ಹಾಕುವ ಕೆಲಸವನ್ನು ಚುರುಕುಗೊಳಿಸಿದರು. 2015 ರ ಡಿಸೆಂಬರ್ 23 ರಂದು 3326 ಕಿ.ಮೀ ಉದ್ದದ ಗಡಿ ಬೇಲಿಗೆ ಅನುಮತಿಯೂ ದೊರೆಯಿತು. ಬಹುತೇಕ ಪೂರ್ಣಗೊಳ್ಳುವಂಥ ಹಂತಕ್ಕೂ ಬಂದಿದೆ. ಇಂತಹ ಹೊತ್ತಲ್ಲಿ ಒಳ ನುಸುಳುವುದನ್ನು ಪೂರ್ಣ ತಡೆದಿರುವ ಭಾರತ ಈಗ ಭಾರತದ ಸ್ವತ್ತನ್ನು ಹೀರಿ ತಿನ್ನುತ್ತಿರುವ ಬಾಂಗ್ಲಾದೇಶೀಯರನ್ನು ಹೊರದಬ್ಬುವುದಕ್ಕೆ ಸಮರ್ಥ ಸಮಯ ಬಂದಿತ್ತು. ಅದಕ್ಕೆ ಅವರು ಅಸ್ಸಾಮಿನ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ ಅನ್ನು ನವೀಕರಿಸಲು ನಿಶ್ಚಯ ಮಾಡಿದ್ದು. ಈ ರಿಜಿಸ್ಟರ್ ಅಸ್ಸಾಮಿನ ಭಾರತೀಯ ನಾಗರಿಕರ ಹೆಸರುಗಳ ಪಟ್ಟಿ. ಇದು 1951 ರಲ್ಲಿ ನಿಮರ್ಿಸಲ್ಪಟ್ಟಿತ್ತು. 2014 ರಿಂದ 16 ರ ನಡುವೆ ಇದನ್ನು ಮತ್ತೆ ನವೀಕರಿಸಿ ಪ್ರಕಟಿಸುವ ಸಾಹಸ ಮಾಡಲಾಯ್ತು. ಇದಕ್ಕೆ ಎರಡು ಪ್ರಮುಖ ಮಾನದಂಡಗಳನ್ನು ಜೋಡಿಸಿಕೊಳ್ಳಲಾಯ್ತು. 1951 ರ ಎನ್.ಆರ್.ಸಿ ಪಟ್ಟಿಯಲ್ಲಿರಬೇಕು ಅಥವಾ 1971 ರವರೆಗಿನ ಚುನಾವಣೆಯ ಪಟ್ಟಿಯಲ್ಲೋ ಅಥವಾ ಯಾವುದಾದರೂ ಅಧಿಕೃತವಾದ ದಾಖಲೆಗಳಲ್ಲೋ ಹೆಸರಿರಬೇಕು. ಆನಂತರ ಸೃಷ್ಟಿಯಾದ ದಾಖಲೆಗಳನ್ನು ಒಪ್ಪಲಾಗುವುದಿಲ್ಲ ಎಂದು ಹೇಳಿದ ಪರಿಣಾಮವಾಗಿ 40 ಲಕ್ಷ ಜನ ಈಗ ಅಧಿಕೃತವಾದ ಪಟ್ಟಿಯಿಂದ ಆಚೆಗಿದ್ದಾರೆ. ಬಹಳ ಹಿಂದೆ ಕೇಂದ್ರ ಮಂತ್ರಿ ಕಿರಣ್ ರಿಜಿಜು ಹೇಳಿದ ಪ್ರಕಾರ ಭಾರತದಲ್ಲಿ 2 ಕೋಟಿಯಷ್ಟು ಬಾಂಗ್ಲಾ ಮುಸಲ್ಮಾನರಿದ್ದಾರೆ. ಅಸ್ಸಾಮಿನ ಪಟ್ಟಿಯನ್ನು ನೋಡಿದರೆ ಕಿರಣ್ ರಿಜಿಜು ಮಾಡಿರುವಂಥ ಅಂದಾಜು ಕೂಡ ಕಡಿಮೆಯೆನಿಸುತ್ತದೆ. ಏಕೆಂದರೆ ಬಾಂಗ್ಲಾ ನುಸುಳುಕೋರರು ಈಗ ಅಸ್ಸಾಂ-ಬಂಗಾಳಗಳಲ್ಲಿ ಮಾತ್ರವಲ್ಲ ಬೆಂಗಳೂರಿನ ಹ್ಯಾರಿಸಿನ ಕ್ಷೇತ್ರದಲ್ಲೂ ಕುಳಿತಿದ್ದಾರೆ. ಕೆಲವರನ್ನು ನೀವು ತಿಪ್ಪರಲಾಗ ಹೊಡೆದರೂ ಚುನಾವಣೆಯಲ್ಲಿ ಸೋಲಿಸಲಾಗದು ಏಕೆಂದರೆ ಅವರು ಈ ರೀತಿಯ ಬಲುದೊಡ್ಡ ವೋಟ್ ಬ್ಯಾಂಕ್ಗಳನ್ನು ಸೃಷ್ಟಿಸಿಕೊಂಡುಬಿಟ್ಟಿದ್ದಾರೆ. ಕೊಡಗಿನ ದೊಡ್ಡ ದೊಡ್ಡ ಎಸ್ಟೇಟ್ಗಳಲ್ಲಿ ಕೆಲಸ ಮಾಡಲು ಬಲು ದೊಡ್ಡ ಸಂಖ್ಯೆಯ ಬಾಂಗ್ಲಾ ಮುಸಲ್ಮಾನರಿದ್ದಾರೆ. ಮೋದಿ ಸಕರ್ಾರ ಇವರೆಲ್ಲರನ್ನೂ ಹುಡು-ಹುಡುಕಿ ತಮ್ಮ ದೇಶಕ್ಕೆ ವಾಪಸ್ ಕಳಿಸುವ, ಬರಲೇಬೇಕೆಂದಿದ್ದರೆ ಅಧಿಕೃತವಾಗಿ ಬರಲು ಆಹ್ವಾನ ನೀಡುವ ಸಂಕಲ್ಪಕ್ಕೆ ಬದ್ಧವಾಗಿದೆ. ಇದಕ್ಕಾಗಿ ಬಹಳ ಹಿಂದೆಯೇ ತಯಾರಿ ಆರಂಭಿಸಿದ ಮೋದಿ ಡೊನಾಲ್ಡ್ ಟ್ರಂಪ್ರಂತೆ ಹುಚ್ಚು-ಹುಚ್ಚಾದ ನಿರ್ಣಯಗಳನ್ನು ಕೈಗೊಳ್ಳಲಿಲ್ಲ. ಬದಲಿಗೆ ಬಾಂಗ್ಲಾದೇಶದೊಂದಿಗೆ ತಮ್ಮ ಸಂಬಂಧವನ್ನು ಮೊದಲು ಬಲಗೊಳಿಸಿಕೊಂಡರು. ಎರಡೂ ದೇಶಗಳ ನಡುವೆ ಇದ್ದ ಭೂಮಿಯ ಕುರಿತಂತ ಕದನಕ್ಕೆ ಮಂಗಳ ಹಾಡಿದರು. ಜೊತೆಗೆ ಬಾಂಗ್ಲಾದೇಶದ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡುವ ಭರವಸೆಯನ್ನೂ ಕೊಟ್ಟರು. ಅದರೊಟ್ಟಿಗೆ ಈ ನುಸುಳುಕೋರರ ಸಮಸ್ಯೆಯನ್ನೂ ಅಲ್ಲಿನ ಪ್ರಧಾನಿಯೊಂದಿಗೆ ಚಚರ್ಿಸಿ ಅದಕ್ಕೊಂದು ಇತಿ ಶ್ರೀ ಹಾಡುವ ಭರವಸೆಯನ್ನೂ ಪಡೆದುಕೊಂಡು ಈಗ ಅದರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಹೀಗಾಗಿ ಪಕ್ಕದ ರಾಷ್ಟ್ರದೊಂದಿಗೆ ಯಾವ ಗಲಾಟೆಯೂ ನಡೆಸದೇ ಆ ರಾಷ್ಟ್ರದ ಅನಧಿಕೃತ ಪ್ರಜೆಗಳನ್ನು ಆ ರಾಷ್ಟ್ರಕ್ಕೆ ಮರಳಿಸುವ ಮೋದಿಯವರ ಯೋಜನೆ ತಲೆದೂಗಲೇಬೇಕಾದಂಥದ್ದು. ಇಷ್ಟಕ್ಕೂ ಈ ಅನಧಿಕೃತ ನಿವಾಸಿಗಳನ್ನು ಹೊರದಬ್ಬಬೇಕಾದರೂ ಏಕೆ? ಮೊದಲನೆಯದಾಗಿ ಹೊರದೇಶದಿಂದ ಬಂದ ಈ ಜನಕ್ಕೆ ಈ ದೇಶ ಅನ್ನ ಗಳಿಸಲು ಒಂದು ಮಾರ್ಗ ಮಾತ್ರ. ಇಲ್ಲಿನ ಆಗು-ಹೋಗುಗಳೊಂದಿಗೆ, ಸಮಸ್ಯೆಗಳೊಂದಿಗೆ ಅವರೆಂದಿಗೂ ಒಂದಾಗಲಾರರು. ಇಲ್ಲಿ ಭಯೋತ್ಪಾದಕರೇ ಆರಿಸಿ ಬಂದು ಆಳಲು ನಿಂತರೂ ಕೂಡ ಅವರು ನೊಂದುಕೊಳ್ಳುವುದಿಲ್ಲ ಏಕೆಂದರೆ ಅವರಿಗೂ ಅದಕ್ಕೂ ಸಂಬಂಧವೇ ಇಲ್ಲ. ಬಿಜೆಪಿ ಈ ವಿಚಾರವನ್ನು ಮುಂದಿಟ್ಟುಕೊಂಡು ಜನಜಾಗೃತಿ ಮೂಡಿಸಿ ಅಧಿಕಾರ ಪಡೆಯುವ ಮುನ್ನ ಅಸ್ಸಾಂನಲ್ಲಿ ಬಾಂಗ್ಲಾ ಮುಸಲ್ಮಾನರ ಬೆಂಬಲ ಪಡೆದ ಅಭ್ಯಥರ್ಿಗಳು ಅನೇಕ ಕಡೆ ಆಯ್ಕೆಯಾಗುತ್ತಿದ್ದರು. ಪಶ್ಚಿಮ ಬಂಗಾಳದಲ್ಲಂತೂ ಹಾಜಿ ನೂರುಲ್ ಇಸ್ಲಾಂ, ಅಹ್ಮದ್ ಹಸನ್ ಇಮ್ರಾನ್, ಗಿಯಾಸುದ್ದೀನ್ ಮುಲ್ಲಾ ಮೊದಲಾದವರೆಲ್ಲಾ ಬಾಂಗ್ಲಾ ಉಗ್ರರ ಸಹಕಾರ ಪಡೆದೇ ಅಧಿಕಾರಕ್ಕೇರಿದವರೆಂಬುದು ಇಂದು ಗುಪ್ತ ಸಂಗತಿಯಾಗೇನು ಉಳಿದಿಲ್ಲ. ಹಾಗಂತ ಇದೊಂದೇ ಸಮಸ್ಯೆ ಅಲ್ಲ. ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಭಾರತಕ್ಕೆ ಇವರು ಬಲುದೊಡ್ಡ ಹೊರೆಯಾಗಿ ಕಾಡಬಲ್ಲರು. ಹಾಗೆ ಅಂದಾಜಿಸಿ ನೋಡಿ. ಭಾರತದಲ್ಲಿ 2 ಕೋಟಿಯಷ್ಟಿರುವ ಈ ಜನ ಇಲ್ಲಿನ ಹೊಲ-ಗದ್ದೆಗಳಲ್ಲಿ, ಕಟ್ಟಡ ನಿಮರ್ಾಣದಲ್ಲಿ, ರಸ್ತೆ ನಿಮರ್ಾಣ, ಕಾಫಿ-ಟೀ ತೋಟಗಳಲ್ಲಿ ಕೆಲಸ ಮಾಡಲು ನಿಂತರೆಂದರೆ ಅಷ್ಟು ಪ್ರಮಾಣದ ಉದ್ಯೋಗ ಭಾರತೀಯರಿಗೆ ಸಿಗದೇ ನಷ್ಟವಾಯಿತು ಎಂದೇ ಅರ್ಥ. 2 ಕೋಟಿ ಜನ 365 ದಿನದ ಕೆಲಸವನ್ನು ಲೆಕ್ಕ ಹಾಕಿದರೆ, 730 ಕೋಟಿ ಮ್ಯಾನ್ ಹವಸರ್್ ಕಳೆದುಹೋದಂತೆಯೇ. ರಾಹುಲ್ ಸದನದಲ್ಲಿ ನಿಂತುಕೊಂಡು ಉದ್ಯೋಗ ಎಲ್ಲಿ ಹೋಯ್ತೆಂದು ಕೇಳುತ್ತಾರಲ್ಲಾ ಕಾಂಗ್ರೆಸ್ಸಿನ ಕಾಲದಲ್ಲಿ ಒಳನುಗ್ಗಿ ಬಂದ ಬಾಂಗ್ಲಾದೇಶೀಯರೇ ಭಾರತೀಯರಿಗೆ ಸಿಗಬೇಕಾಗಿದ್ದ ಉದ್ಯೋಗವನ್ನು ನುಂಗಿ ಹಾಕಿದ್ದಾರೆ ಎಂದು ಅವರಿಗೆ ತಿಳಿಸಿ ಹೇಳುವವರು ಬೇಕಾಗಿದ್ದಾರಲ್ಲ!

3

ನರೇಂದ್ರಮೋದಿ ಅಕ್ರಮ ನುಸುಳುಕೋರರ ಪಟ್ಟಿಯನ್ನು ತಯಾರಿಸುತ್ತಿರುವಾಗಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನಜರ್ಿ ಅವರ ವಿರುದ್ಧ ಅರಚಾಡಿ ಬಾಂಗ್ಲಾದೇಶಿಗರನ್ನು ಮುಟ್ಟಿದರೆ ಮೋದಿಯನ್ನು ಜೈಲಿಗಟ್ಟುತ್ತೇನೆ ಎಂದಿದ್ದರು. ಈ ವಿಚಾರಕ್ಕೆ ಕುಹಕವಾಡಿದ್ದ ಮೋದಿ ಜೈಲಿಗಟ್ಟಿದರೆ ಬಾಂಗ್ಲಾ ಕಲಿತುಬಿಡುತ್ತೇನೆ ಹುಷಾರು ಎಂದುತ್ತರಿಸಿದ್ದರು. ಈಗ ಒಟ್ಟಾರೆ ಪಟ್ಟಿ ರಚನೆಯಾಗಿ ಬಾಂಗ್ಲಾದೇಶಿಗರನ್ನು ಹೊರದಬ್ಬಬೇಕಾದ ಸಮಯ ಬಂದಾಗ ದೀದಿ ಅರಚಾಡುತ್ತಿದ್ದಾರೆ. ಏಕೆಂದರೆ ಈ ಬಾರಿ ಚುನಾವಣೆಯಲ್ಲಿ ದೀದಿಯನ್ನು ಮತ್ತೊಮ್ಮೆ ಉಳಿಸಬಲ್ಲಂಥ ಸಾಧ್ಯತೆಯಿರೋದು ಈ ಅಕ್ರಮ ನುಸುಳುಕೋರರಿಗೆ ಮಾತ್ರ. ಹೀಗಾಗಿ ತಲೆಕೆಟ್ಟಂತಾಡುತ್ತಿರುವ ಆಕೆ ಆಂತರಿಕ ದಂಗೆ ನಡೆದುಬಿಡುತ್ತದೆಂದು ದೇಶವನ್ನೇ ಹೆದರಿಸುತ್ತಿದ್ದಾರೆ. ಆದರೆ ಕೇಂದ್ರ ಸಕರ್ಾರ ಮುಲಾಜು ನೋಡುವಂತೆ ಕಾಣುತ್ತಿಲ್ಲ. ಅಸ್ಸಾಮಿನ ಜನರನ್ನು ವಿಶ್ವಾಸದ ವ್ಯಾಪ್ತಿಗೆ ತೆಗೆದುಕೊಂಡ ಅವರು ಮುಂದಿನ ಹೆಜ್ಜೆಯನ್ನು ಬಲವಾಗಿ ಊರುತ್ತಿದ್ದಾರೆ. ಅಚ್ಚರಿಯೆಂದರೆ ಕೇಂದ್ರ ಸಕರ್ಾರದ ಈ ನಿಲುವಿಗೆ ಅಸ್ಸಾಮಿನ ಮುಸಲ್ಮಾನರು ಬದ್ಧವಾಗಿದ್ದು ಅಕ್ರಮ ನುಸುಳುಕೋರರಿಂದ ತಮಗಾಗಿರುವ ತೊಂದರೆಯನ್ನು ರಾಷ್ಟ್ರದ ಮುಂದಿರಿಸುತ್ತಿದ್ದಾರೆ. ಒಮ್ಮೆ ಅಸ್ಸಾಮಿನಿಂದ ಇವರನ್ನು ಹೊರದಬ್ಬಲಾಯಿತೆಂದರೆ ಪಶ್ಚಿಮ ಬಂಗಾಳ, ತ್ರಿಪುರಾ, ಮಿಜೋರಾಂ ಎಲ್ಲೆಡೆಯೂ ಬಲವಾದ ಕೂಗು ಹೊಮ್ಮಲಾರಂಭಿಸುತ್ತದೆ. ಅಲ್ಲಿಗೆ ಅಕ್ರಮ ವೋಟುಗಳ ಕನಸು ಕಂಡು ಗೆಲುವಿಗೆ ಹಾತೊರೆಯುತ್ತಿದ್ದ ಈ ಪಕ್ಷಗಳ ಭವಿಷ್ಯ ಕಮರಿಬಿಡುತ್ತದೆ. ಅದಕ್ಕೇ ಇವರ ಅರಚಾಟ ಜೋರಾಗುತ್ತಿರುವುದು.

4
ಒಳನುಸುಳಿಬರುತ್ತಿರುವವರ ಪರವಾಗಿ ಮಾತನಾಡುತ್ತಿರುವವರಿಗೆ ನಾವೆಲ್ಲ ಕೇಳಬೇಕಾಗಿರೋದು ಒಂದೇ ಪ್ರಶ್ನೆ. ಮತ ಆಧಾರದ ಮೇಲೆ ಸ್ವಾತಂತ್ರ್ಯದ ಹೊತ್ತಲ್ಲಿ ದೇಶವನ್ನು ವಿಭಜಿಸಿ ಅಲ್ಲಿಗೆ ಹೋದವರಲ್ಲವೇ ಇವರು? ಆಸೆ ಪಟ್ಟು ಪಡೆದ ರಾಷ್ಟ್ರದಲ್ಲಿ ಇರಲಾಗುತ್ತಿಲ್ಲವೆಂದರೆ ತಪ್ಪು ಯಾರದ್ದು? ಒಂದೋ ದೇಶ ವಿಭಜಿಸಿದ ತಪ್ಪಿಗೆ ಅಲ್ಲಿಯೇ ಹೊಂದಿಕೊಂಡು ಇರಬೇಕು ಅಥವಾ ಯಾವ ಆಧಾರದ ಮೇಲೆ ವಿಭಜಿಸಿದರೋ ಅದರಿಂದಲಾದರೂ ಮುಕ್ತವಾಗಬೇಕು! ಬಹಳ ಹಿಂದೆ ಯೋಗಿ ಅರವಿಂದರು ಒಂದು ಮಾತು ಹೇಳಿದ್ದರು ‘ಆಕ್ರಮಕ ಪಂಥಗಳ್ಯಾವುವೂ ಜನರನ್ನು ಸಂಪದ್ಭರಿತವಾಗಿಸಲಾರವು’ ಅಂತ. ಎಲ್ಲೆಲ್ಲಿ ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂಗಳು ದಾಂಗುಡಿಯಿಟ್ಟು ಸ್ಥಳೀಯರನ್ನು ಮತಾಂತರಗೈದಿವೆಯೋ ಅಲ್ಲೆಲ್ಲಾ ದಾರಿದ್ರ್ಯ ತಾಂಡವವಾಡುತ್ತಿದೆ. ಪಾಕಿಸ್ತಾನ ಮತ್ತು ಬಾಂಗ್ಲಾಗಳಿಗಿಂತಲೂ ಸಮರ್ಥವಾದ ಉದಾಹರಣೆ ಇದಕ್ಕೆ ಮತ್ತೊಂದಿಲ್ಲ. ಸಿರಿವಂತಿಕೆಯ ಸುಪ್ಪತ್ತಿಗೆಯಲ್ಲಿದ್ದ ಬಾಂಗ್ಲಾ ಇಂದು ದಾರಿದ್ರ್ಯದ ತೊಟ್ಟಿಲಾಗಿಬಿಟ್ಟಿದೆ. ಮಾನವೀಯತೆಯ ದೃಷ್ಟಿಯಿಂದ ನೋಡಿದಾಗ ಸಂಕಟಕ್ಕೆ ಸಿಕ್ಕು ಬಂದವರನ್ನು ಓಡಿಸುವುದು ಸರಿಯಾ ಎನಿಸುತ್ತದೆ. ಆದರೆ ಹೀಗೆ ಬಂದವರು ಹಬ್ಬಿಸುವ ವಿಚಾರ ಸಂಪದ್ಭರಿತವಾಗಿರುವ ಭಾರತವನ್ನು ದಾರಿದ್ರ್ಯಕ್ಕೆ ತಳ್ಳಿಬಿಡುವುದಾ ಎಂದೂ ಭಯವಾಗುತ್ತದೆ. ಹೀಗಾಗಿ ನಮ್ಮ ನಿರ್ಣಯಕ್ಕೆ ನಾವು ಬದ್ಧರಾಗಬೇಕಾಗಿರುವುದು ಅನಿವಾರ್ಯ. ಈ ನುಸುಳುಕೋರರನ್ನು ಹೊರಗೆ ದಬ್ಬುವಲ್ಲಿ ಮೋದಿಯವರ ಜೊತೆಗೆ ನಿಲ್ಲೋಣ. ರಾಷ್ಟ್ರವನ್ನು ಬಲಾಢ್ಯವಾಗಿಸೋಣ.

Comments are closed.