ವಿಭಾಗಗಳು

ಸುದ್ದಿಪತ್ರ


 

ಅಟಲ್ ಜೀಯನ್ನು ನಾವು ಬಹಳ ಹಿಂದೆಯೇ ಕೊಂದಾಗಿತ್ತು!

ಶಾಲೆಗೆ ಹೋಗುವಾಗಿನಿಂದಲೇ ಅವರಿಗೆ ಎರಡು ಹುಚ್ಚು. ಸಂಘದ ಶಾಖೆಗೆ ಹೋಗುವುದು, ಮತ್ತೊಂದು ಕವನ ಗೀಚೋದು. ಉಪನಯನದ ದಿನವೂ ಅವರು ಶಾಖೆ ತಪ್ಪಿಸಿಕೊಂಡವರಲ್ಲ, ಹಾಗೆಯೇ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವಾಗಲೂ ಸ್ವಂತ ಕವನವನ್ನು ವಾಚಿಸದೇ ಬಿಟ್ಟವರಲ್ಲ.

‘ಅಧಿಕಾರದ ಆಟ ನಡೆದೇ ನಡೆಯುತ್ತದೆ.
ಸಕರ್ಾರಗಳು ಬರುತ್ತವೆ ಹೋಗುತ್ತವೆ.
ಪಕ್ಷಗಳು ನಿಮರ್ಾಣಗೊಳ್ಳುತ್ತವೆ ಮುರಿದು ಬೀಳುತ್ತವೆ.
ಆದರೆ ಈ ದೇಶ ಉಳಿಯಬೇಕು ಪ್ರಜಾಪ್ರಭುತ್ವ ಅಮರವಾಗಿರಬೇಕು.’
13 ದಿನಗಳ ತಮ್ಮ ಅಧಿಕಾರವನ್ನು ಕೂದಲೆಳೆಯ ಅಂತರದಿಂದ ಕಳೆದುಕೊಂಡ ಅಟಲ್ ಬಿಹಾರಿ ವಾಜಪೇಯಿಯವರ ಅಂದಿನ ಪ್ರಭಾವಿ ಭಾಷಣದ ಪ್ರಮುಖ ಸಾಲುಗಳು ಇವು. ಬಹುಶಃ ಅವರು ದೇಹತ್ಯಾಗ ಮಾಡಿದ ದಿನ ಇಡಿಯ ದೇಶ ಅದೆಷ್ಟು ನೊಂದುಕೊಂಡಿತೊ ಅದಕ್ಕೂ ನೂರು ಪಟ್ಟು ಹೆಚ್ಚು ಅವರು ಅಧಿಕಾರ ಕಳೆದುಕೊಂಡ ದಿನವೇ ದೇಶ ಕಣ್ಣೀರಿಟ್ಟಿತ್ತು. ಪ್ರಜಾತಂತ್ರವನ್ನು ಕೊಲ್ಲುವಲ್ಲಿ ಕಾಂಗ್ರೆಸ್ಸು ಅಂದು ಮಾಡಿದ ಮೋಸವನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಒರಿಸ್ಸಾದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದ ಗಿರಿಧರ್ ಗಮಾಂಗ್ ಲೋಕಸಭಾ ಸದಸ್ಯರೂ ಆಗಿದ್ದರು. ಮುಖ್ಯಮಂತ್ರಿ ಹುದ್ದೆಯನ್ನು ಸ್ವೀಕರಿಸಿದಾಕ್ಷಣ ತಮ್ಮ ಲೋಕಸಭಾ ಸದಸ್ಯತ್ವಕ್ಕೆ ಅವರು ರಾಜಿನಾಮೆ ಕೊಟ್ಟು ಮರು ಚುನಾವಣೆಗೆ ಸಿದ್ಧರಾಗಲು ಪಾಟರ್ಿಯನ್ನು ಕೇಳಿಕೊಳ್ಳಬೇಕಿತ್ತು. ಆದರೆ ಕಾಂಗ್ರೆಸ್ಸಿಗೆ ಇಷ್ಟೆಲ್ಲಾ ನೈತಿಕತೆಯ ಪ್ರಜ್ಞೆ ಇದ್ದಿದ್ದರೆ ಭಾರತ ಇಂದು ಈ ಸ್ಥಿತಿಯಲ್ಲಿ ಖಂಡಿತ ಇರುತ್ತಿರಲಿಲ್ಲ. ಸೋಲುವ ಭೀತಿಯಲ್ಲಿದ್ದ ಕಾಂಗ್ರೆಸ್ಸು ಮುಖ್ಯಮಂತ್ರಿಯಾಗಿದ್ದ ಗಿರಿಧರ್ ಗಮಾಂಗ್ರನ್ನು ಲೋಕಸಭೆಗೆ ಕರೆತಂದು ಅವರಿನ್ನೂ ರಾಜಿನಾಮೆ ಕೊಟ್ಟಿಲ್ಲ ಎಂಬ ಕಾರಣವನ್ನು ಮುಂದಿಟ್ಟು ಅವರಿಂದಲೂ ವೋಟು ಹಾಕಿಸಿ ಅಟಲ್ಜಿ ಒಂದು ವೋಟಿನಿಂದ ಸೋಲುವಂತೆ ಮಾಡಲಾಯ್ತು. ಆತ ಮತ ಚಲಾಯಿಸಿರಲಿಲ್ಲವೆಂದರೆ ಎರಡೂ ಪಾಳಯಕ್ಕೆ ಸಮಾನ ಮತಗಳು ಸಿಕ್ಕು ಸ್ಪೀಕರ್ ಬಾಲಯೋಗಿ ಸಹಜವಾಗಿಯೇ ಸಕರ್ಾರದ ಪರವಾಗಿಯೇ ಮತ ಚಲಾಯಿಸುತ್ತಿದ್ದರು. ಅಟಲ್ಜಿಯವರ ಸಕರ್ಾರ ಒಂದು ಮೋಸದ ಮತದಿಂದ ಉರುಳಿಹೋಯ್ತು. ಕಾಂಗ್ರೆಸ್ಸು ಇರಿದಿದ್ದು ಅಟಲ್ಜಿಯವರ ಬೆನ್ನಿಗೆ ಚೂರಿಯಷ್ಟೇ ಅಲ್ಲ, ಭಾರತೀಯರ ಆಶಾಭಾವನೆಗಳ ಬೆಟ್ಟಕ್ಕೆ ಕೊಳ್ಳಿಯಿಟ್ಟುಬಿಟ್ಟಿತ್ತು. ಅದರ ಪ್ರಭಾವದಿಂದಲೇ ಮರುಚುನಾವಣೆಯಲ್ಲಿ ಅಟಲ್ಜಿಯನ್ನು ಗೆಲ್ಲಿಸಿಕೊಳ್ಳಲೇಬೇಕೆಂಬ ಹಠಕ್ಕೆ ಬಿತ್ತು ದೇಶ. ಬಹುಶಃ ಜವಾಹರ್ಲಾಲ್ ನೆಹರೂ ನಂತರ ಭಾರತದ ಮೂಲೆ ಮೂಲೆಯಲ್ಲೂ ಇಷ್ಟು ವ್ಯಾಪಕವಾದ ಜನಬೆಂಬಲ ಪಡೆದ ಮತ್ತೊಬ್ಬ ನಾಯಕನಿರಲಿಕ್ಕಿಲ್ಲ. ಇಂದಿರಾ ಗಲ್ಲಿ-ಗಲ್ಲಿಯನ್ನೂ ಮುಟ್ಟಿದ್ದು ನಿಜವಾದರೂ ಆಕೆಯ ಹಿಂದೆ ನೆಹರೂ ಪ್ರಭಾವ ಇತ್ತು, ಹೆಸರಲ್ಲಿ ಗಾಂಧಿ ಇತ್ತು. ಅಟಲ್ಜಿ ಮಧ್ಯಮವರ್ಗದ ಸಾಮಾನ್ಯ ಕುಟುಂಬದ ವ್ಯಕ್ತಿಯಾಗಿ ಈ ಹಂತಕ್ಕೆ ಬಂದಿದ್ದು ನಿಜಕ್ಕೂ ಅಪರೂಪದ್ದು!

1

ಶಾಲೆಗೆ ಹೋಗುವಾಗಿನಿಂದಲೇ ಅವರಿಗೆ ಎರಡು ಹುಚ್ಚು. ಸಂಘದ ಶಾಖೆಗೆ ಹೋಗುವುದು, ಮತ್ತೊಂದು ಕವನ ಗೀಚೋದು. ಉಪನಯನದ ದಿನವೂ ಅವರು ಶಾಖೆ ತಪ್ಪಿಸಿಕೊಂಡವರಲ್ಲ, ಹಾಗೆಯೇ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವಾಗಲೂ ಸ್ವಂತ ಕವನವನ್ನು ವಾಚಿಸದೇ ಬಿಟ್ಟವರಲ್ಲ. ಗ್ವಾಲಿಯರ್ನ ವಿಕ್ಟೋರಿಯಾ ಕಾಲೇಜಿನಲ್ಲಿ ಓದುವಾಗ ವಿದ್ಯಾಥರ್ಿ ಸಂಘದ ಉಪಾಧ್ಯಕ್ಷರಾಗಿದ್ದ ಅಟಲ್ಜಿ ಕಮ್ಯುನಿಸ್ಟ್ ನಾಯಕ ರಾಹುಲ್ ಸಾಂಕೃತ್ಯಾಯನರನ್ನು ಕಾರ್ಯಕ್ರಮಕ್ಕೆ ಕರೆಸಬೇಕೆಂಬ ಹಠಕ್ಕೆ ಬಿದ್ದಿದ್ದರು. ಈ ವಿಚಾರದಲ್ಲಿ ವಿದ್ಯಾಥರ್ಿಗಳಲ್ಲಿ ಎರಡು ಗುಂಪುಗಳಾಗಿ ಅಟಲ್ಜಿ ಜಿದ್ದಿಗೆ ಬಿದ್ದು ಅತಿಥಿಗಳನ್ನು ಕರೆಸಿಕೊಂಡರು. ಹೀಗಾಗಿ ಕೆಲವೊಮ್ಮೆ ಅವರನ್ನು ಎಡಪಂಥೀಯ ಚಿಂತನೆಗಳ ಪ್ರಭಾವಕ್ಕೆ ಒಳಗಾದವರೆಂದು ಆರೋಪಿಸಲಾಗುತ್ತದೆ. ಆದರೆ ಹಾಗೆ ರಾಹುಲ್ ಸಾಂಕೃತ್ಯಾಯನರನ್ನು ಕಾರ್ಯಕ್ರಮಕ್ಕೆ ಕರೆಸುವಾಗಲೂ ಅಟಲ್ಜಿಯವರ ಸಂಘದ ಸಂಪರ್ಕ ಮಾತ್ರ ತಪ್ಪಿರಲಿಲ್ಲ.

ಕಾನ್ಪುರದಲ್ಲಿ ಅವರು ಕಾನೂನು ಅಧ್ಯಯನ ನಡೆಸುವಾಗ ನಿವೃತ್ತರಾಗಿದ್ದ ಅವರ ತಂದೆ ಕೂಡ ಅದೇ ಕೋಸರ್ಿಗೆ ದಾಖಲಾಗಿ ಮಗನೊಂದಿಗೆ ಕಾಲೇಜಿಗೆ ಬರುತ್ತಿದ್ದರಂತೆ. ಸಂಘದ ಕೆಲಸದ ಒತ್ತಡ ಹೆಚ್ಚಾದಾಗ ಕಾನೂನು ವಿದ್ಯಾಲಯದಿಂದ ಅನಿವಾರ್ಯವಾಗಿ ಆಚೆಗೆ ಬರಬೇಕಾಯ್ತು. ಬರವಣಿಗೆಯಲ್ಲಿ ಚೆನ್ನಾಗಿ ಪಳಗಿದ್ದ ಅಟಲ್ಜಿ ಸಂಘದ ಆದೇಶದಂತೆ ರಾಷ್ಟ್ರಧರ್ಮ ಎನ್ನುವ ಮಾಸಿಕಕ್ಕೆ ಜೀವ ತುಂಬಿದರು. ಆನಂತರ ಅವರಿಗೆ ವಾರಪತ್ರಿಕೆ ಪಾಂಚಜನ್ಯದ ಜವಾಬ್ದಾರಿ ಒಲಿದು ಬಂತು. ಅಟಲ್ಜಿ ಕೈಗೆತ್ತಿಕೊಂಡ ನಂತರ ಪಾಂಚಜನ್ಯದ ಚಂದಾದಾರರ ಸಂಖ್ಯೆ ಏರಿತ್ತಲ್ಲದೇ ಸಮಾಜದಲ್ಲಿ ಅದೊಂದು ಚಚರ್ೆಯನ್ನು ಹುಟ್ಟುಹಾಕಬಲ್ಲ ಪತ್ರಿಕೆಯಾಗಿ ರೂಪುಗೊಂಡಿತ್ತು. ಪ್ರಭಾವಿತಗೊಂಡ ಸಂಘ ಮುಂದೆ ಇವರ ತೆಕ್ಕೆಗೆ ಸ್ವದೇಶ್ ಎಂಬ ದಿನಪತ್ರಿಕೆಯ ಜವಾಬ್ದಾರಿಯನ್ನು ಹೊರಿಸಿತು. ಅದನ್ನೂ ಯಶಸ್ವಿಯಾಗಿ ಮುನ್ನಡೆಸಿದ ಅಟಲ್ಜಿ ಪತ್ರಿಕೋದ್ಯಮದಲ್ಲಿ ಎಲ್ಲ ಮಜಲುಗಳನ್ನು ಕಂಡಾಗಿತ್ತು. 1951 ರಲ್ಲಿ ಸಂಘ ಅವರನ್ನು ಜನಸಂಘಕ್ಕೆ ಡಾ. ಶ್ಯಾಮಪ್ರಸಾದ ಮುಖಜರ್ಿಯವರ ಸಹಾಯಕರಾಗಿ ಕಳಿಸಿಕೊಟ್ಟಿತು. 1955 ರ ಮೊದಲ ಚುನಾವಣೆಯಲ್ಲಿ ಲಖ್ನೌನಲ್ಲಿ ಸೋಲುಂಡ ಅಟಲ್ಜಿ ಆನಂತರ ಹಿಂದೆ ತಿರುಗಿ ನೋಡಲಿಲ್ಲ. ಹತ್ತು ಬಾರಿ ರಾಷ್ಟ್ರ ರಾಜಕಾರಣಕ್ಕೆ ಆಯ್ಕೆಯಾದರು. ಮಧ್ಯೆ ಒಮ್ಮೆ ಮೋಸದಿಂದ ಕಾಂಗ್ರೆಸ್ಸು ಅವರನ್ನು ಸೋಲಿಸಿದಾಗ ಬಲರಾಮ್ ಪುರದ ಜನರೇ ಸವಾಲು ಸ್ವೀಕರಿಸಿ ಮರುಚುನಾವಣೆಯಲ್ಲಿ 30,000 ಅಂತರದಿಂದ ಜಯ ಗಳಿಸುವಂತೆ ನೋಡಿಕೊಂಡರು. ಸೋಲು-ಗೆಲುವುಗಳು ಅವರ ಜೀವನದಲ್ಲಿ ಒಂದಾದಮೇಲೆ ಒಂದರಂತೆಯೇ ಬಂದಿವೆ. ಸೋತಾಗ ಎದೆಗುಂದಿದವರಲ್ಲ ಅವರು.

‘ಪಣಕ್ಕೆ ಎಲ್ಲವನ್ನೂ ಇಟ್ಟಾಗಿದೆ
ಇನ್ನು ನಿಲ್ಲಲಾರೆವು
ಮುರಿದು ಹೋದೇವು ನಾವು
ಆದರೆ ತಲೆಬಾಗಲಾರೆವು’ ಎಂಬುದು ಅಟಲ್ಜಿಯವರದ್ದೇ ಕವನ. ತುತರ್ು ಪರಿಸ್ಥಿತಿ ಹೇರಿಕೆಯಾದಾಗ ಇಂದಿರಾಳನ್ನು ವಿರೋಧಿಸುವ ಸಮರ್ಥ ವೇದಿಕೆ ನಿಮರ್ಾಣಕ್ಕಾಗಿ ಜನಸಂಘವನ್ನು ಜನತಾ ಪಕ್ಷದೊಂದಿಗೆ ವಿಲೀನಗೊಳಿಸಲಾಯ್ತು. ಅಧಿಕಾರಕ್ಕೆ ಬಂದ ಜನತಾ ಪಕ್ಷದಲ್ಲಿ ವಿದೇಶಾಂಗ ಸಚಿವರಾಗಿದ್ದ ಅಟಲ್ಜಿ ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿ ಗೌರವಕ್ಕೆ ಪಾತ್ರರಾಗಿದ್ದರು. ಅವರ ಈ ಅವಧಿಯಲ್ಲಿ ಭಾರತದ ವಿದೇಶಾಂಗ ನೀತಿ ಚುರುಕಾಗಿಬಿಟ್ಟಿತ್ತು. ಇತ್ತ ದೇಶದೊಳಗೆ ಚೌಧರಿ ಚರಣ್ಸಿಂಗರಿಗೂ ಮೊರಾಜರ್ಿ ದೇಸಾಯರಿಗೂ ಅಧಿಕಾರದ ವಿಚಾರದಲ್ಲಿ ಕಚ್ಚಾಟ ನಡೆಯುತ್ತಿದ್ದರೆ ಅತ್ತ ಅಟಲ್ಜಿ ಭಾರತದ ಕೀತರ್ಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸುವುದಕ್ಕೆ ಯಾವ ಅವಕಾಶವನ್ನು ಬಿಟ್ಟುಕೊಡದೇ ದುಡಿಯುತ್ತಿದ್ದರು. ಹೀಗೇ ನಾಯಕರ ನಡುವೆ ಗಲಾಟೆ ನಡೆದಾಗಲು ವೈಮನಸ್ಯವನ್ನು ತಣಿಸಲು ಅಟಲ್ಜಿಯವರೇ ಮಧ್ಯಸ್ಥಿಕೆ ವಹಿಸಬೇಕಿತ್ತು. ಜನತಾ ಸಕರ್ಾರ ಉರುಳಿ ಎಲ್ಲ ಬಗೆಯ ಅಪಸವ್ಯಗಳು ನಡೆದಾಗ ಮತ್ತೆ ಭಾರತೀಯ ಜನತಾ ಪಕ್ಷವನ್ನು ಕಟ್ಟಬೇಕೆಂದು ಸಂಘ ನಿರ್ಣಯಿಸಿತು. ಮಾತೃ ಸಂಘಟನೆಯ ನಿರ್ಣಯಕ್ಕೆ ಒಂದಿನಿತೂ ಎದುರಾಡದೇ ಅಟಲ್ಜಿ ಪಕ್ಷದ ಅಧ್ಯಕ್ಷ ಜವಾಬ್ದಾರಿಯನ್ನು ಹೊತ್ತರು. ಅಟಲ್ಜಿಯವರದ್ದು ಅಪ್ಪಟ ಗಾಂಧಿವಾದ. ಯಾರನ್ನೂ ದೂಷಿಸಿ ಗೊತ್ತಿಲ್ಲದವರು ಅವರು. ಅವರು ಗಂಭೀರ ಆರೋಪಗಳನ್ನು ಮಾಡುವಾಗಲೂ ಆರೋಪಿಯ ಮನಸ್ಸು ನೋಯದಂತೆ ನೋಡಿಕೊಳ್ಳುತ್ತಿದ್ದರು. ಹೀಗಾಗಿಯೇ ಮುಂದಿನ ದಿನಗಳಲ್ಲಿ ಅಟಲ್ಜಿಯವರನ್ನು ವಿರೋಧ ಪಕ್ಷದವರು ತೆಗಳಬೇಕೆನ್ನುವಾಗಲೂ ಸರಿಯಾದ ಪದಗಳು ಸಿಗದೇ ‘ಕೆಟ್ಟ ಪಕ್ಷದಲ್ಲಿರುವ ಸಜ್ಜನ’ ಎಂದಷ್ಟೇ ಮೂದಲಿಸಿ ಸುಮ್ಮನಾಗುತ್ತಿದ್ದರು.

ಇಂದಿರಾ ಅವರ ಹತ್ಯೆಯೊಂದಿಗೆ ಭಾಜಪದ ಕೆಟ್ಟ ದಿನಗಳು ಶುರುವಾಗಿದ್ದವು. ಇಡಿಯ ದೇಶದಲ್ಲಿ ಭಾಜಪ ಪ್ರತಿನಿಧಿಸಲು ಲೋಕಸಭೆಯಲ್ಲಿ ಇಬ್ಬರು ಮಾತ್ರ ಸಂಸದರಿದ್ದ ಕಾಲ ಅದು. ಇತರರೆಲ್ಲರೂ ಮೂದಲಿಸುವಾಗ ಅಟಲ್ಜಿ ಬಲು ಹೆಮ್ಮೆಯಿಂದಲೇ ನುಡಿಯುತ್ತಿದ್ದರು ‘ಅಂಧೇರಾ ಛಟೇಗಾ, ಸೂರಜ್ ನಿಕಲೇಗಾ, ಕಮಲ್ ಖಿಲೇಗಾ’. ಮತ್ತದು ಬರಿಯ ಮಾತಾಗಿರಲಿಲ್ಲ. ಅಲ್ಲಿಂದ 15 ವರ್ಷಗಳೊಳಗೆ ಭಾಜಪ 224 ಸೀಟುಗಳನ್ನು ಪಡೆದು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮುವಲ್ಲಿ ನಿಸ್ಸಂಶಯವಾಗಿ ಅವರ ನೇತೃತ್ವ ಕೆಲಸ ಮಾಡಿತು. ಅವರ ಜೊತೆಗೆ ಬಲವಾಗಿ ನಿಂತವರು ಅಡ್ವಾಣಿಜಿ. ರಾಮರಥಯಾತ್ರೆಯ ಮೂಲಕ ಸತ್ತೇ ಹೋಗಿದ್ದ ಹಿಂದುಗಳ ಮಾನಸಿಕತೆಯನ್ನು ಮತ್ತೊಮ್ಮೆ ಜಾಗೃತಗೊಳಿಸಿ ರಾಷ್ಟ್ರೀಯತೆಗೆ ಪೂರಕವಾಗಿ ಅದನ್ನು ಕಟ್ಟುವ ಪ್ರಯತ್ನವನ್ನು ಅವರು ನಿರಂತರವಾಗಿಯೇ ಮಾಡಿಕೊಂಡು ಬಂದರು. ಅನೇಕ ಬಾರಿ ಅಡ್ವಾಣಿಯವರನ್ನು ಬಿಜೆಪಿಯ ತಲೆ ಎಂದು ಅಟಲ್ಜಿಯವರನ್ನು ಹೃದಯವೆಂದೂ ಪ್ರೀತಿಯಿಂದಲೇ ಕರೆಯಲಾಗುತ್ತದೆ.

LEADERS OF OPPOSTION BHARATIYA JJANATA PARTY MEET

ಅಟಲ್ಜಿಯವರ ಅಧಿಕಾರಾವಧಿ ನಿಜಕ್ಕೂ ಹೂವಿನ ಹಾದಿಯೇನೂ ಆಗಿರಲಿಲ್ಲ. 9/11 ಪರಿಣಾಮದಿಂದಾಗಿ ಜಗತ್ತು ಆಥರ್ಿಕ ಹಿನ್ನಡೆಯನ್ನು ಅನುಭವಿಸಿತ್ತು. ಪೋಖ್ರಾನಿನ ನಂತರದ ಆಥರ್ಿಕ ನಿಷೇಧ ಭಾರತದ ಮೇಲಿತ್ತು. ಕಾಗರ್ಿಲ್ ಯುದ್ಧದ ಹೊರೆ ಹೆಗಲ ಮೇಲಿತ್ತು. ಭಯೋತ್ಪಾದಕ ದಾಳಿಯಲ್ಲಿ ನಲುಗಿದ್ದ ಭಾರತ ಐಸಿ 814 ವಿಮಾನದ ಅಪಹರಣಕ್ಕೆ ಒಳಗಾಗಿತ್ತು. ಗಡಿತುದಿಯಲ್ಲಿ 8 ತಿಂಗಳಮುಖಾಮುಖಿ ಸಾಕಷ್ಟು ಆಥರ್ಿಕ ಹೊರೆಯನ್ನು ಹೆಚ್ಚಿಸಿತ್ತು. ವಾಜಪೇಯಿ ಮುಲಾಜಿಲ್ಲದೇ ಕಠಿಣ ನಿರ್ಣಯಗಳನ್ನು ಕೈಗೊಂಡರು. ಜಗತ್ತಿನ ಮೂಲೆ ಮೂಲೆಯಲ್ಲಿದ್ದ ಭಾರತೀಯರಿಗೆ ಕರೆಕೊಟ್ಟು ಬಾಂಡ್ ಪೇಪರ್ಗಳನ್ನು ಖರೀದಿಸುವಂತೆ ಕೇಳಿಕೊಂಡು ಡಾಲರ್ಗಳ ಪ್ರವಾಹ ನಿಲ್ಲದಿರುವಂತೆ ನೋಡಿಕೊಂಡರು. ಪರಿಣಾಮ ವಿದೇಶಿ ವಿನಿಮಯ ಸಂಚಿತ 31 ಬಿಲಿಯನ್ ಡಾಲರ್ಗಳಿಂದ 100 ಬಿಲಿಯನ್ ಡಾಲರ್ಗಳಿಗೇರಿತು. ಅಟಲ್ಜಿ ಅವಧಿಯಲ್ಲಿ ಭಾರತದ ಸರಾಸರಿ ಅಭಿವೃದ್ಧಿ ಶೇಕಡಾ 5ನ್ನು ದಾಟಿತ್ತು. ಜಿಡಿಪಿ ದರ ಆರನ್ನು ಮೀರಿಸಿತು. ನಾಲ್ಕೇ ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಹತ್ತು ವರ್ಷಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚು ರಸ್ತೆಗಳನ್ನು ಅಟಲ್ಜಿ ಮಾಡಿ ತೋರಿಸಿದರು. ನಗರಗಳನ್ನು ಬೆಸೆಯುವ ಸುವರ್ಣ ಚತುಷ್ಪಥ ಮತ್ತು ಹಳ್ಳಿಗಳನ್ನು ಬೆಸೆಯುವ ಗ್ರಾಮ್ ಸಡಕ್ ಯೋಜನೆಗಳು ಅಟಲ್ಜಿ ಅವರದ್ದೆ ಕಲ್ಪನೆ. ಕಾಂಗ್ರೆಸ್ ಪ್ರತಿಯೊಂದು ಯೋಜನೆಗೂ ಇಂದಿರಾ, ರಾಜೀವ್, ನೆಹರೂ ಇವರದ್ದೇ ಹೆಸರಿಟ್ಟು ದೇಶವನ್ನೇ ತಮ್ಮಾಸ್ತಿ ಎಂಬಂತೆ ನಡೆದುಕೊಳ್ಳುತ್ತಿದ್ದಾಗ ಅಟಲ್ ಗ್ರಾಮ್ ಸಡಕ್ ಯೋಜನಾ ಎಂದು ಎಲ್ಲರೂ ನಿರ್ಧರಿಸಿದ್ದನ್ನು ಕಾಟು ಹೊಡೆದು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ ಎಂದು ಮರುನಾಮಕರಣ ಮಾಡಿದ್ದು ಸ್ವತಃ ಅಟಲ್ಜಿಯವರೇ. ಪೋಖ್ರಾನಿನ ಅಣು ವಿಸ್ಫೋಟ ಪರೀಕ್ಷೆಯ ನಂತರ ಪರಮಾಣು ಶಸ್ತ್ರವನ್ನು ಮೊದಲು ಬಳಸದಿರುವ ನಿರ್ಣಯವನ್ನು ಮುಕ್ತವಾಗಿ ಘೋಷಿಸಿದ್ದ ಅಟಲ್ಜಿ ಕೆಲವೇ ದಿನಗಳಲ್ಲಿ ಪಾಕಿಸ್ತಾನಕ್ಕೆ ಹೋಗಿ ನವಾಜ್ ಷರೀಫ್ರನ್ನು ತಬ್ಬಿಕೊಂಡು ಬಂದಿದ್ದು ವಿಶಿಷ್ಟವಾಗಿತ್ತು. ಅಲ್ಲಿಯವರೆಗೂ ರಷ್ಯಾ ಸಾರ್ವಕಾಲಿಕ ಮಿತ್ರನೆಂದು ಭಾರತದ ವಿದೇಶಾಂಗ ನೀತಿ ಏನಿತ್ತೋ ಅದನ್ನು ಪೂರ್ಣ ಬದಲಿಸಿದ ಅಟಲ್ಜಿ ದೇಶದ ಒಳಿತಿಗಾಗಿ ಯಾರೊಂದಿಗೆ ಬೇಕಿದ್ದರೂ ಗೆಳೆತನಕ್ಕೆ ಸಿದ್ಧವೆಂಬ ಸಂದೇಶವನ್ನು ಕೊಟ್ಟರು.

ಅವರ ಕಾಲದಲ್ಲಿಯೇ ಭಾರತ ಜಗತ್ತಿನಲ್ಲೆಲ್ಲಾ ಗೌರವವನ್ನು ಸಂಪಾದಿಸಿ ಹೆಮ್ಮೆಯ ರಾಷ್ಟ್ರವಾಗಿ ಹೊರಹೊಮ್ಮಿದ್ದು. ಆದರೆ ಯಾಕೋ ಭಾರತೀಯ ಮತ್ತೊಮ್ಮೆ ಅಟಲ್ಜಿಯವರ ಕೈ ಹಿಡಿಯಲಿಲ್ಲ. ಅಟಲ್ಜಿ ಎಲ್ಲರನ್ನೂ ಸಮಾನವಾಗಿ ಪ್ರೀತಿಸಿದ್ದರು. ಅಭಿವೃದ್ಧಿಯ ವಿಚಾರದಲ್ಲಿ ಎಲ್ಲರಿಗಿಂತ ಮುಂದಿದ್ದರು. ಜನಸಾಮಾನ್ಯರ ಮಾತುಗಳನ್ನು ಕೇಳುವಷ್ಟು ತಾಳ್ಮೆ ವ್ಯವಧಾನ ಅವರಿಗಿತ್ತು. ಖಂಡಿತವಾಗಿಯೂ ಯಾವುದರಲ್ಲೂ ಅವರಿಗೆ ಕೊರತೆ ಇರಲಿಲ್ಲ. ಆದರೂ 2004 ರ ಚುನಾವಣೆಯಲ್ಲಿ ಅವರನ್ನು ನಾವು ಸೋಲಿಸಿಬಿಟ್ಟೆವು. ಹಾಗೆ ನೋಡಿದರೆ ಅಟಲ್ಜಿ ತೀರಿಕೊಂಡಿದ್ದು ಮೊನ್ನೆಯಲ್ಲ, 2004 ರ ಚುನಾವಣೆಯ ಫಲಿತಾಂಶದ ದಿನವೇ ಅವರು ಸತ್ತು ಹೋಗಿದ್ದರು. ಈಗ ನಾವು ಸುರಿಸುತ್ತಿರುವ ಕಣ್ಣೀರು ಅವರ ದೇಹ ನಮ್ಮೊಂದಿಗಿಲ್ಲ ಎಂಬ ಕಾರಣಕ್ಕಷ್ಟೆ. ಅವರನ್ನು ಅಂದೇ ನಾವು ಕೊಂದುಬಿಟ್ಟಿದ್ದೆವು. ಅದರ ಶಾಪವೇ ಮುಂದಿನ 10 ವರ್ಷಗಳ ಕಾಲ ನಮ್ಮನ್ನು ಕಾಂಗ್ರೆಸ್ ಆಡಳಿತವಾಗಿ ಕಾಡಿದ್ದು.

ಈಗ ಮತ್ತೊಂದು ರತ್ನ ಗದ್ದುಗೆಯ ಮೇಲಿದೆ. ಮತ್ತೊಂದು ಚುನಾವಣೆಯೂ ಮುಂದಿದೆ. ಪುಣ್ಯ ಗಳಿಕೆಯಾಗಬೇಕೋ ಶಾಪಕ್ಕೆ ಒಳಗಾಗಬೇಕೊ ನಮಗೆ ಬಿಟ್ಟಿದ್ದು.

Comments are closed.