ವಿಭಾಗಗಳು

ಸುದ್ದಿಪತ್ರ


 

ಅತೃಪ್ತರ ಸಂತೆಯಲ್ಲಿ ನಾಕಾಣೆ ವಿಕಾಸ!

ಇವೆಲ್ಲ ಗೊಂದಲಗಳನ್ನು ಮೀರಿ ಆನಂತರವೂ ಅಧಿಕಾರದಲ್ಲಿ ಉಳಿಯುವ ಖಾತ್ರಿಯಾದರೆ ವಿಕಾಸದ ಮೊದಲ ಹೆಜ್ಜೆಗಳು ಕಾಣಲಾರಂಭಿಸುತ್ತವೆ. ಹಾಗೆ ವಿಕಾಸ ಮಾಡುವ ಭರವಸೆ ಕಳೆದು ಹೋದಾಗಲೇ ಆತುರದ ಘೋಷಣೆಗಳು ನಡೆದುಬಿಡೋದು. ಟಿಪ್ಪು ಜಯಂತಿಯನ್ನು ನಿಲ್ಲಿಸಿದುದರ ಹಿಂದೆ ಇದೇ ಆತುರ ಕಾಣುತ್ತದೆ.

ಅಧಿಕಾರ ಸಲೀಸಲ್ಲ. ಅತೃಪ್ತರ ಸಂತೆಯ ನಡುವೆ ತೃಪ್ತಿಯ ಆಡಳಿತ ಕೊಡುವುದು ನಿಜಕ್ಕೂ ಕಷ್ಟವಿದೆ. ಅದಾಗಲೇ ಅನ್ಯಪಕ್ಷಗಳಿಂದ ಬಂದು ಅಧಿಕಾರ ನಡೆಸಲು ಯಡ್ಯೂರಪ್ಪನವರಿಗೆ ಸಹಕಾರಿಯಾಗಿ ನಿಂತ, ಪಕ್ಷಭೇದವಿಲ್ಲದ ಅತೃಪ್ತರು ಇಲ್ಲಿಯೂ ತಮ್ಮ ಅತೃಪ್ತಿಯನ್ನು ಖಂಡಿತ ಹೊರಹಾಕಲಿದ್ದಾರೆ. ಇನ್ನು ಪಕ್ಷದೊಳಗಿನ ಅತೃಪ್ತರು ಈಗ ಬೆಳಕಿಗೆ ಬರಲಿದ್ದಾರೆ. ಅನೇಕ ಬಾರಿ ಗೆದ್ದವರು, ಜಾತಿಯ ಪ್ರಾಬಲ್ಯ ಹೊಂದಿದವರು, ಸ್ತ್ರೀಯರು ಭಿನ್ನ-ಭಿನ್ನ ಕಾರಣಗಳಿಂದ ಮಂತ್ರಿ ಕುಚರ್ಿಗೆ ಟವೆಲ್ಲು ಹಾಕಿಟ್ಟವರೆಲ್ಲರೂ ಈಗ ಸ್ವಪಕ್ಷೀಯ ಅತೃಪ್ತರೇ. ಇವರೆಲ್ಲರನ್ನೂ ಸಂಭಾಳಿಸಿ ಸಮರ್ಥ ಅಧಿಕಾರವನ್ನು ನಡೆಸುವುದು ನಿಜಕ್ಕೂ ತ್ರಾಸದಾಯಕವೇ! ರಾಜಕಾರಣದ ನಡೆ-ನುಡಿಗಳು ಅಸಹ್ಯಕರವೇ ಸರಿ. ಪ್ರತಿಯೊಬ್ಬರಿಗೂ ಚುನಾವಣೆಯಲ್ಲಿ ಗೆಲ್ಲುವುದು ಜನರ ಸೇವೆ ಮಾಡುವ ಭಾವನೆಗಾಗಿ ಅಲ್ಲ, ಬದಲಿಗೆ ಅಧಿಕಾರದ ಹಜಾರದಲ್ಲಿ ಆನಂದದಿಂದ ಮೆರೆಯಲು ಮಾತ್ರ. ಗೆದ್ದವರಿಗೆ ಅಧಿಕಾರ ಬೇಕು. ಅಧಿಕಾರವಷ್ಟೇ ಅಲ್ಲ, ಸೂಕ್ತವಾದ ಸ್ಥಾನಮಾನಗಳೇ ಬೇಕು. ಈ ಸ್ಥಾನಮಾನಗಳನ್ನು ಕೇಳುವಾಗಲೂ ಅವರು ಮುಂದಿಡುವ ಚಚರ್ೆ ಬಲು ವಿಶಿಷ್ಟವಾದ್ದು. ಕೆಲವರು ಜಾತಿಯ ಕಾರಣಕ್ಕಾಗಿ ಅಧಿಕಾರ ಬಯಸುತ್ತಾರೆ. ಕೆಲವರು ಲಿಂಗದ ಕಾರಣಕ್ಕಾಗಿ, ಇನ್ನೂ ಕೆಲವರು ಎಷ್ಟು ಬಾರಿ ಗೆದ್ದಿದ್ದೇವೆ ಎಂಬ ಆಧಾರದ ಮೇಲೆಯೇ ಪ್ರಭಾವಿ ಸ್ಥಾನಮಾನ ಬಯಸುತ್ತಾರೆ. ಸದ್ಯದಮಟ್ಟಿಗೆ ಬಿಜೆಪಿಯಲ್ಲಿ ತೃಪ್ತರು ಇಬ್ಬರು ಮಾತ್ರ. ಸ್ವತಃ ಯಡ್ಯೂರಪ್ಪನವರು ಮತ್ತು ಸ್ಪೀಕರ್ ಆಗಿ ಆಯ್ಕೆಗೊಂಡಿರುವ ಕಾಗೇರಿಯವರು. ಕಾಗೇರಿಯವರ ತೃಪ್ತಿಯ ಮಾನದಂಡಗಳೇನೆಂಬುದು ಅವರ ಅಂತರಂಗಕ್ಕೆ ಮಾತ್ರ ಗೊತ್ತು. ಒಂದೇ ಮಾತಿನಲ್ಲಿ ಹೇಳುವುದಾದರೆ ಈ ಒಂದೂವರೆ ವರ್ಷದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಟೇಕ್ ಆಫ್ ಆಗಿರಲಿಲ್ಲ. ಈಗ ಹೊಸ ಸಕರ್ಾರ ಟೇಕ್ ಆಫ್ ಆಗುವ ಲಕ್ಷಣವೂ ಸುಲಭವೆನಿಸುತ್ತಿಲ್ಲ!

6

ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಸಮರ್ಪಕವಾಗಿ ಜೊತೆಯಾಗಬಲ್ಲ ಇಬ್ಬರು ಉಪಮುಖ್ಯಮಂತ್ರಿಗಳನ್ನು ಕೊಡಲಾಗಿದೆ. ಕನರ್ಾಟಕದಲ್ಲಿಯೂ ಹಾಗೆಯೇ ಮಾಡುತ್ತಾರೆಂದು ಕಾಯುತ್ತಾ ಕುಳಿತಿದ್ದಾರೆ. ಆದರೆ ಕಲ್ಪನೆಗಳಲ್ಲಿರುವ ಆ ಉಪಮುಖ್ಯಮಂತ್ರಿ ಹುದ್ದೆಗೆ ಕನಿಷ್ಠಪಕ್ಷ ಐದು ಮಂದಿಯಾದರೂ ಆಕಾಂಕ್ಷಿಗಳಿದ್ದಾರೆ. ಯಾರ ತೆಕ್ಕೆಗೆ ಆ ಸ್ಥಾನವನ್ನು ಹಾಕಿದರೂ ಉಳಿದಷ್ಟೂ ಜನ ಅತೃಪ್ತರೇ. ಇನ್ನು ಹಾಗೆ ತಪ್ಪಿದವರಿಗೆ ಗೃಹಖಾತೆಯೋ ಹಣಕಾಸು, ಭಾರಿ ಕೈಗಾರಿಕೆಗಳೋ ದೊರೆತರೆ ಸಮಾಧಾನ. ಅಪ್ಪಿತಪ್ಪಿ ಅದು ಬೇರೆಯವರ ತೆಕ್ಕೆಗೆ ಹೊರಟರೆ ಅವರ ಅತೃಪ್ತಿಯ ಮಾಪನ ಮಾಡುವುದೂ ಅಸಾಧ್ಯ. ಉಪಮುಖ್ಯಮಂತ್ರಿ ಹುದ್ದೆಯನ್ನು ಮನಸ್ಸಿನಿಂದ ಮೊದಲೇ ತೆಗೆದಿಟ್ಟು ಆನಂತರದ ಪ್ರಮುಖವಾಗಿರುವ ಈ ಖಾತೆಗಳಿಗೆ ಅದಾಗಲೇ ಕಾವಲು ಕಾಯುತ್ತಿರುವವರು ಅನೇಕರಿದ್ದಾರೆ. ಅವರಿಗೂ ಅಷ್ಟೇ ಸವಾಲು. ಈ ರಾಜ್ಯದ ಪ್ರಭಾವಿ ಸಮುದಾಯಗಳಾದ ಲಿಂಗಾಯತರು ಮತ್ತು ಗೌಡರನ್ನು ಮಂತ್ರಿಮಂಡಲದಲ್ಲಿ ಸರಿದೂಗಿಸಬೇಕಲ್ಲ. ಮುಖ್ಯಮಂತ್ರಿ ಪಟ್ಟ ಲಿಂಗಾಯತರ ಪಾಲಾಗಿರುವುದರಿಂದ ಉಪಮುಖ್ಯಮಂತ್ರಿ ಬೇರೊಂದು ಪ್ರಭಾವಿ ಜಾತಿಯಿಂದಲೇ ಬರಬೇಕು. ಜೊತೆಗೆ ರಾಜ್ಯದಲ್ಲಿ ವ್ಯಾಪಕವಾಗಿರುವ ದಲಿತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು. ಇವುಗಳನ್ನು ಸಂಭಾಳಿಸಿ ಮುಂದಡಿಯಿಟ್ಟರೆ ಉಳಿದಿರುವ ಖಾತೆಗಳನ್ನು ಪ್ರಾದೇಶಿಕವಾಗಿ ಹಂಚಬೇಕು. ಉತ್ತರ ಕನರ್ಾಟಕಕ್ಕೆ ಪಾಲು ದೊಡ್ಡದ್ದೋ ಕರಾವಳಿಗೆ ಸಿಂಹಪಾಲೋ ಯೋಚನೆ ಮಾಡಬೇಕಲ್ಲ. ಹಾಗಂತ ಮೈಸೂರು ಪ್ರಾಂತ್ಯವನ್ನು ಬಿಡುವುದಾದರೂ ಹೇಗೆ? ಜೆಡಿಎಸ್ನ ಪ್ರಾಬಲ್ಯ ದಿನೇ ದಿನೇ ಕುಸಿಯುತ್ತಿರುವುದರಿಂದ ಅಲ್ಲಿ ಸಮರ್ಥವಾಗಿರುವಂತಹ ವ್ಯಕ್ತಿಯನ್ನು ಗುರುತಿಸಿ ಅವರಿಗೆ ಅವಕಾಶ ಮಾಡಿಕೊಟ್ಟರೆ ಪಕ್ಷ ಬೆಳೆಯುತ್ತದೆ ಎಂಬ ವಾದಕ್ಕೇನೂ ಕೊರತೆಯಿಲ್ಲ. ಇನ್ನು ಕೋಲಾರ ಭಾಗವೂ ಹಾಗೆಯೇ. ಕೆ.ಎಚ್ ಮುನಿಯಪ್ಪನಂತಹ ದಿಗ್ಗಜನನ್ನು ಧ್ವಂಸಗೊಳಿಸಿ ಭಾಜಪಕ್ಕೆ ಗೆಲುವು ತಂದುಕೊಟ್ಟ ಆ ಭಾಗದ ಅಭಿವೃದ್ಧಿಗೆ ಸೂಕ್ತ ಪ್ರಾತಿನಿಧ್ಯ ಬೇಡವೇ? ಹಾಗಂತ ಎಲ್ಲವೂ ಮುಗಿದಿಲ್ಲ. ಗೆದ್ದವರಲ್ಲನೇಕರು ಮಹಿಳೆಯರೂ ಇದ್ದಾರಲ್ಲ. ಅವರನ್ನೂ ಮುಖ್ಯವಾಹಿನಿಗೆ ತರಬೇಕು. ಅಧಿಕಾರದ ಸವಿ ಅವರೂ ಉಣ್ಣುವಂತೆ ಮಾಡಬೇಕು. ಇವೆಲ್ಲದರ ನಂತರ ಈಗಾಗಲೇ ಪಕ್ಷಬಿಟ್ಟು ಬಂದವರನ್ನು ಗೆಲ್ಲಿಸಿಕೊಂಡು ಅಧಿಕಾರವನ್ನು ಸುಭದ್ರಗೊಳಿಸಿಕೊಳ್ಳಬೇಕು. ಹಾಗಂತ ಅದೇನೂ ಕಟ್ಟಿಟ್ಟ ಬುತ್ತಿಯಲ್ಲ. ಹೊಸಕೋಟೆಯಲ್ಲಿ ಕಾಂಗ್ರೆಸ್ಸಿನ ಅಭ್ಯಥರ್ಿಯೇ ಬಿಜೆಪಿಗೆ ಬಂದಿದ್ದಾರೆ. ಅಲ್ಲಿ ಇಷ್ಟೂ ದಿನಗಳ ಕಾಲ ಕಂಠಮಟ್ಟ ಜಿದ್ದಾಜಿದ್ದಿ ನಡೆಸುತ್ತಲೇ ಭಾಜಪ ಮತ್ತು ಕಾಂಗ್ರೆಸ್ಸುಗಳು ಬದುಕಿದ್ದುದು. ಈಗ ಭಾಜಪ ಅದನ್ನು ಹೇಗೆ ಸ್ವೀಕರಿಸುತ್ತದೋ ನೋಡಬೇಕು. ಅಲ್ಲಿನ ನಾಯಕನನ್ನು ಪಕ್ಕಕ್ಕೆ ಸರಿಸಿ ಆಮದಿತ ಅಭ್ಯಥರ್ಿಯನ್ನು ಗೆಲ್ಲಿಸಲು ಕಾರ್ಯಕರ್ತರು ಒಪ್ಪುವರಾ? ಗೊತ್ತಿಲ್ಲ. ಇದೇ ಕಥೆ ಕೆ.ಆರ್.ಪುರಮ್ದೂ ಕೂಡ. ಅನೇಕ ಕಡೆಗಳಲ್ಲಿ ಭಾಜಪದ ವಿರುದ್ಧ ಗೆದ್ದ ಕಾಂಗ್ರೆಸ್ ನಾಯಕರ ಗೆಲುವಿನ ಅಂತರ ಸಾವಿರಕ್ಕಿಂತಲೂ ಕಡಿಮೆಯಿತ್ತು. ಅಂಥವರನ್ನು ಮತ್ತೊಮ್ಮೆ ಚುನಾವಣೆಯಲ್ಲಿ ಭಾಜಪದಿಂದ ಗೆಲ್ಲಿಸಿಕೊಳ್ಳುವುದಕ್ಕೆ ತಳಮಟ್ಟದ ಕಾರ್ಯಕರ್ತರು ಒಪ್ಪುತ್ತಾರಾ? ಕೇಳಿಕೊಳ್ಳಲೇಬೇಕಾದ ಪ್ರಶ್ನೆ!

7

ಇವೆಲ್ಲ ಗೊಂದಲಗಳನ್ನು ಮೀರಿ ಆನಂತರವೂ ಅಧಿಕಾರದಲ್ಲಿ ಉಳಿಯುವ ಖಾತ್ರಿಯಾದರೆ ವಿಕಾಸದ ಮೊದಲ ಹೆಜ್ಜೆಗಳು ಕಾಣಲಾರಂಭಿಸುತ್ತವೆ. ಹಾಗೆ ವಿಕಾಸ ಮಾಡುವ ಭರವಸೆ ಕಳೆದು ಹೋದಾಗಲೇ ಆತುರದ ಘೋಷಣೆಗಳು ನಡೆದುಬಿಡೋದು. ಟಿಪ್ಪು ಜಯಂತಿಯನ್ನು ನಿಲ್ಲಿಸಿದುದರ ಹಿಂದೆ ಇದೇ ಆತುರ ಕಾಣುತ್ತದೆ. ಹಾಗೆ ನೋಡಿದರೆ ಆ ಜಯಂತಿಗೆ ಸದ್ದಿಲ್ಲದೇ ಮಮರ್ಾಘಾತ ಕೊಟ್ಟಿದ್ದು ಕುಮಾರಸ್ವಾಮಿ. ಸಕರ್ಾರ ನಿಷೇಧಿಸದೇ ನಡೆಸುವ ಉತ್ಸಾಹವನ್ನು ಮುಸಲ್ಮಾನರಲ್ಲಿ ಉಳಿಸದಂತೆ ಅವರು ಮಾಡಿದ ಪ್ರಯತ್ನ ನಿಜಕ್ಕೂ ಮೆಚ್ಚುವಂಥದ್ದು. ಯಡ್ಯೂರಪ್ಪ ಆತುರಕ್ಕೆ ಬಿದ್ದು ಈ ನಿಷೇಧ ಮಾಡಿದುದರ ಪರಿಣಾಮವಾಗಿ ಮುಸಲ್ಮಾನರು ಕಳೆದ ಬಾರಿಗಿಂತ ಜೋರಾಗಿ ಟಿಪ್ಪು ಜಯಂತಿಯನ್ನು ಮಾಡುವಂತಾಗದಿದ್ದರೆ ಸಾಕು!

ಮಾಡಲು ಕೆಲಸ ಬೆಟ್ಟದಷ್ಟಿದೆ. ಐದು ವರ್ಷಗಳ ಕಾಂಗ್ರೆಸ್ಸಿನ ದುರಾಡಳಿತ, ಎರಡು ವರ್ಷಗಳ ಮೈತ್ರಿ ಅರಾಜಕತೆ. ಇವೆರಡನ್ನೂ ಮರೆಯುವಂತೆ ಮಾಡುವ ಆಡಳಿತ ಬೇಕಾಗಿದೆ. ಉಳಿದಿರುವ ಸಮಯ ಬಲು ಕಡಿಮೆ. ಕೆಲಸಗಳು ಮಾತ್ರ ಬೆಟ್ಟದಷ್ಟು. ಪ್ರಯತ್ನ ಸಫಲವಾದರೆ ಸಾಕು!!

Comments are closed.