ವಿಭಾಗಗಳು

ಸುದ್ದಿಪತ್ರ


 

ಅಧಿಕಾರಕ್ಕಾಗಿ ಯಾರನ್ನು ಬೇಕಾದರೂ ದೇಶದ್ರೋಹಿ ಎನ್ನುತ್ತದೆ ಕಾಂಗ್ರೆಸ್!

ಇಸ್ರೋ ಮತ್ತೊಮ್ಮೆ ಸುದ್ದಿಯಲ್ಲಿದೆ. ಅಲ್ಲಿನ ವಿಜ್ಞಾನಿ ನಂಬಿ ನಾರಾಯಣನ್ಗೆ ಕೇರಳ ಸಕರ್ಾರ ಐವತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂಬ ಆದೇಶವನ್ನು ಸವರ್ೋಚ್ಚ ನ್ಯಾಯಾಲಯ ಹೊರಡಿಸಿದೆ. ಬಹಳ ಜನರಿಗೆ ನಂಬಿ ಮರೆತೇ ಹೋಗಿದ್ದರು. ಈಗ ಎಲ್ಲವೂ ಹಸಿಯಾಗಿಬಿಟ್ಟಿದೆ. ಈ ದೇಶದ ಪ್ರತಿಷ್ಠಿತ ಸಂಸ್ಥೆಯೊಂದಕ್ಕೆ ಕಳಂಕ ಮೆತ್ತಲೆತ್ನಿಸಿದ ಕಾಂಗ್ರೆಸ್ಸಿನ ಬಂಡವಾಳ ಈಗ ಬಯಲಾಗಿದೆ.

3

ಕೇರಳದಲ್ಲಿ ಆಗ ಕರುಣಾಕರನ್ ಕಾಂಗ್ರೆಸ್ಸಿನ ಮುಖ್ಯಮಂತ್ರಿ. ಅವರನ್ನು ಕಂಡರೆ ಮುಂದೆ ದೇಶದ ಗೃಹ ಸಚಿವರಾದ ಆಂಟನಿಯವರಿಗೆ ಅಷ್ಟಕ್ಕಷ್ಟೇ. ಅವರದ್ದೊಂದು ತಂಡ ಒಮ್ಮನ್ ಚಾಂಡೀ ನೇತೃತ್ವದಲ್ಲಿ ಮುಖ್ಯಮಂತ್ರಿಯವರನ್ನು ಕೆಳಗಿಳಿಸಲು ದೊಡ್ಡದೊಂದು ಪ್ರಯತ್ನ ಶುರುಮಾಡಿತು. ಆ ಹೊತ್ತಿನಲ್ಲೇ ಅವರ ಕೈಗೆ ಸಿಕ್ಕ ಪ್ರಕರಣ ನಂಬಿ ನಾರಾಯಣನ್ದು. ವಾಸ್ತವವಾಗಿ ನಂಬಿ ಬಂಧನಕ್ಕೆ ಕೆಲವು ತಿಂಗಳ ಮುನ್ನ ಭಾರತ ರಾಕೆಟ್ ಲಾಂಚಿಂಗ್ನಲ್ಲಿ ತನ್ನ ಮೊದಲ ಮೈಲಿಗಲ್ಲನ್ನು ಸಾಧಿಸಿತ್ತು. ಇದರಿಂದ ಜಗತ್ತಿನ ಕೆಲವು ರಾಷ್ಟ್ರಗಳು ಕಿರಿಕಿರಿಗೆ ಒಳಪಟ್ಟಿದ್ದವು. ಅಮೆರಿಕಾ ಅಂತೂ ಮುಂದಿನ ದಿನಗಳಲ್ಲಿ ಭಾರತ ಸಾಧಿಸಬಹುದಾದ ವಿಕ್ರಮವನ್ನು ನೆನೆದುಕೊಂಡೇ ಗಾಬರಿಯಾಗಿಬಿಟ್ಟಿತ್ತು. ಹೇಗಾದರೂ ಮಾಡಿ ಭಾರತದ ಈ ಮುನ್ನಡೆಗೆ ತಡೆ ಹಾಕಲು ಅದು ಹವಣಿಸುತ್ತಲೇ ಇತ್ತು. ದೇಶದ ತುಂಬೆಲ್ಲಾ ಹರಡಿಕೊಂಡಿದ್ದ ಸಿಐಎ ಏಜೆಂಟುಗಳು ನಂಬಿಯನ್ನು ಸಿಲುಕಿ ಹಾಕಿಸುವ ಮೂಲಕ ಇಸ್ರೊದ ಮಾನಸಿಕ ಸ್ಥೈರ್ಯವನ್ನು ಕದಡಿಬಿಡಬೇಕೆಂದು ನಿಶ್ಚಯಿಸಿದರು. ಅದಕ್ಕೆ ಬೆಂಬಲವಾಗಿಯೇ ಕೆಲಸ ಮಾಡಿದ್ದು ಕಾಂಗ್ರೆಸ್ಸಿನ ಎ.ಕೆ ಆಂಟನಿ ಬಳಗ.

ನಂಬಿ ಇಸ್ರೊದ ಕ್ರಯೋಜೆನಿಕ್ ಇಂಜಿನ್ಗಳ ವಿಭಾಗವನ್ನು ಮುನ್ನಡೆಸುತ್ತಿದ್ದರು. 1970 ರ ದಶಕದಲ್ಲಿ ಅಬ್ದುಲ್ ಕಲಾಂ ಮತ್ತವರ ತಂಡ ಸಾಲಿಡ್ ಮೋಟಾರುಗಳ ಮೇಲೆ ಕೆಲಸ ಮಾಡುತ್ತಿದ್ದಾಗ ನಂಬಿ ದ್ರವ ಇಂಧನದ ಇಂಜಿನುಗಳ ಕುರಿತಂತೆ ಸಂಶೋಧನೆ ಆರಂಭಿಸಿ ಯಶಸ್ವಿಯೂ ಆಗಿದ್ದರು. ಅವರ ಪ್ರಯಾಸದಿಂದಾಗಿಯೇ 600 ಕೆ.ಜಿ ಹೊರೆಯನ್ನು ಹೊರಬಲ್ಲ ದ್ರವ ಇಂಧನ ಬಳಸುವ ಇಂಜಿನ್ ಅಭಿವೃದ್ಧಿಗೊಂಡಿತು. ಅಲ್ಲಿಂದಾಚೆಗೆ ಕ್ಷಮತೆ ಹೆಚ್ಚಿಸುತ್ತಾ ಹೋಗಿ ಇಂದಿನ ಹಂತಕ್ಕೆ ನಾವು ತಲುಪಿದ್ದು. ಎಲ್ಲವೂ ಚೆನ್ನಾಗಿಯೇ ಇತ್ತು. 1992 ರಲ್ಲಿ ಭಾರತ ರಷ್ಯಾದೊಂದಿಗೆ ಕ್ರಯೋಜೆನಿಕ್ ಇಂಜಿನ್ನುಗಳ ತಂತ್ರಜ್ಞಾನ ವಗರ್ಾಯಿಸುವುದರ ಕುರಿತಂತೆ ಒಪ್ಪಂದವೊಂದಕ್ಕೆ ಸಹಿ ಹಾಕಿತು. ಇದೇ ತಂತ್ರಜ್ಞಾನವನ್ನು ಅಮೆರಿಕಾ ಮತ್ತು ಫ್ರಾನ್ಸ್ಗಳು ನಮಗೆ ವಗರ್ಾಯಿಸಲು ಇನ್ನೂ ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದವು. ಈಗ ರಷ್ಯಾ ನಮಗೆ ಕೊಡುವ ಬೆಲೆಗಿಂತಲೂ ಅಮೇರಿಕಾ 400 ಪ್ರತಿಶತ ಹೆಚ್ಚು ಹಣದ ಬೇಡಿಕೆ ಮಂಡಿಸಿತ್ತು. ರಷ್ಯಾ ಕಡಿಮೆ ಬೆಲೆಗೆ ಕೊಡುವುದೆಂದು ಅರಿವಾದೊಡನೆ ಕುಪಿತ ಅಮೇರಿಕಾ ರಷ್ಯಾಕ್ಕೆ ಪತ್ರ ಬರೆದು ಈ ತಂತ್ರಜ್ಞಾನದ ವಗರ್ಾವಣೆ ಆಗಿದ್ದೇ ಆದರೆ ರಷ್ಯಾವನ್ನು ಸೆಲೆಕ್ಟ್ 5 ಗುಂಪಿನಿಂದ ಹೊರದಬ್ಬುವುದಾಗಿ ಎಚ್ಚರಿಸಿತು. ಬೆದರಿದ ರಷ್ಯಾ ಒಂದು ಹೆಜ್ಜೆ ಹಿಂದಿಟ್ಟುಬಿಟ್ಟಿತು. ಆದರೆ ಹಾಗಂತ ರಷ್ಯಾ ಪೂರ್ಣ ನಮ್ಮ ಕೈ ಬಿಡಲಿಲ್ಲ. ಆ ವೇಳೆಗೆ ಅದರ ಗೋಡೌನುಗಳಲ್ಲಿ ಇಂಜಿನ್ನುಗಳು ಕೊಳೆಯುತ್ತಾ ಬಿದ್ದಿದ್ದವು. ಜಗತ್ತಿಗೆ ಗೊತ್ತಾಗದಂತೆ ಭಾರತದ ವಿಮಾನಗಳು ಅದನ್ನು ಹೊತ್ತೊಯ್ಯಬಹುದೆಂಬ ಅವಕಾಶವನ್ನು ರಷ್ಯಾ ಮಾಡಿಕೊಟ್ಟಿತು. ಅಚ್ಚರಿಯೇನು ಗೊತ್ತೇ? ಏರ್ ಇಂಡಿಯಾ ಅಮೆರಿಕಾದ ವ್ಯಾಪಾರವನ್ನು ಕಳೆದುಕೊಳ್ಳುವ ಹೆದರಿಕೆಯಿಂದ ಈ ವಹಿವಾಟಿಗೆ ಮುಂದೆ ಬರಲಿಲ್ಲ. ಕೊನೆಗೆ ರಷ್ಯಾದ್ದೇ ವಿಮಾನ ಕಂಪನಿಯೊಂದು ಭಿನ್ನ-ಭಿನ್ನ ಹಂತಗಳಲ್ಲಿ ಭಾರತಕ್ಕೆ ಇವುಗಳನ್ನು ತಲುಪಿಸುವುದಾಗ ಭರವಸೆ ಕೊಟ್ಟಿತು. ಈ ಮಾತುಕತೆಯಲ್ಲಿ ಬಲು ಮುಖ್ಯವಾದ ಪಾತ್ರವನ್ನು ನಂಬಿ ವಹಿಸಿದ್ದರು. ಭಾರತವು ರಷ್ಯಾವನ್ನೇ ನೆಚ್ಚಿಕೊಂಡಿತ್ತೆಂದೇನೂ ಇಲ್ಲ. ಅಬ್ದುಲ್ ಕಲಾಂ ಮತ್ತವರ ತಂಡ ಸಾಲಿಡ್ ಮೋಟಾರುಗಳ ಮೇಲೆ ಕೆಲಸ ಮಾಡುತ್ತಿದ್ದರೆ ನಂಬಿ ಹಠ ಹಿಡಿದು ಲಿಕ್ವಿಡ್ ಇಂಜಿನ್ನುಗಳ ಮೇಲೆ ಕೆಲಸ ಆರಂಭಿಸಿಬಿಟ್ಟಿದ್ದರು. ಅದು ಯಶಸ್ವಿಯಾದರೆ ನಿಸ್ಸಂಶಯವಾಗಿ ಭಾರತ ಅಮೆರಿಕಾವನ್ನು ಹಿಂದಿಕ್ಕಿ ಉಪಗ್ರಹ ಉಡಾವಣೆಯಲ್ಲಿ ಜಗನ್ಮಾನ್ಯವಾಗಬಹುದೆಂಬ ಸತ್ಯ ಎಲ್ಲರಿಗೂ ಗೊತ್ತಿತ್ತು. ಈ ಹಿನ್ನೆಲೆಯಲ್ಲೇ ಭಾರತ ವಿಕಾಸ್ ಎಂಜಿನ್ನುಗಳ ತಯಾರಿಗೆ ನಿಂತಾಗ ಜಗತ್ತು ಆಸ್ಥೆಯಿಂದ ಗಮನಿಸುತ್ತಿತ್ತು. ಈ ಯೋಜನೆಯ ಮುಖ್ಯ ಭೂಮಿಕೆಯಲ್ಲಿದ್ದವರು ನಂಬಿ ನಾರಾಯಣನ್. ಸಹಜವಾಗಿಯೇ ಸ್ಪೇಸ್ ಟೆಕ್ನಾಲಜಿಯಲ್ಲಿ ಏಕಸ್ವಾಮ್ಯ ಹೊಂದುವತ್ತ ಸಾಗುತ್ತಿದೆ ಎಂದು ಅರಿವಾದೊಡನೆ ಅಮೇರಿಕಾ ಅದನ್ನು ತಡೆಯುವ ಎಲ್ಲ ಬಳಸು ಮಾರ್ಗಗಳನ್ನು ಪ್ರಯೋಗಿಸಲಾರಂಭಿಸಿತು.

7

ಅದಕ್ಕಿದ್ದ ಮಾರ್ಗ ಒಂದೇ. ಈ ಯೋಜನೆಯಲ್ಲಿ ನಿರತರಾದವರನ್ನು ಖರೀದಿ ಮಾಡುವುದು, ಸಾಧ್ಯವಾಗದಿದ್ದರೆ ಅವರನ್ನು ಸುಳ್ಳು ಕೇಸಿನಲ್ಲಿ ಸಿಕ್ಕು ಹಾಕಿಸಿ ಮುಂದೆ ಯಾರೂ ಇಂಥದ್ದೊಂದು ಸಾಹಸಕ್ಕೆ ಕೈ ಹಾಕದಿರುವಂತೆ ಮಾಡುವುದು. ಸಹಜವಾಗಿಯೇ ಕಣ್ಣಿಗೆ ಬಿದ್ದವರು ನಂಬಿ ನಾರಾಯಣನ್. 1994 ರ ಅಕ್ಟೋಬರ್ ತಿಂಗಳಲ್ಲಿ ಕೇರಳದ ಪೊಲೀಸರು ನಂಬಿಯ ಮೇಲೆ ಗುರುತರವಾದ ಆರೋಪವನ್ನೇ ಹೊರಿಸಿಬಿಟ್ಟಿರು. ಮಾಲ್ಡೀವ್ಸ್ನ ಗೂಢಚಾರರಾದ ಮರಿಯಂ ರಷೀದಾ ಮತ್ತು ಫಾಸಿಯಾ ಹಸನ್ ಇವರೀರ್ವರಿಗೂ ವಿಕಾಸ್ ಇಂಜಿನ್ಗೆ ಸಂಬಂಧ ಪಟ್ಟ ರೇಖಾಚಿತ್ರಗಳನ್ನು ನಂಬಿ ಮಾರುತ್ತಿದ್ದಾರೆ ಮತ್ತು ಅದಕ್ಕೆ ಮತ್ತಿಬ್ಬರು ವಿಜ್ಞಾನಿಗಳಾದ ಶಶಿಕುಮಾರನ್ ಮತ್ತು ಚಂದ್ರಶೇಖರ್ ಸಹಕಾರಿಯಾಗಿದ್ದಾರೆ ಎಂದು ವರದಿ ಮಂಡಿಸಿತು. ಬಂಧನಕ್ಕೊಳಗಾದ ಮೂವರನ್ನೂ ಇಂಟೆಲಿಜೆನ್ಸ್ ಬ್ಯೂರೋ ಪ್ರಶ್ನೆಗೆ ಒಳಪಡಿಸಿದ್ದಲ್ಲದೇ ಹಿಂಸೆಗೂ ಗುರಿ ಮಾಡಿತು. ಇಂಟೆಲಿಜೆನ್ಸ್ ಬ್ಯೂರೋ ಹೇಗಾದರೂ ಮಾಡಿ ಈ ಯೋಜನೆಗೆ ಮುಖ್ಯಸ್ಥರಾಗಿದ್ದ ಮುತ್ತು ನಾಯಗಂ ಅವರನ್ನೂ ಒಳತಳ್ಳಬೇಕೆಂಬ ಯೋಜನೆ ಹಾಕಿಕೊಂಡಿತು. ಆದರೆ ಕೈಗೂಡಲಿಲ್ಲ. ಮುಂದೆ ಕೇರಳದ ಡಿಐಜಿ ಸಿಬಿ ಮ್ಯಾಥ್ಯೂ ಅವರ ಕೋರಿಕೆಯ ಮೇರೆಗೆ ಸಿಬಿಐ ವಿಚಾರಣೆಗೆಂದು ಬಂತು. ವಿಚಾರಣೆಯನ್ನು ವ್ಯವಸ್ಥಿತವಾಗಿ ನಡೆಸಿದ ಸಿಬಿಐ ಅನೇಕ ಆಂತರಿಕ ಸಂಗತಿಗಳನ್ನು ಹೊರಗೆ ಬಿಚ್ಚಿಟ್ಟಿತು. ಕೇರಳದ ಪೊಲೀಸರು ಈ ವಿಜ್ಞಾನಿಗಳ ಮೇಲೆ ಮಾಡಿದ ಆರೋಪ ಅದೆಷ್ಟು ಬಾಲಿಶವಾಗಿತ್ತೆಂದರೆ ಕ್ರಯೋಜೆನಿಕ್ ಇಂಜಿನ್ನಿನ ರೇಖಾಚಿತ್ರ ಮಾರಾಟದ ಆರೋಪ ಮೊದಲ ಹಂತಕ್ಕೇ ಸತ್ತಿತ್ತು. ಏಕೆಂದರೆ ಆ ವೇಳೆಗೆ ಭಾರತದ ಬಳಿ ಕ್ರಯೋಜೆನಿಕ್ ಇಂಜಿನ್ನುಗಳೇ ಇರಲಿಲ್ಲ. ರೇಖಾಚಿತ್ರಗಳನ್ನಷ್ಟೇ ಕೊಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಅದಕ್ಕೆ ಸುದೀರ್ಘವಾದ ಇಂಜಿನ್ನುಗಳನ್ನು ಅಭಿವೃದ್ಧಿಪಡಿಸುವ ಆಳವಾದ ಜ್ಞಾನವೂ ಇರಬೇಕು. ವಿಜ್ಞಾನ ಬಲ್ಲ ಪ್ರತಿಯೊಬ್ಬರಿಗೂ ಇರುವ ಸಾಮಾನ್ಯ ಜ್ಞಾನ ಇದು. ಕೇರಳದ ಪೊಲೀಸರು ತಮ್ಮ ದಡ್ಡತನವನ್ನು ಚೆನ್ನಾಗಿಯೇ ಪ್ರದಶರ್ಿಸಿದ್ದರು. ಇನ್ನು ವಿಕಾಸ್ ಎಂಜಿನ್ನಿನ ರೇಖಾ ಚಿತ್ರಗಳನ್ನೇ 200 ಕ್ಕೂ ಹೆಚ್ಚು ಫ್ಯಾಬ್ರಿಕೇಟರ್ಗಳಿಗೆ ಟೆಂಡರ್ ಪ್ರಕ್ರಿಯೆಗೂ ಮುನ್ನ ನೀಡಲಾಗಿತ್ತು. ಹೀಗಾಗಿ ಅದನ್ನು ಮಾರುವ ಕಲ್ಪನೆಯೇ ಮೂರ್ಖತನದ್ದೆನ್ನುವುದರಲ್ಲಿ ಅನುಮಾನವಿರಲಿಲ್ಲ.

2

ಕೆಲವೊಮ್ಮೆ ನಮಗೆ ಬುದ್ಧಿ ಇರುವುದಿಲ್ಲ ನಿಜ. ಆದರೆ ಬುದ್ಧಿವಂತರನ್ನು ಕೇಳಿಯಾದರೂ ನಿರ್ಣಯ ತೆಗೆದುಕೊಳ್ಳಬೇಕೆಂಬ ಸಾಮಾನ್ಯ ಪರಿಕಲ್ಪನೆಯೂ ಕೇರಳ ಪೊಲೀಸರಿಗಿರಲಿಲ್ಲ. ನಂಬಿ ಅವರ ವಿಚಾರಣೆಗೆಂದು ಬಂದ ಇಬ್ಬರು ಕೇರಳ ಪೊಲೀಸರು ನಂಬಿಯವರಿಗೆ ತಮ್ಮ ಹೆಸರನ್ನು ಹೇಳುವಾಗ ಸತ್ಯ, ಧರ್ಮ ಎಂದು ಪರಿಚಯಿಸಿಕೊಂಡಿದ್ದರಂತೆ. ಇದ್ಯಾವುದೋ ಸಾಯಿಕುಮಾರ್ನ ಸಿನಿಮಾ ಕಥೆ ಎಂದು ಸುಮ್ಮನಾಗಿಬಿಡಬೇಡಿ. ತಮ್ಮ ರೆಡಿ ಟು ಫೈರ್ ಕೃತಿಯಲ್ಲಿ ಕೇರಳ ಪೊಲೀಸರ ಮೂರ್ಖತನವನ್ನು ನಂಬಿ ಬಲು ಸ್ಪಷ್ಟವಾಗಿಯೇ ವಿವರಿಸಿದ್ದಾರೆ. ನಂಬಿಗೆ ಹೊಡೆಯಲಾಯ್ತು. ಸಿಕ್ಕ-ಸಿಕ್ಕಲ್ಲಿ ಬಡಿಯಲಾಯ್ತು. ತಾವು ಹೇಳುವುದನ್ನು ಒಪ್ಪಿಕೊಳ್ಳಬೇಕೆಂದು ತಾಕೀತು ಮಾಡಲಾಯ್ತು. ಅತ್ತ ಎಕೆ ಆ್ಯಂಟನಿಯವರ ಪಡೆಯ ಯುವ ನಾಯಕನೊಬ್ಬ ತಮ್ಮ ಫಾಮರ್್ ಹೌಸಿಗೆ ಪತ್ರಕರ್ತರನ್ನು ಕರೆದು ಈ ಕೇಸಿನಲ್ಲಿ ರಮಣ್ ಶ್ರೀವಾಸ್ತವ ಎಂಬ ಕರುಣಾಕರನ್ಗೆ ಆಪ್ತನಾದ ಐಜಿಯೊಬ್ಬರು ಸಿಲುಕಿಕೊಂಡಿದ್ದಾರೆಂಬ ಗುಪ್ತ ಮಾಹಿತಿಯನ್ನು ಹಂಚುತ್ತಿದ್ದ. ಅದರ ಆಧಾರದ ಮೇಲೆ ತಮ್ಮದೇ ಆದ ಶೈಲಿಯ ಕಥೆಯನ್ನು ಕಟ್ಟಿ ಮಲಯಾಳಂ ಮನೋರಮ ಪತ್ರಿಕೆಯನ್ನೂ ಸೇರಿದಂತೆ ಎಡಚಿಂತನೆಯನ್ನು ಹರಡಿಸುವ ಅನೇಕ ಪತ್ರಿಕೆಗಳು ಪ್ರಕಟಿಸಿದವು. ಇದನ್ನು ಆಧಾರವಾಗಿಟ್ಟುಕೊಂಡ ಪೊಲೀಸರು ರಮಣ್ ಶ್ರೀವಾಸ್ತವ ಅವರನ್ನು ಅಪರಾಧಿ ಎಂದು ಗುರುತಿಸಿಬಿಟ್ಟರು. ಒಟ್ಟಾರೆ ಕಾಂಗ್ರೆಸ್ಸಿನ ಉದ್ದೇಶ ಕರುಣಾಕರನ್ರನ್ನು ಕೆಳಗಿಳಿಸಬೇಕೆಂಬುದೇ ಆಗಿತ್ತು. ಸ್ವಲ್ಪ ಬೌದ್ಧಿಕ ಸಾಮಥ್ರ್ಯ ಹೊಂದಿದ್ದ ಇಂಗ್ಲೀಷ್ ಪತ್ರಿಕೆಗಳು ಪೊಲೀಸರು ಮಾಡುತ್ತಿರುವ ಈ ಆರೋಪದಲ್ಲಿ ನಯಾಪೈಸೆಯಷ್ಟೂ ಹುರುಳಿಲ್ಲವೆಂಬುದನ್ನು ಆಗಾಗ ಬರಿಯುತ್ತಲೇ ಇದ್ದರು. ಅಷ್ಟರ ವೇಳೆಗೆ ನಡೆಯಬಾರದ್ದೆಲ್ಲಾ ನಡೆದೇ ಹೋಯ್ತು. ಶಾಲೆಯಲ್ಲಿ ನಂಬಿಯ ಮಗಳು ಗೀತಾಳಿಗೆ ಸಹಪಾಠಿಗಳೆಲ್ಲಾ ಗೂಢಚಾರನ ಮಗಳೆಂದು ಛೇಡಿಸುತ್ತಿದ್ದರು. ನಂಬಿಯವರ ಪತ್ನಿ ಆಟೋದಲ್ಲಿ ದೇವಸ್ಥಾನಕ್ಕೆ ಹೋಗುವಾಗಲೇ ಆಟೋ ಚಾಲಕನಿಗೆ ಈಕೆ ಯಾರೆಂದು ತಿಳಿಯಿತು. ನಡುರಸ್ತೆಯಲ್ಲೇ ಆಕೆಯನ್ನು ಇಳಿಸಿಬಿಟ್ಟ ಆತ. ಮಳೆಯಲ್ಲೂ ಆಕೆ ಸಂಕಟ ಅನುಭವಿಸುತ್ತಿದ್ದಾಳೆ ಎಂಬುದನ್ನು ಯೋಚಿಸುವ ಗೋಜಿಗೂ ಹೋಗಿರಲಿಲ್ಲ. ನಂಬಿಯವರ ಮನೆಯೆದುರಿಗೆ ದಿನಕ್ಕೊಂದು ಸಂಘಟನೆಗಳವರು ಬಂದು ಪ್ರತಿಕೃತಿ ದಹಿಸಿ ಹೋಗುತ್ತಿದ್ದರು. ಇಸ್ರೋದ ಕಛೇರಿಗಳ ಮೇಲೆ ಕಲ್ಲೆಸೆತವೂ ನಡೆದು ಹೋಯ್ತು. ನಂಬಿಯವರ ಸಂಬಂಧಿಕರು ಮನೆಗೆ ಬಂದಾಗಲೂ ಏನು ಮಾಡಬೇಕೆಂದು ತೋಚದೇ ಮೌನಕ್ಕೆ ಶರಣಾಗಿಬಿಡುತ್ತಿದ್ದರು. ಪರಿಸ್ಥಿತಿ ಎಷ್ಟು ಬಿಗಡಾಯಿಸಿತೆಂದರೆ ಅವರ ಪತ್ನಿ ಮಾನಸಿಕ ಖಿನ್ನತೆಗೊಳಗಾದವರು ಆನಂತರ ಎಂದಿಗೂ ಮಾತನಾಡಲೇ ಇಲ್ಲ. ಇಸ್ರೋದ ಮುಖ್ಯಸ್ಥರು ಕಾನೂನಿನ ಚಚರ್ೆಗಳಲ್ಲಿ ತಾವು ಪಾಲ್ಗೊಳ್ಳುವುದಿಲ್ಲವೆಂದು ಕೈಚೆಲ್ಲಿಬಿಟ್ಟರು.

ಕೇಸು ರಾಷ್ಟ್ರೀಯ ಮಹತ್ವ ಪಡೆಯುತ್ತಿದ್ದಂತೆ ಕೇರಳದ ಪೊಲೀಸರ ಮೇಲೆ ಒತ್ತಡ ಹೆಚ್ಚಾಯ್ತು. ಅನಿವಾರ್ಯವಾಗಿ ಈ ಕೇಸಿನ ಸೂತ್ರಧಾರನಾಗಿದ್ದ ಸಿಬಿ ಮ್ಯಾಥ್ಯೂ ಇದನ್ನು ಸಿಬಿಐಗೆ ವಗರ್ಾಯಿಸಿದ. ಸಿಬಿಐ ಪೊಲೀಸರು ಬರುತ್ತಿದ್ದಂತೆ ವೃತ್ತಿಪರತೆಯಿಂದ ಈ ಪ್ರಕರಣದ ತನಿಖೆಗೆ ಇಳಿದರು. ನಂಬಿಯವರ ಈ ಹಿಂದಿನ ನಡತೆಯ ದಾಖಲೆಗಳನ್ನೆಲ್ಲಾ ತೆಗದರು. ಅವರ ಆಪ್ತರನ್ನೆಲ್ಲಾ ಮಾತನಾಡಿಸಿದರು. ನಂಬಿಯವರು ಹೇಳುವ ವಿಚಾರಗಳನ್ನೆಲ್ಲಾ ಬೇರೆ ಬೇರೆ ಹೊತ್ತಲ್ಲಿ ಬೇರೆ ಬೇರೆ ಜನ ದಾಖಲಿಸಿಕೊಂಡು ತಾಳೆ ಹಾಕಿ ನೋಡಿದರು. ಅಗತ್ಯ ಬಿದ್ದಾಗ ಸುಳ್ಳು ಪತ್ತೆ ಹಚ್ಚುವ ಯಂತ್ರದ ಮೂಲಕವೂ ನಂಬಿಯವರ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದರು. ಕೊನೆಗೆ ಕೇರಳದ ಪೊಲೀಸರು ಮಾಡಿರುವ ಆಪಾದನೆಯಲ್ಲಿ ಒಂದಿಷ್ಟೂ ಹುರುಳಿಲ್ಲವೆಂಬುದನ್ನು ವರದಿಯ ರೂಪದಲ್ಲಿ ಕೊಟ್ಟರಲ್ಲದೇ ಕೇರಳ ಸಕರ್ಾರಕ್ಕೆ ಮತ್ತು ಕೇಂದ್ರ ಸಕರ್ಾರಕ್ಕೆ ಗುಪ್ತ ಪತ್ರವನ್ನು ಬರೆದು ಈ ಸುಳ್ಳು ಮೊಕದ್ದಮೆ ದಾಖಲಿಸುವುದಕ್ಕೆ ಕಾರಣರಾದ ಅಧಿಕಾರಿಗಳನ್ನು ವಿಚಾರಣೆಗೆ ಗುರಿಪಡಿಸಬೇಕೆಂದು ಹೇಳಿಯೂ ಇದ್ದರು. ಆದರೆ ಯಾವೊಂದೂ ನಡೆಯಲಿಲ್ಲ. ನಡೆದಿದ್ದು ಕಾಂಗ್ರೆಸ್ಸಿನ ಇಚ್ಛೆಯೊಂದೇ. ಕರುಣಾಕರನ್ ರಾಜಿನಾಮೆ ಕೊಟ್ಟು ಅಧಿಕಾರದಿಂದ ಕೆಳಗಿಳಿದಿದ್ದರು. ಎಕೆ ಆಂಟನಿ ಮುಖ್ಯಮಂತ್ರಿಯಾದರು. ಕೆಲವೇ ತಿಂಗಳೊಳಗೆ ಇವೆಲ್ಲವೂ ಕಾಂಗ್ರೆಸ್ಸಿನ ಚಚರ್ಾ ಕೋಣೆಗಳಲ್ಲಿ ರೂಪು ಪಡೆದ ಕಪೋಲ ಕಲ್ಪಿತ ಕಥೆ ಎಂದು ಕೇರಳಕ್ಕೆ ಗೊತ್ತಾದಾಗ ಜನ ತಿರುಗಿ ಬಿದ್ದರು. ಇದರ ಲಾಭವನ್ನು ಪಡೆದುಕೊಂಡಿದ್ದು ಕಮ್ಯುನಿಸ್ಟರು. ಆಂಟನಿಯ ಸಕರ್ಾರ ಉರುಳಿ ಕಮ್ಯುನಿಸ್ಟರು ಅಧಿಕಾರಕ್ಕೆ ಬಂದರು.

ಇತ್ತ ನಂಬಿ ಏಕಾಂಗಿಯಾಗಿ ತಮ್ಮ ಕೇಸಿನ ವಿಚಾರವಾಗಿ ನ್ಯಾಯಾಲಯದಲ್ಲಿ ಬಡಿದಾಡಲಾರಂಭಿಸಿದರು. ಹಾಗೆ ಅವರು ಬಡಿದಾಡಲು ಕಾರಣವೂ ಇತ್ತು. ತಮಗಾದ ಅವಮಾನಕ್ಕೆ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲೆತ್ನಿಸಿದಾಗ ಮಗಳು ಗೀತಾ ತಂದೆಯ ಬಳಿ ಬಂದು ‘ನೀನೀಗ ಸತ್ತರೆ ನಾವು ಇತಿಹಾಸದುದ್ದಕ್ಕೂ ಗೂಢಚಾರನ ಮಕ್ಕಳಾಗಿಯೇ ಉಳಿದುಬಿಡುತ್ತೇವೆ. ಹೋರಾಡಬೇಕಿರುವುದು ನೀನು ಮಾತ್ರ. ನಿನ್ನ ಪ್ರಾಮಾಣಿಕತೆಯನ್ನು ನೀನು ಸಾಬೀತು ಪಡಿಸಿ ನಮ್ಮೆಲ್ಲರನ್ನೂ ಉಳಿಸಬೇಕು’ ಎಂದು ಕೇಳಿಕೊಂಡಿದ್ದಳಂತೆ. ಅದೇ ನಂಬಿಗೆ ಶಕ್ತಿಯಾಯ್ತು.

4

ತೀರಾ ಮೊನ್ನೆ ಮೊನ್ನೆಯವರೆಗೂ ಸುಪ್ರೀಂಕೋಟರ್ಿನಲ್ಲಿ ಬಡಿದಾಡುತ್ತಾ ತನ್ನ ನಿರಪರಾಧಿತ್ವವನ್ನು ಸಾಬೀತು ಪಡಿಸಿದ್ದಲ್ಲದೇ 50 ಲಕ್ಷ ರೂಪಾಯಿ ಪರಿಹಾರ ಕೇರಳ ಸಕರ್ಾರ ಕೊಡಬೇಕೆಂದು ನಿರ್ಣಯ ತಮ್ಮದಾಗಿಸಿಕೊಂಡು ಬಂದಿದ್ದಾರೆ ಆತ. ನಿರ್ಲಜ್ಜ ಕಾಂಗ್ರೆಸ್ ಸಕರ್ಾರ ಅವರಿಗೆ ಪರಿಹಾರ ಕೊಡಲು ಹಿಂದೇಟು ಹಾಕಿದ್ದು ಏಕೆ ಗೊತ್ತೇನು? ಪರಿಹಾರ ಕೊಟ್ಟರೆ ಇಡಿಯ ಪ್ರಕರಣದ ಹಿಂದೆ ಇದ್ದದ್ದು ತಾವೇ ಎಂಬುದು ಸಮಾಜಕ್ಕೆ ಗೊತ್ತಾಗಿಬಿಡುತ್ತೆ ಎಂಬ ಹೆದರಿಕೆಯಿಂದ. ಬಹಳ ನೋವಿನ ಸಂಗತಿಯೆಂದರೆ ಈ ನಿರ್ಣಯ ಬರುವ ಕೆಲವೇ ಗಂಟೆಗಳ ಮುಂಚೆ ಇನ್ನೊಬ್ಬ ಆರೋಪಿಯಾಗಿದ್ದ ಚಂದ್ರಶೇಖರ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು!

ಭಾರತ ಆಗಸದ ಕ್ಷೇತ್ರದಲ್ಲಿ ತನ್ನ ಪ್ರಭಾವವನ್ನು ಸ್ಥಾಪಿಸಲು ಕನಿಷ್ಠ ಪಕ್ಷ 16 ವರ್ಷಗಳ ಕಾಲ ಕಾಯಬೇಕಾದ ಸ್ಥಿತಿಗೆ ಈ ಪ್ರಕರಣ ದೂಡಿಬಿಟ್ಟಿತು. ತಮ್ಮ ಅಧಿಕಾರಕ್ಕಾಗಿ ಸಿಐಎ ಹಾಕುವ ಒಂದಷ್ಟು ಎಂಜಲು ಕಾಸಿಗಾಗಿ ಕಾಂಗ್ರೆಸ್ಸಿನ, ಎಡಪಕ್ಷದ ನಾಯಕರುಗಳು, ಒಂದಷ್ಟು ಪೊಲೀಸ್ ಅಧಿಕಾರಿಗಳು, ದೇಶದ ಮಾನ-ಗೌರವಗಳನ್ನೇ ಅಡವಿಡಲು ಹೇಸುವುದಿಲ್ಲ ಅಲ್ಲವೇ?

Comments are closed.