ವಿಭಾಗಗಳು

ಸುದ್ದಿಪತ್ರ


 

ಅಮೇರಿಕಾದ ದಾಳಕ್ಕೆ ಚೀನಾ ಪತರಗುಟ್ಟುವುದೇ?

ಚೀನಾ ಜಗತ್ತೆಲ್ಲವನ್ನೂ ಹೆದರಿಸಬೇಕೆಂದೇ ಕರೋನಾ ಕುರಿತಂತಹ ಸುದ್ದಿಯನ್ನು ಮುಚ್ಚಿಟ್ಟಾಗಲೂ ಅಮೇರಿಕಾ ಬೆದರಲಿಲ್ಲ. ಭಾರತದಂತಹ ರಾಷ್ಟ್ರಗಳು ಲಾಕ್ಡೌನಿನ ಮೊರೆಹೋಗಿ ಕರೋನಾ ಕಿರಿಕಿರಿಯಿಂದ ಪಾರಾಗಲು ಯತ್ನಿಸಿದರೆ ಅಮೇರಿಕಾ ತಲೆ ಕೆಡಿಸಿಕೊಳ್ಳಲೇ ಇಲ್ಲ. ತನಗೇನೂ ಆಗದೆಂಬ ಭಂಡ ಧೈರ್ಯವಿರಬೇಕು. ಅಥವಾ ಇತರೆಲ್ಲಾ ರೋಗಗಳಂತೆ ಇದೂ ಬಂದು ಹೋಗಬಹುದೆಂಬ ಅವಗಣನೆ ಇರಬೇಕು.

ಅಮೇರಿಕಾ ಇವತ್ತು ಬೆಳೆದಿರುವ ಹಂತಕ್ಕೆ ಬಂದು ನಿಂತಿರುವುದು ಸಲೀಸಾಗೇನೂ ಅಲ್ಲ. ಅದರ ಹಾದಿ ಬಲು ಕಠಿಣವಾದ್ದೆ. ಪ್ರತೀ ಹಂತದಲ್ಲೂ ಎದುರಾಳಿಗಳನ್ನು ಚತುರೋಪಾಯಗಳಿಂದ ಎದುರಿಸಿ, ಮಣಿಸಿ ಬೆಳೆದು ನಿಂತಿರುವಂಥದ್ದೇ. ಮೊದಲ ಮಹಾಯುದ್ಧದಲ್ಲಾಗಲೀ ಎರಡನೆಯದರಲ್ಲಾಗಲೀ ಅದು ನೇರಯುದ್ಧಕ್ಕೆ ಎಂದೂ ಬರಲಿಲ್ಲ. ಹಿಂದಿನಿಂದಲೇ ಸಹಕಾರ ಕೊಡುವಂತೆ ಮಾಡಿ ಶತ್ರುಗಳ ಬಳಿ ತಾನಾಗಿಯೇ ತಿವಿಸಿಕೊಂಡು ಪ್ರತಿದಾಳಿ ಮಾಡಿರುವಂಥದ್ದು. ಹೀಗಾಗಿ ಎರಡನೇ ಮಹಾಯುದ್ಧದ ನಂತರ ಜಗತ್ತೆಲ್ಲಾ ಆಥರ್ಿಕವಾಗಿ ಕುಸಿದುಹೋದರೂ ಅಮೇರಿಕಾ ಮಾತ್ರ ಬಲವಾಗಿಯೇ ಇತ್ತು. ಅಲ್ಲಿಯವರೆಗೂ ಜಾಗತಿಕ ರಾಷ್ಟ್ರಗಳ ಒಕ್ಕೂಟದ ಒಂದು ಭಾಗವಾಗಿರದಿದ್ದ ಅಮೇರಿಕಾ ಅಲ್ಲಿಂದಾಚೆಗೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಯ್ತು. ಬಲುಬೇಗ ಕಮ್ಯುನಿಸ್ಟ್ ವಿರೋಧಿ ರಾಷ್ಟ್ರಗಳನ್ನೆಲ್ಲಾ ಕಲೆ ಹಾಕಲಾರಂಭಿಸಿತು. ನಾತರ್್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್-ನ್ಯಾಟೊ ಈ ಹೊತ್ತಿನಲ್ಲೇ ರೂಪುಗೊಂಡಿತ್ತು. ಈ ಒತ್ತಡಕ್ಕೆ ಮಣಿದೇ ಪ್ರತಿಸ್ಪಧರ್ಿ ರಾಷ್ಟ್ರ ರಷ್ಯಾ ಕಮ್ಯುನಿಸ್ಟ್ ರಾಷ್ಟ್ರಗಳ ಒಕ್ಕೂಟವನ್ನು ವಾಸರ್ಾ ಒಪ್ಪಂದದ ಮೂಲಕ ಮಾಡಿಕೊಂಡಿತು. ಎರಡೂ ರಾಷ್ಟ್ರಗಳ ನಡುವಣ ಸಮರ ಜೋರಾಗಿಯೇ ಇತ್ತು. ಭಾರತದಂತಹ ರಾಷ್ಟ್ರಗಳು ಇಬ್ಬರ ಸಹವಾಸ ಬೇಡವೆಂದು ಮಧ್ಯದಲ್ಲಿ ನಿಂತುಬಿಟ್ಟವು. ಆದರೆ ಈ ದೇಶದಲ್ಲಿದ್ದ ಕಮ್ಯುನಿಸ್ಟರ ಪ್ರಭಾವದಿಂದಾಗಿ ನೆಹರೂ ರಷ್ಯಾದೆಡೆಗೇ ಸ್ವಲ್ಪ ಹೆಚ್ಚು ವಾಲಿಕೊಂಡಿದ್ದರು. ಅದರ ಪರಿಣಾಮದಿಂದಲೇ ಅಮೇರಿಕಾ ಪಾಕಿಸ್ತಾನದತ್ತ ಕಣ್ಣು ಹಾಕಿದ್ದು. ಇದು ದೀರ್ಘಕಾಲದಲ್ಲಿ ನಮಗೆ ಸಾಕಷ್ಟು ಹೊಡೆತವನ್ನು ಕೊಟ್ಟಿತು. ಮುಂದೆ ಪಾಕಿಸ್ತಾನವನ್ನು ತನ್ನತ್ತ ಸೆಳೆದುಕೊಳ್ಳಲು ರಷ್ಯಾ ತಾಷ್ಕೆಂಟ್ ಒಪ್ಪಂದದ ವೇಳೆಗೆ ಪಾಕಿಸ್ತಾನದ ಕಡೆಗೆ ವಾಲಿದ್ದನ್ನು ಇತಿಹಾಸದ ಪುಟಗಳಲ್ಲಿ ನಾವು ನೋಡುತ್ತವೆ.

2

ಚಚರ್ೆಯ ವಿಷಯ ಅದಲ್ಲ. ಅಮೇರಿಕಾ ರಷ್ಯಾಗಳು ಜಿದ್ದಿಗೆ ಬಿದ್ದುಬಿಟ್ಟಿದ್ದವು. 1957ರಲ್ಲಿ ರಷ್ಯಾ ಮೊದಲ ಉಪಗ್ರಹ ಸ್ಪುಟ್ನಿಕ್ ಅನ್ನು ಆಗಸಕ್ಕೆ ಕಳಿಸಿದರೆ, ಅಮೇರಿಕಾ ಚಂದ್ರನ ಮೇಲೆ ಮೊದಲ ಮಾನವನನ್ನು ಇಳಿಸಿ ಸಾಧನೆ ಮೆರೆದಿತ್ತು. ಪ್ರತಿಕ್ಷಣವೂ ಎರಡೂ ರಾಷ್ಟ್ರಗಳು ಮತ್ತೊಬ್ಬರಿಗಿಂತ ಮುನ್ನಡೆ ಸಾಧಿಸುವಲ್ಲಿ ಹಾತೊರೆಯುತ್ತಲೇ ಇದ್ದವು. ಆದರೆ ತನ್ನ ಸಹಜವಾಗಿರುವ ಸಾಮಥ್ರ್ಯದಿಂದಾಗಿ ಅಮೇರಿಕಾ ಮುಂದೆ ಇರುತ್ತಿದ್ದುದು ಸುಳ್ಳೇನಲ್ಲ. ಆಥರ್ಿಕವಾಗಿ ಅಮೇರಿಕಾ ತನ್ನ ತಾನು ಬಲಗೊಳಿಸಿಕೊಂಡಿತು. 50ರ ದಶಕದಲ್ಲಿ ತಲಾ ಆದಾಯ ಅಮೇರಿಕಾದಲ್ಲಿ ಸಾಕಷ್ಟು ಏರಿಕೆ ಕಂಡಿತು. ತಜ್ಞ ಡಿಯೋನಿ ಜೆಲ್ನ ಪ್ರಕಾರ ಆ ಹೊತ್ತಲ್ಲಿ ಅಮೇರಿಕಾದ ಹೆಚ್ಚು-ಕಡಿಮೆ 90 ಪ್ರತಿಶತದಷ್ಟು ಜನ ಟಿವಿಯನ್ನು ಹೊಂದಿದ್ದರು. ಮುಕ್ಕಾಲು ಭಾಗದಷ್ಟು ಜನ ಕಾರಿನ ಒಡೆಯರಾಗಿದ್ದರು. ಶೇಕಡಾ 60ರಷ್ಟು ಜನರ ಬಳಿ ಸ್ವಂತ ಮನೆಯಿತ್ತು. ವೇಗವಾದ ಕೈಗಾರಿಕೀಕರಣ ಅಮೇರಿಕಾದ ದಿಕ್ಕನ್ನೇ ಬದಲಾಯಿಸಿಬಿಟ್ಟಿತ್ತು. ಇದರೊಟ್ಟಿಗೆ ಅಮೇರಿಕಾ ಆಫ್ರಿಕಾದ ರಾಷ್ಟ್ರಗಳ ಮೇಲೆ ತನ್ನ ಹಿಡಿತವನ್ನು ಬಲಗೊಳಿಸಿಕೊಂಡಿತು. ರಷ್ಯಾದ ಅಕ್ಕಪಕ್ಕದಲ್ಲೇ ತನ್ನ ಅಸ್ತಿತ್ವವನ್ನು ಹುಡುಕಲಾರಂಭಿಸಿತು. ಇದರ ಪರಿಣಾಮವಾಗಿಯೇ ಅಫ್ಘಾನಿಸ್ತಾನಿಗರನ್ನು ರಷ್ಯನ್ನರ ವಿರುದ್ಧ ಎತ್ತಿಕಟ್ಟಿ ರಷ್ಯಾ ತುಂಡಾಗಲು ಬೇಕಾದ ಆಲೋಚನೆಯನ್ನೂ ಮಾಡಿತು. ಈ ಹಿಂದೆಯೂ ಹೇಳಿದ್ದೆನಲ್ಲ, ಮುಸಲ್ಮಾನರನ್ನು ಭಡಕಾಯಿಸುವುದು ಬಲುಕಷ್ಟವೇನಲ್ಲ. ನಾಲ್ಕು ದೇವವಾಕ್ಯಗಳು, ಸ್ವಲ್ಪ ದುಡ್ಡು, ಒಂದು ಬಂದೂಕು ಕೊಟ್ಟರೆ ಆತ ಯಾರನ್ನು ಬೇಕಿದ್ದರೂ ಕೊಂದುಬಿಡಬಲ್ಲ. ಯೋಚನೆ ಮಾಡುವಷ್ಟು ಪುರಸೊತ್ತಾಗಲೀ ಬೌದ್ಧಿಕ ಸಾಮಥ್ರ್ಯವಾಗಲೀ ಅವನಿಗೆ ಅವನ ಮತದ ಮುಂದಾಳುಗಳು ಕೊಟ್ಟಿಲ್ಲ. ಅಮೇರಿಕಾ ಅಫ್ಘಾನಿಸ್ತಾನದ ಜನರಿಗೆ ಇದೇ ಬಗೆಯ ಅಫೀಮು ಕುಡಿಸಿ ಎತ್ತಿಕಟ್ಟಿತು. ಮುಂದೆ ಅಮೇರಿಕಾ ತಾಲಿಬಾನಿಗಳನ್ನು ವಿರೋಧಿಸಿ ಅವರನ್ನು ಧ್ವಂಸಗೊಳಿಸುವ ನೆಪದಲ್ಲಿ ಇಡಿಯ ರಾಷ್ಟ್ರವನ್ನೇ ನಾಶಮಾಡಿತಲ್ಲ ಆ ಭಯೋತ್ಪಾದಕರ ಹುಟ್ಟಿಗೆ ಕಾರಣವಾದದ್ದು ಸ್ವತಃ ಅಮೇರಿಕಾ! ರಷ್ಯಾ ಒಂದೆಡೆ ಜಾಗತಿಕ ಮಟ್ಟದಲ್ಲಿ ಅಮೇರಿಕಾ ಮತ್ತು ಅದರ ಮಿತ್ರ ರಾಷ್ಟ್ರಗಳೊಂದಿಗೆ ಕಾದಾಡುವ ಧಾವಂತಕ್ಕೆ ಬಿದ್ದಿತು. ಮತ್ತೊಂದೆಡೆ ಆಂತರಿಕ ಸಂಘರ್ಷ ತೀವ್ರವಾಗಲಾರಂಭಿಸಿತು. ಅದರೊಟ್ಟಿಗೆ ಕಮ್ಯುನಿಸ್ಟರನ್ನು ಸಹಜವಾಗಿ ತಿನ್ನುವ ಅಧಿಕಾರಿ ವರ್ಗದ ಭ್ರಷ್ಟಾಚಾರ ರಷ್ಯಾವನ್ನು ಆಂತರಿಕವಾಗಿ ಕುಸಿಯುವಂತೆ ಮಾಡಿತು. ಕೊನೆಗೂ ರಷ್ಯಾ ಶೀತಲಸಮರದಲ್ಲಿ ಸೋತಿತಲ್ಲದೇ ಚೂರು ಚೂರಾಗಿಹೋಯ್ತು. ಇದು ಅಮೇರಿಕಾಕ್ಕೆ ಅಪಾರವಾದ ಬಲವನ್ನು ತಂದುಕೊಟ್ಟಿತಾದರೆ ಮತ್ತೊಂದೆಡೆ ರಷ್ಯಾವನ್ನು ಮೆಟ್ಟಿ ವಿಶ್ವಶಕ್ತಿಯಾಗಬೇಕೆಂದು ಒಳಗೊಳಗೇ ಬಯಸುತ್ತಿದ್ದ ಚೀನಾಕ್ಕೆ ರಾಜಮಾರ್ಗವನ್ನು ನಿಮರ್ಿಸಿಕೊಟ್ಟಿತು. ಅಮೇರಿಕಾ ಇಲ್ಲಿಗೇ ನಿಲ್ಲಲಿಲ್ಲ. ಅದರ ಆಥರ್ಿಕತೆ ಯುದ್ಧಗಳ ಮೇಲೆ ನಿಂತಿತ್ತು. ಜಗತ್ತು ಶಾಂತಿಯಿಂದ ಕೂಡಿದರೆ ಅಮೇರಿಕಾದ ಆಥರ್ಿಕ ಸ್ಥಿತಿ ಕುಸಿಯುತ್ತದೆ ಎಂಬುದು ಸಹಜವಾಗಿ ಎಲ್ಲರೂ ಅರಿತ ವಿಷಯವಾಯ್ತು. ಹೀಗಾಗಿ ಇರಾಕ್-ಇರಾನ್ನ ನಡುವೆ ಯುದ್ಧ ನಡೆದಾಗಲೂ ಅಮೇರಿಕಾದ ಕೈವಾಡವಿತ್ತಲ್ಲದೇ ಮುಂದೆ ಸದ್ದಾಂ ಹುಸೇನನ ಮೇಲೆ ಶಸ್ತ್ರ ಸಂಗ್ರಹಣೆಯ ಗೂಬೆ ಕೂರಿಸಿ ಆತನನ್ನು ವಿಚಾರಣೆಗೆ ಒಳಪಡಿಸಿ ನೇಣಿಗೇರಿಸುವವರೆಗೂ ಅಮೇರಿಕಾ ಜಗತ್ತಿನ ಜನರಲ್ಲಿ ಉಂಟುಮಾಡಿದ ಭಯ ಸಾಮಾನ್ಯವಾದುದೇನೂ ಅಲ್ಲ! ಸದ್ದಾಂ ಡಾಲರ್ನ ಏಕಸ್ವಾಮ್ಯವನ್ನು ಮುರಿಯುವ ಧಾವಂತದಲ್ಲಿದ್ದ. ಅಮೇರಿಕಾದ ಕರೆನ್ಸಿ ಬದಿಗೆ ಸರಿಯಿತೆಂದರೆ ಅಮೇರಿಕಾದ ಸಾರ್ವಭೌಮತೆ ಕುಸಿಯಲಿದೆ ಎಂದರಿತ ಅಮೇರಿಕಾದ ಅಧ್ಯಕ್ಷರು ತನ್ನ ಉಳಿವಿಗಾಗಿ ಒಂದಿಡೀ ರಾಷ್ಟ್ರವನ್ನೇ ಮುಗಿಸಿಬಿಟ್ಟರು. ಇದು ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಯಾವ ಪರಿಯ ಹೆದರಿಕೆ ಹುಟ್ಟಿಸಿಬಿಟ್ಟಿತೆಂದರೆ ಅವರು ಅಂದಿನಿಂದ ಇಂದಿನವೆಗೂ ಅಮೇರಿಕಾ ಹಾಕಿದ ಗೆರೆ ದಾಟದಂತೆ ಮಾಡಿಬಿಟ್ಟಿದೆ. 2007ರಲ್ಲಿ ಅಮೇರಿಕಾದ ಆಥರ್ಿಕ ಸ್ಥಿತಿ ಕುಸಿಯುತ್ತಿದೆ ಎನಿಸಿದಾಗ ಶೇಲ್ ತೈಲಗಳಿಗೆ ಕೈಹಾಕಿ ಈ ಎಲ್ಲಾ ರಾಷ್ಟ್ರಗಳೂ ಬೆಚ್ಚಿಬೀಳುವಂತೆ ಮಾಡಿದ್ದು ಅಮೇರಿಕಾ. ಈ ಕಾರಣಕ್ಕಾಗಿ ಈಗಲೂ ಅಮೇರಿಕಾವನ್ನು ಕೇಳದೇ ತೈಲಬೆಲೆಯನ್ನು ನಿಯಂತ್ರಿಸಲಾಗದ ಸ್ಥಿತಿಗೆ ತಲುಪಿದ್ದಾರೆ. ತನ್ನ ಪ್ರಭಾವವನ್ನು ಅಮೇರಿಕಾ ಜಗತ್ತಿನ ಮೇಲೆ ಇಟ್ಟಿರುವುದು ಈ ರೀತಿ!

3

ಹಾಗಂತ ಇಷ್ಟೇ ಅಲ್ಲ. ಜಗತ್ತಿನಲ್ಲಿ ಯಾರೊಂದಿಗೆ ಯಾರ ಗಡಿ ಸಮಸ್ಯೆಗಳು ತಲೆದೋರಿದರೂ ಅಲ್ಲಿ ಅಮೇರಿಕಾ ಹಾಜರಿದ್ದೇ ಇರುತ್ತದೆ. ತನ್ನ ತಾನು ದುರ್ಬಲವೆನಿಸಿಕೊಂಡ ರಾಷ್ಟ್ರ ಸಬಲರಾಷ್ಟ್ರದೆದುರಾಗಿ ಅಮೇರಿಕಾದ ಸಹಾಯ ಕೇಳುವುದು ಹೊಸತೇನೂ ಅಲ್ಲ. ಕಾಶ್ಮೀರದ ವಿಚಾರದಲ್ಲಿ ಸದಾ ಮಧ್ಯಪ್ರವೇಶಿಸುವಂತೆ ಅಮೇರಿಕಾವನ್ನು ಪಾಕಿಸ್ತಾನ ಕೇಳಿಕೊಳ್ಳುವುದು ಈ ಕಾರಣಕ್ಕಾಗಿಯೇ. ಅತ್ತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಹೆಚ್ಚ-ಹೆಚ್ಚು ಆಕ್ರಮಕವಾಗಿ ಮೆರೆದೊಡನೆ ಭಾರತ ಅಮೇರಿಕಾದ ದಿಕ್ಕಿನಲ್ಲಿ ತಿರುಗಿ ಕುಳಿತುಕೊಳ್ಳುವುದೂ ಈ ಕಾರಣಕ್ಕಾಗಿಯೇ. ಚೀನಾ ನಮ್ಮೆದುರಿಗೆ ಬಲಾಢ್ಯ ರಾಷ್ಟ್ರವೆನಿಸುತ್ತದೆಯಲ್ಲ, ಆದರೆ ಅಮೇರಿಕಾದ ಶಕ್ತಿ-ಸಾಮಥ್ರ್ಯದೆದುರು ಅದೂ ತಲೆಬಾಗಲೇಬೇಕು. ಇರಾನ್ ಮೇಲೆ ಆಥರ್ಿಕ ದಿಗ್ಬಂಧವನ್ನು ಅಮೇರಿಕಾ ಹೇರಿದಾಗ ಚೀನಾ ಆರಂಭದಲ್ಲಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಅಮೇರಿಕಾದ ಒತ್ತಡ ಹೇಗಿತ್ತೆಂದರೆ ಇರಾನ್ನಿಂದ ಅತೀಹೆಚ್ಚು ತೈಲ ಆಮದು ಮಾಡಿಕೊಳ್ಳುವ ಚೀನಾ ಕೊನೆಗೂ ದೊಡ್ಡ ಪ್ರಮಾಣದಲ್ಲಿ ಅದನ್ನು ಕಡಿತ ಮಾಡಲೇಬೇಕಾಗಿ ಬಂತು. ಅಮೇರಿಕಾದ ಗೆಳೆತನ ಹೊಂದಿದ್ದರೆ ನೆಮ್ಮದಿ. ಅಮೇರಿಕಾದ ವಿರೋಧ ಕಟ್ಟಿಕೊಂಡರೆ ಬದುಕು ದುರ್ಭರ ಎಂಬುದನ್ನು ಎಲ್ಲ ರಾಷ್ಟ್ರಗಳೂ ಅರಿಯುವಂತೆ ಅಮೇರಿಕಾ ಮಾಡಿಬಿಟ್ಟಿದೆ!

4

ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗಲೇ ಕರೋನಾ ದಾಳಿಮಾಡಿದ್ದು. ಚೀನಾ ಜಗತ್ತೆಲ್ಲವನ್ನೂ ಹೆದರಿಸಬೇಕೆಂದೇ ಕರೋನಾ ಕುರಿತಂತಹ ಸುದ್ದಿಯನ್ನು ಮುಚ್ಚಿಟ್ಟಾಗಲೂ ಅಮೇರಿಕಾ ಬೆದರಲಿಲ್ಲ. ಭಾರತದಂತಹ ರಾಷ್ಟ್ರಗಳು ಲಾಕ್ಡೌನಿನ ಮೊರೆಹೋಗಿ ಕರೋನಾ ಕಿರಿಕಿರಿಯಿಂದ ಪಾರಾಗಲು ಯತ್ನಿಸಿದರೆ ಅಮೇರಿಕಾ ತಲೆ ಕೆಡಿಸಿಕೊಳ್ಳಲೇ ಇಲ್ಲ. ತನಗೇನೂ ಆಗದೆಂಬ ಭಂಡ ಧೈರ್ಯವಿರಬೇಕು. ಅಥವಾ ಇತರೆಲ್ಲಾ ರೋಗಗಳಂತೆ ಇದೂ ಬಂದು ಹೋಗಬಹುದೆಂಬ ಅವಗಣನೆ ಇರಬೇಕು. ಯಾವುದಿದ್ದರೂ ಸರಿಯೇ. ಅಮೇರಿಕಾ ಒಂದು ಲಕ್ಷ ಜೀವಗಳನ್ನು ಕಳೆದುಕೊಂಡಿತು. ಆದರೆ ಅಮೇರಿಕಾ ಆಥರ್ಿಕತೆ ಅಂಜಿಕೆಯ ಮಟ್ಟವೇನೂ ತಲುಪಲಿಲ್ಲ. ಬದಲಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಇಡಿಯ ಪ್ರಕರಣವನ್ನು, ಸಾವು-ನೋವುಗಳನ್ನು ಚೀನಾದತ್ತ ತಿರುಗಿಸಿ ಇಡಿಯ ಜಗತ್ತು ಚೀನಾವನ್ನು ವಿರೋಧಿಸಲು ಬೇಕಾದ ಎಲ್ಲ ಕಸರತ್ತನ್ನೂ ಮಾಡಿದರು. ಒಂದು ತಿಂಗಳ ಹಿಂದೆ ಅಮೇರಿಕಾದಲ್ಲಿ ನಡೆದ ಸವರ್ೆಗಳು ಇದನ್ನು ವ್ಯಾಪಕವಾಗಿ ಪ್ರತಿಬಿಂಬಿಸುತ್ತವೆ. 2005ರ ವೇಳೆಗೆ ಶೇಕಡಾ 35ರಷ್ಟು ಜನ ಚೀನಾದ ಪರವಾದ ದನಿ ಹೊಂದಿದ್ದರೆ. ಶೇಕಡಾ 43ರಷ್ಟು ಜನ ಅದನ್ನು ವಿರೋಧಿಸುತ್ತಿದ್ದರು. ಈಗ ಶೇಕಡಾ 66ರಷ್ಟು ಜನ ಚೀನಾದ ವಿರೋಧದಲ್ಲಿದ್ದರೆ, ಶೇಕಡಾ 26 ಜನ ಮಾತ್ರ ಅದರ ಪರವಾಗಿದ್ದಾರೆ. ಅಮೇರಿಕಾದ ಜನ ತಮ್ಮ ರಾಷ್ಟ್ರವೇ ಜಾಗತಿಕ ಶಕ್ತಿಯಾಗಿರುವುದರಿಂದ ಒಳಿತಾಗುತ್ತದೆ ಎಂಬುದರಲ್ಲಿ ಈಗ ಮೊದಲಿಗಿಂತ ಹೆಚ್ಚು ವಿಶ್ವಾಸ ಹೊಂದಿದ್ದಾರೆ. ಪ್ಯೂ ಸಂಶೋಧನೆಯ ಪ್ರಕಾರ ಅಮೇರಿಕಾದ 90 ಪ್ರತಿಶತಕ್ಕೂ ಹೆಚ್ಚು ಜನ ಈ ವಿಚಾರವುಳ್ಳವರಾಗಿದ್ದಾರೆ. ಟ್ರಂಪ್ಗೆ ಬರಲಿರುವ ಚುನಾವಣೆಯಲ್ಲಿ ಈ ರಾಷ್ಟ್ರೀಯವಾದಿಗಳೇ ಬಲವಾಗಿ ಬೆನ್ನ ಹಿಂದೆ ನಿಲ್ಲುವ ಸಾಧ್ಯತೆಯಿದೆ. ರಿಪಬ್ಲಿಕನ್ ಪಕ್ಷದ ಮುಕ್ಕಾಲು ವಾಸಿ ಜನ ಚೀನಾ ವಿರುದ್ಧ ಮತ ಚಲಾಯಿಸಿದ್ದರೆ ಡೆಮಾಕ್ರಟಿಕ್ನ ಶೇಕಡಾ 60ರಷ್ಟು ಜನ ಚೀನಾದ ಏಕಸ್ವಾಮ್ಯತೆಯ ವಿರುದ್ಧ ಕೂಗಿದ್ದಾರೆ. ಇದೂ ಕೂಡ ಟ್ರಂಪ್ಗೆ ಲಾಭದಾಯಕವೇ. ಅತ್ಯಂತ ಪ್ರಮುಖವಾದ ಗಮನಿಸಲೇಬೇಕಾದ ಸಂಗತಿ ಎಂದರೆ 30ಕ್ಕಿಂತ ಕೆಳಗಿನ ವಯಸ್ಸಿನ ಅರ್ಧಕ್ಕೂ ಹೆಚ್ಚು ಭಾಗದ ಜನ ಚೀನಾ ವಿರುದ್ಧ ಮತ ಚಲಾಯಿಸಿದ್ದಾರೆ. 30 ಮತ್ತು 50ರ ನಡುವಿನ ವಯಸ್ಸಿನವರು ಇನ್ನೂ ಹೆಚ್ಚು ಬಲವಾಗಿ ಇದನ್ನು ಪ್ರತಿಪಾದಿಸುತ್ತಿದ್ದಾರೆ. ವಯಸ್ಸಾದವರಂತೂ ಮೊದಲಿನಿಂದಲೂ ಚೀನಾದ ವಿರುದ್ಧ ಆಕ್ರೋಶವನ್ನು ಹೊರಗೆ ಹಾಕುತ್ತಿದ್ದವರೇ. ಈ ಸಂಶೋಧನೆಯ ಪ್ರಕಾರ ಶಿಕ್ಷಣ ಪಡೆದಿರುವ, ಪಡೆಯದಿರುವ ಯಾರೇ ಆಗಲಿ ಯಾವುದೇ ಪಕ್ಷದವರಾಗಿರಲಿ ಅವರು ಚೀನಾ ವಿರುದ್ಧ ಗುಟುರು ಹಾಕುತ್ತಿದ್ದಾರೆ. ಟ್ರಂಪ್ ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯವಾದದ ಟ್ರಂಪ್ ಮಾತುಗಳು ಅಮೇರಿಕಾದ ಜನರಿಗೆ ಹಿಡಿಸುತ್ತಿವೆ. ಹೀಗಾಗಿಯೇ ಆತ ಚೀನಾ ವಿರುದ್ಧ ಆಕ್ರೋಶವನ್ನು ಹೊರಹಾಕಿದಾಗಲೆಲ್ಲಾ ಬಹುಪಾಲು ಅಮೇರಿಕನ್ನರು ಕೈಜೋಡಿಸುತ್ತಾರಲ್ಲದೇ ರಾಷ್ಟ್ರೀಯವಾದದ ಹಿನ್ನೆಲೆಯಲ್ಲಿ ಬಲವಾಗಿ ಆತುಕೊಳ್ಳುತ್ತಿದ್ದಾರೆ!

OLYMPUS DIGITAL CAMERA

ಎಲ್ಲ ಬಗೆಯ ಬೆಳವಣಿಗೆಗಳಿಂದ ಪತರುಗುಟ್ಟಿರುವ ಚೀನಾ ಒಂದೊಂದಾಗಿ ತಪ್ಪು ಹೆಜ್ಜೆಯನ್ನಿಡುತ್ತಿದೆ. ಆಸ್ಟ್ರೇಲಿಯಾದ ವಿರುದ್ಧ ಕೂಗಾಡಿದ್ದಾಯ್ತು. ಭಾರತದ ವಿರುದ್ಧ ಸಿಕ್ಕಿಂನಲ್ಲಿ ಕ್ಯಾತೆ ತೆಗೆಯಿತು. ದಕ್ಷಿಣ ಚೀನಾ ಸಮುದ್ರಕ್ಕೆ ಹೊಂದುಕೊಂಡಿರುವ ರಾಷ್ಟ್ರಗಳೊಂದಿಗೆ ಕಿತ್ತಾಟಕ್ಕೆ ಬಿತ್ತು, ಕೊನೆಗೆ ರಷ್ಯಾದೊಂದಿಗೂ ಕಾಲು ಕೆರೆದು ಜಗಳಕ್ಕೆ ಹೋಗುವ ಲಕ್ಷಣಗಳು ಕಾಣುತ್ತಿವೆ. ಇತ್ತ ಅಮೇರಿಕಾ ಅಷ್ಟೇ ಶಾಂತವಾಗಿ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳನ್ನು ಚೀನಾದ ವಿರುದ್ಧ ಎತ್ತಿಕಟ್ಟುವಲ್ಲಿ ಸಮರ್ಥವಾದ ಹೆಜ್ಜೆ ಇಡುತ್ತಿದೆ. ಮುಸ್ಲೀಂ ರಾಷ್ಟ್ರಗಳು ಚೀನಾದೆಡೆಗೆ ವಾಲಬಹುದು ಎಂದು ಗೊತ್ತಾದೊಡನೇ ತನ್ನ ಸೆನೆಟ್ನಲ್ಲಿ ಉಯ್ಘುರ್ ಮಾನವ ಹಕ್ಕುಗಳು ಕಾಯ್ದೆಯನ್ನು ಜಾರಿಗೆ ತಂದು ಚೀನಾವನ್ನು ಬೆಚ್ಚಿಬೀಳಿಸಿದೆ. ಉಯ್ಘುರ್ ಎನ್ನುವುದು ಚೀನಾದಲ್ಲಿ ಶೋಷಣೆಗೊಳಪಡುತ್ತಿರುವ ಮುಸಲ್ಮಾನರ ಜನಾಂಗ. ಅವರ ಪರವಾಗಿ ತಾನು ನಿಲ್ಲುವೆ ಎಂದು ಹೇಳುವ ಮೂಲಕ ಮಧ್ಯ ಏಷ್ಯಾದಲ್ಲಿ ತನ್ನದ್ದೇ ಆದ ಹೊಸ ದಾಳವನ್ನು ಎಸೆದಿದೆ. ಚೀನಾಕ್ಕೆ ಭಂಡತನವಿರಬಹುದು. ಎಲ್ಲೆಡೆಯಲ್ಲೂ ನುಗ್ಗುವ ಧೈರ್ಯ-ಧಿಮಾಕುಗಳೂ ಇರಬಹುದು. ಆದರೆ ಸದ್ಯದಮಟ್ಟಿಗೆ ಚಾಕಚಕ್ಯತೆ ಮತ್ತು ಬೌದ್ಧಿಕ ಶಕ್ತಿ ಇರುವುದು ಅಮೇರಿಕಾದ ತೆಕ್ಕೆಯಲ್ಲೇ. ಹೀಗಾಗಿ ಅಮೇರಿಕಾವನ್ನು ಅದರ ಸ್ಥಾನದಿಂದ ಕೆಳಗಿಳಿಸುವುದು ಅಷ್ಟು ಸುಲಭವಾಗಲಾರದು!

Comments are closed.