ವಿಭಾಗಗಳು

ಸುದ್ದಿಪತ್ರ


 

ಅಮೇರಿಕಾ ಮಣಿಸುವುದು ಸುಲಭವಲ್ಲ; ಆದರೆ ಕರ್ಮಸಿದ್ಧಾಂತ?

ಲಾಕ್ಡೌನ್ ಮುಗಿದು ಎಲ್ಲಾ ಪೂರ್ಣ ಸಹಜವಲ್ಲದಿದ್ದರೂ ಒಂದು ಹಂತಕ್ಕೆ ಬರುತ್ತಿದೆ ಎನಿಸುವಾಗ ಮುಂದಿನ ಬದುಕಿನ ಚಿಂತೆ ಕಾಡಲಾರಂಭಿಸಿದೆ. ಅಂದುಕೊಂಡಷ್ಟು ಸುಲಭವಿಲ್ಲ ಎಂದುಕೊಳ್ಳುವಾಗಲೇ ಕೇಂದ್ರಸಕರ್ಾರ ಘೋಷಿಸಿದ ಬೃಹತ್ ಪ್ಯಾಕೇಜು ಆಶಾಭಾವನೆಯನ್ನಂತೂ ಮೂಡಿಸಿದೆ. ಕೃಷಿಕರು ಹೊಸ ಮಾರುಕಟ್ಟೆಯ ಕನಸು ಕಾಣುತ್ತಿದ್ದರೆ ಮಧ್ಯಮ ಮತ್ತು ಸಣ್ಣ ಉತ್ಪಾದಕರು ಸ್ವದೇಶಿ ಕಲ್ಪನೆಯನ್ನು ಮೋದಿ ಕೊಟ್ಟಿದ್ದಕ್ಕೆ ರೋಮಾಂಚಿತರಾಗಿದ್ದಾರೆ. ರಾಗಿಯನ್ನು ವೈಶ್ವಿಕ ಬ್ರ್ಯಾಂಡ್ ಆಗಿ ರೂಪಿಸುವ ಕಲ್ಪನೆ ಜೊತೆಗೆ ಮೀನುಗಾರಿಕೆಗೆ ಕೊಟ್ಟಿರುವ ಪ್ರೋತ್ಸಾಹ ಕೆಳ ಹಂತದಲ್ಲೂ ಕೂಡ ಆ ಆನಂದ ಪ್ರತಿಫಲಿಸುವಂತೆ ಮಾಡಿದೆ. ಹೀಗೆ ಅವರವರ ಚಿಂತೆ ಅವರವರಿಗಿದ್ದರೆ ಆಳುವವರಿಗೆ ಬೇರೆ ಬಗೆಯದ್ದೇ ಚಿಂತೆಯಿದೆ. ಕರೋನಾ ನಂತರ ಜಗತ್ತಿನ ಸೂತ್ರ ಯಾರ ಕೈಗೆ ಸೇರುವುದೆಂಬ ಪ್ರಶ್ನೆ ಬೇಗ ಮುಗಿಯುವಂತೆ ಕಾಣುತ್ತಿಲ್ಲ. ಅಮೇರಿಕಾದ ವಿಶ್ವವಿದ್ಯಾಲಯವೊಂದರ ರಾಜಕೀಯ ಶಾಸ್ತ್ರದ ಸಹಾಯಕ ಅಧ್ಯಾಪಕರಾದ ಮೈಕಲ್ ಬರ್ಕ್ಲಿ ಇತ್ತೀಚೆಗೆ ಪ್ರಕಟಿಸಿದ ಪುಸ್ತಕವೊಂದರಲ್ಲಿ ಈ ಕುರಿತಂತೆ ಚಚರ್ಿಸುತ್ತಾ ವಿಶ್ವ ನಾಯಕತ್ವದ ವಿಭಿನ್ನ ಮಗ್ಗಲುಗಳ ಕುರಿತಂತೆ ಬೆಳಕು ಚೆಲಿದ್ದಾರೆ. ‘ಅಮೇರಿಕಾ ಅಸ್ತವ್ಯಸ್ತವಾಗಿರುವ ರಾಷ್ಟ್ರ ನಿಜ, ಆದರೆ ಚೀನಾದ ವ್ಯವಸ್ಥೆ ಬಲುಕೆಟ್ಟು ಹೋಗಿದೆ. ಅಮೇರಿಕಾದ ಪ್ರಜಾಪ್ರಭುತ್ವ ಸೂಕ್ತ ರೀತಿಯದ್ದಲ್ಲ. ಆದರೆ ಚೀನಾದ ಸವರ್ಾಧಿಕಾರತ್ವ ಅದನ್ನು ಮಣ್ಣುಗೂಡಿಸಲು ಸಾಕು’ ಎನ್ನುತ್ತಾರೆ. ಹೀಗೆ ಜಗತ್ತಿನ ಎರಡು ಸೂಪರ್ಪವರ್ಗಳ ನಡುವಣ ವೈರುಧ್ಯಗಳನ್ನು ಚಚರ್ಿಸುತ್ತಲೇ ಕನಿಷ್ಠ ಒಂದು ದಶಕವಾದರೂ ಅಮೇರಿಕಾ ಈ ಪಟ್ಟದಿಂದ ಹಿಂದೆ ಸರಿಯುವುದು ಸಾಧ್ಯವೇ ಇಲ್ಲ ಎಂದು ವಾದಿಸುತ್ತಾರೆ. ಅದಕ್ಕೆ ಅವರು ಕೊಡುವ ಕಾರಣ ಅಮೇರಿಕಾ ಜಗತ್ತಿನ ಶೇಕಡಾ 5ರಷ್ಟು ಜನಸಂಖ್ಯೆಯನ್ನು, ಶೇಕಡಾ 25ರಷ್ಟು ಸಂಪತ್ತನ್ನು ಹೊಂದಿದೆ ಎಂಬುದು. ಅಷ್ಟೇ ಅಲ್ಲ, ಜಗತ್ತಿನ ಶೇಕಡಾ 35ರಷ್ಟು ಆವಿಷ್ಕಾರಗಳು ಅಮೇರಿಕಾದಲ್ಲೇ ಆಗುವುದಾದರೆ ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಅರ್ಧದಷ್ಟು ಅಮೇರಿಕಾದಲ್ಲೇ ಇವೆಯಂತೆ. ಜಗತ್ತಿನ 2000 ಲಾಭ ಗಳಿಸುವ ಕಂಪೆನಿಗಳಲ್ಲಿ 600ರಷ್ಟು ಅಮೇರಿಕಾದ್ದೇ. ಇಷ್ಟೇ ಅಲ್ಲ, ಜಗತ್ತಿನಲ್ಲಿ ಎಲ್ಲಾ ರಾಷ್ಟ್ರಗಳು ಸೈನ್ಯಕ್ಕೆಂದು ಖಚರ್ು ಮಾಡುವ ಒಟ್ಟೂ ಹಣದಲ್ಲಿ ಶೇಕಡಾ 40ರಷ್ಟು ಅಮೇರಿಕಾವೊಂದೇ ಮಾಡುತ್ತದೆ! ಅಧಿಕೃತವಾಗಿ 68 ರಾಷ್ಟ್ರಗಳೊಂದಿಗೆ ಯುದ್ಧದ ದೃಷ್ಟಿಯಿಂದ ಸಂಬಂಧವನ್ನು ಹೊಂದಿರುವ ಅಮೇರಿಕಾ 587 ಸ್ಥಳಗಳಲ್ಲಿ ತನ್ನ ಯುದ್ಧವಿಮಾನಗಳಿಗೆ ಬೇಕಾಗಿರುವ ಏರ್ಬೇಸ್ ನಿಮರ್ಿಸಿಕೊಂಡಿದೆ. ಹೀಗಾಗಿ ತನ್ನ ದೇಶದಿಂದ ಬಲುದೂರದಲ್ಲಿ ಯುದ್ಧಮಾಡುವ ಸಾಮಥ್ರ್ಯವನ್ನು ಅಮೇರಿಕಾ ಪಡಕೊಂಡುಬಿಟ್ಟಿದೆ. ಚೀನಾದೊಂದಿಗೆ ತುಲನೆ ಮಾಡಲೇಬೇಕೆಂದಾದರೆ ಸ್ಥೂಲವಾಗಿ ಚೀನಾದ ಮೂರುಪಟ್ಟು ಸಂಪತ್ತನು, 5 ಪಟ್ಟು ಮಿಲಿಟರಿ ಸಾಮಥ್ರ್ಯವನ್ನು ಹೊಂದಿದೆ. ಇದನ್ನು ಸರಿದೂಗಿಸಲು ಚೀನಾಕ್ಕೆ ಒಂದು ದಶಕವಾದರೂ ಬೇಕು ಎಂಬುದು ಅವರ ವಾದ!

2

ಇನ್ನು ಮೈಕಲ್ ಬರ್ಕ್ಲಿ ರಾಷ್ಟ್ರವೊಂದರ ಶಕ್ತಿಗೆ ಮೂರು ಆಧಾರಸ್ತಂಭಗಳನ್ನು ಗುರುತಿಸುತ್ತಾರೆ. ಮೊದಲನೆಯದ್ದು ಆ ರಾಷ್ಟ್ರದ ಭೂಗೋಳ. ಎರಡನೆಯದು ಜನಸಮುದಾಯ ಮತ್ತು ಮೂರನೆಯದು ರಾಜಕೀಯ ಚಿಂತನೆಗಳು. ಹಾಗೆ ಸುಮ್ಮನೆ ಈ ಎರಡು ರಾಷ್ಟ್ರಗಳ ನಡುವೆ ತುಲನೆ ಮಾಡಿ ನೋಡಿ. ಅಮೇರಿಕಾಕ್ಕೆ ಗಡಿಯಲ್ಲಿ ಕ್ಯಾತೆ ತೆಗೆಯಬಹುದಾದ ರಾಷ್ಟ್ರಗಳು ಯಾವುವೂ ಇಲ್ಲ. ಒಂದು ರೀತಿ ಸಾರ್ವಭೌಮವೇ ಆಗಿನಿಂತುಬಿಟ್ಟಿದೆ. ಚೀನಾಕ್ಕಾದರೋ ಸುತ್ತಲೂ ಇರುವ ರಾಷ್ಟ್ರಗಳಲ್ಲಿ ಯಾವುದರೊಂದಿಗೂ ನೆಮ್ಮದಿಯ ಬಾಂಧವ್ಯವಿಲ್ಲ. ಒಂದು ಕಾಶ್ಮೀರ ಫಡಫಡಿಸುವುದರಿಂದಲೇ ಹೈರಾಣಾಗಿರುವ ನಾವು ಕಾಶ್ಮೀರಕ್ಕಿಂತಲೂ ಹತ್ತಾರು ಪಟ್ಟು ವಿಸ್ತಾರವಾಗಿರುವ ಲಡಾಖ್ ಅನ್ನು ಚೀನಾ ಅಧೀನದಲ್ಲಿಟ್ಟುಕೊಳ್ಳಲು ಹೇಗೆ ಸಾಮಥ್ರ್ಯವನ್ನು ವ್ಯಯಿಸುತ್ತಿರಬಹುದು ಅಂದಾಜು ಮಾಡಿ. ಇನ್ನು ಭಾರತ, ಜಪಾನ್, ತೈವಾನ್, ವಿಯೆಟ್ನಾಂ ಯಾವುದರೊಂದಿಗೂ ಚೀನಾದ ಸಂಬಂಧ ಹೆಮ್ಮೆ ತರುವಂಥದ್ದಲ್ಲವೇ ಅಲ್ಲ. ಹೀಗಾಗಿ ಚೀನಾವನ್ನು ಮಣಿಸಲು ಅಮೇರಿಕಾ ಬಲುದೊಡ್ಡ ಸಾಹಸ ಮಾಡಬೇಕಿಲ್ಲ. ಇನ್ನು ಜನಸಮುದಾಯದ ವಿಚಾರಕ್ಕೆ ಬರುವುದಾದರೆ ಜನಸಂಖ್ಯೆಯಲ್ಲಿ ಚೀನಾ ಮುಂದಿರುವುದು ನಿಜವಾದರೂ ವೃದ್ಧರ ಸಂಖ್ಯೆ ಹೆಚ್ಚಿದೆ ಎನ್ನುವುದನ್ನು ಮರೆಯುವಂತಿಲ್ಲ. ಅಮೇರಿಕಾದ ಜನರು ಹೆಚ್ಚು ವಿದ್ಯಾವಂತರು ಮತ್ತು ಹೆಚ್ಚು ಸಂಪತ್ತನ್ನು ಸೃಷ್ಟಿಸಬಲ್ಲ ಸಾಮಥ್ರ್ಯವುಳ್ಳವರು ಎಂದು ಬಕ್ಲರ್ಿ ಅಭಿಪ್ರಾಯಪಡುತ್ತಾನೆ. ಇದೇ ವೇಳೆಗೆ ಚೀನಾದಲ್ಲಿರುವ ಕಾಮರ್ಿಕರಲ್ಲಿ ಶೇಕಡಾ 65ರಷ್ಟು ಜನ ವಿದ್ಯಾವಂತರಲ್ಲವೆಂದೂ ಮತ್ತು ಹೆಚ್ಚು ಸಂಪತ್ತನ್ನು ಸೃಷ್ಟಿಸುವಲ್ಲಿ ಸೋಲುತ್ತಾರೆಂದು ಆತ ಅಂಕಿ-ಅಂಶಗಳ ಮೂಲಕ ವಾದಿಸುತ್ತಾನೆ. ಇನ್ನು ರಾಜಕೀಯದ ದೃಷ್ಟಿಕೋನಕ್ಕೆ ಬರುವುದಾದರೆ ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ಸೌಧ ಕಟ್ಟಿರುವುದರಿಂದ ಅಮೇರಿಕಾಕ್ಕೆ ಸೂಪರ್ಪವರ್ ಪಟ್ಟದಲ್ಲೇ ಉಳಿಯುವ ಅವಕಾಶಗಳು ಹೆಚ್ಚು ಎಂಬುದು ಅವನ ಅಭಿಪ್ರಾಯ.

3

ಇವೆಲ್ಲದರ ನಡುವೆ ಕರ್ಮಸಿದ್ಧಾಂತವೊಂದಿದೆಯಲ್ಲ. ಅದರ ಜಾಡುಹಿಡಿದು ಹೋದಾಗಲೆಲ್ಲಾ ಕಸಿವಿಸಿವುಂಟಾಗುತ್ತದೆ. ಆ ಪಥದಲ್ಲಿ ಅಮೇರಿಕಾ ಮತ್ತು ಚೀನಾ ಎರಡಕ್ಕೂ ಜಗತ್ತಿನಲ್ಲಿ ಪ್ರಭುತ್ವ ಉಳಿಸಿಕೊಳ್ಳುವ ಯಾವ ಅಧಿಕಾರವೂ ಇಲ್ಲ. ಹಾಗೇ ಸುಮ್ಮನೆ ಅಮೇರಿಕಾದ ಇತಿಹಾಸವನ್ನು ಕೆದಕಿ ನೋಡಿ. ಭಾರತವನ್ನು ಹುಡುಕುತ್ತಾ ಕೊಲಂಬಸ್ ಮುಗ್ಗರಿಸಿಬಿದ್ದಿದ್ದು ಅಮೇರಿಕಾದಲ್ಲಿ. ಅವತ್ತು ತಾನು ಭಾರತವನ್ನು ಕಂಡುಹಿಡಿದೆ ಎಂದೇ ಆತ ಹೇಳಿಕೊಂಡಿದ್ದ. ಆಗಲೇ ಅಮೇರಿಕಾದ ಕರಾವಳಿ ತೀರ ಸ್ಪೇನಿನ ಕಾಲೊನಿಯಾಗಿ ರೂಪುಗೊಳ್ಳಲಾರಂಭಿಸಿತ್ತು. ಮುಂದೆ 17ನೇ ಶತಮಾನದ ಆರಂಭದಲ್ಲಿ ಬ್ರಿಟನ್ ಅಲ್ಲಿ ತನ್ನ ವಸಾಹತುಗಳನ್ನು ಸ್ಥಾಪಿಸಿತು. 1750ರ ವೇಳಗೆ ಆ ಕರಾವಳಿಯ ಗಡಿಯುದ್ದಕ್ಕೂ ಅನೇಕ ಭೂಭಾಗಗಳಲ್ಲಿ ಬಿಳಿಯರ ಧ್ವಜ ಹಾರಾಡುತ್ತಿತ್ತು. ಹಾಗಂತ ಅದೇನು ಸುಲಭವಾಗಿ ದಕ್ಕಿಸಿಕೊಂಡ ಭೂಭಾಗವೆಂದು ಭಾವಿಸಿಬಿಡಬೇಡಿ. ಸ್ಪೇನಿನ ಮಹತ್ವಾಕಾಂಕ್ಷಿ ಸೇನಾನಾಯಕ ಫ್ರಾನ್ಸಿಸ್ ಪಿಜಾರೊ 1533ರಲ್ಲಿ 300 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದ ಇಂಕಾ ಸಾಮ್ರಾಜ್ಯದ ಕಥೆಯನ್ನು ಮುಗಿಸಿದ್ದ. ಬರಿಯ 180 ಸೈನಿಕರೊಂದಿಗೆ ಸಾಮ್ರಾಜ್ಯದ ಗಡಿಗೆ ಬಂದಿದ್ದ ಪಿಜಾರೋ ರಾಜ ಅತಾಹುಅಲ್ಫನ ಗೆಳೆತನ ಬೆಳೆಸಿದ. ಆತನಿಂದ ಯಾವ ತೊಂದರೆಯನ್ನೂ ಗ್ರಹಿಸದಿದ್ದ ರಾಜ ನಿಶ್ಶಸ್ತ್ರನಾಗಿಯೇ ಪಿಜಾರೋ ನೀಡಲಿಚ್ಛಿಸಿದ ಔತಣ ಕೂಟಕ್ಕೆ ಹೋದ. ಅಲ್ಲಿ ಮೋಸದಿಂದ ರಾಜನನ್ನು ಬಂಧಿಸಿ ಆತನನ್ನು ಕೊಂದುಬಿಡುವ ಬೆದರಿಕೆ ಹಾಕಿ ಇಂಕಾ ಸಾಮ್ರಾಜ್ಯಕ್ಕೆ ಸೇರಿದ 30ಸಾವಿರ ಸೈನಿಕರನ್ನು ಮಾರಣಹೋಮ ಮಾಡಿದ! ಕೊನೆಗೆ ರಾಜನ ಬಿಡುಗಡೆಗೆ 24 ಟನ್ನುಗಳಷ್ಟು ಚಿನ್ನವನ್ನು ಪಡಕೊಂಡ. ಅಷ್ಟಾದರೂ ಸಮಾಧಾನವಾಗದೆ ಆತ ಸ್ಪೇನ್ ರಾಜನ ಪದಚ್ಯುತಿಗೆ ಪ್ರಯತ್ನಿಸಿದವನು ಎಂಬ ಆರೋಪಮಾಡಿ ಮರಣದಂಡನೆಯನ್ನೂ ವಿಧಿಸಿದ. ಕೊನೆಗೆ ಹೀಗೇ ಸಾಯುವುದಾದರೆ ಬೆಂಕಿಗೆ ಎಸೆಯಲಾಗುತ್ತದೆಂದೂ ಏಸುಕ್ರಿಸ್ತನನ್ನು ಒಪ್ಪಿಕೊಂಡು ಸತ್ತರೆ ಕುತ್ತಿಗೆಗೆ ಕಬ್ಬಿಣದ ರಿಂಗು ಸುತ್ತಿಸಿ ಕೊಲ್ಲಲಾಗುವುದು ಎಂದೂ ಹೇಳಿದ. ತನ್ನ ದೇಹ ಉಳಿದರೆ ಅದನ್ನು ಗೋರಿಗಳಲ್ಲಿ ಕಾಪಿಡಲು ಅನುಕೂಲವಾಗಬಹುದೆಂಬ ಭರವಸೆಯಿಂದ ಅತಾಹುಅಲ್ಫ ಏಸುಕ್ರಿಸ್ತನನ್ನು ಒಪ್ಪಿಕೊಂಡು ಪ್ರಾಣಬಿಟ್ಟ. ಜಗತ್ತನ್ನೆಲ್ಲಾ ಕಬಳಿಸಬೇಕೆಂದು ಹೊಂಚುಹಾಕಿದ್ದ ಕ್ರಿಶ್ಚಿಯನ್ನರದ್ದು ಅತ್ಯಂತ ಕ್ರೂರಿ ಜನಾಂಗ. ಏಸುಕ್ರಿಸ್ತನನ್ನು ನಂಬಿ ನಡೆಯುವ ಬಿಳಿಯರು ಮಾತ್ರ ಶ್ರೇಷ್ಠ ಜನಾಂಗದವರು, ಉಳಿದವರೆಲ್ಲಾ ಅನಾಗರಿಕರೆಂಬ ಅಹಂಕಾರ ಅವರಿಗೆ ಕಾಲುಗುರಿನಿಂದ ತಲೆಕೂದಲವರೆಗೂ ತುಂಬಿಕೊಂಡುಬಿಟ್ಟಿದೆ. ಇದೇ ಜನ ಮುಂದೆ ಹಂತಹಂತವಾಗಿ ಅಮೇರಿಕಾದುದ್ದಕ್ಕೂ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸುತ್ತಾ ನಡೆದರು. ಅಲ್ಲಿನ ಮೂಲನಿವಾಸಿಗಳಲ್ಲಿ ಹೆದರಿಸಬಹುದಾಗಿದ್ದವರನ್ನು ಗುಲಾಮರಾಗಿಸಿಕೊಂಡರು. ಉಳಿದವರನ್ನು ತಮ್ಮ ವ್ಯಾಪ್ತಿಯಿಂದ ಓಡಿಸಿದರು. ಈ ನಡುವೆ ದೂರದ ಯುರೋಪಿನಲ್ಲಿ ಫ್ರೆಂಚರು ಬ್ರಿಟೀಷರ ನಡುವೆ, ಆಗಾಗ ಸ್ಪೇನಿಗರ ನಡುವೆಯೂ ಗಲಾಟ ನಡೆಯುತ್ತಲೇ ಇತ್ತು. ಅದರ ಪರಿಣಾಮವಾಗಿ ಇಲ್ಲಿಯೂ ಕೂಡ ಅವರ ವಸಾಹತುಗಳ ನಡುವೆ ಕಿತ್ತಾಟ ಇದ್ದೇ ಇತ್ತು. ಈ ಹಂತದಲ್ಲಿಯೇ ಫ್ರೆಂಚರ ವಸಾಹತುಗಳನ್ನು ವಶಪಡಿಸಿಕೊಳ್ಳುತ್ತಾ ಬ್ರಿಟೀಷರು ತಮ್ಮ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ನಡೆದದ್ದು. 1773ರಲ್ಲಿ ಬ್ರಿಟನ್ ಸಕರ್ಾರ ಇಲ್ಲಿರುವ ಬ್ರಿಟೀಷರ ಮೇಲೆ ಅಧಿಕಾರ ಚಲಾಯಿಸಿ ತೆರಿಗೆ ಹೆಚ್ಚಳ ಮಾಡಿದಾಗ ಇಲ್ಲಿ ಬಂದು ನೆಲೆಸಿದ್ದವರಲ್ಲಿ ಆಕ್ರೋಶ ಮೂಡಿತು. ಆಗಲೇ ಟೀ ಮೇಲೆ ವಿಧಿಸಿದ್ದ ತೆರಿಗೆಯನ್ನು ವಿರೋಧಿಸಿ ಬಂದರಲ್ಲಿ ಲಂಗರು ಹಾಕಿದ್ದ ಹಡಗಿನಲ್ಲಿದ್ದ ಟೀಪುಡಿಯನ್ನಷ್ಟೂ ಸಮುದ್ರಕ್ಕೆ ಚೆಲ್ಲಿ ಪ್ರತಿಭಟಿಸಿದ್ದರು ಅಲ್ಲಿನ ದೇಶಭಕ್ತರು. ಬ್ರಿಟನ್ ಜಗ್ಗದೇ ಹೋದಾಗ ಅಮೇರಿಕಾದಲ್ಲಿದ್ದ ದೇಶಭಕ್ತರು ಮತ್ತು ಬ್ರಿಟೀಷರ ನಡುವೆ ಕದನ ಆರಂಭವಾಯ್ತು. ಫ್ರೆಂಚರ ಸಹಕಾರ ಪಡೆದು ಈ ದೇಶಭಕ್ತರು 1776 ಜುಲೈ 2ಕ್ಕೆ ಸ್ವಾತಂತ್ರ್ಯವನ್ನು ಘೋಷಿಸಿಕೊಂಡರು. ಬ್ರಿಟೀಷರ ಮೇಲೆ ಇದ್ದ ಕೋಪವನ್ನು ಈ ಮೂಲಕ ತೀರಿಸಿಕೊಂಡ ಫ್ರೆಂಚರು ಈ ಅಮೇರಿಕನ್ನರಿಗೆ ಪೂರ್ಣಬೆಂಬಲ ಕೊಟ್ಟು 1783ರಲ್ಲಿ ಬ್ರಿಟನ್ನು ಅಮೇರಿಕಾವನ್ನು ಸಾರ್ವಭೌಮ ರಾಷ್ಟ್ರವೆಂದು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಸಿತು! ಯುರೋಪಿನ ಮೊದಲ ಕಾಲೊನಿ ಸ್ವತಂತ್ರಗೊಂಡಿದ್ದು ಹೀಗೆ. ಹಾಗಂತ ಗಲಾಟೆಗಳೇನೂ ನಿಂತಿರಲಿಲ್ಲ. ಫ್ರೆಂಚರು, ಸ್ಪೇನರು ಆಗಾಗ ಕಿತ್ತಾಡುತ್ತಲೇ ಇದ್ದರು. ಅಮೇರಿಕಾದಲ್ಲಿರುವ ಈ ಬಿಳಿಯರು ಮಾತ್ರ ವಿಸ್ತಾರದ ಮನೋಭಾವನೆಯನ್ನು ಬಿಡಲೇ ಇಲ್ಲ. ವಾಷಿಂಗ್ಟನ್ ಅನ್ನು ರಾಜಧಾನಿಯನ್ನಾಗಿಸಿಕೊಂಡು ಕೆನಡಾವನ್ನು ವಶಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಾ ಪಶ್ಚಿಮದ ಕಡೆಗೆ ರಾಷ್ಟ್ರವನ್ನು ವಿಸ್ತರಿಸುವ ಅವಕಾಶಗಳನ್ನು ಹುಡುಕುತ್ತಲೇ ಇದ್ದರು. 1835ರ ವೇಳೆಗೆ ಟೆಕ್ಸಾಸ್ ವಶವಾಯ್ತು. ಅಲ್ಲಿಂದ 15 ವರ್ಷಗಳಲ್ಲಿ ಕ್ಯಾಲಿಫೋನರ್ಿಯಾ ಇವರ ತೆಕ್ಕೆಗೆ ಬಂತು. ಈ ನಡುವೆ ಬಿಳಿಯರು ಕರಿಯರ ಕಿತ್ತಾಟ, ಜೊತೆಗೆ ಗುಲಾಮರ ಮಾಲೀಕರ ನಡುವೆ ಬಡಿದಾಟಗಳು ನಡೆದೇ ಇದ್ದವು. ಅಲ್ಲಲ್ಲಿ ಶ್ರೇಷ್ಠ ಬಿಳಿಯರು ಎನ್ನುವ ಭಾವನೆಯುಳ್ಳ ಒಂದಷ್ಟು ಜನ ಕರಿಯನ್ನರಷ್ಟೇ ಅಲ್ಲದೇ ಬೇರೆ ಬೇರೆ ದೇಶಗಳಿಂದ ಬಂದ ವಲಸಿಗರನ್ನೂ ಕೂಡ ಕೊಂದು ಹಾಕಲಾರಂಭಿಸಿದರು. ನಿಜಕ್ಕೂ ಆ ಸಿರಿವಂತ ದೇಶದ ಒಡೆಯರಾಗಿದ್ದ ಮೂಲನಿವಾಸಿಗಳು ತಮ್ಮದ್ದೇ ದೇಶದಲ್ಲಿ ಪರಕೀಯರಾಗಿದ್ದರು! ಆದರೆ ವ್ಯಾಪಾರ, ವಹಿವಾಟಿನಲ್ಲಿ ಸಾಕಷ್ಟು ಬುದ್ಧಿಹೊಂದಿದ್ದ ಬಿಳಿಯರು ಕೃಷಿಯಲ್ಲಿ ಮತ್ತು ಕಾಖರ್ಾನೆಗಳನ್ನು ಸ್ಥಾಪಿಸಿ ಉತ್ಪಾದನೆ ಮಾಡುವಲ್ಲಿ ಅಪಾರವಾದ ಸಾಧನೆ ಮೆರೆದರು. 19ನೇ ಶತಮಾನದ ಅತ್ಯಂದ ವೇಳೆಗೆ ಆಥರ್ಿಕವಾಗಿ ಸಬಲವಾಗಿರುವಂತಹ ರಾಷ್ಟ್ರವಾಗಿ ರೂಪುಗೊಂಡರು. ಸಹಜವಾಗಿಯೇ ಹಣ ಕೂಡಿಕೊಂಡಾಗ ವಿಸ್ತಾರವಾಗಬೇಕೆನ್ನುವ ಹುಚ್ಚು ಬರುತ್ತದೆ. ಹವಾಯ್ ದ್ವೀಪಗಳನ್ನು ಅಮೇರಿಕಾ ತನ್ನ ತೆಕ್ಕೆಗೆ ಸೇರಿಸಿಕೊಂಡಿದ್ದು ಈ ಹೊತ್ತಿನಲ್ಲೇ. ಕ್ಯೂಬಾ ಮೇಲೆ ಕಣ್ಣು ಹಾಕಿ ಯುದ್ಧಕ್ಕೆ ಪ್ರಚೋದಿಸಿದ್ದು, ಪೋಟರ್ೊರಿಕೊ ಮತ್ತು ಫಿಲಿಪೈನ್ಸ್ ದ್ವೀಪಗಳನ್ನು ವಶಕ್ಕೆ ಸೆಳಕೊಂಡಿದ್ದು ಈ ಹೊತ್ತಲ್ಲೇ. ಅಮೇರಿಕಾ ಸದ್ದಿಲ್ಲದೇ ಹೀಗೆ ಬೆಳೆಯುತ್ತಿರುವಾಗಲೇ ಮೊದಲ ವಿಶ್ವಯುದ್ಧ ಶುರುವಾಯ್ತು. ಯುರೋಪ್ ಯುದ್ಧರಂಗಕ್ಕೆ ಧುಮುಕಿದರೂ ಅಮೇರಿಕಾ ಶಾಂತವಾಗಿ ಗಮನಿಸುತ್ತಿತ್ತು. ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಾ ತನ್ನ ಉದ್ದಿಮೆಗಳನ್ನು ಬಲಪಡಿಸಿಕೊಳ್ಳುತ್ತಿತ್ತು. ಜರ್ಮನಿ ಸುಮ್ಮನಿರದೇ ಅಮೇರಿಕಾದ ಹಡಗೊಂದನ್ನು ಮುಳುಗಿಸಿಬಿಟ್ಟಾಗ ವಿಧಿಯಿಲ್ಲದೇ ಅಮೇರಿಕಾ ಯುದ್ಧರಂಗಕ್ಕೆ ಧುಮುಕಿತು. 20ಲಕ್ಷ ಸೈನಿಕರನ್ನು ಯುದ್ಧರಂಗಕ್ಕೆ ಕಳಿಸಿತು. ಯುದ್ಧ ಮುಗಿದು ಬ್ರಿಟನ್ನು ನೆಮ್ಮದಿಯ ನಿಟ್ಟುಸಿರುಬಿಡುವ ವೇಳೆಗಾಗಲೇ ತನಗರಿವಿಲ್ಲದಂತೆ ಅಮೇರಿಕಾದ ಸಾಲಕ್ಕೊಳಗಾಗಿಬಿಟ್ಟಿತ್ತು. ಪ್ರಥಮ ಮಹಾಯುದ್ಧದ ನಂತರ ಆಥರ್ಿಕವಾಗಿ ಜಗತ್ತೆಲ್ಲಾ ಕಂಗಾಲಾಗಿ ಹೋಗಿದ್ದರೂ ಅಮೇರಿಕಾ ಅರಳಿ ಮೊದಲಿಗಿಂತ ಹೆಚ್ಚು ನಳನಳಿಸುತ್ತಿತ್ತು. 1930ರ ದಶಕದ ವೇಳೆಗೆ ಜಾಗತಿಕವಾದ ಆಥರ್ಿಕ ದುಃಸ್ಥಿತಿಗೆ ಅಮೇರಿಕಾವೂ ಬಲಿಯಾಯ್ತು. ತನ್ನನ್ನು ತಾನು ಉದ್ಧರಿಸಿಕೊಳ್ಳಲು ಅದಕ್ಕಿದ್ದ ಮಾರ್ಗ ಶಸ್ತ್ರಾಸ್ತ್ರಗಳನ್ನು ಮಾರುವುದೊಂದೇ. ಅದು ಯೋಗಾಯೋಗವೋ ಅಮೇರಿಕಾದ್ದೇ ಕೈವಾಡವೋ ಗೊತ್ತಿಲ್ಲ. ಆ ಹೊತ್ತಲ್ಲಿ ಸರಿಯಾಗಿ ಎರಡನೇ ವಿಶ್ವಯುದ್ಧ ಶುರುವಾಯ್ತು. ಮತ್ತೆ ಅಮೇರಿಕಾ ಶಸ್ತ್ರಗಳನ್ನು ಮಾರಾಟ ಮಾಡಿ ಸಾಕಷ್ಟು ದುಡ್ಡು ಸಂಪಾದಿಸಿತು. ಪಲರ್್ಹಾರ್ಬರ್ನ ಮೇಲೆ ಜಪಾನ್ ದಾಳಿ ಮಾಡಿ ಅಮೇರಿಕಾದ ಸಾರ್ವಭೌಮತೆಯ ಛಾತಿಗೆ ಎಗರಿಸಿ ಒದ್ದೊಡನೆ ಅಮೇರಿಕಾ ಮೈಕೊಡವಿಕೊಂಡು ನಿಂತಿತು. ವಿಜ್ಞಾನಿಗಳ ಸಂಶೋಧನೆಯ ಕೂಸಾದ ಎರಡು ಬೇಬಿಬಾಂಬ್ಗಳನ್ನು ಹಿರೋಷಿಮಾ ಮತ್ತು ನಾಗಾಸಾಕಿಗಳ ಮೇಲೆಸೆಯಿತು. ಜಪಾನ್ ಬೇಷರತ್ತಾಗಿ ಶರಣಾಗುವುದರೊಂದಿಗೆ ಯುದ್ಧ ಮುಗಿಯಿತೇನೋ ನಿಜ. ಆದರೆ ಅಮೇರಿಕಾ ಮೊದಲಿಗಿಂತ ಹೆಚ್ಚು ಬಲಾಢ್ಯ ರಾಷ್ಟ್ರವಾಗಿ ಈಗ ಮತ್ತೆ ಅನಾವರಣಗೊಂಡಿತ್ತು!

4

ನಿಜವಾದ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಇಲ್ಲಿಂದ ಆರಂಭವಾಗುತ್ತದೆ. ತನ್ನೆಲ್ಲಾ ಕುಟಿಲನೀತಿಯನ್ನು ಬಳಸಿ ಅಮೇರಿಕಾ ಎದುರಿಗೆ ಬಂದವರನ್ನು ಮುಲಾಜಿಲ್ಲದೇ ಮುಗಿಸುತ್ತಾ ಈ ಹಂತಕ್ಕೆ ಬಂದು ನಿಂತುಬಿಟ್ಟಿತು. ಸ್ಪೇನಿನಲ್ಲಿ ಇಂದು ಕರೋನಾ ತಾಂಡವನೃತ್ಯ ನಡೆಸುತ್ತಿರುವಾಗ ಜನರಲ್ ಪಿಜಾರೋನಾ ದೇಹ ಸಮಾಧಿಯಲ್ಲೇ ಮಗ್ಗಲು ಬದಲಿಸಿದ್ದು ನಿಜವಾದರೆ, ಕರ್ಮಸಿದ್ಧಾಂತ ಅಮೇರಿಕಾವನ್ನು ಅಟ್ಟಿಸಿಕೊಂಡು ಹೋಗುವುದೂ ಅಷ್ಟೇ ನಿಜ. ಆದರೆ ಆ ಕಾಲ ಬಂದಿದೆಯೋ ಬರಬೇಕಿದೆಯೋ ಕಾದುನೋಡಬೇಕಷ್ಟೇ!

Comments are closed.