ವಿಭಾಗಗಳು

ಸುದ್ದಿಪತ್ರ


 

ಅಯ್ಯೋ ಪಾಪ, ಮನಮೋಹನ್ ಸಿಂಗ್!

ಮನಮೋಹನ್ ಸಿಂಗರು ಈ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದೇ ಅಚ್ಚರಿ. ಅಟಲ್ ಬಿಹಾರಿ ವಾಜಪೇಯಿಯವರ ಮನಮೆಚ್ಚುವ ಆಡಳಿತದಿಂದ ಭಾರತದ ಜನತೆ ಕಾಂಗ್ರೆಸ್ಸಿನತ್ತ ಒಲವು ತೋರಿಸುವರೆಂದು ಯಾರೊಬ್ಬರೂ ಭಾವಿಸಿರಲಿಲ್ಲ. ಕಾಂಗ್ರೆಸ್ಸು ತಕ್ಷಣಕ್ಕೆ ಗೆದ್ದಾಗ ಮುಂದಿನ ಪ್ರಧಾನಿ ಸೋನಿಯಾ ಆಗಬೇಕೆಂಬುದು ಕಾಂಗ್ರೆಸ್ಸಿಗರ ಇಚ್ಛೆಯಾಗಿತ್ತು.

ಸಂಜಯ್ ಬರು ಬರೆದಿರುವ ಕೃತಿ ಆಧಾರದ ಮೇಲಿನ ದ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ತೆರೆಕಂಡಿದೆ. ಸಂಜಯ್ ಮನಮೋಹನ್ ಸಿಂಗರ ಆಪ್ತವಲಯದಲ್ಲಿ ಗುರುತಿಸಿಕೊಂಡವ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅವರ ಮಾಧ್ಯಮ ಸಲಹೆಗಾರನಾಗಿದ್ದು ಭಾಷಣಗಳನ್ನೂ ಬರೆದುಕೊಡುತ್ತಿದ್ದವ ಸಂಜಯ್. ಮನಮೋಹನರನ್ನು ಅವರ ಹೆಂಡತಿಗಿಂತಲೂ ಅತ್ಯಂತ ಹತ್ತಿರದಿಂದ ಬಲ್ಲವ ಸಂಜಯ್ ಎಂದು ಸಿನಿಮಾ ಮುಗಿಯುವ ವೇಳೆಗೆ ನಿಮ್ಮ ಮನಸಿಗೂ ಬಂದರೆ ಅಚ್ಚರಿಯಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಿನಿಮಾ ತನ್ನಷ್ಟಕ್ಕೆ ತಾನೇ ನಿಮ್ಮನ್ನು ನೋಡಿಸಿಕೊಂಡೇನು ಹೋಗುವುದಿಲ್ಲ. ಸುಮಾರು ಎರಡು ಗಂಟೆಗಳ ಕಾಲ ಪಟ್ಟಾಗಿ ಕುಳಿತೇ ಸಿನಿಮಾ ನೋಡಬೇಕು. ಸಿನಿಮಾಕ್ಕೆ ಒಂದು ಸಾಕ್ಷ್ಯ ಚಿತ್ರದ ರೂಪ ಮೇಲ್ನೋಟಕ್ಕೆ ಕಂಡು ಬರುತ್ತದೆ. ಇಡಿಯ ಸಿನಿಮಾವನ್ನು ಸಂಜಯ್ ಬರು ಪಾತ್ರಧಾರಿ ತಾನೇ ನಿರೂಪಿಸುತ್ತಾ ಹೋಗುವುದು ವಿಶೇಷ. ಮತ್ತು ಈ ನಿರೂಪಣೆಯ ಉದ್ದಕ್ಕೂ ಎಲ್ಲ ಪಾತ್ರಗಳನ್ನೂ ಕಥೆಗೆ ತಕ್ಕಂತೆ ಜೋಡಿಸುತ್ತಾ ಹೋಗುತ್ತಾನೆ. ಇತರೆ ಸಿನಿಮಾಗಳನ್ನು ನೋಡಿದಂತೆ ಇದನ್ನು ನೋಡಲು ಖಂಡಿತ ಸಾಧ್ಯವಿಲ್ಲ. ಸ್ವಲ್ಪ ಹಿಂದೆ ಮುಂದೆ ಅರಿವಿದ್ದಾಗ ಮಾತ್ರ ಸಿನಿಮಾವನ್ನು ಪೂರ್ಣ ಪ್ರಮಾಣದಲ್ಲಿ ಆನಂದಿಸಲು ಸಾಧ್ಯ. ಆದರೆ ಒಂದಂತೂ ಸತ್ಯ. ಪೂರ್ಣ ಸಿನಿಮಾ ನೋಡಿ ಮುಗಿಯುವುದರೊಳಗೆ ಮನಮೋಹನ್ ಸಿಂಗರ ಕುರಿತಂತೆ ಪ್ರತಿಯೊಬ್ಬರಿಗೂ ಅಯ್ಯೋ ಪಾಪ ಎನಿಸಿಬಿಟ್ಟಿರುತ್ತದೆ.

2

ಮನಮೋಹನ್ ಸಿಂಗರು ಈ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದೇ ಅಚ್ಚರಿ. ಅಟಲ್ ಬಿಹಾರಿ ವಾಜಪೇಯಿಯವರ ಮನಮೆಚ್ಚುವ ಆಡಳಿತದಿಂದ ಭಾರತದ ಜನತೆ ಕಾಂಗ್ರೆಸ್ಸಿನತ್ತ ಒಲವು ತೋರಿಸುವರೆಂದು ಯಾರೊಬ್ಬರೂ ಭಾವಿಸಿರಲಿಲ್ಲ. ಕಾಂಗ್ರೆಸ್ಸು ತಕ್ಷಣಕ್ಕೆ ಗೆದ್ದಾಗ ಮುಂದಿನ ಪ್ರಧಾನಿ ಸೋನಿಯಾ ಆಗಬೇಕೆಂಬುದು ಕಾಂಗ್ರೆಸ್ಸಿಗರ ಇಚ್ಛೆಯಾಗಿತ್ತು. ಆದರೆ ಅದಕ್ಕೆ ಸಾಕಷ್ಟು ಸಾಂವೈಧಾನಿಕ ತೊಡಕುಗಳಿದ್ದವು. ಚಿತ್ರದಲ್ಲಿ ಸಂಜಯ್ ಬರು ಅದರ ಕುರಿತಂತೆ ವಿಶೇಷವಾದ ಎಳೆಯನ್ನು ಬಿಚ್ಚಿಡುವುದಿಲ್ಲವಾದರೂ ಪ್ರಧಾನಿಯಾಗಬೇಕೆಂದು ತುದಿಗಾಲಲ್ಲಿ ನಿಂತಿದ್ದ ಸೋನಿಯಾ ಅದನ್ನು ನಿರಾಕರಿಸಲು ತ್ಯಾಗದ ಸೋಗನ್ನು ಹಾಕಿದ್ದಂತೂ ನಿಜ. ಅಧ್ಯಕ್ಷರಾಗಿದ್ದ ಅಬ್ದುಲ್ ಕಲಾಂರು ಆಕೆಯನ್ನು ಕರೆದು ಪ್ರಧಾನಿಯಾಗುವುದು ಸರಿಯಲ್ಲವೆಂಬುದನ್ನು ವಿವರಿಸಿದರೆನ್ನುತ್ತದೆ ಅಂದಿನ ಘಟನಾವಳಿಗಳು. ಆದರೆ ಅನಿವಾರ್ಯವಾಗಿ ಅಧಿಕಾರವನ್ನು ಬಿಟ್ಟುಕೊಡುವಾಗ ಅದನ್ನು ಯಾರ ಕೈಲಿಡುವುದೆಂಬ ಪ್ರಶ್ನೆಯೂ ಸೋನಿಯಾಗಿದ್ದಿತ್ತು. ಇರುವ ಎಲ್ಲ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಸಕರ್ಾರವನ್ನು ಮುಂದೊಯ್ಯಬೇಕಾದರೆ ಯಾರೊಂದಿಗೂ ಕದನಕ್ಕಿಳಿಯದ ಆದರೆ ತನ್ನ ಮಾತನ್ನು, ಪಾಟರ್ಿಯ ಮಾತನ್ನು ಅವಡುಗಚ್ಚಿ ಕೇಳುವ ವ್ಯಕ್ತಿಯೊಬ್ಬ ಬೇಕಿತ್ತು. ಆಗಲೇ ಸಿಕ್ಕಿದ್ದು ಮನಮೋಹನ್ ಸಿಂಗ್. ಹಾಗೆ ನೋಡಿದರೆ ಮನಮೋಹನರಿಗಿಂತಲೂ ಸಮರ್ಥವಾಗಿದ್ದು, ಅವರಿಗಿಂತಲೂ ಹಿರಿಯರಾಗಿದ್ದ ಪ್ರಣಬ್ ಮುಖಜರ್ಿ ಎಲ್ಲ ದಿಕ್ಕಿನಿಂದಲೂ ಈ ಹುದ್ದೆಗೆ ಅರ್ಹರಾಗಿದ್ದರು. ಆದರೆ ಅವರು ಕೈಗೊಂಬೆಯಾಗಬಲ್ಲಂತಹ ಸಾಧ್ಯತೆಗಳಿರಲಿಲ್ಲವಾದ್ದರಿಂದ ಕೊನೆಗೂ ಅವರನ್ನು ಪಕ್ಕಕ್ಕೆ ಸರಿಸಿ ಏಕಪಕ್ಷವಾಗಿ ಸೋನಿಯಾ ಮನಮೋಹನ ಸಿಂಗರನ್ನೇ ಪ್ರಧಾನಿ ಪಟ್ಟಕ್ಕೆ ಕೂರಿಸಿದರು. ಮನಮೋಹನರಿಗೆ ಈ ಸಂತಸ ಒಂದು ದಿನದ್ದೋ ಅರ್ಧ ದಿನದ್ದೋ ಇರಬಹುದಷ್ಟೇ. ಏಕೆಂದರೆ ಪ್ರಧಾನಮಂತ್ರಿ ಕಛೇರಿಯಲ್ಲಿ ಯಾರನ್ನಿಟ್ಟುಕೊಳ್ಳಬೇಕೆಂಬ ಸ್ವಾತಂತ್ರ್ಯವೂ ತನಗಿಲ್ಲವೆಂಬುದು ಅವರಿಗೆ ಬಲುಬೇಗ ಅರಿವಾಯ್ತು. ಎಲ್ಲಾ ಸೋನಿಯಾ ಚಮಚಾಗಳು ಪ್ರಧಾನಮಂತ್ರಿ ಕಛೇರಿಯ ಉನ್ನತ ಹುದ್ದೆಯನ್ನು ಅಲಂಕರಿಸಿದರು. ಸೋನಿಯಾಳ ಪರವಾಗಿ ಇವೆಲ್ಲವನ್ನೂ ಸಂಭಾಳಿಸುತ್ತಿದ್ದವ ಅಹ್ಮದ್ ಪಟೇಲ್. ಪ್ರಧಾನಮಂತ್ರಿ ಕಛೇರಿಯಲ್ಲಿರುವವರು ಪ್ರಧಾನಮಂತ್ರಿಗೆ ವರದಿ ಒಪ್ಪಿಸುವುದನ್ನು ಬಿಟ್ಟು ಸೋನಿಯಾಳೊಡನೆ ನಿರಂತರ ಸಂಪರ್ಕದಲ್ಲಿರುತ್ತಿದ್ದರು. ಆಗಲೇ ಪತ್ರಿಕೆಗಳೆಲ್ಲಾ ಸಕರ್ಾರದಲ್ಲಿ ಎರಡೆರಡು ಅಧಿಕಾರದ ಕೇಂದ್ರಗಳಿವೆ ಎಂದು ಟೀಕಿಸುತ್ತಿದ್ದಾಗ ಮನಮೋಹನಸಿಂಗರು ಅದು ಎರಡಲ್ಲ ಒಂದೇ ಅಧಿಕಾರದ ಕೇಂದ್ರ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದರು. ಆದರೆ ಆ ಒಂದು ಕೇಂದ್ರವೂ ತಾನಲ್ಲವೆಂಬುದು ಅವರಿಗೂ ಬಲುಬೇಗ ಅರ್ಥವಾದದ್ದನ್ನು ಚಿತ್ರದಲ್ಲಿ ಮಾಮರ್ಿಕವಾಗಿ ತೋರಿಸಲಾಗಿದೆ.

3

ಮನಮೋಹನ್ ಸಿಂಗರ ಪ್ರತಿಯೊಂದು ನಿರ್ಣಯದಲ್ಲೂ ಸೋನಿಯಾ ಅಷ್ಟೇ ಅಲ್ಲದೇ ಆಕೆಯೇ ರೂಪಿಸಿದ್ದ ಸಂವಿಧಾನ ವಿರೋಧಿಯಾದ ನ್ಯಾಷನಲ್ ಅಡ್ವೈಸರಿ ಕಮಿಟಿ ಮೂಗು ತೂರಿಸುತ್ತಿದ್ದುದು ಚಿತ್ರದಲ್ಲಿ ಮಾಮರ್ಿಕವಾಗಿ ಹಿಡಿದಿಡಲಾಗಿದೆ. ಎಲ್ಲಾ ಯೋಜನಾತ್ಮಕ ನಿರ್ಣಯಗಳನ್ನು ಈ ಸಮಿತಿ ತೆಗೆದುಕೊಳ್ಳುತ್ತಿತ್ತು ಮತ್ತು ಮನಮೋಹನ್ ಸಿಂಗರು ಅದಕ್ಕೆ ಮುಖವಾಡವಾಗಿ ನಿಂತಿದ್ದರು ಅಷ್ಟೇ. ಅವರು ತೆಗೆದುಕೊಂಡ ಬಲವಾದ ನಿರ್ಣಯವೆಂದರೆ ಸಂಜಯ್ ಬರು ಮಾಧ್ಯಮ ಸಲಹೆಗಾರನಾಗಿರಬೇಕೆಂಬುದೊಂದೇ ಇರಬೇಕು. ಜಾಜರ್್ ಬುಶ್ನೊಂದಿಗಿನ ಭಾರತದ ಸಂಬಂಧವನ್ನು ಬಲಗೊಳಿಸಿದ ಮನಮೋಹನರು ಅಣು ಒಪ್ಪಂದದ ಕುರಿತಂತೆ ಎರಡೂ ರಾಷ್ಟ್ರಗಳ ನಡುವಿನ ಒಪ್ಪಂದಕ್ಕೆ ಸಹಿ ಮಾಡಲು ಸಿದ್ಧವಾದರು. ಇದು ತೀವ್ರತರದಲ್ಲಿ ರಾಷ್ಟ್ರಮಟ್ಟದಲ್ಲಿ ಗಲಾಟೆಯಾಗಲು ಹೊರಟಾಗ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ಎಡಪಕ್ಷಗಳ ವಿರುದ್ಧವಾಗಿ ಕಟ್ಟುನಿಟ್ಟಾಗಿಯೇ ಮಾತನಾಡಿದ ಮನಮೋಹನರು ಸೋನಿಯಾಳ ಅವಕೃಪೆಗೆ ಪಾತ್ರರಾಗಿದ್ದರು. ಈಗ ಸೋನಿಯಾ ಮನಮೋಹನರ ಮೇಲೆ ಏರಿ ಹೋಗುವ ಪ್ರಸಂಗ ಬಂದಾಗ ಮನಮೋಹನರೂ ಅಷ್ಟೇ ಶಾಂತವಾಗಿ ರಾಜಿನಾಮೆ ಕೊಡುತ್ತೇನೆಂದು ಹೇಳಿ ಎದ್ದುಬಂದಿದ್ದರು. ಗಲಾಟೆಯ ನಡುವೆ ಸಕರ್ಾರವೇ ಬಿದ್ದು ಹೋಗುವ ಹಂತ ಬಂದಾಗ ಅಮರ್ಸಿಂಗ್ ಬೆಂಬಲದಿಂದ ಸಕರ್ಾರವನ್ನು ಮನಮೋಹನರು ಉಳಿಸಿಕೊಂಡಿದ್ದರು. ಸಂಖ್ಯೆಯಿಲ್ಲದೇ ಪೂರ್ಣಪ್ರಮಾಣದ ಅಧಿಕಾರ ನಡೆಸಿದ ಪಿ.ವಿ ನರಸಿಂಹರಾಯರು ಕಲಿಸಿಕೊಟ್ಟ ಪಾಠ ಇದ್ದರೂ ಇದ್ದೀತು ಅದು. ಮನಮೋಹನ್ ಸಿಂಗರ ಮೇಲೆ ಅದಾದನಂತರ ಕಾಂಗ್ರೆಸ್ಸಿನ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಸೋನಿಯ-ಅಹ್ಮದ್ರ ಒತ್ತಡ ಇನ್ನೂ ಜೋರಾಗಿಯೇ ಇತ್ತು. ಹೇಗಾದರೂ ಮಾಡಿ ರಾಹುಲ್ನನ್ನು ನಾಯಕನೆಂದು ಬಿಂಬಿಸಿಬಿಡುವ ಅವರ ತವಕ ಹೇಳತೀರದ್ದು. ಮೊದಲನೇ ಅವಧಿ ಮುಗಿಯುವಾಗಲೇ ಮನಮೋಹನರನ್ನು ಪಕ್ಕಕ್ಕೆ ತಳ್ಳಿ ರಾಹುಲ್ನನ್ನು ಬಿಂಬಿಸುವ ಪ್ರಯತ್ನವಾಗಿತ್ತಾದರೂ ಮನಮೋಹನರು ಮುಂಚೂಣಿಯಲ್ಲಿ ನಿಂತು ಎರಡನೇ ಅವಧಿಗೂ ಪ್ರಧಾನಿಯಾದರು. ಆ ವೇಳೆಗಾಗಲೇ ಅವರು ಅದೆಷ್ಟು ನಗಣ್ಯ ವ್ಯಕ್ತಿಯಾಗಿಹೋಗಿದ್ದರೆಂದರೆ ಸಂಸತ್ತಿನ ಪಡಸಾಲೆಗಳಲ್ಲಿ ಕಾಂಗ್ರೆಸ್ ಎಂಪಿಗಳು ಪ್ರಧಾನಮಂತ್ರಿಯನ್ನು ಮೂಸಿಯೂ ನೋಡುತ್ತಿರಲಿಲ್ಲ. ಸೋನಿಯಾ ಬಂದರೆ ಮಾತ್ರ ಸಾಷ್ಠಾಂಗವೆರಗಿ ಕೃತಾರ್ಥರಾಗುತ್ತಿದ್ದರು.

4

ಮನಮೋಹನರ ಈ ಎರಡನೇ ಅವಧಿ ಅದೆಷ್ಟು ಕೆಡುಕಿನದ್ದಾಗಿತ್ತೆಂದರೆ ಹಗರಣಗಳ ಸರಮಾಲೆಯೇ ನಡೆದುಹೋಯ್ತು. ಮನಮೋಹನರ ಅರಿವಿಗೇ ಬಾರದಂತೆ ಖಾಸಗಿ ಒಪ್ಪಂದಗಳು ಸಹಿಯಾದವು. ಕುಚರ್ಿಯಲ್ಲಿ ಮಾತ್ರ ಅವರಿದ್ದರು. ಆದರೆ ನಿರ್ಣಯವನ್ನೆಲ್ಲಾ ಅಹ್ಮದ್ ಪಟೇಲರೇ ತೆಗೆದುಕೊಳ್ಳುತ್ತಿದ್ದುದು. ಎಲ್ಲ ತಪ್ಪುಗಳನ್ನು ಮಾಡಿದ ನಂತರ ಅದನ್ನು ಸಂಭಾಳಿಸಿಕೊಳ್ಳುವ ಜವಾಬ್ದಾರಿಯನ್ನು ಮಾತ್ರ ಮನಮೋಹನರು ಹೊರಬೇಕಾಯ್ತು. ಕಪಿಲ್ ಸಿಬಲ್ನಂತಹ ಧೂರ್ತರು 2ಜಿ 3ಜಿಯಲ್ಲಿ ಜೀರೋ ಲಾಸ್ನಂತಹ ಅತ್ಯಂತ ಅವಮಾನಕರ ಸಿದ್ಧಾಂತಗಳನ್ನು ಪ್ರತಿಪಾದಿಸುವಾಗ ಅರ್ಥಶಾಸ್ತ್ರಜ್ಞ ಮನಮೋಹನ್ಸಿಂಗರು ಅವಡುಗಚ್ಚಿ ಕುಳಿತುಕೊಳ್ಳಬೇಕಾಯ್ತು. ಕೊನೆಗೊಮ್ಮೆ ಪತ್ರಿಕಾಗೋಷ್ಠಿ ಕರೆದು ಈ ಚುನಾವಣೆಯ ನಂತರ ತಾನು ಪ್ರಧಾನಿಯಾಗುವುದಿಲ್ಲ ಎಂದು ಅವರು ಬಾಯ್ಬಿಟ್ಟು ಹೇಳಬೇಕಾಯ್ತು. ಆಗಲೇ ಮುಖ್ಯಭೂಮಿಕೆಗೆ ಬಂದದ್ದು ರಾಹುಲ್. ಬಹುಶಃ ಎದುರಾಳಿ ನರೇಂದ್ರಮೋದಿ ಅಲ್ಲದೇ ಅಡ್ವಾಣಿಯೇ ಇದ್ದಿದ್ದರೆ ಮತ್ತೊಮ್ಮೆ ಕಾಂಗ್ರೆಸ್ಸು ಅಧಿಕಾರಕ್ಕೆ ಬಂದು ರಾಹುಲ್ ಪ್ರಧಾನಿಯೇ ಆಗಿಬಿಡುತ್ತಿದ್ದರು. ಕೊನೆಯ ಪಕ್ಷ ಹತ್ತು ವರ್ಷಗಳ ಕಾಲ ಪ್ರಧಾನಿಯ ಕುಚರ್ಿಯ ಮೇಲೆ ಒಬ್ಬ ಬುದ್ಧಿವಂತ ಕೂತಿದ್ದ ಎಂಬ ಹೆಮ್ಮೆಯಾದರೂ ಇರುತ್ತಿತ್ತು. ರಾಹುಲ್ ಪ್ರಧಾನಿಯಾಗಿದ್ದರೆ ನಾವು ಜಗತ್ತಿಗೆ ಮುಖ ತೋರಿಸುವ ಪರಿಸ್ಥಿತಿಯಲ್ಲೂ ಇರುತ್ತಿರಲಿಲ್ಲ. ಮೋದಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಭಾರತವನ್ನು ಈ ಅವಮಾನದಿಂದ ಉಳಿಸಿದರು ನಿಜ. ಆದರೆ ಮನಮೋಹನ ಸಿಂಗರಿಗೆ ನಿರಂತರವಾಗಿ ಆದ ಅವಮಾನಗಳನ್ನು ಯಾರಿಂದಲೂ ತಡೆಯಲಾಗಲಿಲ್ಲ.

5

ಸತ್ಯವಾಗಲೂ ಸಿನಿಮಾ ಮುಗಿಯುವ ವೇಳೆಗೆ ಮನಮೋಹನರ ಕುರಿತಂತೆ ಅಯ್ಯೋ ಪಾಪ ಎನ್ನುವಂತಹ ಅನುಕಂಪ ಸೃಷ್ಟಿಯಾದರೆ ಅಚ್ಚರಿ ಪಡಬೇಕಿಲ್ಲ. ಆತನ ಪ್ರಾಮಾಣಿಕತೆ, ಬೌದ್ಧಿಕ ಸಾಮಥ್ರ್ಯ ಇವೆಲ್ಲವೂ ಒಂದು ಪರಿವಾರಕ್ಕೆ ಜೀತಕ್ಕೆ ಅಪರ್ಿತವಾಗಿಬಿಟ್ಟಿತಲ್ಲ ಎಂಬುದೇ ನೋವು. ಮತ್ತೊಂದೆಡೆ ಭಾರತೀಯ ಸಂಸ್ಕೃತಿಯ ನಯಾಪೈಸೆಯಷ್ಟೂ ಅರಿವಿರದ ಸೋನಿಯಾ ಅಹ್ಮದ್ ಪಟೇಲ್ ಎಂಬ ದ್ರೋಹಿಯ ಮೂಲಕ ಇಡಿಯ ಭಾರತವನ್ನು ನಿಯಂತ್ರಿಸುವ ಈ ದೃಶ್ಯಗಳೇ ಆಘಾತವುಂಟುಮಾಡಬಲ್ಲವು. ಗಾಂಧಿ ಪರಿವಾರದ ಕುರಿತಂತೆ ಚಿತ್ರ ಮುಗಿಯುವ ವೇಳೆಗೆ ಬೆನ್ನ ಹುರಿಯಲ್ಲೊಂದು ಅಸಹ್ಯದ ಛಳುಕೆದ್ದರೆ ಯಾರೂ ಅಚ್ಚರಿಯಾಗಬೇಕಾಗಿಲ್ಲ. ಮನಮೋಹನರ ಪಾತ್ರದಲ್ಲಿ ಅನುಪಮ್ ಖೇರ್ ಮನಸೆಳೆಯುತ್ತಾರೆ. ಅಟಲ್ಜಿಯ ಪಾತ್ರಧಾರಿಯಂತೂ ನಿಮಗೊಮ್ಮೆ ಖಂಡಿತ ವಾಜಪೇಯಿಯವರನ್ನು ನೆನಪಿಸಿಕೊಡುತ್ತಾರೆ. ಒಟ್ಟಾರೆ ಈ ಸಿನಿಮಾ ಚುನಾವಣೆಗೆ ಮುನ್ನ ಒಮ್ಮೆ ನೋಡಲೇಬೇಕಾದ್ದು. ಏಕೆಂದರೆ ನಾವು ಕೊಡುವ ಒಂದು ಮತ ಏನೆಲ್ಲ ಮಾಡಬಲ್ಲದೆಂಬುದಕ್ಕೆ ಈ ಸಿನಿಮಾ ಎಚ್ಚರಿಕೆಯ ಕರೆಗಂಟೆ. ಮರೆಯದೇ ನೋಡಿ.

Comments are closed.