ವಿಭಾಗಗಳು

ಸುದ್ದಿಪತ್ರ


 

ಅಶೋಕನ ನಂತರ ಹುಟ್ಟಿತೇ ಮನುವಿನ ಮೀನು?

ಮನುಸ್ಮೃತಿಯ ಕತರ್ೃವನ್ನು ಕುರಿತಂತೆ ಜಯಸ್ವಾಲ್ರ ಕೃತಿಯನ್ನು ಆಧರಿಸಿದ ಅವರ ಸಂಶೋಧನೆ ಅಧ್ಯಯನ ಯೋಗ್ಯ. ಇಷ್ಟಕ್ಕೂ ಯಾರೀತ ಮನುಸ್ಮೃತಿಯ ಕತರ್ೃ? ಆತ ಸಾಕ್ಷಾತ್ ಪ್ರಳಯದಿಂದ ಭೂಮಿಯನ್ನು ರಕ್ಷಿಸಿದ ಮನುವೇನಾ? ಅಥವಾ ನಡುಮಧ್ಯೆ ತನ್ನದೇ ಆದ ಕಾನೂನುಗಳನ್ನು ರಾಜಾಶ್ರಯ ಪಡೆದು ಸಮಾಜದ ಮೇಲೆ ಹೇರಲೆತ್ನಿಸಿದ ವಕೀಲನಾ? ಅಂಬೇಡ್ಕರರು ಎಳೆ-ಎಳೆಯಾಗಿ ಗೊಂದಲವನ್ನು ಬಿಡಿಸುತ್ತಾರೆ. ಮನುಸ್ಮೃತಿಯನ್ನು ದೈವಿಕ ಮೂಲದ್ದೆನ್ನುವ ಮತ್ತು ಸೃಷ್ಟಿಕರ್ತನಿಂದಲೇ ಅದನ್ನು ಕೇಳಲ್ಪಟ್ಟ ಮನು ಅದನ್ನು ಮನುಷ್ಯರಿಗೆ ಬೋಧಿಸಿದನೆಂಬ ಮನುಸ್ಮೃತಿಯ ಹೇಳಿಕೆಯನ್ನು ಅವರು ಅನುಮಾನದ ಕಂಗಳಿಂದ ನೋಡುತ್ತಾರೆ. ಅಷ್ಟೇ ಅಲ್ಲ, ಹಿಂದೂ ಸಮಾಜ ಕಂಡ ಅತ್ಯಂತ ದೊಡ್ಡ ಸಾಮಾಜಿಕ ಕ್ರಾಂತಿಯ ದಾಖಲೆಯಾಗಿದ್ದಾಗ್ಯೂ ಅದರ ಮೂಲದ ಕುರಿತಂತೆ ಯಾರೂ ತಲೆಕೆಡಿಸಿಕೊಳ್ಳಲು ಹೋಗಿಲ್ಲವೆಂದು ಅವರು ಆಕ್ಷೇಪಿಸುತ್ತಾರೆ. 

ಸಾಮ್ರಾಜ್ಯಗಳ ಹುಟ್ಟು ಮತ್ತು ಸಾವಿನ ಕಥೆ ಹಿಂದಿ ಸಿನಿಮಾಗಳಷ್ಟೇ ನಾಟಕೀಯ ಮತ್ತು ರೋಚಕ. ನಂದನನ್ನು ಕೆಳಗಿಳಿಸಿ ಮೌರ್ಯ ಸಾಮ್ರಾಜ್ಯ ಕಟ್ಟುವ ಚಂದ್ರಗುಪ್ತ-ಚಾಣಕ್ಯರ ಕಥನ ಯಾವ ಮಹಾಕಾದಂಬರಿಗೂ ವಸ್ತುವಾಗಬಲ್ಲದು. ಹಾಗೆ ನೋಡಿದರೆ ನಂದರ ಸಾಮ್ರಾಜ್ಯ ಮೆಟ್ಟಿ ಹೊಸ ಸಾಮ್ರಾಜ್ಯ ಕಟ್ಟಿದಷ್ಟು ಕಷ್ಟ ಮೌರ್ಯ ಸಾಮ್ರಾಜ್ಯವನ್ನು ಅಂತ್ಯಗೊಳಿಸಿದ ಶುಂಗ ಸಾಮ್ರಾಜ್ಯಕ್ಕಾಗಲಿಲ್ಲ. ನಂದರ ಮಂತ್ರಿ ಅಮಾತ್ಯ ರಾಕ್ಷಸನ ಚಾಣಾಕ್ಷತನ ಅದಕ್ಕೆ ಕಾರಣವಿರಬಹುದು.
ಅಶೋಕನ ನಂತರ ಪಟ್ಟಕ್ಕೆ ಬಂದವರು ವಿಶಾಲ ಸಾಮ್ರಾಜ್ಯವನ್ನು ತಮ್ಮ ತೆಕ್ಕೆಯಲ್ಲಿ ಇರಿಸಿಕೊಳ್ಳುವಲ್ಲಿ ಸೋತು ಹೋದರು. ಸಾಮ್ರಾಜ್ಯ ಗೆದ್ದಲು ತಿಂದ ಮರದಂತಾಯ್ತು. ಈ ಪರಂಪರೆಯ ಕೊನೆಯ ರಾಜ ಬೃಹದೃಥ ಪಟ್ಟಕ್ಕೆ ಬರುವ ವೇಳೆಗಾಗಲೇ ಮೌರ್ಯ ಸಾಮ್ರಾಜ್ಯದ ದೌರ್ಬಲ್ಯಗಳ ಅರಿವು ಶತ್ರುಗಳಿಗೆ ಚೆನ್ನಾಗಿಯೇ ಆಗಿತ್ತು. ಅನೇಕ ವಿದೇಶಿಗರೂ ದಾಳಿಗೈಯ್ಯಲು ಶುರುಮಾಡಿದರು. ಆಗ ಪುಷ್ಯಮಿತ್ರ ಸೇನಾಪತಿಯಾಗಿದ್ದ. ಅಸಮರ್ಥ ರಾಜನಿಂದ ರಾಜ್ಯವನ್ನು ರಕ್ಷಿಸುವ ಹೊಣೆಗಾರಿಕೆ ಈಗ ಅವನ ಮೇಲೆ. ಅವನು ತನ್ನ ಸೇನೆಯೊಂದಿಗೆ ಗಡಿಗೆ ಹೋಗಿ ಆಕ್ರಮಣಕಾರರನ್ನು ಮಟ್ಟ ಹಾಕಿದ, ವಿಜಯಶಾಲಿಯಾಗಿ ಮರಳಿ ಬಂದ. ಅವನ ಶಕ್ತಿ-ಸಾಮಥ್ರ್ಯಗಳ ಬಗ್ಗೆ ಈಗ ಯಾರಿಗೂ ಸಂಶಯವಿರಲಿಲ್ಲ. ಬಾಣ ತನ್ನ ಕೃತಿಯಲ್ಲಿ ಬಣ್ಣಿಸಿದಂತೆ, ವಿಜಯಶಾಲಿಯಾದ ಸೇನೆಯ ವೀಕ್ಷಣೆಗೆ ಬೃಹದ್ರಥನನ್ನು ಕರೆಸಿ ಅಲ್ಲಿ ಅವನನ್ನು ಪುಷ್ಯಮಿತ್ರ ಕೊಂದ. ಬಹುಶಃ ರಾಜನ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ, ಸೈನ್ಯವನ್ನು ಪ್ರೇರೇಪಿಸಿ, ಕ್ಷಿಪ್ರಕ್ರಾಂತಿಯೊಂದಕ್ಕೆ ಆತ ಸಾಕಷ್ಟು ತಯಾರಿ ನಡೆಸಿದ್ದಿರಬೇಕು. ಅಲ್ಲಿಗೆ ಚಂದ್ರಗುಪ್ತ ಕಟ್ಟಿದ ಅಶೋಕ ಉತ್ತುಂಗಕ್ಕೊಯ್ದ ಸಾಮ್ರಾಜ್ಯ ಕೊನೆಯುಸಿರೆಳೆದಿತ್ತು. ಈ ಹಂತದಲ್ಲಿಯೇ ರಾಧಾ ಕುಮುದ ಮುಖಜರ್ಿಯವರು ಅಶೋಕನ ಕುರಿತಂತಹ ಲೇಖನದಲ್ಲಿ ಉಲ್ಲೇಖಿಸಿದ ನಾಲ್ಕು ಮಾತುಗಳನ್ನು ಹೇಳಿಯೇ ಮುಂದೆ ಹೋಗುವುದೊಳಿತು, ‘ಅಶೋಕನ ನೀತಿಯೇ ಮೌರ್ಯ ಸಾಮ್ರಾಜ್ಯದ ಪತನಕ್ಕೆ ಕಾರಣವಾಯಿತೆಂದು ಒಂದು ವೇಳೆ ಭಾವಿಸಿದರೂ, ಅದಕ್ಕಾಗಿ ನಾವು ದುಃಖಿಸಬೇಕಾಗಿಲ್ಲ. ಅಶೋಕನು ಯುದ್ಧಕೋರನಾಗಿ ತಾತನಷ್ಟೇ ದೃಢತೆಯಿಂದ ವತರ್ಿಸಿದ್ದರೂ ಒಂದಲ್ಲ ಒಂದು ದಿನ ಈ ಸಾಮ್ರಾಜ್ಯ ಒಡೆದು ಚೂರಾಗಲೇಬೇಕಿತ್ತು. ಆದರೆ, ನಾಗರಿಕ ಪ್ರಪಂಚದ ಬಹುಭಾಗದಲ್ಲಿ ಭಾರತೀಯ ಸಂಸ್ಕೃತಿಯ ನೈತಿಕ ಔನ್ನತ್ಯ ಶತಶತಮಾನಗಳಿಂದ ಉಳಿದುಕೊಂಡು ಬರುವಂತೆ ಮಾಡಿದವನೆಂದರೆ ಮುಖ್ಯವಾಗಿ ಅಶೋಕ. ಎರಡು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಸಂದಿದ್ದರೂ ಭಾರತದ ಕೀತರ್ಿಯ ದ್ಯೋತಕವಾಗಿ ಇದು ಇನ್ನೂ ಪೂರ್ಣವಾಗಿ ಮಾಯವಾಗಿಲ್ಲ’. ಹೌದು. ಕ್ಷಾತ್ರದ ಹಿನ್ನೆಲೆಯಿಂದ ನೋಡಿದರೆ ಅಶೋಕನ ಕಾಲ ಭಾರತೀಯ ಏಕತೆ, ಅಖಂಡತೆ ಮತ್ತು ರಾಷ್ಟ್ರ ಪ್ರಜ್ಞೆಗಳ ಮೇಲೆ ಮಮರ್ಾಘಾತವೇ. ಆದರೆ ಸಾಂಸ್ಕೃತಿಕ ದೃಷ್ಟಿಕೋನದಿಂದ ನೋಡಿದರೆ ಭಾರತೀಯ ಸಂಸ್ಕೃತಿಯ ಕಂಪನ್ನು ಜಗತ್ತಿನಾದ್ಯಂತ ಪಸರಿಸಿದ ಧೀಮಂತನಾಗಿ ನಿಲ್ಲುತ್ತಾನೆ ಆತ, ಅನುಮಾನವೇ ಇಲ್ಲ.
ಎಲ್ಲೆಡೆ ಜಾತಿ-ಮತ-ಪಂಥಗಳ ತಾಕಲಾಟ ಇರವುದರಿಂದ ಪುಷ್ಯಮಿತ್ರನ ಜಾತಿಯನ್ನೂ ಒಮ್ಮೆ ಅವಲೋಕಿಸಿ ಬಿಡುವುದು ಒಳ್ಳೆಯದೇ. ರಾಯಚೌಧರಿ ತಮ್ಮ ಕೃತಿ ಪೊಲಿಟಿಕಲ್ ಹಿಸ್ಟರಿ ಆಫ್ ಏನ್ಶಿಯಂಟ್ ಇಂಡಿಯಾದಲ್ಲಿ ಶುಂಗ ಸಾಮ್ರಾಜ್ಯವನ್ನು ಸೂರ್ಯಪೂಜಕ ಇರಾನಿಯನ್ನರೆಂದು ಅನುಮಾನಿಸುತ್ತಾರೆ. ಆದರೆ ಪುಷ್ಯಮಿತ್ರ ಬ್ರಾಹ್ಮಣನಾಗಿದ್ದನೆಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸಬಹುದು. ಶುಂಗರು ಭಾರದ್ವಾಜ ಗೋತ್ರದವರೆನ್ನುತ್ತಾರೆ ಪಾಣಿನಿ, ಅಶ್ವಲಾಯನ ಶ್ರೌತ ಸೂತ್ರದಲ್ಲಿ ಶಿಕ್ಷಕರನ್ನು ಶುಂಗರೆನ್ನುತ್ತಾರೆ. ಮುಂದಿನ ದಿನಗಳಲ್ಲಿನ ಕದಂಬರಂತೆ ಇವರೂ ಯಾವಾಗ ಬೆತ್ತವನ್ನು ಬಿಟ್ಟು ಕತ್ತಿ ಹಿಡಿದರೋ ಅರಿವಾಗದೆಂದು ರಾಯ್ ಚೌಧರಿ ತಮಾಷೆ ಮಾಡುತ್ತಾರೆ.

pushyamitra-shunga

ಪುಷ್ಯಮಿತ್ರ ಸಮರ್ಥ ಸೇನಾಪತಿಯಾಗಿದ್ದ. ಅವನ ಸಾಮ್ರಾಜ್ಯ ಪಾಟಲೀಪುತ್ರ, ಅಯೋಧ್ಯೆ, ವಿದಿಶಾ, ಭಾಹರ್ುತ್ಳನ್ನೊಳಗೊಂಡಂತೆ ನರ್ಮದಾ ನದಿಯವರೆಗೂ ಹಬ್ಬಿತ್ತು. ವಿದಿಶಾಕ್ಕೆ ಸ್ವತಃ ರಾಜಕುವರ ಅಗ್ನಿಮಿತ್ರ ರಾಜ್ಯಪಾಲನಾಗಿ ನೇಮಿಸಲ್ಪಟ್ಟಿದ್ದ. ಇವನ ಮತ್ತು ಅಲ್ಲಿನ ರಾಜಕುಮಾರಿ ಮಾಲವಿಕಾರ ಪ್ರೇಮ ಪ್ರಕರಣವೇ ಕಾಳಿದಾಸನ ಮಾಲವಿಕಾಗ್ನಿಮಿತ್ರದ ಕಥಾವಸ್ತು.
ಮೌರ್ಯರ ಕೊನೆಯ ದೊರೆ ಬೃಹದ್ರಥ ತನ್ನ ಸಾಮ್ರಾಜ್ಯವನ್ನು ಎರಡು ಭಾಗ ಮಾಡಿ ಒಂದಾದ ವಿದಿಶಾವನ್ನು ನೋಡಿಕೊಳ್ಳಲು ಪುಷ್ಯಮಿತ್ರನಿಗೆ ಬಿಟ್ಟುಕೊಟ್ಟಿದ್ದ. ಮತ್ತೊಂದು ವಿದರ್ಭದ ಜವಾಬ್ದಾರಿಯನ್ನು ಆಪ್ತ ಮಂತ್ರಿಯೋರ್ವನಿಗೆ ಕೊಡಲಾಗಿತ್ತು. ಪುಷ್ಯಮಿತ್ರ ರಾಜನನ್ನು ಕೊಂದು ಅಧಿಕಾರ ಗ್ರಹಣ ಮಾಡುತ್ತಿದ್ದಂತೆ ಅತ್ತ ವಿದರ್ಭದ ಮುಖ್ಯಸ್ಥನಾಗಿದ್ದ ಸಚಿವ ಯಜ್ಞಸೇನ ತಾನೂ ಸ್ವಾತಂತ್ರ್ಯ ಘೋಷಿಸಿ ರಾಜನಾಗಿಬಿಟ್ಟ. ಮೌರ್ಯನ ಮಂತ್ರಿ ಯಜ್ಞಸೇನನ ಸಂಬಂದಿಯನ್ನು ಬಂಧಿಸಿದ ಪುಷ್ಯಮಿತ್ರ ಸಹಜವಾಗಿಯೇ ವಿದರ್ಭದ ಮೇಲೆ ರಾಜತಾಂತ್ರಿಕ ಒತ್ತಡ ಹೇರಿದ. ಈ ವೇಳೆಗೆ ಸರಿಯಾಗಿ ಅಗ್ನಿಮಿತ್ರನ ಸಂಬಂಧಿಯಾದ ಮಾಧವಸೇನನನ್ನೂ ಯಜ್ಞಸೇನ ಬಂಧಿಸಿ ಇದಿರೇಟನ್ನು ಕೊಟ್ಟ. ಒಪ್ಪಂದಕ್ಕೆ ಕುಳಿತಾಗ ಅತ್ತಲಿಂದ ತನ್ನವರನ್ನು ಬಿಟ್ಟರೆ ಇತ್ತಲಿಂದ ಮಾಧವಸೇನನನ್ನು ಬಿಡುಗಡೆ ಮಾಡಲಾಗುವುದೆಂಬ ಯಜ್ಞಸೇನನ ಮಾತುಗಳಿಂದ ಕೆಂಡಾಮಂಡಲನಾದ ಅಗ್ನಿಮಿತ್ರ ವಿದರ್ಭದ ಮೇಲೆ ಏರಿಹೋದ. ಯಜ್ಞಸೇನ ಸೋತು ಸುಣ್ಣವಾದ. ವಿದರ್ಭ ಪುಷ್ಯಮಿತ್ರನ ಗಡಿಯೊಳಕ್ಕೆ ಸೇರಿಹೋಯ್ತು. ಬಹುಶಃ ಶುಂಗ ಸಾಮ್ರಾಜ್ಯದ ಮೊದಲ ವಿಸ್ತರಣೆ ಇದು.
ಯುದ್ಧ ಬೇಡವೆನ್ನುತ್ತಲೇ, ಧಮ್ಮವಿಜಯದ ಮಾತಾಡುತ್ತ ಬುದ್ಧನೊಂದಿಗೆ ಒಂದಾದ ಅಶೋಕನ ಹಿಂದು ಹಿಂದೆಯೇ ಯುದ್ಧಪರ್ವ ಶುರುವಾಗಿತ್ತು. ಸ್ವತಃ ಶುಂಗದೊರೆಗಳು ಸಮರ್ಥ ಸೇನೆಯನ್ನು ನಿರ್ವಹಿಸುತ್ತಿದ್ದರು. ವಿದೇಶೀ ಆಕ್ರಮಣಕಾರರನ್ನು ಮಟ್ಟಹಾಕಲು ಸುಶಿಕ್ಷಿತ ಸೈನಿಕರು ಸರ್ವದಾ ಸನ್ನದ್ಧರಾಗಿರುತ್ತಿದ್ದರು. ಸೇನಾಪತಿಯೋರ್ವ ಸೇನೆಯ ನಿರ್ವಹಣೆ ಮಾಡುತ್ತಿದ್ದರೂ ಪುಷ್ಯಮಿತ್ರ ನೇರ ತನ್ನ ತೆಕ್ಕೆಯಲ್ಲಿಯೇ ಸೇನೆಯನ್ನು ಇರಿಸಿಕೊಂಡಿದ್ದ. ಅಚ್ಚರಿಯೇನು ಗೊತ್ತೇ? ತಾನೇ ರಾಜನಾಗಿ ಮುಂದೆ ಅನೇಕ ಯುದ್ಧಗಳನ್ನು ಗೆದ್ದು, ಎರಡೆರಡು ಬಾರಿ ಸಾರ್ವಭೌಮತೆಯ ಪ್ರದರ್ಶನದ ಅಶ್ವಮೇಧಯಾಗ ಮಾಡಿದ ಪುಷ್ಯಮಿತ್ರ ತನ್ನ ತಾನು ಎಂದಿಗೂ ಚಕ್ರವತರ್ಿ ಎಂದು ಕರೆದುಕೊಳ್ಳಲೇ ಇಲ್ಲ. ಆತ ಸೇನಾಪತಿ ಎನಿಸಿಕೊಂಡೇ ತನ್ನ ಜೀವಿತಾವಧಿ ಪೂರ್ಣಗೊಳಿಸಿದ.
ಪುಷ್ಯಮಿತ್ರನ ಕಾಲಕ್ಕೆ ವಿದೇಶೀಯರ ಆಕ್ರಮಣವಾಯ್ತು. ಇವರನ್ನು ಮೂಲತಃ ಸಿರಿಯಾದ ಬಾಸ್ಟ್ರಿಯನ್ ಗ್ರೀಕರಿರಬಹುದೆಂದು ಅನುಮಾನಿಸಲಾಗುತ್ತದೆ. ರಾಜಕುಮಾರ ವಸುಮಿತ್ರ ಅಶ್ವಮೇಧ ಯಾಗದ ಹಿನ್ನೆಲೆಯಲ್ಲಿ ಕುದುರೆಯೊಂದನ್ನು ಒಯ್ಯುವಾಗ ಸಿಂಧೂ ನದಿಯ ಆಸುಪಾಸಿನಲ್ಲಿ ವಿದೇಶಿಗರು ತಡೆದು ನಿಲ್ಲಿಸಿದರು. ಅವರನ್ನು ಸೋಲಿಸಿ ಕುದುರೆಯನ್ನು ಸುರಕ್ಷಿತವಾಗಿ ತಂದು ಯಜ್ಞಕ್ಕೆ ಸಮಪರ್ಿಸಲಾಯಿತು. ಈ ಯವನರನ್ನು ಪುಷ್ಯಮಿತ್ರ ಸಿಂಧೂ ನದಿಯಿಂದಲೂ ಬಲುದೂರಕ್ಕೆ ಓಡಿಸಿದನೆಂದು ಇತಿಹಾಸಕಾರರು ಒಪ್ಪುತ್ತಾರೆ. ಇಂತಹ ಯಾಗವನ್ನು ಮತ್ತೊಮ್ಮೆ ಕೈಗೊಂಡು ತನ್ನ ಬಲಿಷ್ಠತೆಯನ್ನು ಆತ ಪುನಪ್ರ್ರತಿಷ್ಠಾಪಿಸಿದ್ದನೆಂದು ನಂಬಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಪುಷ್ಯಮಿತ್ರ ಬಲು ವಿಶಾಲವಾದ ಸಾಮ್ರಾಜ್ಯದ ದೊರೆಯಾಗಿ ಮೌರ್ಯ ಸಾಮ್ರಾಜ್ಯದ ಕೊನೆಗಾಲದಲ್ಲಿ ಕಂಡು ಬಂದ ಒಡಕನ್ನು ಸರಿಗೈಯ್ಯುವ ಸೂಕ್ತ ಪ್ರಯತ್ನ ಮಾಡಿದ್ದ.

1

ಡಾ|| ಬಾಬಾ ಸಾಹೇಬ್ ಅಂಬೇಡ್ಕರರು ತಮ್ಮ ಬರೆಹಗಳಲ್ಲಿ (ಸಂಪುಟ 3) ಬ್ರಾಹ್ಮಣ ಧರ್ಮದ ದಿಗ್ವಿಜಯದ ಕುರಿತಂತೆ ಬರೆಯುತ್ತ ಬುದ್ಧ ಧರ್ಮವನ್ನು ಅಶೋಕ ರಾಜ್ಯಧರ್ಮವಾಗಿ ಮಾಡಿದ್ದರಿಂದ ಅವನ ಸಾಮ್ರಾಜ್ಯದಲ್ಲಿ ಬ್ರಾಹ್ಮಣರು ರಾಜಾಶ್ರಯ ಕಳಕೊಂಡು ಎರಡನೇ ಹಾಗೂ ಅಧೀನ ಸ್ಥಾನಕ್ಕೆ ತಳ್ಳಲ್ಪಟ್ಟರು ಎಂದಿದ್ದಾರೆ. ಅಷ್ಟೇ ಅಲ್ಲ. ಯಜ್ಞಯಾಗಾದಿಗಳೂ ಸೇರಿದಂತೆ ಎಲ್ಲೆಡೆ ಪ್ರಾಣಿಬಲಿ ನಿಷೇಧಿಸಿದ್ದರಿಂದ ಅವರು ತಮ್ಮ ಜೀವನಕ್ಕಾಗಿ ಪಡೆಯುತ್ತಿದ್ದ ದಕ್ಷಿಣೆಯನ್ನೂ ಕಳೆದುಕೊಂಡು ವೃತ್ತಿ ನಷ್ಟವೂ ಆಯಿತೆಂದಿದ್ದಾರೆ. ಹೀಗಾಗಿಯೇ ಬ್ರಾಹ್ಮಣರು ಬೌದ್ಧರ ವಿರುದ್ಧ ಬಂಡಾಯವೆದ್ದರೆಂದು ಅವರು ಸ್ಮಿತ್ ಮತ್ತು ಹರಿಪ್ರಸಾದ್ ಶಾಸ್ತ್ರಿಯವರ ಕೃತಿಗಳನ್ನು ಆಧರಿಸಿ ಉಲ್ಲೇಖಿಸುತ್ತಾರೆ. ಅದಕ್ಕೇ ಪುಷ್ಯಮಿತ್ರ ಸಿಂಹಾಸನಾರೋಹಣ ಮಾಡುತ್ತಿದ್ದಂತೆಯೇ ಸಾರ್ವಭೌಮ ಚಕ್ರವತರ್ಿ ಮಾಡಬಹುದಾಗಿದ್ದ ಅಶ್ವಮೇಧಯಾಗವೆಂಬ ವೈದಿಕ ಯಜ್ಞ ಮಾಡಿದನೆಂದು ವಾದಿಸುತ್ತಾರೆ. ಹೌದು. ಇತಿಹಾಸದ ಅನೇಕ ಪುಟಗಳು ಇನ್ನೂ ತೆರೆದುಕೊಳ್ಳಬೇಕಿದೆ.
ಆದರೆ ಒಂದಂತೂ ಸತ್ಯ. ಪುಷ್ಯಮಿತ್ರನ ಕಾಲಘಟ್ಟದಲ್ಲಿ ಮತ್ತೆ ವೈದಿಕ ಪರಂಪರೆಗೆ ಜೀವ ಬಂತು. ಆತ ಯಜ್ಞಯಾಗಾದಿಗಳನ್ನು ಪುನರಾರಂಭಿಸಿದ. ವಿದಿಶಾದಲ್ಲಿ ದೊರೆತಿರುವ ಶಾಸನಗಳ ಆಧಾರದ ಮೇಲೆ ಇತಿಹಾಸಕಾರರು ಈ ಕಾಲದಲ್ಲಿ ಭಾಗವತ ಪಂಥಕ್ಕೆ ಸಾಕಷ್ಟು ಬೆಲೆ ಬಂತೆಂದು ಅನುಮಾನಿಸುತ್ತಾರೆ. ಶ್ರೇಷ್ಠವಾದ ವೈದಿಕ ಸಾಹಿತ್ಯಗಳ ಪರಂಪರೆಯಿಂದ ಪುರಾಣಗಳ ಕಾಲಕ್ಕೆ ಧುಮುಕಿದ ಕಾಲಘಟ್ಟವಿದೇನಾ? ಈ ಕುರಿತಂತೆಯೂ ಸಂಶೋಧನೆಯಾಗಬೇಕಿದೆ. ಹಾಗಂತ ಬೌದ್ಧ ಮತಾನುಯಾಯಿಗಳಿಗೆ ರಾಜನ ವಿರೋಧವಿತ್ತೆಂಬುದಕ್ಕೆ ಸೂಕ್ತ ಪುರಾವೆಗಳಿಲ್ಲ. ಬೌದ್ಧ ಸಾಹಿತ್ಯಗಳೂ ಪುಷ್ಯಮಿತ್ರನನ್ನು ಒಬ್ಬ ಕ್ರೂರಿಯೆಂದು ವಣರ್ಿಸದೇ, ಶಾಕಲಕ್ಕೆ ಹೋಗುವ ದಾರಿಯಲ್ಲಿನ ಅನೇಕ ಬೌದ್ಧ ವಿಹಾರಗಳನ್ನು ನಾಶಪಡಿಸಿ, ಬೌದ್ಧ ಭಿಕ್ಷುಗಳನ್ನು ಕೊಂದಿರುವುದಾಗಿ ಆಪಾದಿಸುತ್ತದೆ. ಆದರೆ ಅಚ್ಚರಿಯೇನು ಗೊತ್ತೇ? ಶುಂಗರ ಕಾಲಕ್ಕೇ ಮಧ್ಯಭಾರತದ ಭಾಹರ್ುತ್ನಲ್ಲಿರುವ ಸ್ತೂಪವನ್ನು ನಿಮರ್ಿಸಲಾಗಿತ್ತು ಮತ್ತು ಸಾಂಚಿ ಸ್ತೂಪವನ್ನು ಮೊದಲಿಗಿಂತಲೂ ದುಪ್ಪಟ್ಟಾಗಿ ವಿಸ್ತರಿಸಲಾಗಿತ್ತು. ಬೋಧಗಯಾದಲ್ಲಿರುವ ಮಹಾಬೋಧಿ ಮಂದಿರದ ಸುತ್ತಲೂ ಇರುವ ಕಲ್ಲಿನ ಕೈ ಸಾಲು ನಿಮರ್ಾಣಗೊಂಡಿದ್ದೂ ಈ ಕಾಲದಲ್ಲಿಯೇ. ಸಬ್ಕಾ ಸಾಥ್, ಸಬ್ ಕಾ ವಿಕಾಸ್ ಇಂದಿನದ್ದಲ್ಲ, ಬಲು ಹಳೆಯ ಸಿದ್ಧಾಂತವೆಂಬುದಕ್ಕೆ ಯಾವ ಅನುಮಾನವೂ ಇಲ್ಲ ಬಿಡಿ.

hqdefault

ಹಾಗಂತ ಶಾಕಾಲದ ದಾರಿಯಲ್ಲಿ ನಾಶಗೊಂಡ ಬೌದ್ಧ ವಿಹಾರಗಳ ಕಥೆ ಏನು? ಅನ್ನುವುದಕ್ಕೆ ಹೋಶಿಯಾರ್ಪುರದ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ರೀಡರ್ ಆಗಿದ್ದ ಶ್ರೀ ಎಂ.ವಿ.ಡಿ. ಮೋಹನ್ ತಮ್ಮ ಗ್ರೀಕೋ-ಶುಂಗ ಪೀರಿಯಡ್ ಆಫ್ ಇಂಡಿಯನ್ ಹಿಸ್ಟರಿಯಲ್ಲಿ ಅಚ್ಚರಿಯ ಒಂದಷ್ಟು ಮಾಹಿತಿ ಹೊರಹಾಕುತ್ತಾರೆ. ಮೌರ್ಯರ ಆಳ್ವಿಕೆಗೆ ತಮ್ಮನ್ನು ಸಮಪರ್ಿಸಿಕೊಂಡಿದ್ದ ಬೌದ್ಧಾನುಯಾಯಿಗಳಿಗೆ ಆ ಜಾಗದಲ್ಲಿ ಬ್ರಾಹ್ಮಣರಿಗೆ ರಾಜಾಶ್ರಯ ನೀಡಿದ ಶುಂಗರನ್ನು ಊಹಿಸಿಕೊಳ್ಳಲೂ ಸಾಧ್ಯವಾಗಿರಲಿಲ್ಲ. ಹೀಗಾಗಿಯೇ ಶುಂಗರನ್ನು ಎದುರಿಸಿ ನಿಲ್ಲಬಲ್ಲ ಯಾರಿಗಾದರೂ ಅವರು ತಮ್ಮ ಬೆಂಬಲ ಘೋಷಿಸಲು ಸಿದ್ಧರಾಗಿದ್ದರು. ವಿದೇಶೀಯರು (ಅವರನ್ನು ಗ್ರೀಕರೆಂದು ಒಪ್ಪುವುದೇ ಆದರೂ) ಸಾಕಷ್ಟು ದಬ್ಬಾಳಿಕೆಯಿಂದ ಬುದ್ಧಾನುಯಾಯಿಗಳನ್ನು ಪೀಡಿಸಿದ್ದರಾದರೂ ಗಡಿಭಾಗದ ಜನರಿಗಿನ್ನೂ ಅವರ ಮೇಲೆ ವಿಶ್ವಾಸವಿತ್ತು. ಅವರು ಶುಂಗರನ್ನು ಮಣಿಸಲು ಈ ವಿದೇಶೀ ಶಕ್ತಿಗಳೊಂದಿಗೆ ಕೈ ಜೋಡಿಸಿದ್ದರು. ಯುಡಿಮಸ್ನಂತೂ ಇವರನ್ನು ತಮ್ಮ ಮಿತ್ರರೆಂದು ಭಾವಿಸಿದ್ದೂ ಉಲ್ಲೇಖವಾಗಿದೆ. ಇವರನ್ನು ಪ್ರೀತಿಯಿಂದ ಗೆಲ್ಲಲೆಂದೇ ಬೌದ್ಧ ಮಾದರಿಯ ನಾಣ್ಯಗಳನ್ನು ಟಂಕಿಸಲಾಗಿತ್ತಂತೆ. ಇವರದ್ದೇ ಪರಂಪರೆಯ ಮುಂದಿನ ದೊರೆ ಮಿನಾಂಡರನಂತೂ ಬುದ್ಧ ಪಂಥವನ್ನೇ ಅಪ್ಪಿಕೊಂಡುಬಿಟ್ಟ. ಬಹುಶಃ ಪುಷ್ಯಮಿತ್ರ ಗಡಿಭಾಗವನ್ನು ವಶಪಡಿಸಿಕೊಳ್ಳುವಾಗ ಶತ್ರುಗಳೊಂದಿಗೆ ಕೈಜೋಡಿಸಿದ ಇಂತಹ ಕೆಲವರಿಗೆ ಕಠಿಣ ಶಿಕ್ಷೆ ಕೊಟ್ಟಿರಬಹುದು ಮತ್ತು ಅವರು ಕೂಡಿ ಷಡ್ಯಂತ್ರಗಳನ್ನು ರೂಪಿಸುತ್ತಿದ್ದ ಜಾಗಗಳನ್ನು ಧ್ವಂಸಗೊಳಿಸಿದ್ದಿರಬಹುದೆಂದು ಅವರು ಅಭಿಪ್ರಾಯಪಡುತ್ತಾರೆ. ಅಶೋಕನ ವಂಶಜನೇ ಆದ ಜಲೌಕ ಕಾಶ್ಮೀರದ ಮೇಲೆ ತನ್ನ ಪ್ರಭುತ್ವ ಸ್ಥಾಪಿಸಿದಾಗಲೂ ಹೀಗೆಯೇ ಮಾಡಿದ್ದನೆಂದು ಕಲ್ಹಣನ ರಾಜತರಂಗಿಣಿಯ ಆಧಾರದ ಮೇಲೆ ಅವರು ವಾದಿಸುತ್ತಾರೆ. ಇವೆಲ್ಲವೂ ಸೂಕ್ಷ್ಮವಾಗಿ ಅವಲೋಕಿಸಬೇಕಾದ ಸಂಗತಿ ಅಷ್ಟೇ.
ಇಲ್ಲಿಂದಲೇ ಮುಂದೆ ಪುಷ್ಯಮಿತ್ರ ತಕ್ಷಶಿಲಾದತ್ತ ನುಗ್ಗಿದ್ದು, ಇಂದಿನ ರಾವಲ್ಪಿಂಡಿಯ ಹತ್ತಿರದವರೆಗೂ ಸೇನೆ ಒಯ್ದಿದ್ದು. ಸಿಂಧುವನ್ನು ದಾಟಿ ಯವನರನ್ನು ಅಟ್ಟಿಸಿಕೊಂಡು ಹೋದದ್ದು. ಭಾರತದ ಕೀತರ್ಿ ಪತಾಕೆಯನ್ನು ಚಂದ್ರಗುಪ್ತನ ನಂತರ ಕ್ಷಾತ್ರತೇಜದಿಂದಲೇ ಮತ್ತೊಮ್ಮೆ ಎತ್ತಿಹಿಡಿದವ ನಿಸ್ಸಂಶಯವಾಗಿ ಪುಷ್ಯಮಿತ್ರನೇ.
ಈ ಹಂತದಲ್ಲಿಯೇ ಮತ್ತೊಂದು ಗಂಭೀರ ಸಂಗತಿ ಚಚರ್ೆಯಾಗಬೇಕು. ಪುಷ್ಯಮಿತ್ರನ ಕ್ರೌರ್ಯದ ಬಗ್ಗೆ ಬರೆಯುತ್ತ ಅಂಬೇಡ್ಕರರು ಆತನ ಕ್ರಾಂತಿಯ ಮೂಲ ಉದ್ದೇಶ ಬೌದ್ಧಧರ್ಮ ನಾಶಮಾಡಿ ಬ್ರಾಹ್ಮಣಧರ್ಮ ಸ್ಥಾಪನೆಯೇ ಆಗಿತ್ತು ಎಂಬುದಕ್ಕೆ ಪುರಾವೆಯಾಗಿ ಮನುಸ್ಮೃತಿಯನ್ನೇ ಆತ ಕಾನೂನು ಸಂಹಿತೆಯನ್ನಾಗಿ ಜಾರಿಗೊಳಿಸಿದ್ದನ್ನು ಮುಂದಿಡುತ್ತಾರೆ. ಅಷ್ಟೇ ಅಲ್ಲ. ಈ ಮನುಸ್ಮೃತಿಯ ಕತರ್ೃವನ್ನು ಕುರಿತಂತೆ ಜಯಸ್ವಾಲ್ರ ಕೃತಿಯನ್ನು ಆಧರಿಸಿದ ಅವರ ಸಂಶೋಧನೆ ಅಧ್ಯಯನ ಯೋಗ್ಯ. ಇಷ್ಟಕ್ಕೂ ಯಾರೀತ ಮನುಸ್ಮೃತಿಯ ಕತರ್ೃ? ಆತ ಸಾಕ್ಷಾತ್ ಪ್ರಳಯದಿಂದ ಭೂಮಿಯನ್ನು ರಕ್ಷಿಸಿದ ಮನುವೇನಾ? ಅಥವಾ ನಡುಮಧ್ಯೆ ತನ್ನದೇ ಆದ ಕಾನೂನುಗಳನ್ನು ರಾಜಾಶ್ರಯ ಪಡೆದು ಸಮಾಜದ ಮೇಲೆ ಹೇರಲೆತ್ನಿಸಿದ ವಕೀಲನಾ? ಅಂಬೇಡ್ಕರರು ಎಳೆ-ಎಳೆಯಾಗಿ ಗೊಂದಲವನ್ನು ಬಿಡಿಸುತ್ತಾರೆ. ಮನುಸ್ಮೃತಿಯನ್ನು ದೈವಿಕ ಮೂಲದ್ದೆನ್ನುವ ಮತ್ತು ಸೃಷ್ಟಿಕರ್ತನಿಂದಲೇ ಅದನ್ನು ಕೇಳಲ್ಪಟ್ಟ ಮನು ಅದನ್ನು ಮನುಷ್ಯರಿಗೆ ಬೋಧಿಸಿದನೆಂಬ ಮನುಸ್ಮೃತಿಯ ಹೇಳಿಕೆಯನ್ನು ಅವರು ಅನುಮಾನದ ಕಂಗಳಿಂದ ನೋಡುತ್ತಾರೆ. ಅಷ್ಟೇ ಅಲ್ಲ, ಹಿಂದೂ ಸಮಾಜ ಕಂಡ ಅತ್ಯಂತ ದೊಡ್ಡ ಸಾಮಾಜಿಕ ಕ್ರಾಂತಿಯ ದಾಖಲೆಯಾಗಿದ್ದಾಗ್ಯೂ ಅದರ ಮೂಲದ ಕುರಿತಂತೆ ಯಾರೂ ತಲೆಕೆಡಿಸಿಕೊಳ್ಳಲು ಹೋಗಿಲ್ಲವೆಂದು ಅವರು ಆಕ್ಷೇಪಿಸುತ್ತಾರೆ. ಮನುಸ್ಮೃತಿಯ ಕತರ್ೃವಿನ ಕುರಿತಂತೆ ಕೃತಿಯ ಘೋಷಣೆಯೇ ಠಕ್ಕುತದಿಂದ ಕೂಡಿದ್ದೆನ್ನುವ ಅವರ ವಾದವನ್ನು ಎಂಥವರೂ ಗಾಬರಿಯಿಂದ ಸ್ವೀಕರಿಸಬೇಕಾದ ಪರಿಸ್ಥಿತಿಯಿದೆ.

Comments are closed.