ವಿಭಾಗಗಳು

ಸುದ್ದಿಪತ್ರ


 

ಆರ್ಟಿಕಲ್ 370 ಹೋದಮೇಲೆ ಏನಾಯ್ತು?!

ಕಾಶ್ಮೀರದ ಕೊಳ್ಳದಲ್ಲಿ ಭಯೋತ್ಪಾದಕರನ್ನು ಇಲ್ಲದಂತೆ ಮಾಡುತ್ತೇವೆಂದು ಎಲ್ಲಾ ಸಕರ್ಾರಗಳು ಘೋಷಿಸಿವೆ. ಆದರೆ ಅದನ್ನು ಆಚರಣೆಗೆ ತರುವಲ್ಲಿ ಮಾತ್ರ ಯಾರೂ ಯಶಸ್ವಿಯಾಗಿಲ್ಲ. ಪುಲ್ವಾಮಾದಾಳಿಯ ನಂತರ ಚುರುಕಾಗಿರುವ ಭಾರತೀಯ ಗೂಢಚರ ಪಡೆ ಮತ್ತು ಸೈನ್ಯ 2019ರ ಮೊದಲ ಆರು ತಿಂಗಳಲ್ಲೇ 121ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದು ಬಿಸಾಡಿದೆ.

ಕಾಶ್ಮೀರದಲ್ಲಿ ಆಟರ್ಿಕಲ್ 370 ಮತ್ತು 35 ಎ ತೆಗೆದೊಗೆದು ಎರಡು ತಿಂಗಳಾಗುತ್ತಾ ಬಂತು. ಆದರೆ ಎಲ್ಲವೂ ಶಾಂತವಾಗಿಯೇ ಇದೆ. ‘370ನ್ನು ಮುಟ್ಟಿ ನೋಡೋಣ’ ಎಂದು ಬೆದರಿಸುತ್ತಿದ್ದ ದೆವ್ವಗಳೆಲ್ಲವೂ ಬೆದರುಬೊಂಬೆಗಳಾಗಿಯಷ್ಟೇ ಉಳಿದುಬಿಟ್ಟಿವೆ. ಕಾಶ್ಮೀರದ ತಂಟೆಗೆ ಬಂದರೆ ದೇಶವೇ ಉರಿದುಹೋಗುತ್ತದೆ ಎಂಬ ಭಯಭೀತ ವಾತಾವರಣ ಈಗೇನೂ ಉಳಿದಿಲ್ಲ. ಕೇಂದ್ರಸಕರ್ಾರದ ದಿಟ್ಟ ನಿರ್ಣಯ ಮತ್ತು ಅದಕ್ಕೆ ಪೂರಕವಾಗಿ ಜಾಗತಿಕ ಮಟ್ಟದಲ್ಲಿ ವ್ಯವಹರಿಸಿದ ರೀತಿ ಎಲ್ಲವೂ ನಿಜಕ್ಕೂ ಪ್ರಶಂಸನೀಯ!

6

ಇಷ್ಟಕ್ಕೂ ಆಟರ್ಿಕಲ್ 370ನ್ನು ಕಿತ್ತು ಬಿಸಾಡಿದ್ದರಿಂದ ತಕ್ಷಣಕ್ಕಾದ ಲಾಭಗಳೇನು ಗೊತ್ತೇ? ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ದೂರದೂರದ ಹಳ್ಳಿಗಳಿಗೆ ಈ ಐವತ್ತು ದಿನಗಳಲ್ಲೇ ಕರೆಂಟು ಬಂದಿದೆ. ಅಲ್ಲಿನ ಉಪ ಜಿಲ್ಲಾಧಿಕಾರಿ ಮೊಹಮ್ಮದ್ ಎಜಾಜ್ ಅಸದ್ ಹೇಳಿಕೆಯ ಪ್ರಕಾರ ಕೇಂದ್ರದ ಸೌಭಾಗ್ಯ ಯೋಜನೆಯಡಿಯಲ್ಲಿ 20,300 ಮನೆಗಳಿಗೆ ಉಚಿತ ವಿದ್ಯುತ್ತು ಈಗ ಬಂದಿದೆ. ಗಡಿಗೆ ಹತ್ತಿರವಾಗಿದ್ದ ಈ ಹಳ್ಳಿಗಳು ಅಭಿವೃದ್ಧಿಯನ್ನೇ ಕಾಣದೇ ಕೊರಗುತ್ತಿದ್ದವು. ಈಗ ಖುಷಿಯಿಂದ ಕುಣಿದಾಡುತ್ತಿವೆ. ಇಂತಹ ಹಳ್ಳಿಯೊಂದರ ಗ್ರಾಮಪಂಚಾಯತಿ ಮುಖ್ಯಸ್ಥ ಖಾದಿಮ್ ಹುಸೇನ್ ‘ಮೊದಲ ಬಾರಿಗೆ ವಿದ್ಯುತ್ತು ಕಂಡು ರೋಮಾಂಚಿತರಾಗಿದ್ದೇವೆ’ ಎಂದಿದ್ದಾನಲ್ಲದೇ ರಾತ್ರಿಯ ವೇಳೆಗೂ ಕೆಲಸ ಮಾಡಬಹುದು ಮತ್ತು ವ್ಯಾಪಾರವೂ ಅಭಿವೃದ್ಧಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾನೆ. ಜಮ್ಮು-ಕಾಶ್ಮೀರದ ದಲಿತರು ಈಗ ಖುಷಿಯಾಗಿದ್ದಾರೆ. ಸಕರ್ಾರದ ಯಾವ ಸವಲತ್ತುಗಳೂ ಅವರಿಗೆ ಸಿಗುತ್ತಲೇ ಇರಲಿಲ್ಲ. ಆದರೀಗ ಹಾಗಿಲ್ಲ. ಕಳೆದ 50 ದಿನಗಳಲ್ಲೇ ಭಾರತದೊಂದಿಗೆ ಏಕರಸವಾದ ಜಮ್ಮು-ಕಾಶ್ಮೀರದ ದಲಿತರು ಇತರೆ ಭಾರತೀಯರು ಅನುಭವಿಸುವ ಸೌಕರ್ಯಗಳನ್ನೇ ಪಡೆಯಲಾರಂಭಿಸಿದ್ದಾರೆ. ಸುಮಾರು ಎಂಟೂವರೆ ಲಕ್ಷದಷ್ಟಿದ್ದ ವಿಶೇಷ ಸಾಮಥ್ರ್ಯವುಳ್ಳ ಜನರಿಗೂ ಸಕರ್ಾರದ ಸವಲತ್ತುಗಳು ಸಿಗುತ್ತಿರಲಿಲ್ಲ. ಈಗ ಅವರೂ ಕೂಡ ತಮ್ಮ ಆನಂದವನ್ನು ಹಂಚಿಕೊಳ್ಳುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚು ಸಂತಸ ಪಡುತ್ತಿರುವುದು ಹೆಣ್ಣುಮಕ್ಕಳು. ಅವರಿಗೆ ದೇಶದಲ್ಲಿ ಲಾಗೂ ಆಗುವ ಎಲ್ಲಾ ಕಾನೂನುಗಳು ಕಾಶ್ಮೀರದಲ್ಲೂ ಅನ್ವಯವಾಗುತ್ತವೆಂದು ಗೊತ್ತಾದ ಮೇಲೆ ಸಮಾನತೆಯ ಗಾಳಿಯನ್ನು ಉಸಿರಾಡುತ್ತಿದ್ದಾರೆ. ಇನ್ನೂ ಅಚ್ಚರಿಯ ಸಂಗತಿ ಏನು ಗೊತ್ತೇ? ಲಂಡನ್ನಿನ ಯುನಿವಸರ್ಿಟಿಯೊಂದು ಆಟರ್ಿಕಲ್ 370ರ ಕುರಿತಂತೆ ಚಚರ್ೆ ಏರ್ಪಡಿಸಿ ಕಮ್ಯುನಿಸ್ಟ್ ಪಾಟರ್ಿಯ ಸದಸ್ಯೆ ಕವಿತಾ ಕೃಷ್ಣನ್ರಿಂದ ಭಾಷಣ ಮಾಡಿಸುವ ಹೊತ್ತಲ್ಲಿ ಅಲ್ಲಿಗೆ ಮುಖವಾಡ ಧರಿಸಿಕೊಂಡು ನುಗ್ಗಿದ ಸಲಿಂಗಿಗಳು ‘ಆಟರ್ಿಕಲ್ 370 ತೆಗೆದಿದ್ದರಿಂದ ಜಮ್ಮು-ಕಾಶ್ಮೀರದಲ್ಲಿ ಸಲಿಂಗಿಗಳಿಗೂ ಬೆಲೆಯಿದೆ. ಕಮ್ಯುನಿಸ್ಟರು ಇದನ್ನು ವಿರೋಧಿಸುತ್ತಿದ್ದಾರೆ’ ಎಂದು ಪ್ರತಿಭಟನೆ ಮಾಡಿ ಎಲ್ಲರನ್ನೂ ಕಕ್ಕಾಬಿಕ್ಕಿಯಾಗಿಸಿದರು. ಸದಾಕಾಲ ಪ್ರಗತಿಪರ ಚಿಂತನೆಗಳ ಕುರಿತಂತೆ ಮಾತನಾಡುತ್ತಾ ಹಿಂದೂಧರ್ಮವನ್ನು ಕೆಣಕುತ್ತಲೇ ಇರುವ ಕವಿತಾಕೃಷ್ಣನ್ ಈ ಪ್ರಶ್ನೆಗೆ ಉತ್ತರಿಸಲಾಗದೇ ಕೈ ಕೈ ಹಿಸುಕಿಕೊಳ್ಳುವಂತಾಯ್ತು! ಇದರ ಜೊತೆ-ಜೊತೆಗೆ ವಿಕಾಸದ ಓಟದಲ್ಲಿ ಜಮ್ಮು-ಕಾಶ್ಮೀರವನ್ನು ಒಯ್ಯುವ ಭರವಸೆಯ ಮಾತುಗಳನ್ನಾಡಿದ ಕೇಂದ್ರಸಕರ್ಾರ ವೈಷ್ಣೋದೇವಿಯ ದರ್ಶನಕ್ಕೆ ಹೋಗುವವರಿಗೆ ಅನುಕೂಲವಾಗಲೆಂದು ದೆಹಲಿಯಿಂದ ಕಾಟ್ರಾಕ್ಕೆ ವಂದೇಭಾರತ್ ಎಕ್ಸ್ಪ್ರೆಸ್ ರೈಲನ್ನು ಕೊಡುಗೆಯಾಗಿ ಕೊಟ್ಟು ಕಣಿವೆಯ ಜನರಲ್ಲಿ ಪ್ರಗತಿಯ ಕನಸುಗಳನ್ನು ಬಿತ್ತಿತು. ಹೀಗೆ ಈ ರೈಲನ್ನು ಜಮ್ಮು-ಕಾಶ್ಮೀರಕ್ಕೆ ಕೊಡುಗೆಯಾಗಿ ಕೊಡುವ ಸಂದರ್ಭದಲ್ಲಿ ಮಾತನಾಡಿದ ಅಮಿತ್ಶಾ ಹತ್ತು ವರ್ಷಗಳಲ್ಲಿ ಜಮ್ಮು-ಕಾಶ್ಮೀರ ದೇಶದ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲೊಂದಾಗಲಿದೆ ಎಂಬ ಮಾತನ್ನು ಹೇಳಿದ್ದಲ್ಲದೇ ಇದಕ್ಕೆ ಅಡ್ಡಿಯಾಗಿದ್ದ ಆಟರ್ಿಕಲ್ 370ನ್ನು ಕಿತ್ತು ಬಿಸಾಡಿದ್ದರಿಂದ ಸದ್ಯದಲ್ಲೇ ಭಯೋತ್ಪಾದಕರ ಸಮೂಹ ನಾಶವೂ ಆಗಲಿದೆ ಎಂಬ ಸೂಕ್ಷ್ಮ ಸಂಗತಿಯನ್ನು ಬಿಚ್ಚಿಟ್ಟರು!

7

ಕಾಶ್ಮೀರದ ಕೊಳ್ಳದಲ್ಲಿ ಭಯೋತ್ಪಾದಕರನ್ನು ಇಲ್ಲದಂತೆ ಮಾಡುತ್ತೇವೆಂದು ಎಲ್ಲಾ ಸಕರ್ಾರಗಳು ಘೋಷಿಸಿವೆ. ಆದರೆ ಅದನ್ನು ಆಚರಣೆಗೆ ತರುವಲ್ಲಿ ಮಾತ್ರ ಯಾರೂ ಯಶಸ್ವಿಯಾಗಿಲ್ಲ. ಪುಲ್ವಾಮಾದಾಳಿಯ ನಂತರ ಚುರುಕಾಗಿರುವ ಭಾರತೀಯ ಗೂಢಚರ ಪಡೆ ಮತ್ತು ಸೈನ್ಯ 2019ರ ಮೊದಲ ಆರು ತಿಂಗಳಲ್ಲೇ 121ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದು ಬಿಸಾಡಿದೆ. ಇವರಲ್ಲಿ 21 ಜನ ಪಾಕಿಸ್ತಾನಿಯರಾಗಿದ್ದರೆ ಉಳಿದವರು ಕಾಶ್ಮೀರದ ಕೊಳ್ಳದವರೇ. ಸೈನ್ಯದ ಅಂಕಿ-ಅಂಶಗಳನ್ನು ಒಪ್ಪುವುದಾದರೆ ಸುಮಾರು 82 ಪ್ರತಿಶತ ಭಯೋತ್ಪಾದಕರನ್ನು ಕೊಳ್ಳದಲ್ಲಿ ಬೇಟೆಯಾಡಲಾಗಿದೆ. ಇದು ಮನಸ್ಸಿಗೆ ಮುದಕೊಡುವ ಸಂಗತಿಯೇ. ಮೊದಲೆಲ್ಲಾ ನಾಲ್ಕು ಭಯೋತ್ಪಾದಕರನ್ನು ಕೆಡವಿದ್ದರೂ ಜಾಗತಿಕ ಮಟ್ಟದಲ್ಲಿ ಬೊಬ್ಬೆಹಾಕುತ್ತಾ ಬರುತ್ತಿದ್ದವರೆಲ್ಲಾ ಈಗ ಎಲ್ಲಿಗೆ ಹೋದರು? ಪ್ರಶ್ನೆ ಸಹಜವೇ. ಆದರೆ ಮೋದಿಯವರಿಂದ ಪೂರ್ಣಬೆಂಬಲ ಪಡೆದಿರುವ ಭಾರತೀಯ ವಿದೇಶಾಂಗ ಖಾತೆ ಎಷ್ಟು ವ್ಯವಸ್ಥಿತವಾಗಿ ಜಾಗತಿಕ ಸಂಬಂಧಗಳನ್ನು ನಿರ್ವಹಿಸುತ್ತಿದೆ ಎಂದರೆ ಇಮ್ರಾನ್ಖಾನನ ಅರಚಾಟವೆಲ್ಲವೂ ಅರಣ್ಯರೋದನವಾಗುತ್ತಿವೆ. ಕಾಶ್ಮೀರದಿಂದ ಆಟರ್ಿಕಲ್ 370ನ್ನು ತೆಗೆದೊಡನೆ ಬೊಬ್ಬಿಡುತ್ತಾ ಬಂದ ಇಮ್ರಾನ್ ಏನು ಮಾಡಬೇಕೆಂದು ತೋಚದೇ ಶುಕ್ರವಾರ ನಮಾಜಿನ ನಂತರ ಅರ್ಧಗಂಟೆ ನಾವೆಲ್ಲರೂ ಎದ್ದುನಿಂತುಕೊಳ್ಳೋಣವೆಂದ. ಇದಕ್ಕೆ ಜಗತ್ತು ನಗುವುದಿರಲಿ, ಸ್ವತಃ ಪಾಕಿಸ್ತಾನವೂ ಪಕ್ಕೆಲೆಬುಗಳೆಲ್ಲಾ ಮುರಿದು ಹೋಗುವಂತೆ ನಕ್ಕಿತು. ಆತ ಕಂಡ ಕಂಡ ರಾಷ್ಟ್ರಗಳನ್ನೆಲ್ಲಾ ಎಡತಾಕಿದ. ಕಾಶ್ಮೀರದ ವಿಚಾರವನ್ನು ಜಾಗತಿಕ ಮಟ್ಟದಲ್ಲಿ ಸುದ್ದಿಮಾಡಿ ಭಾರತದ ಪ್ರಭಾವವನ್ನು ತಗ್ಗಿಸಬೇಕೆಂದು ಪ್ರಯತ್ನಿಸಿದ. ಸೋತುಹೋದ. ಅದಾಗಲೇ ಭಾರತ ತನ್ನ ಜಾಲವನ್ನು ವ್ಯವಸ್ಥಿತವಾಗಿ ಹೆಣೆದು ಅಮೇರಿಕಾ, ರಷ್ಯಾ, ಜರ್ಮನಿ, ಫ್ರಾನ್ಸ್ನಂತಹ ಪ್ರಬಲರಾಷ್ಟ್ರಗಳನ್ನು ಬಿಡಿ ಕೊನೆಗೆ ಪಾಕಿಸ್ತಾನಕ್ಕೆ ಜಾತಿಯ ಕಾರಣಕ್ಕಾದರೂ ಬೆಂಬಲ ಕೊಡಬೇಕಿದ್ದ ಮುಸಲ್ಮಾನ ರಾಷ್ಟ್ರಗಳನ್ನೂ ತೆಕ್ಕೆಗೆ ಹಾಕಿಕೊಂಡುಬಿಟ್ಟಿತು. ಸೌದಿಯ ದೊರೆ ಈ ಘಟನೆಯ ನಂತರವೂ ಭಾರತಕ್ಕೆ ನೂರುಶತಕೋಟಿ ಡಾಲರ್ಗಳನ್ನು ಕೊಡುವುದಾಗಿ ಭರವಸೆ ಕೊಟ್ಟಿರುವುದು ಈ ಹಿನ್ನೆಲೆಯಿಂದ ಅತಿ ಮಹತ್ವದ್ದು. ವಿಶ್ವಸಂಸ್ಥೆಯಲ್ಲಿ ಮೋದಿ ಭಾಷಣ ಮಾಡುವಾಗ ಭಯೋತ್ಪಾದನೆಯ ಕುರಿತಂತೆ ಪ್ರಸ್ತಾಪಿಸಿದ ವಿಚಾರಗಳು ವ್ಯಾಪಕವಾಗಿ ಚಚರ್ೆಗೊಂಡವಾದರೂ ಅವರು ಅದಕ್ಕಿಂತ ಹೆಚ್ಚು ಪ್ಲಾಸ್ಟಿಕ್ ಮುಕ್ತ ಜಗತ್ತಿನ ಕುರಿತಂತೆ ಆಲೋಚಿಸುತ್ತಿರುವುದು ಜಗತ್ತಿಗೆ ಹೆಮ್ಮೆ ಎನಿಸಿತ್ತು. ತನ್ನ ಸಮಸ್ಯೆಯನ್ನು ಮೀರಿ ಜಗತ್ತಿನ ಒಳಿತಿಗಾಗಿ ಹಾತೊರೆಯುವ ಶ್ರೇಷ್ಠ ಭಾರತವೊಂದರ ಅನಾವರಣ ಅದು! ಆನಂತರ ಮಾತನಾಡಿದ ಇಮ್ರಾನ್ಖಾನರ ಭಾಷಣಕ್ಕೆ ಕೇಳುಗರೇ ಇರಲಿಲ್ಲ. ಸುದೀರ್ಘ ಭಾಷಣದಲ್ಲಿ ಭಾರತವನ್ನು, ಸಂಘವನ್ನು, ಹಿಂದೂಗಳನ್ನು ಟೀಕಿಸುತ್ತಲೇ ನಡೆದ. ತನ್ನ ದೇಶದಲ್ಲಿ ಭಯೋತ್ಪಾದಕರ ಅಡ್ಡಾಗಳೇ ಇಲ್ಲವೆಂದು ಘಂಟಾಘೋಷವಾಗಿ ಸುಳ್ಳು ಹೇಳಿದ. ಅಮೇರಿಕಾದ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಆತ ಮಾತನಾಡುತ್ತಾ ಅಮೇರಿಕಾದ ರಸ್ತೆಗಳೆಲ್ಲವೂ ಗುಣಮಟ್ಟದ್ದಾಗಿಲ್ಲ ಎಂದು ಲೇವಡಿಮಾಡಿ ಆ ಪತ್ರಕರ್ತರ ಬಳಿ ‘ನೀವು ಪ್ರಧಾನಮಂತ್ರಿಯಾಗಲ್ಲ, ರಸ್ತೆ ಇಂಜಿನಿಯರ್ ಅಂತೆ ಮಾತನಾಡುತ್ತಿದ್ದೀರಿ’ ಎಂದು ಛೀಮಾರಿಯೂ ಹಾಕಿಸಿಕೊಂಡ. ಆದರೆ ಅಲ್ಲಿ ಚೀನಾದ ಪ್ರಭಾವಕ್ಕೆ ಒಳಗಾದ ಮಲೇಷಿಯಾ ಮತ್ತು ಕಟ್ಟರ್ ಮುಸ್ಲೀಂ ರಾಷ್ಟ್ರ ಟಕರ್ಿ ಪಾಕಿಸ್ತಾನದ ಬೆಂಬಲಕ್ಕೆ ಬಂದಿದ್ದನ್ನು ಜಗತ್ತು ಗಂಭೀರವಾಗಿ ಸ್ವೀಕರಿಸಲಿಲ್ಲ; ಭಾರತ ಸುಮ್ಮನಾಗಲೂ ಇಲ್ಲ. ಟಕರ್ಿಯ ವಿರೋಧಿಯಾಗಿರುವ ಸೈಪ್ರಸ್ನೊಂದಿಗೆ ಬಾಂಧವ್ಯ ಗಟ್ಟಿಮಾಡಿಕೊಂಡಿತಲ್ಲದೇ ಟಕರ್ಿಯ ಆಕ್ರಮಣಕಾರಿ ಮನೋವೃತ್ತಿಯನ್ನು ಅಂತರ್ರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಶ್ನಿಸುವುದಾಗಿ ಸೈಪ್ರಸ್ಗೆ ಭರವಸೆ ಕೊಟ್ಟಿತು. ಅಷ್ಟಕ್ಕೇ ಮುಗಿಯಲಿಲ್ಲ. ಟಕರ್ಿಯ ಅನಡೋಲು ಶಿಪ್ಯಾಡರ್್ನೊಂದಿಗೆ ಭಾರತದ ಹಿಂದೂಸ್ತಾನ್ ಶಿಪ್ಯಾಡರ್್ ಲಿಮಿಟೆಡ್ ಮಾಡಿಕೊಂಡಿದ್ದ ಸುಮಾರು 15,000 ಕೋಟಿ ರೂಪಾಯಿಯ ಒಪ್ಪಂದವನ್ನು ಹರಿದು ಬಿಸಾಕಿತು. ಅದಕ್ಕೆ ಜಗತ್ತು ಒಪ್ಪುವ ಕಾರಣವನ್ನೂ ಕೊಡಲಾಯ್ತು. ಟಕರ್ಿ ಪಾಕಿಸ್ತಾನಕ್ಕೂ ಯುದ್ಧನೌಕೆಗಳನ್ನು ತಯಾರಿಸಲು ಸಹಾಯಮಾಡುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಲಾಯ್ತಾದರೂ ಭಾರತ ಒಪ್ಪಂದ ಮಾಡಿಕೊಳ್ಳುವ ವೇಳೆಗೂ ಇದರ ಅರಿವಿತ್ತು ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಹೀಗಾಗಿ ಪಾಕಿಸ್ತಾನದ ಪರವಾಗಿ ವಿಶ್ವಸಂಸ್ಥೆಯಲ್ಲಿ ಎಗರಾಡಿದ್ದಕ್ಕೆ ಟಕರ್ಿ ಅನುಭವಿಸಬೇಕಾದ ಹೊಡೆತವಿದು ಎಂಬುದನ್ನು ಭಾರತ ಸ್ಪಷ್ಟಪಡಿಸಿತ್ತು. ಅಮೇರಿಕಾವನ್ನು ಪ್ರಭಾವಿಸಿ ಇಮ್ರಾನ್ಖಾನನಿಗೆ ಕಾಶ್ಮೀರದ ವಿಚಾರಕ್ಕೆ ಪ್ರತಿಯಾಗಿ ಚೀನಾದಲ್ಲಿರುವ ಉಯ್ಘುರ್ ಮುಸಲ್ಮಾನರ ನೋವಿನ ಕುರಿತಂತೆ ಪಾಕಿಸ್ತಾನ ಮಾತನಾಡದಿರುವುದು ಕಪಟನೀತಿ ಎಂದು ಹೇಳುವಂತೆ ಮಾಡಿತು. ಅಲ್ಲಿಗೆ ಜಾಗತಿಕ ಮಟ್ಟದಲ್ಲಿ ಕಾಶ್ಮೀರದ ಪರವಾದ ಪಾಕಿಸ್ತಾನದ ನಿಲುವು ಮೊಸಳೆಕಣ್ಣೀರು ಎಂಬುದನ್ನು ಸಾಬೀತುಪಡಿಸಲಾಯ್ತಲ್ಲದೇ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಹೆಚ್ಚೂ-ಕಡಿಮೆ ಒಂಟಿಯಾಗಿಸಲಾಯ್ತು!

8

 

ಮೋದಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಈ ಕೆಲಸ ಮಾಡುತ್ತಿದ್ದರೆ ಇಲ್ಲಿ ಅಮಿತ್ಶಾ ತನ್ನ ಪಡೆಯನ್ನು ಬಳಸಿಕೊಂಡು ಇಷ್ಟೂ ದಿನ ಕಾಶ್ಮೀರದ ಗಾಯಕ್ಕೆ ಕಾರಣರಾದವರನ್ನು ಹುಡು-ಹುಡುಕಿ ಹೊರಗೆಳೆಯುತ್ತಿದ್ದರು. ಆಗ ಸಿಕ್ಕುಬಿದ್ದವರೇ ಯಾಸಿನ್ ಮಲೀಕ್, ಆಸಿಯಾ ಅಂದ್ರಾಬಿ ಮತ್ತು ರಾಶೀದ್ ಇಂಜಿನಿಯರ್. ಜಮ್ಮು-ಕಾಶ್ಮೀರ್ ಲಿಬರೇಶನ್ ಫ್ರಂಟ್ನ ಮುಖ್ಯಸ್ಥನಾಗಿರುವ ಯಾಸಿನ್ ಮಲಿಕ್ ಈ ಹಿಂದೆ ಒಂದು ಚಾನೆಲ್ಗೆ ಸಂದರ್ಶನ ಕೊಡುತ್ತಾ ‘ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲೆಂದು ಹೋದಾಗ ಲಷ್ಕರ್-ಎ-ತಯ್ಬಾದ ಶಿಬಿರಕ್ಕೆ ಹೋಗಿದ್ದೆ. ಅಲ್ಲಿ ಹಫೀಜ್ ಸಯೀದ್ ನನ್ನನ್ನು ಸನ್ಮಾನಿಸಿದ. ಲಷ್ಕರ್ನ ತರುಣರನ್ನು ಉದ್ದೇಶಿಸಿ ನಾನು ಮಾತನಾಡಿದೆ’ ಎಂದು ಹೇಳಿದ್ದ. ಅದನ್ನು ಆಧಾರವಾಗಿರಿಸಿಕೊಂಡು ಯಾಸಿನ್ ಮಲಿಕ್ನ ಈಮೇಲ್ಗಳನ್ನು ಭೇದಿಸಿ ಆತನಿಗಿದ್ದಂತಹ ಭಯೋತ್ಪಾದಕ ಸಂಬಂಧವನ್ನು ಎನ್ಐಎ ಬಯಲಿಗೆಳೆದಿದೆ. ಹಾಗೆಯೇ ಮಾಜಿಶಾಸಕ ಶೇಕ್ ಅಬ್ಬುಲ್ ರಶೀದ್ ಹವಾಲಾ ಮೂಲಕ ಹಣವನ್ನು ತರುತ್ತಿದ್ದುದಲ್ಲದೇ ಅದನ್ನು ಭಾರತದ ವಿರುದ್ಧ ಕಾಶ್ಮೀರದಲ್ಲಿ ಅಶಾಂತಿ ಎಬ್ಬಿಸಲು ಹಂಚುತ್ತಿದ್ದ ಎಂಬುದಕ್ಕೆ ಪುರಾವೆಗಳನ್ನು ಕಲೆಹಾಕಿದೆ. ಕಾಶ್ಮೀರದಲ್ಲಿ ನಡೆಯುವ ರಸ್ತೆ ತಡೆ, ಕ್ಲಲೆಸೆತ, ಕಗ್ಗೊಲೆಗಳು ಇವೆಲ್ಲದರ ಹಿಂದಿರುವ ಈ ಕೈಗಳ ಕುರಿತಂತೆ ತನಿಖಾದಳ ಈಗ ಭರ್ಜರಿ ಸಾಕ್ಷ್ಯಗಳನ್ನು ಸಂಗ್ರಹಿಸಿಕೊಂಡೇ ಕುಳಿತಿದೆ. ಸುಮಾರು 3000 ಪುಟಗಳಷ್ಟು ಸುದೀರ್ಘವಾಗಿರುವ ಚಾಜರ್್ಶೀಟನ್ನು ಇತ್ತೀಚಿಗೆ ಸಲ್ಲಿಸುವಾಗ ಅದರಲ್ಲಿ ಭಾರತದಲ್ಲಿರುವ ಪಾಕ್ ಹೈ ಕಮಿಷನ್ ಕಛೇರಿಯ ಉಲ್ಲೇಖವೂ ಇದ್ದದ್ದು ಭಯ ಹುಟ್ಟಿಸುವ ಸಂಗತಿಯೇ. ಇಷ್ಟೂ ವರ್ಷಗಳ ಕಾಲ ಸ್ವತಃ ಈ ಕಛೇರಿಯಿಂದಲೇ ಹಣ ವಿಲೇವಾರಿಯಾಗುವುದಕ್ಕೆ ಬೇಕಾದ ವ್ಯವಸ್ಥೆಗಳಾಗುತ್ತಿದ್ದವಂತೆ. ಇದರ ಒಟ್ಟಾರೆ ಅರ್ಥ ಕಾಶ್ಮೀರದಲ್ಲಿ ಬೆಂಕಿ ಹಚ್ಚುತ್ತಿದ್ದ ಕೆಲವರು ಪ್ರತ್ಯೇಕತೆಯ ಮಾತುಗಳನ್ನಾಡುತ್ತಿದ್ದರಲ್ಲಾ ಅವರಿಗೂ ಜನಸಾಮಾನ್ಯರಿಗೂ ಸಂಪರ್ಕವೇ ಇರಲಿಲ್ಲ. ಪಾಕಿಸ್ತಾನ ಬಿಸಾಡುತ್ತಿದ್ದ ಎಂಜಲು ಕಾಸಿನ ಮೇಲೆ ಇವರು ಭಾರತವನ್ನು ಹೆದರಿಸುತ್ತಾ ಕುಳಿತಿರುತ್ತಿದ್ದರು. ಆ ಹೆದರಿಕೆಯನ್ನು ಮೆಟ್ಟಿ ನಿಂತದ್ದು ಭಾರತದ ಪಾಲಿಗೆ ಹೆಮ್ಮೆಯ ಸಂಗತಿ!

ಹಾಗಂತ ಕಾಮರ್ೋಡಗಳೇನೂ ಕಳೆದಿಲ್ಲ. ಬರಲಿರುವ ದಿನಗಳಲ್ಲಿ ಭಾರತದಲ್ಲಿ ಹೆಚ್ಚು-ಹೆಚ್ಚು ದಾಳಿ ನಡೆಸಬೇಕೆಂದು ಪಾಕಿಸ್ತಾನ ತಿಪ್ಪರಲಾಗ ಹೊಡೆಯುತ್ತಿದೆ. 800ಕ್ಕೂ ಹೆಚ್ಚು ತರಬೇತಿ ಪಡೆದ ಭಯೋತ್ಪಾದಕರು ಗಡಿಯುದ್ದಕ್ಕೂ ನಿಂತು ಕಾಶ್ಮೀರದ ಒಳನುಸುಳಲು ಕಾಯುತ್ತಿದ್ದಾರೆ. ಅವರನ್ನು ತಡೆಯುವುದು ಕಷ್ಟವಾದರೆ ಒಳಗೆ ಬಂದಮೇಲೆ ಅವರನ್ನು ಹುಡುಕಿ ಕೊಲ್ಲುವುದು ಮತ್ತೂ ಕಷ್ಟ. ಹೀಗಾಗಿ ಮುಂದಿನ ಮೂರ್ನಾಲ್ಕು ತಿಂಗಳು ನಮ್ಮ ಪಾಲಿಗೆ ಸವಾಲೇ ಸರಿ. ಇತ್ತ ವಿಮಾನ ನಿಲ್ದಾಣಗಳ ಮೇಲೆ, ಸೈನಿಕ ಠಾಣ್ಯಗಳ ಮೇಲೆ ದಾಳಿಮಾಡುವ ವಿಫಲ ಪ್ರಯತ್ನವನ್ನು ಭಯೋತ್ಪಾದಕರು ಮಾಡಿಯೇ ಇದ್ದಾರೆ. ಈ ಹಂತದಲ್ಲಿಯೇ ಭಾರತದ ಗೂಢಚರ ಸಂಸ್ಥೆಗಳ ಮೇಲೆ ಹೆಮ್ಮೆ ಎನಿಸುವುದು. ಕಾಶ್ಮೀರದ ವಿಚಾರದಲ್ಲಿ ಕಠೋರ ನಿರ್ಣಯವನ್ನು ತೆಗೆದುಕೊಂಡ ನಂತರವೂ ಪಾಕಿಸ್ತಾನಕ್ಕೆ ಒಂದಾದರೂ ದಾಳಿ ನಡೆಸಲು ಸಾಧ್ಯವಾಗಲಿಲ್ಲವೆಂದರೆ ಅವರ ಪ್ರತೀ ದಾಳಿಯ ಮುನ್ಸೂಚನೆಯನ್ನು ಗ್ರಹಿಸಿ ಅದನ್ನು ವಿಫಲಗೊಳಿಸುತ್ತಿರುವ ಭಾರತೀಯ ಗೂಢಚರ ಸಂಸ್ಥೆಗಳೇ ಕಾರಣ. ಅವರಿಗೆ ಎಷ್ಟು ಅಭಿನಂದನೆಗಳನ್ನು ಸಲ್ಲಿಸಿದರೂ ಕಡಿಮೆಯೇ!

9

ಒಂದಂತೂ ಸತ್ಯ. ಭಾರತ ಸಾರ್ವಭೌಮ ರಾಷ್ಟ್ರವೆಂಬುದು ಈ ನಿಧರ್ಾರದ ನಂತರ ಸಾಬೀತಾಗಿದೆ. ಪಾಕಿಸ್ತಾನ ನಮ್ಮೆದುರಿಗೆ ಬಾಲ ಬಿಚ್ಚಲಾಗದ, ಬಿಚ್ಚಿದರೆ ಬಡಿಸಿಕೊಳ್ಳುವ ಹೀನ ಸ್ಥಿತಿಯಲ್ಲಿ ನಿಂತಿದೆ. ಸ್ವಾತಂತ್ರ್ಯ ಬಂದ ಅನೇಕ ದಶಕಗಳ ನಂತರ ಈ ರೀತಿ ನಿಂತಿರುವ ಭಾರತಕ್ಕೆ ಉಘೇ ಎನ್ನಲೇಬೇಕಲ್ಲವೇ!!

Comments are closed.