ವಿಭಾಗಗಳು

ಸುದ್ದಿಪತ್ರ


 

ಆಲೋಚನಗೆ ಅವಕಾಶವಿರುವುದು ಹಿಂದೂಧರ್ಮದಲ್ಲಿ ಮಾತ್ರ!

‘ವ್ಯಕ್ತಿಯೊಬ್ಬ ಪಶ್ಚಿಮದ ಮಾದರಿಯ ವಿದ್ಯೆಯನ್ನು ಸಾಕಷ್ಟು ಪಡೆದಿರಬಹುದು. ಆದರೆ ಅವನಿಗೆ ಧರ್ಮದ ಎ ಬಿ ಸಿಯೂ ಗೊತ್ತಿರಬೇಕೆಂದಿಲ್ಲ. ಅವನನ್ನು, ನಿನಗೆ ಆತ್ಮವನ್ನು ಊಹಿಸಿಕೊಳ್ಳಲು ಸಾಧ್ಯವೇ? ಆತ್ಮವಿಜ್ಞಾನದಲ್ಲಿ ಸಾಕಷ್ಟು ಮುಂದುವರೆದಿರುವಿಯಾ? ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿದೆಯೇ? ಎಂದೆಲ್ಲಾ ಕೇಳಿ ನೋಡಿ. ಉತ್ತರ ಇಲ್ಲವೆಂದಾದಲ್ಲಿ ಆತನ ಪಾಲಿನ ಧರ್ಮ ಬರಿ ಮಾತು, ಪುಸ್ತಕ ಮತ್ತು ವೈಭವದ ಬದುಕು ಅಷ್ಟೇ’. ಹಾಗೆಂದು ಸ್ವಾಮಿ ವಿವೇಕಾನಂದರು ಪಶ್ಚಿಮದ ಜನರೆದುರು ಉದ್ಘೋಷಿಸಿದ್ದರು. ಹೀಗೆ ಹೇಳುವುದು ಅಂದಿನ ದಿನಗಳಲ್ಲಿ ಸುಲಭವಾಗಿತ್ತೆಂದು ಭಾವಿಸಬೇಡಿ. ತನ್ನ ಪ್ರಾಪಂಚಿಕ ಗೆಲುವುಗಳಿಂದ, ವೈಜ್ಞಾನಿಕ ಸಾಧನೆಗಳಿಂದ ಮೆರೆಯುತ್ತಿದ್ದ ಪಶ್ಚಿಮಕ್ಕೆ ತನ್ನನ್ನು ಮೀರಿಸುವ ಶಕ್ತಿ ಮತ್ತೊಂದಿಲ್ಲ ಎಂಬ ದುರಹಂಕಾರ ತುಂಬಿಕೊಂಡುಬಿಟ್ಟಿತ್ತು. ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡ ಕ್ರಿಶ್ಚಿಯನ್ನರು ಕ್ರಿಸ್ತನ ಮತದ ಕಾರಣದಿಂದಾಗಿಯೇ ಈ ವೈಭವ ಎಂದು ನಂಬಿಬಿಟ್ಟಿದ್ದರಲ್ಲದೇ ಅದನ್ನೇ ಪದೇ-ಪದೇ ಹೇಳುತ್ತಾ ಇತರರನ್ನೂ ನಂಬಿಸುವ ಧಾವಂತದಲ್ಲಿದ್ದರು. ಹಾಗೆಂದೇ ನಡೆದದ್ದು ಸರ್ವಧರ್ಮ ಸಮ್ಮೇಳನ! ಪಶ್ಚಿಮದ ಭೌತಿಕ ಸಾಧನೆಗಳ ನಡುವೆ ಧರ್ಮವನ್ನು ಪ್ರತಿಬಿಂಬಿಸುವ ಪ್ರಯತ್ನಕ್ಕಾಗಿಯೇ ವಿಶ್ವಧರ್ಮ ಸಮ್ಮೇಳನ ನಡೆದಿದ್ದು. ಮೇಲ್ನೋಟಕ್ಕೆ ವಿಶ್ವಭ್ರಾತೃತ್ವದ ಚಿಂತನೆ ಇದ್ದಂತೆ ಕಾಣುತ್ತಿದ್ದರೂ ನಿಸ್ಸಂಶಯವಾಗಿ ಕ್ರಿಶ್ಚಿಯನ್ ಮತದ ಸಾರ್ವಭೌಮತೆಯನ್ನು ಜಗತ್ತಿಗೆ ಸಾಬೀತುಪಡಿಸುವುದು ಸಮ್ಮೇಳನದ ಅಂತರಂಗದ ಉದ್ದೇಶವಾಗಿತ್ತು. ಅನೇಕ ಚಚರ್ುಗಳು ಈ ಸಮ್ಮೇಳನದಲ್ಲಿ ಕ್ರಿಶ್ಚಿಯನ್ ಮತಕ್ಕೆ ಯೋಗ್ಯವಲ್ಲದ ಇತರರೊಂದಿಗೆ ಸಮಾನ ವೇದಿಕೆ ಹಂಚಿಕೊಳ್ಳುವ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿ ಸಮ್ಮೇಳನವನ್ನೇ ಧಿಕ್ಕರಿಸಿಬಿಟ್ಟಿದ್ದವು. ಸಮ್ಮೇಳನದ ಆಯೋಜನೆಯ ಮುಖ್ಯಸ್ಥರಲ್ಲೊಬ್ಬರು ಆ ಎಲ್ಲ ಮತಗಳನ್ನೂ ಕೂರಿಸಿಕೊಂಡು ತಮ್ಮ ಮತದ ಶ್ರೇಷ್ಠತೆಯನ್ನು ಸಾಬೀತುಪಡಿಸಲು ಇದಕ್ಕಿಂತ ಒಳ್ಳೆಯ ಅವಕಾಶ ದೊರೆಯದೆಂದು ಸೂಕ್ಷ್ಮವಾಗಿ ಹೇಳಿದ್ದರೂ ಕೂಡ. ತಾನೊಂದು ಬಗೆದರೆ, ದೈವವೊಂದು ಬಗೆಯಿತು ಎನ್ನುತ್ತಾರಲ್ಲಾ, ಕೊನೆಗೆ ಆದದ್ದು ಅದೇ. ಹಿಂದೂಧರ್ಮದ ಪ್ರತಿನಿಧಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ವಾಮಿ ವಿವವೇಕಾನಂದರು ಹಿಂದೂಧರ್ಮವನ್ನಂತೂ ಪ್ರಭಾವಿಯಾಗಿಯೇ ಜಗತ್ತಿನ ಮುಂದೆ ಮಂಡಿಸಿದರು ನಿಜ. ಅದರೊಟ್ಟಿಗೆ ಕ್ರಿಶ್ಚಿಯನ್ನರ ಮುಖಕ್ಕೆ ಕನ್ನಡಿ ಹಿಡಿದು ಅವರ ಯೋಗ್ಯತೆಯನ್ನೂ ಪರಿಚಯಿಸಿಕೊಟ್ಟರು! ಈ ಹಿನ್ನೆಲೆಯಲ್ಲಿಯೇ ಆರಂಭದಲ್ಲಿ ಉಲ್ಲೇಖಿಸಿದ ಸ್ವಾಮೀಜಿಯವರ ಮಾತುಗಳು ಮನನಯೋಗ್ಯ.

ಹಿಂದೂಗಳನ್ನು ಮೂತರ್ಿಪೂಜಕರೆಂದು ನಿಂದಿಸುತ್ತಿದ್ದ ಕ್ರಿಶ್ಚಿಯನ್ನರಿಗೆ ವಿವೇಕಾನಂದರು ಹಿಂದೂಗಳ ಪರಿಚಯ ಮಾಡಿಕೊಟ್ಟ ರೀತಿ ಅನನ್ಯವಾಗಿತ್ತು. ‘ಬ್ಯಾಬಿಲೋನಿನ, ರೋಮನ್ನಿನ ಮೂತರ್ಿ ಪೂಜನೆಯಂತೆ ಹಿಂದೂಗಳದ್ದಲ್ಲ. ವಿಗ್ರಹದ ಮುಂದೆ ಕುಳಿತಿರುವ ಹಿಂದೂ ಕಣ್ಮುಚ್ಚಿ ಹೀಗೆ ಆಲೋಚಿಸಲು ಯತ್ನಿಸುತ್ತಾನೆ, ನಾನೇ ಅವನು. ನನಗೆ ಸಾವೂ ಇಲ್ಲ, ಹುಟ್ಟೂ ಇಲ್ಲ. ನಾನು ಅನಂತ ಅಸ್ತಿತ್ವ, ಅನಂತ ಆನಂದ ಮತ್ತು ಅನಂತ ಜ್ಞಾನ. ನಾನು ಪುಸ್ತಕದ ಚೌಕಟ್ಟಿಗೆ ಒಳಪಟ್ಟಿಲ್ಲ. ತೀರ್ಥಕ್ಷೇತ್ರಗಳ ಚೌಕಟ್ಟಿಗೂ ಒಳಪಟ್ಟಿಲ್ಲ. ನಾನೇ ಸಚ್ಚಿದಾನಂದ, ಈ ಮಾತುಗಳನ್ನು ಆತ ಪದೇ ಪದೇ ಹೇಳಿಕೊಳ್ಳುತ್ತಾನೆ. ಹೇ ಭಗವಂತ, ನಾನು ಹುಲುಮಾನವ. ನಿನ್ನನ್ನು ಕಲ್ಪಿಸಿಕೊಳ್ಳುವ ಸಾಮಥ್ರ್ಯವೂ ನನ್ನಲ್ಲಿಲ್ಲ ಎಂದು ಮತ್ತೆ ಮತ್ತೆ ಭಾವಿಸುತ್ತಾನೆ. ಆನಂತರ ತನ್ನ ಕಣ್ನನ್ನು ತೆರೆದು ಎದುರಿಗಿರುವ ಮೂತರ್ಿಯನ್ನು ಕಂಡು ಸಾಷ್ಟಾಂಗ ಪ್ರಣಾಮ ಮಾಡುತ್ತಾನೆ. ಎಲ್ಲ ಮುಗಿದಮೇಲೆ, ಹೇ ಭಗವನ್, ಈ ರೀತಿಯ ಅಪರಿಪೂರ್ಣ ಪೂಜೆ ಮಾಡುತ್ತಿರುವುದಕ್ಕೆ ನನ್ನನ್ನು ಕ್ಷಮಿಸಿಬಿಡು ಎಂದು ಕೇಳಿಕೊಳ್ಳುತ್ತಾನೆ.’ ಹೀಗೆಂದು ಹೇಳುವ ಸ್ವಾಮೀಜಿ ಕ್ರಿಶ್ಚಿಯನ್ನರ ದೂಷಣೆಯ ಮನೋಭಾವವನ್ನು ಟೀಕಿಸುತ್ತಾರೆ. ಭಾರತೀಯರನ್ನು ಮನಸೋ ಇಚ್ಛೆ ದೂಷಿಸುವ ಈ ಕ್ರಿಶ್ಚಿಯನ್ ಮಿಷನರಿಗಳು, ಮೂತರ್ಿಪೂಜಕರು ನರಕಕ್ಕೆ ಹೋಗುತ್ತಾರೆ ಎನ್ನಲೂ ಹೇಸುವುದಿಲ್ಲ ಎನ್ನುವುದನ್ನು ನೆನಪಿಸಿಕೊಡುತ್ತಾರಲ್ಲದೇ, ಮುಸಲ್ಮಾನರೆದುರಿಗೆ ಇಂಥದ್ದನ್ನು ಹೇಳುವ ತಾಕತ್ತು ಅವರಿಗಿಲ್ಲ ಏಕೆಂದರೆ ಅವರ ಕತ್ತಿಗಳು ಆಗಿಂದಾಗ್ಯೆ ಝಳಪಿಸಲ್ಪಡುತ್ತವೆ ಎಂಬ ಅರಿವಿದೆ ಎಂಬುದಾಗಿ ಲೇವಡಿಯನ್ನೂ ಮಾಡುತ್ತಾರೆ. ಇಷ್ಟೆಲ್ಲಾ ಆದಾಗ ‘ಹಿಂದುವಾದವನು, ಮೂರ್ಖರು ಮಾತನಾಡಿಕೊಳ್ಳಲಿ ಎಂದು ಹೇಳುತ್ತಾ ನಕ್ಕು ಮುನ್ನಡೆದುಬಿಡುತ್ತಾನೆ’ ಎನ್ನುತ್ತಾರೆ. ಕ್ರಿಶ್ಚಿಯನ್ ಮಿಷನರಿಗಳೆದುರಿಗೆ ನಿಂತು ಸ್ವಾಮೀಜಿ, ‘ನೀವು ನಿಂದಿಸಲು ಮತ್ತು ಟೀಕಿಸಲೆಂದೇ ಜನರನ್ನು ತರಬೇತುಗೊಳಿಸುತ್ತೀರಿ. ಪ್ರತಿಯಾಗಿ ನಾನೇನಾದರೂ ಒಳಿತಿನ ಉದ್ದೇಶದಿಂದ ನಿಮ್ಮನ್ನು ಸ್ವಲ್ಪವಾದರೂ ನಿಂದಿಸಿಬಿಟ್ಟರೆ ನೀವು ಕುದ್ದು ಹೋಗುತ್ತೀರಿ. ನಾವು ಅಮೇರಿಕನ್ನರು. ನಾವು ಜಗತ್ತಿನ ಯಾರನ್ನು ಬೇಕಿದ್ದರೂ ಟೀಕಿಸುತ್ತೇವೆ, ನಿಂದಿಸುತ್ತೇವೆ, ಶಾಪವನ್ನೂ ಹಾಕುತ್ತೇವೆ. ಆದರೆ ನಮ್ಮನ್ನು ಮಾತ್ರ ಮುಟ್ಟಬೇಡಿ, ಎನ್ನುತ್ತೀರಿ’ ಎಂದು ಹಂಗಿಸುತ್ತಾರೆ!

ಸ್ವಾಮೀಜಿ ಇಷ್ಟಕ್ಕೇ ನಿಲ್ಲುವುದಿಲ್ಲ. ಮತ-ಪಂಥಗಳ ಜಾತಕವನ್ನೇ ಜಾಲಾಡಿಬಿಡುತ್ತಾರೆ ‘ನಿಮ್ಮ ಪೂರ್ವಜರು ಹೇಗೆ ಮತಾಂತರಗೊಂಡರೆಂಬುದು ನನಗೆ ಗೊತ್ತಿದೆ. ಅವರು ಮತಪರಿವರ್ತನೆ ಮಾಡಿಕೊಳ್ಳಲೇಬೇಕಿತ್ತು, ಇಲ್ಲವೇ ಸಾಯಬೇಕಿತ್ತು ಅಷ್ಟೆ. ಮುಸಲ್ಮಾನರಿಗಿಂತ ನೀವು ಹೆಚ್ಚಿನದ್ದೇನು ಮಾಡಬಲ್ಲಿರಿ ಹೇಳಿ? ನಾವೆಲ್ಲರೂ ಒಂದೇ ಎನ್ನುವಿರಿ ಏಕೆಂದರೆ, ನಾವು ಇತರರನ್ನು ಕೊಲ್ಲಬಹುದು ಎನ್ನುವುದಷ್ಟೇ ನಿಮ್ಮ ದೃಷ್ಟಿ. ಅರಬ್ಬರೂ ಅದನ್ನೇ ಹೇಳಿದರು. ಅದನ್ನೇ ಕೊಚ್ಚಿಕೊಂಡರು. ಆದರೆ ಈಗವರು ಎಲ್ಲಿದ್ದಾರೆ? ಹೀಗೆ ಮೆರೆದ ರೋಮನ್ನರು ಈಗೆಲ್ಲಿ? ಯಾರು ಶಾಂತಿಗಾಗಿ ಬದುಕಿದರೋ ಅವರು ಭುವಿಯನ್ನು ಆನಂದಿಸುತ್ತಾರೆ. ಉಳಿದವೆಲ್ಲಾ ಮರಳ ಮನೆಯಂತೆ. ದೀರ್ಘಕಾಲ ಉಳಿಯಲಾರದು’ ಹಾಗೆಂದು ಸ್ವಾಮೀಜಿ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಮುಂದುವರೆದು ಸ್ವಾಮೀಜಿ ‘ಇಸ್ಲಾಂ ತನ್ನ ಅನುಯಾಯಿಗಳಿಗೆ ತನ್ನ ಮತವೊಪ್ಪದವರನ್ನು ಕೊಲ್ಲಲು ಅನುಮತಿಸುತ್ತದೆ. ಕುರಾನಿನಲ್ಲಿ, ಇಸ್ಲಾಮಿನಲ್ಲಿ ನಂಬಿಕೆ ಇರಿಸದವನನ್ನು ಮತ್ತು ಈ ಮತವನ್ನು ಸ್ವೀಕರಿಸದವನನ್ನು ಕೊಲ್ಲಿರಿ ಎಂದು ಸ್ಪಷ್ಟವಾಗಿ ಹೇಳಿದೆ. ಅವರನ್ನು ಬೆಂಕಿಗೆಸೆಯಬೇಕು, ಕತ್ತಿಯಿಂದ ತುಂಡರಿಸಬೇಕು ಎಂದೂ ಹೇಳಲಾಗುತ್ತದೆ. ಈಗ ನಾವೇನಾದರೂ ಮುಸಲ್ಮಾನನಿಗೆ ಇದು ತಪ್ಪೆಂದು ಹೇಳಿದರೆ ಆತ ಸಹಜವಾಗಿಯೇ ನಮ್ಮನ್ನು ಪ್ರಶ್ನಿಸುತ್ತಾನೆ. ನನ್ನ ಪುಸ್ತಕ ಇದನ್ನು ಹೇಳಿದೆ ಎಂದೂ ಹೇಳುತ್ತಾನೆ. ಕ್ರಿಶ್ಚಿಯನ್ನರು ಮಧ್ಯೆ ಬಂದು, ನನ್ನ ಪುಸ್ತಕ ನಿನ್ನ ಪುಸ್ತಕಕ್ಕಿಂತ ಹಳೆಯದು ಎಂದರೆ, ಬುದ್ಧನ ಅನುಯಾಯಿಗಳು ನಡುವೆ ನುಸುಳಿ, ನಮ್ಮ ಪುಸ್ತಕ ನಿಮ್ಮದ್ದಕ್ಕಿಂತಲೂ ಪ್ರಾಚೀನ ಎಂದು ಕ್ರಿಶ್ಚಿಯನ್ನರಿಗೆ ಹೇಳುತ್ತಾರೆ. ಹಿಂದೂವೇನು ಕಡಿಮೆಯೇ? ಆತ ಎಲ್ಲರಿಗಿಂತಲೂ ಪ್ರಾಚೀನವಾದ್ದು ನನ್ನ ಪುಸ್ತಕ ಎನ್ನುತ್ತಾನೆ. ಆದ್ದರಿಂದಲೇ ಪುಸ್ತಕವನ್ನು ಮುಂದಿಟ್ಟುಕೊಳ್ಳುವುದು ಒಳಿತಲ್ಲ. ಕ್ರಿಸ್ತನ ಅನುಯಾಯಿಗಳು ಸರ್ಮನ್ ಆನ್ ದ ಮೌಂಟ್- ಇದನ್ನು ಶ್ರೇಷ್ಠವೆಂದರೆ, ಮುಸಲ್ಮಾನರು ಕುರಾನಿನ ನೀತಿಗಳೇ ಶ್ರೇಷ್ಠವೆನ್ನುತ್ತಾರೆ. ಇವರಿಬ್ಬರ ನಡುವೆ ನಿಣರ್ಾಯಕ ಪಾತ್ರ ಯಾರು ವಹಿಸಬೇಕು? ತೃತೀಯ ವ್ಯಕ್ತಿಯೇ ಆಗಬೇಕಲ್ಲವೇ? ಮತ್ತು ಅದು ಇನ್ನೊಂದು ಇಂಥದ್ದೇ ಪುಸ್ತಕ ಆಗಲು ಸಾಧ್ಯವೇ ಇಲ್ಲ. ಅದು ವೈಶ್ವಿಕವಾಗಿರಬೇಕು. ಪ್ರಜ್ಞೆಗಿಂತಲೂ ವಿಶ್ವವ್ಯಾಪಿಯಾಗಿರುವುದು ಮತ್ಯಾವುದಿರಲು ಸಾಧ್ಯ? ಆದರೆ ವ್ಯಕ್ತಿಯ ಈ ಆಲೋಚನೆಗಳನ್ನೊಪ್ಪದ ಕ್ರಿಶ್ಚಿಯನ್ನರು, ಪಾದ್ರಿಗಳ ಒಕ್ಕೂಟವೇ ನಿರ್ಣಯಿಸಬಲ್ಲದು ಎಂದು ವಾದಿಸುತ್ತಾರೆ. ವ್ಯಕ್ತಿಯೊಬ್ಬನ ವಿಚಾರ ದುರ್ಬಲವೆನ್ನುವುದಾದರೆ ಗುಂಪುಗೂಡಿರುವ ವ್ಯಕ್ತಿಗಳ ವಿಚಾರ ಅದಕ್ಕಿಂತಲೂ ದುರ್ಬಲವೆನ್ನುವುದನ್ನು ಮರೆಯುವಂತಿಲ್ಲ. ಮನುಕುಲ ತನ್ನ ಪ್ರಜ್ಞೆಯನ್ನು ಅನುಸರಿಸಿ ನಾಸ್ತಿಕವಾದಿಯಾಗುವುದು, ಯಾವುದೋ ಗುಂಪಿನ ಆದೇಶವನ್ನು ಸುಖಾಸುಮ್ಮನೆ ಸ್ವೀಕರಿಸಿ ಆಸ್ತಿಕನಾಗಿ ಲಕ್ಷಾಂತರ ದೇವರುಗಳನ್ನು ನಂಬುವುದಕ್ಕಿಂತಲೂ ಮೇಲು’ ಹೀಗೆನ್ನುವ ಸ್ವಾಮೀಜಿ ಆತ್ಮಸಾಕ್ಷಾತ್ಕಾರಕ್ಕಿಂತ ಮಿಗಿಲಾದ್ದು ಯಾವುದೂ ಇಲ್ಲ ಎಂಬುದನ್ನು ಅವರೆದುರು ಸಾಬೀತುಪಡಿಸುತ್ತಾರೆ. ತಮ್ಮ ಇನ್ನೊಂದು ಭಾಷಣದಲ್ಲಿ ಧರ್ಮವೊಂದರ ಮೂರು ಮುಖ್ಯ ಸಂಗತಿಗಳೆಡೆಗೆ ಎಲ್ಲರ ಗಮನ ಸೆಳೆಯುತ್ತಾರೆ. ಮೊದಲನೆಯದ್ದು ತತ್ವ, ಎರಡನೆಯದ್ದು ತತ್ವಕ್ಕೆ ಪೂರಕವಾದ ಪುರಾಣ ಮತ್ತು ಮೂರನೆಯದ್ದು ಆಚರಣೆ. ಯಾವ ಮತ-ಪಂಥಗಳೆಡೆಗೆ ಗಮನ ಹರಿಸಿದರೂ ಈ ಮೂರೂ ಇದ್ದೇ ಇರುತ್ತದೆ. ಸ್ವಾಮೀಜಿಯ ಅಭಿಪ್ರಾಯದ ಪ್ರಕಾರ ಹೊರ ಆವರಣವಾದ ಆಚರಣೆಯಲ್ಲಿಯೇ ಬಹುತೇಕರು ಮಗ್ನರಾಗುವುದಲ್ಲದೇ ಅದಕ್ಕಾಗಿ ಕಚ್ಚಾಡುತ್ತಿರುತ್ತಾರೆ. ಇತರರನ್ನು ಮತಾಂತರಗೊಳಿಸುವ ಧಾವಂತವಿರುವ ಪ್ರತಿಯೊಬ್ಬರೂ, ತಮ್ಮ ಆಚರಣೆಯನ್ನು ಹೇರಬಯಸುವ ಸಾಮಾನ್ಯ ಜನರು ಮಾತ್ರ. ತಮ್ಮ ಪುರಾಣ ಕಥೆಗಳನ್ನೇ ಅನಾಮತ್ತು ಒಪ್ಪಿಕೊಳ್ಳಬೇಕೆನ್ನುವ ಧಾಷ್ಟ್ರ್ಯ ಅವರಿಗಿದೆ. ಆಚರಣೆ ಮತ್ತು ಈ ದಂತಕಥೆಗಳ ಹಿಂದೆ ಬಿದ್ದಷ್ಟೂ ಧರ್ಮದ ತತ್ವ ಚಿಂತನೆಯಿಂದ ದೂರವಾಗಿಬಿಡುತ್ತೇವೆ. ಸಿದ್ಧಾಂತದ ಹತ್ತಿರಕ್ಕೆ ಹೋದಷ್ಟೂ ಬಾಹ್ಯಾಚರಣೆಗಳೆಲ್ಲ ಕುಸಿದುಬೀಳುತ್ತವೆ ಎಂದೆಲ್ಲಾ ಹೇಳುವ ಸ್ವಾಮೀಜಿ ಪಶ್ಚಿಮದ ಜನರನ್ನು ಮೂಲಸತ್ವದತ್ತ ಸೆಳೆದು, ‘ಕ್ರಿಸ್ತನ ವಿಚಾರಗಳಿಗೆ ಮರಳಿ, ಅಲ್ಲಿಯೇ ನಿಮ್ಮ ಸಾಕ್ಷಾತ್ಕಾರ ಅಡಗಿದೆ’ ಎನ್ನುವುದನ್ನು ನೆನಪಿಸಿಕೊಡಲು ಮರೆಯುವುದಿಲ್ಲ!

ಸರ್ವಧರ್ಮ ಸಮ್ಮೇಳನದ ಆರಂಭದಲ್ಲಿ ಸ್ವಾಮಿ ವಿವೇಕಾನಂದರನ್ನು ಪ್ರೀತಿಯಿಂದಲೇ ಸ್ವೀಕರಿಸಿದ ಕ್ರಿಶ್ಚಿಯನ್ನರು ಬರಬರುತ್ತಾ ಎದುರು ನಿಲ್ಲಲಾರಂಭಿಸಿದರು. ಸಂಘಟಕರಲ್ಲಿ ಪ್ರಮುಖನಾದ ಬೊರೊಸ್ ವಿವೇಕಾನಂದರಿಗೆ ಸಿಕ್ಕ ಅಭೂತಪೂರ್ವ ಗೌರವವನ್ನು ಬಲು ಪ್ರೀತಿಯಿಂದಲೇ ಬಣ್ಣಿಸಿದ್ದು ನಿಜವಾದರೂ ಆನಂತರದ ದಿನಗಳಲ್ಲಿ ಮದ್ರಾಸಿಗೆ ಬಂದು ವಿವೇಕಾನಂದರ ಕುರಿತಂತೆ ಸಾಕಷ್ಟು ಸುಳ್ಳುಗಳ ಪ್ರಚಾರವನ್ನು ಮಾಡಿದ. ಇದು ಪಶ್ಚಿಮದಲ್ಲಿ ವಿವೇಕಾನಂದರು ಕ್ರಿಸ್ತಮತದ ಮೇಲೆ ಉಂಟುಮಾಡಿದ ಆಘಾತದ ಅಡ್ಡಪರಿಣಾಮವಾಗಿತ್ತು ಅಷ್ಟೆ! ಅಂದಿನ ಪತ್ರಿಕೆಯೊಂದು ವಿವೇಕಾನಂದರ ಭಾಷಣದ ಪ್ರಭಾವವನ್ನು ಬಣ್ಣಿಸುತ್ತಾ ಅವರ ಮಾತುಗಳನ್ನು ಕೇಳಲು ಜನ ಧಾವಿಸುತ್ತಿದ್ದ ಪರಿಯನ್ನು ವಿವರಿಸುತ್ತದೆ. ಅದರ ಮುಕ್ಕಾಲುಪಾಲು ಅಮೆರಿಕನ್ ಸ್ತ್ರೀಯರೇ ಇದ್ದುದನ್ನು ಗುರುತಿಸುತ್ತದೆ ಕೂಡ. ಸ್ವಾಮೀಜಿ ಭವಿಷ್ಯದ ಪೀಳಿಗೆಯನ್ನು ವೈಚಾರಿಕವಾಗಿಸಲು ಮಾಡಿದ ಪ್ರಯಾಸ ಎಂಥದ್ದೆಂಬುದು ಅರಿವಾಗುವುದು ಆಗಲೇ. ಹಾಗಂತ ಅವರು ಭಾವನಾತ್ಮಕವಾದ ಮಾತುಗಳಿಂದ ಅಷ್ಟೇ ತಮ್ಮ ವಿಚಾರವನ್ನು ಮುಟ್ಟಿಸುವ ಪ್ರಯತ್ನ ಮಾಡಲಿಲ್ಲ. ವಿಜ್ಞಾನದ ಸಹಕಾರ ಪಡೆದು ಧಾಮರ್ಿಕ ಸಂಗತಿಗಳನ್ನು ಮನಮುಟ್ಟುವಂತೆ ವಿವರಿಸಿದರು. ಎಲ್ಲರನ್ನೂ ಒಂದೇ ಮತಕ್ಕೆ ಸೇರಿಸಿಬಿಡುವ, ಒಂದೇ ರೀತಿ ಕಾಣುವಂತೆ ಮಾಡಿಬಿಡುವ, ಒಂದೇ ಪುಸ್ತಕವನ್ನು, ಒಬ್ಬನೇ ವ್ಯಕ್ತಿಯನ್ನು ಅನುಸರಿಸುವ ಏಕರೂಪತೆ ತರುವ ಕ್ರಿಶ್ಚಿಯನ್ನರ, ಮುಸಲ್ಮಾನರ ವಾದವನ್ನು ಅವರು ಸಮರ್ಥವಾಗಿ ಖಂಡಿಸಿದರು. ಈ ರೀತಿಯ ಏಕರೂಪತೆ ಅಸಾಧ್ಯವೆಂದುದಲ್ಲದೇ ಭಿನ್ನತೆ ಇರುವುದರಿಂದಲೇ ಸೃಷ್ಟಿ ಇದೆ ಎಂಬುದನ್ನು ಒಪ್ಪಿಸಿದರು. ಕೋಣೆಯೊಂದರಲ್ಲಿ ಶಾಖವಿದೆ ಎಂದಿಟ್ಟುಕೊಳ್ಳಿ. ಅದು ಶಾಖವಿಲ್ಲದೆಡೆಗೆ ಹರಿಯುವ ಪ್ರಯತ್ನ ಮಾಡಿಯೇ ಮಾಡುತ್ತದೆ. ಒಂದು ವೇಳೆ ಹಾಗೆ ಶಾಖ ಹರಿಯುವುದು ನಿಂತಿತೆಂದರೆ ಆ ಕೋಣೆಯಲ್ಲಿ ಇನ್ನು ಶಾಖದ ಅನುಭೂತಿಯಾಗುವುದಿಲ್ಲವೆಂದೇ ಅರ್ಥ. ಹಾಗೆಯೇ ಭಿನ್ನತೆ ಇರುವುದರಿಂದಲೇ ನಮಗೆ ಎಲ್ಲ ಸಂಗತಿಗಳು ಅರಿವಿಗೆ ಬರುತ್ತವೆ. ಏಕರೂಪತೆ ತಾಳಿದೊಡನೆ ಅನುಭವ ಕಳೆದುಹೋಗಿಬಿಡುತ್ತದೆ, ಎನ್ನುವ ಮೂಲಕ ಎಲ್ಲರೂ ಕ್ರಿಸ್ತನನ್ನು ಅನಸರಿಸಿಬಿಡಬೇಕೆಂಬ ಕ್ರಿಶ್ಚಿಯನ್ನರ ಧಾವಂತಕ್ಕೆ ಸ್ವಾಮೀಜಿ ಬ್ರೇಕ್ ಹಾಕಿದ್ದರು. ಒಂದು ಹಂತದಲ್ಲಂತೂ ಸ್ವಾಮೀಜಿ ಹೆಚ್ಚು-ಹೆಚ್ಚು ಮತ-ಪಂಥಗಳಾದಷ್ಟೂ ಸಮಾಜಕ್ಕೆ ಒಳಿತೇ ಎಂಬುದನ್ನು ಮುಲಾಜಿಲ್ಲದೇ ಸಾರಿದ್ದರು. ಅವರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ತಾನೇ ಒಂದು ಮತವಾದರೆ ಅದು ನಾಶಕ್ಕೆ ಕಾರಣವಾಗುವುದಿಲ್ಲ, ಬದಲಿಗೆ ಎಲ್ಲವೂ ಒಟ್ಟಾಗಿ ಏಕತೆಗೆ ಕಾರಣವಾಗುತ್ತದೆ ಎಂಬುದನ್ನು ಘಂಟಾಘೋಷವಾಗಿ ಸಾರಿದ್ದರು.

ಈ ಆಲೋಚನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಪೂಜಿಸುವ 33 ಕೋಟಿ ದೇವರುಗಳನ್ನು, ನಮ್ಮ ವಿಭಿನ್ನ ಆಲೋಚನೆಯ ಪ್ರಕ್ರಿಯೆಗಳನ್ನು ಒಮ್ಮೆ ಯೋಚಿಸಿ ನೋಡಿ. ಹಿಂದೂಧರ್ಮ ನಮಗೆ ಕೊಟ್ಟಿರುವ ಸ್ವಾತಂತ್ರ್ಯ ಮತ್ತು ಭಗವಂತನ ಹತ್ತಿರಕ್ಕೆ ಹೋಗಲು ನಮಗಿರುವ ದಿವ್ಯ ಮಾರ್ಗ ಎಂಥದ್ದೆಂಬುದರ ಅರಿವಾಗುತ್ತದೆ. ಸ್ವಾಮೀಜಿ ಬಲುಸೂಕ್ಷ್ಮವಾಗಿಯೇ ಹಿಂದೂಧರ್ಮ ಇತರೆಲ್ಲ ಮತಗಳಿಗಿಂತಲೂ ಎಷ್ಟು ವೈಚಾರಿಕವಾದ್ದು ಮತ್ತು ಪರಿಪೂರ್ಣವಾದ್ದು ಎನ್ನುವುದನ್ನು ಪಶ್ಚಿಮದ ಸಮಾಜದ ಮುಂದಿಟ್ಟರಲ್ಲ, ಅದು ನಿಜಕ್ಕೂ ಆಕರ್ಷಣೀಯವಾದ್ದು. ಹಾಗೆ ನೋಡಿದರೆ, ಅಲ್ಲಿನವರೇ ಅದನ್ನು ಬಲುಬೇಗ ಅಥರ್ೈಸಿಕೊಂಡು ಜೀಣರ್ಿಸಿಕೊಂಡರು. ನಾವಿನ್ನೂ ಹೆಣಗಾಡುತ್ತಲೇ ಇದ್ದೇವೆ!

Comments are closed.