ವಿಭಾಗಗಳು

ಸುದ್ದಿಪತ್ರ


 

ಆ ಹುಡುಗಿಯ ಬಾಹುಗಳಲ್ಲಿ ದುರ್ಗಾಶಕ್ತಿ!

ತಂದೆ-ತಾಯಿ ಇಬ್ಬರೂ ಇತರರ ಜಮೀನುಗಳಲ್ಲಿ ಕೃಷಿ ಮಾಡಿ ಬದುಕು ಸಾಗಿಸುತ್ತಿದ್ದವರು. ಸಹಜವಾಗಿಯೇ ದೊಡ್ಡವಳಾಗಿದ್ದ ಮೇರಿ ಅವರ ಜವಾಬ್ದಾರಿಯನ್ನು ತಾನೂ ಹೊತ್ತು ಸಹಕಾರಿಯಾಗಿದ್ದಳು. ಬಾಲ್ಯದಿಂದಲೂ ಮುನ್ನುಗ್ಗುವ ಸ್ವಭಾವದವಳಾಗಿದ್ದರಿಂದ ಶಾಲೆಯಲ್ಲಿ ಮೈದಾನದಲ್ಲಿ ಯಾವ ಆಟೋಟವಾಗಿದ್ದರೂ ಆಕೆ ಮುಂದೆ ಹೋಗಿ ನಿಂತಿರುತ್ತಿದ್ದಳು.

ಈ ಪುಣ್ಯಾತ್ಗಿತ್ತಿ ಇನ್ನೇನೇನು ಮಾಡುವವಳಿದ್ದಾಳೊ! ಎಲ್ಲ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ತಾನು ಸಾಧಕಿ ಎಂಬುದನ್ನು ಮತ್ತೆ-ಮತ್ತೆ ಸಾಬೀತು ಪಡಿಸುತ್ತಿದ್ದಾಳೆ. ಬಹುಶಃ ಗಂಡು ಸಂತಾನವೇ ಬೇಕು ಎನ್ನುವವರಿಗೆ ಪಟ್ಟಾಗಿ ಕೂರಿಸಿ ಈಕೆಯ ಜೀವನವನ್ನೊಮ್ಮೆ ಓದಿಸಬೇಕು. ಓದಿಸುವುದೇನು, ಆಕೆಯ ಹಿಡಿದ ಕೆಲಸ ಬಿಡದ ಛಲವನ್ನು, ರಾಷ್ಟ್ರಭಕ್ತಿಯ ಕಿಚ್ಚನ್ನು, ಏನನ್ನು ಬೇಕಾದರೂ ಮಾಡಬಲ್ಲೆ ಎಂಬ ಎಲ್ಲೆ ಇಲ್ಲದ ಆತ್ಮವಿಶ್ವಾಸವನ್ನು ಈಗಲೂ ಖುದ್ದಾಗಿ ನೋಡಬಹುದು. ನಾನು ಮೇರಿಕೋಮ್ಳ ಬಗ್ಗೆ ಮಾತನಾಡುತ್ತಿದ್ದೇನೆ. ಕಳೆದ ವಾರ ಆಕೆ ಜಾಗತಿಕ ಮಟ್ಟದ ಬಾಕ್ಸಿಂಗ್ನಲ್ಲಿ ಆರನೇ ಬಾರಿ ಚಾಂಪಿಯನ್ ಆಗುವ ಮೂಲಕ ದಾಖಲೆ ಬರೆದಿದ್ದಾಳೆ! ಅವಳೀಗ ಏಳನೇ ಚಾಂಪಿಯನ್ಶಿಪ್ನತ್ತ ದೃಷ್ಟಿನೆಟ್ಟಿದ್ದಾಳೆ. ಅಷ್ಟೇ ಅಲ್ಲದೇ ಒಲಿಂಪಿಕ್ಸ್ನಲ್ಲಿ ಚಿನ್ನವನ್ನು ಗೆದ್ದು ಹೊಸದೊಂದು ಭಾಷ್ಯ ಬರೆಯಬೇಕೆಂದಿದ್ದಾಳೆ. ಮೇರಿಕೋಮ್ಳ ಗೆಲುವಿನ ಓಟ ಈಗಿನದ್ದಲ್ಲ. 18 ವರ್ಷಗಳ ಹಿಂದೆಯೇ ಮೊದಲ ರುಚಿಯನ್ನು ಕಂಡವಳು ಆಕೆ. ಮಣಿಪುರದ ರಾಜ್ಯಮಟ್ಟದ ಬಾಕ್ಸಿಂಗ್ನಲ್ಲಿ ಚಿನ್ನದ ಪದಕವನ್ನು ಆಕೆ ಗೆದ್ದಾಗಲೇ ಮನೆಯವರಿಗೆ ಆಕೆ ಬಾಕ್ಸಿಂಗ್ ಅನ್ನು ಆಟವನ್ನಾಗಿ ಆಯ್ದುಕೊಂಡಿದ್ದಾಳೆ ಎಂದು ಗೊತ್ತಾಗಿದ್ದು. ಆಗೆಲ್ಲಾ ವಿರೋಧಿಸುತ್ತಿದ್ದ ಅವರ ತಂದೆ ಕಾಲಕ್ರಮೇಣ ಆಕೆಯನ್ನು ಒಪ್ಪಿಕೊಂಡು ಬಾಕ್ಸಿಂಗ್ನಲ್ಲಿ ಆಕೆ ಹಂತ-ಹಂತವಾಗಿ ಮೇಲೇರುವಂತೆ ಆಕೆಗೆ ತರಬೇತಿ ಕೊಡಿಸಿದ್ದಂತೂ ನಿಜ. ಅವಳಪ್ಪ ತಾನೇ ಸ್ವತಃ ಕುಸ್ತಿ ಪಟುವಾಗಿದ್ದರೂ ಮೇರಿಕೋಮ್ ಬಾಕ್ಸಿಂಗ್ ಮಾಡುವುದು ಬೇಡವೆಂದು ಹೇಳುತ್ತಿದ್ದುದು ಏಕೆ ಗೊತ್ತೇನು? ಈ ಸ್ಪಧರ್ೆಯ ಹೊತ್ತಲ್ಲಿ ಮುಖಕ್ಕೆ ಏಟು ಬಿದ್ದು ಆಕೆಯ ಸೌಂದರ್ಯ ಹಾಳಾಗಿ ಮದುವೆಯಾಗದಿದ್ದರೆ ಎಂಬ ಹೆದರಿಕೆಯಿಂದ. ಹೆಣ್ಣೆಂದರೆ ಮದುವೆಯಾಗಲೇ ಹುಟ್ಟಿದವಳು ಎಂಬ ಭಾವನೆ ಅದೇಕೆ ತಂದೆ-ತಾಯಿಯರನ್ನು ಕಾಡುತ್ತದೋ ದೇವರೇ ಬಲ್ಲ. ಬಹುಶಃ ಇಸ್ಲಾಮಿನ ಆಕ್ರಮಣದ ಕಾಲಕ್ಕೆ ಮದುವೆಯಾಗದ ಹೆಣ್ಣುಮಕ್ಕಳನ್ನು ಹೊತ್ತೊಯ್ಯುವ ಅವರ ರಾಕ್ಷಸೀ ಪ್ರವೃತ್ತಿಯ ಹೆದರಿಕೆ ಇನ್ನೂ ಹೋಗಿಲ್ಲವೆನಿಸುತ್ತದೆ. ಬಾಕ್ಸಿಂಗ್ನಲ್ಲಿದ್ದ ಅವಳ ಆಕ್ರಮಣಕಾರಿ ನೀತಿಯನ್ನು ಗಮನಿಸಿಯೇ ಕರಾಂಗ್ ಓಂಗ್ಲರ್ ಆಕೆಯನ್ನು ಇಷ್ಟಪಟ್ಟು ಮದುವೆಯಾದದ್ದು. ಸಹಜವಾಗಿ ಪ್ರೇಮಿಯೊಂದಿಗೆ ಕಾಲ ಕಳೆಯುತ್ತಾ ಮಕ್ಕಳೂ ಆದೊಡನೆ ಬಾಕ್ಸಿಂಗ್ ಅನ್ನು ಮರೆತೇ ಬಿಟ್ಟಿದ್ದಳು ಮೇರಿಕೋಮ್. ಅಕ್ಕ-ಪಕ್ಕದ ಜನ ಮೂದಲಿಸಲಾರಂಭಿಸಿದರೂ ಕೂಡ. ‘ಹೆಣ್ಣುಮಕ್ಕಳೆಂದರೆ ಬಾಕ್ಸಿಂಗ್ ಮಾಡುವುದುಂಟಾ? ಒಂದು ಪದಕ ಗೆದ್ದೊಡನೆ ಮುಗಿಯಲಿಲ್ಲ; ಮೇರಿಕೋಮ್ಳ ಕಥೆ ಮುಗಿಯಿತಷ್ಟೇ’ ಎಂದು ಅಕ್ಕ-ಪಕ್ಕದ ಜನ ಮೂದಲಿಸಲಾರಂಭಿಸಿದಾಗ ಆಕೆಯ ಅಂತಃಶಕ್ತಿ ಜಾಗೃತಗೊಂಡಿತು. ಗಂಡನ ಅನುಮತಿ ಪಡೆದೇ ತನ್ನ ಗುರುವಿನ ಬಳಿ ಮತ್ತೆ ಹೋಗಿ ಬಾಕ್ಸಿಂಗ್ನ ಅಧ್ಯಯನ ಶುರುಮಾಡಿದಳು. 2008 ರಲ್ಲಿ ಭಾರತದಲ್ಲಿ ನಡೆದ ಏಷಿಯಾ ಮಹಿಳಾ ಬಾಂಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದಳು. ಚೀನಾದಲ್ಲಿ ನಡೆದ ಅಂತರರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಹಾಗೂ ವಿಯೆಟ್ನಾಂನಲ್ಲಿ ನಡೆದ ಏಷಿಯನ್ ಕ್ರೀಡಾಸ್ಪಧರ್ೆಗಳಲ್ಲಿ ಚಿನ್ನ ಗೆದ್ದಳು. 2010ರಲ್ಲಿ ಕಜಕಸ್ತಾನದಲ್ಲಿ ನಡೆದ ಏಷಿಯನ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಮತ್ತೆ ಚಿನ್ನ ಗೆದ್ದ ಮೇರಿ ಬಾಬರ್ಾಡೋಸ್ನಲ್ಲಿ ನಡೆದ ಅಂತರರಾಷ್ಟ್ರೀಯ ಬಾಕ್ಸಿಂಗ್ನಲ್ಲಿ ಮತ್ತೊಂದು ಚಿನ್ನ ಗೆದ್ದಳು. ಇದು ಸುಲಭ ಸಾಧ್ಯದ ಮಾತಾಗಿರಲಿಲ್ಲ. ಏಕೆಂದರೆ 46 ಕೆಜಿ ವಿಭಾಗದಲ್ಲಿ ಸ್ಪಧರ್ಿಸುತ್ತಿದ್ದ ಮೇರಿಕೋಮ್ ಬಾರ್ಬಡೋಸ್ನಲ್ಲಿ 48 ಕೆಜಿ ಸ್ಪಧರ್ಿಗಳೊಂದಿಗೆ ಸೆಣಸಾಡಬೇಕಾಗಿತ್ತು. ಏಕೆಂದರೆ ಆ ವರ್ಷ 46 ಕೆಜಿ ವಿಭಾಗವನ್ನೇ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ತೆಗೆದು ಹಾಕಿತ್ತು. 2010 ರ ಏಷಿಯನ್ ಗೇಮ್ಸ್ನಲ್ಲಿ 51 ಕೆಜಿ ವಿಭಾಗದಲ್ಲಿ ಕಂಚು ಗೆದ್ದ ಮೇರಿಕೋಮ್ ಮರುವರ್ಷವೇ ಚೀನಾದಲ್ಲಿ ನಡೆದ ಸ್ಪಧರ್ೆಯಲ್ಲಿ ಚಿನ್ನ ಗೆದ್ದಳು. ಅವಳಿಗೆ ಸಿಕ್ಕ ಗೌರವ ಅದೆಂಥದ್ದೆಂದರೆ ದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡೋಟಗಳಲ್ಲಿ ಬಾಕ್ಸಿಂಗ್ ಇರಲಿಲ್ಲವಾದರೂ ಜ್ಯೋತಿಯನ್ನು ಹಿಡಿಯುವ ಗೌರವ ಮೇರಿಕೋಮ್ಳಿಗೆ ಸಿಕ್ಕಿತು. ಅಲ್ಲಿಂದಾಚೆಗೆ ಆಕೆ ಎಂದೂ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. 2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಜಾಗತಿಕ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಕಜಕಸ್ತಾನದ ಸ್ಪಧರ್ಿಯನ್ನು ಸೋಲಿಸಿ 51 ಕೆಜಿ ವಿಭಾದಲ್ಲಿ ಮೊದಲ ಬಾರಿಗೆ ಚಿನ್ನ ಗೆದ್ದಿದ್ದಳು ಮೇರಿಕೋಮ್. ಮತ್ತೆ ಮೂರು ವರ್ಷಗಳ ನಂತರ 48 ಕೆಜಿ ವಿಭಾಗದಲ್ಲಿ ವಿಯೆಟ್ನಾಂನಲ್ಲಿ ಇನ್ನೊಂದು ಅಂತರರಾಷ್ಟ್ರೀಯ ಚಿನ್ನದ ಪದಕವನ್ನು ಆಕೆ ಬಾಚಿಕೊಂಡಳು. 2018 ರಲ್ಲಿ ಕಾಮನ್ವೆಲ್ತ್ ಗೇಮ್ಸ್ಗಳು ನಡೆದಾಗ ಸಹಜವಾಗಿಯೇ ಮೇರಿಕೋಮ್ ಮತ್ತೊಂದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಳು. ಮೊನ್ನೆ ದೆಹಲಿಯಲ್ಲಿ ನಡೆದ ಹತ್ತನೇ ಅಂತರರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಆರನೇ ಅಂತರರಾಷ್ಟ್ರೀಯ ಪದಕವನ್ನು ಗೆದ್ದು ದೇಶದ ಎದೆ ಉಬ್ಬುವಂತೆ ಮಾಡಿದ್ದಾಳೆ!

2

ಇಷ್ಟೆಲ್ಲಾ ಸಾಧನೆ ಸುಲಭಕ್ಕೆ ದಕ್ಕಿದ್ದಲ್ಲ. ಅದರ ಹಿಂದೆ ಆ ಹೆಣ್ಣುಮಗಳ ಅಪ್ರತಿಮವಾದ ಹೋರಾಟ ಅಡಗಿದೆ. ಮಣಿಪುರದ ಪುಟ್ಟ ಹಳ್ಳಿ ಕಾಂಗ್ಥೇಯಲ್ಲಿ ಹುಟ್ಟಿದ ಮಾಂಗ್ತೇ ಚುಂಗ್ನಿಯಾಂಗ್ ಬಾಲ್ಯದಿಂದಲೂ ಬಡತನವನ್ನು ಉಂಡೇ ಬೆಳೆದವಳು. ಅಷ್ಟುದ್ದದ ಹೆಸರನ್ನು ಹೇಳಲು ಕಷ್ಟವಾಗುತ್ತದೆಂದೇ ಅವರ ಬಾಕ್ಸಿಂಗ್ ಗುರುಗಳು ಅದನ್ನು ಮೇರಿ ಎಂದು ಬದಲಾಯಿಸಿಬಿಟ್ಟಿದ್ದರು. ತಂದೆ-ತಾಯಿ ಇಬ್ಬರೂ ಇತರರ ಜಮೀನುಗಳಲ್ಲಿ ಕೃಷಿ ಮಾಡಿ ಬದುಕು ಸಾಗಿಸುತ್ತಿದ್ದವರು. ಸಹಜವಾಗಿಯೇ ದೊಡ್ಡವಳಾಗಿದ್ದ ಮೇರಿ ಅವರ ಜವಾಬ್ದಾರಿಯನ್ನು ತಾನೂ ಹೊತ್ತು ಸಹಕಾರಿಯಾಗಿದ್ದಳು. ಬಾಲ್ಯದಿಂದಲೂ ಮುನ್ನುಗ್ಗುವ ಸ್ವಭಾವದವಳಾಗಿದ್ದರಿಂದ ಶಾಲೆಯಲ್ಲಿ ಮೈದಾನದಲ್ಲಿ ಯಾವ ಆಟೋಟವಾಗಿದ್ದರೂ ಆಕೆ ಮುಂದೆ ಹೋಗಿ ನಿಂತಿರುತ್ತಿದ್ದಳು. ಜಾವ್ಲೀನ್ ಮತ್ತು 400 ಮೀಟರ್ ಓಟ ಆಕೆಯ ಬಹು ಆಸ್ಥೆಯ ಕ್ರೀಡೆಯಾಗಿತ್ತು. ಇದೇ ಹೊತ್ತಿನಲ್ಲಿ ಮಣಿಪುರದ ಬಾಕ್ಸರ್ ಡಿಂಕೋ ಸಿಂಗ್ ಬ್ಯಾಂಕಾಕ್ನ ಏಷಿಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದು ಬಂದ. ಇದರ ಪ್ರಭಾವ ಮೇರಿಯ ಮೇಲೆ ಹೇಗಾಯಿತೆಂದರೆ ಆಕೆಯೂ ಬಾಕ್ಸಿಂಗ್ ಅನ್ನೇ ತನ್ನ ಇಚ್ಛೆಯ ಆಟವಾಗಿ ಪರಿಗಣಿಸಲು ನಿಶ್ಚಯಿಸಿದಳು. ಹತ್ತನೇ ತರಗತಿಯಲ್ಲಿ ಉತ್ತೀರ್ಣಳಾಗಲು ಸೋತು ಹೋದ ಮೇರಿ ಶಾಲೆಯನ್ನೇ ಬಿಟ್ಟುಬಿಟ್ಟಳು. ಆದರೆ ಆಕೆಯೊಳಗಣ ಬಾಕ್ಸಿಂಗ್ನ ಕಿಚ್ಚು ಆರಲಿಲ್ಲ. ರಾಜಧಾನಿ ಇಂಫಾಲ್ಗೆ ಅಧ್ಯಯನ ನೆಪದಲ್ಲಿ ಹೋಗುತ್ತಾ ಬಾಕ್ಸಿಂಗ್ ಕಲಿಯಲಾರಂಭಿಸಿದಳು. ಆಕೆಯ ರಕ್ತದೊಳಗೆ ಕಠಿಣ ಪರಿಶ್ರಮದ ಸೂತ್ರವಡಗಿದ್ದರಿಂದ ಬಲುಬೇಗ ಬಾಕ್ಸಿಂಗ್ನ ಪಟ್ಟುಗಳನ್ನು ಆಕೆ ಕಲಿತುಬಿಟ್ಟಳು. ಸಹಜವಾಗಿಯೇ ಆಕೆಯ ಬಾಕ್ಸಿಂಗ್ಗೆ ತಂದೆಯ ವಿರೋಧವಿದ್ದುದರಿಂದ ಯಾರಿಗೂ ಅರಿವಾಗದಂತೆ ಕದ್ದುಮುಚ್ಚಿ ಅಭ್ಯಾಸ ಮಾಡುತ್ತಿದ್ದಳು. ಅದೊಮ್ಮೆ ರಾಜ್ಯಮಟ್ಟದ ಸ್ಪಧರ್ೆಯಲ್ಲಿ ಆಕೆ ವಿಜೇತಳಾಗಿ ಸ್ಥಳೀಯ ಪತ್ರಿಕೆಗಳಲ್ಲಿ ಆಕೆಯ ಚಿತ್ರ ಪ್ರಕಟವಾದಾಗಲೇ ತಂದೆಗೆ ಆಕೆಯ ತುಡಿತ ಅರಿವಾಗಿದ್ದು. ಅವನ ಕೋಪ ನೆತ್ತಿಗೇರಿತ್ತು. ಮಗಳ ಮೇಲೆ ಉರಿದುಬಿದ್ದ. ಹಾಗಂತ ಮೇರಿ ಬದಲಾಗಲಿಲ್ಲ. ಆಕೆ ತನ್ನ ಅಭ್ಯಾಸಕ್ಕೆ ಸೂಕ್ತವಾದ ಗುರುಗಳನ್ನು ಹುಡುಕಿಕೊಳ್ಳುತ್ತಾ ಕಠಿಣ ಪರಿಶ್ರಮವನ್ನು ಹಾಕಿ ರಾಷ್ಟ್ರಮಟ್ಟದಲ್ಲೆಲ್ಲಾ ಕೀತರ್ಿ ಸಂಪಾದಿಸಿದಳು. ಅವಳಿಗೆ ನಿಜವಾದ ಸಮಸ್ಯೆಯೆರಗಿದ್ದು ಮದುವೆಯ ನಂತರವೇ. ತಾನು ಇಷ್ಟಪಟ್ಟ ಹುಡುಗನನ್ನೇ ಮದುವೆಯಾಗಿದ್ದು ನಿಜವಾದರೂ ಆನಂತರ ಪರಿಪೂರ್ಣ ಪ್ರಮಾಣದಲ್ಲಿ ಗೃಹಕಾರ್ಯದಲ್ಲೇ ಮೈಮರೆತು ಎರಡು ಮಕ್ಕಳನ್ನು ಸಂಭಾಳಿಸುತ್ತಾ ಕಾಲ ಕಳೆದ ಮೇರಿ ಇದ್ದಕ್ಕಿದ್ದಂತೆ ಒಂದು ದಿನ ಮತ್ತೊಮ್ಮೆ ಬಾಕ್ಸಿಂಗ್ ರಿಂಗ್ನೊಳಗೆ ನುಸುಳುವ ಕಲ್ಪನೆಯನ್ನು ಗಂಡನೊಂದಿಗೆ ಹಂಚಿಕೊಂಡಾಗ ಆತ ಬೇಸರಿಸಿಕೊಂಡಿರಲಿಲ್ಲ. ಬದಲಿಗೆ ಮೇರಿಗೆ ಆತುಕೊಂಡು ನಿಂತ. ಆಕೆಯನ್ನು ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಮಕ್ಕಳನ್ನು ತಾನೇ ನೋಡಿಕೊಳ್ಳುತ್ತಾ ಆಕೆಯೊಳಗೆ ಪದಕದ ಕನಸುಗಳನ್ನು ಮತ್ತೆ ಬಿತ್ತಿದ. ಮೇರಿಯ ಜೀವನ ಮುಗಿದೇ ಹೋಗಿದೆ ಎಂದು ಭಾವಿಸಿದ್ದ ಅನೇಕರಿಗೆ ಮೇರಿ ಉತ್ತರ ಕೊಡಬೇಕಿತ್ತು. ತನ್ನೊಂದು ಸಂದರ್ಶನದಲ್ಲಿ ಆಕೆಯೇ ಹೇಳಿಕೊಳ್ಳುತ್ತಾಳೆ ‘ನಾನು ಚಾಂಪಿಯನ್ ಆಗಿದ್ದಾಗ ನನ್ನ ಬಗ್ಗೆ ಜನ ಏನೂ ಮಾತಾಡದೇ ಶಾಂತವಾಗಿದ್ದರು. ಆದರೆ ನಾನು ಸೋಲಲಾರಂಭಿಸಿದಾಗ ಅದೇ ಜನ ಮತ್ತೆ ಮಾತನಾಡಲಾರಂಭಿಸಿದರು’ ಎಂದು ಬೇಸರದಿಂದ ಹೇಳಿಕೊಳ್ಳುವ ಮೇರಿಕೋಮ್ ಜನರ ಚುಚ್ಚುಮಾತುಗಳೇ ತನ್ನನ್ನು ಬಲಗೊಳಿಸಿದವು ಎಂಬುದನ್ನು ಹೇಳಲು ಮರೆಯಲಿಲ್ಲ.

3

ಮೇರಿ ತನ್ನ ಸುತ್ತಮುತ್ತಲಿನ ಜನರ ಇರಿಯುವ ಮಾತುಗಳನ್ನಷ್ಟೇ ಎದುರಿಸಬೇಕಾಗಿರಲಿಲ್ಲ. ಇಡಿಯ ದೇಶ ಅವಳೊಂದಿಗೆ ಕೆಟ್ಟದಾಗಿ ನಡೆದುಕೊಂಡಿತ್ತು. ಬಹುಶಃ ಅವಳೊಂದಿಗೆ ಮಾತ್ರವಲ್ಲ; ಈಶಾನ್ಯ ರಾಜ್ಯದಿಂದ ಬರುವ ಪ್ರತಿಯೊಬ್ಬ ವ್ಯಕ್ತಿಯ ಕುರಿತಂತೆಯೂ ನಾವು ಹಾಗೆಯೇ ನಡೆದುಕೊಳ್ಳುತ್ತೇವೆ. ರಾಷ್ಟ್ರಮಟ್ಟದ ಬಾಕ್ಸಿಂಗ್ ಕ್ಯಾಂಪುಗಳಲ್ಲಿ ಭಾಗವಹಿಸುತ್ತಿದ್ದ ಮೇರಿಯನ್ನು ಇತರೆ ಭಾರತೀಯ ಬಾಕ್ಸರ್ಗಳು ಹಂಗಿಸುತ್ತಿದ್ದರು. ಆಕೆಯ ರೂಪ, ಭಾಷೆ, ನಡಿಗೆ ಎಲ್ಲವನ್ನೂ ಆಡಿಕೊಂಡು ನಗುತ್ತಿದ್ದರು. ಆಗೆಲ್ಲಾ ಒಬ್ಬಳೇ ಕುಳಿತುಕೊಂಡು ಅಳುತ್ತಿದ್ದ ಮೇರಿ ತಿರಂಗಾವನ್ನು ಮುಗಿಲೆತ್ತರಕ್ಕೆ ಹಾರಿಸಬೇಕೆಂಬ ತನ್ನ ಬಲವಾದ ಇಚ್ಛೆಯಿಂದ ಒಂದಿನಿತೂ ಪಕ್ಕಕ್ಕೆ ಸರಿಯಲಿಲ್ಲ. ಈಗಲೂ ಆಕೆ ನೊಂದುಕೊಂಡೇ ಕೇಳುತ್ತಾಳೇ, ‘ನನ್ನ ದೇಶಕ್ಕಾಗಿ ನಾನು ಒಂದಿಷ್ಟು ಸಾಧನೆ ಮಾಡಿದರೆ ನೀವೇಕೆ ನನ್ನ ಆಡಿಕೊಂಡು ನಗುವಿರಿ’? ಅಂತ. ವಿದೇಶದ ಸ್ಪಧರ್ಿಗಳು ಬಂದಾಗ ಅವರಿಗೆ ಸಿಗುವ ಗೌರವ ಒಂದು ರೀತಿಯದ್ದಾದರೆ ಅಂತರರಾಷ್ಟ್ರೀಯ ಸ್ಪಧರ್ೆಗಳ ಹೊತ್ತಲ್ಲಿ ಭಾರತದ ಮೇರಿಗೆ ಸಿಗುತ್ತಿದ್ದ ಗೌರವವೇ ಬೇರೆಯಾಗಿರುತ್ತಿತ್ತು. ಆಕೆಯನ್ನು ದ್ವಿತೀಯ ದಜರ್ೆ ನಾಗರಿಕಳಂತೆ ನೋಡುವ ಅಯೋಗ್ಯರು ಕ್ರೀಡಾಸ್ಥಾನಗಳ ಆಯಕಟ್ಟಿನ ಜಾಗದಲ್ಲಿದ್ದರು. ಕ್ರಿಕೆಟ್ ಅನ್ನು ಬಿಟ್ಟರೆ ಬೇರೆ ಕ್ರೀಡೆಯೇ ಇಲ್ಲ ಎಂದು ಭಾವಿಸಿರುವ ಅನೇಕರಿಗೆ ಮೇರಿ ಎಂಬ ಹೆಸರಿನ ಪರಿಚಯವೂ ಇರುವುದು ಅನುಮಾನ. ಇಂದಿಗೂ ಆಕೆಗೆ ಸರಿಯಾದ ಪ್ರಾಯೋಜಕರು ದಕ್ಕುತ್ತಿಲ್ಲ. ಕ್ರಿಕೆಟ್ನಂತಹ ಆಟಗಳಿಗೆ ನುಗ್ಗಿ ಬರುವ ಪ್ರಾಯೋಜಕರು, ವಿರಾಟ್ಕೋಹ್ಲಿ ಅನುಷ್ಕಾಳೊಂದಿಗೆ ಸೆಲ್ಫಿ ಹಾಕಿದರೂ ಚಪ್ಪರಿಸುವ ಅಭಿಮಾನಿಗಳು ಮೇರಿಕೋಮ್ಳ ಆರನೇ ವಿಶ್ವ ಚಿನ್ನದ ಪದಕವನ್ನು ಗಮನಿಸಿದ್ದೂ ಅನುಮಾನ.

4

ಸಂತೋಷವೆಂದರೆ ಈಚೀಚೆಗೆ ಈಶಾನ್ಯ ರಾಜ್ಯದ ಅನೇಕರು ಕ್ರೀಡೆಗಳಲ್ಲಿ ಎಂದೂ ಊಹಿಸದ ಸಾಧನೆಯನ್ನು ತೋರುತ್ತಿದ್ದಾರೆ. ಜಲ್ಪಾಯ್ಗುರಿಯ ಸಪ್ನ ಬರ್ಮನ್ ಹೆಪ್ಟಾತ್ಲಾನ್ನಲ್ಲಿ ಚಿನ್ನ ಗೆದ್ದಿದ್ದು ಇನ್ನೂ ಹಸಿಯಾಗಿಯೇ ಇದೆ. ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ಮೊದಲ ಬಾರಿ ಚಿನ್ನ ತಂದುಕೊಟ್ಟು ಭಾರತದ ಕೀತರ್ಿ ಪತಾಕೆ ಹಾರಿಸಿದ ಅಸ್ಸಾಮಿನ ಹೀಮಾ ದಾಸ್. ಇವರೆಲ್ಲರೂ ಹೆಮ್ಮೆ ಹುಟ್ಟಿಸುವಂಥವರೇ. ಅದರಲ್ಲೂ ಈ ಹೆಣ್ಣುಮಕ್ಕಳು ಪುರುಷರ ದೃಷ್ಟಿಕೋನವನ್ನೂ ಬದಲಾಯಿಸುವಂತಹ ಸಾಧನೆಯನ್ನು ಮಾಡುತ್ತಿರುವುದು ಹೆಮ್ಮೆಯಿಂದ ಹೇಳಿಕೊಳ್ಳಬೇಕಾಗಿರುವಂಥದ್ದೇ. ಇವರುಗಳಿಗೆ ಕೇಂದ್ರಸಕರ್ಾರ ನೀಡುತ್ತಿರುವ ಗೌರವ ಸಮ್ಮಾನಗಳೂ ಕೂಡ ಮೆಚ್ಚಬೇಕಾದಂಥದ್ದೇ. ವಿಜಯ್ಮಲ್ಯರಂಥವರು ರಾಜ್ಯಸಭೆಗೆ ಆಯ್ಕೆಯಾಗಿ ಬಂದು ಚೆನ್ನಾಗಿ ಲೂಟಿ ಮಾಡಿ ದೇಶಬಿಟ್ಟು ಓಡಿ ಹೋಗುವ ಸ್ಥಿತಿ ನಿಮರ್ಾಣ ಮಾಡಿದ ಪರಿಸ್ಥಿತಿಯನ್ನು ನಾವೇ ಕಂಡಿದ್ದೇವೆ. ಅಂತಹುದರಲ್ಲಿ ನರೇಂದ್ರಮೋದಿ ಮೇರಿಕೋಮ್ಳಂಥವರನ್ನು ರಾಜ್ಯಸಭೆಗೆ ನಾಮ ನಿದರ್ೇಶಿಸಿ ಈಶಾನ್ಯ ರಾಜ್ಯಕ್ಕಷ್ಟೇ ಗೌರವ ನೀಡಿದ್ದಲ್ಲ; ಬದಲಿಗೆ ಇಡಿಯ ರಾಷ್ಟ್ರದ ಹೆಣ್ಣುಮಕ್ಕಳಿಗೆ ಗೌರವವನ್ನು ಕೊಟ್ಟಿದ್ದಾರೆ. ಹಾಗಂತ ಬಾಕ್ಸಿಂಗ್ನಲ್ಲಿ ಮತ್ತೆ ಮತ್ತೆ ಚಿನ್ನದ ಪದಕ ಗೆಲ್ಲಬೇಕೆಂದು ಪ್ರಯಾಸ ಪಡುತ್ತಿರುವ ಮೇರಿಕೋಮ್ ಅಧಿವೇಶನಗಳಿಗೆ ಹಾಜರಾಗುವುದು ಸಾಧ್ಯವಾಗುತ್ತಿಲ್ಲ. ಅದು ಆಕೆಗೂ ನೋವಿದೆ. ಕಾಂಗ್ರೆಸ್ಸು ಆಯ್ಕೆ ಮಾಡಿದ್ದ ಚಿತ್ರನಟಿ ರೇಖಾ ರಾಜ್ಯಸಭೆಗೆ ಬಂದು ಗುಡ್ಡೆಹಾಕಿದ್ದು ಅಷ್ಟರಲ್ಲೇ ಇದೆ. ಮೇರಿಕೋಮ್ ತನ್ನ ಜವಾಬ್ದಾರಿಯನ್ನು ಅರಿತು ಅದಕ್ಕೆ ತಕ್ಕಂತೆ ಕೆಲಸ ಮಾಡುವ ಮನಸು ಮಾಡುತ್ತಿದ್ದಾಳಲ್ಲ ಅದೇ ಸಂತೋಷದ ಸಂಗತಿ. ಆಕೆಯ ಬದುಕಿನಿಂದ ನಾನು-ನೀವು ಕಲಿಯಬೇಕಾದ ಒಂದಷ್ಟು ಪಾಠಗಳಿವೆ. ಶಕ್ತರೆಂದರೆ ಗಂಡುಮಕ್ಕಳು ಮಾತ್ರವಲ್ಲ, ಅಗತ್ಯಬಿದ್ದಾಗ ಹೆಣ್ಣುಮಕ್ಕಳು ಎಲ್ಲವನ್ನೂ, ಎಲ್ಲರನ್ನೂ ಮೀರಿಸಬಲ್ಲರು ಅಂತ. ಪ್ರತಿಕೂಲ ಪರಿಸ್ಥಿತಿಗಳಲ್ಲೂ ಯಶಸ್ಸು ನಮ್ಮದಾಗಿಸಿಕೊಳ್ಳುವುದು ಸಾಧ್ಯವಿದೆ. ಮದುವೆಯಾಗಿ ಮಕ್ಕಳನ್ನು ಹೆತ್ತ ನಂತರವೂ ಛಲ ಸಾಧಿಸಿ ಮತ್ತೆ ಅಂತರರಾಷ್ಟ್ರೀಯ ಸ್ಪಧರ್ೆಗಳಲ್ಲಿ ಪದಕದ ಬೇಟೆ ಆರಂಭಿಸಿದ ಮೇರಿಕೋಮ್ ನಿಜಕ್ಕೂ ಸಾಧನೆಗೆ ಪಯರ್ಾಯ ಹೆಸರು. ಎಲ್ಲಕ್ಕಿಂತ ಮಿಗಿಲಾಗಿ ನಾವು ಕಲಿಯಬೇಕಾದ ಪಾಠವೆಂದರೆ ಈಶಾನ್ಯ ರಾಜ್ಯಗಳವರನ್ನು ಕಂಡಾಗ ಹಂಗಿಸುವ, ಚೀನಿಯರೆಂದು ಭಂಗಿಸುವ ಪ್ರಯತ್ನ ಮೊದಲು ಬಿಡಬೇಕು. ಏಕೆಂದರೆ, ನಾವು ಹಂಗಿಸುವವರ ನಡುವೆಯೇ ಒಬ್ಬ ಮೋರಿಕೋಮ್ ತಯಾರಾಗುತ್ತಿರುತ್ತಾಳೆ. ಅವರ ನಡುವಿನಿಂದಲೇ ಹೀಮಾ, ಸಪ್ನಾಳಂತಹ ಸಾಹಸಿಗರು ಆಕಾಶಕ್ಕೆ ಏಣಿ ಹಾಕಿಕೊಂಡು ಕುಳಿತಿರುತ್ತಾರೆ. ಮತ್ತು ಅವರು ಗೆದ್ದು ಭಾರತದ ಧ್ವಜವನ್ನು ಹಾರಾಡಿಸುವಾಗಲೆಲ್ಲ ವಿಚ್ಛಿದ್ರಕಾರಿ ಶಕ್ತಿಗಳು ಒಳಗೊಳಗೇ ಬೆಂದು ನರಳಿ ಹೋಗುತ್ತವೆ. ಇಷ್ಟಕ್ಕೂ ಇಲ್ಲಿನ ಅನ್ನ ತಿಂದು ಎಲ್ಲ ಗೌರವವನ್ನು ಸಂಪಾದಿಸಿ ಮೆರೆಯುತ್ತಿರುವ ನಗರ ನಕ್ಸಲರಿಗಿಂತ ಭಾರತವನ್ನು ಪ್ರೀತಿಸುವ ಈಶಾನ್ಯ ರಾಜ್ಯದ ಒಬ್ಬ ಸಾಮಾನ್ಯ ಪ್ರಜೆಯೂ ನೂರು ಪಾಲು ಎತ್ತರದಲ್ಲಿರುತ್ತಾನೆ!!

Comments are closed.