ವಿಭಾಗಗಳು

ಸುದ್ದಿಪತ್ರ


 

ಇಟ್ಟ ಹೆಜ್ಜೆ ತಪ್ಪಾದರೆ ಎಷ್ಟೊಂದು ದುರಂತ!

ಜೀವನಾಥನ್ ಎಂಬ ಹೆಸರಿನೊಂದಿಗೆ ನೇಪಾಳ ಪ್ರವೇಶಿಸಿದ ಅಮರ್ ಚುರುಕಾಗಿ ಕೆಲಸ ಆರಂಭಿಸಿದರು. ತಮ್ಮದ್ದೇ ಆದ ಜಾಲವೊಂದನ್ನು ಸಿದ್ಧಪಡಿಸಿಕೊಂಡಿದ್ದಲ್ಲದೇ ಅಲ್ಲಿ ತಮಗೆ ಬೇಕಾದ ವ್ಯವಸ್ಥೆಯನ್ನೂ ಹೊಸದಾಗಿ ನಿಮರ್ಾಣ ಮಾಡಿಕೊಂಡರು.

ರಿಸಚರ್್ ಆ್ಯಂಡ್ ಅನಾಲಿಸಿಸ್ ವಿಂಗ್ನ (ರಾ) ನಿದರ್ೇಶಕರಾಗಿದ್ದ ಅಮರ್ಭೂಷಣ್ ಅವರ ‘ಇನ್ಸೈಡ್ ನೇಪಾಲ್’ ಎಂಬ ಪುಸ್ತಕ ಮಾರುಕಟ್ಟೆಗೆ ಬಂದಿದೆ. ಗೂಢಚಾರರು ಒಂದಿಡೀ ರಾಷ್ಟ್ರದ ಹಣೆಬರಹವನ್ನು ಹೇಗೆ ಬದಲಾಯಿಸಿಬಿಡುತ್ತಾರೆಂಬ ರೋಮಾಂಚನಕಾರಿ ಅಧ್ಯಾಯಗಳನ್ನು ಇದು ಒಳಗೊಂಡಿದೆ.

6

ಹಿಂದಿನಿಂದಲೂ ನೇಪಾಳ ರಾಜಪರಿವಾರದ ಕೈಯಲ್ಲಿತ್ತು. 90ರ ದಶಕದಲ್ಲಿ ವೀರೇಂದ್ರ ವಿಕ್ರಮ್ಸಿಂಗ್ ನೇಪಾಳವನ್ನು ಆಳುತ್ತಿದ್ದರು. ಭಾರತ ಸಕರ್ಾರಕ್ಕೆ ರಾಜಪರಿವಾರ ಸೂಕ್ತವೆನಿಸಲಿಲ್ಲವೇನೋ. ಹೇಗಾದರೂ ಮಾಡಿ ಅದನ್ನು ಕಿತ್ತೊಗೆದು ಪ್ರಜಾಪ್ರಭುತ್ವ ಮಾದರಿಯ ಸಕರ್ಾರವನ್ನು ಅಲ್ಲಿ ಸ್ಥಾಪಿಸಬೇಕೆಂಬ ಬಯಕೆ ಹುಟ್ಟಿಬಿಟ್ಟಿತ್ತು. ಇದರ ಮುನ್ಸೂಚನೆಯನ್ನು ಗ್ರಹಿಸಿದ ಅಲ್ಲಿನ ರಾಜ ಚೀನಾದ ಬೆಂಬಲ ಪಡೆಯಲು ಉತ್ಸುಕನಾಗಿದ್ದ. ಆದರೆ ರಾಜನೇ ಚೀನಾದ ಪರವಾಗಿ ನಿಲ್ಲುವುದನ್ನು ಒಪ್ಪಿಕೊಳ್ಳಲಾಗದ ಭಾರತ ತುತರ್ಿಗೆ ಬಿದ್ದು ಆತನನ್ನು ಪದಚ್ಯುತಿಗೊಳಿಸುವ ಪ್ರಯತ್ನಕ್ಕೆ ಕೈಹಾಕಿತು! ನೇಪಾಳದಲ್ಲಿದ್ದ ಭಾರತೀಯ ರಾಜತಾಂತ್ರಿಕರು ಎಷ್ಟು ಪ್ರಯಾಸಪಟ್ಟರೂ ಮುಂದಡಿಯಿಡಲು ಸಾಧ್ಯವಾಗಲೇ ಇಲ್ಲ. ಆಗ ಕೆಲಸಕ್ಕೆ ಬಂದಿದ್ದು ‘ರಾ’.

7

ನಿದರ್ೇಶಕರಾಗಿದ್ದ ಅಮರ್ಭೂಷಣ್ರನ್ನು ಈ ಜವಾಬ್ದಾರಿ ಹೊರಲು ಕೇಳಿಕೊಳ್ಳಲಾಯ್ತು. ಜೀವನಾಥನ್ ಎಂಬ ಹೆಸರಿನೊಂದಿಗೆ ನೇಪಾಳ ಪ್ರವೇಶಿಸಿದ ಅಮರ್ ಚುರುಕಾಗಿ ಕೆಲಸ ಆರಂಭಿಸಿದರು. ತಮ್ಮದ್ದೇ ಆದ ಜಾಲವೊಂದನ್ನು ಸಿದ್ಧಪಡಿಸಿಕೊಂಡಿದ್ದಲ್ಲದೇ ಅಲ್ಲಿ ತಮಗೆ ಬೇಕಾದ ವ್ಯವಸ್ಥೆಯನ್ನೂ ಹೊಸದಾಗಿ ನಿಮರ್ಾಣ ಮಾಡಿಕೊಂಡರು. ಅವರಿಗೀಗ ಭಿನ್ನ-ಭಿನ್ನ ಚಟುವಟಿಕೆಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆಯಿತ್ತು. ಒಂದೆಡೆ ರಾಜ ಪರಿವಾರದ ವಿರುದ್ಧ ಜನಮಾನಸದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ಏಳುವಂತೆ ಮಾಡುವ ಕೆಲಸವಾದರೆ ಮತ್ತೊಂದೆಡೆ ರಾಜನೆದುರಾಗಿ ನಿಲ್ಲಬಲ್ಲ ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸುವುದೂ ಅಗತ್ಯವಾಗಿತ್ತು. ಜೀವನಾಥನ್ ತಮ್ಮದ್ದೇ ಆದ ದಿಕ್ಕಿನಲ್ಲಿ ಕೆಲಸ ಆರಂಭಿಸಿದರು. ಜನರಲ್ಲಿ ಆಕ್ರೋಶದ ಜ್ವಾಲೆಯನ್ನು ಭುಗಿಲೇಳುವಂತೆ ಮಾಡಬಲ್ಲ ಸಾಮಥ್ರ್ಯವಿದ್ದ ಪ್ರಚಂಡನನ್ನು ಈ ಕಾರ್ಯಕ್ಕೆ ಆರಿಸಿಕೊಂಡು ಅವನ ಮೂಲಕ ಎಲ್ಲ ನಾಯಕರನ್ನು ಒಗ್ಗೂಡಿಸಲೆಂದು ಸಾಕಷ್ಟು ಹಣ ಸುರಿಯಲಾಯ್ತು. ಸೂಕ್ತ ಪರಿಸರಗಳು ಹೇಗೆ ನಿಮರ್ಾಣಗೊಂಡವೆಂದರೆ ರಾಜನ ವಿರುದ್ಧ ಎಲ್ಲೆಡೆ ದಂಗೆಗಳು ಆರಂಭವಾದವು. ಅನಿವಾರ್ಯವಾಗಿ ನೇಪಾಳ ಚುನಾವಣೆಯತ್ತ ಹೊರಳಿ ಪ್ರಚಂಡ ದೇಶದ ಪ್ರಧಾನಿಯಾಗಿಬಿಟ್ಟ!

8

ಈ ಧಾವಂತದಲ್ಲಿ ನಾವು ಮರೆತದ್ದೇನು ಗೊತ್ತೇ? ಶತಮಾನಗಳಿಂದಲೂ ಭಾರತದೊಂದಿಗೆ ಬಲವಾಗಿದ್ದ ನೇಪಾಳೀ ರಾಜನನ್ನು ಬದಿಗೆ ಸರಿಸಿ ನಾವು ಕಮ್ಯುನಿಸ್ಟ್ ನಾಯಕನಾದ ಪ್ರಚಂಡನನ್ನು ಪ್ರಧಾನಿಪಟ್ಟಕ್ಕೇರಿಸಿದ್ದೆವು! ಹಿಂದೂರಾಷ್ಟ್ರವೆಂದೂ ಹಿಂದೂರಾಜನೆಂದೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ನೇಪಾಳ ಮತ್ತು ಅಲ್ಲಿನ ರಾಜನನ್ನು ನಾವು ಮೇಲ್ಸ್ತರದಿಂದ ಕೆಳಗಿಳಿಸಿದ್ದೆವು. ರಾಜನಂತೂ ಈಗ ಪದಚ್ಯುತನಾಗಿದ್ದ. ನೇಪಾಳ ಹಿಂದೂರಾಷ್ಟ್ರವೆಂಬ ಹಣೆಪಟ್ಟಿ ಕಳೆದುಕೊಂಡು ಸೆಕ್ಯುಲರ್ ಆಗಿಬಿಟ್ಟಿತು. ನೆಹರೂ ಕಾಲದ ಹಿಂದೂವಿರೋಧಿ ಸೆಕ್ಯುಲರ್ ಮಾನಸಿಕ ಸ್ಥಿತಿ ನೇಪಾಳದಲ್ಲೂ ಪ್ರಭಾವಿಯಾಗಿ ಕೆಲಸ ಮಾಡಿತು. ಮುಂದೇನಾಯ್ತು ಗೊತ್ತೇ? ಕಮ್ಯುನಿಸ್ಟ್ ನಾಯಕ ಅಧಿಕಾರಕ್ಕೆ ಬಂದೊಡನೆ ಆತ ಸಹಜವಾಗಿಯೇ ಚೀನಾದತ್ತ ಮುಖಮಾಡಿ ಕುಳಿತುಬಿಟ್ಟ. ಭೂತಾನಿನಂತೆ ಭಾರತದ ಸಹಜ ಮಿತ್ರನಾಗಿರಬೇಕಿದ್ದ ನೇಪಾಳ ಈಗ ಚೀನಾದ ಬಗಲಿಗೆ ಹೋಗಿಬಿದ್ದಿತ್ತು. ನಾವು ಪಿಳಿ ಪಿಳಿ ಕಣ್ಣು ಬಿಟ್ಟು ನೋಡುತ್ತಿದ್ದೆವು ಅಷ್ಟೇ. ಖಚರ್ುಮಾಡಿದ್ದು ನಮ್ಮ ಹಣ, ನಮ್ಮ ಬುದ್ಧಿ, ನಮ್ಮ ಗೆಳೆತನ ಲಾಭವಾಗಿದ್ದು ಮಾತ್ರ ಚೀನಾಕ್ಕೆ! ಅಮರ್ಭೂಷಣ್ ಈ ಒಟ್ಟಾರೆ ಪ್ರಕ್ರಿಯೆ ಹಿಂದಿರುವ ಸಾಹಸವನ್ನು ಬಣ್ಣಿಸುತ್ತಾರೆಂಬುದು ನಿಜವಾದರೂ ಪ್ರಸ್ತುತ ಭಾರತ ನೇಪಾಳದೊಂದಿಗಿನ ಸ್ನೇಹದಲ್ಲಿ ಎದುರಿಸುತ್ತಿರುವ ಸವಾಲುಗಳಿಗೆ ಅಂದಿನ ಆ ಹುಚ್ಚು ಸಾಹಸವೇ ಕಾರಣವೆಂಬುದನ್ನು ನೆನಪಿಡಲೇಬೇಕು.

9

ಅಕ್ಕಪಕ್ಕದ ರಾಷ್ಟ್ರಗಳ ಮೇಲೆ ಹಿಡಿತ ಹೊಂದಿರಬೇಕು. ಆಗ ಮಾತ್ರ ಏಷ್ಯಾದಲ್ಲಿ ನಾವು ಪ್ರಬಲ ರಾಷ್ಟ್ರವಾಗಿ ಬೆಳೆಯಲು ಸಾಧ್ಯ. ನೆಹರೂ ಕಾಲದಿಂದಲೂ ಆ ಪ್ರಯತ್ನದಲ್ಲಿ ನಾವು ಸೋತಿದ್ದೇವೆ. ನಮ್ಮ ಮತ್ತು ಚೀನಾದ ನಡುವೆ ದೊಡ್ಡ ಬಫರ್ ಪ್ರದೇಶವಾಗಬಹುದಾಗಿದ್ದ ಟಿಬೆಟ್ ಅನ್ನು ನಾವು ಕಣ್ಮುಚ್ಚಿ ತೆರೆಯುವುದರೊಳಗೆ ಕಳೆದುಕೊಂಡೆವು. ಚೀನಾದ ಗೂಳಿತನವನ್ನು ನಾವು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಶ್ನಿಸಲೇ ಇಲ್ಲ. ಬಾಂಗ್ಲಾದೇಶದ ಜನ್ಮಕ್ಕೆ ಕಾರಣವಾಗಿದ್ದು ನಾವಾದರೂ ಆನಂತರದ ದಿನಗಳಲ್ಲಿ ಅದು ಪಾಕಿಸ್ತಾನಕ್ಕೆ ಬೆಂಬಲ ಕೊಡುವುದನ್ನು ನಾವೇ ನೋಡುವಂತಾಯ್ತು. ನೇಪಾಳದೊಳಗೆ ಕೈಯ್ಯಾಡಿಸಿಯೇ ಅದನ್ನು ಕಳೆದುಕೊಂಡೆವು. ನಮ್ಮೊಳಗೆ ಸಾಮಥ್ರ್ಯವಿಲ್ಲದ್ದನ್ನು ನೋಡಿ ಶ್ರೀಲಂಕಾ ದೂರವಾಯ್ತು. ಆಫ್ಘಾನಿಸ್ತಾನದ್ದೂ ಅದೇ ಕಥೆ. ಅಟಲ್ಜಿ ಬರುವವರೆಗೆ ಇರಾನಿನೊಂದಿಗಿನ ನಮ್ಮ ಸಂಬಂಧ ಹೇಗಿರಬೇಕೆಂಬ ಕಲ್ಪನೆಯೂ ನಮಗಿರಲಿಲ್ಲ. ಪಾಕಿಸ್ತಾನದ ಕಥೆ ಬಿಡಿ. ನಮ್ಮ ವೈರತ್ವದ ಮೇಲೆ ಜೀವನ ನಡೆಸುತ್ತಿರುವ ರಾಷ್ಟ್ರವದು. ಹೀಗಿರುವಾಗ ಒಂದು ಸುಭದ್ರವಾದ ರಾಷ್ಟ್ರದ ಕಲ್ಪನೆ ಕಟ್ಟಿಕೊಳ್ಳಲಿಕ್ಕಾದರೂ ಹೇಗೆ ಸಾಧ್ಯ? ಹೀಗಾಗಿ ಮೋದಿ ಅಧಿಕಾರಕ್ಕೆ ಬಂದೊಡನೆ ಭೂತಾನಿಗೆ ಮೊದಲು ಭೇಟಿಕೊಟ್ಟಾಗ ಅನೇಕರು ನಕ್ಕಿದ್ದರು. ರಾಜತಾಂತ್ರಿಕ ನಡೆಯ ಅರಿವಿದ್ದವರು ಮಾತ್ರ ಒಂದು ಕ್ಷಣ ಬೆಚ್ಚಗಾಗಿದ್ದರು. ಶ್ರೀಲಂಕಾದಲ್ಲಿ ಚೀನಾ ಪರವಾಗಿದ್ದ ಸಕರ್ಾರವನ್ನು ಉರುಳಿಸಿ ಭಾರತದ ಜೊತೆಗಿರಬಹುದಾಗಿದ್ದವರನ್ನು ತರುವಂತೆ ಪ್ರಯತ್ನಿಸಿದ್ದು ಮೋದಿಯೇ! ಆದರೆ ಎಲ್ಲ ಬಾರಿ ಇದರಲ್ಲಿ ಗೆಲುವು ಸಾಧಿಸುತ್ತೇವೆಂದೇನಲ್ಲ. ನೇಪಾಳದಲ್ಲೂ ತಮಗೆ ಬೇಕಾದ ಸಕರ್ಾರವನ್ನೇ ತರಬೇಕೆಂಬ ಪ್ರಯತ್ನದಲ್ಲಿ ಮೋದಿ ಮಾಧೇಶಿಗಳ ದಂಗೆ ಮಾಡಿಸಲು ಹೋಗಿ ಕೈಸುಟ್ಟುಕೊಂಡರು. ಚೀನಾ ನಮಗಿಂತಲೂ ಜೋರಾಗಿ ಕೆಲಸ ಮಾಡಿಬಿಟ್ಟಿತು. ಬಾಂಗ್ಲಾದೇಶ ಈಗ ಸಂಪೂರ್ಣ ಭಾರತದ ಪರ ಮಾತನಾಡುತ್ತಿದೆ. ಅಫ್ಘಾನಿಸ್ತಾನ ಪಾಕಿಸ್ತಾನಕ್ಕೆ ಸೆಡ್ಡು ಹೊಡೆದು ನಮ್ಮ ಬೆಂಬಲಕ್ಕೆ ನಿಂತಿದೆ. ಇರಾನ್ ಮತ್ತು ಅಮೇರಿಕಾದ ನಡುವೆ ಸೌಹಾರ್ದ ಸಂಬಂಧ ತರಬಲ್ಲ ಸಾಮಥ್ರ್ಯವಿರುವುದು ಭಾರತಕ್ಕೆ ಮಾತ್ರ ಎಂಬಂತಾಗಿದೆ.

ರಾಜತಾಂತ್ರಿಕತೆಯೆಂಬುದು ನಮ್ಮೊಳಗಿರುವ ವಾದಗಳನ್ನು ಎಲ್ಲೆಡೆ ಬಿತ್ತುವ ಪ್ರಯತ್ನವಲ್ಲ. ಬದಲಿಗೆ ನಮ್ಮ ರಾಷ್ಟ್ರದ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಇತರ ರಾಷ್ಟ್ರಗಳೊಂದಿಗೆ ಸಂಬಂಧ ಬೆಳೆಸುವ ಸದ್ಭಾವನೆ.

10

ಈಗ ಭಾರತ ಅಂಥದ್ದೊಂದು ಪ್ರಯತ್ನದ ಉನ್ನತ ಹಂತದಲ್ಲಿದೆ. ಹೀಗಾಗಿಯೇ ಮೋದಿ ಟ್ರಂಪ್ ಜೊತೆಗೆ ಕುಳಿತು ಎಲ್ಲ ಪತ್ರಕರ್ತರ ಸಮ್ಮುಖದಲ್ಲಿ ಭಾರತ-ಪಾಕಿಸ್ತಾನದ ನಡುವೆ ತಲೆ ಹಾಕುವ ಶ್ರಮವನ್ನು ಯಾರೂ ತೆಗೆದುಕೊಳ್ಳುವುದು ಬೇಡ ಎನ್ನುತ್ತಾರೆ! ನೇಪಾಳದಲ್ಲಿ ರಾಜಮನೆತನವನ್ನು ಕಿತ್ತೊಗೆಯುವುದರಿಂದ ಹಿಡಿದು ಅಮೇರಿಕಾದಲ್ಲಿ ಟ್ರಂಪ್ಗೆ ಸೂಕ್ತವಾಗಿ ಎಚ್ಚರಿಕೆ ಕೊಡುವವರೆಗೆ ರಾಜತಂತ್ರದ ಗಂಗೆಯಲ್ಲಿ ಸಾಕಷ್ಟು ನೀರು ಹರಿದಿದೆ!

Comments are closed.