ವಿಭಾಗಗಳು

ಸುದ್ದಿಪತ್ರ


 

ಇದು ಹೊಸ ಭಾರತ!

ಈ ಬಾರಿ ಭಾರತ ಸಕರ್ಾರವೂ ಸುಮ್ಮನೆಯಿಲ್ಲ. ಪಾಕಿಸ್ತಾನವನ್ನು ಸದೆಬಡಿಯಲು ಎಲ್ಲಾ ಮಾರ್ಗಗಳನ್ನೂ ಅನುಸರಿಸುತ್ತಿದೆ. ಪರಮಾಪ್ತ ರಾಷ್ಟ್ರ ಪಟ್ಟಿಯಿಂದ ಪಾಕಿಸ್ತಾನವನ್ನು ತೆಗೆದು ಬಿಸಾಡಿದ್ದರಿಂದ ಸಹಜವಾಗಿಯೇ ದೊಡ್ಡ ಹೊಡೆತ ಬಿದ್ದಿರುವುದು ಭಾರತಕ್ಕೆ. ಅದು ಮಾಚರ್್ ಕೊನೆಯಲ್ಲಿ ಗೊತ್ತಾಗುತ್ತದೆ. ಆದರೆ ತಾತ್ಕಾಲಿಕವಾಗಿ ಪಾಕಿಸ್ತಾನಕ್ಕೆ ಬಿದ್ದಿರುವ ಹೊಡೆತ ಸಾಮಾನ್ಯವಾದುದಲ್ಲ.

ಬಹುಶಃ ಭಯೋತ್ಪಾದನಾ ದಾಳಿಯೊಂದರ ಕುರಿತು ಇಡಿಯ ದೇಶ ಹೀಗೆ ಹಿಂದೆಂದೂ ಒಟ್ಟಾಗಿ ನಿಂತಿರಲಿಲ್ಲವೆನಿಸುತ್ತದೆ. ಜೈಶ್-ಎ-ಮೊಹಮ್ಮದ್ ಎಂಬ ಸಂಘಟನೆ ದಾಳಿ ಮಾಡಿ ಬಚಾವಾಗಿಬಿಡಬಹುದು ಎಂಬ ಭ್ರಮೆಯಲ್ಲಿತ್ತು. ಅಷ್ಟೇ ಅಲ್ಲದೇ, ಚುನಾವಣೆಯ ಹೊಸ್ತಿಲಲ್ಲಿ ಭಾರತ ಇರುವುದರಿಂದ ನರೇಂದ್ರಮೋದಿಯವರು ತಕ್ಷಣ ಪ್ರತಿಕ್ರಿಯಿಸಲಾರರು ಎಂಬ ಸ್ವಯಂ ಕಲ್ಪಿತ ಭರವಸೆ ಅದಕ್ಕಿತ್ತು. ಆದರೆ ಮೋದಿ ಮನಮೋಹನ್ ಸಿಂಗರಲ್ಲ. 2008ರ ಮುಂಬೈ ದಾಳಿಗೆ ನಾವು ಪ್ರತಿಕ್ರಿಯಿಸಿದ ರೀತಿ ಅತ್ಯಂತ ದೌಭರ್ಾಗ್ಯಪೂರ್ಣ. ಈ ದಾಳಿಯಲ್ಲಿ ಪಾಲ್ಗೊಂಡಿದ್ದು ಪಾಕಿಸ್ತಾನವೇ ಎಂದು ಗೊತ್ತಿದ್ದಾಗಲೂ ವರ್ಷಗಟ್ಟಲೆ ಅದಕ್ಕೆ ಸಾಕ್ಷಿ ಸಂಗ್ರಹಿಸುತ್ತಾ ಉಳಿದಿದ್ದೆವೇ ಹೊರತು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲೇ ಇಲ್ಲ. ಆಗಲೂ ದೇಶದ ಆಕ್ರೋಶ ಹೀಗೆಯೇ ಇತ್ತು. ನಿಧಾನವಾಗಿ ಆ ಆಕ್ರೋಶವನ್ನು ಶಾಂತಿಯತ್ತ ತಿರುಗಿಸಿದ ಈ ದೇಶದ ಭಯೋತ್ಪಾದಕ ಬೆಂಬಲಿಗ ಪಡೆಗಳೆಲ್ಲಾ ಭಾರತವನ್ನು ತಣ್ಣಗಾಗಿಸುವಲ್ಲಿ ಯಶಸ್ವಿಯಾಯ್ತು. ಈ ಬಾರಿ ಹಾಗಾಗಲಿಲ್ಲ. ಪಾಕಿಸ್ತಾನ ಅಂಥದ್ದೇ ಪ್ರತಿಕ್ರಿಯೆಯನ್ನು ಊಹಿಸಿಕೊಂಡೇ ದಾಳಿ ಮಾಡಿತ್ತು. ಕಳೆದ 5 ವರ್ಷಗಳಲ್ಲಿ ಜನರ ನಡುವೆ ಓತಪ್ರೋತವಾಗಿ ಹರಿಯುತ್ತಿರುವ ರಾಷ್ಟ್ರೀಯ ಭಾವನೆ ಈಗ ಈ ದಾಳಿಯ ನಂತರ ಹೊಸ ರೂಪ ತಾಳಿದೆ. ದೇಶದ್ರೋಹಿಗಳನ್ನು, ಪಾಕಿಸ್ತಾನದ ಪರವಾಗಿ ಮಾತನಾಡುವವರನ್ನು ಈಗ ಭಾರತೀಯ ಸಹಿಸಲು ಸಿದ್ಧನಿಲ್ಲ. ಯಾವ ವಿಚಾರಕ್ಕೂ ಬೀದಿಗಿಳಿಯದ ಮುಸಲ್ಮಾನರು ಈ ಬಾರಿ ಬೀದಿಗಿಳಿದು ಪ್ರತಿಭಟನೆಗೆ ನಿಂತುಬಿಟ್ಟಿದ್ದಾರೆ. ಅನೇಕ ಕಡೆಗಳಲ್ಲಿ ಮುಸಲ್ಮಾನರೇ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ರಾಷ್ಟ್ರಭಕ್ತಿಯ ಪ್ರದರ್ಶನಕ್ಕೆ ಸಮರ್ಥ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದು ಪ್ರಕಾಶ್ರಾಜ್, ಕಮಲ ಹಾಸನ್, ಗಿರೀಶ್ ಕಾನರ್ಾಡ್ರಂತಹ ಬುದ್ಧಿಜೀವಿಗಳಿಗೆ ಮತ್ತು ಬಖರ್ಾ, ರಾಜ್ದೀಪ್, ಸಾಗರಿಕಾ, ಮಟ್ಟುರಂತಹ ಪತ್ರಕರ್ತರಿಗೆ ನುಂಗಲಾರದ ತುತ್ತಾಗಿದೆ! ಭಾರತ ಬಲಾಢ್ಯವಲ್ಲವೆಂದು ತೋರಿಸುವಲ್ಲಿ ಅವರು ತಿಪ್ಪರಲಾಗ ಹೊಡೆಯುತ್ತಿದ್ದಾರೆ. ಹಳ್ಳಿ-ಹಳ್ಳಿಯಲ್ಲಿ ಮನೆ ಮನೆಗಳಲ್ಲಿ ಈಗ ಪ್ರತಿಕ್ರಿಯೆಯ ಕೂಗು ಕೇಳಿ ಬರುತ್ತಿದೆ. ಮತ್ತು ಅದು ಹಿಂದೆಂದಿಗಿಂತಲೂ ಜೋರಾಗಿದೆ ಎನ್ನುವುದನ್ನು ಮರೆಯುವಂತಿಲ್ಲ.

6

ಇದೇ ಮೌಲಾನಾ ಮಸೂದ್ ಅಜರ್ನನ್ನು ಭಾರತೀಯ ಸೇನೆ 1994ರಲ್ಲಿ ಬಂಧಿಸಿತ್ತು. ಹಿಜ್ಬುಲ್ ಮುಜಾಹಿದ್ದೀನ್ನೊಂದಿಗೆ ದೇಶದ ಸ್ಥಳೀಯ ಭಯೋತ್ಪಾದಕರು ಕಿತ್ತಾಡುವುದನ್ನು ಸರಿಪಡಿಸಲೆಂದು ಆತ ಬಂದಿದ್ದ. ಅಚಾನಕ್ಕು ಸೇನೆಗೆ ಸೆರೆಸಿಕ್ಕ ಆತನನ್ನು ಎಳೆದುಕೊಂಡು ಬಂದ ಪಡೆ ಕೆನ್ನೆಗೆ ಮೊದಲ ಏಟು ಬಾರಿಸುತ್ತಿದ್ದಂತೆ ಆತ ಭಯೋತ್ಪಾದಕರ ಕುರಿತಂತೆ ಅನೇಕ ಸತ್ಯಗಳನ್ನು ಬಾಯ್ಬಿಟ್ಟಿದ್ದ. ಅಡಗುತಾಣಗಳ ವಿವರಣೆಯನ್ನೂ ಕೊಟ್ಟಿದ್ದ. ಅವನನ್ನು ಬಿಡುಗಡೆಗೊಳಿಸಲೆಂದು 1996ರಲ್ಲಿ ಭಯೋತ್ಪಾದಕರು ಕಾಶ್ಮೀರಕ್ಕೆ ಬಂದ ವಿದೇಶೀ ಯಾತ್ರಿಕರನ್ನು ಅಪಹರಿಸಿದ್ದರು. ಆದರೆ ಸಕರ್ಾರ ಇವನ ಬಿಡುಗಡೆಗೆ ಸುತರಾಂ ಒಪ್ಪಿರಲಿಲ್ಲ. ಆಗಲೇ ಅವನನ್ನು ಮುಗಿಸಿಬಿಟ್ಟಿದ್ದರೆ ಸಮಸ್ಯೆಯೇ ಇರಲಿಲ್ಲ. ಆದರೆ ಈ ಪತ್ರಕರ್ತರು, ಬುದ್ಧಿಜೀವಿಗಳ ಗಲಾಟೆಗೆ ಬೆದರಿದ ಸಕರ್ಾರ ಜೈಲಿನಲ್ಲಿ ಕೂಡಿಹಾಕಿಕೊಂಡೇ ಕಾಲ ಕಳೆಯಿತು. 1999ರಲ್ಲಿ ನೇಪಾಳದ ಕಟ್ಮಂಡುಗೆ ಹೊರಟಿದ್ದ ಭಾರತೀಯ ವಿಮಾನವೊಂದನ್ನು ಭಯೋತ್ಪಾದಕರು ಅಪಹರಿಸಿ ಅದರಲ್ಲಿರುವ ನೂರಾರು ಭಾರತೀಯರ ಬಿಡುಗಡೆಗೆ ಮೌಲಾನಾ ಮಸೂದ್ ಅಜರ್ನನ್ನು ಬಿಡುಗಡೆಗೊಳಿಸಬೇಕೆಂಬ ಬೇಡಿಕೆಯಿಟ್ಟರು. ಆ ಹೊತ್ತಿಗೆ ದೇಶದ ಪತ್ರಿಕೆಗಳು, ಟಿವಿ ಚಾನೆಲ್ಲುಗಳು ಸಕರ್ಾರದ ಮೇಲೆ ಒತ್ತಡ ಹೇಗೆ ತಂದವೆಂದರೆ ಅಪಹೃತರ ಮನೆ-ಮನೆಗೆ ಹೋಗಿ ಅವರ ಮನೆಯಲ್ಲಿ ಕಣ್ಣೀರಿಡುವ ದೃಶ್ಯಗಳನ್ನು ದಿನಗಟ್ಟಲೆ ಟೀವಿಯಲ್ಲಿ ತೋರಿಸಲಾರಂಭಿಸಿದರು. ಸ್ವತಃ ಬಖರ್ಾದತ್ ಈ ಪರಿವಾರದವರನ್ನು ಪ್ರಧಾನಮಂತ್ರಿಯವರ ಮನೆಯ ಮುಂದೆ ಪ್ರತಿಭಟಿಸಲು ಪ್ರೇರೇಪಿಸಿದರು. ಪತ್ರಕರ್ತರೆನಿಸಿಕೊಂಡವರು ಮೌಲಾನಾ ಮಸೂದ್ ಅಜರ್ನನ್ನು ಬಿಟ್ಟು ಆನಂತರ ಹಿಡಿದರಾಯ್ತು ಎಂದು ಹೇಳಿದ್ದೂ ನನಗೆ ನೆನಪಿದೆ! ದುರದೃಷ್ಟಕರ ಸಂಗತಿಯೆಂದರೆ ಈ ಅಯೋಗ್ಯರ ಒತ್ತಡಕ್ಕೆ ಮಣಿದ ಅಟಲ್ಜಿ ಸಕರ್ಾರ ಮೌಲಾನಾನನ್ನು ಬಿಟ್ಟು ಭಾರತದ ಯಾತ್ರಿಕರನ್ನು ಮರಳಿ ತಂದಿತ್ತು. ಅಂದು ಬಿಡುಗಡೆಯಾಗಿ ಬಂದವರೆಲ್ಲಾ ಇಂದು ಆನಂದದ ಬದುಕು ಸವಿಸುತ್ತಿರಬಹುದು ನಿಜ. ಆದರೆ ಅಂದು ಬಿಡುಗಡೆಯಾದ ಮೌಲಾನಾ 2001ರಲ್ಲಿ ಭಾರತದ ಸಂಸತ್ತಿನ ಮೇಲೆ ದಾಳಿ ಮಾಡಿಸಿದ. 2008ರಲ್ಲಿ ಮುಂಬೈ ದಾಳಿ ಮಾಡಿಸಿದ. 2016ರಲ್ಲಿ ಪಠಾನ್ಕೋಟ್ನ ಮೇಲೆ ದಾಳಿ ಮಾಡಿಸಿದ. ಕೊನೆಗೆ ಮೊನ್ನೆಯ ಪುಲ್ವಾಮಾ ದಾಳಿಗೂ ಅವನೇ ಸೂತ್ರಧಾರನಾದ. ಬಹುಶಃ ಇಂದಿನಷ್ಟೇ ಸ್ವಾಭಿಮಾನ, ರಾಷ್ಟ್ರಭಕ್ತಿ ಅಂದೂ ಇದ್ದಿದ್ದರೆ ಅಪಹೃತರ ಮನೆಯ ಪ್ರತಿಕ್ರಿಯೆ ಬೇರೆಯೇ ಇರತ್ತಿತ್ತೇನೋ! ಸೈನಿಕನೊಬ್ಬನ ಪತ್ನಿ ಗಂಡನ ಶವದೆದುರಿಗೆ ನಿಂತು ಜೈ ಹಿಂದ್ ಹೇಳುತ್ತಾ ‘ನೀನು ನನ್ನನ್ನು ಪ್ರೀತಿಸಿದ್ದು ಸುಳ್ಳು. ನನಗಿಂತ ಹೆಚ್ಚು ನೀನು ಪ್ರೀತಿಸಿದ್ದು ಈ ದೇಶವನ್ನು ಎಂದು ನನಗೆ ಗೊತ್ತು’ ಎಂದು ತುಂಬಿದ ಕಂಗಳಿಂದ ಗದ್ಗದಿತಳಾಗಿ ಹೇಳುವಾಗ ನೆರೆದಿದ್ದವರ ಕಂಗಳೆಲ್ಲ ತುಂಬಿಬಂದಿದ್ದವು. ಇದು ಸೈನಿಕನ ಪತ್ನಿಗೆ ಮಾತ್ರ ಇರಬೇಕಾಗಿರುವಂತಹ ಭಾವವಲ್ಲ. ಅಗತ್ಯ ಬಿದ್ದರೆ ನಾವೆಲ್ಲರೂ ಹೀಗೆಯೇ ಆಗಬೇಕು. ಬಹುಶಃ ಸುದೀರ್ಘ ಏಳು ದಶಕಗಳ ನಂತರ ಇಂದು ಭಾರತ ಈ ಹಂತಕ್ಕೆ ತಲುಪಿದೆ.

7

ಈ ಬಾರಿ ಭಾರತ ಸಕರ್ಾರವೂ ಸುಮ್ಮನೆಯಿಲ್ಲ. ಪಾಕಿಸ್ತಾನವನ್ನು ಸದೆಬಡಿಯಲು ಎಲ್ಲಾ ಮಾರ್ಗಗಳನ್ನೂ ಅನುಸರಿಸುತ್ತಿದೆ. ಪರಮಾಪ್ತ ರಾಷ್ಟ್ರ ಪಟ್ಟಿಯಿಂದ ಪಾಕಿಸ್ತಾನವನ್ನು ತೆಗೆದು ಬಿಸಾಡಿದ್ದರಿಂದ ಸಹಜವಾಗಿಯೇ ದೊಡ್ಡ ಹೊಡೆತ ಬಿದ್ದಿರುವುದು ಭಾರತಕ್ಕೆ. ಅದು ಮಾಚರ್್ ಕೊನೆಯಲ್ಲಿ ಗೊತ್ತಾಗುತ್ತದೆ. ಆದರೆ ತಾತ್ಕಾಲಿಕವಾಗಿ ಪಾಕಿಸ್ತಾನಕ್ಕೆ ಬಿದ್ದಿರುವ ಹೊಡೆತ ಸಾಮಾನ್ಯವಾದುದಲ್ಲ. ಪಾಕಿಸ್ತಾನದಿಂದ ಆಮದಾಗುವ ವಸ್ತುಗಳನ್ನು ನಾವು ತರಿಸಿಕೊಳ್ಳಲಿಲ್ಲವೆಂದರೆ ಸತ್ತೇನೂ ಹೋಗುವುದಿಲ್ಲ. ಒಣ ಖಜರ್ೂರ, ಸಿಮೆಂಟು, ಚರ್ಮದ ವಸ್ತುಗಳು ಈ ಯಾವುವೂ ಜೀವನಕ್ಕೆ ಅಗತ್ಯವಾಗಿ ಬೇಕಾಗಿರುವುದಲ್ಲ. ಆದರೆ ನಮ್ಮ ತರಕಾರಿ, ಹಣ್ಣು, ಇವೆಲ್ಲವೂ ಪಾಕಿಸ್ತಾನಕ್ಕೆ ಬಲು ಅಗತ್ಯವಿರುವಂತಹವು. ಭಾರತದೊಂದಿಗಿನ ಕದನವಾದಾಗಿನಿಂದ ಪಾಕಿಸ್ತಾನದಲ್ಲಿ ತರಕಾರಿ ಬೆಲೆ ಗಗನ ಮುಟ್ಟಿದೆ. ಖಜರ್ೂರದ ಬೆಳೆಗಾರರು ಬೀದಿಗೆ ಬಂದಿದ್ದಾರೆ. ಪಾಕಿಸ್ತಾನದ ಸಿಮೆಂಟುಗಳಿಗೆ ಇಲ್ಲೀಗ ಅವಕಾಶವಿಲ್ಲದೇ ಪಾಕಿಸ್ತಾನ ಪತರಗುಟ್ಟಿದೆ. ಭಾರತ ಸಕರ್ಾರ ಒಂದು ಹೆಜ್ಜೆ ಮುಂದೆ ಹೋಗಿ ಪಾಕಿಸ್ತಾನಕ್ಕೆ ಹರಿದು ಹೋಗುತ್ತಿದ್ದ ನದಿಯ ನೀರನ್ನು ತಡೆದಿದೆ. ಬೇಸಿಗೆ ಶುರುವಾಗುವ ಸಮಯಕ್ಕೆ ಪಾಕಿಸ್ತಾನ ಇಂಥದ್ದೊಂದು ಸಾಹಸ ಮಾಡುವ ಅಗತ್ಯವಿರಲಿಲ್ಲ. ಪಾಕಿಗೆ ಹರಿದು ಹೋಗುತ್ತಿದ್ದ ಹೆಚ್ಚುವರಿ ನೀರನ್ನು ಯಮುನೆಗೆ ಹರಿಸುವ ಈ ಯೋಜನೆ ಸುದೀರ್ಘಕಾಲ ಭಾರತದ ನೀರಾವರಿ ಯೋಜನೆಗೆ ಶಕ್ತಿ ತುಂಬಲಿದೆ. ಭಾರತದ ಒತ್ತಡಕ್ಕೆ ಮಣಿದ ಸೌದಿಯ ರಾಜ ಪಾಕಿಸ್ತಾನದಿಂದ ನೇರವಾಗಿ ಭಾರತಕ್ಕೆ ಬರದೇ ಮರಳಿ ತನ್ನ ದೇಶಕ್ಕೆ ಹೋಗಿ ಭಾರತಕ್ಕೆ ಬಂದಿದ್ದಾರೆ. ಅಮೇರಿಕಾ ಭಾರತಕ್ಕೆ ಪ್ರತಿಕ್ರಿಯೆಯ ಹಕ್ಕಿದೆ ಎಂದು ಹೇಳಿದ್ದಲ್ಲದೇ ತನ್ನ ಪೂರ್ಣ ಬೆಂಬಲವೂ ಇದೆ ಎಂಬುದನ್ನು ಬಲವಾಗಿ ಪ್ರತಿಪಾದಿಸಿದೆ. ಫ್ರಾನ್ಸ್ ಜಾಗತಿಕ ಮಟ್ಟದಲ್ಲಿ ಮೌಲಾನಾ ಮಸೂದ್ ಅಜರ್ ವಿರುದ್ಧ ಪ್ರಸ್ತಾವನೆ ಮಂಡಿಸಲಿದೆ. ನ್ಯೂಜಿಲ್ಯಾಂಡ್ ತನ್ನ ಸಂಸತ್ತಿನಲ್ಲಿ ಪಾಕಿಸ್ತಾನದ ಕೃತ್ಯದ ವಿರುದ್ಧ ಹೇಳಿಕೆ ಕೊಟ್ಟಿದೆ. ಇರಾನ್ ತನ್ನ ನೆಲದಲ್ಲಿ ಪಾಕಿಸ್ತಾನ ನಡೆಸುವ ಭಯೋತ್ಪಾದನೆಗೆ ದಾಳಿಯ ಮೂಲಕ ಪ್ರತಿಕ್ರಿಯಿಸುವ ನುಡಿಗಳನ್ನಾಡಿದೆ. ಒಟ್ಟಿನಲ್ಲಿ ಪಾಕಿಸ್ತಾನಕ್ಕೆ ನೆಮ್ಮದಿ ಇಲ್ಲ. ಅಪ್ಪಿ-ತಪ್ಪಿ ಪಾಕಿಸ್ತಾನದ ಯುದ್ಧವಿಮಾನವೇ ತಲೆಯ ಮೇಲೆ ಹಾದುಹೋದರೂ ಪಾಕಿಸ್ತಾನದ ನಾಗರಿಕ ಮನೆಯೊಳಗೆ ಅಡಗಿಕುಳಿತುಕೊಳ್ಳುತ್ತಾನೆ. ಭಾರತದ ವಿಮಾನಗಳು ದಾಳಿ ಮಾಡುತ್ತಿವೆ ಎಂಬ ಗಾಳಿಮಾತಿಗೆ ಹೆದರಿ ಪಾಕಿಸ್ತಾನ ತನ್ನ ಆಸ್ಪತ್ರೆಗಳಿಗೆ ತಯಾರಿರಲು ಎಚ್ಚರಿಕೆ ಕೊಟ್ಟಿದೆ!

8

ಇತ್ತ ಕಾಂಗ್ರೆಸ್ಸು ನರೇಂದ್ರಮೋದಿಯವರ ಕುರಿತಂತೆ ಆರೋಪಗಳನ್ನು ಮಾಡುತ್ತಾ ಪತ್ರಿಕಾಗೋಷ್ಠಿ ಮಾಡುತ್ತಿದೆ. ಇತ್ತೀಚೆಗೆ ಕಾಂಗ್ರೆಸ್ಸಿನ ವಕ್ತಾರ ಸುಜರ್ೇವಾಲ ಮಾಡಿದ ಪತ್ರಿಕಾಗೋಷ್ಠಿಯಲ್ಲಿ ಅಪ್ಪಿತಪ್ಪಿಯೂ ಪಾಕಿಸ್ತಾನದ ಹೆಸರನ್ನಾಗಲೀ ಮೌಲಾನಾ ಹೆಸರನ್ನಾಗಲೀ ಜೈಶ್-ಎ-ಮೊಹಮ್ಮದ್ ಹೆಸರನ್ನಾಗಲೀ ಹೇಳದೇ ಮೋದಿಯವರ ಕುರಿತಂತೆಯೇ ಮತ್ತೆ-ಮತ್ತೆ ಮಾತನಾಡಿರುವುದು ಎಂಥವರನ್ನೂ ಅಚ್ಚರಿಗೆ ದೂಡುವಂತಿದೆ. ಆದರೆ ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತೀಯರು ಮಾತ್ರ ಮೋದಿಯೊಂದಿಗೆ ಬಲವಾಗಿ ಆತುಕೊಂಡಿದ್ದಾರೆ. ಪಾಕಿಸ್ತಾನಕ್ಕೆ ಪಾಠ ಕಲಿಸಿರೆಂದು ಕೇಳಿಕೊಳ್ಳುತ್ತಿದ್ದಾರೆ. ಮೋದಿಯವರ ರೀತಿ-ನೀತಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸದ್ಯದಲ್ಲೇ ಬಲವಾದ ಹೊಡೆತ ಇರುವುದು ಖಾತ್ರಿ ಎನಿಸುತ್ತಿದೆ!

Comments are closed.