ವಿಭಾಗಗಳು

ಸುದ್ದಿಪತ್ರ


 

ಇನ್ನೂ ಹಿಡಿತಕ್ಕೆ ಸಿಕ್ಕುತ್ತಿಲ್ಲ ಕರೋನಾ!

ಸಕರ್ಾರವು ಎಚ್ಚೆತ್ತುಕೊಂಡು ಸೋಂಕಿತರ ಮನೆಯನ್ನು ಭಯೋತ್ಪಾದಕರ ಮನೆಗಿಂತಲೂ ಕೆಟ್ಟದ್ದಾಗಿ ಬಿಂಬಿಸುವುದನ್ನು ಬಿಟ್ಟರೆ ಒಳಿತು. ಲಾಕ್ಡೌನ್ಗಳು ಹೇಗೆ ಮುಗಿದವೋ ಹಾಗೆಯೇ ಸೀಲ್ಡೌನ್ಗಳನ್ನು ಮುಗಿಸಬೇಕಿದೆ. ಈ ವೈರಸ್ ಸೋಂಕಿತನನ್ನು ಜನರೆಲ್ಲಾ ಕೆಟ್ಟ ಕಂಗಳಿಂದ ನೋಡುವಂತೆ ಮಾಡುವಲ್ಲಿ ಸಕರ್ಾರದ ಪಾತ್ರ ಬಹಳ ದೊಡ್ಡದಿದೆ.

ಕರೋನಾ ಈಗ ಮನೆ ಅಳಿಯನಂತೆ ಆಗಿಬಿಟ್ಟಿದೆ. ಅದರಿಂದ ಕೈ ತೊಳೆದುಕೊಳ್ಳುವುದು ಸದ್ಯಕ್ಕಂತೂ ಸಾಧ್ಯವಿಲ್ಲವೆನಿಸುತ್ತದೆ. ಜನರೂ ಕೂಡ ಅದರೊಂದಿಗೆ ಬದುಕಲು ಕಲಿಯುತ್ತಿದ್ದಾರೆ. ಕರೋನಾ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಅಮರಿಕೊಂಡಷ್ಟು ಜನಕ್ಕೇನೂ ಆವರಿಸಿಕೊಂಡಂತೆ ಕಾಣಿಸುತ್ತಿಲ್ಲ. ಹಾಗಂತ ಕರೋನಾ ಇಲ್ಲವೇ ಇಲ್ಲವೆಂದಲ್ಲ. ಭಾರತದ ಬಹುಪಾಲು ಜನ ರೋಗ ಲಕ್ಷಣಗಳನ್ನು ತೋರದ ರೋಗಿಗಳಾಗಿ ಕಂಡು ಬರುತ್ತಿದ್ದಾರೆ. ಹಾಗೆ ನೋಡಿದರೆ ಒಟ್ಟಾರೆ ಕರೋನಾದ ವ್ಯಾಪ್ತಿ ವಿಸ್ತಾರಗಳು, ಆಳ-ಅಗಲಗಳು ಇನ್ನೂ ಪರಿಪೂರ್ಣವಾಗಿ ಯಾರಿಗೂ ತಿಳಿದಂತಿಲ್ಲ. ಉತ್ತರಿಸಲಾಗದ ಅನೇಕ ಪ್ರಶ್ನೆಗಳು ಹಾಗೆಯೇ ಉಳಿದುಬಿಟ್ಟಿವೆ. ಮನೆಯಲ್ಲಿ ಎಲ್ಲರಿಗೂ ಬಂದು ಒಬ್ಬನನ್ನು ಮಾತ್ರ ಕರೋನಾ ಬಾಧಿಸದೇ ಬಿಡುವುದು ಹೇಗೆ? ಗಾಳಿಯ ಮೂಲಕವೂ ಕರೋನಾ ಹರಡುತ್ತದೆ ಎನ್ನುವುದೇ ನಿಜವಾದರೆ ಇಷ್ಟೆಲ್ಲಾ ರಕ್ಷಣೆಗಳ ಉಪಯೋಗವಾದರೂ ಏನು? ಕರೋನಾದ ಆಕ್ರಮಣ ಶೈಲಿ ಭಿನ್ನ-ಭಿನ್ನ ವ್ಯಕ್ತಿಗಳಿಗೆ ಭಿನ್ನ-ಭಿನ್ನವಾಗಿದೆಯಲ್ಲ. ಯಾವ ಲಕ್ಷಣದ ಪ್ರಭಾವ ಏನು? ಕೊನೆಗೆ 20 ದಿನಗಳಾದರೂ ಬಂದಿರುವ ಕರೋನಾ ಹೋಗಿಯೇ ಇಲ್ಲವೆಂದು ಟೆಸ್ಟ್ ರಿಪೋಟರ್್ ಬರುತ್ತದಲ್ಲ, 14 ದಿನದ ಪರಿಹಾರಕ್ರಮ ಸಾಕೆನ್ನುವುದಕ್ಕೆ ಏನರ್ಥ ಹಾಗಿದ್ದರೆ? ಕರೋನಾ ಬಂದು ಹೋದವರ ಹೃದಯ, ಶ್ವಾಸಕೋಶಗಳಲ್ಲದೇ ಇತರ ಅನೇಕ ಅಂಗಾಂಗಗಳ ಕೆಲಸ ನಿರ್ವಹಿಸುವಿಕೆಯೂ ಕಡಿಮೆಯಾಗುತ್ತದೆ ಎಂದು ಹೇಳುವ ಕೆಲವರ ಮಾತು ಸತ್ಯವೋ ಸುಳ್ಳೋ? ಪ್ರಶ್ನೆಗಳು ಭರ್ಜರಿಯಾಗಿವೆ. ನಾವು ರೋಗ ಬಂದಿರುವವರನ್ನು ಆಸ್ಪತ್ರೆಗೆ ಸೇರಿಸಿಕೊಂಡು ಚಿಕಿತ್ಸೆ ಕೊಡುವುದರಲ್ಲೇ ಹೈರಾಣಾಗಿಹೋಗಿರುವುದರಿಂದ ಅನೇಕ ವಿಚಾರಗಳ ಕುರಿತಂತೆ ಗಮನ ಹರಿಸಲು ಪುರಸೊತ್ತಿಲ್ಲದಂತಾಗಿದೆ! ಇತ್ತೀಚೆಗೆ ಲಂಡನ್ನಿನ ಕಿಂಗ್ಸ್ ಕಾಲೇಜ್ ನಡೆಸಿದ ಅಧ್ಯಯನದ ಆಧಾರದ ಮೇಲೆ ಒಟ್ಟಾರೆ ಆರು ಬಗೆಯ ಗುಣಲಕ್ಷಣಗಳುಳ್ಳ ಕರೋನಾ ಗುರುತಿಸಲಾಗಿದೆ. ಈ ಆರು ಬಗೆಯ ರೋಗಲಕ್ಷಣಗಳಲ್ಲಿ ತಲೆನೋವು ಮತ್ತು ಘ್ರಾಣಶಕ್ತಿ ಹರಣವಾಗುವುದು ಸಾಮಾನ್ಯವಾಗಿದೆ. ಅಂದರೆ ಕರೋನಾದ ಅತ್ಯಂತ ಪ್ರಮುಖ ಲಕ್ಷಣವೇ ಮೂಗು ತನ್ನ ಶಕ್ತಿಯನ್ನು ಕಳೆದುಕೊಳ್ಳುವುದು. ಜ್ವರ ಬರಲೇಬೇಕೆಂದಿಲ್ಲ. ಮೈ-ಕೈ ನೋವು, ಕೆಮ್ಮು, ಗಂಟಲು ಕೆರೆತ, ಎದೆ ನೋವು ಇವಿಷ್ಟೂ ಕಂಡು ಬಂದರೂ ಅದು ಕರೋನಾ ಸೋಂಕಾಗಿ ಆನಂತರ ಕಾಣಿಸಿಕೊಳ್ಳಬಹುದು. ಹೀಗಾಗಿ ಆಸ್ಪತ್ರೆಯೂ ಸೇರಿದಂತೆ ಎಲ್ಲ ಕಡೆಗಳಲ್ಲೂ ದೇಹ ಬಿಸಿಯಾಗಿದೆಯೊ ಇಲ್ಲವೋ ಎಂದು ಪರೀಕ್ಷಿಸುವ ಥಮರ್ಾಮೀಟರ್ ಹಿಡಿದು ನಿಲ್ಲುವುದು ವ್ಯರ್ಥವೆನಿಸುತ್ತದೆ. ಹಾಗಂತ ಜ್ವರ ಲಕ್ಷಣವಿರುವುದಿಲ್ಲವೆಂದಲ್ಲ. ಈ ಎಲ್ಲ ಗುಣಲಕ್ಷಣಗಳೊಂದಿಗೆ ಹಸಿವನ್ನು ಕಳೆದುಕೊಂಡು ಜ್ವರಪೀಡಿತನಾಗಿರುವವನೂ ಕೊವಿಡ್ ಬಾಧಿತನಾಗಿರಬಲ್ಲ!

6

ಹಾಗಂತ ಕೊವಿಡ್ ಬರೀ ಶ್ವಾಸಕೋಶವನ್ನಷ್ಟೇ ಬಾಧಿಸುವುದಿಲ್ಲ. ನೇರವಾಗಿ ಹೊಟ್ಟೆಯನ್ನೂ ಆಕ್ರಮಿಸಿಬಿಡುತ್ತದೆ. ಹಸಿವು ಮಾಯವಾಗಿ ಗಂಟಲ ಕೆರೆತ ಶುರುವಾಗಿ ಕೆಮ್ಮಿಲ್ಲದ ಎದೆನೋವು ಮತ್ತು ನಿರಂತರ ಬೇಧಿ ಕೊವಿಡ್ ಹೊಟ್ಟೆಯನ್ನು ಆಕ್ರಮಿಸಿಕೊಂಡಿರುವುದರ ಲಕ್ಷಣವಂತೆ. ಇದ್ಯಾವುದೂ ಇಲ್ಲದೇ ಮೇಲಿನ ಲಕ್ಷಣಗಳೊಂದಿಗೆ ಭಯಾನಕವಾದ ಸುಸ್ತು ಕೆಲವೊಮ್ಮೆ ಕಂಡು ಬರುವುದುಂಟಂತೆ. ಆ ವೇಳೆಗೆ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಸರಿ. ಸ್ವಲ್ಪ ಹೆಚ್ಚು ಕಡಿಮೆಯಾದರೆ ಭಾವನೆಗಳಲ್ಲಿ ದ್ವಂದ್ವ ಉಂಟಾಗುವ ಸಾಧ್ಯತೆಯೂ ಇದೆ. ಹಾಗೆಂದು ಅಧ್ಯಯನ ಹೇಳುತ್ತಿದೆ. ಬಹುಶಃ ಆಮ್ಲಜನಕದ ಕೊರತೆಯಿಂದ ಮೆದುಳಿನ ಮೇಲಾಗುವ ಪರಿಣಾಮ ಇದಿರಬಹುದು. ಕರೋನಾ ಇಲ್ಲಿಂದಲೂ ಮುಂದುವರೆದುಬಿಟ್ಟರೆ ತೀವ್ರ ಉಸಿರಾಟದ ತೊಂದರೆಯಾಗಿ ಬೇಧಿಯೊಂದಿಗೆ ಸೊಂಟದ ಭಾಗ ಸಹಿಸಲಸಾಧ್ಯವಾದ ವೇದನೆಯಿಂದ ಬಳಲುತ್ತದಂತೆ. ಹೀಗಾಗಿಯೇ ನಾವು ಯಾವ ಎಚ್ಚರಿಕೆಗಳನ್ನು ತೆಗೆದುಕೊಂಡಾಗಲೂ ಅದು ಕಡಿಮೆ ಎನಿಸುತ್ತದೆ. ರೋಗಲಕ್ಷಣಗಳೇ ಇಷ್ಟು ವಿಚಿತ್ರವಾಗಿರುವುದರಿಂದ ರೋಗವನ್ನು ಗುರುತಿಸುವುದು ಅಷ್ಟೇ ಕಷ್ಟ ಕೂಡ. ಕೆಲವೊಮ್ಮೆಯಂತೂ ಯಾವ ರೋಗಲಕ್ಷಣವೂ ಇಲ್ಲದೇ ರೋಗಿಯಾಗಿರುವ ಮತ್ತು ರೋಗಲಕ್ಷಣಗಳೆಲ್ಲಾ ಕಂಡು ಬಂದಿದ್ದರೂ ರೋಗಿಯಲ್ಲವೆನ್ನುವ ಪರೀಕ್ಷಾ ವರದಿ ಬರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ!

ಪ್ರಮಾದಗಳ ಕಥೆಯಂತೂ ಕೇಳಲೇಬೇಡಿ. ರೋಗ ಬಂದಿದೆ ಎಂಬ ವರದಿಯನ್ನು ನೋಡಿ ವಿಕ್ಟೋರಿಯಾಕ್ಕೆ ದಾಖಲಾದ ಮಿತ್ರರೊಬ್ಬರು ನಾಲ್ಕು ದಿನಗಳ ನಂತರ ಆಸ್ಪತ್ರೆಯಲ್ಲೇ ಕುಳಿತು ವರದಿಯನ್ನು ಕೂಲಂಕಷವಾಗಿ ನೋಡುವಾಗ ತನ್ನ ಹೆಸರಿನ ಮುಂದಿರುವ ಇನಿಶಿಯಲ್ ಬದಲಾಗಿರುವುದು ಕಂಡುಬಂತು. ಆಸ್ಪತ್ರೆಗೆ ವಿಚಾರಿಸಲಾಗಿ ಮತ್ತೊಬ್ಬನ ವರದಿಯ ಆಧಾರದ ಮೇಲೆ ಇವರು ಚಿಕಿತ್ಸೆ ಪಡೆಯಲು ಬಂದಾಗಿತ್ತು. ವೈರಸ್ನ ಸಾಗರಕ್ಕೆ ಧುಮುಕಿದ ಮೇಲೆ ಇನ್ನು ಮರಳುವುದರಲ್ಲಿ ಅರ್ಥವಾದರೂ ಏನಿದೆ? ಅವರು ಪೂತರ್ಿ ಕೋಸರ್ು ಮುಗಿಸಿಯೇ ಮನೆಗೆ ಬಂದರು!

7

ವೈರಸ್ಸನ್ನು ಎದುರಿಸುವಲ್ಲಿ ನಾವು ಖಂಡಿತ ಸೋಲುತ್ತಿದ್ದೇವೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊವಿಡ್ ಪೀಡಿತರಿಗೆಂದು ಎರಡು ಸಾಮಾನ್ಯ ವಾಡರ್ು ಮತ್ತೊಂದು ಐಸಿಯು ವಾಡರ್್ ಇದೆ. ಸಾಮಾನ್ಯ ವಾಡರ್ುಗಳಲ್ಲಿರುವ ಬಹುತೇಕರು ಕೊವಿಡ್ನ ಗುಣಲಕ್ಷಣಗಳೇ ಇಲ್ಲದೇ ಬಂದಂಥವರು ಎನಿಸುತ್ತದೆ. ಬಹುತೇಕರು ಮೊಬೈಲ್ನಲ್ಲಿ ಆಟವಾಡುತ್ತಾ, ಮಲಗಿಕೊಂಡೇ ಕಾಲ ಕಳೆದಿರುತ್ತಾರೆ. ಅವರ ನಿಗಾ ವಹಿಸಲು ವೈದ್ಯರು ಪದೇ ಪದೇ ಹೋಗಬೇಕಾದ ಅಗತ್ಯವಿಲ್ಲ. ಅಷ್ಟೂ ಜನರನ್ನು ಸುಮಾರು ಹದಿನೈದು ದಿನಗಳ ಕಾಲ ನೋಡಿಕೊಳ್ಳುವ ಹೊರೆ ಸಾಮಾನ್ಯವಾದ್ದಲ್ಲ. ಉತ್ಕೃಷ್ಟ ಗುಣಮಟ್ಟದ ಆಹಾರ, ವೈದ್ಯರಿಂದ ಹಿಡಿದು ಸ್ವಚ್ಛತೆಗೆ ಬರುವ ಪ್ರತಿಯೊಬ್ಬರಿಗೂ ಪಿಪಿಇ ಕಿಟ್ಟುಗಳು, ಆನಂತರ ಸಂಗ್ರಹವಾಗಿರುವ ಪ್ಲಾಸ್ಟಿಕ್ ಅನ್ನು ಸುಟ್ಟು ಭಸ್ಮವಾಗಿಸಲು ತಗಲುವ ಖಚರ್ು-ವೆಚ್ಚ, ಇವೆಲ್ಲವೂ ಒಂದೆಡೆಯಾದರೆ, ಕೊವಿಡ್ ಸೋಂಕಿತ ವ್ಯಕ್ತಿಯ ಮನೆಯನ್ನು ಸೀಲ್ಡೌನ್ ಮಾಡುವ ಆಡಳಿತ ವ್ಯವಸ್ಥೆಯ ನಾಟಕ. ಇದಕ್ಕೆ ಸಾಮಾನ್ಯವಾದ ಖರ್ಚಲ್ಲ. ಬೆಂಗಳೂರಿನಲ್ಲಂತೂ ಅಪಾಟರ್್ಮೆಂಟಿನ ಯಾವುದೋ ಮನೆಯ ಒಬ್ಬ ವ್ಯಕ್ತಿಗೆ ಸೋಂಕು ತಾಕಿತೆಂದರೆ ಇಡಿಯ ರಸ್ತೆಯನ್ನೇ ಸೀಲ್ ಮಾಡಿಬಿಡುತ್ತಾರೆ. ಈಗೇನೊ ಸರಿ, ಈ ಸೋಂಕು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬರುತ್ತದಲ್ಲ, ಆಗೇನು ಮಾಡುತ್ತೀರಿ? ಹುಬ್ಬಳ್ಳಿಯಲ್ಲಂತೂ ಸಾರ್ವತ್ರಿಕವಾಗಿ ಪ್ರಯೋಗಾರ್ಥವಾಗಿ ಎಲ್ಲರಿಗೂ ಪರೀಕ್ಷೆ ಮಾಡಬೇಕು ಎಂಬ ನಿಯಮ ಬಂದ ನಂತರ ಜನ ಸ್ವಯಂ ಪ್ರೇರಿತರಾಗಿ ಮುಂದೆ ಬರುವುದಿರಲಿ ಪರೀಕ್ಷೆ ಮಾಡುವವರು ಯಾವ ರಸ್ತೆಗೆ ಬರುತ್ತಾರೋ ಆ ರಸ್ತೆಯ ಅಂಗಡಿ-ಮುಂಗಟ್ಟುಗಳಿಗೆಲ್ಲಾ ಬಾಗಿಲು ಹಾಕಿ ನಾಪತ್ತೆಯಾಗಿಬಿಡುತ್ತಿದ್ದಾರಂತೆ. ಏಕೆಂದರೆ ಅಕಸ್ಮಾತ್ ಸೋಂಕು ದೃಢಪಟ್ಟರೆ 14 ದಿನ ಆಸ್ಪತ್ರೆಯಲ್ಲಿ ನರಳಬೇಕಲ್ಲ ಅಂತ! ಖಂಡಿತವಾಗಿಯೂ ವ್ಯವಸ್ಥೆಯನ್ನು ನಾವು ಒಯ್ಯುತ್ತಿರುವ ದಿಕ್ಕು ಎಡವಿದಂತೆ ಕಾಣುತ್ತಿದೆ. ಅದಾಗಲೇ ಕೆಲವು ಆಸ್ಪತ್ರೆಗಳು 14 ದಿನಗಳ ಕಾಲ ರೋಗಿಯನ್ನು ಇಟ್ಟುಕೊಂಡ ನಂತರ ಮತ್ತೆ ಕೊವಿಡ್ ಪರೀಕ್ಷೆಯನ್ನು ಮಾಡಿಸದೇ ಮನೆಗೆ ಕಳಿಸಿಬಿಡುತ್ತಿದ್ದಾರೆ. ಮನೆಗೆ ಕಳಿಸುವ ಮೂರು ದಿನಗಳ ಕಾಲ ಕೊವಿಡ್ ಗುಣಲಕ್ಷಣಗಳು ಕಂಡು ಬರದಿದ್ದರೆ ಸಾಕು ಎಂಬ ನಿಯಮ ಮಾಡಿಕೊಂಡಿದ್ದಾರೆ. ದುರಂತವೆಂದರೆ ಕನರ್ಾಟಕದ ಕೊವಿಡ್ ಪೀಡಿತ ಅರ್ಧದಷ್ಟು ಜನರಿಗೆ ಹದಿನಾಲ್ಕು ದಿನಗಳೂ ಕಾಯಿಲೆಯ ಗುಣಲಕ್ಷಣಗಳೇ ಇರಲಿಲ್ಲ!

8

ಇವೆಲ್ಲದರ ನಡುವೆ ಒಂದು ಸಂತೋಷದ ಸುದ್ದಿ ಇದೆ. ಅದೇನೆಂದರೆ ಕೊವಿಡ್ನ ವ್ಯಾಪ್ತಿ ನಿಧಾನವಾಗಿ ಕಡಿಮೆಯಾಗುತ್ತಿದೆಯಲ್ಲದೇ ಹರಡುವ ವೇಗವೂ ಕಡಿಮೆಯಾಗುವುದನ್ನು ಲೆಕ್ಕಾಚಾರದಲ್ಲಿ ನೋಡಬಹುದಾಗಿದೆ. ಗುಣ ಹೊಂದುತ್ತಿರುವವರ ಸಂಖ್ಯೆ ಶೇಕಡಾ 65ನ್ನು ದಾಟಿದೆ. ಸಾವಿನ ಪ್ರಮಾಣ ಶೇಕಡಾ 2ಕ್ಕಿಂತ ಸ್ವಲ್ಪ ಹೆಚ್ಚಿದೆ. ಬಹುಶಃ ವ್ಯಾಪಕವಾದ ಟೆಸ್ಟಿಂಗ್ ನಡೆದರೆ ಈ ಪ್ರಮಾಣ ಶೇಕಡಾ 1ಕ್ಕಿಂತ ಕಡಿಮೆಯಾದರೆ ಅಚ್ಚರಿ ಪಡಬೇಕಿಲ್ಲ. ಸದ್ಯದಮಟ್ಟಿಗೆ 24 ದಿನಕ್ಕೆ ರೋಗಿಗಳ ಸಂಖ್ಯೆ ದ್ವಿಗುಣವಾಗುತ್ತಿದೆ. ಅಂಕಿಗಳು ತುಂಬ ದೊಡ್ಡದ್ದಾಗಿ ಕಂಡರೂ ಈ ರೀತಿಯ ವಿಶ್ಲೇಷಣೆಗಳು ನಿಜವಾದ ಕೊವಿಡ್ ಪರಿಸ್ಥಿತಿಯನ್ನು ನಮ್ಮ ಮುಂದಿಡುತ್ತದೆ. ಸದ್ಯಕ್ಕೆ 10 ಲಕ್ಷ ಜನಸಂಖ್ಯೆಗೆ ಸುಮಾರು 14ಸಾವಿರದಷ್ಟು ಪರೀಕ್ಷೆಗಳಾಗುತ್ತಿದ್ದು ಪೀಡಿತರ ಸಂಖ್ಯೆ ಶೇಕಡಾ 5ಕ್ಕಿಂತ ಕಡಿಮೆ ಇರಬೇಕೆಂಬುದು ವಿಶ್ವ ಆರೋಗ್ಯ ಸಂಸ್ಥೆಯ ಸೂಚಿಯಲ್ಲಿದೆ. ಸದ್ಯದಮಟ್ಟಿಗೆ ನಾವು ಅದಕ್ಕಿಂತ ಸ್ವಲ್ಪ ಹೆಚ್ಚಿದ್ದೇವೆ. ಆದರೆ ಅಮಿತ್ಶಾ ದೆಹಲಿಯಲ್ಲಿ ಈ ವೈರಸ್ಸನ್ನು ನಿಯಂತ್ರಣಕ್ಕೆ ತಂದಿರುವ ಪರಿ ನೋಡಿದರೆ ಇದು ಗೆಲ್ಲಲಾಗದ ಸಾಂಕ್ರಾಮಿಕವೇನಲ್ಲ. ಹಂತ-ಹಂತವಾಗಿ ನಮ್ಮನ್ನು ಸಹಜ ಪರಿಸ್ಥಿತಿಗೆ ಒಡ್ಡಿಕೊಳ್ಳುತ್ತಾ ಹೋಗಬೇಕಷ್ಟೇ. ವೈರಸ್ಸು ನಮ್ಮೊಳಗೆ ಕುಳಿತು ನಮ್ಮ ಆಂತರಿಕ ರಕ್ಷಣಾ ವ್ಯವಸ್ಥೆಯೊಂದಿಗೆ ಗುದ್ದಾಡಿ, ಸೋತು ತೆರಳುವಂತೆ ಮಾಡುವುದಷ್ಟೇ ನಮ್ಮ ಕೆಲಸ. ಸಕರ್ಾರಗಳ ಪಾತ್ರ ಬರುವುದು ಆನಂತರವಷ್ಟೇ. ಹೀಗಾಗಿ ಸ್ವಲ್ಪ ಎಚ್ಚರಿಕೆ ನಾವು ತೆಗೆದುಕೊಳ್ಳೋಣ.

9

ಸಕರ್ಾರವು ಎಚ್ಚೆತ್ತುಕೊಂಡು ಸೋಂಕಿತರ ಮನೆಯನ್ನು ಭಯೋತ್ಪಾದಕರ ಮನೆಗಿಂತಲೂ ಕೆಟ್ಟದ್ದಾಗಿ ಬಿಂಬಿಸುವುದನ್ನು ಬಿಟ್ಟರೆ ಒಳಿತು. ಲಾಕ್ಡೌನ್ಗಳು ಹೇಗೆ ಮುಗಿದವೋ ಹಾಗೆಯೇ ಸೀಲ್ಡೌನ್ಗಳನ್ನು ಮುಗಿಸಬೇಕಿದೆ. ಈ ವೈರಸ್ ಸೋಂಕಿತನನ್ನು ಜನರೆಲ್ಲಾ ಕೆಟ್ಟ ಕಂಗಳಿಂದ ನೋಡುವಂತೆ ಮಾಡುವಲ್ಲಿ ಸಕರ್ಾರದ ಪಾತ್ರ ಬಹಳ ದೊಡ್ಡದಿದೆ. ಇದರಿಂದಾಗಿಯೇ ಪರೀಕ್ಷೆ ಮಾಡಿಸಿಕೊಳ್ಳಲು ಜನ ಹೆದರುತ್ತಿರುವುದು. ಹಾಗೆಯೇ ಆಸ್ಪತ್ರೆಗಳಲ್ಲಿ ಡಿ ಗ್ರೂಪಿನ ನೌಕರರ ಕೊರತೆ ಕಣ್ಣಿಗೆ ರಾಚುತ್ತಿದೆ. ಅವರಿಗೆ ಧೈರ್ಯ ತುಂಬಿ ಸಂಬಳ ಹೆಚ್ಚಿಸುವ ಭರವಸೆ ಕೊಟ್ಟು ಅವರನ್ನು ಕೆಲಸಕ್ಕೆ ಬರುವಂತೆ ಮಾಡಬೇಕಿದೆ. ಇಲ್ಲವಾದಲ್ಲಿ ಕರೊನ ನಂತರ ಹಬ್ಬುವ ಮತ್ತೊಂದು ಭಯಾನಕವಾದ ಸಾಂಕ್ರಾಮಿಕಕ್ಕೆ ನಾವು ಸಿದ್ಧರಾಗಿರಬೇಕಾಗುತ್ತದೆ!

ಒಟ್ಟಿನಲ್ಲಿ ಕರೋನಾದ ಈ ಹೋರಾಟ ಒಬ್ಬಿಬ್ಬರದ್ದಲ್ಲ, ಎಲ್ಲರದ್ದು. ಎದುರಿಸೋಣ..

Comments are closed.