ವಿಭಾಗಗಳು

ಸುದ್ದಿಪತ್ರ


 

ಇಸ್ರೊ ಸಾಧನೆಯನ್ನು ಹೀಗಳೆದ ನಮ್ಮವರು!

ನರೇಂದ್ರಮೋದಿ ಇಸ್ರೊದ ಆ ವಾತಾವರಣದಲ್ಲಿ ಒಂದರೆಕ್ಷಣವೂ ನಿಲ್ಲದೇ ತಮ್ಮ ಕೋಣೆಗೆ ಹೊರಟರು. ಸುಮಾರು ಏಳುವರೆಯ ಹೊತ್ತಿಗೆ ಮತ್ತೆ ತಯಾರಾಗಿ ಮರಳಿ ಇಸ್ರೊಕ್ಕೆ ಬಂದರು. ಅಲ್ಲಿಯವರೆಗೂ ಎಲ್ಲರ ಮುಖದಲ್ಲೂ ಧಾವಂತ. ಮೋದಿಯವರ ಪ್ರತಿಕ್ರಿಯೆ ಹೇಗಿರಬಹುದು ಎಂಬುದಕ್ಕಾಗಿ ಅವರು ಕಾತರಿಸುತ್ತಿದ್ದರು.

ಇಸ್ರೊದ ಖ್ಯಾತಿಯ ವ್ಯಾಪ್ತಿ ದಿನೇ ದಿನೇ ವಿಸ್ತರಿಸುತ್ತಿದೆ. ಮೊನ್ನೆಯಂತೂ ಚಂದ್ರಯಾನ್-2ರಲ್ಲಿ ಇಸ್ರೊ ಸೋತೂ ಗೆದ್ದಿದೆ. ಸೋಲಿಗೂ ಭಿನ್ನ-ಭಿನ್ನ ಆಯಾಮಗಳಿರುತ್ತವೆ. ಕ್ರಿಕೆಟಿನಲ್ಲಿ 350ಕ್ಕೂ ಹೆಚ್ಚಿನ ಸ್ಕೋರನ್ನು ಅಟ್ಟಿಸಿಕೊಂಡು ಹೋಗಿ ಒಂದು ರನ್ನಿನಿಂದ ಸೋತಾಗ, ವಾಸ್ತವವಾಗಿ ಸೋಲೇ ಆದರೂ ಯಾರೂ ಅದನ್ನು ಸೋಲೆಂದು ಕರೆಯುವುದಿಲ್ಲ. ಎರಡೂ ತಂಡವನ್ನು ಗೆದ್ದವರೆಂದೇ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಇದೂ ಹಾಗೆಯೇ. ಸುಮಾರು ನಾಲ್ಕುಲಕ್ಷ ಕಿ.ಮೀ ದೂರ ಕ್ರಮಿಸಿ ಚಂದ್ರನ ಅಂಗಳಕ್ಕೆ (ನೆನಪಿಡಿ ಇದು ಚಂದ್ರನ ಸುತ್ತ ಸುತ್ತುವುದಲ್ಲ, ಬದಲಿಗೆ ಅವನ ಅಂಗಳದಲ್ಲೇ ಇಳಿಯೋದು) ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವುದು ಸುಲಭದ ಮಾತಾಗಿರಲಿಲ್ಲ. ಚಂದ್ರನ ಕಕ್ಷೆಯನ್ನು ಭೇದಿಸಿಕೊಂಡು 6000 ಕಿ.ಮೀ ಪ್ರತಿ ಗಂಟೆಯ ವೇಗದಲ್ಲಿ ಹೋಗುತ್ತಿರುವ ಈ ಲ್ಯಾಂಡರ್ನ ವೇಗವನ್ನು ಸೊನ್ನೆಗೆ ತಗ್ಗಿಸುವುದಿದೆಯಲ್ಲ ಅದೂ 15 ನಿಮಿಷಗಳಲ್ಲಿ, ನಿಜಕ್ಕೂ ಸಾಹಸವೇ! ಇಸ್ರೊ ತನ್ನೆಲ್ಲಾ ಬೌದ್ಧಿಕ ಕ್ಷಮತೆಯನ್ನು ಬಳಸಿ ಅದನ್ನು ಸಾಧಿಸಿತು ಕೂಡ. ಚಂದ್ರನ ಅಂಗಳದ ಮೇಲೆ ಇಳಿಯಲು ಇನ್ನೂ 2 ಕಿ.ಮೀ ಬಾಕಿ ಇರುವಾಗ ಎಲ್ಲವೂ ಕೈಕೊಟ್ಟುಬಿಟ್ಟಿತು. ಚಂದ್ರನ ಮೇಲಿನ ಅಪಾರ ಪ್ರಮಾಣದ ಗುರುತ್ವಾಕರ್ಷಣ ಶಕ್ತಿ, ವಿಪರೀತವಾಗಿ ಬೀಸುವ ಗಾಳಿ, ಅಲ್ಲಲ್ಲಿ ಇರುವ ದೊಡ್ಡ ದೊಡ್ಡ ಕುಳಿಗಳು ಇವೆಲ್ಲವೂ ನಿಜಕ್ಕೂ ಲ್ಯಾಂಡರ್ ಇಳಿಯುವುದು ಕಠಿಣವಾಗಿಸುವುದರಲ್ಲಿ ಯಾರಿಗೂ ಅನುಮಾನವಿರಲಿಲ್ಲ. ಆದರೆ ಇತ್ತೀಚೆಗೆ ಗೆಲುವಿನ ಮೇಲೆ ಗೆಲುವನ್ನು ಪಡೆಯುತ್ತಿರುವ ಇಸ್ರೊಕ್ಕೆ ಇಲ್ಲಿಯೂ ಗೆಲ್ಲುವುದರಲ್ಲಿ ಖಾತ್ರಿಯಿತ್ತು. ಆದರೆ ಕೊನೆಯ ಕ್ಷಣದಲ್ಲಿ ಎಲ್ಲವೂ ತಲೆಕೆಳಗಾಯ್ತು!

7

ಆನಂತರ ಸುದ್ದಿ ಟೀವಿಯಲ್ಲಿ ಬಿತ್ತರಗೊಂಡಿತು. ನರೇಂದ್ರಮೋದಿ ಇಸ್ರೊದ ಆ ವಾತಾವರಣದಲ್ಲಿ ಒಂದರೆಕ್ಷಣವೂ ನಿಲ್ಲದೇ ತಮ್ಮ ಕೋಣೆಗೆ ಹೊರಟರು. ಸುಮಾರು ಏಳುವರೆಯ ಹೊತ್ತಿಗೆ ಮತ್ತೆ ತಯಾರಾಗಿ ಮರಳಿ ಇಸ್ರೊಕ್ಕೆ ಬಂದರು. ಅಲ್ಲಿಯವರೆಗೂ ಎಲ್ಲರ ಮುಖದಲ್ಲೂ ಧಾವಂತ. ಮೋದಿಯವರ ಪ್ರತಿಕ್ರಿಯೆ ಹೇಗಿರಬಹುದು ಎಂಬುದಕ್ಕಾಗಿ ಅವರು ಕಾತರಿಸುತ್ತಿದ್ದರು. ಸದಾ ಉತ್ಸಾಹದ ಚಿಲುಮೆಯೇ ಆಗಿರುವ ಮೋದಿ ಈ ಸೋಲನ್ನು ಸವಾಲಾಗಿ ಸ್ವೀಕರಿಸಿದ್ದಲ್ಲದೇ ‘ವಿಜ್ಞಾನವೆನ್ನುವುದು ಫಲಿತಾಂಶಗಳ ಆಧಾರದ ಮೇಲೆ ಅಳತೆ ಮಾಡುವಂಥದ್ದಲ್ಲ, ಬದಲಿಗೆ ಪ್ರಯೋಗಗಳನ್ನು ಮಾಡುವುದರ ಮೂಲಕ ಒರೆಗಲ್ಲಿಗೆ ಹಚ್ಚುವಂಥದ್ದು. ಈ ಪ್ರಯೋಗಗಳು ಫಲಿತಾಂಶವನ್ನು ಕೊಡಬೇಕಷ್ಟೇ’ ಎಂದರು. ಅಲ್ಲಿರುವ ವಿಜ್ಞಾನಿಗಳಿಗೆ ಇದು ನಿಟ್ಟುಸಿರು ಬಿಡಲು ಸಾಕಾಗಿತ್ತು. ಗೆದ್ದೇ ಗೆಲ್ಲುವ ವಿಶ್ವಾಸದಿಂದಲೇ ಅವರು ಇಡೀ ರಾಷ್ಟ್ರದ ಮುಂದೆ ತಮ್ಮನ್ನು ತಾವು ತೆರೆದುಕೊಂಡಿದ್ದರು. ಈ ಸೋಲು ಅವರ ಪಾಲಿಗೆ ನುಂಗಲಾರದ ತುತ್ತು. ಇಷ್ಟಾದರೂ ನರೇಂದ್ರಮೋದಿಯವರು ಮರಳಿ ಹೋಗುವಾಗ ಡಾ. ಶಿವನ್ ಅವರು ಅತ್ತಿದ್ದು, ಮೋದಿ ತಬ್ಬಿಕೊಂಡಿದ್ದು ಇವೆಲ್ಲವೂ ದೇಶದ ಜನರ ಮನಸ್ಸನ್ನು ಗೆದ್ದುಬಿಟ್ಟಿತ್ತು. ಆದರೇನು? ಮೊಸರಲ್ಲಿ ಕಲ್ಲು ಹುಡುಕುವ ಒಂದಷ್ಟು ಜನ ಇದ್ದೇ ಇರುತ್ತಾರಲ್ಲಾ. ಅವರು ಈ ಅಪ್ಪುಗೆಯ ಅಷ್ಟೂ ಚಿತ್ರಣವನ್ನು ಪೂರ್ವ ನಿಯೋಜಿತವೆಂದರು. ಕೆಲವರಂತೂ ಮೋದಿ ಇಸ್ರೊದಲ್ಲಿದ್ದಾಗ ಹಾಕಿಕೊಂಡ ಬಟ್ಟೆ ಮತ್ತು ಅಪ್ಪಿಕೊಳ್ಳುವಾಗ ಹಾಕಿಕೊಂಡಿದ್ದ ಬಟ್ಟೆಯನ್ನು ತೋರಿಸಿ ಕ್ಯಾಮರಾಕ್ಕೆ ಹೊಂದಿಕೆಯಾಗುವ ಬಟ್ಟೆಯನ್ನು ಧರಿಸಿಕೊಂಡು ಬಂದ ಮೋದಿ ಎಂದೆಲ್ಲಾ ಆಡಿಕೊಂಡರು. ಆದರೆ ಇಸ್ರೊದಿಂದ ಮೋದಿ ತಮ್ಮ ಕೋಣೆಗೆ ಹೋಗಿ ಸ್ನಾನ ಮುಗಿಸಿ ಮರಳಿ ಬಂದಿದ್ದರೆಂಬ ಸಾಮಾನ್ಯಜ್ಞಾನವೂ ಅವರಿಗಿರಲಿಲ್ಲ. ಮತ್ತೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಲ್ಯಾಂಡರ್ ಸಂಪರ್ಕ ಕಳೆದುಕೊಂಡಾಗ ಡಾ.ಶಿವನ್ ಅದನ್ನು ಮೋದಿಗೆ ವರದಿ ಮಾಡಲು ಬಂದಿದ್ದು, ಮೋದಿ ಅದನ್ನು ಆಕ್ರೋಶದಿಂದ ಸ್ವೀಕರಿಸಿದರು ಎಂಬಂತಹ ವಿಡಿಯೊವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಮೋದಿಗೆ ಶಿವನ್ ವರದಿ ಕೊಟ್ಟೊಡನೆ ಅವರು ಏನೂ ಮಾತಾಡದೇ ಸೋಫಾದಲ್ಲಿ ಕುಳಿತುಕೊಳ್ಳುವುದು, ಉಳಿದ ವಿಜ್ಞಾನಿಗಳೆಲ್ಲಾ ಶಿವನ್ರನ್ನು ಸಮಾಧಾನಿಸುವಂತಹ ಚಿತ್ರಣವಿತ್ತು. ಸಹಜವಾಗಿಯೇ ಅನೇಕರ ಅನುಮಾನಕ್ಕೆ ಕಾರಣವಾಗಬಲ್ಲ ವಿಡಿಯೊ ಅದಾಗಿತ್ತು. ಅದರ ಪೂತರ್ಿ ವಿಡಿಯೊ ಹೊರಬಂದಾಗಲೇ ಗೊತ್ತಾಗಿದ್ದು ಲ್ಯಾಂಡರ್ ಸಂಪರ್ಕ ಕಳೆದುಕೊಂಡಾಗ ಸ್ವಲ್ಪ ಹೊತ್ತು ಕಾದು ಭಾರವಾದ ಹೃದಯ ಹೊತ್ತು ಬಂದ ಶಿವನ್ ಮೋದಿಯವರ ಬಳಿ ಎಲ್ಲವನ್ನೂ ವಿವರಿಸಿದರು. ಈ ಸಾಧನೆಯ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ರಚನೆಗೆ ಕಾತರಿಸುತ್ತಿದ್ದ ನರೇಂದ್ರಮೋದಿಯವರಿಗೂ ಆ ಕ್ಷಣದಲ್ಲಿ ಆಘಾತವಾಗಿದ್ದು ಕಾಣಿಸುತ್ತಿತ್ತು. ಆದರೆ ಡಾ.ಶಿವನ್ ಇನ್ನೂ ಸ್ವಲ್ಪ ಹೊತ್ತು ಕಾದರೆ ಅದರ ಸಂಪರ್ಕ ಸಾಧ್ಯವಾದರೂ ಆಗಬಹುದು ಎಂದು ಹೇಳಿದ್ದರಿಂದ ನರೇಂದ್ರಮೋದಿ ಮಾತಿನಲ್ಲೇ ಸಮಾಧಾನಿಸಿ, ‘ಹಾಗಿದ್ದರೆ ಕಾಯೋಣ’ ಎಂದು ಹೇಳಿ ಕುಳಿತುಬಿಟ್ಟರು. ಮೋದಿಯ ಜೊತೆಗಿದ್ದವರು ಶಿವನ್ರವರನ್ನು ಸಂತೈಸಿ ಸ್ವಲ್ಪ ಕಾಯೋಣ ಎಂದು ಹೇಳಿದ್ದು ಒಟ್ಟಾರೆ ವಿಡಿಯೊದಲ್ಲಿ ಕಂಡು ಬಂದ ಅಂಶ. ಈ ಎಡಪಂಥೀಯ ಅಯೋಗ್ಯರಿಗೆ ಲ್ಯಾಂಡರ್ ಚಂದ್ರನ ಮೇಲಿಳಿಯುವುದರಲ್ಲಿ ಸೋತ ನಂತರವೂ ಮೋದಿ ಜನಮಾನಸವನ್ನು ಗೆದ್ದುಬಿಟ್ಟರಲ್ಲ ಎಂಬ ದುಃಖ ಎಷ್ಟಿತ್ತೆಂದರೆ ಸುಳ್ಳು ಹೇಳಿಯಾದರೂ ಮೋದಿಯ ಪ್ರಭೆ ಕಡಿಮೆ ಮಾಡಬೇಕೆಂಬ ಆತುರ!

8

ಇವರಿಗೆಲ್ಲಾ ಇದೇನು ಹೊಸತಲ್ಲ. ಎಡಪಂಥೀಯರ ಸೌಧ ನಿಮರ್ಾಣಗೊಂಡಿರುವುದೇ ಸುಳ್ಳಿನ ಅಡಿಪಾಯದ ಮೇಲೆ. ಭಾರತದ ಇತಿಹಾಸವನ್ನು ಸುಳ್ಳುಸುಳ್ಳಾಗಿ ಚಿತ್ರಿಸಿದರು, ತಮ್ಮ ಇತಿಹಾಸವನ್ನೇ ಸುಳ್ಳುಸುಳ್ಳಾಗಿ ಜನರ ಮುಂದಿಟ್ಟರು. ರಾಷ್ಟ್ರದ ಪರವಾಗಿ ನಿಂತವರನ್ನು ಸುಳ್ಳರೆಂದು ಜರಿದರು. ಇವರ ಈ ಸುಳ್ಳಿನ ಪರಂಪರೆ ಒಂದೆರಡಲ್ಲ. ಇವರೊಂದಿಗೆ ಇತ್ತೀಚೆಗೆ ಡಿ.ಕೆ ಶಿವಕುಮಾರರ ಅಭಿಮಾನಿ ಗ್ಯಾಂಗು ಸೇರಿಕೊಂಡಿರುವುದರಿಂದ ಈ ಸುಳ್ಳಿಗೆ ರೆಕ್ಕೆ-ಪುಕ್ಕ ಕಟ್ಟುವುದರಲ್ಲಿ ಯಶಸ್ವಿಯಾಗಿಬಿಟ್ಟಿದ್ದಾರೆ. ಆದರೆ ಒಬ್ಬ ಮನುಷ್ಯ ನಿಸ್ವಾರ್ಥವಾಗಿ, ಪ್ರಾಮಾಣಿಕವಾಗಿ ದುಡಿಯುತ್ತಿದ್ದರೆ ಆತ ಗೆಲ್ಲುವುದು ಖಾತ್ರಿ ಎಂಬುದಕ್ಕೆ ನರೇಂದ್ರಮೋದಿಯವರೇ ಉದಾಹರಣೆ. ಭಾರತದ ಅನೇಕ ಪತ್ರಕರ್ತರು ನರೇಂದ್ರಮೋದಿಯವರ ಮೇಲಿನ ಕೋಪಕ್ಕಾಗಿ ಇಸ್ರೊವನ್ನು ತರಾಟೆಗೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆ ಜಗತ್ತಿನ ಅನೇಕ ವಿಜ್ಞಾನದ ಪತ್ರಕರ್ತರು ಇಸ್ರೊದ ಸಾಧನೆ ಹೆಮ್ಮೆಯದ್ದು ಎಂದಿದ್ದಾರೆ. ಅಮೇರಿಕಾ, ರಷ್ಯಾಗಳು ಒಂದು ಲ್ಯಾಂಡರ್ ಅನ್ನು ಚಂದ್ರನ ಮೇಲಿಳಿಸಲು 30ಕ್ಕೂ ಹೆಚ್ಚು ಪ್ರಯೋಗಗಳನ್ನು ನಡೆಸಿವೆ ಎಂಬುದನ್ನು ಮರೆಯುವಂತಿಲ್ಲ ಎಂದಿದ್ದಾರೆ. ನಾಸಾ ಇಸ್ರೊನ ಈ ಸಾಹಸವನ್ನು ಹೊಗಳಿದ್ದಲ್ಲದೇ ತನ್ನ ಮುಂದಿನ ಖಗೋಳ ಸಂಶೋಧನೆಗಳಿಗೆ ಇಸ್ರೊದೊಂದಿಗೆ ಬೆಸೆಯುವ ಮಾತುಗಳನ್ನಾಡಿದೆ. ಎನ್ಡಿಟಿವಿಯ ಪತ್ರಕರ್ತನಂತೂ ಪತ್ರಿಕಾಗೋಷ್ಠಿಯಲ್ಲಿ ಕೆಟ್ಟದ್ದಾಗಿ ವತರ್ಿಸಿ ಎಲ್ಲರಿಂದ ಛೀಮಾರಿಗೊಳಗಾದನಲ್ಲದೆ ಇಸ್ರೊದ ಚಿತ್ರಗಳನ್ನು ಚೀನಾದ ಕಂಪೆನಿಯೊಂದಕ್ಕೆ ಮಾರಿಕೊಂಡ ಆರೋಪಕ್ಕೂ ಒಳಗಾಗಿದ್ದಾನೆ.

ಹೇಳಿದೆನಲ್ಲಾ, ಇವರೆಲ್ಲರೂ ರಾಷ್ಟ್ರಕ್ಕೆ ಕಳಂಕದಂತೆ. ಲ್ಯಾಂಡರ್ನೊಂದಿಗೆ ರಾಷ್ಟ್ರದ ಸಂಪರ್ಕ ಏರ್ಪಡಬಹುದೇನೋ, ಇವರುಗಳೆಂದಿಗೂ ರಾಷ್ಟ್ರದ ಸಂಪರ್ಕಕ್ಕೆ ಬರಲಾರರು!!

Comments are closed.