ವಿಭಾಗಗಳು

ಸುದ್ದಿಪತ್ರ


 

ಇಸ್ಲಾಂ ಭಯೋತ್ಪಾದನೆಯ ಕೇಂದ್ರವಾಗುತ್ತಿದೆ ಟರ್ಕಿ!!

ಭಾರತದಲ್ಲಿ ಮುಸಲ್ಮಾನರ ಅಹಲ್-ಎ-ಹದಿತ್ ಪಂಗಡ ನಿರ್ವಹಿಸುತ್ತಿತ್ತು. ನಿರಂತರ ಪ್ರಯಾಸದಿಂದಾಗಿ ಮಹಾರಾಷ್ಟ್ರದಲ್ಲಿ 40 ಮಸೀದಿಗಳನ್ನು, ಕೇರಳದಲ್ಲಿ 75 ಮಸೀದಿಗಳನ್ನು ವಹಾಬಿಗಳು ತಮ್ಮ ತೆಕ್ಕೆಗೆ ಹಾಕಿಕೊಂಡುಬಿಟ್ಟಿದ್ದರು. ಅದಾಗಿ ಆರು ವರ್ಷ ಕಳೆದೇಹೋಯ್ತು. ಮುಸಲ್ಮಾನರನ್ನು ಕಟ್ಟರ್ ಆಗಿಸುವ ಪ್ರಕ್ರಿಯೆ ಈ ಆರು ವರ್ಷಗಳಲ್ಲಿ ಹಿಂದಿಗಿಂತ ಜೋರಾಗಿ ನಡೆದಿದೆ.

ಕ್ರಿಸ್ಟೊಫರ್ ಜೆಫರ್ಲಾಟ್ ತನ್ನ ‘ದ ಸೌದಿ ಕನೆಕ್ಷನ್’ ಎಂಬ ಲೇಖನದಲ್ಲಿ ಕೇರಳದಲ್ಲಿ ಸಲಫಿಗಳ ಪ್ರಭಾವ ಹೆಚ್ಚುತ್ತಿರುವುದನ್ನು ವಿಸ್ತಾರವಾಗಿ ವಿವರಿಸಿದ್ದ. ಆತನ ಪ್ರಕಾರ ಮಿಲಿಯನ್ಗಟ್ಟಲೆ ರಿಯಾಲ್ಗಳು ಕೇರಳದ ಮಲಪ್ಪುರಂಗೆ ಕಟ್ಟರ್ಪಂಥಿ ಇಸ್ಲಾಮನ್ನು ಹಬ್ಬಿಸಲೆಂದೇ ಹರಿದುಬಂದಿತ್ತು. ಅಷ್ಟೇ ಅಲ್ಲ, ಆತ ಹೇಳುವಂತೆ ಸೌದಿಯ ಹಣದಿಂದ ಎರಡು ಸಂಘಟನೆಗಳು ಬಲವಾಗಿ ಬೆಳೆದು ನಿಂತಿದ್ದವು. ಮೊದಲನೆಯದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆದರೆ ಎರಡನೆಯದ್ದು ಸೊಷಿಯಲ್ ಡೆಮಾಕ್ರಟಿಕ್ ಪಾಟರ್ಿ ಆಫ್ ಇಂಡಿಯಾ. ಅರ್ಥವಾಗುವ ಭಾಷೆಯಲ್ಲಿ ಹೇಳಬೇಕೆಂದರೆ ಪಿಎಫ್ಐ ಮತ್ತು ಎಸ್ಡಿಪಿಐ. ಕ್ರಿಸ್ಟೊಫರ್ ಈ ಎರಡು ಸಂಘಟನೆಗಳ ಕುರಿತಂತೆ ವಿವರಿಸುತ್ತಾ ತಮ್ಮ ಹೆಸರಿನಲ್ಲೆಲ್ಲೂ ಸಲಫಿತ್ವವನ್ನು ಪ್ರತಿಬಿಂಬಿಸದ ಈ ಸಂಘಟನೆಗಳು ಮಾಡುವ ಕೆಲಸ ಮಾತ್ರ ಆ ವಿಚಾರವನ್ನು ಹಬ್ಬಿಸುವುದೇ ಆಗಿವೆ ಎಂದಿದ್ದಾರೆ. ನೆನಪಿರಲಿ, ಐಸಿಸ್ಗೆ ಬೇಕಾಗಿರುವ ಮೂಲದ್ರವ್ಯವನ್ನು ಈ ಸಲಫಿಸಂ ನೀಡುತ್ತಿದೆ. ಕಳೆದ ಕೆಲವಾರು ವರ್ಷಗಳಿಂದ ಇಸ್ಲಾಂನ ಕಟ್ಟರ್ಪಂಥಿ ಚಿಂತನೆಯಾದ ಸಲಫಿಸಂ ಬುದ್ಧಿವಂತ ಅಕ್ಷರಸ್ಥರೆನಿಸಿಕೊಂಡವರನ್ನೇ ತನ್ನೆಡೆಗೆ ಸೆಳೆಯುತ್ತಿದೆ. ಇವರುಗಳಿಗೆ ಸೂಫಿ ತತ್ವ ಮೂಢನಂಬಿಕೆ ಎನಿಸುತ್ತದೆಯಲ್ಲದೇ ಅದನ್ನು ಮೂರ್ಖತೆ ಎಂದೂ ಜರಿಯುತ್ತಾರೆ. ಕೇರಳ, ಕನರ್ಾಟಕಗಳಲ್ಲಿ ಓದಿಕೊಂಡವರೇ ಹೆಚ್ಚಾಗಿದ್ದಾಗ್ಯೂ ಈ ಕಟ್ಟರತೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಐಸಿಸ್ಗೆ ಹೆಚ್ಚಿನ ಪ್ರಮಾಣದಲ್ಲಿ ತರುಣರು ಪೂರೈಕೆಯಾಗುತ್ತಿರುವುದು ಇಲ್ಲಿಂದಲೇ ಎಂಬುದು ಆತಂಕದ ವಿಚಾರವೇ. ಈ ರಾಜ್ಯಗಳಿಂದಲೇ ಹೆಚ್ಚಿನ ಜನ ಗಲ್ಫ್ ರಾಷ್ಟ್ರಗಳಲ್ಲಿ ದುಡಿಯಲು ಹೋಗುತ್ತಿರುವುದರಿಂದ ಬಹುಶಃ ಬ್ರೈನ್ವಾಶ್ನ ಹಿಂದಿನ ಕಾರಣ ಅದೂ ಇರಬಹುದು. ಇವಿಷ್ಟೂ ಈಗ ಏಕೆ ಹೇಳಿದ್ದೆಂದರೆ ಡಿಜೆ ಹಳ್ಳಿಯ ಗಲಾಟೆ ಖಂಡಿತವಾಗಿಯೂ ಒಂದು ಫೇಸ್ಬುಕ್ ಪೋಸ್ಟಿನ ಕಾರಣಕ್ಕೆ ನಡೆದದ್ದು ಅಲ್ಲವೇ ಅಲ್ಲ. ಅದು ನೆಪ ಮಾತ್ರ. ಒಳಗೆ ವಿಸ್ತಾರವಾಗಿ ಬೆಳೆದು ನಿಂತ ಜಾಲವೊಂದು ಕೆಲಸ ಮಾಡುತ್ತಿದೆ. ಒಡೆಯರು ಕೊಟ್ಟ ಹಣಕ್ಕೆ ಸೂಕ್ತ ಕೆಲಸ ಮಾಡಿ ತೋರುವ ದದರ್ುಳ್ಳ ಜನ ಸುಲಭಕ್ಕೆ ಬಡಕಾಯಿಸಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸರಿಯಾಗಿ ಪ್ರತಿಕ್ರಿಯಿಸಿ ಈ ಇಡಿಯ ಹೋರಾಟವನ್ನು ಚಿವುಟಿ ಮುರಿದು ಹಾಕದಿದ್ದರೆ ಮುಂದಿನ ದಿನಗಳು ಬಲುಕಷ್ಟ!

6

ಈ ಕುರಿತಂತೆ 2014ರಲ್ಲೇ ಪತ್ರಕರ್ತ ವಿಕ್ಕಿ ನಂಜಪ್ಪ ಎಚ್ಚರಿಸಿದ್ದರು. ಅವರ ಪ್ರಕಾರ ಆಗ 18ಲಕ್ಷ ವಹಾಬಿಗಳು ಭಾರತದಲ್ಲಿದ್ದು ಸೌದಿ ಅರೇಬಿಯಾ ಹನ್ನೆರಡುವರೆ ಕೋಟಿ ರೂಪಾಯಿಯನ್ನು ವಹಾಬಿ ವಿಶ್ವವಿದ್ಯಾಲಯಗಳಿಗಾಗಿ, ಆರೂಕಾಲು ಕೋಟಿ ರೂಪಾಯಿಯನ್ನು ಮಸೀದಿಗಳಿಗಾಗಿ, ಐದು ಕೋಟಿ ರೂಪಾಯಿಯನ್ನು ಮದರಸಗಳಿಗಾಗಿ ವಿನಿಯೋಗ ಮಾಡಲು ನಿಶ್ಚಯಿಸಿರುವ ಗೂಢಚರ ವರದಿಯನ್ನು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದರು. ಈ ಎಲ್ಲ ಚಟುವಟಿಕೆಯನ್ನು ಭಾರತದಲ್ಲಿ ಮುಸಲ್ಮಾನರ ಅಹಲ್-ಎ-ಹದಿತ್ ಪಂಗಡ ನಿರ್ವಹಿಸುತ್ತಿತ್ತು. ನಿರಂತರ ಪ್ರಯಾಸದಿಂದಾಗಿ ಮಹಾರಾಷ್ಟ್ರದಲ್ಲಿ 40 ಮಸೀದಿಗಳನ್ನು, ಕೇರಳದಲ್ಲಿ 75 ಮಸೀದಿಗಳನ್ನು ವಹಾಬಿಗಳು ತಮ್ಮ ತೆಕ್ಕೆಗೆ ಹಾಕಿಕೊಂಡುಬಿಟ್ಟಿದ್ದರು. ಅದಾಗಿ ಆರು ವರ್ಷ ಕಳೆದೇಹೋಯ್ತು. ಮುಸಲ್ಮಾನರನ್ನು ಕಟ್ಟರ್ ಆಗಿಸುವ ಪ್ರಕ್ರಿಯೆ ಈ ಆರು ವರ್ಷಗಳಲ್ಲಿ ಹಿಂದಿಗಿಂತ ಜೋರಾಗಿ ನಡೆದಿದೆ. ರಾಜರುಗಳು ಹಿಂದೆಲ್ಲ ಕ್ರೂರ ಪ್ರಾಣಿಗಳನ್ನು ಅನ್ನ ಕೊಡದೇ ಸತಾಯಿಸಿ ಕೊನೆಗೊಮ್ಮೆ ಶಿಕ್ಷೆ ಕೊಡಬೇಕಾದ ವ್ಯಕ್ತಿಯನ್ನು ಬೋನಿಗೆ ತಳ್ಳಿ ತಮಾಷೆ ನೋಡುತ್ತಿದ್ದರಂತಲ್ಲ, ಹಾಗೆಯೇ ಈಗ ಈ ಸಂಘಟನೆಗಳು ಮುಸಲ್ಮಾನರನ್ನು ತಯಾರು ಮಾಡುತ್ತಿವೆ. ನಿರಂತರವಾಗಿ ಅವರೊಳಗೆ ಮತಾಂಧತೆಯ ವಿಚಾರಗಳನ್ನು ತುಂಬುತ್ತಾ ಸಿಡಿಯಲು ಸಿದ್ಧವಾಗಿರುವ ಮಿಸೈಲುಗಳಂತೆ ರೂಪಿಸುತ್ತಿದ್ದಾರೆ. ಬಾಬ್ರಿ ಕಟ್ಟಡ ಉರುಳಿದ ದೃಶ್ಯಗಳನ್ನೇ ಮತ್ತೆ ಮತ್ತೆ ತೋರಿಸುತ್ತಾ ಅಲ್ಲಿ ರಾಮಮಂದಿರ ನಿಮರ್ಾಣವಾಗುತ್ತಿರುವುದರ ಇತ್ತೀಚಿನ ದೃಶ್ಯಗಳನ್ನು ಮುಂದಿಟ್ಟುಕೊಂಡು ಕ್ರೌರ್ಯವನ್ನೇ ಹಗಲು-ರಾತ್ರಿ ಉಣಬಡಿಸಲಾಗುತ್ತಿದೆ. ಇದಕ್ಕೆ ಸೌದಿಯಿಂದ ಹಣ ಬರತ್ತಿದೆ ಕೂಡ. ಇತ್ತೀಚೆಗೆ ಟಕರ್ಿ ಹಣಪೂರೈಕೆ ಜವಾಬ್ದಾರಿ ಹೊರುತ್ತಿದೆ. ಅಲ್ಲಿನ ಅಧ್ಯಕ್ಷನಿಗೆ ಪಾಕಿಸ್ತಾನ, ಭಾರತ ಮತ್ತು ಮಲೇಷಿಯಾಗಳಲ್ಲಿರುವ ಮುಸಲ್ಮಾನ ತರುಣರನ್ನು ಬಳಸಿಕೊಂಡು ತಾನು ಸೌದಿಗಿಂತಲೂ ಬಲವಾದ ಶಕ್ತಿಯಾಗಿ ಬೆಳೆಯುವ ಆಸೆಯಿದೆ. ಅದಕ್ಕೆಂದೇ ಹೊಸ ಮಾರ್ಗವನ್ನು ಆತ ಆರಿಸಿಕೊಳ್ಳುತ್ತಿದ್ದಾನೆ. ಅದರಿಂದಾಗಿಯೇ ಟ್ರಿಪಲ್ ತಲಾಖಿನ ಸಂದರ್ಭದಲ್ಲಿ, ರಾಮಮಂದಿರ ನಿಮರ್ಾಣದ ಕೋಟರ್ಿನ ನಿರ್ಣಯ ಸಂದರ್ಭದಲ್ಲಿ ಹೊತ್ತುರಿಯದ ಭಾರತ ಸಿಎಎ ಹೊತ್ತಲ್ಲಿ ಏಕರಸವಾಗಿ ಪ್ರತಿಭಟಿಸಿತು. ಹಾಗೆ ನೋಡಿದರೆ ಟ್ರಿಪಲ್ ತಲಾಖ್ ಮುಸಲ್ಮಾನರನ್ನು ಉರಿಸಿದಷ್ಟು ಸಿಎಎ ಖಂಡಿತವಾಗಿಯೂ ಉರಿಸಲಿಲ್ಲ. ನಾಗರಿಕತ್ವ ಕಾನೂನಿಗೂ ಭಾರತದಲ್ಲಿರುವ ಮುಸಲ್ಮಾನರಿಗೂ ಸಂಬಂಧವೇ ಇರಲಿಲ್ಲ. ಹಾಗಿದ್ದಾಗ್ಯೂ ಅವರು ಪ್ರತಿಭಟನೆಗೆ ಧುಮುಕಿದರೆಂದರೆ ಅದರ ಹಿಂದಿನ ಕಾರಣಗಳು ಬೇರೆಯೇ ಇದ್ದವೆಂಬುದನ್ನು ಎಂಥವನಾದರೂ ಊಹಿಸಬಲ್ಲ! ಬೆಂಗಳೂರಿನ ಗಲಭೆಯ ಹಿಂದಿನ ಕೈವಾಡ ಎಸ್ಡಿಪಿಐದು ಎನ್ನುವುದಕ್ಕೆ ಈಗ ಸಾಕ್ಷಿಗಳು ಸಿಗುತ್ತಿವೆ. ಇದನ್ನೇ ಆಧಾರವಾಗಿಟ್ಟುಕೊಂಡು ಕೆದಕಿ ನೋಡಿದರೆ ಮುಸಲ್ಮಾನ ಭಯೋತ್ಪಾದಕರಿಗೆ ಟಕರ್ಿಯೊಂದಿಗೆ ಹೊಸ ಸಂಬಂಧಗಳು ಗಟ್ಟಿಯಾಗುವಂತೆ ಕಂಡು ಬರುತ್ತಿವೆ. ಸ್ವತಃ ಅಮಿರ್ಖಾನ್ ಟಕರ್ಿಗೆ ಭೇಟಿಕೊಟ್ಟು ಅಲ್ಲಿನ ಪ್ರಥಮ ಮಹಿಳೆಯನ್ನು ಮಾತನಾಡಿಸಿಕೊಂಡು ಬಂದಿರುವ ವರದಿಗಳನ್ನೆಲ್ಲಾ ಓದುತ್ತಿದ್ದರೆ ಭಾರತದ ಪಾಲಿಗೆ ಸವಾಲು ದೊಡ್ಡದಿದೆ ಎಂಬುದು ಖಾತ್ರಿಯಾಗುತ್ತಿದೆ.

7

ಅತ್ತ ಪಾಕಿಸ್ತಾನಕ್ಕೆ ಅಮೇರಿಕಾ ಗುಮ್ಮುತ್ತಲೇ ಇದೆ. ಟಕರ್ಿ, ಮಲೇಷಿಯಾಗಳೊಂದಿಗೆ ಸೇರಿ ಸೌದಿಯ ವಿರುದ್ಧ ಬೇರೊಂದು ಕೂಟವನ್ನೇ ರಚಿಸುವ ಮಾತನಾಡಿದ್ದ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಸರಿಯಾಗಿಯೇ ಪಾಠ ಕಲಿಸಿದೆ. ಟಕರ್ಿಯೊಂದಿಗೆ ಸಂಬಂಧ ಕಡಿದುಕೊಂಡರೆ ಮಾತ್ರ ತನ್ನ ಸಹಕಾರ ಸಿಗುವುದೆಂದು ಹೇಳಿರುವ ಸೌದಿಯ ಮಾತುಗಳು ಪಾಕಿಸ್ತಾನದ ಪಾಲಿಗೆ ನುಂಗಲಾರದ ಬಿಸಿ ತುಪ್ಪ. ಅಮೇರಿಕಾ ಕೂಡ ಇದನ್ನೇ ಪುನರುಚ್ಚರಿಸಿರುವುದು ಏಷ್ಯಾದಲ್ಲಿ ಒಂಟಿಯಾಗುತ್ತಿರುವ ಪಾಕಿಸ್ತಾನವನ್ನು ತೋರುತ್ತಿದೆ. ಒಟ್ಟಾರೆ ಕೊರೋನಾ ಕಿರಿಕಿರಿ ಕಳೆಯುವ ಹೊತ್ತಿಗೆ ಜಗತ್ತಿನ ಸೂತ್ರ ಖಂಡಿತವಾಗಿಯೂ ಬದಲಾಗಿರುತ್ತದೆ. ಈ ಬದಲಾದ ಸಮೀಕರಣದ ಆಧಾರದ ಮೇಲೆ ಇಲ್ಲಿ ಹಾರಾಡುತ್ತಿರುವವರ ಸದ್ದು ಅಡಗಲಿದೆಯೋ ಹೆಚ್ಚಲಿದೆಯೋ ಎಂಬುದನ್ನು ಕಾಲ ಕಟ್ಟಿಕೊಡಲಿದೆ!

ಮುಖ್ಯಮಂತ್ರಿ ಯಡ್ಯೂರಪ್ಪನವರು ಬೆಂಗಳೂರಿನ ದಂಗೆಯನ್ನು ಒಂದು ಸ್ಥಳೀಯ ಘಟನೆ ಎಂದು ತಳ್ಳಿ ಹಾಕದೇ ಸೂಕ್ತವಾದ ತನಿಖೆ ನಡೆಸಿ ಹಿಂದು-ಮುಂದೆಲ್ಲವನ್ನೂ ಜಾಲಾಡಿಸಿ ರಾಜ್ಯ ಮತ್ತು ದೇಶ ನೆಮ್ಮದಿಯಾಗಿರಲು ವಾತಾವರಣ ರೂಪಿಸಿಕೊಡಬೇಕೆಂದು ಸಮಾಜ ಒತ್ತಾಯಿಸುತ್ತಿರುವುದು ಈ ಕಾರಣಕ್ಕಾಗಿಯೇ!!

Comments are closed.