ವಿಭಾಗಗಳು

ಸುದ್ದಿಪತ್ರ


 

ಈಗಷ್ಟೇ ಮೋದಿಯವರ ಇನ್ನಿಂಗ್ಸ್ ಶುರುವಾಗಿದೆ!

ಕಾಂಗ್ರೆಸ್ಸಿಗೆ ಏಳು ದಶಕಗಳ ಅವಧಿಯಲ್ಲಿ ನುಂಗಲಾರದ ತುತ್ತಾಗಿರುವುದು ಮೋದಿಯೊಬ್ಬರೇ! ಮಹಾತ್ಮಾಗಾಂಧಿಯನ್ನು ಮುಂದಿಟ್ಟು ನೆಹರೂ ಸರದಾರ್ ಪಟೇಲರನ್ನು ಹಿಂದಕ್ಕೆ ತಳ್ಳಿದರು. ತಾಷ್ಕೆಂಟ್ಗೆ ಹೋದ ಲಾಲ್ ಬಹುದ್ದೂರ್ ಶಾಸ್ತ್ರಿ ಮರಳಿ ಬರಲೇ ಇಲ್ಲ; ಇಂದಿರಾಗಾಂಧಿ ಪಟ್ಟಕ್ಕೇರಿದರು.

ಗಮನಿಸುತ್ತಿದ್ದೀರಾ ತಾನೇ? ಇದ್ದಕ್ಕಿದ್ದಂತೆ ಎಲ್ಲವೂ ಬದಲಾಗಿ ಹೋಗಿದೆ. ಮೂರು ರಾಜ್ಯಗಳ ಚುನಾವಣೆಯ ಸೋಲಿನ ನಂತರ ಇನ್ನು ಮೋದಿಯ ಕಥೆ ಮುಗಿದಿತ್ತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಗುಜರಾತಿನಲ್ಲಿ ದಶಕಗಳಿಗೂ ಮಿಕ್ಕಿ ಕಾಂಗ್ರೆಸ್ಸಿನ, ಕಟ್ಟರ್ ಮುಸಲ್ಮಾನರ, ಎಡಪಂಥೀಯರ, ಬುದ್ಧಿಜೀವಿಗಳ, ಮಾಧ್ಯಮಗಳ ಪಡ್ಯಂತ್ರವನ್ನು ಎದುರಿಸಿ ಗೆದ್ದು ಬಂದ ಪುಣ್ಯಾತ್ಮನಿಗೆ ಇದ್ಯಾವುದೂ ಹೊಸತಲ್ಲ. ದಲಿತರನ್ನು ಮೇಲ್ವರ್ಗದವರ ವಿರುದ್ಧ ಎತ್ತಿಕಟ್ಟುವುದು, ಮುಸಲ್ಮಾನರನ್ನು ಭಡಕಾಯಿಸಿ ಹಿಂದೂಗಳ ವಿರುದ್ಧ ಅರಚಾಡುವಂತೆ ಮಾಡುವುದು, ಹಿಂದೂ ಅಸ್ಮಿತೆಯ ವಿರುದ್ಧವಾಗಿ ಮುಸಲ್ಮಾನರನ್ನು ಬೆದರಿಸಿ ತಮ್ಮತ್ತ ಸೆಳೆದುಕೊಳ್ಳುವುದು ಇದ್ಯಾವುದೂ ಅವರಿಗೆ ಹೊಸತಲ್ಲ. ಇವೆಲ್ಲಕ್ಕೂ ಪ್ರತಿತಂತ್ರವನ್ನು ಹೆಣೆಯುವ ಮುನ್ನ ಕಾಂಗ್ರೆಸ್ಸು ತನಗರಿವಿಲ್ಲದಂತೆ ಇವುಗಳನ್ನೇ ಮಾಡುವಂತೆ ತಾವೇ ಖೆಡ್ಡಾ ತೋಡಿ ಅವರಾಗೇ ಬೀಳುವ ಪರಿಸರ ರೂಪಿಸುವುದು ಮೋದಿಯವರಿಗೆ ಚೆನ್ನಾಗಿ ಗೊತ್ತು. ಹೀಗಾಗಿಯೇ ಕಾಂಗ್ರೆಸ್ಸು ತಡಬಡಾಯಿಸುತ್ತಿರುವುದು.

2

ಕಾಂಗ್ರೆಸ್ಸಿಗೆ ಏಳು ದಶಕಗಳ ಅವಧಿಯಲ್ಲಿ ನುಂಗಲಾರದ ತುತ್ತಾಗಿರುವುದು ಮೋದಿಯೊಬ್ಬರೇ! ಮಹಾತ್ಮಾಗಾಂಧಿಯನ್ನು ಮುಂದಿಟ್ಟು ನೆಹರೂ ಸರದಾರ್ ಪಟೇಲರನ್ನು ಹಿಂದಕ್ಕೆ ತಳ್ಳಿದರು. ತಾಷ್ಕೆಂಟ್ಗೆ ಹೋದ ಲಾಲ್ ಬಹುದ್ದೂರ್ ಶಾಸ್ತ್ರಿ ಮರಳಿ ಬರಲೇ ಇಲ್ಲ; ಇಂದಿರಾಗಾಂಧಿ ಪಟ್ಟಕ್ಕೇರಿದರು. ಎಮಜರ್ೆನ್ಸಿಯ ನಂತರ ಬದಲಾವಣೆಯ ಪರ್ವ ಕಾಣುತ್ತದೆಂದು ಕಾಯುತ್ತ ಕುಳಿತಿದ್ದವರಿಗೆ ಎದುರು ಪಾಳಯ ಬಿರುಕು ಬಿಡುವಂತೆ ಮಾಡಿ ತನ್ನ ವಿರುದ್ಧ ರಚನೆಯಾದ ಸಕರ್ಾರವೂ ತನ್ನಿಚ್ಛೆಗೆ ತಕ್ಕಂತೆ ಕುಣಿಯುವಂತೆ ಮಾಡಿಕೊಂಡವರು ಇದಿರಾಗಾಂಧಿ! ಜನ ಆಸ್ಥೆಯಿಂದ ಮತ ಹಾಕಿ ಕಳಿಸಿಕೊಟ್ಟ ಜನತಾ ಸಕರ್ಾರಗಳು ತಪತಪನೆ ಉರುಳಿಬಿದ್ದವು. ಇಂದಿರಾಗಾಂಧಿ ತೀರಿಕೊಂಡ ಮೇಲಾದರೂ ಬದಲಾವಣೆ ಬರುತ್ತದೆಂದು ಕಾದು ಕುಳಿತವರಿಗೆ ಇಂದಿರಾ ಸಮಾಧಿಯ ಮೇಲೆ ರಾಜೀವ್ಗಾಂಧಿಯ ಸೌಧ ನಿಮರ್ಾಣವಾಗಿದ್ದು ಗೋಚರವಾಗಲೇ ಇಲ್ಲ. ಆಮೇಲೂ ಒಂದಷ್ಟು ಜನ ಬೇರೆಯವರು ಬಂದರಾದರೂ ಪರಿವಾರದ ಹಿಡಿತ ಮಾತ್ರ ಎಂದಿಗೂ ತಪ್ಪಲೇ ಇಲ್ಲ. ಪಂಚೆ ಕಟ್ಟಿ ಪ್ರಧಾನಮಂತ್ರಿಯ ಕುಚರ್ಿಯಲ್ಲಿ ಕುಳಿತ ದೇವೇಗೌಡರು ಕಾಂಗ್ರೆಸ್ಸಿನ ಮಜರ್ಿಯಲ್ಲೇ ಅಲ್ಲಿ ಕುಳಿತಿದ್ದುದು ಎಂಬುದನ್ನು ಮರೆಯುವಂತಿಲ್ಲ. ಬೇಡವೆನಿಸಿದಾಗ ಅವರನ್ನು ಕಿತ್ತೊಗೆದು ಮತ್ತೊಬ್ಬರನ್ನು ಕೂರಿಸಿದ ಕಾಂಗ್ರೆಸ್ಸಿಗೆ ದೇಶದ ಹಿತಾಸಕ್ತಿ ಮುಖ್ಯವಾಗಿರಲಿಲ್ಲ. ತಾನು ಆಡಿಸಿದಂತೆ ದೇಶವೆಲ್ಲಾ ನಡೆಯಬೇಕೆಂಬುದಷ್ಟೇ ಇಚ್ಛೆಯಾಗಿತ್ತು. ದೇವೇಗೌಡರು ಇವೆಲ್ಲವನ್ನೂ ಮರೆತು ಮತ್ತೆ ಕಾಂಗ್ರೆಸ್ಸಿನ ಬಾಲ ಹಿಡಿದು ಪ್ರಧಾನಮಂತ್ರಿಯಾಗುವ ಕನಸು ಕಾಣಬಹುದೇನೋ. ಆದರೆ, ಕಾಂಗ್ರೆಸ್ಸಿನ ಇತಿಹಾಸದ ಪುಸ್ತಕಗಳಲ್ಲಿ ಇಂತಹ ಅಧ್ಯಾಯಗಳು ಮಾತ್ರ ಶಾಶ್ವತವಾಗಿ ದಾಖಲಾಗಿಬಿಟ್ಟಿವೆ.

3

ಸ್ವಲ್ಪಮಟ್ಟಿಗೆ ಕಾಂಗ್ರೆಸ್ಸಿನ ಎದೆಯಲ್ಲಿ ಅವಲಕ್ಕಿ ಕುಟ್ಟಿದ್ದು ಅಟಲ್ಜೀಯವರ ಕಾಲಾವಧಿಯೇ. ಆದರೆ, ಅಟಲ್ಜಿಯವರಿಗೇ ಅರಿವಾಗದಂತೆ ಅವರಿಂದಲೂ ಸಕರ್ಾರವನ್ನು ಕಸಿದುಬಿಟ್ಟಿತಲ್ಲ ಕಾಂಗ್ರೆಸ್ಸು. ಮೆಚ್ಚಬೇಕಾದ್ದೇ. ಆದರೆ, ಈಗ ಬಂದಿರೋದು ನರೇಂದ್ರಮೋದಿ. ಅವರಿಗೆ ಕಾಂಗ್ರೆಸ್ಸಿನ ಯಾವ ತಂತ್ರಗಳೂ ಹೊಸತಲ್ಲ. ಇತಿಹಾಸವನ್ನು ಮರೆತವರೂ ಅಲ್ಲ. ಮೂರು ರಾಜ್ಯಗಳನ್ನು ಗೆದ್ದೊಡನೆ ಅದನ್ನು ಬಂಡವಾಳವಾಗಿಸಿಕೊಂಡು ಮುಂದಿನ ಗೆಲುವಿಗೆ ಮುನ್ನುಡಿ ಬರೆಯಬೇಕೆಂದು ಅತ್ತ ಕಾಂಗ್ರೆಸ್ಸು ಪ್ರಯತ್ನಿಸುತ್ತಿದ್ದರೆ ಮೋದಿ ತಮ್ಮ ಅನುಯಾಯಿಗಳಲ್ಲಿ ಈ ಕುರಿತಂತೆ ಹುಟ್ಟಿದ ಆತಂಕವನ್ನು ಬಂಡವಾಳವಾಗಿಸಿಕೊಂಡು ಹೊಸ ಭಾಷ್ಯ ಬರೆಯಲು ಸಿದ್ಧವಾಗಿಯೇ ನಿಂತಿದ್ದರು. ಹಾಗೆಯೇ ಆಯ್ತು ಕೂಡ. ಮೊದಲ ಮೂನರ್ಾಲ್ಕು ದಿನ ಹೆಜ್ಜೆ ಹಿಂದಿಟ್ಟಂತೆ ಕಂಡ ಮೋದಿ ಆನಂತರ ಬಲವಾಗಿಯೇ ಮುನ್ನುಗ್ಗಿದರು. ಈಗ ನೋಡಿ, ಕಾಂಗ್ರೆಸ್ಸು ಮತ್ತು ಪರಿವಾರ ಬಾಲ ಮುದುರಿಕೊಂಡು ಬಿದ್ದಿದೆ. ಸುಮಾರು 2 ವರ್ಷಗಳ ಪ್ರಯಾಸದಿಂದ ಹಿಡಿದುಕೊಂಡು ಬಂದ ಕ್ರಿಶ್ಚಿಯನ್ ಮಿಶೆಲ್ ಸ್ಫೋಟಕ ಸಂಗತಿಗಳನ್ನು ಬಾಯ್ಬಿಡುತ್ತಿದ್ದಾನಲ್ಲದೇ ಸೋನಿಯಾ, ರಾಹುಲ್ರು ಚುನಾವಣೆ ಪ್ರಚಾರಕ್ಕೆ ಹೋದೆಡೆಯಲ್ಲೆಲ್ಲಾ ಜನ ಪ್ರಶ್ನಿಸುವುದಕ್ಕೆ ಬೇಕಾದ ಅನೇಕ ಸಂಗತಿಗಳನ್ನು ನೀಡುತ್ತಿದ್ದಾರೆ. ದೇಶದ ಸುರಕ್ಷತೆಯನ್ನು ಬಲಿಕೊಟ್ಟು ತಮ್ಮ ಪರಿವಾರದ ಸಿರಿವಂತಿಕೆಯನ್ನು, ಅಹಮಿಕೆಯನ್ನು ಉಳಿಸಿಕೊಳ್ಳಲು ಅವರು ಮಾಡಿದ ಪ್ರಯತ್ನವೆಲ್ಲಾ ಈಗ ಜಗಜ್ಜಾಹೀರಾಗಿದೆ. ಚುನಾವಣಾ ಫಲಿತಾಂಶದ ನಂತರ ಮೆರೆದಾಡಿದ್ದ ರಾಹುಲ್ ಈಗ ಮಾತನಾಡಲಿಕ್ಕೂ ಕಾಣದ ಸ್ಥಿತಿಗೆ ಹೋಗಿದ್ದಾನೆ. ಸ್ವತಃ ಸೋನಿಯಾ ಮತ್ತು ಆಕೆಯ ಅಹ್ಮದ್ ಪಟೇಲರಾದಿಯಾದ ಆಪ್ತ ಬಳಗ ಶಾಂತವಾಗಿಬಿಟ್ಟಿದೆ. ರಫೇಲ್ ಬಾಣ ತಿರುಗಿ ಬಂದು ಕಾಂಗ್ರೆಸ್ಸಿಗೆ ಒಂದೆಡೆ ಚುಚ್ಚುತ್ತಿದ್ದರೆ ಮತ್ತೊಂದೆಡೆ ಹೆಲಿಕಾಪ್ಟರಿನ ಹಗರಣ ತಿನ್ನುತ್ತಿದೆ. ಈಗ ಮೋದಿ ವಿಷಯ ಕೊಡುತ್ತಿದ್ದಾರೆ ಕಾಂಗ್ರೆಸ್ಸು ಅದಕ್ಕೆ ಉತ್ತರಿಸುತ್ತಿದೆ.

4

ಕಾಂಗ್ರೆಸ್ಸು ವೋಟು ಗಳಿಸಲು ಜಾತಿಯ ವಿಷಬೀಜದ ಬೆಳೆ ತೆಗೆಯುತ್ತದೆ. ಮೋದಿ ರಾಷ್ಟ್ರೀಯತೆಯ ಬೀಜವನ್ನು ಬಿತ್ತಿ ಜನರನ್ನು ಒಗ್ಗೂಡಿಸುತ್ತಾರೆ. ಎರಡು ದಿನಗಳ ಹಿಂದೆ ಅಂಡಮಾನ್ ನಿಕೋಬಾರ್ಗೆ ಹೋಗಿದ್ದಲ್ಲದೇ ಗುಲಾಮಿತನದ ಸಂಕೇತವಾಗಿದ್ದ ದ್ವೀಪಗಳ ಹೆಸರನ್ನು ಬದಲಾಯಿಸಿದ ಮೋದಿ ಸಾವರ್ಕರ್ ಇದ್ದ ಜೈಲಿಗೂ ಭೇಟಿಕೊಟ್ಟು ಒಂದಷ್ಟು ಹೊತ್ತು ಕುಳಿತು ಬಂದಿದ್ದಾರೆ. ಈಗ ಗೊಂದಲಕ್ಕೆ ಸಿಲುಕಿರುವುದು ಕಾಂಗ್ರೆಸ್ಸು. ದೇಶವೆಲ್ಲಾ ಮೋದಿಯ ಈ ಪ್ರಯತ್ನದ ಗುಣಗಾನ ಮಾಡುತ್ತಿದ್ದರೆ ಕಾಂಗ್ರೆಸ್ಸು ಸಾವರ್ಕರ್ರನ್ನು ದೇಶದ್ರೋಹಿ ಎಂದು ಬಿಂಬಿಸಲು ಹರಸಾಹಸ ಮಾಡುತ್ತಿದೆ. ಮೇಲ್ನೋಟಕ್ಕೆ ಮೋದಿಯವರ ಗೆಲುವು ಎದ್ದುಕಾಣುತ್ತಿದೆ. ಇಷ್ಟೇ ಅಲ್ಲ. ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಮೋದಿಯ ಸಾಹಸದ ಗುಣಗಾನ ನಡೆಯುತ್ತಿದೆ. ಐದು ವರ್ಷದಲ್ಲಿ ಅವರು ಮಾಡಿದ ಕೆಲಸಗಳನ್ನು ಜನ ತಾವೇ ತಾವಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ಕಾಂಗ್ರೆಸ್ಸಿಗೆ ಕಂಟಕಪ್ರಾಯವಾಗಬಲ್ಲದು. 60 ವರ್ಷಗಳ ಉದ್ದಕ್ಕೂ ಕಾಂಗ್ರೆಸ್ಸು ಮಾಡಲಾಗದ್ದನ್ನು ಮೋದಿ ಐದೇ ವರ್ಷಗಳಲ್ಲಿ ಮಾಡಿದ್ದಾರೆಂಬುದು ಹೊಸ ವಾತಾವರಣವನ್ನೇ ಸೃಷ್ಟಿಸಲಿದೆ!

ನೆನಪಿಡಿ. ಈಗ ಮೋದಿಯ ಇನ್ನಿಂಗ್ಸ್ ಶುರುವಾಗಿದೆ. ಇನ್ನು ಮಲ್ಯ, ನೀರವ್ ಭಾರತಕ್ಕೆ ಮರಳೋದು ಬಾಕಿ ಇದೆ. ರಾಮಮಂದಿರದ ನಿರ್ಣಯಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಒಟ್ಟಾರೆ ಕದನ ಕುತೂಹಲದ ಘಟ್ಟ ತಲುಪುತ್ತಿದೆ. ನಾವೆಲ್ಲರೂ ಆ ಕದನದ ಪಾತ್ರಧಾರಿಗಳಾಗಲಿದ್ದೇವೆ.

Comments are closed.