ವಿಭಾಗಗಳು

ಸುದ್ದಿಪತ್ರ


 

ಎಡಪಂಥೀಯರ ಬಂಡವಾಳ ಬಯಲಾದಷ್ಟೂ ರಾಷ್ಟ್ರಕ್ಕೆ ಒಳ್ಳೆಯದೇ!

ಎಡಪಂಥೀಯರದ್ದು ವಿಚಿತ್ರವಾದ ಸಿದ್ಧಾಂತ. ತಮ್ಮವರು ಏನು ಮಾಡಿದರೂ ಸರಿಯೇ. ತಮ್ಮನ್ನೊಪ್ಪದವರು ಏನು ಮಾಡಿದರೂ ತಪ್ಪೇ. ಇದು ಇಂದಿನ ಚಿಂತನೆಯಲ್ಲ ಅವರದ್ದು. ಹುಟ್ಟಿದಾಗಿನಿಂದಲೂ ಹಾಗೆಯೇ. ಚೀನಾವನ್ನೇ ನೋಡಿ. ವೈರಸ್ಸನ್ನು ಜಗತ್ತಿಗೆ ಹಬ್ಬಿಸಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿ, ಕೋಟ್ಯಂತರ ಜನರ ಬದುಕನ್ನು ಧ್ವಂಸಗೊಳಿಸಿದ್ದು ಸರಿಯಾದ ಕ್ರಮ. ಆದರೆ ಅಕ್ಕಪಕ್ಕದ ರಾಷ್ಟ್ರಗಳು ತಮ್ಮ-ತಮ್ಮ ಗಡಿಯ ರಕ್ಷಣೆ ಮಾಡಿಕೊಳ್ಳುತ್ತಾ ಇತರ ರಾಷ್ಟ್ರಗಳೊಂದಿಗೆ ಸಹಕಾರ ವೃದ್ಧಿಸಿಕೊಳ್ಳುವುದನ್ನು ಅದು ತಪ್ಪೆನ್ನುತ್ತದೆ. ತಾನು ಟಿಬೆಟ್ ನುಂಗಿದ್ದು ತಪ್ಪಲ್ಲ. ಆದರೆ ಭಾರತ ತನ್ನದ್ದೇ ಅಂಗವಾಗಿರುವ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುತ್ತೇನೆಂದರೆ ತಪ್ಪು. ತನ್ನ ದೇಶದಲ್ಲಿ ಮುಸಲ್ಮಾನರ ಬದುಕನ್ನು ನರಕಕ್ಕಿಂತಲೂ ಕಡೆಯಾಗಿಸಿದ ಚೀನಾ ಭಾರತೀಯರು 370ನೇ ವಿಧಿಯನ್ನು ಕಿತ್ತೊಗೆದು ಕಾಶ್ಮೀರದ ಮುಸಲ್ಮಾನರನ್ನು ಪ್ರತ್ಯೇಕತಾವಾದಿಗಳ ಕಬಂಧ ಬಾಹುವಿನಿಂದ ಬಿಡಿಸಿ ತಂದಿದ್ದು ಅಕ್ಷಮ್ಯವಂತೆ. ಇದೇ ಚಾಳಿ ಈ ದೇಶದ ಕಮ್ಯುನಿಸ್ಟರಿಗೂ ಇದೆ. ಒಂದಷ್ಟು ಘಟನೆಗಳನ್ನು ಈ ಹಿನ್ನೆಲೆಯಲ್ಲೇ ನಿಮ್ಮ ಮುಂದಿಡುವ ಪ್ರಯತ್ನ. ಇತ್ತೀಚೆಗೆ ಸುಷಾಂತ್ಸಿಂಗ್ ಸುದ್ದಿಯಲ್ಲಿರುವ ಚಿತ್ರನಟ. ಆತ ನಿಗೂಢವಾಗಿ ಸಾವನ್ನಪ್ಪಿದ್ದು ಮುಂಬೈ ಪೊಲೀಸರ ಪಾಲಿಗೆ ಸಹಜ ಸಾವು ಎನಿಸಿಕೊಂಡಿತ್ತು. ಆದರೆ ಮಾಧ್ಯಮಗಳು ಹಿಂದೆ ಬಿದ್ದು ಆ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಲೇಬೇಕೆಂಬ ಆಗ್ರಹ ಮಂಡಿಸಿದವು. ಈ ಪ್ರಕರಣದಲ್ಲಿ ಶಿವಸೇನಾ ಮುಖ್ಯಸ್ಥನೊಬ್ಬ ಭಾಗಿಯಾಗಿರುವ ಅನುಮಾನವಿದ್ದುದರಿಂದ ಹೇಗಾದರೂ ಮಾಡಿ ಸುಷಾಂತ್ ಸಾವಿಗೆ ನ್ಯಾಯ ದೊರಕಬೇಕೆಂದರೆ ಪ್ರಕರಣ ಮುಂಬೈ ಪೊಲೀಸರಿಂದ ದಾಟಲ್ಪಡಲೇಬೇಕಿತ್ತು. ಇಡಿಯ ದೇಶ ಈ ಪರವಾಗಿ ದನಿ ಎತ್ತಿತು. ಪರಿಣಾಮ ಕೋಟರ್ಿನ ಮೂಲಕ ಪ್ರಕರಣ ಕಡ್ಡಾಯವಾಗಿ ಸಿಬಿಐಗೆ ವಗರ್ಾವಣೆಯಾಯ್ತು. ಅಷ್ಟರೊಳಗೆ ಪ್ರಕರಣದ ಸಾಕ್ಷ್ಯವನ್ನು ಮುಚ್ಚಿಹಾಕಲು, ಪ್ರಕರಣದ ವಿಚಾರಣೆ ನಡೆಸಲೆತ್ನಿಸಿದ ಬಿಹಾರ್ ಪೊಲೀಸರ ಉತ್ಸಾಹ ತಗ್ಗಿಸಲು ಮುಂಬೈ ಪೊಲೀಸರು ಮಾಡಿದ ಸಾಹಸ ಅಂತಿಂಥದ್ದಲ್ಲ. ಬಿಹಾರ್ ಪೊಲೀಸರು ವಿಚಾರಣೆಗೆಂದು ಬಂದೊಡನೆ ಬೇಕಂತಲೇ 14 ದಿನಗಳ ಕಾಲ ಅವರನ್ನು ಕ್ವಾರೆಂಟೈನ್ಗೆ ತಳ್ಳಲಾಯ್ತು. ಪ್ರಕರಣದ ವಿಚಾರಣೆಯಲ್ಲಿ ಯಾವ ದೋಷವೂ ಆಗಿಲ್ಲವೆಂದು ತೋರ್ಪಡಿಸಲು ಹರಸಾಹಸ ಮಾಡಲಾಯ್ತು. ಆಗ ಮಾಧ್ಯಮಗಳು ತಾವೇ ತನಿಖೆಯನ್ನು ಕೈಗೆತ್ತಿಕೊಂಡು ಅನೇಕ ಸೂಕ್ಷ್ಮ ಸಂಗತಿಗಳನ್ನು ಹೊರಗೆಡವುತ್ತಿದ್ದಂತೆ ಮುಂಬೈ ಪೊಲೀಸರು ಕಕ್ಕಾಬಿಕ್ಕಿಯಾದರು. ಮುಂದೇನು ಮಾಡಬೇಕೆಂದು ತೋಚದೇ ಇರುವಾಗಲೇ ಸಿಬಿಐ ಮುಂಬೈಗೆ ಧಾವಿಸಿತು. ಮಾಧ್ಯಮಗಳೂ ಕೂಡ ಒಂದು ಹೆಜ್ಜೆ ಹಿಂದೆ ಬರದೇ ಪ್ರಕರಣದಲ್ಲಿರುವ ಅನೇಕ ಸೂಕ್ಷ್ಮ ಸಂಗತಿಗಳನ್ನು ಬಯಲಿಗೆಳೆಯಲಾರಂಭಿಸಿದವು. ಆಗಲೇ ಇಡೀ ದೇಶಕ್ಕೆ ಕಂಟಕವಾದ ಡ್ರಗ್ ಮಾಫಿಯಾ ಹೊರಬಂದದ್ದು. ಈ ಮಾಫಿಯಾದಲ್ಲಿ ಬಲುದೊಡ್ಡ ಪಾತ್ರ ವಹಿಸಿರುವುದು ಬಾಲಿವುಡ್ನ ನಟನಟಿಯರೇ ಎಂಬುದು ಈ ಹಂತದಲ್ಲೇ ಬೆಳಕಿಗೆ ಬಂತು. ಇವರದ್ದೇ ಪ್ರಭಾವದಿಂದಾಗಿ ಕನ್ನಡದ ನಟನಟಿಯರೂ ಈ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದು ಈಗ ಬೆಳಕಿಗೆ ಬಂದಿದೆ. ಇಷ್ಟೆಲ್ಲಾ ಇರುವಾಗ್ಯೂ ರಾಜ್ದೀಪ್ ಸರದೇಸಾಯಿಯಂತಹ ಎಡಪಂಥೀಯ ಪತ್ರಕರ್ತರು ಮಾಧ್ಯಮಗಳ ಈ ಹೋರಾಟದ ಕುರಿತಂತೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ತಾವೇ ವಿಚಾರಣೆ ನಡೆಸುವ ಮಾಧ್ಯಮಗಳ ಈ ಧಾವಂತಿಕೆಯನ್ನು ಅವರು ವಿರೋಧಿಸುತ್ತಾರೆ. ಅಚ್ಚರಿಯೆಂದರೆ ಇವರುಗಳೇ ಜಸ್ಟೀಸ್ ಲೋಯಾ ಸಾವಿಗೆ ಹತ್ಯೆಯ ರಂಗು ಕೊಟ್ಟಿದ್ದು. ಸ್ವತಃ ಲೋಯಾ ಕುಟುಂಬದವರೇ ಇದು ಕೊಲೆಯಲ್ಲ. ಆತ್ಮಹತ್ಯೆ ಎಂದು ಒತ್ತಿ-ಒತ್ತಿ ಹೇಳುವಾಗಲೂ ಎಡಪಂಥೀಯ ಪತ್ರಕರ್ತರೂ ಮಾತ್ರ ಬಿಟ್ಟೂ ಬಿಡದೇ ಅದನ್ನು ಕೊಲೆ ಎಂದು ಸಾಬೀತುಪಡಿಸುವ ಹಠಕ್ಕೆ ಬಿದ್ದಿದ್ದರು. ಅದೃಷ್ಟವಶಾತ್ ನ್ಯಾಯಾಲಯ ಕೊನೆಯಲ್ಲಿ ಜಸ್ಟೀಸ್ ಲೋಯಾ ಸಾವಿನಲ್ಲಿ ಮೋದಿಯಾಗಲೀ ಅಮಿತ್ಶಾ ಆಗಲೀ ಯಾವ ಪಾತ್ರ ವಹಿಸಿಲ್ಲವೆಂದು, ಅದು ಸಹಜ ಸಾವೆಂದು ತೀಪರ್ು ಕೊಟ್ಟಿತು. ಅಷ್ಟಾದರೂ ಅವರುಗಳಿಗೆ ಸಮಾಧಾನವಿಲ್ಲ. ಈಗಲೂ ಅದೇ ವಿಚಾರವನ್ನು ಕೆದಕುತ್ತಾ ಸ್ವತಃ ಪ್ರಧಾನಮಂತ್ರಿಯೇ ಈ ಹತ್ಯೆಯ ಸಂಚಿನಲ್ಲಿದ್ದಾರೆ ಎಂದು ಹೇಳಲೂ ಹಿಂಜರಿಯುವುದಿಲ್ಲ. ಆಗೆಲ್ಲಾ ಇದು ಮೀಡಿಯಾಗಳೇ ನಡೆಸುತ್ತಿರುವ ವಿಚಾರಣೆ ಎಂದು ಎಡಪಂಥೀಯರಿಗೆ ಅನ್ನಿಸಲೇ ಇಲ್ಲ. ಬಿಹಾರದ ಚುನಾವಣೆಗೆ ಸುಷಾಂತ್ನ ಹತ್ಯೆಯ ವಿಚಾರವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸುವ ಎಡಪಂಥೀಯ ಪತ್ರಕರ್ತರು ಮಹಾರಾಷ್ಟ್ರ ಚುನಾವಣೆಯಲ್ಲಿ ಜಸ್ಟೀಸ್ ಲೋಯಾ ಬಳಕೆಯಾಗಿದ್ದನ್ನು ಮತ್ತು ಮೋದಿ ಕಳೆಗುಂದಿಸುವಲ್ಲಿ ಅದನ್ನು ತಾವೂ ಬಳಸಿದ್ದರ ಕುರಿತಂತೆ ಚಕಾರವೆತ್ತಲಿಲ್ಲ.

ಕಂಗನಾ ವಿಷಯದಲ್ಲೂ ಹಾಗೆಯೇ ಆಯ್ತು. ಶಿವಸೇನೆಯ ಸಂಜಯ್ ರೌತ್ ಆಕೆಯನ್ನು ಮುಂಬೈಯಲ್ಲಿ ಇರುವಂತಿಲ್ಲ ಎಂದು ತಾಕೀತು ಮಾಡಿದ. ಕಂಗನಾಳ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಶಿವಸೈನಿಕರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕಿತ್ತೇನೋ. ಆಕೆ ತಲೆಕೆಡಿಸಿಕೊಳ್ಳಲಿಲ್ಲ. ಝಾನ್ಸಿ ರಾಣಿಯ ಮೇಲಿನ ತನ್ನ ಸಿನಿಮಾ ಹೊರಬರುವಾಗ ರಾಜಸ್ತಾನದ ಕಣರ್ಿ ಸೇನಾ ಪುಂಡಾಟಿಕೆ ಮಾಡಹೊರಟಿತ್ತಲ್ಲ ಆಗ ಕಚ್ಚೆ ಕಟ್ಟಿ ನಿಂತ ಈ ಹೆಣ್ಣುಮಗಳು, ‘ನಾನೂ ರಜಪೂತಳೇ. ತಾಕತ್ತಿದ್ದರೆ ಸಿನಿಮಾ ನಿಲ್ಲಿಸಿ, ನೋಡಿಬಿಡುತ್ತೇನೆ’ ಎಂದಿದ್ದಳು. ಕಣರ್ಿ ಸೇನಾ ಮಾತೂ ಆಡದೇ ತೆಪ್ಪಗಾಯ್ತು. ಈ ಬಾರಿಯೂ ಹಾಗೆಯೇ. ಮುಂಬೈ ಯಾರಪ್ಪನದೂ ಅಲ್ಲ. ಹೀಗಾಗಿ ತನ್ನನ್ನು ಓಡಿಸುವ ತಾಕತ್ತು ಯಾರಿಗೂ ಇಲ್ಲ ಎಂಬ ಹೇಳಿಕೆಯನ್ನು ಆಕೆ ಮುಲಾಜಿಲ್ಲದೇ ಕೊಟ್ಟಳು. ‘ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತಾಗಿದೆ’ ಎಂಬ ಹೇಳಿಕೆ ಕೊಟ್ಟು ಉದ್ಧವ್ ಠಾಕ್ರೆಯ ಸಕರ್ಾರಕ್ಕೆ ಕೈಗನ್ನಡಿ ಹಿಡಿದಳು ಆಕೆ. ಮೈಯ್ಯಲ್ಲಾ ಪರಚಿಕೊಂಡ ಸಂಜಯ್ ರೌತ್ ಕಂಗನಾ ಪಾಕಿಸ್ತಾನಕ್ಕೆ ಹೋಗುವುದಿದ್ದರೆ ನಾನೇ ಹಣಕೊಟ್ಟು ಕಳಿಸಿಕೊಡುವೆ ಎಂದು ಹೇಳಿ ಮತ್ತಷ್ಟು ವಿವಾದವನ್ನು ಮೈಮೇಲೆಳೆದುಕೊಂಡ. ಏಕೆಂದರೆ ಪಿಒಕೆ ಭಾರತದ ಅಂಗ ಎಂದು ಹೇಳುತ್ತಿದ್ದ ಹಿಂದೂಪರ ಪಕ್ಷಗಳಲ್ಲಿ ಶಿವಸೇನೆಯೇ ಮುಖ್ಯಭೂಮಿಕೆಯಲ್ಲಿತ್ತು. ಈ ಹೇಳಿಕೆಗೆ ಪ್ರತಿಕ್ರಿಯಿಸುವ ಭರದಲ್ಲಿ ಆತ ಅದನ್ನು ಪಾಕಿಸ್ತಾನಕ್ಕೆ ಬರೆದುಕೊಟ್ಟುಬಿಟ್ಟಿದ್ದ. ಜನರ ಬೈಗುಳಗಳನ್ನು ತಡೆಯಲಾಗದೇ ಮತ್ತೊಂದು ತಪ್ಪು ಹೆಜ್ಜೆಯನ್ನಿಟ್ಟು ಮಾಧ್ಯಮಗಳ ಮುಂದೆ ಕಂಗನಾಳನ್ನು ಅತ್ಯಂತ ಕೆಟ್ಟ ಪದಗಳಲ್ಲಿ ನಿಂದಿಸಿಬಿಟ್ಟ. ಮಾತೆತ್ತಿದರೆ ಸ್ತ್ರೀವಾದದ ಕುರಿತಂತೆ ಅರಚಾಡುತ್ತಾ ಹಿಂದೂಧರ್ಮದ ವಿರುದ್ಧ ಬೊಟ್ಟು ಮಾಡಿ ತೋರಿಸುವ ಎಡಪಂಥೀಯರು ಈಗೇಕೋ ಬಾಯಿಮುಚ್ಚಿ ಕುಳಿತಿದ್ದರು. ಈ ಹಿಂದೆ ಸುಷಾಂತ್ನ ಪ್ರಕರಣದ ಹಿನ್ನೆಲೆಯಲ್ಲಿ ಬಿಹಾರ್ ಪೊಲೀಸರನ್ನು, ಅಲ್ಲಿನ ಮುಖ್ಯಮಂತ್ರಿಯನ್ನು ನಿಂದಿಸಿದ್ದ ರಿಯಾ ಚಕ್ರವತರ್ಿಯನ್ನು ಬಿಹಾರ್ ಪೊಲೀಸ್ ಮುಖ್ಯಸ್ಥರು ತರಾಟೆಗೆ ತೆಗೆದುಕೊಂಡಾಗ ಇದೇ ಎಡಪಂಥೀಯ ಪಟಾಲಂ ಉರಿದುಬಿದ್ದಿತ್ತು. ಬಿಹಾರದ ಪೊಲೀಸರು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿತ್ತು. ಈಗ ರಾಜಕೀಯ ನಾಯಕನೊಬ್ಬ ಕಂಗನಾಳ ವಿರುದ್ಧ ನಿಂದನೆಯ ಪದಗಳನ್ನು ಬಳಸಿದಾಗಲೂ ಅವರು ಮಾತ್ರ ತಲೆಕೆಡಿಸಿಕೊಂಡಿರಲಿಲ್ಲ.

ಕನರ್ಾಟಕದಲ್ಲೂ ಇಂಥವರಿಗೆ ಕೊರತೆ ಇಲ್ಲ. ಅಗತ್ಯಕ್ಕೆ ತಕ್ಕಂತೆ ಮಾತುಗಳನ್ನು ಬದಲಾಯಿಸುವ, ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಮಂದಿ ಬೇಕಾದಷ್ಟಿದ್ದಾರೆ. ಗೌರಿ ಹತ್ಯೆಯ ಕುರಿತಂತೆ ಅಷ್ಟೆಲ್ಲಾ ಅರಚಾಡಿದವರು ಒಂದಾದ ಮೇಲೊಂದು ಹಿಂದೂಗಳ ಹತ್ಯೆಯಾಯಿತಲ್ಲ, ಆಗ ಮಾತನಾಡಲೇ ಇಲ್ಲ. ಡಿ.ಜೆ ಹಳ್ಳಿಯ ಪ್ರಕರಣದಲ್ಲಂತೂ ಹಿಂದೂಗಳ ಮನೆಯನ್ನೇ ಹುಡು-ಹುಡುಕಿ ಧ್ವಂಸಗೊಳಿಸಲಾಯ್ತು. ಆ ಮೂಲಕ ಆ ಭಾಗದ ಹಿಂದೂಗಳಲ್ಲಿ ಭಯದ ವಾತಾವರಣವನ್ನು ಹುಟ್ಟಿಸಿ ಅವರೆಲ್ಲರೂ ಆ ಪ್ರದೇಶವನ್ನೇ ಬಿಟ್ಟು ಮುಸಲ್ಮಾನರಿಗೆ ಕಾಣಿಕೆಯಾಗಿ ಕೊಟ್ಟು ಹೋಗಬೇಕೆಂಬ ರೀತಿಯಲ್ಲೆ ದಂಗೆಗಳನ್ನು ನಡೆಸಲಾಯ್ತು. ಸ್ವತಃ ಶಾಸಕರನ್ನೆ ಬಿಡದ ಜನ ಇನ್ನು ಸಾಮಾನ್ಯರ ಕುರಿತಂತೆ ತಲೆಕೆಡಿಸಿಕೊಳ್ಳುವರೇನು? ಒಟ್ಟಾರೆ ಭಯದ ವಾತಾವರಣವನ್ನು ಸೃಷ್ಟಿಮಾಡಿ ಮುಸಲ್ಮಾನರ ವಿರುದ್ಧ ಯಾರೂ ಮಾತನಾಡದಂತೆ ಮಾಡಿಬಿಟ್ಟರಲ್ಲಾ, ಧರಣಿಕೋರರಲ್ಲಿ ಒಬ್ಬರಾದರೂ ಟೌನ್ಹಾಲ್ ಮುಂದೆ ಕಾಣಿಸಿಕೊಂಡರಾ? ದೂರದ ಬಿಹಾರದಲ್ಲಿ, ಉತ್ತರ ಪ್ರದೇಶದಲ್ಲಿ ಒಂದಿಬ್ಬರು ಮುಸಲ್ಮಾನರ ಹತ್ಯೆಯಾದಾಗ ಇಲ್ಲಿ ಅಸಹಿಷ್ಣುತೆಯ ಕೂಗೆಬ್ಬಿಸಿ ಅರಚಾಡಿದವರ್ಯಾರೂ ಈ ಹೊತ್ತಿನಲ್ಲಿ ಮಾತೇ ಆಡಲಿಲ್ಲವಲ್ಲಾ. ಈಗ ಅವರಿಗೆ ಅಸಹಿಷ್ಣುತೆಯ ಭೂತ ಕಾಣಲೇ ಇಲ್ಲವೇ? ಅದರಲ್ಲೂ ದಲಿತ ಶಾಸಕನ ಮೇಲಿನ ಮುಸಲ್ಮಾನರ ಈ ಅತ್ಯಾಚಾರ ಎಡಪಂಥೀಯರ ಕಣ್ ತಪ್ಪಿದ್ದಾದರೂ ಹೇಗೆ? ಪ್ರಶ್ನೆ ಕೇಳಬೇಕಲ್ಲ.

ಇವರ ದ್ವಂದ್ವ ನೀತಿ ಇಲ್ಲಿಗೇ ಮುಗಿಯುವುದಿಲ್ಲ. ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಸಾಧುಗಳಿಬ್ಬರನ್ನು ಬರ್ಬರವಾಗಿ ಕೊಲ್ಲಲಾಯ್ತು. ಪೊಲೀಸರ ರಕ್ಷಣೆಯಲ್ಲಿದ್ದ ಸಾಧುಗಳು ತಮ್ಮನ್ನು ತಾವು ಸುರಕ್ಷಿತರೆಂದೇ ಭಾವಿಸಿದ್ದರು. ದುರಂತವೆಂದರೆ ಅದೇ ಪೊಲೀಸರು ಆ ಸಾಧುಗಳನ್ನು ದಂಗೆಕೋರರಿಗೆ ಒಪ್ಪಿಸಿದ್ದರು. ಇಡಿಯ ಪ್ರಕರಣದ ಹಿಂದೆ ಎಡಪಂಥೀಯರ ಪಡೆಯೊಂದಿತ್ತು ಎಂಬುದನ್ನು ಈಗ ಸತ್ಯಶೋಧಕ ಸಮಿತಿ ಹೊರಹಾಕಿದೆ. ಯಾವೊಬ್ಬನೂ ತುಟಿಪಿಟಿಕ್ ಎನ್ನುತ್ತಿಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳುವ ಹೋರಾಟವಿದ್ದಾಗ ಮಾತ್ರ ಬಾಯಿ ಬಿಡುತ್ತಾ ಅದಕ್ಕೆ ದಲಿತ ಸಂವೇದನೆಯ, ಸ್ತ್ರೀ ಸಂವೇದನೆಯ ಬಣ್ಣ ಬಳಿಯುತ್ತಾ ಕೂರುವ ಈ ಮಂದಿ ನಿಜವಾಗಿಯೂ ದಲಿತರಿಗೆ ಆಘಾತವಾದಾಗ, ಹೆಣ್ಣುಮಕ್ಕಳಿಗೆ ತೊಂದರೆಯಾದಾಗ ಬಾಯಿ ಬಿಡುವುದೇ ಇಲ್ಲ. ಇವರಿಗೆಲ್ಲ ಈಗಿರುವ ಒಂದೇ ಸಮಸ್ಯೆ ಎಂದರೆ ಅವರು ಆಶಾಭಾವನೆಯಿಂದ ನೋಡುತ್ತಿದ್ದ, ಮುಂದೊಂದು ದಿನ ತಮ್ಮೆಲ್ಲರ ಚಟುವಟಿಕೆಯ ಕೇಂದ್ರವಾಗಿ ನಿಲ್ಲುತ್ತದೆಂದು ಕನಸು ಕಾಣುತ್ತಿದ್ದ ಚೀನಾ ಕುಸಿದು ಬೀಳುತ್ತಿದೆ. ಅದಾಗಲೇ ಭಾರತ ಗಡಿಯಲ್ಲಿ ಪ್ರತಾಪ ತೋರಿರುವುದಲ್ಲದೇ 1962ರಲ್ಲಿ ಕಳೆದುಕೊಂಡಿದ್ದ ಕೆಲವು ಭೂಭಾಗಗಳನ್ನು ವಶಪಡಿಸಿಕೊಂಡಿರುವ ಸುದ್ದಿಯೂ ಬಂದಿದೆ. ರಷ್ಯಾದಲ್ಲಿ ಭಾರತದ ರಕ್ಷಣಾ ಸಚಿವರನ್ನು ಕಾಡಿ ಭೇಟಿ ಮಾಡಿದ ಚೀನಾದ ರಕ್ಷಣಾ ಸಚಿವರು ‘ಭಾರತ ನಮ್ಮ ಗಡಿ ಭಾಗದೊಳಕ್ಕೆ ನುಸುಳಲು ನಾವು ಬಿಡುವುದೇ ಇಲ್ಲ’ ಎಂಬ ಹೇಳಿಕೆ ಕೊಟ್ಟಿದ್ದಾರೆ. ಕಳೆದ ಎರಡು ದಶಕಗಳಿಂದ ಈ ಮಾತನ್ನು ನಾವು ಹೇಳುತ್ತಿದ್ದೆವು. ಭಾರತೀಯ ಸೇನಾನಿನಗಳ ಮನೋಬಲ ಬಲು ಎತ್ತರದಲ್ಲಿದೆ. ಚೀನಾ ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ತನ್ನ ಪ್ರತಾಪವನ್ನು ತೋರಿಸಲು ಸಾಧ್ಯವಾಗದಂತೆ ಭಾರತವೇ ಚೀನಾವನ್ನು ಗಡಿಯಲ್ಲಿ ಕಟ್ಟಿ ಹಾಕಿದೆ. ಅದೇ ವೇಳೆಗೆ ಮುಸಲ್ಮಾನ ರಾಷ್ಟ್ರಗಳೊಂದಿಗೂ ಸೇರಿ ಜಗತ್ತಿನ ಅನೇಕ ರಾಷ್ಟ್ರಗಳೊಂದಿಗೆ ತನ್ನ ಬಾಂಧವ್ಯವನ್ನು ಭಾರತ ಬಲಗೊಳಿಸಿಕೊಳ್ಳುತ್ತಲೇ ನಡೆದಿದೆ. ಆಂತರಿಕವಾಗಿಯೂ ಚೀನಾ ಕುಸಿಯುವ ವಾತಾವರಣ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗಾಗಿಯೇ ಚಡಪಡಿಸುತ್ತಿರುವ ಚೀನಾ ಭಾರತದೊಳಕ್ಕೆ ದಂಗೆಯನ್ನು ಹಬ್ಬಿಸಲು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದೆ. ಸಹಜವಾಗಿಯೇ ಅವರ ಮುಂದಿರುವ ಆಶಾಕಿರಣ ಕಾಂಗ್ರೆಸ್ಸು ಮತ್ತು ಎಡಪಂಥೀಯರು ಮಾತ್ರ. ಜೊತೆಗೆ ಜಿಹಾದಿಗಳು. ಇತ್ತೀಚೆಗೆ ತಾನೇ ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆ ರಾಹುಲ್ ನೇತೃತ್ವದ ಕಾಂಗ್ರೆಸ್ಸು ಗಡಿ ವಿಚಾರವನ್ನು ಮುಂದಿಟ್ಟುಕೊಂಡು ನರೇಂದ್ರಮೋದಿಯ ವಿರುದ್ಧ ಆಂದೋಲನ ನಡೆಸಲು ಸಿದ್ಧತೆ ಮಾಡಿಕೊಂಡಿದೆ ಎಂಬರ್ಥದ ಟ್ವೀಟ್ ಮಾಡಿತ್ತು. ಇಷ್ಟು ದಿನ ಪಾಕಿಸ್ತಾನದ ಪತ್ರಿಕೆಗಳು ರಾಹುಲ್ನನ್ನು ಸಂಭ್ರಮಿಸುತ್ತಿದ್ದವು. ಈಗ ಚೀನಾದ ಪತ್ರಿಕೆಗಳೂ ಕೂಡ. ಎಲ್ಲ ಚುಕ್ಕಿಗಳೂ ಸೇರಿದರೆ ಭಾರತವನ್ನು ಚೂರುಗೊಳಿಸಬೇಕೆಂಬ ಇವರುಗಳ ವಿದ್ರೋಹದ ಚಿಂತನೆ ಕಣ್ಣಿಗೆ ರಾಚುವಂತಿದೆ. ಆದರೆ ಭಾರತೀಯರು ಹಿಂದೆಂದಿಗಿಂತಲೂ ಹೆಚ್ಚು ಜಾಗೃತವಾಗಿರುವುದರಿಂದ ಈಗೀಗ ಇವರ ಮನೋಗತಗಳೆಲ್ಲಾ ಬಯಲಿಗೆ ಬರುತ್ತಿವೆ. ಇದು ಭಾರತದ ಪುನರ್ ನಿಮರ್ಾಣದ ಪರ್ವಕಾಲ. ದೇಶವಿರೋಧಿ ಚಿಂತನೆ ನಡೆಸುವ ಇವರುಗಳ ಬಂಡವಾಳ ಹೆಚ್ಚು ಬಯಲಿಗೆ ಬಂದಷ್ಟೂ ಭಾರತ ಬಲುಬೇಗ ನಿಮರ್ಾಣಗೊಳ್ಳುತ್ತದೆ.

Comments are closed.