ವಿಭಾಗಗಳು

ಸುದ್ದಿಪತ್ರ


 

ಎಲ್ಲರ ಕೇಡು ಬಯಸಿದವರಿಗೆ ಎಂಥ ಗತಿ ಬಂತಪ್ಪ!

ಕಮ್ಯುನಿಸ್ಟರ ಚುನಾವಣಾ ಇತಿಹಾಸ ಹೇಳುವುದು ನನ್ನ ಉದ್ದೇಶವಲ್ಲ. ಆದರೆ ಇತರರ ಕೈಗಳನ್ನು ಕೊಳಕೆಂದು ಜರಿಯುವ ಇವರ ಮುಖಗಳೇ ಅದೆಷ್ಟು ಕೊಳಕಾಗಿವೆಯೆಂದು ತೋರಿಸಬೇಕಷ್ಟೇ! ಕೇರಳ-ಬಂಗಾಳ-ತ್ರಿಪುರಾಗಳಲ್ಲೆಲ್ಲಾ ಇದೇ ಮಾದರಿಯನ್ನು ಅನುಸರಿಸಿದವರು ಇವರು. ಅಧಿಕಾರಕ್ಕೇರಲು ಕೋಮುವಾದಿ ಮುಸ್ಲೀಂ ಲೀಗಿನೊಂದಿಗೆ, ಬಂಡವಾಳಶಾಹಿಗಳ ಪರವಿರುವ ಕಾಂಗ್ರೆಸ್ಸಿನೊಂದಿಗೂ ಕೈ ಜೋಡಿಸಲು ಹಿಂದೆ ಮುಂದೆ ನೋಡದವರಿವರು. ವಿರೋಧ ಪಕ್ಷದಲ್ಲಿ ಕುಳಿತೊಡನೆ ಅನವಶ್ಯಕ ದಂಗೆಗಳು, ಕದನಗಳ ಮೂಲಕ ಆಳುವ ಪಡೆಯನ್ನು ದುರ್ಬಲಗೊಳಿಸಿ ಕೇಕೆ ಹಾಕುವುದು ಇವರ ರೀತಿ. ಮೊನ್ನೆ-ಮೊನ್ನೆ ಪ್ರಾವಿಡೆಂಟ್ ಫಂಡ್ನ ವಿಚಾರವಾಗಿ ಬಟ್ಟೆ ಕಾರ್ಮಿಕರನ್ನು ಒಟ್ಟುಗೂಡಿಸಿ ಬೆಂಗಳೂರಿನಲ್ಲಿ ಅಸಹನೀಯ ವಾತಾವರಣ ನಿರ್ಮಿಸಿದರಲ್ಲ; ಇದು ಇದರದ್ದೇ ಮುಂದುವರಿದ ಭಾಗ ಅಷ್ಟೇ!

Fall_of_Communism_in_Albania

‘ಕೇಡುಗಾಲ ಬಂದರೆ ಸಮಾಜ ಜಾಗೃತಗೊಳ್ಳುತ್ತದೆ. ಮತ್ತು ಸಂಕಷ್ಟಗಳೇ ಜನರನ್ನು ಒಂದುಗೂಡಿಸುತ್ತವೆ’. 1970 ರ ಕಲ್ಕತ್ತಾ ಅಧಿವೇಶನದಲ್ಲಿ ಭಾರತೀಯ ಕಮ್ಯುನಿಸ್ಟ್ ಪಾಟರ್ಿ (ಮಾಕ್ಸರ್್, ಲೆನಿನ್) ಸ್ಥಾಪಿತ ಸತ್ಯವಾಗಿ ಸ್ವೀಕರಿಸಿದ ಮಾತು. ಅದರರ್ಥ ಬಲು ಸ್ಪಷ್ಟ. ಎಷ್ಟೆಷ್ಟು ಸಮಸ್ಯೆಗಳು ಮೈಮೇಲೆ ಎರಗುತ್ತವೆಯೋ ಜನ ಅಷ್ಟರ ಮಟ್ಟಿಗೆ ಜೊತೆಯಾಗುತ್ತಾರೆ. ಹೀಗೆ ಒಟ್ಟುಗೂಡಿದ ಜನರ ನಾಯಕತ್ವ ವಹಿಸಿ ಅಧಿಕಾರದ ಚುಕ್ಕಾಣಿ ಹಿಡಿದುಬಿಡಬಹುದು! ಅಂದರೆ ಎಲ್ಲಿಯವರೆಗೆ ಸಮಸ್ಯೆಗಳು ಪರಿಹಾರ ಕಾಣುವುದಿಲ್ಲವೋ ಅಲ್ಲಿಯವರೆಗೆ ಕುಚರ್ಿ ಭದ್ರ. ಹೀಗಾಗಿಯೇ ಕಳೆದ 70 ವರ್ಷಗಳಿಂದ ಅನೇಕ ಹಳ್ಳಿಗಳಿಗೆ ರಸ್ತೆಯಿಲ್ಲ, ವಿದ್ಯುತ್ ಸೌಲಭ್ಯಗಳಿಲ್ಲ, ಶಾಲೆ-ಆಸ್ಪತ್ರೆಗಳಿಲ್ಲ. ಕಮ್ಯುನಿಸ್ಟರದೇ ಆಳ್ವಿಕೆ ಹೊಂದಿದ್ದ ಬಂಗಾಳ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಗಣಿಸಲ್ಪಡುತ್ತದೆ. ಏಕೆಂದರೆ ಜನ ಬುದ್ಧಿವಂತರಾದರೆ ಕುಚರ್ಿ ಕಸಿಯುತ್ತಾರೆ!
ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಈ ಸಿದ್ಧಾಂತ ಹಳ್ಳ ಹಿಡಿಯಿತು. ಅವರು ಜನರ ಕೈಗೆ ಮೊಬೈಲ್ ಕೊಟ್ಟರು. ಕೂತಲ್ಲಿಯೇ ರೈತರು ವ್ಯವಹಾರ ಮಾಡುವ ವ್ಯವಸ್ಥೆ ತಂದರು. ಸಿರಿವಂತರ ಮನವೊಲಿಸಿ ಸಿಲಿಂಡರಿನ ಸಬ್ಸಿಡಿ ತ್ಯಾಗ ಮಾಡಿಸಿ ಅದೇ ದುಡ್ಡಿನಲ್ಲಿ ಬಡವರ ಮನೆಗೆ ಗ್ಯಾಸ್ ತಲುಪಿಸಿದರು. ಕರೆಂಟಿನ ಮುಖ ನೋಡಿರದ ಹಳ್ಳಿಗಳಿಗೆ ವಿದ್ಯುತ್ ತಂತಿ ಎಳೆದರು. ಶಾಲೆಗಳಿಗೆ-ಆಸ್ಪತ್ರೆಗಳಿಗೆ ಶಕ್ತಿ ತುಂಬಿದರು. ಶ್ರಮ ಏವ ಜಯತೆ ಎನ್ನುವ ಹೆಸರಲ್ಲಿ ಶ್ರಮಿಕರ ಉಳಿತಾಯದ ಹಣದ ಕುರಿತಂತೆ ಭರ್ಜರಿ ಬದಲಾವಣೆ ತಂದರು. ಹೀಗೆ ಮುಂದುವರಿದರೆ ಸಂಕಷ್ಟಗಳೇ ಇಲ್ಲವಾಗುತ್ತವೆ. ಮತ್ತು ಸುಭಿಕ್ಷ ಜನ ರಸ್ತೆಗಿಳಿದು ಪ್ರತಿಭಟನೆ ಮಾಡಲಾರರು, ಬಸ್ಸಿಗೆ ಬೆಂಕಿ ಹಚ್ಚಲಾರರು. ಸಕರ್ಾರಿ ಕಟ್ಟಡಗಳನ್ನು ಧ್ವಂಸ ಮಾಡಲಾರರು. ಹಾಗಿಲ್ಲವಾದಲ್ಲಿ ಅವರನ್ನು ಒಟ್ಟು ಗೂಡಿಸುವುದು ಹೇಗೆ? ಕಮ್ಯುನಿಸ್ಟ್ ಪರಂಪರೆ ಭಾರತದಲ್ಲಿ ಸಮಾಧಿಯಾಗುತ್ತದಲ್ಲ ಎಂಬ ಹೆದರಿಕೆ ಕೆಲವರಿಗೆ ದುಃಸ್ವಪ್ನವಾಗಿ ಕಾಡಿತು. ಆಗಲೇ ಕನ್ಹಯ್ಯಾ ಕುಮಾರನ ಆಜಾದಿ ಘೋಷಣೆಗಳು ಎಲ್ಲೆಡೆ ಮೊಳಗಿದ್ದು.
‘ನಮಗೆ ಸ್ವಾತಂತ್ರ್ಯ ಬೇಕು’ ಎಂದು ಅಫ್ಜಲ್ ಗುರುವಿನ ಹೆಸರಲ್ಲಿ ಘೋಷಣೆ ಕೂಗಿದ ಕನ್ಹಯ್ಯಾ ಮಿತ್ರ ಬಳಗ ದೇಶದಲ್ಲಿ ತೀವ್ರ ಪ್ರತಿಭಟನೆಯಾದ ಸುದ್ದಿ ದೊರೆಯುತ್ತಲೇ ಸ್ವಾತಂತ್ರ್ಯ ಬೇಕಿರೋದು ನಿರುದ್ಯೋಗದಿಂದ, ಹಸಿವಿನಿಂದ, ಅನಾರೋಗ್ಯದಿಂದ, ಜಾತಿವಾದದಿಂದ ಎಂದು ಸಣ್ಣದೊಂದು ಟ್ವಿಸ್ಟ್ ಕೊಟ್ಟುಬಿಟ್ಟಿತು. ದೇಶದಾದ್ಯಂತ ದೊಡ್ಡಮಟ್ಟದ ಬೆಂಬಲಗಳಿಸುವ ಕನಸಿನೊಂದಿಗೆ ಕಾಂಗ್ರೆಸ್ಸು, ಆಪ್, ಕಮ್ಯುನಿಸ್ಟ್ ಪಾಟರ್ಿಯ ಭಿನ್ನ ಭಿನ್ನ ದಳಗಳೆಲ್ಲ ಒಟ್ಟುಗೂಡಿಬಿಟ್ಟವು. ಈ ಬಾರಿ ತಡವಾಗಿತ್ತು. ದೇಶ 60ರ ದಶಕದ ಬೌದ್ಧಿಕ ದಾಸ್ಯದಿಂದ ಹೊರಬಂದಾಗಿತ್ತು. ಜನ ದಂಡು ದಂಡಾಗಿ ಬೀದಿಗಿಳಿದರು ನಿಜ ಆದರೆ ಕನ್ಹಯ್ಯನ ಪರವಾಗಿ ಅಲ್ಲ; ದೇಶದ ಪರವಾಗಿ! ಕಮ್ಯುನಿಸ್ಟರು ‘ದೇಶದ್ರೋಹಿಗಳು’ ಎಂಬುದನ್ನು ಜನ ಕಣ್ಣಾರೆ ನೋಡಿಬಿಟ್ಟರು. ಬುದ್ಧಿವಂತ ಕಾಂಗ್ರೆಸ್ಸು ಮೈಗೆ ಬಳಿದುಕೊಂಡಿದ್ದ ಎಣ್ಣೆಯಿಂದಾಗಿ ಅದ್ಯಾವಾಗ ಜಾರಿ ಹೋಯ್ತೋ ಗೊತ್ತೇ ಆಗಲಿಲ್ಲ.

T330_7926_Untitled-6
ದೇಶ ನೆಮ್ಮದಿಯಿಂದಿದ್ದರೆ ಕಮ್ಯುನಿಸ್ಟರ ಬೇಳೆ ಎಂದಿಗೂ ಬೇಯದು. ಅದಕ್ಕೇ ಅವರು ರಂಗು ರಂಗಿನ ಭಾಷೆ ಬಳಸಿ ಬಡತನವನ್ನು ವೈಭವೀಕರಿಸೋದು. ಜನರನ್ನು ಒಂದುಗೂಡಿಸಲು ಪದಪುಂಜ ಸೃಷ್ಟಿಸಿ ಅದರ ಮೂಲಕ ಗದ್ದುಗೆ ಕಸಿಯಬಲ್ಲ ಭರ್ಜರಿ ಸಾಮಥ್ರ್ಯ ಅವರಿಗಿದೆ. ಭ್ರಷ್ಟಾಚಾರ ವಿರೋಧೀ ಆಂದೋಲನ ಅಣ್ಣಾ ಹಜಾರೆ ಶುರುಮಾಡಿದಾಗ ತರುಣರು, ವೃದ್ಧರು ಹೊಸ ಬದಲಾವಣೆಯ ಕನಸಿನೊಂದಿಗೆ ಬೀದಿಗೆ ಬಂದಿದ್ದರು. ಆದರೆ ಯಾವಾಗ ಎಡಚರು ಹಿಂದೆ ಹೋಗಿ ನಿಂತರೋ ಇಡಿಯ ಆಂದೋಲನ ಪಾಟರ್ಿಯ ಸ್ವರೂಪ ಪಡಕೊಂಡಿತು. ಹೊಸ ಪಾಟರ್ಿ ಉದಯವಾಗಿ ಗದ್ದುಗೆಯನ್ನೂ ಏರಿಬಿಟ್ಟಿತು.
ಬಿಡಿ. ಅದು ಬೇರೆಯದೇ ಚಚರ್ೆ. ಬಂಗಾಳವನ್ನು, ಕೇರಳವನ್ನು ದಶಕಗಳಗಟ್ಟಲೇ ಆಳಿದ ಎಡಪಕ್ಷಗಳಿಗೆ ಅರವಿಂದ್ ಕೇಜ್ರಿವಾಲರ, ಕನ್ಹಯ್ಯಾನ ಪಾದಗಳಿಗೆರಗಬೇಕಾದ ಪರಿಸ್ಥಿತಿ ಏಕೆ ಬಂತು? ಯೋಚಿಸಲೇಬೇಕಾದ ಪ್ರಶ್ನೆಯಲ್ಲವೇ. ಅದೊಂದು ದೊಡ್ಡ ಕಥೆ.
ಭಾರತದಲ್ಲಿಯಷ್ಟೇ ಅಲ್ಲ, ಜಗತ್ತಿನಲ್ಲೆಲ್ಲಾ ಕಮ್ಯುನಿಸ್ಟರ ವಂಶಜರ ಕುಡಿಗಳು ಇಂದು ನಾಮಾವಶೇಷಗೊಂಡಿವೆ. ಮಾಕ್ಸರ್್ ಮತ್ತು ಬಕುನಿನ್ರ ಕಿತ್ತಾಟದ ಕಾರಣದಿಂದ ಮಾಕ್ಸರ್್ನ ಜೀವಿತಾವಧಿಯ ಕಾಲಕ್ಕೇ ಕಮ್ಯುನಿಸ್ಟರು ಇಬ್ಭಾಗಗೊಂಡಿದ್ದರು. ಮಾಕ್ಸರ್್ನ ಅನುಯಾಯಿಗಳು ಕಟ್ಟರ್ ಕ್ರಾಂತಿಯನ್ನು ಪ್ರತಿಪಾದಿಸುವವರಾಗಿದ್ದರು. ಇದಕ್ಕೆ ವಿರುದ್ಧವಾಗಿ ಬದಲಾವಣೆಯ ಪರ್ವವನ್ನು ಹಂತ ಹಂತವಾಗಿ ನೋಡ ಬಯಸುವ ವಿಕಾಸವಾದಿಗಳೂ ಇದ್ದರು. ಮೊದಲ ವಿಶ್ವಯುದ್ಧದ ವೇಳೆಗೆ ಲೆನಿನ್ ಮತ್ತೊಂದು ಹಂತದಲ್ಲಿ ಕಮ್ಯುನಿಸ್ಟರನ್ನು ಒಡೆದು ತನ್ನದೇ ಹೊಸ ಸಿದ್ಧಾಂತ ಪ್ರತಿಪಾದಿಸಿದ. ಎರಡನೇ ಮಹಾಯುದ್ಧದ ನಂತರವಂತೂ ಕ್ರುಶ್ಚೇವ್ ಮತ್ತು ಮಾವೋಗಳಿಬ್ಬರೂ ಮತ್ತೆ ಕಮ್ಯುನಿಸ್ಟರನ್ನು ಒಡೆದರು. ಒಟ್ಟಾರೆ ಮಾಕ್ಸರ್್ನ ಮೂಲ ಸಿದ್ಧಾಂತದಿಂದ ಬಲುದೂರ ಬಂದಾಗಿತ್ತು. ಬಡವರ ವಿಮೋಚನೆಯ ಮಾತಾಡಿ ಅಧಿಕಾರಕ್ಕೆ ಬಂದ ಪ್ರತಿಯೊಬ್ಬ ನಾಯಕನೂ ಸವರ್ಾಧಿಕಾರಿಯಾಗಿ ತನ್ನದೇ ಸಿದ್ಧಾಂತವನ್ನು ಪ್ರತಿಪಾದಿಸುವುದು ಸಹಜವಾಗಿಬಿಟ್ಟಿತ್ತು. ಆದರೆ ಚೀನಾ ಪ್ರವರ್ಧಮಾನಕ್ಕೆ ಬಂದ ನಂತರ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಎರಡು ಕೇಂದ್ರಗಳಾದವು. ಒಂದು ರಷ್ಯಾ ಮತ್ತೊಂದು ಚೀನಾ!
ಭಾರತದ ಕಮ್ಯುನಿಸ್ಟ್ ನಾಯಕರು ಇವೆರಡನ್ನೂ ಮೀರಿ ಭಾರತೀಯ ಚಿಂತನೆಗಳನ್ನು ಮೈಗೂಡಿಸಿಕೊಂಡು ಬೆಳೆದುಬಿಟ್ಟಿದ್ದರೆ ಇಂದು ಕಂಡ-ಕಂಡವರ ಕಾಲಿಗೆ ಬೀಳುವ ಪರಿಸ್ಥಿತಿ ಖಂಡಿತ ಬರುತ್ತಿರಲಿಲ್ಲ. ಆದರೇನು? ರಷ್ಯಾ-ಚೀನಾಗಳ ಬೇಡುವುದನ್ನು ಅವರು ಬಿಡಲೇ ಇಲ್ಲ. ಚಿಂತನೆಯಲ್ಲಿ ಸ್ವಂತಿಕೆ ಇರದಿದ್ದುದರಿಂದ 1964ರಲ್ಲಿ ಭಾರತೀಯ ಕಮ್ಯುನಿಸ್ಟರಲ್ಲಿ ಬಿರುಕು ಕಂಡಿತು. ಸಕರ್ಾರದೊಂದಿಗೆ ಸೇರಿ ನಿಧಾನವಾಗಿ ಬದಲಾವಣೆಗಳನ್ನು ತಂದು ಕಾಲಕ್ರಮೇಣ ಅಧಿಕಾರ ಹಿಡಿಯಬೇಕೆನ್ನುವ ಭಾರತೀಯ ಕಮ್ಯುನಿಸ್ಟ್ ಪಾಟರ್ಿ (ಸಿಪಿಐ)ಯನ್ನು ವಿರೋಧಿಸಿ ಮಾಕ್ಸರ್್ನ ಕ್ರಾಂತಿಕಾರಿಮಾರ್ಗದ ಪ್ರತಿಪಾದಕರಾದವರು ಮಾಕ್ಸರ್್ವಾದಿ ಕಮ್ಯುನಿಸ್ಟ್ ಪಾಟರ್ಿ ಕಟ್ಟಿದರು. ಸೈದ್ಧಾಂತಿಕವಾಗಿ ಇಬ್ಬರೂ ಶ್ರಮಿಕರ ನಾಡನ್ನು ಕಟ್ಟುವ ಮಾತನಾಡುತ್ತಿದ್ದರಾದರೂ ಮಾರ್ಗಗಳು ಭಿನ್ನವಾಗಿದ್ದವು. ಸಿಪಿಐ ಬಂಡವಾಳಶಾಹಿಗಳೊಂದಿಗೆ ಸೇರಿಯಾದರೂ ಅಧಿಕಾರ ಹಿಡಿದು ಕಾಲಕ್ರಮೇಣ ತಮ್ಮಿಚ್ಚೆಯ ಸಾಮ್ರಾಜ್ಯ ಕಟ್ಟಬೇಕೆನ್ನುತ್ತಿತ್ತು, ಸಿಪಿಐಎಮ್ ಎಲ್ಲೆಡೆ ದಂಗೆಯೆಬ್ಬಿಸಿ ರಕ್ತಕ್ರಾಂತಿಯ ಮೂಲಕ ಅಧಿಕಾರಕ್ಕೆ ಬಂದು ಶ್ರಮಿಕರ ನಾಡು ನಿಮರ್ಿಸುವ ಮಾತಾಡುತ್ತಿತ್ತು.
ಅನುಮಾನವೇ ಇಲ್ಲ. ಸಿಪಿಐಎಮ್ ಕ್ರೂರವಾದ ಮಾರ್ಗಗಳನ್ನು ಮುಕ್ತವಾಗಿ ಅನುಮೋದಿಸುತ್ತಿತ್ತು. 1967ರ ಚುನಾವಣೆಯ ಪ್ರಣಾಳಿಕೆಯಲ್ಲಿ ‘ಬಂಗಾಳ, ಕೇರಳ, ಬಿಹಾರ, ಉತ್ತರ ಪ್ರದೇಶಗಳಲ್ಲಿನ ಬೃಹತ್ ಬಂದ್ಗಳು ಹೊಸ ಚಳವಳಿಯನ್ನೇ ಹುಟ್ಟುಹಾಕಿವೆ. ಸ್ವತಂತ್ರ ಭಾರತ ಹಿಂದೆಂದೂ ಇಂತಹ ಬೃಹತ್ ಸಂಘರ್ಷವನ್ನು ಕಂಡೇ ಇರಲಿಲ್ಲ’ ಎಂದು ಬರೆಯಿತಲ್ಲದೇ ಅದಕ್ಕೆ ತಾನೇ ಕಾರಣ ಎಂಬುದನ್ನು ಪ್ರತಿಪಾದಿಸಿತ್ತು. ತನ್ನ ರಕ್ತ ಸಿಕ್ತ ಇತಿಹಾಸದ ಬಗ್ಗೆ ಸಿಪಿಐಎಮ್ಗೆ ಹೆಮ್ಮೆಯಿತ್ತು ಕೂಡ.
ಚುನಾವಣೆಗಳಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಭಾಗವಹಿಸಿದವು. 1967 ರಲ್ಲಿ ನಡೆದ ಚುನಾವಣೆಗಳಲ್ಲಿ ಮಾಕ್ಸರ್್ವಾದಿಗಳು ಕೇರಳದಲ್ಲಿ ಸಮ್ಮಿಶ್ರ ಸಕರ್ಾರ ರಚಿಸಿದರು. ಎರಡೇ ವರ್ಷದಲ್ಲಿ ಪಕ್ಷದ ಮಂತ್ರಿಗಳನೇಕರು ಭ್ರಷ್ಟಾಚಾರದ ಕೂಪದಲ್ಲಿ ಸಿಕ್ಕಿ ಬಿದ್ದರು. ಲಜ್ಜೆಗೆಟ್ಟ ಮಾಕ್ಸರ್್ವಾದಿಗಳು ಕೈಜೋಡಿಸಿದ್ದ ಇತರೆ ಪಾಟರ್ಿಗಳವರ ವಿರುದ್ಧ ತನಿಖೆಗೆ ಆದೇಶಿಸಿದರೇ ಹೊರತು ತಮ್ಮವರ ಬಗ್ಗೆ ತುಟಿ ಬಿಚ್ಚಲಿಲ್ಲ. ಜನ ರೊಚ್ಚಿಗೇಳುವುದು ಖಾತ್ರಿಯಾದಂತೆ ಸಕರ್ಾರ ಉರುಳಿತು. ಮರು ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಐ ಅಧಿಕಾರದ ಗದ್ದುಗೆಯೇರಿತು. ಈಗ ಮಾಕ್ಸರ್್ವಾದಿಗಳು ರಾಜ್ಯದಲ್ಲೆಲ್ಲಾ ಕಾಮರ್ಿಕರ, ರೈತರ ದಂಗೆಗಳೆಬ್ಬಿಸಿ ಸಕರ್ಾರ ನಡೆಸುವುದೇ ಅಸಾಧ್ಯವಾಗುವಂತೆ ಮಾಡಿಬಿಟ್ಟರು. ಮತ್ತೆ ಮಧ್ಯಂತರ ಚುನಾವಣೆ.
ಕಮ್ಯುನಿಸ್ಟರ ಚುನಾವಣಾ ಇತಿಹಾಸ ಹೇಳುವುದು ನನ್ನ ಉದ್ದೇಶವಲ್ಲ. ಆದರೆ ಇತರರ ಕೈಗಳನ್ನು ಕೊಳಕೆಂದು ಜರಿಯುವ ಇವರ ಮುಖಗಳೇ ಅದೆಷ್ಟು ಕೊಳಕಾಗಿವೆಯೆಂದು ತೋರಿಸಬೇಕಷ್ಟೇ! ಕೇರಳ-ಬಂಗಾಳ-ತ್ರಿಪುರಾಗಳಲ್ಲೆಲ್ಲಾ ಇದೇ ಮಾದರಿಯನ್ನು ಅನುಸರಿಸಿದವರು ಇವರು. ಅಧಿಕಾರಕ್ಕೇರಲು ಕೋಮುವಾದಿ ಮುಸ್ಲೀಂ ಲೀಗಿನೊಂದಿಗೆ, ಬಂಡವಾಳಶಾಹಿಗಳ ಪರವಿರುವ ಕಾಂಗ್ರೆಸ್ಸಿನೊಂದಿಗೂ ಕೈ ಜೋಡಿಸಲು ಹಿಂದೆ ಮುಂದೆ ನೋಡದವರಿವರು. ವಿರೋಧ ಪಕ್ಷದಲ್ಲಿ ಕುಳಿತೊಡನೆ ಅನವಶ್ಯಕ ದಂಗೆಗಳು, ಕದನಗಳ ಮೂಲಕ ಆಳುವ ಪಡೆಯನ್ನು ದುರ್ಬಲಗೊಳಿಸಿ ಕೇಕೆ ಹಾಕುವುದು ಇವರ ರೀತಿ. ಮೊನ್ನೆ-ಮೊನ್ನೆ ಪ್ರಾವಿಡೆಂಟ್ ಫಂಡ್ನ ವಿಚಾರವಾಗಿ ಬಟ್ಟೆ ಕಾಮರ್ಿಕರನ್ನು ಒಟ್ಟುಗೂಡಿಸಿ ಬೆಂಗಳೂರಿನಲ್ಲಿ ಅಸಹನೀಯ ವಾತಾವರಣ ನಿಮರ್ಿಸಿದರಲ್ಲ; ಇದು ಇದರದ್ದೇ ಮುಂದುವರಿದ ಭಾಗ ಅಷ್ಟೇ!

josip-broz-tito-of-communist-yugoslavia
ಭಾರತದ ಬಲು ದೊಡ್ಡ ಕಾಮರ್ಿಕ ವರ್ಗ ಎಡಪಂಥೀಯರ ಜೊತೆಗಿದೆ. ಹೀಗಾಗಿಯೇ ಅವರು ಸ್ವಲ್ಪ ಮಟ್ಟಿಗೆ ಉಸಿರಾಡುತ್ತಿದ್ದಾರೆ. ಆದರೆ ರಾಷ್ಟ್ರ ನಿಮರ್ಾಣಕ್ಕೆ ಬಳಕೆಯಾಗಬೇಕಿದ್ದ ಈ ಕಾಮರ್ಿಕ ಶಕ್ತಿಯನ್ನು ರಾಷ್ಟ್ರ ನಿನರ್ಾಮಕ್ಕೆ ಬಳಸುತ್ತಾರಲ್ಲ ಎನ್ನುವುದೇ ನೋವಿನ ಸಂಗತಿ. ಯವಗಲಾದರೂ ಒಮ್ಮೆ ಪಶ್ಚಿಮ ಬಂಗಾಳ ತಿರುಗಾಡಿ ಬನ್ನಿ. ದೂರದ ಹಳ್ಳಿಗಳು ಬೇಡ, ಕಲ್ಕತ್ತಾದ ಗಲ್ಲಿಗಳೂ ಬೆಂಗಳೂರಿನ ಸ್ಲಮ್ಮಿಗಿಂತ ಕಡೆಯಾಗಿವೆ. ರಸ್ತೆಗಳ ಅಭಿವೃದ್ಧಿಯಿಲ್ಲ, ಸಾರಿಗೆ ಸುಧಾರಣೆ ಇಲ್ಲ. ವ್ಯಾಪಾರ-ವಹಿವಾಟು ಅಚ್ಚರಿ ಎನಿಸುವಷ್ಟು ಕನಿಷ್ಠ. ಕಲ್ಕತ್ತಾದ ನಡುವಿನ ಸಿರಿವಂತ, ಜಗತ್ತಿನ ಜನರಿಗೆ ಬೇಕಾದ್ದನ್ನು ಕೊಟ್ಟು ಸಿರಿವಂತನಾಗುತ್ತಿದ್ದರೆ ಅಕ್ಕಪಕ್ಕದಲ್ಲಿ ವಾಸಿಸುವ ಬಡವ ಸ್ವಾಮಿ ವಿವೇಕಾನಂದರ ಕಾಲದ ಕಲ್ಕತ್ತಕ್ಕಿಂತಲೂ ಭಿನ್ನವಾಗಿಯೇನೂ ಬದುಕುತ್ತಿಲ್ಲ. ಇದು ಕಮ್ಯುನಿಸ್ಟರ ಕೊಡುಗೆ!
ಇಂದಿರಾಗಾಂಧಿ 70 ರ ದಶಕದಲ್ಲಿ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ಸಿನ ಸೋಲಿಗೆ ಕಾರಣ ಹುಡುಕಾಡಿಸಿದರು. ಬಡವರ ಕುರಿತಂತೆ ಮಾತನಾಡುವ ಸಮಾಜವಾದದ ಸಿದ್ಧಾಂತದೆಡೆಗೆ ವಾಲುವುದು ಒಳಿತೆನಿಸಿತು ಅವರಿಗೆ. ಆಗ ಕಮ್ಯುನಿಸ್ಟ್ ಪಾಟರ್ಿ ಅವರಿಗೆ ಆಪ್ತವಾಯ್ತು. ಬ್ಯಾಂಕುಗಳ ರಾಷ್ಟ್ರೀಕರಣಗೈದರು; ಗರೀಬಿ ಹಟಾವೋ ಎನ್ನುತ್ತ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದರು. ಸಿಪಿಐ ಪೂರ್ಣ ಸಮರ್ಥನೆಗೆ ನಿಂತಿತು. ಆಗಲೇ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ ರೂಪುಗೊಂಡಿದ್ದು. ಕಮ್ಯುನಿಸ್ಟ್ ಸಿದ್ಧಾಂತದಿಂದ ಪ್ರೇರಣೆ ಪಡೆದಿದ್ದ ಬುದ್ಧಿಜೀವಿಗಳು ಅಲ್ಲಿಗೆ ಹೋಗಿ ಸೇರಿಕೊಂಡಿದ್ದು. ಭವಿಷ್ಯದ ಪೀಳಿಗೆಯನ್ನು ತಮ್ಮ ಚಿಂತನೆಗಳಿಗೆ ಪೂರಕವಾಗಿ ಕಟ್ಟುವ ದೂರದೃಷ್ಟಿಯ ಯೋಜನೆಯನ್ನು ಆಗಲೇ ರೂಪಿಸಿಯಾಗಿತ್ತು. ಅದಕ್ಕೆ ತಕ್ಕಂತಹ ಉಪನ್ಯಾಸಕರು ನೇಮಕಗೊಂಡರು, ವಿದ್ಯಾಥರ್ಿಗಳ ಆಯ್ಕೆಯ ಪ್ರಕ್ರಿಯೆಯೂ ಹಾಗೆ ನಡೆಯಿತು. ದೇಶದ ರಾಜಧಾನಿಯಲ್ಲಿ ಕುಳಿತು ದೇಶದ್ರೋಹಿಗಳನ್ನು ಸೃಷ್ಟಿಸುವ ಯೋಜನೆ ಕಾರ್ಯರೂಪಕ್ಕೆ ಬಂದಿತು.
ಇತ್ತ ಮಾಕ್ಸರ್್ವಾದಿ ಕಮ್ಯುನಿಸ್ಟ್ ಪಕ್ಷ ಕಾಂಗ್ರೆಸ್ಸಿಗೆ ವಿರೋಧಿಯಾಗಿ ನಿಂತು ತನ್ನ ಬುಡವನ್ನು ವಿಸ್ತರಿಸುತ್ತ ನಡೆದಿತ್ತು. ಅದೇ ವೇಳೆಗೆ ತನಗೆ ಅಂತರರಾಷ್ಟ್ರೀಯ ಮನ್ನಣೆ ಬೇಕೆಂದು ಮಾಸ್ಕೋ, ಬೀಜಿಂಗ್ಗಳ ಕಮ್ಯುನಿಸ್ಟ್ ಪಾಟರ್ಿಯೆದುರು ಭಿಕಾರಿಯಂತೆ ನಿಂತಿತ್ತು. 1969ರಲ್ಲಿ ಅಂತರರಾಷ್ಟ್ರೀಯ ಕಮ್ಯುನಿಸ್ಟ್ ಸಮಾವೇಶ ನಡೆದಾಗ ಇಲ್ಲಿನ ಸಿಪಿಐಎಮ್ ಗೆ ವೀಕ್ಷಕರಾಗಿಯೂ ಆಹ್ವಾನವಿರಲಿಲ್ಲ! ಕೊನೆ ಹಂತದಲ್ಲಿ ಅವಕಾಶ ಸಿಗಬಹುದೇನೋ ಅಂತ ಇಲ್ಲಿನ ನಾಯಕರು ಮಾಸ್ಕೋ ಸೇರಿಕೊಂಡಾಗಿತ್ತು. ಊಹೂಂ. ಉಪಯೋಗವಾಗಲಿಲ್ಲ. ಪೆಚ್ಚುಮೋರೆ ಹಾಕಿಕೊಂಡು ಮರಳಿ ಬಂದರು. ಸಣ್ಣ ಪುಟ್ಟ ರಾಷ್ಟ್ರಗಳೊಂದಿಗೆ ಸಂಬಂಧವಿಟ್ಟುಕೊಂಡು ತೃಪ್ತಿಪಟ್ಟರು.
1977ರಲ್ಲಿ ತುತರ್ು ಪರಿಸ್ಥಿತಿಯ ನಂತರದ ಇಂದಿರಾಗಾಂಧಿಯ ಸೋಲಿನಿಂದ ಆಕೆಯ ಬೆಂಬಲಕ್ಕಿದ್ದ ಸಿಪಿಐ ನೆಲಕಚ್ಚಿತ್ತು; ಸಿಪಿಐಎಮ್ ನೆಲವೂರಿತ್ತು. ಆಗ ರಷ್ಯಾ ಇವರನ್ನು ಸಭೆಗೆ ಕರೆಯಿತು, ಆನಂತರ ಚೀನಾ ಕೂಡ ಇವರನ್ನು ಒಪ್ಪಿಕೊಳ್ಳಲಾರಂಭಿಸಿತು. ಇಷ್ಟು ಹೊತ್ತಿಗಾಗಲೇ ಅಧಿಕಾರಕ್ಕೇರಲು ಬಗೆಬಗೆಯ ಮಾರ್ಗಗಳನ್ನು ಬಳಸಿ ಮೂಲ ಸಿದ್ಧಾಂತವನ್ನು ಬಿಟ್ಟುಬಂದಿದ್ದ ಸಿಪಿಐಎಮ್ನ್ನು ವಿರೋಧಿಸಿ ಒಳಗಿನದ್ದೇ ಒಂದು ಬಣ ಮಾಕ್ಸರ್್ ಲೆನಿನ್ರ ಕಮ್ಯುನಿಸ್ಟ್ ಪಾಟರ್ಿ ಕಟ್ಟಿಕೊಂಡಿದ್ದರು(ಸಿಪಿಐ(ಎಂ ಎಲ್)). ಮುಂದೆ ಅದೂ ತುಂಡು ತುಂಡಾಗಿ ಮಾಕ್ಸರ್್ನ ಅವಶೇಷಗಳು ಅಲ್ಲಲ್ಲಿ ಹರಡಿಕೊಂಡವು. ಕಳೆದ ದಶಕದಲ್ಲಿ ಈ ತುಂಡುಗಳನ್ನು ಸೇರಿಸಿ ಮಾವೋತ್ಸೆತುಂಗನ ಕಮ್ಯುನಿಸ್ಟ್ ಪಾಟರ್ಿಯನ್ನು ರಚಿಸಿಕೊಳ್ಳಲಾಗಿದೆ. ನೇರ ಬೀಜಿಂಗ್ನ ನಿದರ್ೇಶನ ಪಡೆಯುವ ನಕ್ಸಲ್ ಬೆಂಬಲಕ್ಕೆ ನಿಂತ ಬಣ ಇದು ಅಂತ ಹೇಳಲಾಗುತ್ತೆ!
ಉಫ್! ಭಾರತವನ್ನು ಚೂರು ಚೂರಾಗಿಸುವ ಕನಸು ಹೊತ್ತ ಕಮ್ಯುನಿಸ್ಟ್ ಪಾಟರ್ಿಗಳು ತಾವೇ ಚೂರು ಚೂರಾಗಿ ಹೋದರು. ಬಂಗಾಳದಲ್ಲಿ ಶಕ್ತಿ ಹೀನರಾದ ಮೇಲಂತೂ ಒಂದು ಹನಿ ಜೀವಜಲ ಎಲ್ಲಿಂದಾದರೂ ದೊರೆತೀತಾ? ಎಂದು ಬಾಯಿಕಳಕೊಂಡು ನೋಡುತ್ತಿದ್ದಾರೆ. ಹೊಸ ಪೀಳಿಗೆಯ ತರುಣ ತರುಣಿಯರು ಸಾಮಾಜಿಕ ಜಾಲತಾಣಗಳ ಮೂಲಕ ಭಾರತೀಯತೆಗೆ ಹತ್ತಿರವಾಗುತ್ತಿರುವುದನ್ನು ಅವರಿಂದ ಸಹಿಸಲಾಗುತ್ತಿಲ್ಲ. ಎಲ್ಲಕ್ಕೂ ಮಿಗಿಲಾಗಿ ಇವರು ದಶಕಗಳಿಂದ ಕಟ್ಟಿಕೊಟ್ಟ ಸುಳ್ಳುಗಳನ್ನು ಹೊಸ ಯುಗ ಕ್ಷಣಾರ್ಧದಲ್ಲಿ ಪತ್ತೆ ಹಚ್ಚಿ ಸತ್ಯ ಸಾರಲು ನಿಂತಿದೆಯಲ್ಲ ಅದೇ ಅವರಿಗೆ ಕಷ್ಟ. ಅದಕ್ಕೇ ಕೊನೆಯದೊಂದು ಪ್ರಯತ್ನಕ್ಕೆ ನಿಂತಿದ್ದಾರೆ. ಅಮೇರಿಕಾದ ಸಿಐಎ ಬೆಂಬಲಿತ ಚಚರ್ುಗಳು, ಅರಬ್ ಬೆಂಬಲಿತ ಜೀಹಾದಿಗಳೊಂದಿಗೆ ಸೇರಿ, ಚೀನಾದ ಬೆಂಬಲ ಪಡೆದು ನಕ್ಸಲರ ಮೂಲಕ ಭಾರತವನ್ನು ಒಡೆಯುವ ಹುನ್ನಾರ ಮಾಡುತ್ತಿದ್ದಾರೆ. ಅದಕ್ಕೆ ಜೆಎನ್ಯು ಕೇಂದ್ರವಾಗಿತ್ತು, ಕನ್ಹಯ್ಯಾ ನಾಯಕನಾಗಿದ್ದ. ಅಷ್ಟೇ!
ಎಂಥ ಗತಿ ಬಂತಪ್ಪ ಈ ಕಮ್ಯುನಿಸ್ಟರಿಗೆ!

Comments are closed.