ವಿಭಾಗಗಳು

ಸುದ್ದಿಪತ್ರ


 

ಒಳಗೊಳಗೇ ಕುಸಿಯುತ್ತಿದೆ ಚೀನಾ!

ಗಡಿಯಲ್ಲಿ ಚೀನಾ ತಗಾದೆ ತೆಗೆದು ತಾನೇ ಕೆಟ್ಟದ್ದಾಗಿ ಸಿಕ್ಕುಹಾಕಿಕೊಂಡಿರುವುದು ಎಂಥವನಿಗೂ ಗೋಚರವಾಗುತ್ತಿದೆ. ತೀರಾ ಇತ್ತೀಚೆಗೆ ಚುಷೂಲ್ ಕಣಿವೆಯಲ್ಲಿ ಭಾರತೀಯ ಸೈನಿಕರು ಚೀನಾಕ್ಕೆ ಕೊಟ್ಟಿರುವ ಅಚಾನಕ್ಕು ಆಘಾತದಿಂದ ಹೊರಬರಲು ಅದಕ್ಕೆ ಸಾಕಷ್ಟು ಸಮಯವೇ ಬೇಕಾಗಬಹುದೇನೋ. ಚೀನಾ ಸುಮ್ಮನಂತೂ ಕೂಡುವುದಿಲ್ಲ. ಆದರೆ ತತ್ಕ್ಷಣಕ್ಕೆ ಪ್ರತಿಕ್ರಿಯಿಸಬೇಕಾದ ಭಯಾನಕವಾದ ಆಂತರಿಕ ಒತ್ತಡಕ್ಕೆ ಸಿಲುಕಿ ಅದು ತಪ್ಪುಗಳ ಮೇಲೆ ತಪ್ಪು ಮಾಡುತ್ತಲೇ ಸಾಗುತ್ತಿದೆ. ಗಾಲ್ವಾನ್ ಕಣಿವೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಚೀನೀ ಸೈನಿಕರು ಹತರಾದುದರ ಬಗ್ಗೆ ಅದಾಗಲೇ ಒಳಗೊಂದು ಬೇಗುದಿ ಭುಗಿಲೇಳುತ್ತಿದೆ. ಮತ್ತೊಂದೆಡೆ ತೈವಾನ್, ಹಾಂಕಾಂಗುಗಳಷ್ಟೇ ಅಲ್ಲದೇ ಟಿಬೆಟ್ ಕೂಡ ಈಗ ಗರಿಗೆದರಿ ಕುಂತಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮಿಸುಕಾಡಲಾಗದಂತೆ ಅದಕ್ಕೊಂದು ಖೆಡ್ಡಾ ರಚಿಸಲಾಗಿದೆ. ಅದಕ್ಕೆ ಸರಿಯಾಗಿ 1965ರ ಯುದ್ಧದ ಸೋಲನ್ನೇ ನೆನಪಿಸಿಕೊಂಡು ಯಾವ ಕಾಯರ್ಾಚರಣೆಗೂ ಹೆದರಿ ಕುಳಿತಿರುತ್ತಿದ್ದ ಭಾರತ ಈಗ ಗಡಿಯಲ್ಲಿ ಬಿಂದಾಸಾಗಿ ತಿರುಗಾಡುತ್ತಿದೆ. ಸೈನಿಕರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಗಡಿ ಭಾಗದಲ್ಲಿ ಶೇಖರಿಸುತ್ತಿರುವುದನ್ನು ನೋಡಿದರೆ ಈ ಬಾರಿ ಭಾರತ 65ರ ಕಳಂಕವನ್ನು ತೊಡೆದುಕೊಳ್ಳುವುದಷ್ಟೇ ಅಲ್ಲದೇ ಶಾಶ್ವತವಾಗಿ ಚೀನಾದ ತಂಟೆಯಿಂದ ಮುಕ್ತವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಮೊದಲೆಲ್ಲಾ ಚೀನಾದೊಂದಿಗೆ ಭಾರತದ ಅಧಿಕಾರಿಗಳು ಮಾತಿಗೆ ಕುಳಿತಾಗಿ ತಗ್ಗಿ-ಬಗ್ಗಿಯೇ ನಡೆಯಬೇಕಾಗುತ್ತಿತ್ತು. ಯಾವ ದಿಕ್ಕಿನಿಂದ ನೋಡಿದರೂ ಚೀನಾ ನಮಗಿಂತಲೂ ಬಲಾಢ್ಯವಾಗಿತ್ತಲ್ಲ, ಅದಕ್ಕೆ. ಈಗ ಹಾಗಿಲ್ಲ. ಮೊನ್ನೆ ಚುಷೂಲ್ನ ಎತ್ತರದ ಗುಡ್ಡಗಳನ್ನು ವಶಪಡಿಸಿಕೊಂಡ ಮೇಲಂತೂ ಪ್ಯಾಂಗಾಂಗ್ಸೊ ಭಾಗದ ಅಷ್ಟೂ ಪ್ರದೇಶಗಳ ಮೇಲೆ ನಾವು ನಿಗಾ ಇಡಲು ಸಾಧ್ಯವಾಗಿದೆ. ಒಬ್ಬ ನಿವೃತ್ತ ಸೈನಿಕರು ಹೇಳುವಂತೆ, ‘ಚೀನಾ ಯುದ್ಧವನ್ನು ಮೂರು ಅಥವಾ ನಾಲ್ಕನೇ ಲೆವೆಲ್ಗೆ ಒಯ್ಯಲು ಯತ್ನಿಸುತ್ತಿತ್ತು. ಭಾರತ ಈ ಗುಡ್ಡಗಳನ್ನು ಗೆದ್ದು ಅದನ್ನು ಒಂಭತ್ತನೇ ಲೆವೆಲ್ಗೆ ಒಯ್ದುಬಿಟ್ಟಿದೆ’ ಅಂತ. ಗುಡ್ಡಗಳ ಮೇಲಿನ ಕಾದಾಟದಲ್ಲಿ ಯಾರು ಎತ್ತರದ ಪ್ರದೇಶಗಳನ್ನು ವಶಪಡಿಸಿಕೊಂಡಿರುತ್ತಾರೋ ಅವರ ಶಕ್ತಿ ಯಾವಾಗಲೂ ಹೆಚ್ಚು. ಈಗ ಆ ಇಡಿಯ ಭಾಗದಲ್ಲಿ ನಾವು ಚೀನಿಯರ ಮೇಲೆ ಅನಾಮತ್ತು ಕಣ್ಣಿಡಲು ಸಾಧ್ಯವಾಗುತ್ತದೆ. ಈ ಸಂಗತಿಯೂ ಕೂಡ ಚೀನಾದ ಜನರಲ್ಲಿ ಅಸಹನೆ ಹುಟ್ಟುಹಾಕಿದೆ. ಭಾರತದೊಂದಿಗೆ ಸದಾ ಮೇಲುಗೈ ಹೊಂದಿದ್ದ ಚೀನಾ ಈಗ ಅದನ್ನು ಕಳಕೊಂಡಿದೆ ಎಂಬ ಆಕ್ರೋಶ ಷಿಜಿನ್ಪಿಂಗ್ಗೆ ವಿರುದ್ಧವಾಗಿ ಬೆಳೆಯುತ್ತಿದೆ. ಅದಾಗಲೇ ಅಂತರ್ರಾಷ್ಟ್ರೀಯ ಚಿಂತಕರು ಹೇಳುವಂತೆ ಈ ಘಟನೆಗಳು ಷಿಯ ಅಧಿಕಾರಕ್ಕೆ ಮುಳುವಾಗುವ ಎಲ್ಲ ಸಾಧ್ಯತೆಗಳೂ ಇದೆ! ಇವಿಷ್ಟೂ ಸಾಲದೆಂಬಂತೆ ಚೀನಾದಿಂದ ತಪ್ಪಿಸಿಕೊಂಡು ಓಡಿ ಹೋದ ಅಲ್ಲಿನ ವೈರಾಲಜಿಸ್ಟ್ ಡಾ. ಲಿ ಮೆಂಗ್ ಮೊನ್ನೆ ಈಚೆಗೆ ಇಂಗ್ಲೆಂಡಿನ ಟಾಕ್ ಶೋ ಒಂದರಲ್ಲಿ ಲೂಸ್ ವುಮೆನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇಡಿಯ ಕೊರೋನಾ ವೈರಸ್ ಸಕರ್ಾರಿ ಪ್ರಯೋಗಾಲಯಗಳಲ್ಲೇ ನಿಮರ್ಿತವಾಗಿದ್ದು ಎಂದು ಘಂಟಾಘೋಷವಾಗಿ ಹೇಳಿರುವುದಲ್ಲದೇ ಅದಕ್ಕೆ ಬೇಕಾಗಿರುವ ವೈಜ್ಞಾನಿಕ ಪುರಾವೆಯನ್ನು ತಾನು ಒದಗಿಸಲೂ ಸಿದ್ಧ ಎಂದು ದೃಢವಾಗಿ ಹೇಳಿದ್ದಾಳೆ. ಚೀನಾದಲ್ಲಿ ಹಬ್ಬಿದ ಹೊಸ ಬಗೆಯ ನ್ಯುಮೋನಿಯಾದ ಕುರಿತಂತೆ ಡಿಸೆಂಬರ್ ಕೊನೆಯ ಅಥವಾ ಜನವರಿ ಆರಂಭದ ವೇಳೆಗೆ ಆಕೆ ಮೊದಲ ವರದಿ ಕೊಟ್ಟಿದ್ದಳಂತೆ. ಜನವರಿ ಮಧ್ಯಭಾಗದಲ್ಲಿ ಮತ್ತೊಂದು ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಚೀನಾದ ಸಂಪಕರ್ಾಧಿಕಾರಿಯಾಗಿರುವ ತನ್ನ ಹಿರಿಯ ಅಧಿಕಾರಿಯೊಂದಿಗೆ ಹಂಚಿಕೊಂಡಿದ್ದಳಂತೆ. ಬಹುಶಃ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನೀ ಸಕರ್ಾರ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಬಹುದೆಂಬ ಭರವಸೆ ಆಕೆಗಿತ್ತು. ಆಕೆ ಹೇಳುವ ಪ್ರಕಾರ ಹಾಗಾಗದೇ ‘ಬಾಯ್ಮುಚ್ಚಿಕೊಂಡಿದ್ದರೆ ಒಳಿತು. ಇಲ್ಲವಾದರೆ ಸದ್ದಡಗಿಸಲಾಗುವುದು’ ಎಂದಿತ್ತಂತೆ ಸಕರ್ಾರ. ಈಗ ಆಕೆ ಚೀನಾವನ್ನು ಬಿಟ್ಟು ಅನ್ಯರಾಷ್ಟ್ರಗಳಲ್ಲಿ ಕದ್ದುಮುಚ್ಚಿ ತಿರುಗಾಡುತ್ತಿದ್ದಾಳೆ. ಈ ವಿಚಾರದಲ್ಲಿ ಜಗತ್ತು ಆಕೆ ಕೊಡುವ ಪುರಾವೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅದು ಚೀನಾದ ವಿರುದ್ಧ ಬಲವಾದ ಸಾಕ್ಷಿ ಎಂದಾದರೆ ಚೀನಾದ ಆತಂಕಗಳ ಬುಟ್ಟಿಗೆ ಮತ್ತೊಂದು ಸೇರ್ಪಡೆಯಾದಂತೆಯೇ. ಇಷ್ಟೂ ದಿನಗಳ ಕಾಲ ಯಾವುದನ್ನು ಅಮೇರಿಕಾ ಜೋರಾಗಿ ಹೇಳುತ್ತಿತ್ತೋ ಅದನ್ನು ಜಗತ್ತೆಲ್ಲಾ ಒಪ್ಪುವ ಸ್ಥಿತಿ ನಿಸ್ಸಂಶಯವಾಗಿ ಬರಲಿದೆ!

ಹಾಗಂತ ಚೀನಾ ಸುಮ್ಮನಿಲ್ಲ. ಇದು ಚೀನಾದ ಬದುಕು ಸಾವಿನ ಹೋರಾಟ. ಈ ಬಾರಿ ಸೋತರೆ ಚೀನಾ ಸತ್ತಂತೆಯೇ. ಹಾಗೆಂದು ಅದು ಎಲ್ಲ ಅಸ್ತ್ರಗಳನ್ನು ಬಳಸುತ್ತಿದೆ. ಅಮೇರಿಕಾದಲ್ಲಿ ಟ್ರಂಪ್ ಸೋಲಿಗೆ ಪ್ರಯತ್ನ ಪಟ್ಟಂತೆಯೇ ಇಲ್ಲಿ ಮೋದಿಯ ಅವಹೇಳನಕ್ಕೆ ಮಾಡಬಹುದಾದ ಎಲ್ಲ ಕೆಲಸಗಳಿಗೂ ಬೆಂಬಲ ಕೊಡುತ್ತಿದೆ. ತೀರಾ ಇತ್ತೀಚೆಗೆ ಚೀನಾದ ಪತ್ರಿಕೆ ಗ್ಲೋಬಲ್ ಟೈಮ್ಸ್ ತನ್ನ ಟ್ವಿಟರ್ ಅಕೌಂಟಿನಲ್ಲಿ ‘ಭಾರತದ ಸೈನ್ಯದಲ್ಲಿ ಸೈನಿಕರಿಗೆ ಮತ್ತು ಅಧಿಕಾರಿಗಳಿಗೆ ಸಿಗುವ ಊಟದಲ್ಲಿ ತಾರತಮ್ಯವಿದೆ’ ಎಂಬ ವರದಿ ಪ್ರಕಟಿಸಿತ್ತು. ಅದು ಭಾರತದ ಸೈನಿಕರ ಆತ್ಮಶಕ್ತಿಯನ್ನು ಕುಗ್ಗಿಸುವ ಚೀನಿಯರ ಕೊನೆಯ ಪ್ರಯತ್ನ. ಈ ಹಿಂದೆ ಲಡಾಖ್ನ ಎತ್ತರದ ಗುಡ್ಡಗಳನ್ನು ಕಾಪಾಡಿಕೊಳ್ಳುವ ಕ್ಷಮತೆ ಭಾರತೀಯ ಸೈನಿಕರಿಗಿಲ್ಲವೆಂದು ಅದು ಹೇಳಿದ್ದನ್ನು ನೆನಪಿಸಿಕೊಳ್ಳಬಹುದು. ಇದನ್ನು ಕಮ್ಯುನಿಸ್ಟ್ ಪಾಟರ್ಿಯ ಮಾನಸಿಕ ಯುದ್ಧವೆಂದು ಕರೆಯಲಾಗುತ್ತದೆ. ಎದುರಾಳಿಗಳನ್ನು ಮಾನಸಿಕವಾಗಿ ಕೊಲ್ಲುವ ಯತ್ನ ಅದು. ದುರಂತವೆಂದರೆ ಗ್ಲೋಬಲ್ ಟೈಮ್ಸ್ನ ಇದೇ ವರದಿಯನ್ನು ಹಿಡಿದು ಕಾಂಗ್ರೆಸ್ಸಿನ ರಾಹುಲ್ ಸಕರ್ಾರವನ್ನು ಈ ತಾರತಮ್ಯದ ಕುರಿತಂತೆ ಟ್ವೀಟುಗಳ ಮೂಲಕ ಪ್ರಶ್ನಿಸಿದ್ದರು! ಆ ಮೂಲಕ ಕಾಂಗ್ರೆಸ್ಸು ಚೀನಾಕ್ಕೆ ತನ್ನ ಋಣವನ್ನು ತೀರಿಸಿತ್ತು. ಇದು ಚೀನಾದ ಆರಂಭಿಕ ಪ್ರಯತ್ನವಾಗಿರಬಹುದು. ಬರಲಿರುವ ದಿನಗಳಲ್ಲಿ ಭಾರತದ ವಿಚಾರಗಳ ಕುರಿತಂತೆ ಅನೇಕ ಸುಳ್ಳುಗಳನ್ನು ಹೆಣೆದು ನಮ್ಮ ಮುಂದೆಯೇ ಇಡಬಹುದಾಗಿರುವಂತಹ ಸಾಧ್ಯತೆಗಳಿವೆ ಮತ್ತು ಅದಕ್ಕೆ ಕಾಂಗ್ರೆಸ್ಸು ಬೆಂಬಲವಾಗಿ ನಿಲ್ಲುವ ಎಲ್ಲ ಲಕ್ಷಣಗಳೂ ಇದೆ. ಹೀಗಾಗಿಯೇ ಎಚ್ಚರಿಕೆ ಬಲು ಅಗತ್ಯ.

ಚೀನಾ ತಾನು ಉಳಿಯಲು ಯಾರ ಕುತ್ತಿಗೆಯ ಮೇಲೆ ಬೇಕಿದ್ದರೂ ಕಾಲಿಡುತ್ತದೆ. ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಅಗತ್ಯವಿದೆ. ಇದು ಚೀನಾದ ಪಾಲಿಗೆ ಕೊನೆಯ ಕದನ. ಮತ್ತೊಮ್ಮೆ ಟ್ರಂಪ್ ಗೆದ್ದರೆ, ಗಡಿಯಲ್ಲಿ ಭಾರತದೊಂದಿಗೆ ಚೀನಾ ಕದನದಲ್ಲಿ ಹೊಡೆಸಿಕೊಂಡಿತೆಂದರೆ, ಟಿಬೆಟ್ನಲ್ಲಿ ಜನಾಂದೋಲನವಾಯಿತೆಂದರೆ, ಕೊನೆಗೆ ಹಾಂಕಾಂಗ್, ತೈವಾನ್ಗಳು ಪ್ರತಿರೋಧದ ಜ್ವಾಲೆಯಲ್ಲಿ ಮುಖ್ಯಭೂಮಿ ಚೀನಾವನ್ನು ಸುಟ್ಟಿತೆಂದರೆ ಚೀನಾದ ಬದುಕು ಬಲು ಕಷ್ಟವಿದೆ. ಅಲ್ಲೊಂದು ಬಲುದೊಡ್ಡ ಆಂತರಿಕ ದಂಗೆಯಾದರೂ ಅಚ್ಚರಿ ಪಡಬೇಕಿಲ್ಲ. ಒಟ್ಟಾರೆ ಹೊಸ ಬದಲಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಸ್ವಲ್ಪ ಕಾಯೋಣ..

Comments are closed.