ವಿಭಾಗಗಳು

ಸುದ್ದಿಪತ್ರ


 

ಕಮಲ್‌ನ ವಿಶ್ವರೂಪ ಮತ್ತು ಕೋಮುವಾದದ ವ್ಯಾಖ್ಯಾನ

ಈ ಹಿಂದೆ ತನ್ನ ತಾನು ಪ್ರವಾದಿ ಎಂದು ಕರಕೊಂಡು ವಿವಾದಕ್ಕೆ ಸಿಲುಕಿದ್ದ ಕಮಲ್, ಈಗ ಮತ್ತೊಂದು ವಿವಾದ ಮೈಮೇಲೆಳೆದುಕೊಂಡಿದ್ದಾನೆ. ನನ್ನ ಚಿತ್ರದಲ್ಲಿ ಅಂಥದ್ದೆಲ್ಲ ಏನಿಲ್ಲ, ಒಮ್ಮೆ ನೋಡಿರಯ್ಯ ಎಂದು ಗೋಗರೆದಿದ್ದಾನೆ. ಕೋರ್ಟಿಗೆ ಹೋಗುವ ಬೆದರಿಕೆ ಹಾಕಿದ್ದಾನೆ. ಚಿತ್ರಮಂದಿರಗಳಿರಲಿ, ಡಿಟಿಎಚ್‌ಗಳು ಕೂಡ ಹಕ್ಕು ಕೊಳ್ಳಲು ಮುಂದೆ ಬರುತ್ತಿಲ್ಲ. ಅವರಿಗೆಲ್ಲ ಒಂದೇ ಹೆದರಿಕೆ, ಮತಾಂಧರು ಸಿನೆಮಾ ಮಂದಿರ ಸುಟ್ಟುಬಿಟ್ಟರೆ?

ಇಂಜಿನಿಯರಿಂಗ್ ಅಧ್ಯಯನ ಮಾಡುವಾಗ ನನ್ನ ಗೆಳಯನೊಬ್ಬನಿದ್ದ. ಮಿನ್‌ಹಾಜ್ ಅಲಿ. ಹೊರನೋಟಕ್ಕೆ ಕಟ್ಟರ್‌ಪಂಥಿ ಎನ್ನಿಸುತ್ತಿರಲಿಲ್ಲ. ಆದರೆ ಅವನ ಮನದೊಳಗೇನಿದೆ ಎಂದು ಅರ್ಥವೇ ಆಗುತ್ತಿರಲಿಲ್ಲ. ಅವನಿಗೆ ಇಂಗ್ಲೆಂಡ್ ಕ್ರಿಕೆಟ್ ಟೀಮಿನಲ್ಲಿ ನಾಜಿರ್ ಹುಸೇನನ್ನು ಕಂಡರೆ ಪ್ರೀತಿ. ಶ್ರೀಲಂಕಾದಲ್ಲಿ ಇನ್ನೂ ತಂಡ ಹೊಕ್ಕದ ಮುಸಲ್ಮಾನ ಕ್ರಿಕೆಟಿಗನ ಮೇಲೆ ಒಲವು. ಭಾರತ ತಂಡದಲ್ಲಿ ಅವನಿಗೆ ಅಜರುದ್ದೀನನೇ ಅಚ್ಚುಮೆಚ್ಚು. ಆಟವನ್ನೂ ಧರ್ಮದ ಕನ್ನಡಕ ಹಾಕಿಕೊಂಡು ನೋಡುವುದು! ಸತ್ಯ ಹೇಳಬೇಕೆಂದರೆ, ಅಲ್ಲಿಯವರೆಗೆ ಅಜರುದ್ದೀನನನ್ನೂ ಅವನು ಮಣಿಕಟ್ಟು ಬಳಸಿ ಹೊಡೆಯುವ ಹೊಡೆತಗಳನ್ನೂ ಬಹಳ ಮೆಚ್ಚುತ್ತಿದ್ದೆ. ಈಗ ಯಾಕೋ ಆತನ ಬಗ್ಗೆ ಒಲವು ಕಡಿಮೆಯಾಗಲಾರಂಭಿಸಿತು.

ಪ್ರತಿಯೊಂದಕ್ಕೂ ಅದರದ್ದೇ ಆದ ಮಿತಿ ಇದೆ. ಆ ಮಿತಿಯಿಂದ ಹೊರ ತರುವುದು ಎಷ್ಟು ಕೆಟ್ಟದ್ದೋ ಆ ಮಿತಿಯೊಳಗೇ ಅದನ್ನು ಕೂಡಿ ಹಾಕೋದು ಮತ್ತೂ ಕೆಟ್ಟದ್ದು. ಅಶ್ಫಾಕ್ ಉಲ್ಲ ಖಾನ್ ನನಗೆ ಇಷ್ಟವಾಗೋದು ಕ್ರಾಂತಿಕಾರಿ ಅನ್ನುವ ಕಾರಣಕ್ಕಾಗಿ. ಅಲ್ಲಿ ಜಾತಿಯ ಹಂಗಿಲ್ಲ. ಅಬ್ದುಲ್ ಕಲಾಮ್ ಅವರನ್ನು ಮೆಚ್ಚುವುದಕ್ಕೆ ಅವರ ನಡತೆಯೇ ಪ್ರಮಾಣ ಹೊರತು ಮತಪಂಥಗಳಲ್ಲ. ಎಲ್ಲವನ್ನೂ ಮೀರಿ ನಿಂತು ಮಹತ್ವವಾದುದೊಂದರ ಅರಾಧನೆಗೈಯಬಲ್ಲವರು ಸಣ್ಣ ಚೌಕಟ್ಟಿನ ಒಳಗೆ ಹುದುಗಿ ಕುಳಿತುಬಿಟ್ಟರೆ ಸಮಾಜಕ್ಕೆ ಬಲು ದೊಡ್ಡ ನಷ್ಟ.
ನಮ್ಮ ನಾಡಿನ ಬುದ್ಧಿ ಜೀವಿಗಳೆನಿಸಿಕೊಂಡವರು ಹೀಗೆಯೇ. ಅನವಶ್ಯಕವಾಗಿ ಮೂಗು ತೂರಿಸಿ ಮಾತಾಡೋದು ತಮ್ಮ ಆಜನ್ಮ ಸಿದ್ಧ ಹಕ್ಕೆಂದು ಭಾವಿಸಿಬಿಟ್ಟಿದ್ದಾರೆ. ಕೊನೆಗೆ, ತಮ್ಮದನ್ನು, ತಮ್ಮವರನ್ನು ವಿರೋಧಿಸಿ ಅನ್ಯರನ್ನು ಅಪ್ಪಿಕೊಂಡರೆ ಬಹುಬೇಗ ಕೀರ್ತಿಗೆ ಪಾತ್ರರಾಗಿಬಿಡಬಹುದೆಂದು ನಿರ್ಧರಿಸಿಬಿಡುತ್ತಾರೆ. ಇಲ್ಲವಾದಲ್ಲಿ, ದಲಿತರ ವಿಚಾರ ಬಂದಾಗ, ಮಹಿಳೆಯರ ಕುರಿತ ಕಾಳಜಿಯ ಪ್ರಶ್ನೆ ಬಂದಾಗ, ಕೊನೆಗೆ ಮುಸಲ್ಮಾನರ ವಿಚಾರವೇ ಇರಲಿ, ಸಂಬಂಧವೇ ಇಲ್ಲದವರೂ ಕೂಗಾಡುತ್ತಿರುತ್ತಾರೆ!
ಬೆಂಗಳೂರು ವಿಶ್ವ ವಿದ್ಯಾಲಯವನ್‌ಉ ವಿಭಜಿಸಿ ಡಿವಿ ಗುಂಡಪ್ಪನವರ ಹೆಸರನ್ನು ಇಡಲು ಹೊರಟ ಸರ್ಕಾರದ ನಿರ್ಧಾರಕ್ಕೆ ಪತ್ರಿಕೆಯೊಂದು ಕ್ಯಾತೆ ಎತ್ತಿರುವುದು ಇದೇ ಕಾರಣಕ್ಕೆ. ದೇವನಹಳ್ಳಿಯನ್ನು ಉಸಿರಾಗಿಸಿಕೊಂಡ ಟಿಪ್ಪು ಹೆಸರನ್ನು ಇಡಬೇಕು ಎಂದು ಕೆಲವರು ಹೇಳಿದ್ದಾರೆ. ಅದೆಂಥ ದುರಂತ! ಗುಂಡಪ್ಪನವರ ಹೆಸರಿನ ’ಡಿ’ ದೇವನಹಳ್ಳಿಯ ಸೂಚಕ ಎಂಬುದನ್ನೆ ಮರೆತುಬಿಟ್ಟಿದ್ದಾರೆ. ಇಷ್ಟಕ್ಕೂ ಗುಂಡಪ್ಪನವರು ಬ್ರಾಹ್ಮಣನಾಗಿ ಹುಟ್ಟಿದ್ದೆ ತಪ್ಪಾ!? ಈ ಗೊಂದಲಗಳನ್ನು ಪೋಷಿಸಿಕೊಂಡೇ ಬರುವ ಭೂಪರು ಬೇಕಾದಷ್ಟಿದ್ದಾರೆ. ಅವರು ಹಿಂದೂಗಳನ್ನಷ್ಟೆ ಕೆಣಕಬಲ್ಲರು. ಮುಸಲ್ಮಾನರನ್ನು ಮುಟ್ಟಿದರೆ ಅಷ್ಟೇ. ಅವರು ತಟ್ಟಿಬಿಡುತ್ತಾರೆ.

ವಿಶ್ವರೂಪಮ್ ನಲ್ಲಿ ಕಮಲ್ ಗೆಟಪ್

ವಿಶ್ವರೂಪಮ್ ನಲ್ಲಿ ಕಮಲ್ ಗೆಟಪ್

ಈಗ ಪ್ರಶ್ನೆ ಕಮಲ ಹಾಸನ್ನನ ವಿಶ್ವರೂಪಮ್‌ನದು. ತಮಗಿಷ್ಟವಾಗದ, ತಮ್ಮ ಪಂಥದ ನಂಬಿಕೆಗಳಿಗೆ ಧಕ್ಕೆ ತರುವ ವಿಚಾರ ಅದರಲ್ಲಿದೆ ಎಂದು ತಮಿಳು ನಾಡಿನ ಮುಸಲ್ಮಾನರ ಸಂಘಟನೆಗಳು ಉರಿದುಬಿದ್ದಿವೆ. ಅವರ ಕೋಪ ಸಕಾರಣವೆಂದು ಅಲ್ಲಿನ ಸರ್ಕಾರ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಿದೆ! ಇಷ್ಟು ಮಾತ್ರ ಹಿಂದೂ ಸಂಘಟನೆಗಳು ಮಾಡಿದ್ದರೆ ಮಾಧ್ಯಮಗಳು ಯಾವ ಭಾವನೆಗೆ ಧಕ್ಕೆ ಏನಾಗಿದೆ, ಏನು ಸಮಸ್ಯೆಯಾಗಿದೆ ಎಂದು ಇಣುಕಿ ನೋಡುವುದನ್ನು ಬಿಟ್ಟು, ಪ್ರತಿರೋಧಕ್ಕೆ ತಮ್ಮದೇ ಆದ ಹೊಸತೊಂದು ಭಾಷ್ಯ ಬರೆದುಬಿಡುತ್ತಿದ್ದವು, ಪ್ರತಿರೋಧ ತೋರುವವರನ್ನು ಕೋಮುವಾದಿಗಳೆಂದು ಕರೆದುಬಿಡುತ್ತಿದ್ದವು.
ಅದಿರಲಿ…. ಕಮಲ್‌ನಂಥವರಿಗೆ ಈ ಅನುಭವವಾಗಿದ್ದು ಒಂದು ರೀತಿಯಿಂದ ಸರಿಯಾಗಿಯೇ ಇದೆ. ಕಮಾಲಸನ ಅನ್ನುವ ತನ್ನ ಹೆಸರನ್ನು ಕಮಲ್ ಹಾಸನ್ ಅಂತ ಮಾಡಿಕೊಂಡು ಸೆಕ್ಯುಲರ್ ಆದವ ಆತ. ನಾನು ದೇವರನ್ನು ನಂಬೋದೇ ಇಲ್ಲ ಅಮತ ಮತ್ತೆ ಮತ್ತೆ ಹೇಳುತ್ತ ಅದೊಂದು ಮಹತ್ವದ ಸಾಧನೆ ಎಂಬಂತೆ ಬೀಗಿದವ. ಈ ಹಿಂದೆ ಅನೇಕ ಬಾರಿ ಹಿಂದೂ ಧರ್ಮಕ್ಕೆ ಅವಹೇಳನ ಮಾಡುವಂತಹ ಚಿತ್ರಗಳನ್ನು ತೆಗೆದು ’ನಾವಿರುವುದು ಹೀಗೆಯೇ’ ಅಂದಿದ್ದ ಮಹಾನುಭಾವ ಅವನು. ’ದಶಾವತಾರಮ್ ಚಿತ್ರವನ್ನು ನೆನೆಸಿಕೊಳ್ಳಿ. ಆ ಹೆಸರು ನಮ್ಮ ಪಾಲಿಗೆ ಪೂಜನೀಯವಾದುದು. ಅದನ್ನು ಇಡುವುದು ಬೇಡವೆಂದಿದ್ದಕ್ಕೆ ಅವನು ಕ್ಯಾರೆ ಎಂದಿರಲಿಲ್ಲ. ಆ ಚಿತ್ರದಲ್ಲಿ ಶೈವ ವೈಷ್ಣವರ ಕದನ- ಕಾದಾಟಗಳಿಂದಲೇ ಅನೇಕ ಸಂಕಟಗಳು ಉದ್ಭವಿಸದವೆಂದು ನಿರೂಪಿಸುವ ಮೂಲಕ ಐತಿಹಾಸಿಕ ಪ್ರಮಾದ ಎಸಗಿಬಿಟ್ಟ. ಆಗಿನ ನಮ್ಮವರ ಗಲಾಟೆ ಅರಣ್ಯರೋದನವಾಗಿಬಿಟ್ಟಿತು. ಕಲಾವಿದನೊಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯದ ಮುಂದೆ ಯಾವ ಹಿಂದೂ ಸಂಘಟನೆಗಳೂ ಮಾತನಾಡಲಾಗಲಿಲ್ಲ! ಹೀಗೆ ಹಿಂದೂಗಳನ್ನು ಕೆಣಕಿದ್ದರಿಂದಲೇ ಆಂಗ್ಲ ಮಾಧ್ಯಮಗಳು ಆ ಚಿತ್ರಕ್ಕೆ ಭರ್ಜರಿ ಪ್ರಚಾರ ಕೊಟ್ಟವು. ಆ ಚಿತ್ರ ಬಕ್ಸ್ ಆಫೀಸ್ ಕೊಳ್ಳೆ ಹೊಡೆಯಿತು.
ಈಗ ನೋಡಿ ಮಜಾ, ಅದೇ ಕಮಲ ಹಾಸನ್, ಅದೇ ರೀತಿಯ ಸಿನೆಮಾ, ಮತ್ತದೇ ಅಭಿವ್ಯಕ್ತಿ ಸ್ವಾತಂತ್ರ್ಯ. ಎಲ್ಲವೂ ಹಾಗೇ ಇವೆ. ಆದರೆ ಕೆಣಕಿರೋದು ಮುಸ್ಲಿಮರನ್ನಾದ್ದರಿಂದ ಯಾವುದಕ್ಕೂ ಬೆಲೆ ಇಲ್ಲ. ಹೀಗಾಗಿ ಚಿತ್ರ ರದ್ದಾಗಿದೆ.
ನೆನಪಿಡಿ. ಇದು ಬರೀ ಚಲನಚಿತ್ರಕ್ಕಲ್ಲ. ಹಾಡಿಗೂ ಅನೇಕ ಬಾರಿ ಗಲಾಟೆಯಾಗಿದ್ದಿದೆ. ’ಆ ಮುಝೆ ಪ್ಯಾರ್ ಹುವಾ ಅಲ್ಲಾಹ್ ಮಿಯಾ’ ಎನ್ನುವ ಗೀತೆಯಲ್ಲಿ ಅಲ್ಲಾಹ್ ಅಂತ ಬಂದಿದೆ ಅಂತ ಗಲಾಟೆಯಾಗಿ ಚಿತ್ರ ತಂಡವೇ ಕ್ಷಮೆ ಕೇಳಬೇಕಾದ ಪರಿಸ್ಥಿತಿ ಬಂದಿತ್ತು. ಆದರೆ ರಾಮನ ಹೆಸರು ಹೇಳಿಕೊಂಡ ಅದೆಷ್ಟು ಪ್ರೇಮ ಗೀತೆಗಳು, ಗಾಯತ್ರಿ ಮಂತ್ರವನ್ನೆ ಕುಲಗೆಡಿಸಿದ ಸಿನೆಮಾ ಗೀತೆಗಳು ಬಂದುಹೋಗಿಲ್ಲ ಹೇಳಿ!
ಸಿನೆಮಾ ಮಂದಿ ಅನೇಕರು ಹೀಗಿದ್ದಾರೆ. ಮಹೇಶ್ ಭಟ್ಟನ ಮುಖ ಯಾವಾಗಲಾದರೂ ನೋಡಿ. ವಾಕರಿಕೆ ಬರುತ್ತೆ. ಆತನ ಹೆಸರು ಹಿಂದೂ ಆದರೂ ಆಂತರ್ಯದಲ್ಲಿ ಶತ ಪ್ರತಿಶತ ಮುಸಲ್ಮಾನ. ಹಿಂದೂ ತಂದೆ, ಮುಸ್ಲಿಮ್ ತಾಯಿಗೆ ಜನಿಸಿದವ. ಹೆಸರು ಮಹೇಶ ಎಂದಾಯ್ತು. ಕಂಠದಲ್ಲಷ್ಟೇ ಅಲ್ಲ, ಕಣಕಣದಲ್ಲೂ ವಿಷ ತುಂಬಿಹೋಯ್ತು. ತಾನು ಮದುವೆಯಾಗಿದ್ದ ಹೆಂಡತಿಗೆ ಡೈವೋರ್ಸ್ ಕೊಡದೆ ಮತ್ತೊಂದು ಮದುವೆಯಾಗಲಿಕ್ಕೆಂದೆ ಆತ ಮತಾಂತರಗೊಂಡ. ಮಕ್ಕಳಿಗೆ ಸಜ್ಜನಿಕೆಯ ಪಾಠ ಹೇಳಿಕೊಡುವುದಿರಲಿ, ಮಗಳಿಗೆ ಎಲ್ಲರೆದುರು ಲಿಪ್‌ಲಾಕ್ ಕೊಡುವ ಮೂಲಕ ಸುದ್ದಿಯಾದ. ಅದು ನಮಗೆ ಸಂಬಂಧವಿಲ್ಲದ ವಿಷಯ ನಿಜ. ಆದರೆ ಈ ಪರಿ ವ್ಯಕ್ತಿತ್ವದ ಮನುಷ್ಯ ತನ್ನ ಇಸ್ಲಾಮ್‌ತನವನ್ನು ಸಾಬೀತುಗೊಳಿಸಲು ಮುಸಲ್ಮಾನರ ಮುಂದೆ ನಿಂತು ಮಾತಾಡುವುದನ್ನು ಕೇಳೀ ನೋಡಿ, ತಬ್ಬಿಬ್ಬಾಗಿಬಿಡುತ್ತೀರಿ. ಆತ ಮುಸ್ಲಿಮ್ ತರುಣರೆದುರು ಹೇಳುತ್ತಾನೆ, ಅನ್ಯಾಯ ನಡೆಯುತ್ತಿರುವವರೆಗೆ ಭಯೋತ್ಪಾದನೆ ನಡೆದೇ ಇರುತ್ತದೆ ಎಂದು. ಏನಿದರ ಅರ್ಥ? ಭಾರತದಲ್ಲಿ ಮುಸಲ್ಮಾನರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಇವರು ಅಮಾಯಕರನ್ನು ಕೊಲ್ಲುವುದು ಸರಿ ಅಂತ ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳುತ್ತಾನಲ್ಲ, ಪಾಪಿ.. ಅವನಿಗೆ ಅದೇನು ಮಾಡಬೇಕು ಹೇಳಿ? ದೇಶದ ಯಾವ ಮೂಲೆಯಲ್ಲಿ ಯಾವ ಘಟನೆಯಾದರೂ ಸರಿ. ಟೀವಿ ಕ್ಯಾಮೆರಾಗಳ ಮುಂದೆ ಕುಳಿತು ಹಿಂದೂ ಸಂಘಟನೆಗಳ ಮೇಲೆ ಸವಾರಿ ಮಾಡುತ್ತಾನಲ್ಲ, ಇಷ್ಟು ಮಾತ್ರ ಆತ ಅನ್ಯರ ಕೆಣಕಿದರೆ?
ಭಾರತವನ್ನು ಅತ್ಯಂತ ಕೆಟ್ಟದಾಗಿ ಚಿತ್ರಿಸಿದ ಸ್ಮಮ್ ಡಾಗ್ ಮಿಲೇನಿಯರ್ ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಳ್ಳುತ್ತದೆ. ಏನೋ ಸಾಧನೆ ಮಾಡಿದ ಹಾಗೆ ಬೀಗುತ್ತದೆ. ಚಿತ್ರದ ಸಂಗೀತಕ್ಕೆ ಪ್ರಶಸ್ತಿ ಪಡಕೊಂಡ ಎ.ಆರ್.ರೆಹಮಾನ್ ಇದು ಅಲ್ಲಾಹನ ಕೃಪೆ ಎಂದು ಕೃತಜ್ಞನಾಗುತ್ತಾನೆ. ಭಾರತವನ್ನು ನಿಂದಿಸಿಯೇ ಇಂತಹ ಪ್ರಶಸ್ತಿ ಪಡೆಯಬೇಕೆ? ಇದು ಉತ್ತರವಿಲ್ಲದ ಪ್ರಶ್ನೆ.
ಅಂದಹಾಗೆ, ಈ ಹಿಂದೆ ತನ್ನ ತಾನು ಪ್ರವಾದಿ ಎಂದು ಕರಕೊಂಡು ವಿವಾದಕ್ಕೆ ಸಿಲುಕಿದ್ದ ಕಮಲ್, ಈಗ ಮತ್ತೊಂದು ವಿವಾದ ಮೈಮೇಲೆಳೆದುಕೊಂಡಿದ್ದಾನೆ. ನನ್ನ ಚಿತ್ರದಲ್ಲಿ ಅಂಥದ್ದೆಲ್ಲ ಏನಿಲ್ಲ, ಒಮ್ಮೆ ನೋಡಿರಯ್ಯ ಎಂದು ಗೋಗರೆದಿದ್ದಾನೆ. ಕೋರ್ಟಿಗೆ ಹೋಗುವ ಬೆದರಿಕೆ ಹಾಕಿದ್ದಾನೆ. ಚಿತ್ರಮಂದಿರಗಳಿರಲಿ, ಡಿಟಿಎಚ್‌ಗಳು ಕೂಡ ಹಕ್ಕು ಕೊಳ್ಳಲು ಮುಂದೆ ಬರುತ್ತಿಲ್ಲ. ಅವರಿಗೆಲ್ಲ ಒಂದೇ ಹೆದರಿಕೆ, ಮತಾಂಧರು ಸಿನೆಮಾ ಮಂದಿರ ಸುಟ್ಟುಬಿಟ್ಟರೆ? ಕಚೇರಿಗಳನ್ನು ಧ್ವಂಸಗೊಳಿಸಿದರೆ?? ನನಗೆ ಗೊತ್ತು, ನಿರ್ಭೀತ ಪತ್ರಿಕೆಗಳಿಂದಹಿಡಿದು ನಿರ್ಭೀತ ವ್ಯಕ್ತಿಗಳ ವರೆಗೆ ಎಲ್ಲರೂ ಹೆದರೋದು ಇದಕ್ಕೇ. ಆದರೆ ಇಂತಹಾ ಭೀತಿಯಿಂದ ಸಮಾಜ ಅಭಿವೃದ್ಧಿಗೊಳ್ಳುವುದಿಲ್ಲ, ನಾಶವಾಗುತ್ತದೆಯಷ್ಟೆ. ವಿಶ್ವರೂಪಿ ಕಮಲಹಾಸನ್‌ಗೆ ಈಗ ಅರ್ಥವಾಗಿದೆ. ಹಿಂದೊಮ್ಮೆ ಟಿಲಿವಿಷನ್ ಸಂದರ್ಭದಲ್ಲಿ ಆತ ರಾಮ ಮಂದಿರದ ಬಗ್ಗೆ ಭರ್ಜರಿ ಭಾಷಣ ಬಿಗಿದಿದ್ದ. ಸುಪ್ರೀಮ್ ಕೋರ್ಟ್ ತೀರ್ಪು ಸರಿಯಿಲ್ಲವೆಂದು ಮಾತನಾಡಿದ್ದ. ಮಸೀದಿ ಉರುಳಿದ ಜಾಗದಲ್ಲಿ ಶಾಲೆ ತೆರೆಯಬೇಕು, ಅಷ್ಟೇ ಅಲ್ಲ, ರಾಷ್ಟ್ರೀಯವಾದದ ಮಾತನಾಡುವವರಿಗೆ ಬುದ್ಧಿಯನ್ನೂ ಕಲಿಸಬೇಕೆಂದು ಹೇಳಿದ್ದ. ಅವನಿಗೀಗ ಎಲ್ಲವೂ ಅರ್ಥವಾಗಿರಬೇಕು. ಒಳ್ಳೆಯದೇ ಆಯಿತು..
ಸತ್ಯ ಹೇಳಲಾ? ಮತ ಪಂಥಗಳನ್ನು ಕುರಿತು ಪ್ರಶ್ನೆಗಳನ್ನು ಎತ್ತುವ, ವಿಡಂಬನೆ ಮಾಡುವ ಅವಕಾಶ ಇದ್ದಗಲೇ ಅವು ಬೆಳೆಯೋದು. ಬಸವಣ್ಣನವರು ಕೇಳಿದ, ಬುದ್ಧ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನೆಪದಲ್ಲಿಯೇ ತನ್ನ ತಾನು ತಿದ್ದಿಕೊಂಡು ಮುನ್ನಡೆಯುತ್ತಿರುವುದು ನಮ್ಮ ಧರ್ಮ. ಎಲ್ಲಿ ಪ್ರಶ್ನಿಸುವ ಅವಕಾಶವಿಲ್ಲವೋ, ಒಪ್ಪುವ – ಬಿಡುವ ಸ್ವಾತಂತ್ರ್ಯವಿಲ್ಲವೋ ಅಂತಹ ಧರ್ಮ ನಿತ್ಯ ನೂತನವಾಗಲಾರದು, ವೈಜ್ಞಾನಿಕವೂ ಆಗಲಾರದು. ಪ್ರಶ್ನೆ ಕೇಳಿದ್ದರಿಂದಲೇ ವಿಜ್ಞಾನ ಸಾಧ್ಯತೆಗಳು ಬೆಳೆಯೋದು. ಪ್ರಶ್ನೆ ಕೇಳಲಿ, ನಾವೂ ಉತ್ತರಿಸುತ್ತೇವೆ. ತಪ್ಪಿದ್ದರೆ ತಿದ್ದಿಕೊಳ್ಳುತ್ತೇವೆ. ಆದರೆ, ಕೇಳಬೇಕಾದವರು ಕೇಳಲಿ ಅಷ್ಟೇ. ತಮ್ಮ ಬದುಕನ್ನೆ ಪ್ರಶ್ನಾರ್ಥಕಗೊಳಿಸಿಕೊಂಡವರೆಲ್ಲ ಕೇಳಿದರೆ ಅದಕ್ಕೆ ನಯಾ ಪೈಸೆಯ ಕಿಮ್ಮತ್ತೂ ಕೊಡಬೇಕಿಲ್ಲ, ನೆನಪಿರಲಿ..

1 Response to ಕಮಲ್‌ನ ವಿಶ್ವರೂಪ ಮತ್ತು ಕೋಮುವಾದದ ವ್ಯಾಖ್ಯಾನ

  1. anand

    ಆದರೂ ನಾವು ಕೈ ಕಟ್ಟಿ ಕುಳಿತು ಕೊಂಡಿದ್ದೆವೆ…ಇದು ಭಾರತಿಯರ ತಾಳ್ಮೆ ಎಂದು ಹಿರಿಯರು ಕರಿಯುತ್ತಾರೆ…ಆದರೆ ಅದು ತಾಳ್ಮೆ ಅಲ್ಲ..ನಮಗೆಕೆ ಬೇಕು ಆ ವಿಷಯ..ಸುಮ್ಮನೆ ಮೈಮೆಲೆ ಎಂದು ವಾದಿಸುವವರೆ ಜಾಸ್ತಿ…