ವಿಭಾಗಗಳು

ಸುದ್ದಿಪತ್ರ


 

ಕಮ್ಯುನಿಸ್ಟರ ಕನಸಿನ ಚೀನಾ ಪುಡಿಯಾಗುತ್ತಿದೆ!

ಅವನ ಪಾಕಿಸ್ತಾನ ದ್ವೇಷ ಮುಸಲ್ಮಾನರ ವಿರುದ್ಧ ಆಕ್ರೋಶವಾಗಿ ಬಲಿಯಲಾರಂಭಿಸಿತು. ಮುಸಲ್ಮಾನರ ಪರವಾಗಿ ನಿಂತ ಪ್ರತಿಯೊಬ್ಬರೂ ಅವನಿಗೆ ದೇಶದ್ರೋಹಿಗಳಾಗಿಯೇ ಕಂಡರು. ಏಕೆಂದರೆ ಮುಸಲ್ಮಾನರಲ್ಲಿ ಬಹುದೊಡ್ಡ ಪಂಗಡ ಪಾಕಿಸ್ತಾನದ ಪರವಾಗಿ ನಿಂತಿತ್ತು.

ಸಿಎಎ ಪ್ರತಿಭಟನೆಯ ವೇದಿಕೆಯ ಮೇಲೆ ಚೀನಾದ ಸಂಬಳ ಪಡೆದು ಮಾತನಾಡುವ ಎಡಪಂಥೀಯರು ಪಾಕಿಸ್ತಾನಕ್ಕೆ ಜೈಕಾರ ಹಾಕಿ ಜನರನ್ನು ರೊಚ್ಚಿಗೆಬ್ಬಿಸಲು ಯತ್ನಿಸಿ ಕೈಸುಟ್ಟಿಕೊಂಡಿದ್ದಾರೆ. ಪಾಕಿಸ್ತಾನದೊಂದಿಗಿನ ಭಾರತೀಯರ ದ್ವೇಷಕ್ಕೆ ಒಂದೆರಡು ವರ್ಷಗಳ ಇತಿಹಾಸವಲ್ಲ, ಕನಿಷ್ಠ ಒಂದು ಸಾವಿರ ವರ್ಷಗಳಷ್ಟಿದೆ! ಘೋರಿ ಘಜ್ನಿಯರು ನಮ್ಮ ದೇವಸ್ಥಾನಗಳನ್ನು ಪುಡಿಗಟ್ಟಿ ಮೂತರ್ಿಗಳನ್ನು ಭಗ್ನ ಮಾಡಿದ ಲಾಗಾಯ್ತು ಭಾರತೀಯ ಪರಂಪರೆಯೊಂದಿಗೆ ಏಕರಸವಾದ ಇಲ್ಲಿನ ಪ್ರತಿಯೊಬ್ಬ ನಾಗರಿಕ ವಾಯುವ್ಯ ಭಾಗದ ಆಕ್ರಮಣಕಾರರನ್ನು ಕೆಂಗಣ್ಣಿನಿಂದಲೇ ಈಕ್ಷಿಸಿದ್ದಾರೆ. ಅವನ ರೋಷಾವೇಷಕ್ಕೆ ತುಪ್ಪ ಸುರಿದದ್ದು 1947ರ ವಿಭಜನೆ. ಅದು ಅಚಾನಕ್ಕಾಗಿ ಆದ ಘಟನೆಯೇನಲ್ಲ; 1905ರ ಬಂಗಾಳ ವಿಭಜನೆಯಲ್ಲಿಯೇ ಅದರದ್ದೊಂದು ಮುನ್ಸೂಚನೆ ಅವನಿಗೆ ಸಿಕ್ಕಾಗಿತ್ತು. ತಡಿಯಲು ಆತ ಸಾಕಷ್ಟು ಪ್ರಯತ್ನಿಸಿದ. ಮುಸಲ್ಮಾನರೊಂದಿಗೆ ಅನೇಕ ಹೊಂದಾಣಿಕೆಗಳಿಗೂ ತಯಾರಾದ; ಮತದ ಮದವೇರಿದ್ದವರು ಒಪ್ಪಿಕೊಳ್ಳಬೇಕಲ್ಲ. ಕೊನೆಗೂ ಭಾರತ ಖಂಡ-ತುಂಡವಾಯ್ತು. ಹಿಂದೂವಿನ ಮನಸಿನಲ್ಲಿ ಆರದ ಗಾಯ. ಈ ಹೊತ್ತಲ್ಲೂ ಇಲ್ಲಿಯೇ ಕೋಟ್ಯಂತರ ಮುಸಲ್ಮಾನರು ಉಳಿದರು. ಎಲ್ಲ ದಂಗೆಗಳಂತೆ ಇಲ್ಲಿಯೂ ಉಳಿದುಕೊಂಡ ಮುಸಲ್ಮಾನರ ವಿರುದ್ಧ ಇಡಿಯ ಸಮಾಜ ತಿರುಗಿ ಬೀಳಬೇಕಿತ್ತು. ಒಂದೆರಡು ಘಟನೆಗಳನ್ನು ಹೊರತುಪಡಿಸಿದರೆ ಬಲುದೊಡ್ಡ ಹಿಂದೂ ಸಮಾಜ ಶಾಂತವಾಗಿ ಪ್ರತಿಕ್ರಿಯಿಸಿತು. ಮುಸಲ್ಮಾನರನ್ನು ಪ್ರೀತಿಯಿಂದ ಅಪ್ಪಿಕೊಂಡು ಇಲ್ಲಿಯೇ ಜಾಗ ಮಾಡಿಕೊಟ್ಟಿತು. ತಮಗೆ ಸಿಗುವ ಸೌಲಭ್ಯಗಳಲ್ಲಿ ಬಹುಪಾಲನ್ನು ಅವರೊಂದಿಗೆ ಹಂಚಿಕೊಂಡಿತು. ಅಲ್ಪಸಂಖ್ಯಾತರೆಂದು ಕರೆದು ಅವರಿಗೆ ವಿಶೇಷ ಸವಲತ್ತುಗಳನ್ನೂ ಕಲ್ಪಿಸಿತು!

2

ಮೂನರ್ಾಲ್ಕು ದಶಕಗಳ ಕಾಲ ಶಾಂತವಾಗಿಯೇ ಇದ್ದ ಈ ಸಮಾಜ ಬರುಬರುತ್ತ ಉಗ್ರವಾಯ್ತು. 70ರ ದಶಕದಲ್ಲಿ ಪಾಕಿಸ್ತಾನ ನಮ್ಮೊಂದಿಗೆ ಯುದ್ಧದಲ್ಲಿ ಸೋತು ಸುಣ್ಣವಾದ ಮೇಲೆ ಹಲ್ಲು ತೆಗೆದ ಹಾವಿನಂತಾಗಿ ನೇರಯುದ್ಧದಿಂದ ಬದಿಗೆ ಸರಿಯಿತು. ರಷ್ಯಾದಲ್ಲಿ ಅಮೇರಿಕಾದ ಪರವಾಗಿ ನಡೆಸಿದ ಭಯೋತ್ಪಾದನಾ ಕೃತ್ಯದ ಅನುಭವವನ್ನು ಧಾರೆ ಎರೆದು ಭಾರತವನ್ನು ಗುರಿಯಾಗಿಸಿಕೊಂಡಿತು. ನೇರಯುದ್ಧಕ್ಕೆ ಸುರಿಯುತ್ತಿದ್ದ ಕೋಟ್ಯಂತರ ರೂಪಾಯಿಯ ಶೇಕಡಾ ಹತ್ತರಷ್ಟರಲ್ಲಿ ಭಾರತವನ್ನು ಆಂತರಿಕವಾಗಿ ತುಂಡರಿಸಬಹುದೆಂಬ ಮಾರ್ಗವನ್ನು ಅದು ಅರಸಿತು. ಆಗಲೇ ಇಲ್ಲಿನ ಮತಾಂಧ ತಲೆಗಳಲ್ಲಿ ಮಸಾಲೆ ಅರೆಯಲು ಆರಂಭಿಸಿದ್ದು. ಆಗಲೇ ಕ್ರಿಕೆಟಿನಲ್ಲಿ ಪಾಕಿಸ್ತಾನ ಗೆದ್ದರೆ ಪಟಾಕಿ ಹೊಡೆಯುವ ಮಂದಿ ಹೆಚ್ಚಾಗಲಾರಂಭಿಸಿದ್ದು. ಆನಂತರವೇ ಹಸಿರು ಬಾವುಟ ಹಿಡಿದು ಬೀದಿಗೆ ಬರುವ, ನಮಾಜ್ ಮುಗಿಸಿ ಸಕರ್ಾರಿ ಆಸ್ತಿ ನಾಶಗೈಯ್ಯುವ ಜನರ ಸಂಖ್ಯೆಯೂ ಬೆಳೆದಿದ್ದು. ನಿಧಾನವಾಗಿ ಪಾಕಿಸ್ತಾನ-ಚೀನಾಗಳ ಹಣದಿಂದ ಕೊಬ್ಬಿ ಮೆರೆವ ವಹಾಬಿಗಳು ತಮ್ಮ ಕಬಂಧ ಬಾಹುಗಳನ್ನು ಚಾಚಲಾರಂಭಿಸಿದರು. ಸಹಜವಾಗಿಯೇ ಹಿಂದೂ ಹೆದರಿದ.

3

ಅವನ ಪಾಕಿಸ್ತಾನ ದ್ವೇಷ ಮುಸಲ್ಮಾನರ ವಿರುದ್ಧ ಆಕ್ರೋಶವಾಗಿ ಬಲಿಯಲಾರಂಭಿಸಿತು. ಮುಸಲ್ಮಾನರ ಪರವಾಗಿ ನಿಂತ ಪ್ರತಿಯೊಬ್ಬರೂ ಅವನಿಗೆ ದೇಶದ್ರೋಹಿಗಳಾಗಿಯೇ ಕಂಡರು. ಏಕೆಂದರೆ ಮುಸಲ್ಮಾನರಲ್ಲಿ ಬಹುದೊಡ್ಡ ಪಂಗಡ ಪಾಕಿಸ್ತಾನದ ಪರವಾಗಿ ನಿಂತಿತ್ತು. ಹಿಂದೂವಿನ ಆಕ್ರೋಶ ಹೇಗಾಯಿತೆಂದರೆ ಮುಸಲ್ಮಾನರನ್ನೂ ಇಲ್ಲಿ ಉಳಿಸಲು ಕಾರಣಕರ್ತರಾದ ಮಹಾತ್ಮಾಗಾಂಧೀಜಿಯ ವಿರುದ್ಧ ತಿರುಗಿಬಿದ್ದ. ದೇಶದ ಸಂಪತ್ತಿನ ಮೇಲೆ ಮೊದಲ ಹಕ್ಕು ಮುಸಲ್ಮಾನರದ್ದೆಂದ ಕಾಂಗ್ರೆಸ್ಸನ್ನು ಇಲ್ಲವಾಗಿಸಿಬಿಡಬೇಕೆಂಬ ಪಣ ತೊಟ್ಟ. ಅಮೇರಿಕಾವನ್ನು ಪ್ರೀತಿಸಿದಾಗ, ಇಂಗ್ಲೆಂಡನ್ನೂ ಪ್ರೀತಿಸಿದಾಗ ಉಂಟಾಗದ ಆಕ್ರೋಶ ಪಾಕಿಸ್ತಾನವನ್ನು ಪ್ರೀತಿಸುತ್ತೇನೆ ಎಂದೊಡನೆ ಉಕ್ಕೇರೋದು ಅದಕ್ಕೇ. ಮೊನ್ನೆ ಆ ಹುಡುಗಿ ವೇದಿಕೆಯ ಮೇಲೆ ಪಾಕಿಸ್ತಾನಕ್ಕೆ ಜೈಕಾರ ಕೂಗಿದಾಗ ಓವೈಸಿಯೂ ಓಡಿ ಬಂದು ಮೈಕು ಕಸಿದುಕೊಂಡಿದ್ದು ಇದೇ ಕಾರಣಕ್ಕೆ. ರಾಷ್ಟ್ರಗೀತೆ ಹಾಡುವುದಿಲ್ಲವೆಂದವನ, 15 ನಿಮಿಷ ಪೊಲೀಸರು ಸುಮ್ಮನಿದ್ದರೆ ಹಿಂದೂಗಳನ್ನೇ ಮುಗಿಸಿಬಿಡುತ್ತೇನೆ ಎಂದವನ ಮಾನಸಿಕತೆ ಇಷ್ಟು ಬೇಗ ಬದಲಾಗುವುದು ಸಾಧ್ಯವೇನು? ನನಗಂತೂ ನಂಬಿಕೆ ಬರುತ್ತಿಲ್ಲ.
ವಾಸ್ತವವೇನು ಗೊತ್ತೇ? ಈ ರಾಜಕಾರಣಿಗಳೆನಿಸಿಕೊಂಡವರಿಗೆಲ್ಲ ಈಗ ಸ್ಪಷ್ಟವಾಗಿ ಅರ್ಥವಾಗಿದೆ. ಮೋದಿಯ ನೇತೃತ್ವದಲ್ಲಿ ಭಾರತ ರಾಷ್ಟ್ರೀಯತೆಯ ಹೆದ್ದಾರಿಯಲ್ಲಿ ಚಲಿಸುತ್ತಿದೆ. ಅಪ್ಪಿ-ತಪ್ಪಿಯೂ ಇಲ್ಲಿ ಯಾರಾದರೂ ಎದುರು ಹಾದಿಯಲ್ಲಿ ಬರುವುದು ಕಂಡರೆ ಉಳಿಯೋದು ಕಷ್ಟ ಅಂತ! ಮುಸಲ್ಮಾನರ ವೋಟಿಗಾಗಿ ಯಾವ ಹಂತಕ್ಕೂ ಇಳಿಯಬಲ್ಲ ಕುಮಾರಸ್ವಾಮಿ ಆರಂಭದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಹೇಳಿಕೆ ಸಮಥರ್ಿಸಿಕೊಂಡು ಆನಂತರ ಯೂಟನರ್್ ಹೊಡೆದದ್ದೂ ಅದಕ್ಕೇ! ನಿಜಕ್ಕೂ ಅಚ್ಛೇದಿನ್ ಬಂದಿದೆ.

ಆಲ್ರೈಟ್, ಮುಂದೆ ಹೋಗೋಣ! ಈ ಪ್ರತಿಭಟನಾಕಾರರು ದಿನಗಳೆದಂತೆ ಹತಾಶೆಗೊಳಗಾಗುತ್ತಿರುವಂತೆ ಕಾಣುತ್ತಿಲ್ಲವೇ? ಅವರವರಲ್ಲೇ ಕಿತ್ತಾಟಗಳು ಶುರುವಾಗಿವೆ. ನಾಯಕನೆನಿಸಿಕೊಂಡವರ್ಯಾರೂ ಮುಂದೆ ಬಂದು ನೇತೃತ್ವ ವಹಿಸಲು ನಿರಾಕರಿಸುತ್ತಿದ್ದಾರೆ. ಅವರ ನಂಬಿಕೆಯ ಮೇಲೆ ಅಖಾಡಕ್ಕೆ ಧುಮುಕಿದ ಪುಡಿ ನಾಯಕರು ಒಂದೊಂದೇ ಹೆಜ್ಜೆ ಹಿಂದೆ ಇಡುತ್ತಿದ್ದಾರೆ. ಏಕಿರಬಹುದು? ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇವರ ಪ್ರತಿಭಟನೆಗೆ ಸಕರ್ಾರ ಬೆದರಲಿಲ್ಲ ಮತ್ತು ಅರಚಾಟ ಅರಣ್ಯರೋದನವಾಗುತ್ತಿದ್ದಂತೆ ಸಿಗಬೇಕಾದ ಬೆಂಬಲವೂ ಸಿಗುತ್ತಿಲ್ಲ. ಆರಂಭದಲ್ಲಿ ಹಣ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೂಲಕ ಹರಿದು ಬಂತು. ಈ ಸಂಘಟನೆಗೆ ನೇರ ಪಾಕಿಸ್ತಾನದಿಂದ ಹಣ ಬರುತ್ತಿರುವ ಸುದ್ದಿ ಖಾತ್ರಿಯಾಗುತ್ತಿದ್ದಂತೆ ಈ ಸಂಘಟನೆಗಳ ಮೇಲೆ ನಿಷೇಧದ ತೂಗುಕತ್ತಿ ಬಂತು. ಮುಂದೇನು? ಕಾಂಗ್ರೆಸ್ಸು ಮುಸಲ್ಮಾನರ ಹೋರಾಟದ ಲಾಭವನ್ನು ಪಡೆಯುವ ಸ್ಥಿತಿಯಲ್ಲಿಲ್ಲದಿರುವುದರಿಂದ ಹಣವನ್ನೂ ಅದು ಸುರಿಯುತ್ತಿಲ್ಲ. ಇನ್ನು ಆಯಾ ರಾಜ್ಯಗಳಲ್ಲಿರುವ ಸಣ್ಣ ಪುಟ್ಟ ಪಾಟರ್ಿಗಳು ಸಮಾವೇಶಕ್ಕೆ ಹಣ ಸುರಿದು ಅಸ್ತಿತ್ವವನ್ನು ಜೀವಂತವಾಗಿ ಉಳಿಸಿಕೊಳ್ಳಲು ಯತ್ನಿಸುತ್ತಿವೆ. ಮೊನ್ನಿನ ಬೆಂಗಳೂರಿನ ಸಮಾವೇಶಕ್ಕೆ ಹಣ ಹಾಕಿರೋದು ದೇವೇಗೌಡರ ಜನತಾದಳವೇ! ದೆಹಲಿಯಲ್ಲಿ ಹಣ ಹೂಡಿದ್ದಕ್ಕೆ ಆಮ್ಆದ್ಮಿ ಪಕ್ಷಕ್ಕೆ ಲಾಭವಾಯ್ತು, ಕನರ್ಾಟಕದಲ್ಲಿ ಯಾವ ಲಾಭವೂ ಇಲ್ಲ. ಏಕೆಂದರೆ ಚುನಾವಣೆಗೆ ಇನ್ನೂ ಮೂರು ವರ್ಷಗಳಾದರೂ ಬಾಕಿ ಇದೆ. ಅಷ್ಟರೊಳಗೆ ಕುಮಾರಸ್ವಾಮಿ ಅದೆಷ್ಟು ಮುಸ್ಲೀಂ ಮತಗಳನ್ನು ಬಾಚಿಕೊಳ್ಳುತ್ತಾರೋ ಗೊತ್ತಿಲ್ಲ ಆದರೆ ಈ ಧಾವಂತದಲ್ಲಿ ಈಗ ಮಾಡಿಕೊಂಡಿರುವ ಎಡವಟ್ಟುಗಳಿಗೆ ಭಾರೀ ಬೆಲೆಯನ್ನು ತೆರಬೇಕಾಗಿರುವುದಂತೂ ಹೌದು.

ಈಗ ನಮ್ಮ ಮುಂದಿರುವ ಪ್ರಶ್ನೆ, ಈ ಒಟ್ಟಾರೆ ಪ್ರತಿಭಟನೆಯಿಂದ ಪಾಕಿಸ್ತಾನ ಹಿಂದೆ ಸರಿದಿರುವುದೇಕೆ ಅಂತ. ಮೊದಲನೆಯದಾಗಿ ಹಣವನ್ನು ಸಮರ್ಥ ಕೈಗಳಿಗೆ ತಲುಪಿಸಲು ಇದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಾಲವನ್ನೇ ಇಲ್ಲಿ ವ್ಯವಸ್ಥಿತವಾಗಿ ಭೇದಿಸಲಾಗಿದೆ. ಇನ್ನು ಶಾಂತ-ದೇಶಭಕ್ತ ಶೈಲಿಯ ಪ್ರತಿಭಟನೆಗೆ ಮತಾಂಧ ಮುಸಲ್ಮಾನ ತರುಣರಿಗೆ ಮನಸ್ಸು ಒಪ್ಪದೇ ಇರುವುದರಿಂದ ಬರುಬರುತ್ತಾ ಅವರು ಇದರಿಂದ ದೂರವಾಗುತ್ತಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಇವರೆಲ್ಲಾ ಕೈಹಿಡಿದು ನಡೆಸುವ ಚೀನಾ ಬಲುದೊಡ್ಡ ತೊಂದರೆಗೆ ಸಿಕ್ಕುಹಾಕಿಕೊಂಡಿದೆ. ಹೌದು, ಈ ಬಾರಿಯೂ ಈ ಸಮಸ್ಯೆಯಿಂದ ಅದು ಪಾರಾಗದಿದ್ದರೆ ಒಟ್ಟಾರೆ ಕಮ್ಯುನಿಸ್ಟ್ ಸೌಧವೇ ಕುಸಿದು ಬೀಳಲಿದೆ.

4

ಚೀನಾದ ಅಧ್ಯಕ್ಷ ಶಿ ಜಿಂಪಿಂಗ್ ಬದುಕಿರುವವರೆಗೆ ತಾನೇ ಅಧ್ಯಕ್ಷನಾಗಿರಲು ಅನುಮತಿ ಪಡಕೊಂಡಿರುವುದು ನಿಮಗೆಲ್ಲ ಗೊತ್ತೇ ಇದೆ. ಆ ಹೊತ್ತಲ್ಲಿ ಚೀನಾದಲ್ಲಿ ಆತ ಖ್ಯಾತಿಯ ಉತ್ತುಂಗದಲ್ಲಿದ್ದ. ಈಗ ಪೂರ್ಣ ಉಲ್ಟಾ. ಜನ ಊರೂರಲ್ಲಿ ಮೌನವಾಗಿ ಹಿಡಿ ಶಾಪ ಹಾಕುತ್ತಿದ್ದಾರೆ. ಕೊರೋನಾ ವೈರಸ್ಸು ಚೀನಾದ ಕೇಡು ಮನಸ್ಥಿತಿಯನ್ನು ಬಯಲಿಗೆ ತಂದದ್ದಲ್ಲದೇ ಅದರ ಬಲಹೀನತೆಯನ್ನು ಸಮಾಜದೆದುರು ಬಹಿರಂಗಪಡಿಸಿದೆ. ಹೊರಬರುತ್ತಿರುವ ಒಂದೊಂದು ಸುದ್ದಿಗಳೂ ಇದನ್ನು ಪುಷ್ಟೀಕರಿಸುತ್ತಿವೆ. ಮೊದಲನೆಯದಾಗಿ ಕರೋನಾ ವೈರಸ್ಸಿನ ಆಕ್ರಮಣದ ಸುದ್ದಿ ಜಗತ್ತಿಗೆ ಗೊತ್ತಾಗುವ ಒಂದು ತಿಂಗಳ ಮುಂಚೆಯೇ ಚೀನಾದ ಅಧಿಕಾರಿಗಳಿಗೆ ತಮ್ಮಿಂದಾದ ಪ್ರಮಾದದ ಅರಿವಾಗಿದೆ. ಆದರೆ ಜಗತ್ತಿಗೆ ಈ ಜೈವಿಕ ಅಸ್ತ್ರದ ಸುದ್ದಿ ತಿಳಿಯುವ ಮುನ್ನವೇ ಅದರ ಕುರುಹು ನಾಶಪಡಿಸಬೇಕೆಂದೇ ಅವರು ವೈರಸ್ ಆಕ್ರಮಣಕ್ಕೆ ಒಳಗಾದವರನ್ನು ನಿದರ್ಾಕ್ಷಿಣ್ಯವಾಗಿ ಮುಗಿಸಿಬಿಟ್ಟರು ಮತ್ತು ಈ ಸುದ್ದಿಯನ್ನು ಜಗತ್ತಿಗೆ ಮುಟ್ಟಿಸಬಲ್ಲ ವಿಶಲ್ ಬ್ಲೋವರ್ಗಳನ್ನು ಎಲ್ಲಿಗೆ ಒಯ್ದರೆಂಬುದೇ ಯಾರಿಗೂ ಗೊತ್ತಾಗಲಿಲ್ಲ. ವೈದ್ಯನೊಬ್ಬ ಈ ವಿಚಾರವನ್ನು ತನ್ನ ಮಿತ್ರರಿಗೆ ಹೇಳಿ ಎಚ್ಚರಿಕೆಯಿಂದಿರುವಂತೆ ಕೇಳಿಕೊಂಡ ಕೋಪಕ್ಕೆ ಅವನನ್ನು ಕೊಂದೇಬಿಟ್ಟಿತು ಸಕರ್ಾರ. ಮೊದಲಿಗೆ ಕರೋನಾದಿಂದಲೇ ಸತ್ತನೆಂದೂ ಆನಂತರ ಹೇಳಿಕೆ ಬದಲಿಸಿ ಬೇರೊಂದು ಕಾಯಿಲೆಗೆ ತುತ್ತಾದನೆಂದೂ ಹೇಳಲಾಯ್ತು! ಒಂದು ಮೂಲದ ಪ್ರಕಾರ ಸುದ್ದಿ ಹೊರ ಜಗತ್ತಿಗೆ ತಿಳಿಯುವ ವೇಳೆಗೆ ಸಾವಿರಾರು ಜನರನ್ನು ಚೀನಿ ಸಕರ್ಾರ ದಹಿಸಿಬಿಟ್ಟಿತ್ತು!

ಆನಂತರವೂ ಶಿ ಜಿಂಪಿಂಗ್ನ ಧಿಮಾಕಿಗೆ ಕೊರತೆ ಇರಲಿಲ್ಲ. ಅಮೇರಿಕಾದ ಸಹಾಯ ಪಡೆದರೆ ಅವಮಾನವಾದೀತೆಂದು ಭಾವಿಸಿ ಸಹಾಯವೇ ಬೇಡವೆಂದ. ಆತನ ಸವರ್ಾಧಿಕಾರಿ ಧೋರಣೆ ಅದೆಷ್ಟು ಜೋರಾಯಿತೆಂದರೆ ಜನ ಬೀದಿಯಲ್ಲಿ ಅಡ್ಡಾಡಲು ಸಕರ್ಾರದ ಅನುಮತಿ ಕೇಳಬೇಕಾಯ್ತು. ಡಿಸೆಂಬರ್ನಲ್ಲಿ ಈ ವೈರಸ್ಸಿನ ತಾಂಡವನೃತ್ಯ ಆರಂಭವಾಗಿತ್ತು. ಜನವರಿಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಆತ, ‘ಪ್ರತಿಯೊಬ್ಬ ಚೀನಿಯನೂ ಈ ಮಹಾಯುಗದಲ್ಲಿ ವಾಸಿಸುವುದಕ್ಕೆ ಹೆಮ್ಮೆ ಪಡಬೇಕು. ಎಂತಹ ಬಿರುಗಾಳಿಗೂ ನಮ್ಮ ಪ್ರಗತಿ ಓಟ ನಿಲ್ಲುವುದಿಲ್ಲ’ ಎಂದ. ಆತ ಹೇಳಿದ ಬಿರುಗಾಳಿ ಯಾವುದೆಂಬುದನ್ನು ಅಥರ್ೈಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತಷ್ಟೇ.

5

ಈ ವೈರಸ್ ದಾಳಿಯನ್ನು ಚೀನಾದೆದುರಿಗಿನ ಮಹಾಸವಾಲು ಎಂದು ಬಣ್ಣಿಸಿರುವ ಶಿ, ಇದು ಅಲ್ಲಿನ ವ್ಯವಸ್ಥೆ ಮತ್ತು ಸಕರ್ಾರದ ತಾಕತ್ತನ್ನು ಪರೀಕ್ಷಿಸಲೆಂದೇ ಬಂದಿದೆ ಎಂದು ಜನರನ್ನು ಹುರಿದುಂಬಿಸಿದ. ಆರಂಭದಲ್ಲಿ ಇದನ್ನು ಹತೋಟಿಗೆ ತಂದುಕೊಳ್ಳುವುದು ಸುಲಭವೆಂದೆನಿಸಿತ್ತು ಅವನಿಗೆ. ಯಾವಾಗ ಕೈ ಮೀರಲಾರಂಭಿಸಿತೋ ತನ್ನ ನಂತರದ ನಾಯಕ ಲಿ ಕಿಕಿಯಾಂಗ್ನನ್ನು ಉಸ್ತುವರಿಯಾಗಿ ನೇಮಿಸಿದ. ಹೊರಗೆ ಕಾಣಿಸಿಕೊಳ್ಳುವುದನ್ನೇ ಬಿಟ್ಟ. ತನ್ನ ದಮನ ಮಾರ್ಗವನ್ನು ಮಾತ್ರ ಒಳಗಿನಿಂದಲೇ ಬಳಸಲಾರಂಭಿಸಿದ. ಮಾವೋನಂತೆ ತನ್ನ ವಿರುದ್ಧ ನಿಂತ ಪ್ರಜ್ಞಾವಂತರನ್ನು ಮಟ್ಟ ಹಾಕಲು ಆದೇಶಿಸಿದ. ಶುಶಿಯಾಂಗ್ ಈ ದಮನ ಚಕ್ರದಲ್ಲಿ ಸಿಲುಕಿದ ಚೀನೀ ಹೋರಾಟಗಾರ. ಬಲು ಹಿಂದಿನಿಂದಲೂ ಶಿ ಯ ವಿರುದ್ಧ ತನ್ನ ಲೇಖನಿಯನ್ನು ಬಳಸುತ್ತಲೇ ಬಂದಿರುವ ಶೂ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ‘ಕರೋನಾ ತಡೆಯುವಷ್ಟು ಚುರುಕುತನ ನಿನ್ನಲಿಲ್ಲ’ ಎಂದು ಬರೆದ. ಅದಾದ ಕೆಲವು ದಿನದಲ್ಲಿ ಭೂಗತವಾಗಿ ಅಲ್ಲಿಂದಲೂ ಬಿಟ್ಟೂ ಬಿಡದೇ ಬರೆಯಲಾರಂಭಿಸಿದ. ಆತನ ಸಾಮಾಜಿಕ ಜಾಲತಾಣಗಳು ಬೆಂಕಿಯನ್ನೇ ಉಗುಳುತ್ತಿದ್ದವು. ಒಂದು ದಿನ ಇದ್ದಕ್ಕಿದ್ದಂತೆ ಸೆರೆ ಸಿಕ್ಕ ಆತನಿಗೆ ಮುಂದೇನಾಯ್ತು ಎಂಬುದು ಯಾರಿಗೂ ಗೊತ್ತಿಲ್ಲ. ಆತನ ಗೆಳತಿಯನ್ನು ಬಂಧಿಸಿ ಸಕರ್ಾರ ಒಯ್ದುಬಿಟ್ಟಿದೆ. ಎಲ್ಲಿಗೆಂದು ಯಾರೂ ಕೇಳುವಂತೆಯೂ ಇಲ್ಲ, ಸಕರ್ಾರ ಹೇಳುವುದೂ ಇಲ್ಲ! ಶಿ ತನ್ನ ಬಾಹುಗಳನ್ನು ಮೊದಲಿಗಿಂತಲೂ ಬಲಗೊಳಿಸುತ್ತಿದ್ದಾನೆ. ವುಹಾನ್ ನಗರವಂತೂ ಸಂಪೂರ್ಣ ಖಾಲಿಯಾಗಿದೆ. ಇತ್ತ ಬೇರೆ ನಗರಗಳಲ್ಲೂ ಜನರನ್ನು ಮನೆಯಿಂದ ಹೊರಬರದಂತೆ ತಡೆಯಲಾಗುತ್ತಿದೆ. ಡ್ರೋನ್ಗಳು ಎಲ್ಲೆಲ್ಲೂ ಅಡ್ಡಾಡುತ್ತಿದ್ದು ಅಲ್ಲಲ್ಲೇ ಸಂದೇಶಗಳನ್ನು ಬಿತ್ತರಿಸುವ ದೃಶ್ಯ ಈಗ ವೈರಲ್ ಆಗುತ್ತಿದೆ.

ಹಾಗೆಂದು ಇದೊಂದೇ ಸಮಸ್ಯೆ ಅಲ್ಲ. ಹಾಂಗ್ಕಾಂಗ್ನ ಪ್ರತಿಭಟನೆಯಲ್ಲಿ ಕೈಯ್ಯಾಡಿಸಿ ಶಿ ಕೈಸುಟ್ಟುಕೊಂಡಿದ್ದಾರೆ. ತೈವಾನಿನ ಚುನಾವಣೆಗಳೂ ಅವರಿಗೆ ಹೆದರಿಕೆ ಹುಟ್ಟಿಸುತ್ತಿವೆ. ಅಮೇರಿಕಾ ಚೀನಾದ ದಕ್ಷಿಣ ಸಮುದ್ರದಲ್ಲಿ ಭಾರತದ ಸಹಕಾರದೊಂದಿಗೆ ಸಾಧಿಸಿರುವ ವಿಕ್ರಮ ಚೀನಾದ ಭವಿಷ್ಯಕ್ಕೆ ಒಳಿತಲ್ಲ! ಉಯ್ಘುರ್ ಮುಸಲ್ಮಾನರನ್ನು ಡಿಟೆಂಶನ್ ಕ್ಯಾಂಪುಗಳಲ್ಲಿ ಹಾಕಿ ತದುಕುತ್ತಿರುವುದು ಒಂದಿಡೀ ಜನಾಂಗದಲ್ಲಿ ಹೆದರಿಕೆ ಹುಟ್ಟಿಸಿದೆ, ಜೊತೆಗೆ ಅಸಹನೆ ಕೂಡ! ಇನ್ನೂ ಟಿಬೇಟಿನ ಜನರ ಆಕ್ರೋಶವಂತೂ ಒಳಗೊಳಗೆ ಸುಡುತ್ತಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಸಿಡಿಯಲು ಸಿದ್ಧವಾಗಿರುವ ಚೀನಾದ ಕರೋನಾ ಮತಾಪಿಗೆ ಕಿಡಿ ಹಚ್ಚಿದೆ ಎನಿಸುತ್ತಿದೆ. ಇತ್ತ ಇವರನ್ನೇ ನಂಬಿ ಇಲ್ಲಿ ಪ್ರತಿಭಟನೆಗೆಂದು ಬೀದಿಗೆ ಬಂದು ಕುಳಿತ ಮುಸಲ್ಮಾನರ ಸ್ಥಿತಿ ದಿನೇದಿನೇ ಹದಗೆಡುತ್ತಿದೆ. ಅವರು ತಾವು ಒಂದಾಗುವ ನೆಪದಲ್ಲಿ ಹಿಂದೂಗಳನ್ನು ಹಿಂದೆಂದಿಗಿಂತಲೂ ಒಗ್ಗಟ್ಟಿನಿಂದ ಜೊತೆಯಾಗಿರುವಂತೆ ಮಾಡಿಬಿಟ್ಟಿದ್ದಾರೆ!

Comments are closed.