ವಿಭಾಗಗಳು

ಸುದ್ದಿಪತ್ರ


 

ಕರೋನಾ ಕದನದಲ್ಲಿ ಯಶ ದಕ್ಕುವುದೇ!

ಬಹುಶಃ ಕಳೆದ ಒಂದೆರಡು ದಶಕದಲ್ಲಿ ಇಷ್ಟು ಭೀತಿಯನ್ನು ಹುಟ್ಟಿಸಿದ್ದ ಮತ್ತೊಂದು ವೈರಸ್ಸನ್ನು ಭಾರತವಂತೂ ಕಂಡಿರಲಿಕ್ಕಿಲ್ಲ. ಕರೋನಾ ಬೆಚ್ಚಿ ಬೀಳಿಸಿಬಿಡಬಲ್ಲಂತೆ ಜಗತ್ತನ್ನು ಹಂತ-ಹಂತವಾಗಿ ಆವರಿಸಿಕೊಳ್ಳುತ್ತಿದೆ. ಅದರ ಹರಡುವಿಕೆಯನ್ನು ಗಮನಿಸಿದರೆ ಎಂಥವರೂ ಗಾಬರಿಯಾಗುತ್ತಾರೆ. ಅಮೇರಿಕಾದಲ್ಲಿ ಮೊದಲ ವಾರ ಇಬ್ಬರು ಶಂಕಿತರು ಕಂಡುಬಂದರೆ ಎರಡನೇ ವಾರ ಅದು 105ಕ್ಕೇರಿತ್ತು. ಮೂರನೇ ವಾರ ಆರು ಪಟ್ಟು ಹೆಚ್ಚಿ, 613ನ್ನು ಮುಟ್ಟಿತ್ತು. ಫ್ರಾನ್ಸ್ನ ಕಥೆಯೂ ಇದಕ್ಕಿಂತಲೂ ಭಿನ್ನವಲ್ಲ. 12ರಿಂದ ಆರಂಭವಾದ ಶಂಕಿತರ ಸಂಖ್ಯೆ ನಾಲ್ಕನೇ ವಾರದವೇಳೆಗೆ 4500 ದಾಟಿತ್ತು. ಹೆಚ್ಚು-ಕಡಿಮೆ ಇದೇ ದಾರಿಯನ್ನು ಅನುಸರಿಸಿದ ಇರಾನ್ ಐದನೇ ವಾರದ ವೇಳೆಗೆ 13,000 ಶಂಕಿತರ ಗೂಡಾಗಿ ಜಗತ್ತಿನಿಂದ ಬೇರ್ಪಟ್ಟು ನಿಂತಿದೆ. ಇರಾನ್ಗಿಂತಲೂ ಕೆಟ್ಟ ಸ್ಥಿತಿ ಇಟಲಿಯದ್ದು. ಅಲ್ಲಿ ಐದನೇ ವಾರದ ವೇಳೆಗೆ 21,000ಕ್ಕೂ ಹೆಚ್ಚು ಶಂಕಿತರಿದ್ದಾರೆ! ನೆನಪಿಡಿ, ಚೀನಾ ಒಟ್ಟೂ ಕರೋನಾ ಪೀಡಿತರ ಸಂಖ್ಯೆಯೆಂದು ಹೊರಹಾಕಿದ್ದು 40,000 ಮಾತ್ರ. ಅಂಕಿ-ಸಂಖ್ಯೆಗಳನ್ನು ನಂಬಿಕೊಂಡೇ ಹೇಳಬೇಕಾದರೆ ಐದು ವಾರಗಳಲ್ಲಿ 21,000 ಶಂಕಿತರು ಇಟಲಿಯಲ್ಲಿರುವುದು ನಿಜವಾದರೆ ಅದಕ್ಕಿಂತಲೂ ಹತ್ತಾರು ಪಟ್ಟು ಜನಸಾಂದ್ರತೆಯುಳ್ಳ ಚೀನಾ 16 ವಾರಗಳಲ್ಲಿ ಎಷ್ಟು ಶಂಕಿತರನ್ನು ಕಂಡಿರಬಹುದೆಂದು ಊಹಿಸುವುದೂ ಅಸಾಧ್ಯ. ಭಾರತದ ಕಥೆಯೇನು ಗೊತ್ತೇ? ಮೊದಲ ವಾರ ಮೂರು ಜನ ಪತ್ತೆಯಾದರೆ ಎರಡನೇ ವಾರ ಅದರ ಸಂಖ್ಯೆ 24ಕ್ಕೇರಿತ್ತು. ಮೂರನೇ ವಾರ 105ಕ್ಕೆ ಮುಟ್ಟಿತ್ತು. ಈ ವಾರ ಮತ್ತು ಮುಂದಿನ ಒಂದು ವಾರ ಈ ಸಂಖ್ಯೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ಸಾಧ್ಯವಾದರೆ ನಾವು ಈ ಯುದ್ಧವನ್ನು ಗೆದ್ದಂತೆಯೇ!
ಪಶ್ಚಿಮದ ಅನೇಕ ಮಾಧ್ಯಮಗಳು ಚೀನಾದ ಋಣಭಾರದಲ್ಲಿರುವುದರಿಂದ ಅವರು ಈ ವೈರಸ್ಸನ್ನು ಎದುರಿಸಿದ ರೀತಿಯ ಬಗ್ಗೆ ಹೆಮ್ಮೆಯಿಂದ ಬರೆಯುತ್ತಿದ್ದಾರೆ. ಅದೇ ವೇಳೆಗೆ ಭಾರತೀಯರು ಇದನ್ನು ಎದುರಿಸುವ ತಯಾರಿಯೇ ಮಾಡಿಕೊಂಡಿಲ್ಲವೆಂದು ಜರಿಯುತ್ತಿದ್ದಾರೆ. ಸತ್ಯವೆಂದರೆ ಕರೋನಾ ವೈರಸ್ ಹಬ್ಬುವ ಸುದ್ದಿ ಸಿಕ್ಕಾಗಿನಿಂದಲೂ ಭಾರತ ಇದಕ್ಕಾಗಿ ಸಿದ್ಧತೆ ಮಾಡಿಕೊಂಡ ರೀತಿಯನ್ನು ಕೇಳಿದರೆ ಎಂಥವರೂ ಬೆರಗಾಗಬೇಕು. ವಾಸ್ತವವಾಗಿ ಕರೋನಾ ಗಡಿ ಮೀರಿದ ವೈರಸ್ಸು. ಚೀನಾದ ವುಹಾನ್ನಲ್ಲಿ ಕಂಡುಬಂದ ಈ ವೈರಸ್ಸು ಎಲ್ಲೆಲ್ಲಿ ಚೀನಿಯರು ಹೋಗುತ್ತಾರೋ ಅಲ್ಲೆಲ್ಲಾ ಅವರೊಂದಿಗೇ ಹೋಗಿ ಆಯಾ ದೇಶಗಳಲ್ಲಿ ತನ್ನ ಪರಾಕ್ರಮ ಮೆರೆಯಲಾರಂಭಿಸಿತು. ನವೆಂಬರ್ ಮಧ್ಯಭಾಗದ ವೇಳೆಗೆ ಈ ಭಯಾನಕ ಪಿಡುಗು ಚೀನಾದಲ್ಲಿ ಕಂಡು ಬಂದಾಗಲೂ ಜಗತ್ತಿನಿಂದ ಇದನ್ನು ಎರಡು ತಿಂಗಳುಗಳ ಕಾಲ ಅದು ಮುಚ್ಚಿಟ್ಟುಬಿಟ್ಟಿತು. ಈ ಎರಡು ತಿಂಗಳಲ್ಲಿ ಎಲ್ಲೆಲ್ಲಿ ಅತಿದೊಡ್ಡ ಉತ್ಸವಗಳು ನಡೆದಿವೆಯೋ ಅಲ್ಲೆಲ್ಲಾ ಚೀನಿಯರು ಭಾಗವಹಿಸಿದ್ದಾರೋ ಅವರಿಗೆಲ್ಲಾ ಈ ರೋಗ ಅನಾಯಾಸವಾಗಿ ಹಬ್ಬಿಬಿಟ್ಟಿತು. ಚೀನಿಯರು ಇದನ್ನು ಮೊದಲೇ ಜಗತ್ತಿಗೆ ತಿಳಿಸುವ ಪ್ರಯತ್ನ ಮಾಡಿಬಿಟ್ಟಿದ್ದರೆ ಇದು ನಿಸ್ಸಂಶಯವಾಗಿ ಚೀನಾದ ಗಡಿಯೊಳಗೆ ಉಳಿದು ಹೊರಬರದಂತೆ ಮಾಡಿಬಿಡಬಹುದಿತ್ತು. ಆದರೆ ತಾನು ತೊಂದರೆಗೊಳಗಾಗುತ್ತಿರುವಾಗ ಜಗತ್ತು ನೆಮ್ಮಂದಿಯಿಂದಿರುವುದನ್ನು ಚೀನಾ ಸಹಿಸಿತಾದರೂ ಹೇಗೆ? ಹೀಗಾಗಿ ಇಟಲಿಯಲ್ಲಿ ನಡೆದ ಭಾರೀ ಉತ್ಸವವೊಂದರಲ್ಲಿ ಭಾಗವಹಿಸಿದ ಚೀನಿಯರು ಈ ವೈರಸ್ಸನ್ನು ಇಟಲಿಗಲ್ಲದೇ ಇಡಿಯ ಯುರೋಪಿಗೆ ಹಬ್ಬಿಸಿಬಿಟ್ಟರು. ಹೀಗಾಗಿಯೇ ಇಂದು ಇಟಲಿ ಚೀನಾದ ನಂತರ ಈ ರೋಗದ ಮಹತ್ವದ ತಾಣವಾಗಿ ಮಾರ್ಪಟ್ಟಿದೆ. ಇಡಿಯ ಯೂರೋಪು ಎಷ್ಟರಮಟ್ಟಿಗೆ ಬಳಲಿದೆ ಎಂದರೆ ಜರ್ಮನಿ ತನ್ನ ದೇಶದ ಮುಕ್ಕಾಲು ಪಾಲು ಜನರಿಗೆ ಈ ರೋಗ ಅಮರಿಕೊಂಡರೆ ಅಚ್ಚರಿ ಪಡಬೇಕಿಲ್ಲ ಎಂದು ಹೇಳಿಕೊಂಡಿದೆ. ಅಮೇರಿಕಾ ಕೂಡ ಈ ರೋಗದಿಂದ ತಡಬಡಾಯಿಸಿ ಮುಂದೇನು ಎಂದು ತಿಳಿಯಲಾಗದೇ ಪತರುಗುಟ್ಟಿದೆ. ಈ ಹೊತ್ತಿನಲ್ಲೂ ಶಾಂತವಾಗಿ ಇವೆಲ್ಲವನ್ನೂ ಎದುರಿಸಲು ಸಾಧ್ಯವಾಗಿರುವುದು ಭಾರತಕ್ಕೆ ಮಾತ್ರ!

7

ಯಾವಾಗ ಈ ವೈರಸ್ಸಿನ ಕುರಿತಂತೆ ಚೀನಾದಿಂದ ಮಾಹಿತಿಗಳು ಬರಲಾರಂಭಿಸಿದವೋ ಆಗಲೇ ಭಾರತದ ವಿಮಾನ ನಿಲ್ದಾಣಗಳಲ್ಲಿ ಹೊರಗಿನಿಂದ ಬಂದವರ ತಪಾಸಣೆ ಮಾಡಲು ಆರಂಭಿಸಿಬಿಟ್ಟರು. ವಿದೇಶ ಪ್ರಯಾಣ ಮುಗಿಸಿ ಬಂದವರನ್ನು ಒಂದಷ್ಟು ಪ್ರಶ್ನೆ ಕೇಳಿ, ಅವರಿಗೆ ನೆಗಡಿ, ಕೆಮ್ಮು, ಜ್ವರದಂತಹ ಯಾವುದಾದರೂ ಸೋಂಕು ಕಾಣಿಸಿಕೊಂಡಿದೆಯಾ ಎಂದು ಪರೀಕ್ಷಿಸಿ ದಾಖಲಿಸಿಕೊಳ್ಳಲಾಯ್ತು. ಅನುಮಾನ ಬಂದವರಿಗೆ ವಿಶೇಷ ತಪಾಸಣೆಯ ಏಪರ್ಾಡು ಕೂಡ. ಇಷ್ಟಾಗಿಯೂ ಇದು ಒಳನುಸುಳಿದೆ ಎಂದು ಗೊತ್ತಾದೊಡನೆ ವಿಮಾನನಿಲ್ದಾಣಗಳಲ್ಲಿ ಕಠಿಣ ತಪಾಸಣೆ ಆರಂಭವಾಯ್ತು. ಜಗತ್ತಿನ ಯಾವ ದೇಶಗಳಲ್ಲೂ ಕೂಡ ಈ ಪರಿಯ ವ್ಯವಸ್ಥೆಯೇ ಆಗಿರಲಿಲ್ಲ. ವಿದೇಶದಿಂದ ಬಂದವರು ವಿಮಾನನಿಲ್ದಾಣದಲ್ಲಿ ತಪಾಸಣೆಯನ್ನೆದುರಿಸಿ ತಮ್ಮೂರಿಗೆ ಮರಳಿದ ನಂತರವೂ ಅವರ ಮೇಲೆ ಸ್ಥಳೀಯ ವೈದ್ಯಾಧಿಕಾರಿಗಳು ನಿಗಾ ಇರಿಸುವಂತೆ ನೋಡಿಕೊಳ್ಳಲಾಯ್ತು. ಆ ಮೂಲಕ ಕರೋನಾ ಹಬ್ಬುವಿಕೆಯನ್ನು ಸಾಧ್ಯವಾದಷ್ಟು ತಡೆಯುವ ಮಹತ್ವದ ಹೆಜ್ಜೆಯನ್ನು ಇಟ್ಟೆವು.

ಮಾಧ್ಯಮಗಳು ಕರೋನಾ ವಿಚಾರದ ಕುರಿತಂತೆ ಬಾಯಿಗೆ ಬಂದಂತೆ ವರದಿ ಕೊಡುವಾಗಲೂ, ಜನರನ್ನು ಹೆದರಿಸುತ್ತಿರುವಾಗಲೂ ಸಕರ್ಾರ ಮಾತ್ರ ಶಾಂತವಾಗಿಯೇ ತಮ್ಮ ಕೆಲಸವನ್ನು ಮಾಡುತ್ತಿತ್ತು. ರಾಜ್ಯ ಸಕರ್ಾರಗಳೆಲ್ಲವೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದವು, ಮದುವೆ-ಮುಂಜಿಗಳಿಗೆ, ಮಾಲು-ಮಾಟರ್ುಗಳಿಗೆ ಮುಲಾಜಿಲ್ಲದೇ ನಿಷೇಧ ಹೇರಿದವು. ಜನರ ಸ್ಪಂದನೆಯೂ ಕೂಡ ವಿಶೇಷ ರೀತಿಯದ್ದಾಗಿತ್ತು. ಯಾರೂ ಧಾವಂತಕ್ಕೆ ಬೀಳದೇ ತಮ್ಮ ಪಾಡಿಗೆ ತಾವು ತಂತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾ ಸಕರ್ಾರ ಹೇಳಿದ ಎಲ್ಲ ನಿಯಮಗಳನ್ನೂ ಅನುಸರಿಸುತ್ತಾ ಹಾಯಾಗಿ ಕಾಲತಳ್ಳಿದರು. ಹೀಗಾಗಿಯೇ ಸೋಂಕಿತರ ಸಂಖ್ಯೆ ಮೂರನೇ ವಾರದ ವೇಳೆಗೆ ಅಂದುಕೊಂಡಷ್ಟು ಪ್ರಮಾಣದಲ್ಲಿ ಹಬ್ಬಲೇ ಇಲ್ಲ. ಇನ್ನೆರಡು ವಾರ ಈ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ನಾವು ಯಶಸ್ವಿಯಾದರೆ ಗೆದ್ದಂತೆಯೇ!

8

ನರೇಂದ್ರಮೋದಿ ಒಂದು ಹೆಜ್ಜೆ ಮುಂದೆ ಹೋಗಿ ಈ ಹೋರಾಟದಲ್ಲಿ ಗೆಲುವು ಸಾಧಿಸಲೆಂದು ಸಾಕರ್್ ದೇಶಗಳಿಗೆ ಸಹಕಾರ ಕೊಡಲು ಮುಂದಾದರು. ಅಲ್ಲಿನ ಎಲ್ಲ ಪ್ರಮುಖರೊಂದಿಗೂ ವಿಡಿಯೊ ಕಾನ್ಫರೆನ್ಸಿಂಗ್ನಲ್ಲಿ ಮಾತನಾಡಿ ಸುಮಾರು 75ಕೋಟಿ ರೂಪಾಯಿ ನಿಧಿಯನ್ನೂ ಈ ಕೆಲಸಕ್ಕೆ ಒದಗಿಸಿಕೊಡುವ ಭರವಸೆ ಕೊಟ್ಟರು. ಜಾಗತಿಕ ಮಟ್ಟದಲ್ಲಿ ಇದು ಎಂತಹ ಸಂಚಲನವುಂಟುಮಾಡಿತೆಂದರೆ ಆನಂತರ ಟ್ರಂಪ್ ಕೂಡ ಜಿ7 ರಾಷ್ಟ್ರಗಳೊಂದಿಗೆ ಇದೇ ರೀತಿ ಮಾತನಾಡಿ ಎಲ್ಲರೂ ಸೇರಿ ಈ ಮಾರಿಯೊಡನೆ ಹೋರಾಡುವ ನಿರ್ಣಯ ಮಾಡಿಕೊಂಡರು. ಚೀನಾ ರೋಗವನ್ನು ಹಬ್ಬಿಸುವ ಕೇಂದ್ರವಾಗಿ ನಿಂತರೆ, ಭಾರತ ಅದನ್ನೆದುರಿಸುವ ರಾಷ್ಟ್ರಗಳ ನಾಯಕನಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ಸಂಗತಿ. ಏನೇ ಹೇಳಿ, ಕಷ್ಟಗಳು ಎದುರಾದಾಗಲೇ ನಮ್ಮ ಸಾಮಥ್ರ್ಯವೂ ಅನಾವರಣಗೊಳ್ಳೋದು!

Comments are closed.