ವಿಭಾಗಗಳು

ಸುದ್ದಿಪತ್ರ


 

ಕರೋನಾ ಕಾಲದ ಕಲಿಕೆ ಹೇಗೆ?!

ಎಲ್ಲದರಲ್ಲೂ ತನ್ನ ಮಗನೇ ನಂಬರ್ ಒನ್ ಆಗಿಬಿಡಬೇಕೆಂದು ಬಯಸುವ ತಂದೆ-ತಾಯಿಯರು ಅವನೊಳಗಿನ ಶಕ್ತಿಯನ್ನು ಗುರುತಿಸುವುದರಲ್ಲಿ ಸೋತು ಹೋಗುತ್ತಾರೆ. ಯಾವ ಕೌಶಲ್ಯವನ್ನು ತನ್ನ ಜನ್ಮದೊಂದಿಗೆ ಪಡೆದುಕೊಂಡು ಬಂದಿರುತ್ತಾನೋ ಅದನ್ನು ಮರೆಯುವಂತೆ ಮಾಡಿ ಅವನಿಗೆ ಹೊಸ ಕಿರಿಕಿರಿಗಳನ್ನು ಹೆಗಲೇರಿಸಿಬಿಡುತ್ತಾರೆ.

ಕರೋನಾದ ಸಂಕಟ ವ್ಯಾಪಿಸಿಕೊಳ್ಳುತ್ತಿರುವ ಪರಿ ನೋಡಿದರೆ ಸಪ್ಟೆಂಬರ್ನವರೆಗಂತೂ ಶಾಲೆಗಳು ಮತ್ತೆ ಶುರುವಾಗುವಂತೆ ಕಾಣುತ್ತಿಲ್ಲ. ಅನೇಕ ಶಾಲೆಗಳು ಅದಾಗಲೇ ಆನ್ಲೈನ್ ತರಗತಿಯ ಹೆಸರಲ್ಲಿ ಮಕ್ಕಳಿಗೆ ವಚ್ಯರ್ುಯಲ್ ಶಾಲೆಯನ್ನು ಆರಂಭಿಸಿಬಿಟ್ಟಿದ್ದಾರೆ. ಪ್ರತ್ಯಕ್ಷ ತರಗತಿಯಲ್ಲಿ ವಿದ್ಯಾಥರ್ಿಗಳನ್ನು ನಿಯಂತ್ರಣ ಮಾಡುವುದೇ ಕಷ್ಟವಿರುವಾಗ ಇನ್ನು ಈ ರೀತಿ ದೂರದಲ್ಲಿ ಕುಳಿತು ವಿದ್ಯಾಥರ್ಿಗಳಿಗೆ ಪಾಠ ಹೇಳಿ, ಅವರ ಬಳಿ ಅಧ್ಯಯನ ಮಾಡಿಸುವುದು ಖಂಡಿತ ಸುಲಭವಿಲ್ಲದ ಸಂಗತಿ. ಇದು ಶಿಕ್ಷಕರಿಗೂ ಅನುಭವಕ್ಕೆ ಬರಲಾರಂಭಿಸಿದೆ. ಮುಂದಿನ 60 ದಿನಗಳಲ್ಲಿ ವಿದ್ಯಾಥರ್ಿಗಳಿಗೆ ಶಿಕ್ಷಣದಲ್ಲಿ ಆಸಕ್ತಿ ಹುಟ್ಟುವಂತಹ ಒಂದಷ್ಟು ಸಾರ್ಥಕ ಪ್ರಯತ್ನಗಳು ಆಗಬೇಕಿವೆ. ಈ ಎಲ್ಲ ಪ್ರಯತ್ನಗಳೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪ-ದೋಷಗಳನ್ನು ಗಮನದಲ್ಲಿರಿಸಿಕೊಂಡು ಅದಕ್ಕೆ ಪರಿಹಾರ ರೂಪದಲ್ಲಿಯೇ ಇರಬೇಕೆಂಬುದನ್ನು ನಾವು ನೆನಪಿನಲ್ಲಿಡಬೇಕು. ಸ್ಥೂಲವಾಗಿ ಇಂದಿನ ಶಿಕ್ಷಣ ಪದ್ಧತಿ ಪರೀಕ್ಷೆಗೆ ಮಕ್ಕಳನ್ನು ತಯಾರಿ ಮಾಡುವ ಧಾವಂತದಲ್ಲಿದೆ. ಪುಸ್ತಕದಲ್ಲಿರುವ ನೂರು ಪುಟಗಳಷ್ಟು ವಿಚಾರವನ್ನು ಕಂಠಸ್ಥ ಮಾಡಿಕೊಂಡುಬಿಟ್ಟರೆ ಆತನಿಗೆ ಹೆಚ್ಚು ಅಂಕ. ಈಗಂತೂ ಒಂದು ಹೆಜ್ಜೆ ಮುಂದೆ ಹೋಗಿ ಯಾವ ಪಾಠದಲ್ಲಿ ಎಷ್ಟು ಅಂಕಗಳನ್ನು ಗಳಿಸಬಹುದು ಎಂದು ಬೋಧಿಸುವ ಉಪಾಧ್ಯಾಯರುಗಳು ಮೊದಲೇ ಹೇಳಿ ಅದರಂತೆಯೇ ಪಾಠವನ್ನು ಮಾಡಿಬಿಡುತ್ತಾರೆ! ಕರೋನಾ ವ್ಯಾಪಿಸಿಕೊಂಡಿರುವ ಕಾರಣದಿಂದ ನಮಗಾಗಿರುವ ಲಾಭವೆಂದರೆ ಈ ವರ್ಷ ಪರೀಕ್ಷೆಗಳೇ ನಡೆದಿಲ್ಲ. ಬಹುಶಃ ತಜ್ಞರ ವರದಿಗಳನ್ನು ನೋಡಿದರೆ ಮತ್ತು ಔಷಧಿ ಸಿಗದೇ ಹೋದರೆ ಮುಂದಿನ ವರ್ಷವೂ ಪರೀಕ್ಷೆಗಳಿರಲಾರವೇನೋ! ಒಂದು ರೀತಿ ಒಳ್ಳೆಯದೇ ಆಯ್ತು. ಪರೀಕ್ಷೆಯನ್ನು ಬದಿಗಿಟ್ಟು ಮಕ್ಕಳನ್ನು ಭವಿಷ್ಯದ ಸವಾಲಿಗೆ ತಯಾರು ಮಾಡುವ ಅವಕಾಶ ಈ ವರ್ಷ.

ನಮ್ಮ ಮಕ್ಕಳಲ್ಲಿ ಶಿಕ್ಷಣದಿಂದ ಅಗತ್ಯವಾಗಿ ರೂಪಿಸಬೇಕಾಗಿರುವಂಥದ್ದು ಭಾಷೆಯ, ಲೆಕ್ಕಾಚಾರದ ಕೌಶಲ್ಯ. ವೈಜ್ಞಾನಿಕ ಮನೋಭಾವನೆ ಅವರ ಕಣಕಣದಲ್ಲೂ ವ್ಯಕ್ತವಾಗುವಂತೆ ನೋಡಿಕೊಳ್ಳಬೇಕು. ಆದರದು ಹೃದಯದ ಭಾವನೆಗಳನ್ನು ನುಂಗಿಬಿಡುವ, ಮೌಲ್ಯಗಳನ್ನು ಮೆಟ್ಟಿ ಶುಷ್ಕವಾಗಿಸುವ ಅಪಾಯದ ಮಟ್ಟ ತಲುಪದಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಇದೆ. ನಮ್ಮ ಸುತ್ತಮುತ್ತಲೂ ವಿಜ್ಞಾನ ಹಾಸುಹೊಕ್ಕಾಗಿದೆ ಎಂಬುದನ್ನು ಅವರಿಗೆ ಹೇಳಿಕೊಡಬೇಕಲ್ಲದೇ ಲೆಕ್ಕಾಚಾರದಲ್ಲಿ ಪ್ರಕೃತಿಯೂ ಪರಿಪೂರ್ಣವಾಗಿದೆ ಎಂಬುದನ್ನು ಅರಿಯುವಂತೆ ಮಾಡಬೇಕಿದೆ. ಇತಿಹಾಸವೆಂದರೆ ಪುಸ್ತಕದಲ್ಲಿರುವ ರಾಜರುಗಳ ಕಥೆಯಷ್ಟೇ ಅಲ್ಲ, ನಮ್ಮ ಊರಿನ ಹೆಸರೂ ಕೂಡ ಇತಿಹಾಸದ ಅಪರೂಪದ ಮಗ್ಗುಲನ್ನು ತೆರೆದಿಡುತ್ತದೆ ಎಂಬುದನ್ನು ಹೇಳಿಕೊಡಬೇಕಿದೆ.

6

ಬರಿ ಮಕ್ಕಳದ್ದಷ್ಟೇ ಅಲ್ಲ, ತಂದೆ-ತಾಯಿಗಳದ್ದೂ ಸಮಸ್ಯೆ ಇದೆ. ಎಲ್ಲದರಲ್ಲೂ ತನ್ನ ಮಗನೇ ನಂಬರ್ ಒನ್ ಆಗಿಬಿಡಬೇಕೆಂದು ಬಯಸುವ ತಂದೆ-ತಾಯಿಯರು ಅವನೊಳಗಿನ ಶಕ್ತಿಯನ್ನು ಗುರುತಿಸುವುದರಲ್ಲಿ ಸೋತು ಹೋಗುತ್ತಾರೆ. ಯಾವ ಕೌಶಲ್ಯವನ್ನು ತನ್ನ ಜನ್ಮದೊಂದಿಗೆ ಪಡೆದುಕೊಂಡು ಬಂದಿರುತ್ತಾನೋ ಅದನ್ನು ಮರೆಯುವಂತೆ ಮಾಡಿ ಅವನಿಗೆ ಹೊಸ ಕಿರಿಕಿರಿಗಳನ್ನು ಹೆಗಲೇರಿಸಿಬಿಡುತ್ತಾರೆ. ತರಗತಿಗಿಂತ ಹೆಚ್ಚು ಮೈದಾನದಲ್ಲೇ ಸಮಯ ಕಳೆಯುವ ಒಬ್ಬ ಹುಡುಗ ಎಲ್ಲರಿಂದಲೂ ಅಪಹಾಸ್ಯಕ್ಕೊಳಗಾಗುತ್ತಾನೆ. ಆದರೆ ತೆಂಡೂಲ್ಕರ್ನನ್ನು ಮಾತ್ರ ಜಗತ್ತೇ ಬಾಯ್ತುಂಬ ಹೊಗಳುತ್ತದೆ. ವಿಪಯರ್ಾಸವಲ್ಲವೇನು! ಎಲ್ಲವನ್ನೂ ಕಲಿಯುವ ವಿದ್ಯಾಥರ್ಿಗಳ ಸಾಮಥ್ರ್ಯವಷ್ಟೇ ಅಲ್ಲ, ತಮ್ಮ ಮಕ್ಕಳ ಆಸಕ್ತಿಯನ್ನು ಗುರುತಿಸುವ ಪೋಷಕರ ಕೌಶಲ್ಯವನ್ನೂ ವೃದ್ಧಿಸಬೇಕಾದ ಅವಶ್ಯಕತೆಯಿದೆ.

ಇವೆಲ್ಲವನ್ನೂ ಮಾಡುತ್ತ ಜೀವನದ ಅನೇಕ ದಶಕಗಳನ್ನು ಭವಿಷ್ಯ ಭಾರತದ ಪೀಳಿಗೆಯನ್ನು ನಿಮರ್ಿಸುವಲ್ಲಿ ತೊಡಗುವ ಶಿಕ್ಷಕರಿಗೂ ನಿರಂತರ ಶಿಕ್ಷಣದ ಅವಶ್ಯಕತೆಯಿದೆ. ಕೆಲಸ ಸಿಗುವವರೆಗೂ ಎಲ್ಲಿಯಾದರೂ, ಹೇಗಾದರೂ ಸರಿ ಎನ್ನುವ ಶಿಕ್ಷಕರು ಒಮ್ಮೆ ಶಿಕ್ಷಕರಾದೊಡನೆ ಅಧ್ಯಯನ ಬಿಟ್ಟುಬಿಡುತ್ತಾರೆ, ಅಧ್ಯಾಪನದಲ್ಲಿ ಹೊಸತನ ಕಳೆದುಕೊಳ್ಳುತ್ತಾರೆ, ಕೊನೆಗೆ ಆಧುನಿಕತೆಗೆ ತಕ್ಕಂತೆ ಬೆಳೆಯುತ್ತಿರುವ ವಿದ್ಯಾಥರ್ಿಗಳ ಸರಿಸಮಕ್ಕೆ ಹೊಂದಿಕೊಳ್ಳಲಾಗದೇ ಪರಿತಪಿಸುತ್ತಾರೆ. ಈ 60 ದಿನ ಇವೆಲ್ಲವನ್ನೂ ಸರಿದೂಗಿಸಲು ನಮಗೆ ಸಿಕ್ಕಿರುವ ಅವಕಾಶವೆಂದೇ ನಿರ್ಧರಿಸಿ ಕಾರ್ಯಪ್ರವೃತ್ತರಾಗಬೇಕಿದೆ. ದೇಶ ಆತ್ಮನಿರ್ಭರತೆಯತ್ತ ಹೊರಳುತ್ತಿರುವಾಗ ನಾವು ಸೃಷ್ಟಿಸಬೇಕಿರುವುದು ಚೀನೀ ಕಂಪೆನಿಗಳಲ್ಲಿ ಕೆಲಸ ಮಾಡಬಲ್ಲ ಕಾರಕೂನರನ್ನಲ್ಲ. ಬದಲಿಗೆ ಆ ಕಂಪೆನಿಗಳಿಗೇ ಪಯರ್ಾಯವನ್ನು ಕಟ್ಟಬಲ್ಲ ಸಶಕ್ತ ತರುಣರನ್ನು. ಕರೋನಾ ಅಂಥದ್ದೊಂದು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಎದುರಿಸೋಣ!

ಭಾಗ 1:

  1. ಶಾಲೆಯ ವಿದ್ಯಾಥರ್ಿಗಳ ವಾಟ್ಸಪ್ ಗ್ರೂಪ್ ಒಂದನ್ನು ಮಾಡಿಕೊಂಡು ಪ್ರತಿನಿತ್ಯ ವಿದ್ಯಾಥರ್ಿಗಳಿಗೆ ವಿಭಿನ್ನ ಚಟುವಟಿಕೆಗಳನ್ನು ಶಿಕ್ಷಕರೇ ನೀಡಬೇಕು.
  2. ಈ ಚಟುವಟಿಕೆಗಳು ವಿದ್ಯಾಥರ್ಿಗಳ ಕನಿಷ್ಠಪಕ್ಷ ಅರ್ಧ ದಿನವನ್ನು ಕ್ರಿಯಾಶೀಲವಾಗಿಡುವಂತಿರಬೇಕು.
  3. ಚಟುವಟಿಕೆಗಳನ್ನು ಆಯ್ದುಕೊಳ್ಳುವಾಗ ಪ್ರತಿಯೊಬ್ಬ ವಿದ್ಯಾಥರ್ಿಯೂ ಒಂದಲ್ಲ ಒಂದು ಚಟುವಟಿಕೆಯಲ್ಲಿ ಪೂರ್ಣ ಆಸಕ್ತಿಯಿಂದ ಭಾಗವಹಿಸುವಂತೆ ರೂಪಿಸಬೇಕು ಏಕೆಂದರೆ ಬಹತೇಕ ಬಾರಿ ಬರೆಯುವ, ಮಾತನಾಡುವ ಚಟುವಟಿಕಗಳನ್ನೇ ಕೊಡುವುದರಿಂದ ಶಾಲೆಯಲ್ಲಿ ಅದಾಗಲೇ ಬುದ್ಧಿವಂತರೆನಿಸಿಕೊಂಡವರು ಮಾತ್ರ ಚಟುವಟಿಕೆಯಿಂದ ಭಾಗವಹಿಸುತ್ತಾರೆ. ಸ್ವಲ್ಪ ದೈಹಿಕ ಶ್ರಮದ ಕೆಲಸವನ್ನು ಕೊಟ್ಟರೆ ಕೊನೆಯ ಬೆಂಚಿನ ಹುಡುಗರು ವಿಶೇಷವಾಗಿ ಮಾಡುತ್ತಾರೆ.
  4. ಪ್ರತಿದಿನದ ಫಲಿತಾಂಶವನ್ನು ವಾಟ್ಸಪ್ ಗ್ರೂಪಿನಲ್ಲಿ ಪ್ರಕಟಿಸುವುದನ್ನು ಶಿಕ್ಷಕರು ಮರೆಯುವಂತಿಲ್ಲ. ಅವರಿಗೆ ವಿಶೇಷ ಉಡುಗೊರೆಯನ್ನು ಕೊಡುವುದೂ ಕೂಡ ಒಳ್ಳೆಯ ಪ್ರಯೋಗವೇ.
  5. ಗೆದ್ದವರನ್ನು ಆಯ್ಕೆ ಮಾಡುವಾಗಲೂ ಒಬ್ಬರಿಗೇ ಮತ್ತೆ ಮತ್ತೆ ಬಹುಮಾನ ಬರದಂತೆ ನೋಡಿಕೊಳ್ಳುವುದು ಒಳ್ಳೆಯದು. ಕೊನೆಗೂ ನಮ್ಮೆಲ್ಲರ ಉದ್ದೇಶ ಪ್ರತಿಯೊಬ್ಬ ವಿದ್ಯಾಥರ್ಿಯಲ್ಲಿಯೂ ಪರೀಕ್ಷಾಭಯ ಕಸಿದುಕೊಂಡಿರುವ ಆತ್ಮವಿಶ್ವಾಸವನ್ನು ಮರುಸ್ಥಾಪಿಸುವುದೇ ಆಗಿದೆ ಎನ್ನುವುದನ್ನು ಮರೆಯಬೇಡಿ.
  6. ಮಕ್ಕಳಿಗೆ ಈ ಚಟುವಟಿಕೆಯೊಂದಿಗೆ ಪ್ರತಿದಿನ ಸಂಜೆ ಪಠ್ಯಪುಸ್ತಕಕ್ಕೆ ಪೂರಕವಾದ ಸಂಗತಿಗಳನ್ನು ಚಚರ್ಿಸುವ ಪ್ರಯತ್ನ ಮಾಡಿ. ಇದು ಅವರನ್ನು ಶಾಲೆ ಶುರುವಾದಾಗ ಮಾಡಿಕೊಂಡಿರಬೇಕಾದ ತಯಾರಿಯ ಕುರಿತಂತೆ ಜಾಗರೂಕವಾಗಿರಿಸುತ್ತದೆ.
  7. ಎಲ್ಲರ ಬಳಿ ಮೊಬೈಲ್ ಇಲ್ಲವಲ್ಲಾ ಎಂಬ ಪ್ರಶ್ನೆ ಇದೆ. ಯಾವ ಹಳ್ಳಿಯಲ್ಲಿ ಈ ಬಗೆಯ ವಿದ್ಯಾಥರ್ಿಗಳು ಕಂಡು ಬರುತ್ತಾರೋ ಆ ಹಳ್ಳಿಗೆ ವಾರಕ್ಕೆರಡು ಬಾರಿ ಶಿಕ್ಷಕರೇ ಭೇಟಿಕೊಟ್ಟು ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗಿಸಿ ಹೇಳಬೇಕಾದ್ದನ್ನೆಲ್ಲಾ ಹೇಳಿಕೊಟ್ಟು ಬಂದುಬಿಟ್ಟರೆ ಪ್ರಯತ್ನ ಸಾರ್ಥಕ.
  8. ಕರೋನಾ ಭೀತಿಯಲ್ಲಿ ಇದು ಕಷ್ಟವೆನಿಸಿದರೆ ನಿಮ್ಮದ್ದೇ ಶಾಲೆಯ ಅದೇ ಊರಿನ ಹಳೆಯ ವಿದ್ಯಾಥರ್ಿಗೆ ಈ ಜವಾಬ್ದಾರಿಯನ್ನು ಒಪ್ಪಿಸಿ ಅವನನ್ನು ಭವಿಷ್ಯದ ಸಮರ್ಥ ಶಿಕ್ಷಕನಾಗುವಲ್ಲಿ ಪ್ರೇರೇಪಿಸಿ. ಪ್ರತೀ ಹಳ್ಳಿಯಲ್ಲೂ ಈ ರೀತಿಯ ಜವಾಬ್ದಾರಿಯುತ ತರುಣರನ್ನು ಹುಟ್ಟುಹಾಕಲು ಇದು ಸಮರ್ಥ ಸಮಯ.

ಭಾಗ 2:

  1. ಮಕ್ಕಳ ವಾಟ್ಸಪ್ ಗ್ರೂಪ್ ಮಾಡಿದಂತೆ ತಾಯಂದಿರದ್ದೂ ಮಾಡುವುದೊಳಿತು.
  2. ಅವರಿಗೆ ದಿನವಿಡೀ ಉಪಯುಕ್ತ ಅಂಶಗಳನ್ನು ಆಗಾಗ ಹಂಚಿಕೊಳ್ಳುತ್ತಾ ಮಕ್ಕಳ ಬೆಳವಣಿಗೆಯಲ್ಲಿ ಅವರು ತೊಡಗಿಸಿಕೊಳ್ಳಬಹುದಾದ ರೀತಿಯನ್ನು ವಿವರಿಸಿದರೆ ಉಪಯೋಗವಾದೀತು.
  3. ಪ್ರತಿನಿತ್ಯ ಮಕ್ಕಳಿಗೆ ಕಥೆ ಹೇಳುವ ಕೆಲಸವನ್ನು ತಾಯಂದಿರಿಗೆ ಕೊಟ್ಟು ಹೇಳಬೇಕಾದ ಕಥೆಯನ್ನು ಈ ಗ್ರೂಪಿನಲ್ಲಿ ಹಂಚಿಕೊಂಡರೆ ತಾಯಂದಿರಿಗೆ ಅನುಕೂಲ.
  4. ಕಥೆ ಹೇಳಿದ ಅನುಭವವನ್ನು ಅವರಿಗೆ ಹಂಚಿಕೊಳ್ಳಲು ಈ ವೇದಿಕೆಯನ್ನು ಬಳಸಿಕೊಂಡರೆ ಅವರಲ್ಲಿ ಸುಪ್ತವಾಗಿದ್ದ ಅನೇಕ ಪ್ರತಿಭೆಗಳು ಹೊರಬರಬಹುದು ಮತ್ತು ವಿಜ್ಞಾನ ಗಣಿತದಷ್ಟೇ ಕಥೆ ಹೇಳುವುದೂ ಕೂಡ ಪ್ರಮುಖ ಅಧ್ಯಯನ ಎಂಬುದು ಅವರಿಗೆ ಅರಿವಾದೀತು.
  5. ಮಕ್ಕಳಿಗೆ ಚಟುವಟಿಕೆ ಕೊಟ್ಟಂತೆ ತಾಯಂದಿರಿಗೂ ಕೂಡ ಯೋಚಿಸಿ ಸೂಕ್ತ ಚಟುವಟಿಕೆಯನ್ನು ಕೊಡಲು ಸಾಧ್ಯವಾದರೆ ಮತ್ತು ಅದನ್ನು ತಾಯಂದಿರು ಮಾಡುವಂತೆ ಪ್ರೇರೇಪಿಸಲು ಸಾಧ್ಯವಾದರೆ ಶಿಕ್ಷಕರು ಮತ್ತು ಪೋಷಕರ ಬಾಂಧವ್ಯ ಹೆಚ್ಚು ಬಲವಾಗುತ್ತದೆ. ಮುಂದೆ ಶಾಲೆ ಆರಂಭವಾದಾಗ ಇದನ್ನು ಧನಾತ್ಮಕವಾಗಿ ಬಳಸಿಕೊಳ್ಳುವುದೂ ಸಾಧ್ಯವಾಗುತ್ತದೆ.7 

    ಭಾಗ 3:

    1. ಮೂರು ಹಂತದಲ್ಲಿ ಶಿಕ್ಷಕರು ತಮ್ಮನ್ನು ತಾವು ರೂಪಿಸಿಕೊಳ್ಳಬೇಕಿದೆ. ತಾವು ಬೋಧಿಸುವ ವಿಷಯದಲ್ಲಿ ಪರಿಣಿತಿಯನ್ನು ಪಡೆಯುವ ಮೂಲಕ, ಇತರೆ ಸಾಮಾನ್ಯ ವಿಷಯಗಳನ್ನು ಅಧ್ಯಯನ ಮಾಡುವ ಮೂಲಕ ಮತ್ತು ಆಧ್ಯಾತ್ಮಿಕ ವಿಚಾರಗಳತ್ತ ಒಲವು ಬೆಳೆಸಿಕೊಳ್ಳುವುದರ ಮೂಲಕ.
    2. ದಶಕಗಳಿಂದಲೂ ತಾವು ಪಾಠ ಮಾಡುವ ಪುಸ್ತಕವನ್ನೇ ಓದುತ್ತಿರುವ ಶಿಕ್ಷಕರಿಗೆ ಕರೋನಾ ಕಾಲದಲ್ಲಿ ಈ ವಿಷಯದಲ್ಲಿ ಆಳಕ್ಕಿಳಿಯುವ ಅವಕಾಶವಿದೆ. ಎಲ್ಲ ವಿಚಾರಗಳಲ್ಲೂ ಸಾಕಷ್ಟು ಕೃತಿಗಳು ಪಿಡಿಎಫ್ ರೂಪದಲ್ಲಿ ಈಗ ಲಭ್ಯವಿರುವುದರಿಂದ ಅಧ್ಯಯನಕ್ಕೆ ಕಷ್ಟವೇನೂ ಆಗಲಾರದು.
      ಬೋಧನೆಯ ವಿಷಯದ ಆಳಕ್ಕಿಳಿಯಬೇಕಾಗಿರುವುದು ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯವೇ. ಆದರೆ ಅದನ್ನು ಮೀರಿ ತಮ್ಮ ಆಸಕ್ತಿಯ ಇತರೆ ಕ್ಷೇತ್ರದಲ್ಲೂ ಜ್ಞಾನವನ್ನು ಸಂಪಾದಿಸುವುದು ಅವರ ಜವಾಬ್ದಾರಿ. ಈ 60 ದಿನಗಳಲ್ಲಿ ಬೋಧನೆ ವಿಚಾರಕ್ಕೆ ಸಂಬಂಧಿಸದ ಎರಡು ಪುಸ್ತಕಗಳನ್ನಾದರೂ ಓದಿ ಮುಗಿಸುವ ಸಂಕಲ್ಪ ತೆಗೆದುಕೊಳ್ಳಬೇಕು.
    3. ತಿಂಗಳಿಗೊಮ್ಮೆ ಎಲ್ಲ ಶಿಕ್ಷಕರೂ ಸೇರಿ ತಾವು ಓದಿದ ಕೃತಿಯ ಸಾರಾಂಶವನ್ನು ಮತ್ತು ವೈಶಿಷ್ಟ್ಯವನ್ನು ಹಂಚಿಕೊಳ್ಳುವುದು ಸ್ವಾಧ್ಯಾಯ ಮತ್ತು ಪ್ರವಚನ ಎರಡರ ಸಮರ್ಥ ಮಿಶ್ರಣದಂತಾದೀತು.
    4. ಈ 60 ದಿನಗಳಲ್ಲಿ ವಿದ್ಯಾಥರ್ಿಗಳಿಗೆ ಚಟುವಟಿಕೆ ಕೊಟ್ಟು, ಅವರ ಕೌಶಲ್ಯವನ್ನು ಅಧ್ಯಯನ ಮಾಡಿದ, ಹಳ್ಳಿಗಳಿಗೆ ಹೋಗಿ ಮಕ್ಕಳೊಂದಿಗೆ ಬೆರೆತ, ಹೊಸ-ಹೊಸ ಅಧ್ಯಯನಗಳಿಂದ ಬೌದ್ಧಿಕ ಸ್ತರವನ್ನು ಏರಿಸಿಕೊಂಡುದರ ಕುರಿತಂತೆ ಪ್ರತಿಯೊಬ್ಬ ಶಿಕ್ಷಕರೂ 60 ದಿನಗಳ ಕೊನೆಯಲ್ಲಿ ಒಂದು ಬರಹವನ್ನು ಶಾಲೆಗೆ ಸಮಪರ್ಿಸುವುದನ್ನು ಅನಿವಾರ್ಯವಾಗಿಸಿಕೊಳ್ಳಬೇಕು. ಇದು ಆಯಾ ಶಿಕ್ಷಕರಿಗೆ ಸಿಗಬಹುದಾದ ಸಮರ್ಥ ವೇದಿಕೆ.

    ಆಡಳಿತ ಮಂಡಳಿಗಳು ಈ ಅವಕಾಶವನ್ನು ಬಳಸಿಕೊಂಡು ಶಿಕ್ಷಕರಿಗೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ತರಬೇತಿಯನ್ನು ಕೊಡಿಸುವುದೊಳಿತು. ಇದು ಹೊಸಪೀಳಿಗೆಯ ಅವಶ್ಯಕತೆಗಳಿಗೆ ಶಿಕ್ಷಕರನ್ನು ತಯಾರು ಮಾಡುವುದರಲ್ಲಿ ಸೂಕ್ತ ಭೂಮಿಕೆ ರೂಪಿಸಿಕೊಡುತ್ತದೆ.

Comments are closed.