ವಿಭಾಗಗಳು

ಸುದ್ದಿಪತ್ರ


 

ಕರೋನಾ ಜೈವಿಕ ಅಸ್ತ್ರವೇ?!

ಮನುಷ್ಯತ್ವ ಎಲ್ಲಕ್ಕಿಂತಲೂ ದೊಡ್ಡದ್ದು ಎಂಬುದನ್ನು ಮರೆತಾಗ ಇಂತಹ ಹೀನಕೃತ್ಯಕ್ಕೆ ಕೈ ಹಾಕುತ್ತೇವೆ. ಕ್ಷಣಿಕವಾದ ಸಾರ್ವಭೌಮತೆಗೆ ಬಲಿಯಾಗಿ ಹೃದಯದೊಳಗೆ ಇರಬೇಕಾಗಿದ್ದ ಮಾರ್ದವತೆಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಇಂತಹ ಕೆಟ್ಟ ಜನರಿಗಿಂತಲೂ ಕರೋನಾ ವೈರಸ್ ಸಾವಿರಪಾಲು ಒಳಿತು ಎನ್ನುವುದು ಸರಿಯಾಗುತ್ತದೇನೋ, ಕ್ಷಮಿಸಿಬಿಡಿ!

ದೇಶ-ದೇಶಗಳ ನಡುವಿನ ಕದನಗಳು ಯಾವ ಹಂತಕ್ಕೆ ಬೇಕಿದ್ದರೂ ಹೋಗಬಲ್ಲದು. ಇತ್ತೀಚಿನ ದಿನಗಳಲ್ಲಿ ಮುಕ್ತ ಯುದ್ಧಕ್ಕೆ ಯಾರು ಇಚ್ಛೆ ತೋರದಿದ್ದರೂ ಒಳಗಿಂದೊಳಗೇ ಕತ್ತಿ ಮಸಿಯುತ್ತಾ ಭಿನ್ನ-ಭಿನ್ನ ರೂಪಗಳಲ್ಲಿ ಮತ್ತೊಂದು ರಾಷ್ಟ್ರವನ್ನು ಮುಗಿಸಿಬಿಡಲು ಹಾತೊರೆಯುತ್ತಲೇ ಇರುತ್ತಾರೆ. ಖಂಡಿತವಾಗಿಯೂ ನಾನು ಭಾರತ-ಪಾಕಿಸ್ತಾನದ ಯುದ್ಧದ ಬಗ್ಗೆ ಮಾತನಾಡುತ್ತಿಲ್ಲ. ಜಗತ್ತಿನಲ್ಲಿ ನಡೆಯುತ್ತಿರುವ ಸಾರ್ವಭೌಮತೆಯ ಕದನದ ಎದುರು ನಮ್ಮದ್ದು ಮಕ್ಕಳಾಟವೂ ಅಲ್ಲ. ಬಹುಶಃ ಇತ್ತೀಚೆಗೆ ವ್ಯಾಪಕವಾಗಿ ಹಬ್ಬುತ್ತಿರುವ ಕರೋನಾ ಮತ್ತು ಅದರ ಹಿಂದೆ ನಡೆಯುತ್ತಿರುವ ಗುಸುಗುಸು ಚಚರ್ೆಗಳು ಈ ವಿಚಾರಕ್ಕೆ ಪುಷ್ಟಿಕೊಡಬಲ್ಲದು! ಯುದ್ಧಕ್ಕೆ ಸೈನಿಕರನ್ನು ಕಳಿಸಿ ಮಿಸೈಲುಗಳನ್ನು, ವಿಮಾನಗಳನ್ನು ಬಳಸಿ, ಶತ್ರುಗಳನ್ನು ನಾಶಮಾಡುವ ಪ್ರಕ್ರಿಯೆ ಅತ್ಯಂತ ಹಳೆಯದಾಗಿಹೋಯ್ತು. ಈಗೇನಿದ್ದರೂ ಆಥರ್ಿಕವಾಗಿ ಶತ್ರುವನ್ನು ಮುಗಿಸಿಬಿಡುವ ಅಥವಾ ಜೈವಿಕ ಸಮರವನ್ನು ನಡೆಸಿ ಯುದ್ಧಮಾಡುವ ತಾಕತ್ತನ್ನೇ ಕಸಿದುಬಿಡುವ ಹೊಸಬಗೆಯ ಕದನಗಳು. ಹೊಸಬಗೆಯದ್ದು ಎಂದ ಮಾತ್ರಕ್ಕೆ ತೀರಾ ಹೊಸತೇನೂ ಅಲ್ಲ. ರಷ್ಯಾ-ಅಮೇರಿಕಾಗಳು ಶೀತಲ ಸಮರದ ಹೊತ್ತಲ್ಲೇ ಸೂಕ್ಷ್ಮ ತರಂಗಗಳ ಮೂಲಕ ಎದುರಾಳಿಗಳನ್ನು ಆಲಸಿಗಳಾಗಿಸುವ ಪ್ರಯತ್ನ ಮಾಡಿದ್ದರಂತೆ! ಅಂತ್ರಾಕ್ಸ್ ಎಂಬ ಜೀವಕ್ಕೆ ಮಾರಕವಾದ ಪುಡಿಯೊಂದನ್ನು ಪೋಸ್ಟಿನ ಮೂಲಕ ಕಳಿಸಿದರೂ ಪರಿವಾರಗಳೇ ನಾಶವಾಗಿಬಿಡುವ ಸಂಗತಿ ನಾವು ಶಾಲೆಗಳಿಗೆ ಹೋಗುವಾಗ ಅತ್ಯಂತ ಖ್ಯಾತವಾಗಿತ್ತು. ಸಾಸರ್್ ಜಗತ್ತಿನ ಮೂವತ್ತಕ್ಕೂ ಹೆಚ್ಚು ರಾಷ್ಟ್ರಗಳನ್ನು ಆವರಿಸಿಕೊಂಡಾಗ ಅದರ ಹಿಂದೆ ಚೀನಾದ ಲ್ಯಾಬೊರೇಟರಿಗಳ ಕೈವಾಡವಿತ್ತು ಎಂದು ಮಾತನಾಡಿಕೊಂಡಿದ್ದು ಇನ್ನೂ ನೆನಪಿನಲ್ಲಿದೆ. ಪೊಲಿಯೊ ಲಸಿಕೆಯ ನೆಪದಲ್ಲಿ ಹೊಸದೊಂದು ವೈರಸ್ಅನ್ನೇ ಹಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಆರೋಪವೂ ಹಳೆಯದ್ದಾಗಿಹೋಗಿದೆ. ನಾವೆಲ್ ಕರೋನಾ ಅದರ ಮುಂದುವರೆದ ಭಾಗವಷ್ಟೇ!

6

2019ರಲ್ಲಿ ಒಂದು ಗುಂಪಿನ ಜನರಿಗೆ ನ್ಯುಮೋನಿಯಾ ಹಬ್ಬುವುದನ್ನು ಚೀನಾದ ಆರೋಗ್ಯ ಇಲಾಖೆ ಗಮನಿಸಿತು. ಅದಕ್ಕೆ ನಾವೆಲ್ ಕರೋನಾ ಎಂಬ ಹೆಸರನ್ನು ಕೊಡಲಾಯ್ತು. ಈ ವೈರಸ್ಸು ನೋಡಲಿಕ್ಕೆ ಕಿರೀಟದಂತೆ ಕಾಣುವುದರಿಂದ ಮತ್ತು ಲ್ಯಾಟಿನ್ ಭಾಷೆಯಲ್ಲಿ ಕಿರೀಟಕ್ಕೆ ಕರೋನಾ ಎಂದು ಹೇಳುವುದರಿಂದ ಈ ವೈರಸ್ಸಿಗೆ ಆ ಹೆಸರು ಬಂತಂತೆ. ಹಾಗಂತ ಕರೋನಾ ಮೊದಲ ಬಾರಿಗೆ ಗುರುತಿಸಲ್ಪಟ್ಟಿದ್ದೇನೂ ಅಲ್ಲ. 2003ರಲ್ಲಿ ಚೀನಾದಲ್ಲಿ ಕಂಡುಬಂದ ಸಾಸರ್್ ಈ ವೈರಸ್ನಿಂದಲೇ ಹಬ್ಬಿದ್ದು ಎಂದು ಹೇಳಲಾಗುತ್ತಿತ್ತು. 2012ರಲ್ಲಿ ಸೌದಿ ಅರೇಬಿಯಾದಲ್ಲಿ ಕಂಡುಬಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕೂಡ ಇಂಥದ್ದೇ ವೈರಸ್ಸಿನಿಂದ ಹಬ್ಬಿತ್ತು. ಮತ್ತೀಗ ಮತ್ತೊಮ್ಮೆ ಚೀನಾವನ್ನು ಆವರಿಸಿಕೊಂಡಿರುವಂಥದ್ದು ಇದೇ ವೈರಸ್ಸು. ಮೇಲ್ನೋಟಕ್ಕೆ ಚೀನಾದ ಅತ್ಯಂತ ಜನನಿಬಿಡ ನಗರವಾಗಿರುವ ವುಹಾನ್ನಿಂದ ಈ ವೈರಸ್ ಹಬ್ಬುತ್ತಿದೆ ಎಂಬ ಕಾರಣಕ್ಕೆ ಇದನ್ನು ಅಲ್ಲಿನ ಜೀವಂತ ಪಶುಗಳ ಮಾರುಕಟ್ಟೆಯ ಕಾರಣಕ್ಕಾಗಿ ಹುಟ್ಟಿಕೊಂಡಿರುವ ವೈರಸ್ ಎಂದು ಶಂಕಿಸಲಾಗುತ್ತಿದೆ. ಈ ವೈರಸ್ಸೂ ಕೂಡ ಈ ಪ್ರಾಣಿಗಳಲ್ಲಿ ಪೊಗದಸ್ತಾಗಿ ಬೆಳೆದು ಅವುಗಳ ಸಂಪರ್ಕಕ್ಕೆ ಬಂದ ಅಥವಾ ಅವುಗಳನ್ನು ತಿಂದ ಮನುಷ್ಯರಿಗೆ ಅಮರಿಕೊಳ್ಳುತ್ತದೆ. ಅಂಥವರು ಉಸಿರಾಡಲು ಕಷ್ಟ ಅನುಭವಿಸುತ್ತಾರೆ, ನಿರಂತರ ಕೆಮ್ಮು, ಮೂಗುಸೋರುವಿಕೆಯಿಂದ ಬಳಲುತ್ತಾರೆ, ಭಯಾನಕವಾದ ಜ್ವರ ಕಾಡುತ್ತದೆ. ಒಂದು ಹಂತದಲ್ಲಿ ಕಿಡ್ನಿಯೂ ಕೆಲಸ ಮಡುವುದನ್ನು ನಿಲ್ಲಿಸಿ ಮನುಷ್ಯ ಸತ್ತೇ ಹೋಗುತ್ತಾನೆ! ಬಹಳ ಹಿಂದೆ ನಮ್ಮಲ್ಲಿ ಪ್ಲೇಗ್ ಹರಡುತ್ತಿತ್ತಲ್ಲಾ, ಸ್ವಲ್ಪಮಟ್ಟಿಗೆ ಅದನ್ನೇ ಹೋಲುತ್ತದೆ. ಹಾಗಂತ ಇದು ಅಷ್ಟು ಸಾಮಾನ್ಯವಾದ ವೈರಸ್ ಅಲ್ಲ. ಇದರ ಹರಡುವಿಕೆ ಎಷ್ಟು ವೇಗವಾಗಿದೆ ಎಂದರೆ ವೈರಸ್ ಬಾಧಿತ ವ್ಯಕ್ತಿ ಕೆಮ್ಮಿದ ಸೂಕ್ಷ್ಮಕಣಗಳು ವಾತಾವರಣವನ್ನು ಸೇರಿಕೊಂಡು ಅದರ ಸಂಪರ್ಕಕ್ಕೆ ಬಂದವರೂ ಕೂಡ ಬಳಲುತ್ತಾರೆ. ಹೀಗಾಗಿ ಮನೆಯಲ್ಲಿ ಒಬ್ಬರಿಗೆ ಕರೋನಾ ಅಮರಿಕೊಂಡಿತೆಂದರೆ ಇಡಿ ಮನೆಯೇ ನಾಶವಾದಂತೆ. ಹೊಸ-ಹೊಸ ಕಾಯಿಲೆಗಳು ಆಗಾಗ ಕಂಡು ಬರುವುದು ನಿಜವಾದರೂ ಇತ್ತೀಚಿನ ದಿನಗಳಲ್ಲಿ ಈ ಅವಧಿ ಅತ್ಯಂತ ಕಡಿಮೆಯದ್ದಾಗುತ್ತಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ ಮೊದಲೆಲ್ಲಾ ಒಂದು ಮಾರಕ ಕಾಯಿಲೆಯಿಂದ ಮತ್ತೊಂದು ಮಾರಕ ಕಾಯಿಲೆ ಹರಡುವುದರ ನಡುವೆ ದಶಕಗಳಷ್ಟೇ ದೀರ್ಘ ಅವಧಿಯಿರುತ್ತಿತ್ತು. ಈಗ ಮೂನರ್ಾಲ್ಕು ವರ್ಷಕ್ಕೆ ಹೊಸದೊಂದು ಭಯಾನಕ ರೋಗ ನಮ್ಮೆದುರು ಪ್ರತ್ಯಕ್ಷವಾಗುತ್ತಿದೆ. ಇದು ನಮ್ಮ ಜೀವನಶೈಲಿಯ ಕಾರಣಕ್ಕಿರಬಹುದು, ಪ್ರಕೃತಿಯನ್ನು ಶೋಷಿಸುತ್ತಿರುವುದರ ಪರಿಣಾಮಕ್ಕಿರಬಹುದು ಅಥವಾ ಇತರರ ನಾಶಕ್ಕೆ ನಾವು ಪ್ರಯತ್ನ ಪಡುತ್ತಿರುವುದರಿಂದ ಉಂಟಾಗುತ್ತಿರುವ ಅಡ್ಡ ಪರಿಣಾಮಗಳೂ ಇರಬಹುದು! ಹೀಗಾಗಿಯೇ ಈ ಬಾರಿ ಈ ವೈರಸ್ನ ಹಿಂದೆ ಅನೇಕ ಗುಪ್ತಸುದ್ದಿಗಳು ಹರಿದಾಡುತ್ತಿವೆ. ಮೊದಲನೆಯದ್ದೇ ವುಹಾನಿನಲ್ಲಿ ಚೀನಾ ಸಕರ್ಾರವೇ ನಡೆಸುತ್ತಿರುವ ವೈರಸ್ಗಳ ಕುರಿತಾದ ಅಧ್ಯಯನದ ಪ್ರಯೋಗಶಾಲೆಯಿಂದಲೇ ಈ ವೈರಸ್ ಹರಡಿದೆ ಎಂಬುದು. ಇದಕ್ಕೆ ಪೂರಕವಾಗಿ ಎಲ್ಲರೂ ಬಳಸುತ್ತಿರುವುದು ಇಸ್ರೇಲಿನ ಗೂಢಚಾರ ಅಧಿಕಾರಿ ಡೇನಿಶೋಹಂರ ಹೇಳಿಕೆಯನ್ನು. ಅವರು ಅಕ್ಷರಶಃ ಈ ವೈರಸ್ಸು ಜೈವಿಕ ಯುದ್ಧಕ್ಕೆ ತಯಾರಿ ಎಂದೇ ಹೇಳುತ್ತಿದ್ದಾರೆ. ಆದರೆ ಇದಕ್ಕೆ ಪೂರಕವಾದ ದಾಖಲೆಗಳು ಮಾತ್ರ ಯಾರ ಬಳಿಯೂ ಇಲ್ಲ. ಒಂದು ವೇಳೆ ಚೀನಾ ಇದನ್ನು ಜೈವಿಕ ಅಸ್ತ್ರವಾಗಿ ಸಿದ್ಧಪಡಿಸಿಕೊಂಡಿರುವುದು ನಿಜವೇ ಆದರೆ ಜಗತ್ತಿನ ಯಾವ ಮೂಲೆಯಲ್ಲಿ ಬೇಕಿದ್ದರೂ ವಿಧ್ವಂಸಕ ಕೃತ್ಯಗಳನ್ನು ನಡೆಸಿ ತನ್ನ ಹಿಡಿತಕ್ಕೆ ತಂದುಕೊಳ್ಳಬಲ್ಲ ಸಾಮಥ್ರ್ಯ ಅದಕ್ಕೆ ಖಂಡಿತವಾಗಿಯೂ ಇದೆ. ಈ ಘಟನೆಗೆ ಪೂರಕವಾಗಿಯೇ ಕರೋನಾ ವೈರಸ್ ಹಬ್ಬುತ್ತಿರುವುದರ ಮೊದಲ ಸೂಚನೆಯನ್ನು ಕೊಟ್ಟ ವೈದ್ಯರು ಚೀನಾದಲ್ಲಿ ನಿಗೂಢ ಸಾವನ್ನಪ್ಪಿದರು! ಆರಂಭದಲ್ಲಿ ಆ ವೈದ್ಯರ ಸಾವಿಗೆ ಕರೋನಾ ವೈರಸ್ಸೇ ಕಾರಣ ಎನ್ನಲಾಯ್ತು. ಆನಂತರ ಬೇರೊಂದು ಕಾರಣವನ್ನೂ ಕೊಡಲಾಯ್ತು. ಒಟ್ಟಾರೆ ಆತ ಯಾವುದೋ ಒಂದು ಗುಟ್ಟನ್ನು ಬಚ್ಚಿಟ್ಟುಕೊಂಡಿರುವುದರಿಂದಲೇ ಸಾವನ್ನಪ್ಪಬೇಕಾಯ್ತು ಎಂದು ಅನೇಕರು ಹೇಳುವ ಮಾತನ್ನು ತಳ್ಳಿಹಾಕುವುದು ಸುಲಭವೇನೂ ಅಲ್ಲ. ಇತರರ ನಾಶಕ್ಕೆ ಚೀನಾ ಬಳಸಬೇಕೆಂದಿದ್ದ ಈ ಅಸ್ತ್ರ ಅದೇ ರಾಷ್ಟ್ರವನ್ನು ಕಾಡ್ಗಿಚ್ಚಿನಂತೆ ಸುಡುತ್ತಿದೆ! ಈ ಲೇಖನ ನೀವು ಓದುವ ವೇಳೆಗೆ ಅಧಿಕೃತ ದಾಖಲೆಯ ಪ್ರಕಾರವೇ 1000 ಜನ ಬಲಿಯಾಗಿರುತ್ತಾರೆ. ಕನಿಷ್ಠಪಕ್ಷ ಒಂದುಲಕ್ಷ ಜನ ವೈರಸ್ಸಿನ ಆಕ್ರಮಣಕ್ಕೊಳಗಾಗಿರುವ ಭಯ ಆವರಿಸಿರುತ್ತದೆ.

7

ಇತ್ತ ಇನ್ನೊಂದಷ್ಟು ಜನ ರಷ್ಯಾದ ಹೇಳಿಕೆಯನ್ನು ಆಧರಿಸಿ ಚೀನಾವನ್ನು ಮಟ್ಟಹಾಕಲು ಅಮೇರಿಕಾ ಕಂಡುಕೊಂಡ ವೈರಸ್ ಇದು ಎಂದು ಹೇಳುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಅಮೇರಿಕಾ ಅಷ್ಟು ಸಲೀಸಾಗಿ ಇಂಥದ್ದೊಂದು ಸಾಹಸ ಮಾಡಬಹುದೆಂದು ಈ ಕ್ಷಣಕ್ಕೆ ಅನ್ನಿಸುವುದಿಲ್ಲ. ಹಾಗೆ ದೂರದ ಚೀನಾದೊಳಗೂ ಜೈವಿಕ ಅಸ್ತ್ರಗಳನ್ನು ಬಳಸಿ ತಿಂಗಳುಗಟ್ಟಲೆ ಚೀನಾದ ಉತ್ಪಾದನಾ ಸಾಮಥ್ರ್ಯವನ್ನು ತಡೆದು ನಿಲ್ಲಿಸುವಷ್ಟು ತಾಕತ್ತು ಅಮೇರಿಕಾಕ್ಕಿದೆ ಎನ್ನುವುದಾದರೆ ಅದು ಬಲು ಅಪಾಯಕಾರಿ!

ಮನುಷ್ಯತ್ವ ಎಲ್ಲಕ್ಕಿಂತಲೂ ದೊಡ್ಡದ್ದು ಎಂಬುದನ್ನು ಮರೆತಾಗ ಇಂತಹ ಹೀನಕೃತ್ಯಕ್ಕೆ ಕೈ ಹಾಕುತ್ತೇವೆ. ಕ್ಷಣಿಕವಾದ ಸಾರ್ವಭೌಮತೆಗೆ ಬಲಿಯಾಗಿ ಹೃದಯದೊಳಗೆ ಇರಬೇಕಾಗಿದ್ದ ಮಾರ್ದವತೆಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಇಂತಹ ಕೆಟ್ಟ ಜನರಿಗಿಂತಲೂ ಕರೋನಾ ವೈರಸ್ ಸಾವಿರಪಾಲು ಒಳಿತು ಎನ್ನುವುದು ಸರಿಯಾಗುತ್ತದೇನೋ, ಕ್ಷಮಿಸಿಬಿಡಿ!

Comments are closed.