ವಿಭಾಗಗಳು

ಸುದ್ದಿಪತ್ರ


 

ಕರೋನಾ ಸೋಲಲಿ; ಜಗತ್ತು ಗೆಲ್ಲಲಿ!

ಸತ್ಯ ಹೇಳಬೇಕೆಂದರೆ ಈ ವೈರಸ್ನ ಹಬ್ಬುವಿಕೆ ಮತ್ತು ಇದರ ಸಮಸ್ಯೆಗಳ ಕುರಿತಂತೆ ನಮಗಿನ್ನೂ ಅರಿವು ಬಂದೇ ಇಲ್ಲ. ಉಸಿರಾಟದ ತೊಂದರೆಯನ್ನು ಆಧಾರವಾಗಿರಿಸಿಕೊಂಡ ಈ ವೈರಸ್ಸು ವಯಸ್ಸಾದವರಿಗೆ ಮಾರಣಾಂತಿಕವಾಗಿಬಿಡುತ್ತದೆ. ಹಾಗಂತ ತರುಣರಿಗೇನು ಸಲೀಸು ಎಂದಲ್ಲ.

ಕರೋನಾ ದಿಕ್ಕೆಡಿಸಿಬಿಟ್ಟಿದೆ. ಅತ್ಯಂತ ಸದೃಢವಾದ ಆರೋಗ್ಯ ವ್ಯವಸ್ಥೆ ಹೊಂದಿರುವ ಇಟಲಿಯೇ ಈ ವೈರಸ್ಸನ್ನು ನಿಯಂತ್ರಿಸಲಾಗದೇ ಕೈಚೆಲ್ಲಿ ಕುಳಿತುಬಿಟ್ಟಿದೆ. ಜಗತ್ತಿನ ಅನೇಕ ರಾಷ್ಟ್ರಗಳು ಮುಂದೊದಗಲಿರುವ ಭೀಕರ ಪರಿಸ್ಥಿತಿಯನ್ನು ಊಹಿಸಿಕೊಂಡೇ ಅದರುತ್ತಿವೆ. ಭಾರತದ ಸ್ಥಿತಿಯೇನು ಅತ್ಯದ್ಭುತವಾಗಿಲ್ಲ. ಮುಂಬೈನಲ್ಲಿ 23 ಸಾವಿರ ಜನ ವಾಸಿಸುವ ಸ್ಲಂನ ಮಹಿಳೆಯೊಬ್ಬಳಿಗೆ ಸೋಂಕು ದೃಢಪಟ್ಟಿರುವುದು ನಿಜಕ್ಕೂ ನಾಲ್ಕನೇ ಹಂತಕ್ಕೆ ನಾವು ಹೊರಳಿರುವುದರ ಲಕ್ಷಣ. ಈ ಹಂತದಲ್ಲಿ ಸ್ವಲ್ಪ ಎಡವಿದರೂ ದೇಶ ಬಹುವಾದ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಮರೆಯದಿರಿ!

Concern In India As Covid-19 Continues To Spread

ಕರೋನಾ ಹಬ್ಬುವಲ್ಲಿ ಒಟ್ಟು ನಾಲ್ಕು ಹಂತಗಳಿವೆ. ಮೊದಲನೇ ಹಂತ ಈ ವೈರಸ್ಸನ್ನು ಆಮದು ಮಾಡಿಕೊಳ್ಳುವುದು. ಸಹಜವಾಗಿಯೇ ಚೀನಾ ಹುಟ್ಟಿಸಿರುವ ವೈರಸ್ಸಾಗಿರುವುದರಿಂದ ಚೀನಾದ ಮೂಲಕವೇ ಇದು ಜಗತ್ತಿಗೆಲ್ಲಾ ಹರಡಿದೆ. ಹೀಗಾಗಿ ವಿದೇಶ ಪ್ರಯಾಣ ಮಾಡುತ್ತಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅಡ್ಡಾಡುತ್ತಿರುವ ಬಹುತೇಕರನ್ನು ಈ ವೈರಸ್ ಅಪ್ಪಿಕೊಂಡಿದೆ. ಇಂಥವರು ಭಾರತಕ್ಕೆ ಬರುವಾಗ ತಾವೂ ಅದನ್ನು ಹೊತ್ತು ತರುತ್ತಾರೆ. ಆನಂತರ ಇಲ್ಲಿಗೆ ಬಂದು ತಮ್ಮ ವಲಯದ ಉನ್ನತ ಮಧ್ಯಮವರ್ಗದ ಜನರಿಗೆ ಇದನ್ನು ಹಬ್ಬಿಸಲಾರಂಭಿಸುತ್ತಾರೆ. ಇದು ಎರಡನೇ ಹಂತ. ಕನ್ನಿಕಾ ಕಪೂರ್ ಲಂಡನ್ನಿಂದ ಬರುವಾಗ ಹೊತ್ತು ತಂದಿದ್ದಳಲ್ಲ, ಅದು ಮೊದಲನೇ ಹಂತದ್ದಾದರೆ ಆಕೆ ತಾನೊಂದು ಪಾಟರ್ಿ ಕೊಟ್ಟು ಅಲ್ಲಿದ್ದ ನೂರಾರು ಜನರಿಗೆ ಈ ಸೋಂಕು ಹಬ್ಬಿಸಿದ್ದು ಎರಡನೇ ಹಂತ. ಈ ಉನ್ನತ ಮಧ್ಯಮವರ್ಗದವರು ಭಿನ್ನ ಭಿನ್ನ ಸಮಾರಂಭಗಳ ಮೂಲಕ ಮಧ್ಯಮ ಮತ್ತು ಕೆಳ ಮಧ್ಯಮವರ್ಗದವರೊಂದಿಗೆ ಬೆರೆಯುತ್ತಾರಲ್ಲಾ, ಆಗ ಮೂರನೇ ಹಂತದಲ್ಲಿ ಈ ವೈರಸ್ ಸಂಚರಿಸಲಾರಂಭಿಸುತ್ತದೆ. ಈಗ ಬಹುಶಃ ನಿಮಗೆ ಅಂದಾಜಾಗಿರಬಹುದು, ಹಂತದಿಂದ ಹಂತಕ್ಕೆ ದಾಟುವಾಗಲೂ ಇದು ಆಪೋಶನ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಮೊದಲ ಹಂತದಲ್ಲಿ ವಿದೇಶ ಪ್ರಯಾಣ ಮಾಡುವವರ ಸಂಖ್ಯೆ ಬಲು ಕಡಿಮೆ. ಇವರೊಡನೆ ಸಂಪರ್ಕಕ್ಕೆ ಬಂದವರು ಎರಡನೇ ಹಂತದಲ್ಲಿ ಅವರಿಗಿಂತ ಹೆಚ್ಚಿರುತ್ತಾರೆ. ಮೂರನೇ ಹಂತ ಸಾಮಾನ್ಯ ಮಧ್ಯಮವರ್ಗದವರನ್ನೆಲ್ಲಾ ಆವರಿಸಿಕೊಂಡುಬಿಡುತ್ತದೆ. ಇವೆಲ್ಲಕ್ಕಿಂತಲೂ ಕೆಟ್ಟದ್ದು ನಾಲ್ಕನೆಯದ್ದು. ವೈರಸ್ ತಾಕಿಸಿಕೊಂಡವನ ಮನೆಯಲ್ಲಿ ಕೆಲಸಕ್ಕಿರುವ ಹೆಣ್ಣುಮಗಳು ತಾನು ಇದಕ್ಕೆ ಆಹುತಿಯಾಗುತ್ತಾಳೆ. ಊರಿನ ಸಂತೆಗೆ, ಜಾತ್ರೆಗೆ ಮುಲಾಜಿಲ್ಲದೇ ಹೋಗುತ್ತಾಳೆ. ಅಲ್ಲಿ ಲಕ್ಷಾಂತರ ಜನರೊಂದಿಗೆ ಸಂಪರ್ಕವೇರ್ಪಡುವುದರಿಂದ ಇದರ ಹಬ್ಬುವಿಕೆಯನ್ನು ಹೆಚ್ಚೂ-ಕಡಿಮೆ ತಡೆಯುವುದು ಅಸಾಧ್ಯವೇ ಆಗಿಬಿಡುತ್ತದೆ. ಮುಂಬೈ ಪ್ರಕರಣದೊಂದಿಗೆ ನಾವೀಗ ನಾಲ್ಕನೇ ಹಂತಕ್ಕೆ ಬಂದುಬಿಟ್ಟಿದ್ದೇವೆ!
ಸತ್ಯ ಹೇಳಬೇಕೆಂದರೆ ಈ ವೈರಸ್ನ ಹಬ್ಬುವಿಕೆ ಮತ್ತು ಇದರ ಸಮಸ್ಯೆಗಳ ಕುರಿತಂತೆ ನಮಗಿನ್ನೂ ಅರಿವು ಬಂದೇ ಇಲ್ಲ. ಉಸಿರಾಟದ ತೊಂದರೆಯನ್ನು ಆಧಾರವಾಗಿರಿಸಿಕೊಂಡ ಈ ವೈರಸ್ಸು ವಯಸ್ಸಾದವರಿಗೆ ಮಾರಣಾಂತಿಕವಾಗಿಬಿಡುತ್ತದೆ. ಹಾಗಂತ ತರುಣರಿಗೇನು ಸಲೀಸು ಎಂದಲ್ಲ. ಇತ್ತೀಚಿನ ದಿನಗಳಲ್ಲಿ ದೈಹಿಕ ಶ್ರಮದ ಕೆಲಸವನ್ನು ಮಾಡದೇ ಶ್ವಾಸಕೋಶಗಳ ಪೂರ್ಣಬಳಕೆ ಮಾಡದಿರುವ ನಮಗೆ ಈ ಕಾಯಿಲೆ ಕೆಟ್ಟ ಅನುಭವ ತರುವುದಂತೂ ಖಾತ್ರಿ. ಎಲ್ಲಕ್ಕಿಂತಲೂ ಹೆಚ್ಚು ಯಾವ ವ್ಯಕ್ತಿ ತನಗೇನೂ ಆಗುವುದಿಲ್ಲವೆಂಬ ಧೈರ್ಯದಿಂದ ಈ ವೈರಸ್ಸನ್ನು ಒಬ್ಬರಿಂದೊಬ್ಬರಿಗೆ ಹಬ್ಬಿಸುತ್ತಾ ಹೋಗುತ್ತಾನಲ್ಲಾ, ಆತ ತನಗೇ ಅರಿವಿಲ್ಲದಂತೆ ಹತ್ತಾರು ಮಂದಿಯ ಸಾವಿಗೆ ಕಾರಣನಾಗಿಬಿಡುತ್ತಾನೆ!

8

ನಮಗೀಗ ನಿಜವಾದ ಸವಾಲು ಎದುರಿಗಿದೆ. ನಾವು ಈ ವೈರಸ್ನಿಂದ ಇತರರನ್ನು ರಕ್ಷಿಸುವುದು ದೂರದ ಮಾತು. ನಮ್ಮನ್ನು ನಾವು ಮೊದಲು ರಕ್ಷಿಸಿಕೊಳ್ಳಬೇಕಿದೆ. ಅದಕ್ಕಿರುವುದು ಒಂದೇ ಮಾರ್ಗ. ಬೇರೆಯವರ ಸಂಪರ್ಕಕ್ಕೆ ಬರದಿರುವುದು. ಅನೇಕರು ಬೇರೆಯವರ ಸಂಪರ್ಕಕ್ಕೆ ಬರುವುದು ಎಂದರೆ ರೋಗಪೀಡಿತರ ಸಂಪರ್ಕದಿಂದ ದೂರವಿರುವುದು ಎಂದಷ್ಟೇ ಭಾವಿಸಿದ್ದಾರೆ. ಆದರೆ ಈ ಚೀನಾ ವೈರಸ್ಸು ಅದೆಷ್ಟು ಅಪಾಯಕಾರಿ ಎಂದರೆ ಒಳಹೊಕ್ಕು ಕುಳಿತ ಕುರುಹು ಗೊತ್ತಾಗುವುದರೊಳಗೆ ಆರೇಳು ದಿನ ಕಳೆದೇ ಹೋಗಿರುತ್ತದೆ. ಅಷ್ಟರೊಳಗೆ ಆ ವ್ಯಕ್ತಿ ಯಾರ್ಯಾರ ಸಂಪರ್ಕಕ್ಕೆ ಬಂದಿದ್ದನೋ ಅವರೆಲ್ಲರೂ ತಮ್ಮ ಎದೆಯ ಗೂಡಿನೊಳಗೆ ಚೀನಾ ವೈರಸ್ಸಿಗೆ ನೀರೆರೆದು ಪೋಷಿಸುತ್ತಿರುತ್ತಾರೆ! ಯಾವ ಊರಿಗೂ ಈ ವೈರಸ್ಸು ಬರುವುದಿಲ್ಲ ಎಂದುಕೊಳ್ಳುವಂತೆಯೇ ಇಲ್ಲ. ದುಬೈನಿಂದ ಬಂದ ವ್ಯಕ್ತಿ ಗೌರಿಬಿದನೂರಿಗೆ ಹೋಗಿ ತನ್ನಿಡೀ ಪರಿವಾರಕ್ಕೆ ಈ ರೋಗವನ್ನು ಹಬ್ಬಿಸಿದ. ಅಲ್ಲಿಗೇ ಮುಗಿಯಲಿಲ್ಲ. ಬೆಂಗಳೂರು ವಿಮಾನ ನಿಲ್ದಾಣದಿಂದ ಆತ ಯಾವ ಬಸ್ಸಿನ ಮೂಲಕ ಬಂದನೋ ಅದರೊಳಗಿದ್ದ ಅನೇಕ ಪ್ರಯಾಣಿಕರಿಗೆ ಈ ರೋಗವನ್ನು ದಾಟಿಸಿಯೇ ಹೋಗಿರುತ್ತಾನೆ. ಅವನೊಡನಿದ್ದ ಪ್ರಯಾಣಿಕರು ಅಲ್ಲಿಂದ ಯಾವ್ಯಾವ ಊರಿಗೆ ಹೋಗುತ್ತಾರೋ ಅಲ್ಲೆಲ್ಲಾ ಕೊರೋನಾ ಅವರೊಂದಿಗೆ ಹೆಜ್ಜೆ ಹಾಕುತ್ತದೆ. ಹೀಗಾಗಿ ಯಾವ ಹಳ್ಳಿಯಲ್ಲಿ ಬೇಕಿದ್ದರೂ ಕೊರೋನಾದ ಲಕ್ಷಣಗಳು ಕಂಡು ಬರಬಹುದು. ಅದಕ್ಕೇ ಹಳ್ಳಿ-ದಿಲ್ಲಿಯ ಭೇದವನ್ನು ಮರೆತು ಮುಂದಿನ 14 ದಿನಗಳ ಕಾಲ ನಮಗೆ ನಾವೇ ನಿಯಮ ಹೇರಿಕೊಂಡರೆ ಒಳಿತು. ಈ ನಿಯಮ ಕಠಿಣವಾದ್ದೇನೂ ಅಲ್ಲ. ಮನೆಯೊಳಗೆ ಸುಮ್ಮನೆ ಕುಳಿತುಬಿಡಬೇಕಷ್ಟೇ. ಕಳೆದ ಅನೇಕ ವರ್ಷಗಳಿಂದ ಬದುಕಿನ ಓಟದ ನಡುವೆ ಮನೆಯಲ್ಲಿ ಕಾಲ ಕಳೆಯುವುದನ್ನು ಮರೆತೇ ಬಿಟ್ಟಿದ್ದೇವೆ. ಈಗೊಂದು ಅವಕಾಶ ಸಿಕ್ಕಿದೆ. ಉಳಿದುಬಿಡಿ. ಮತ್ತು ನಾವು ಮನೆಯಲ್ಲಿ ನಮ್ಮನ್ನು ಕೂಡಿ ಹಾಕಿಕೊಳ್ಳುವುದರಿಂದ ಕೊರೋನಾ ಹಬ್ಬಬಹುದಾದ ಸರಪಳಿಯನ್ನು ತುಂಡರಿಸುವ ತಾಕತ್ತು ನಮಗೆ ಬರುತ್ತದೆ. ದೇಶ ಎಷ್ಟು ಬೇಗ ಕೊರೋನಾ ಮಾರಿಯಿಂದ ಮುಕ್ತವಾಗುತ್ತದೋ ಅಷ್ಟೇ ವೇಗವಾಗಿ ಪ್ರಗತಿ ಪಥದಲ್ಲಿ ಮುನ್ನಡೆಯುತ್ತದೆ. ನಾವಿತ್ತ ಈ ವೈರಸ್ನೊಂದಿಗೆ ಜೂಜಾಡುತ್ತಿರುವಾಗ ಅತ್ತ ಚೀನಾ ಪ್ರೇರಿತ ನಕ್ಸಲರು 17 ಸೈನಿಕರನ್ನು ಕೊಂದು ಹಾಕಿದ್ದಾರೆ. ದುರಂತವೆಂದರೆ ಪ್ರತೀಕಾರ ತೆಗೆದುಕೊಳ್ಳುವ ಸ್ಥಿತಿಯಲ್ಲೂ ನಾವಿಲ್ಲ! ಭಾರತ ಸಶಕ್ತವಾಗಲು ನಮಗೆಲ್ಲರಿಗೂ ಹೋರಾಡುವ ಅವಕಾಶ ಸಿಕ್ಕಿದೆ. ನಾವೀಗ ಬಂದೂಕು ಹಿಡಿದು ಸೆಣಸಾಡಬೇಕಾಗಿಲ್ಲ. ಮನೆಯಿಂದ ಹೊರಗೆ ಕಾಲಿಡದೇ ಮನೆಯಲ್ಲೇ ನಮ್ಮನ್ನು ನಾವು ಕೂಡಿಹಾಕಿಕೊಳ್ಳುವ ಮೂಲಕ ರಾಷ್ಟ್ರದ ಜೊತೆ ಕೈಜೋಡಿಸಬೇಕಿದೆ. ತನ್ಮೂಲಕ ಭಾರತವನ್ನು ಗೆಲ್ಲಿಸಬೇಕಿದೆ!

9

ನೆನಪಿಡಿ, ಇಂಥದ್ದೊಂದು ಹೋರಾಟಕ್ಕೆ ಹಿಂದೆಂದೂ ಪ್ರಯತ್ನ ನಡೆದಿರಲಿಲ್ಲ. ಇದು ಅಪರೂಪದ ಸಮಯ. ಜೊತೆಯಲ್ಲಿರೋಣ, ಆದರೆ ನಮ್ಮ-ನಮ್ಮ ಮನೆಗಳಲ್ಲೇ ಪ್ರತ್ಯೇಕವಾಗಿದ್ದುಬಿಡೋಣ!

Comments are closed.