ವಿಭಾಗಗಳು

ಸುದ್ದಿಪತ್ರ


 

ಕರೋನಾ ಹಳೆಯದ್ದನ್ನೆಲ್ಲಾ ನೆನಪಿಸಿತು!

ಇದಕ್ಕಿಂತಲೂ ದುರಂತವೇನು ಗೊತ್ತೇನು? ಯಾವೊಬ್ಬ ಮುಸಲ್ಮಾನನೂ ನೊಂದುಕೊಂಡು ಇದರ ವಿರುದ್ಧವಾಗಿ ಮಾತನಾಡುತ್ತಿಲ್ಲ. ಹೇಗೆ ಮಾಬ್ಲಿಂಚಿಂಗ್ನ ಕಾಲಘಟ್ಟದಲ್ಲಿ ಹಿಂದುಗಳು ತಮ್ಮವರ ವಿರುದ್ಧವೇ ಕೂಗಾಡುತ್ತಿದ್ದರೋ ಅಂತಹ ದೈರ್ಯವನ್ನು ತೋರುತ್ತಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ದಾರಿ ತಪ್ಪಿದ ಈ ತರುಣರಿಗೆ ಬುದ್ಧಿಮಾತನ್ನು ಹೇಳುವ ಎದೆಗಾರಿಕೆಯೂ ಅವರಲ್ಲಿಲ್ಲ.

ಮೋದಿ ಅಧಿಕಾರಕ್ಕೆ ಬಂದ ಹೊಸತು ಅದು. ಒಂದಾದ ಮೇಲೊಂದು ಸಮಸ್ಯೆಗಳ ವೃಷ್ಟಿಯಾಗುತ್ತಿತ್ತು. ಎಲ್ಲಾ ಬುದ್ಧಿಜೀವಿಗಳು, ಮೋದಿವಿರೋಧಿಗಳು ಮೋದಿಯ ಬೆಳವಣಿಗೆಯನ್ನು ಸಹಿಸಲಾಗದೇ ಮಾಡುತ್ತಿದ್ದಂಥವು. ಆ ಹೊತ್ತಲ್ಲೇ ಹಿಂದೆಂದೂ ಇಲ್ಲದಂತೆ ಮಾಬ್ಲಿಂಚಿಂಗ್ನ ಪ್ರಕರಣ ಮುನ್ನೆಲೆಗೆ ಬಂತು. ಫ್ರಿಜ್ಜಿನಲ್ಲಿ ದನದಮಾಂಸ ಇಟ್ಟಿದ್ದಾರೆಂಬ ಕಾರಣಕ್ಕೆ ಒಬ್ಬನನ್ನು ಕೊಲ್ಲಲಾಯ್ತು, ರೈಲಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ತನ್ನ ಕೈಚೀಲದಲ್ಲಿ ದನದಮಾಂಸ ಹೊಂದಿದ್ದ ಎಂಬ ಕಾರಣಕ್ಕೆ ಅವನನ್ನು ಕೊಲ್ಲಲಾಯ್ತು; ಕರುವೊಂದನ್ನು ಕೊಲ್ಲಲು ಒಯ್ಯುತ್ತಿದ್ದಾನೆ ಎಂಬ ಕಾರಣಕ್ಕೆ ಮತ್ತೊಬ್ಬನನ್ನು ಅಟ್ಟಾಡಿಸಿಕೊಂಡು ಕೊಲ್ಲಲಾಯ್ತು. ಒಂದಾದ ಮೇಲೊಂದು ಸುದ್ದಿಗಳು ಹೊರಬರಲಾರಂಭಿಸಿದವು. ಹಿಂದೂಗಳೆಲ್ಲಾ ಈ ಕೃತ್ಯದಿಂದಾಗಿ ತಲೆ ಎತ್ತಿ ತಿರುಗಾಡುತ್ತಿರಲಿಲ್ಲ. ಯಾವ ಹಿಂದುವಿನ ಫೇಸ್ಬುಕ್ ಗೋಡೆಗಳನ್ನು ನೋಡಿದರೂ ಅಲ್ಲಿ ಮಾನವೀಯತೆಯ ದೊಡ್ಡ ದೊಡ್ಡ ಪಾಠಗಳೇ. ದನದಮಾಂಸಕ್ಕಾಗಿ ಒಬ್ಬ ವ್ಯಕ್ತಿಯ ಜೀವವನ್ನೇ ತೆಗೆಯುವುದು ಖಂಡಿತ ಸಲ್ಲದ್ದು ಎಂದು ಹಿಂದೂಗಳೇ ಪಾಠ ಹೇಳುತ್ತಿದ್ದರು! ಕಟ್ಟರ್ ಹಿಂದು ಎನಿಸಿಕೊಂಡ ನರೇಂದ್ರಮೋದಿಯೂ ಹಿಂದೆ-ಮುಂದೆ ನೋಡಲಿಲ್ಲ. ತುಂಬಿದ ಸಭೆಯೊಂದರಲ್ಲಿ ಉಗ್ರ ಚಿಂತನೆಗಳನ್ನು ಹೊತ್ತ ಸಂಘಟನೆ ಮತ್ತು ತರುಣರನ್ನು ಮುಲಾಜಿಲ್ಲದೇ ಝಾಡಿಸಿದರು. ಈ ಸಂದರ್ಭದಲ್ಲಿ ಕಟ್ಟರ್ ಮುಸಲ್ಮಾನರು ಈ ಸುದ್ದಿಯನ್ನು ಬಳಸಿಕೊಂಡು ತಮ್ಮ ತರುಣರನ್ನು ಹಿಂದೂಗಳ ವಿರುದ್ಧ ಎತ್ತಿ ಕಟ್ಟುತ್ತಿದ್ದರೆ ಅತ್ತ ಮಧ್ಯಮಮಾರ್ಗದಲ್ಲಿದ್ದ ಮುಸಲ್ಮಾನರು ಬುದ್ಧಿಜೀವಿಗಳೊಂದಿಗೆ ಸೇರಿ ಹಿಂದೂಗಳ ವಿರುದ್ಧ ಟೌನ್ಹಾಲಿನ ಮುಂದೆ ಪ್ರತಿಭಟನೆಯನ್ನೂ ಮಾಡಿದರು. ಪ್ರತೀ ಬಾರಿ ಈ ಸುದ್ದಿ ವ್ಯಾಪಕಗೊಳ್ಳುತ್ತಿದ್ದಂತೆ ಶ್ರದ್ಧಾವಂತ ಹಿಂದೂ ತಲೆತಗ್ಗಿಸುತ್ತಿದ್ದ. ತಾನು ಹಿಂದೂ ಎಂಬ ಗುರುತು ಯಾರಿಗೂ ಸಿಗದಂತೆ ನಡೆದಾಡುತ್ತಿದ್ದ. ಹಾಗೆ ಹಿಂದೂವೊಬ್ಬ ನಿರ್ಬಲನಾದನೆಂದರೆ ಈ ದೇಶವನ್ನು ನಾಶಮಾಡುವುದು ಸುಲಭವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇದಾದ ಕೆಲವು ದಿನಗಳಲ್ಲೇ ಇವೆಲ್ಲಾ ಸುದ್ದಿಗಳು ಸುಳ್ಳೆಂದು ತನಿಖಾ ವರದಿ ಬಂತು. ಮೋದಿಯನ್ನು ಕಂಡರಾಗದ ಕೆಲವು ಮಾಧ್ಯಮಗಳು ಈ ಬಗೆಯ ಸುದ್ದಿಯನ್ನು ಹಬ್ಬಿಸುತ್ತಿವೆ ಎಂದು ಅಧಿಕೃತ ವರದಿ ಬಂದಿತಾದರೂ ಅದು ಜನರ ಬಳಿಗೆ ಹೋಗಲಿಲ್ಲ. ಒಟ್ಟಾರೆ ಹಿಂದುವಿನ ಮನಸ್ಸಿನೊಳಗೆ ಅಡಗಿದ್ದ ಕೀಳರಿಮೆ ಮಾತ್ರ ಹಾಗೆಯೇ ಉಳಿಯಿತು!

2

ಈಗ ಮುಸಲ್ಮಾನರ ವಿಚಾರಕ್ಕೆ ಬನ್ನಿ. ತಬ್ಲೀಘಿ ಜಮಾತ್ ದೆಹಲಿಯಲ್ಲಿ ದೇಶದ ಕರೆಯನ್ನು ಧಿಕ್ಕರಿಸಿ ಸಭೆ ನಡೆಸಿತು. ಅಲ್ಲಿಗೆ ಬಂದ 800ಕ್ಕೂ ಹೆಚ್ಚು ವಿದೇಶಿಗರನ್ನು ವೀಸಾ ನಿಯಮ ಉಲ್ಲಂಘಿಸಿ ಉಳಿಸಿಕೊಂಡಿತು. ದೇಶದ ಮೂಲೆ-ಮೂಲೆಯಿಂದ ಬಂದಿದ್ದ ಮುಸಲ್ಮಾನರೊಳಗೆ ನಮಾಜು ಮಾಡುವವನು ಕೊರೋನಾಕ್ಕೆ ಹೆದರಬೇಕಿಲ್ಲ ಎಂಬ ಅಜ್ಞಾನವನ್ನು ದೃಢಪಡಿಸಿತು. ಅಷ್ಟೇ ಅಲ್ಲದೇ, ಮರಳಿ ತಮ್ಮೂರಿಗೆ ಹೋಗುವವರಿಗೆ ಒಂದು ರೀತಿಯಲ್ಲಿ ಕೊರೋನಾ ಹಬ್ಬಿಸುವ ಕಾಂಟ್ರ್ಯಾಕ್ಟು ಕೊಟ್ಟೇ ಕಳಿಸಲಾಯ್ತು. ಹೀಗೆ ಬಂದವರು ತಾವು ಕೊರೋನಾದಿಂದ ಸಾಯುವುದಿಲ್ಲ ಎಂಬ ಭರವಸೆಯಲ್ಲೇ ಇದ್ದರಲ್ಲದೇ ಇತರರಿಗೆ ಇದನ್ನು ಹರಡಿಸಿಬಿಟ್ಟರೆ ಈ ದೇಶವನ್ನು ಅಸ್ಥಿರಗೊಳಿಸಬಹುದು ಎಂಬ ನಿರ್ಣಯಕ್ಕೂ ಬಂದರು. ಆ ವೇಳೆಗಾಗಲೇ ದೇಶ ಲಾಕ್ಡೌನ್ಗೆ ಹೊರಳಿ ಕೊರೋನಾದ ಮೇಲೆ ವಿಜಯ ಸಾಧಿಸುವ ಎಲ್ಲ ತಯಾರಿ ಆರಂಭಿಸಿತು. ಲಾಕ್ಡೌನ್ಗೆ ಪ್ರತಿಸ್ಪಂದನೆಯೂ ಅಭೂತಪೂರ್ವವಾಗಿದ್ದರಿಂದ ಕೊರೋನಾ ಹರಡುವಿಕೆ ಕಡಿಮೆಯಾಗುತ್ತಿದೆ ಎಂದು ಎಲ್ಲರಿಗೂ ಅನಿಸಿತು. ಆಗಲೇ ದೆಹಲಿಯ ಮರ್ಕಜ್ನಲ್ಲಿ ಸಾವಿರಾರು ಜನ ಅಡಗಿ ಕುಳಿತಿರುವ ಸುದ್ದಿ ಹೊರಬಂದದ್ದು! ವಿಚಾರಣೆಗೆ ಹೋದ ಪೊಲೀಸರನ್ನು ಒಳ ಬಿಡಲಾಗದು ಎಂದು ಮಸೀದಿಯ ಮುಖ್ಯಸ್ಥರು ಗಲಾಟೆಗೆ ನಿಂತಾಗ ರಾಷ್ಟ್ರೀಯ ಸುರಕ್ಷಾದಳದ ಮುಖ್ಯಸ್ಥ ಅಜಿತ್ ದೋವೆಲ್ರೇ ಹೋಗಬೇಕಾಯ್ತು. ಅದು ಸಹಜವೂ ಆಗಿತ್ತು ಬಿಡಿ. ಪಾಕಿಸ್ತಾನದ ಬೆರಳ ತುದಿಯಲ್ಲಿ ಕುಣಿಯುತ್ತಿರುವ ಈ ಸಂಘಟನೆಯ ನಿಯಂತ್ರಣಕ್ಕೆ ಸುರಕ್ಷಾ ದಳದ ಪ್ರಮುಖರೊಬ್ಬರೇ ಹೋಗಿದ್ದು ಅರ್ಥಪೂರ್ಣವೇ. ಆದರೆ, ಆ ವೇಳೆಗೆ ಕಾಲ ಮಿಂಚಿತ್ತು. ಊರೂರಿನಲ್ಲಿ ಮುಸಲ್ಮಾನರು ವೈದ್ಯರ ಮೇಲೆ, ಪೊಲೀಸರ ಮೇಲೆ ಉಗಿಯುತ್ತಾ ತಮ್ಮ ನಿಜ ಬಣ್ಣವನ್ನು ತೋರಿಸಲಾರಂಭಿಸಿದರು. ಕೆಲವೆಡೆಗಳಂತೂ ತರಕಾರಿ-ಹಣ್ಣು ಮಾರುವ ಮುಸಲ್ಮಾನರು ಉಗಿದು ಕೊಡುವ ದೃಶ್ಯಗಳೂ ಹರಿದಾಡಲಾರಂಭಿಸಿದವು. ಮುಂಬೈನಲ್ಲಿ ಅಪಘಾತಕ್ಕೆ ತುತ್ತಾದ ಮುಸಲ್ಮಾನನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಆತನ ಓಡಾಟದ ವಿವರವನ್ನು ಮನೆಯವರು ಬಚ್ಚಿಟ್ಟಿದ್ದರಿಂದ 40ಕ್ಕೂ ಹೆಚ್ಚು ವೈದ್ಯರು, ಸಿಬ್ಬಂದಿಗಳು ಅವರ ಸಂಪರ್ಕಕ್ಕೆ ಬಂದರು. ಜ್ವರದ ಕಾರಣಕ್ಕೆ ಆತನನ್ನು ಪರೀಕ್ಷೆ ಮಾಡುವಾಗಲೇ ಗೊತ್ತಾಗಿದ್ದು ಆತ ಸೋಂಕಿಗೆ ಒಳಗಾಗಿದ್ದಾನೆ ಅಂತ. ಮುಂದೇನು? ಮನೆಯವರು ದೆಹಲಿಯ ಮಸೀದಿಯ ಕಾರ್ಯಕ್ರಮಕ್ಕೆ ಆತನು ಹೋಗಿದ್ದನ್ನು ಖಚಿತಪಡಿಸಿದರು. ಈಗ ಸಂಪರ್ಕಕ್ಕೆ ಬಂದ ವೈದ್ಯರು, ನಸರ್ುಗಳನ್ನೆಲ್ಲಾ ಕೂಡಿ ಹಾಕಿಡಲಾಗಿದೆ. ಇಡಿಯ ಆಸ್ಪತ್ರೆಯೇ ಕೊರೋನಾ ಕೇಂದ್ರವಾಗಿ ಮಾರ್ಪಟ್ಟಿರುವುದು ದುರಂತಕಾರಿ ಸಂಗತಿ!

3

ಇದಕ್ಕಿಂತಲೂ ದುರಂತವೇನು ಗೊತ್ತೇನು? ಯಾವೊಬ್ಬ ಮುಸಲ್ಮಾನನೂ ನೊಂದುಕೊಂಡು ಇದರ ವಿರುದ್ಧವಾಗಿ ಮಾತನಾಡುತ್ತಿಲ್ಲ. ಹೇಗೆ ಮಾಬ್ಲಿಂಚಿಂಗ್ನ ಕಾಲಘಟ್ಟದಲ್ಲಿ ಹಿಂದುಗಳು ತಮ್ಮವರ ವಿರುದ್ಧವೇ ಕೂಗಾಡುತ್ತಿದ್ದರೋ ಅಂತಹ ದೈರ್ಯವನ್ನು ತೋರುತ್ತಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ದಾರಿ ತಪ್ಪಿದ ಈ ತರುಣರಿಗೆ ಬುದ್ಧಿಮಾತನ್ನು ಹೇಳುವ ಎದೆಗಾರಿಕೆಯೂ ಅವರಲ್ಲಿಲ್ಲ. ಹೀಗೆ ದಾರಿ ತಪ್ಪಿದವರ ಸಂಖ್ಯೆ ಕಡಿಮೆಯೇನೂ ಅಲ್ಲ. ಮುಸಲ್ಮಾನರಲ್ಲಿ ಸುಮಾರು 40 ಪ್ರತಿಶತದಷ್ಟು ಅವರೇ ಇದ್ದಾರೆ. ಈಗ ಯಾವೊಬ್ಬ ಬುದ್ಧಿಜೀವಿಯೂ ಟೌನ್ಹಾಲಿನ ಮುಂದೆ ಪ್ರತಿಭಟನೆಗೆ ಕೂತಿಲ್ಲ. ಮಧ್ಯಮಮಾರ್ಗದಲ್ಲಿದ್ದ ಮುಸಲ್ಮಾನರು ಸೊಲ್ಲೆತ್ತುತ್ತಿಲ್ಲ. ದುರಂತವಲ್ಲದೇ ಮತ್ತೇನು?

ಈ ದೇಶದಲ್ಲಿ ಕೊರೋನಾ ಹಬ್ಬುವಿಕೆಯ ಮೂಲ ಸೂತ್ರಧಾರರು ಮುಸಲ್ಮಾನರೇ. ಅದಕ್ಕೆ ಸದ್ಯಕ್ಕಂತೂ ಪುರಾವೆ ಬೇಕಿಲ್ಲ. ದಿನೇ-ದಿನೇ ಹೆಚ್ಚುತ್ತಿರುವ ಸೋಂಕಿತರಲ್ಲಿ ಅವರ ಸಂಖ್ಯೆ ಬೆಟ್ಟದಷ್ಟಾಗುತ್ತಿದೆ. 21 ದಿನಗಳ ನಮ್ಮ ಲಾಕ್ಡೌನ್ ಮತ್ತೆ 15-20 ದಿನಗಳ ಕಾಲ ಮುಂದುವರೆದರೆ ಅದಕ್ಕೂ ಅವರೇ ಕಾರಣ. ಈ ಕುರಿತಂತೆ ಯಾವೊಬ್ಬ ಮುಸಲ್ಮಾನನೂ ದುಃಖಿಸದಿರುವುದು ನೋವಿನ ಸಂಗತಿ!

Comments are closed.