ವಿಭಾಗಗಳು

ಸುದ್ದಿಪತ್ರ

ಕರ್ನಾಟಕದ ಹೆಮ್ಮೆ ಈಗ ಮಾರಾಟದ ವಸ್ತು!

ಸಂದೇಹದ ಒಂದು ಬೀಜ ಹುಟ್ಟುವುದೇ ಇಲ್ಲಿ. ವಿಐಎಸ್ಎಲ್ ಅನ್ನು ಪೂರ್ಣಪ್ರಮಾಣದಲ್ಲಿ ತೆಕ್ಕೆಗೆ ಹಾಕಿಕೊಂಡಾಗಿನಿಂದಲೂ ಸ್ಟೀಲ್ ಅಥಾರಿಟಿ ಅದಕ್ಕೆಂದು ಹೂಡಿದ್ದು ಇದುವರೆಗೂ 250 ಕೋಟಿ ಮಾತ್ರ. ಆದರೆ ಇದೇ ವೇಳೆ ಒರಿಸ್ಸಾದ ಇಸ್ಕೊಗೆ 20 ಸಾವಿರಕೋಟಿ ರೂಪಾಯಿ ಹೂಡಿದೆ. ತಮಿಳುನಾಡಿನ ಕಾಖರ್ಾನೆಯೊಂದಕ್ಕೆ ಎರಡೂವರೆ ಸಾವಿರಕೋಟಿ ರೂಪಾಯಿ ಹೂಡಿಕೆ ಮಾಡಿದೆ.

ಆತಂಕದ ಭೀತಿ ಎದುರಿಸುತ್ತಿದೆ ಭದ್ರಾವತಿಯ ವಿಶ್ವೇಶ್ವರಾಯ ಐರನ್ ಆಂಡ್ ಸ್ಟೀಲ್ ಲಿಮಿಟೆಡ್. ಕರ್ನಾಟಕದ ಹೆಮ್ಮೆ ಮತ್ತು ವಿಶ್ವೇಶ್ವರಯ್ಯನವರ ನೆನಪಿನ ಕುರುಹಾಗಿ ಉಳಿದಿದ್ದ ಈ ಕಾಖರ್ಾನೆಯನ್ನು ಕೇಂದ್ರಸಕರ್ಾರ ಹೂಡಿಕೆ ಹಿಂತೆಗೆತದ ಪಟ್ಟಿಯಲ್ಲಿ ಸೇರಿಸಿರುವುದರಿಂದ ಒಂದೋ ಇಡಿಯ ಕಾಖರ್ಾನೆ ಸಮರ್ಥರ ಕೈಗೆ ಹೋಗಬಹುದು ಅಥವಾ ಕೇಂದ್ರಸಕರ್ಾರ ಆಸಕ್ತಿ ಕಳೆದುಕೊಂಡಿರುವುದರಿಂದ ಮುಚ್ಚಿಯೇ ಹೋಗಿಬಿಡಬಹುದು. ಒಟ್ಟಾರೆ ಶತಮಾನಗಳ ಕಾಲ ಸ್ಟೀಲ್ ಉತ್ಪಾದನೆಯ ಕೇಂದ್ರವಾಗಿ ಹೆಸರು ಮಾಡಿದ್ದ ಕಾಖರ್ಾನೆಯೊಂದು ತನ್ನ ಬದುಕಿನ ಅನಿಶ್ಚಿತತೆಯ ಕುರಿತಂತೆ ಹೆದರಿಕೊಂಡು ಕೂರುವಂತಾಗಿದೆ!

5

ಈ ಕಾಖರ್ಾನೆಯದ್ದು ಬಲು ವಿಸ್ತಾರವಾದ ಕಥೆ. ಅದರ ಹುಟ್ಟು, ಅದರ ವೈಭವದ ಕಾಲ, ಆನಂತರ ಅದು ಹಂತ-ಹಂತವಾಗಿ ಕುಸಿಯುತ್ತಾ ಹೋಗಿದ್ದು, ಅದರಲ್ಲಿ ಯಾರ ಪಾತ್ರ ಎಷ್ಟೆಷ್ಟು, ಉಳಿಸಿಕೊಳ್ಳುವ ಆಸಕ್ತಿ ಯಾರದ್ದು, ಮಾರಿಬಿಡುವ ಉತ್ಸಾಹ ಯಾರಿಗೆ ಇವೆಲ್ಲವೂ ಬಲುದೊಡ್ಡ ಕಥನ. ನೂರು ವರ್ಷಗಳ ಇತಿಹಾಸವೆಂದರೆ ಸುಮ್ಮನೆ ಏನು? ಸ್ವಾತಂತ್ರ್ಯ ದಕ್ಕುವ ಮೂರು ದಶಕಗಳಿಗೂ ಮುನ್ನವೇ ಆರಂಭವಾಗಿತ್ತು ಈ ಕಾಖರ್ಾನೆ. ಚಾರ್ಕೋಲ್ ಬ್ಲಾಸ್ಟ್ ಫನರ್ೇಸ್ನ ಮೂಲಕ ಕಬ್ಬಿಣದ ಉತ್ಪಾದನೆಗೆ ಇದು ಸಿದ್ಧವಾಗುವಾಗ 1923 ಕಳೆದಿತ್ತು. 1936ರ ವೇಳೆಗೆ ಮೈಸೂರ್ ಐರನ್ ಆಂಡ್ ಸ್ಟೀಲ್ ವಕ್ಸರ್್ ಎಂದು ಹೆಸರಾಗಿ ದೇಶದಲ್ಲೇ ಯಾರಾದರೂ ಊಹಿಸುವ ಮುನ್ನ ಸಾರ್ವಜನಿಕ ಉದ್ದಿಮೆಯಾಗಿ ಬೆಳೆದು ನಿಂತಿತ್ತು. ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋದ ಈ ಕಾಖರ್ಾನೆ 1942ರ ವೇಳೆಗೆ ಫೆರೋ ಅಲಾಯ್ಗಳ ಉತ್ಪಾದನೆಗೆ ಸಿದ್ಧವಾಗಿತ್ತು. 1962ರ ವೇಳೆಗೆ ಅಂದಿನ ಕಾಲದ ಅತ್ಯಾಧುನಿಕ ತಂತ್ರಜ್ಞಾನಗಳಾದ ಎಲೆಕ್ಟ್ರಿಕ್ ಆಕರ್್ ಫನರ್ೇಸುಗಳನ್ನು, ರೋಲಿಂಗ್ ಮಿಲ್ಗಳನ್ನು ಬಳಸುವಲ್ಲಿ ಯಶಸ್ಸು ಪಡೆದಿತ್ತು ಈ ಕಾಖರ್ಾನೆ. 1976ರಲ್ಲಿ ಈಗಿನ ಹೆಸರನ್ನು ಅಧಿಕೃತವಾಗಿ ಪಡೆದುಕೊಂಡ ಈ ಕಾಖರ್ಾನೆ ತನ್ನ ಹುಟ್ಟಿನ ಕನಸನ್ನು ಕಟ್ಟಿದ್ದ ಮತ್ತು ಬೆಳವಣಿಗೆಗೆ ಕಾರಣವಾಗಿದ್ದ ವಿಶ್ವೇಶ್ವರಯ್ಯನವರಿಗೆ ಗೌರವ ಸಲ್ಲಿಸಲು ಸಾಧ್ಯವಾಯ್ತು.

ವಿಶ್ವೇಶ್ವರಯ್ಯನವರ ನೆನಪು ಈ ಕಾಖರ್ಾನೆಯೊಂದಿಗೆ ವಿಶೇಷವಾಗಿ ತಳುಕು ಹಾಕಿಕೊಂಡಿದೆ. 1936ರಲ್ಲಿ ಒಮ್ಮೆ ಈ ಕಾಖರ್ಾನೆ ನಷ್ಟಕ್ಕೆಳಸಿದಾಗ ಮಹಾರಾಜರು ಇದನ್ನು ಮತ್ತೆ ಲಾಭದತ್ತ ಕೊಂಡೊಯ್ಯುವ ಹೊಣೆಗಾರಿಕೆಯನ್ನು ವಿಶ್ವೇಶ್ವರಯ್ಯನವರ ಹೆಗಲಿಗೇರಿಸಿದರು. ಆಗ ಇಲ್ಲಿನ ಕಾಮರ್ಿಕರೊಂದಿಗೆ ತಾವೂ ಕೂಡ ದುಡಿಯುತ್ತಾ ಅವರು ಈ ಸಂಸ್ಥೆಗೆ ಹೊಸರೂಪ ತಂದುಕೊಡಲು ಕಾರಣವಾದರು. ಕಬ್ಬಿಣ ಕಾದು ರಸವಾಗಿ ಹರಿಯುವ ಜಾಗದಲ್ಲಿ ಮರಳು ಹಾಕಿ ತಣಿಸುವ ಕೆಲಸವನ್ನೂ ಅವರು ಮಾಡಿದ್ದರೆಂದು ಇಲ್ಲಿನ ನೆನಪುಗಳು ಹೇಳುತ್ತವೆ. ಈ ಕಾಖರ್ಾನೆ ಮತ್ತೆ ವೈಭವದ ಸ್ಥಿತಿಗೆ ಮರಳಿದಾಗ ವಿಶ್ವೇಶ್ವರಯ್ಯನವರ ಎದೆಯೆತ್ತರದ ಕಂಚಿನ ಮೂತರ್ಿಯೊಂದನ್ನು ಮಾಡಿ ಅದಕ್ಕೆ ಸೂಕ್ತವಾದ ನೆರಳಿನ ವ್ಯವಸ್ಥೆ ಮಾಡಬೇಕೆಂದು ಕಾಮರ್ಿಕರೆಲ್ಲಾ ಆಲೋಚಿಸುತ್ತಿದ್ದರೆ ವಿಶ್ವೇಶ್ವರಯ್ಯನವರು ‘ನನ್ನ ಕಾಖರ್ಾನೆಯ ಕಾಮರ್ಿಕರು ಬಿಸಿಯ ವಾತಾವರಣದಲ್ಲಿ ಕೆಲಸ ಮಾಡುತ್ತಿರುವಾಗ ನನ್ನ ಪ್ರತಿಮೆಯನ್ನೂ ನೆರಳಲ್ಲಿ ನಿಲ್ಲಿಸಬೇಡಿ’ ಎಂದು ಕೇಳಿಕೊಂಡಿದ್ದರಂತೆ. ಈಗಲೂ ಆ ಪ್ರತಿಮೆ ಕೃತಕ ನೆರಳಿನ ವ್ಯವಸ್ಥೆಯಿಲ್ಲದೇ ಕಾಖರ್ಾನೆಯ ಆವರಣದೊಳಗೆ ಹಾಗೆಯೇ ನಿಂತಿದೆ. ಭಾರತರತ್ನ ಎಂದರೆ ಹೀಗೇ ಇರಬೇಕಲ್ಲವೇ!

6

1970ರವರೆಗೂ ಈ ಕಾಖರ್ಾನೆ ವೈಭವದಿಂದಲೇ ಬದುಕಿತ್ತು. 700 ಗ್ರೇಡ್ಗಿಂತ ಮಿಗಿಲಾದ ಸ್ಟೀಲ್ ಉತ್ಪಾದನೆಯಲ್ಲಿ ವಿಐಎಸ್ಎಲ್ ಅಗ್ರಣಿಯಾಗಿ ಮೆರೆಯುತ್ತಿತ್ತು. ಮುಂದೆ 1989ರಲ್ಲಿ ರಾಜೀವ್ಗಾಂಧಿ ದೇಶದ ಪ್ರಧಾನಿಯಾಗಿದ್ದಾಗ ಈ ಕಾಖರ್ಾನೆಯನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ಗೆ ವಹಿಸಿಕೊಡಲಾಯ್ತು. ಅದಕ್ಕಾಗಿ ರಾಜ್ಯಸಕರ್ಾರ ಪಡೆದುಕೊಂಡಿದ್ದು ಕೇವಲ ಒಂದು ರೂಪಾಯಿ. ಕೇಂದ್ರಸಕರ್ಾರ ಸ್ವಾಧೀನಪಡಿಸಿಕೊಂಡ ಮೊದಲ ವರ್ಷದಲ್ಲಿ ಆಥರ್ಿಕ ಹಿನ್ನೆಡೆ ಇದ್ದಾಗಲೂ ಮೋಟಾರು ವಾಹನಗಳ ಮಾರಾಟ ಕುಂಠಿತವಾಗಿದ್ದಾಗಲು ಗಲ್ಫ್ ಯುದ್ಧದ ಕಾರಣದಿಂದಾಗಿ ತೈಲಬೆಲೆ ವಿಪರೀತವಾಗಿ ಏರಿದ್ದಾಗಲೂ ವಿಐಎಸ್ಎಲ್ ನಷ್ಟ ಮಾಡಿಕೊಂಡಿರಲಿಲ್ಲ. ಎರಡನೇ ವರ್ಷವೂ ಕೂಡ ನಷ್ಟವಿಲ್ಲದೇ ಕಾಖರ್ಾನೆ ಕಾರ್ಯ ನಿರ್ವಹಿಸಿದ್ದನ್ನು ನೋಡಿ ಸ್ಟೀಲ್ ಅಥಾರಿಟಿಗೆ ಎಲ್ಲಿಲ್ಲದ ಹಿಗ್ಗು. ಆನಂತರವೇ ಅದು ಪೂರ್ಣಪ್ರಮಾಣದಲ್ಲಿ ವಿಐಎಸ್ಎಲ್ ಅನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಈ ಪ್ರಕ್ರಿಯೆ ಪೂರ್ಣವಾಗಿದ್ದು 1998ರಲ್ಲಿ. ಹೀಗೆ ಪೂರ್ಣಪ್ರಮಾಣದಲ್ಲಿ ಈ ಕಾಖರ್ಾನೆಯನ್ನು ಕೇಂದ್ರಕ್ಕೆ ವಗರ್ಾಯಿಸುವಾಗ ಕನರ್ಾಟಕವೇನು ಕಡಿಮೆ ತ್ಯಾಗ ಮಾಡಿರಲಿಲ್ಲ. ಕೆಇಬಿಗೆ ಕಟ್ಟಬೇಕಾಗಿದ್ದ ಕರೆಂಟ್ ಬಿಲ್ ಬಾಕಿಯನ್ನು ಮನ್ನಾ ಮಾಡಿತ್ತು. ಜೊತೆಗೆ ಬ್ಯಾಂಕುಗಳಿಂದ ಪಡೆದ ಸಾಲದ ಮೇಲಿನ ಬಡ್ಡಿಯನ್ನು ತೀರಿಸುವ ಅಗತ್ಯವಿಲ್ಲವೆಂದಿತು. ಸಹಜವಾಗಿಯೇ ಕನರ್ಾಟಕದ ಹೆಮ್ಮೆಯೆನಿಸಿದ್ದ ಕಾಖರ್ಾನೆ ಕೇಂದ್ರದ ಅಪ್ಪುಗೆ ಪಡೆದರೆ ನಕ್ಷತ್ರದಂತೆ ಮಿನುಗುತ್ತದೆ ಮತ್ತು ನೌಕರರ ಬದುಕು ಕಳೆಗಟ್ಟುತ್ತದೆ ಎಂಬ ಭರವಸೆ ಇದ್ದುದರಿಂದ ಎಲ್ಲಾ ಪ್ರಯತ್ನ ಮಾಡಲಾಗಿತ್ತು. ನೆನಪಿಡಿ. ಅದು ವಿಐಎಸ್ಎಲ್ನ ಉಚ್ಛ್ರಾಯ ಕಾಲ. ಸುಮಾರು 14,000 ಜನ ಈ ಕಾಖರ್ಾನೆಯನ್ನು ನಂಬಿ ಬದುಕುತ್ತಿದ್ದ ಹೊತ್ತು ಅದು!

7

ಕೇಂದ್ರಸಕರ್ಾರದಲ್ಲಿ ಆ ವೇಳೆಗಾಗಲೇ ಸಾರ್ವಜನಿಕ ಉದ್ದಿಮೆಗಳನ್ನು ಹಂತ-ಹಂತವಾಗಿ ಕೈಬಿಡುವ ಯೋಜನೆ ರೂಪುಗೊಂಡುಬಿಟ್ಟಿತ್ತು. ಅದರಲ್ಲಿ ಯಾವ ತಪ್ಪೂ ಇಲ್ಲ ಬಿಡಿ. ಸಕರ್ಾರ ಉದ್ದಿಮೆಗಳನ್ನು ನಡೆಸುವುದು ಸರಿಯಾದ ಕಲ್ಪನೆಯೇ ಅಲ್ಲ. ಸಕರ್ಾರ ಸಾರ್ವಜನಿಕರಿಗೆ ಉದ್ದಿಮೆಗಳನ್ನು ನಡೆಸಲು ಪ್ರೇರೇಪಿಸಬೇಕು; ಅದಕ್ಕೆ ಬೇಕಾಗಿರುವ ವ್ಯವಸ್ಥೆಗಳನ್ನು ರೂಪಿಸಿಕೊಟ್ಟು ಉದ್ದಿಮೆದಾರರಿಂದ ತೆರಿಗೆ ಪಡೆದು ಜನಸಾಮಾನ್ಯರ ಬದುಕು ಹಸನುಗೊಳಿಸಬೇಕು. ಸಕರ್ಾರವೇ ವ್ಯಾಪಾರ ಮಾಡಲು ನಿಂತರೆ ಅದು ಶ್ರೇಷ್ಠ ಆಡಳಿತದ ನಿದರ್ಶನವಲ್ಲ. ಇವೆಲ್ಲವೂ ಶುರುವಾಗಿದ್ದು ಎರಡನೇ ಪಂಚವಾಷರ್ಿಕ ಯೋಜನೆಯ ವೇಳೆಗೆ. ಕೈಗಾರಿಕೀಕರಣದ ಕನಸು ಹೊತ್ತಿದ್ದ ಜವಾಹರ್ಲಾಲ್ ನೆಹರೂ ಆರಂಭದಲ್ಲಿ ಭಾರತವನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕೇಂದ್ರವಾಗಿಸಬೇಕೆಂದು ಆಲೋಚಿಸಿದರು. ಕಾಲಕ್ರಮೇಣ ಬೃಹತ್ ಕೈಗಾರಿಕೆಗಳ ಕನಸೂ ಅವರಿಗೆ ಬಿತ್ತು. ತಪ್ಪೇನೂ ಇರಲಿಲ್ಲ. ಸ್ವಾತಂತ್ರ್ಯ ಬಂದ ಹೊಸ್ತಿಲಲ್ಲಿ ನಾವಿದ್ದ ಪರಿಸ್ಥಿತಿಗೆ ಅಗಾಧವಾಗಿ ಬೆಳೆಯಬೇಕಾದ್ದು ಅಗತ್ಯವೇ ಇತ್ತು. ಆದರೆ ಅದಕ್ಕೆ ಭಾರತೀಕರಣದ ರೂಪಕೊಡಬೇಕಾದ್ದ ಅಗತ್ಯತೆಯನ್ನು ನೆಹರೂ ಎಂದೂ ಮನಗಾಣಲೇ ಇಲ್ಲ. 1948ರಲ್ಲಿ ಕೈಗಾರಿಕೆಗಳ ಕುರಿತ ನಿಯಮವನ್ನು ರೂಪಿಸುವಾಗ ಇವುಗಳ ಬಗ್ಗೆ ಯೋಚಿಸದೇ ಸೋಷಿಯಲಿಸ್ಟ್ಗಳ ನಮೂನೆಯೊಂದನ್ನು ನೇರವಾಗಿ ನಕಲು ಮಾಡಲಾಯ್ತು. ವಿದ್ಯುತ್ತು, ಗಣಿಗಾರಿಕೆ, ರಸಗೊಬ್ಬರ, ಸ್ಟೀಲು, ಪರಮಾಣುಶಕ್ತಿ ಇವೆಲ್ಲವನ್ನೂ ಕೂಡ ಸಾರ್ವಜನಿಕ ಉದ್ದಿಮೆಯಾಗಿ ಬೆಳೆಸುವ ಕಲ್ಪನೆ ಹಂತ-ಹಂತಕ್ಕೆ ರೂಪುಗೊಂಡಿತು. ದ್ವಿತೀಯ ಪಂಚವಾಷರ್ಿಕ ಯೋಜನೆ ಸಮಾಜವಾದದ ಆಧಾರದ ಮೇಲೆ ಭಾರತವನ್ನು ರೂಪಿಸುವ ಮಹಲೊನವೀಸ್ರ ಕಲ್ಪನೆಯನ್ನು ಸಾಕಾರಗೊಳಿಸಿತು. ರಷ್ಯಾದ ಮಾಕ್ಸರ್್ವಾದದ ವಾಸನೆಯಿದ್ದ ಈ ಕಲ್ಪನೆ ಕಾಲಕ್ರಮದಲ್ಲಿ ಅನೇಕ ಎಡವಟ್ಟುಗಳ ಆಗರವಾಯಿತಾದರೂ ಅದನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಯೋಜನೆಯಿಂದ ಯೋಜನೆಗಳಿಗೆ ಈ ಕಲ್ಪನೆ ರೂಪಾಂತರಗೊಂಡಿತೆ ಹೊರತು ಆಮೂಲಾಗ್ರ ಬದಲಾವಣೆ ಕಾಣಲಿಲ್ಲ. ಆರಂಭದಲ್ಲಿ ಪ್ರಭಾವಿಯಾಗಿ ಕಂಡದ್ದು ಕಾಲಕ್ರಮೇಣ ಬಿಳಿಯಾನೆಯಾಗಿ ತೆರಿಗೆ ಹಣವನ್ನು ತಿಂದು ಬಿಸಾಡಲೆಂದೇ ಈ ಸಾರ್ವಜನಿಕ ಉದ್ದಿಮೆಗಳು ನಿಮರ್ಾಣಗೊಂಡಿವೆ ಎನಿಸುವಂತಾಯ್ತು. ಜನ ಖಾಸಗಿ ಕಂಪೆನಿಯ ಉದ್ಯೋಗಗಳನ್ನು ಧಿಕ್ಕರಿಸಿ ಈ ಉದ್ದಿಮೆಗಳಲ್ಲಿ ಕೆಲಸ ಅರಸಲಾರಂಭಿಸಿದರು. ಇದು ಉಳಿದೆಲ್ಲದುದುಕ್ಕಿಂತಲೂ ಹೆಚ್ಚು ಸುರಕ್ಷಿತ ಮತ್ತು ನಂಬಿಕೆಯುಳ್ಳದ್ದು ಎಂಬ ಭಾವ ಬಲಿತ ಮೇಲೆ ಸ್ವಂತ ಉದ್ದಿಮೆ ಮಾಡುವವರ ಸಂಖ್ಯೆ ಇಳಿಮುಖವಾಯ್ತು. ಆನಂತರವೇ ಸರ್ಕರಿ ನೌಕರಿಯ ಬೆಲೆ ಹೆಚ್ಚಾಗಿ ಕೃಷಿ ಅವನತಿಯತ್ತ ಸಾಗಿದ್ದೂ ಕೂಡ! ಮುಂದೊಮ್ಮೆ ಈ ಕುರಿತಂತೆ ವಿಸ್ತಾರವಾಗಿ ಚಚರ್ಿಸೋಣ. ಅಟಲ್ಬಿಹಾರಿ ವಾಜಪೇಯಿ ಅಧಿಕಾರಕ್ಕೆ ಬಂದಮೇಲೆ ಹಂತ-ಹಂತವಾಗಿ ಸಾರ್ವಜನಿಕ ಉದ್ದಿಮೆಗಳಲ್ಲಿ ಹೂಡಿದ್ದ ಸಕರ್ಾರದ ಹಣವನ್ನು ಹಿಂತೆಗೆದುಕೊಳ್ಳಲಾಯ್ತು. ಅದಕ್ಕಾಗಿ ಹೂಡಿಕೆ ಹಿಂತೆಗೆತದ ಯೋಜನೆಯನ್ನೇ ರೂಪಿಸಿ ಒಬ್ಬ ಮಂತ್ರಿಯನ್ನೂ ಮೀಸಲಿಡಲಾಯ್ತು. ದುರದೃಷ್ಟವೆಂದರೆ ಖಾಸಗಿಯವರು ಚೆನ್ನಾಗಿ ದುಡಿಯುತ್ತಿದ್ದ ಸಾರ್ವಜನಿಕ ಉದ್ದಿಮೆಗಳಲ್ಲಿ ಹಣ ಹೂಡಿದರೇ ಹೊರತು ನಷ್ಟದಲ್ಲಿದ್ದ ಕಂಪೆನಿಗಳನ್ನು ಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಮೋದಿಯವರ ಆಗಮನದ ನಂತರ ಈ ಪ್ರಕ್ರಿಯೆ ಮತ್ತೂ ತೀವ್ರಗೊಂಡು ಅನೇಕ ಸಾರ್ವಜನಿಕ ಉದ್ದಿಮೆಗಳಲ್ಲಿನ ಹೂಡಿಕೆಯನ್ನು ಹಿಂತೆಗೆದುಕೊಳ್ಳಲಾಯ್ತು. ಕೇಂದ್ರಸಚಿವ ಅನಂತಕುಮಾರ್ ಒಮ್ಮೆ ವಿಐಎಸ್ಎಲ್ನ ಕುರಿತಂತೆ ಸದನದಲ್ಲಿ ದನಿಯೆತ್ತಿ ಆನಂತರ ಹೂಡಿಕೆ ಹಿಂತೆಗೆತದ ಯೋಜನೆ ರೂಪಿಸುವಲ್ಲಿ ತಾನೂ ಭಾಗವಾಗಿರುವುದರಿಂದ ಇನ್ನು ಮುಂದೆ ವಿಐಎಸ್ಎಲ್ನ ಕುರಿತಂತೆ ಮಾತನಾಡುವುದು ಸಾಧ್ಯವಾಗುವುದಿಲ್ಲವೆಂದು ಹಿಂದೆ ಸರಿದುಬಿಟ್ಟಿದ್ದರು. ಈ ನಡುವೆ ಸ್ಟೀಲ್ ಅಥಾರಿಟಿ ಜಾಗತಿಕ ಟೆಂಡರ್ ಕರೆದು ವಿಐಎಸ್ಎಲ್ ಅನ್ನು ಸನ್ಪ್ಲಗ್ ಎಂಬ ಕಂಪೆನಿಯೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿಬಿಟ್ಟಿತ್ತು. ಆದರೆ ಅಪಾರ ಪ್ರತಿರೋಧದ ನಡುವೆ ಅದನ್ನು ಕೈಬಿಡಬೇಕಾಗಿಬಂತು!

ಸಂದೇಹದ ಒಂದು ಬೀಜ ಹುಟ್ಟುವುದೇ ಇಲ್ಲಿ. ವಿಐಎಸ್ಎಲ್ ಅನ್ನು ಪೂರ್ಣಪ್ರಮಾಣದಲ್ಲಿ ತೆಕ್ಕೆಗೆ ಹಾಕಿಕೊಂಡಾಗಿನಿಂದಲೂ ಸ್ಟೀಲ್ ಅಥಾರಿಟಿ ಅದಕ್ಕೆಂದು ಹೂಡಿದ್ದು ಇದುವರೆಗೂ 250 ಕೋಟಿ ಮಾತ್ರ. ಆದರೆ ಇದೇ ವೇಳೆ ಒರಿಸ್ಸಾದ ಇಸ್ಕೊಗೆ 20 ಸಾವಿರಕೋಟಿ ರೂಪಾಯಿ ಹೂಡಿದೆ. ತಮಿಳುನಾಡಿನ ಕಾಖರ್ಾನೆಯೊಂದಕ್ಕೆ ಎರಡೂವರೆ ಸಾವಿರಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಮತ್ತು ಇವೆಲ್ಲವೂ ನಮ್ಮ ಕಾಖರ್ಾನೆಗಿಂತಲೂ ಹೆಚ್ಚು ನಷ್ಟದಲ್ಲಿದ್ದಂಥವು! ಸಂಸದರು, ಮಂತ್ರಿ-ಮುಖ್ಯಮಂತ್ರಿಗಳು ಎತ್ತಿದ ಎಲ್ಲ ಪ್ರಶ್ನೆಗಳು ಮೂಲೆಗುಂಪಾಗಿಬಿಟ್ಟವು. ಪರಿಹಾರ ಹೇಳಬೇಕಾದ ಸ್ಟೀಲ್ ಅಥಾರಿಟಿ 2013ರಲ್ಲಿ ಮತ್ತೊಮ್ಮೆ ಸಹಯೋಗಕ್ಕಾಗಿ ಇತರ ಕಂಪೆನಿಗಳನ್ನು ಆಹ್ವಾನಿಸಿತು. ಈ ನಡುವೆ ಒಮ್ಮೆ ಈ ಕಾಖರ್ಾನೆಗೆ ಹೊಂದಿಕೊಂಡಂತೆ ಗಣಿಪ್ರದೇಶವನ್ನು ರಾಜ್ಯಸಕರ್ಾರ ಗುರುತಿಸಿಕೊಡುವುದಾದರೆ ಮತ್ತೆ ಕಾಖರ್ಾನೆಗೆ ಬೇಕಾದಷ್ಟು ಹಣಹೂಡಲು ಸಿದ್ಧ ಎಂದಿತ್ತು ಸ್ಟೀಲ್ ಅಥಾರಿಟಿ. 2007ರಲ್ಲಿ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದಾಗ ಗಣಿಖಾತೆಗೆ ಪತ್ರ ಬರೆದು ಬಳ್ಳಾರಿಯ 140 ಹೆಕ್ಟೇರ್ ಪ್ರದೇಶವನ್ನು ಮೀಸಲಿಡುವಂತೆ ಕೇಳಿಕೊಂಡಿದ್ದರು. ಕಾಲಕ್ರಮದಲ್ಲಿ ರಾಮನದುರ್ಗ ಗಣಿಪ್ರದೇಶವನ್ನೂ ಪಡೆದುಕೊಳ್ಳಲಾಯ್ತು. ಅಷ್ಟಾದರೂ ವಿಐಎಸ್ಎಲ್ಗೆ ಮಾತ್ರ ಜೀವ ಬರಲೇ ಇಲ್ಲ!

8

ಸ್ಟೀಲ್ ಅಥಾರಿಟಿಯ ಉದ್ದೇಶಗಳೇ ಅನುಮಾನ ಪಡುವಂಥದ್ದು. ಭದ್ರಾವತಿಯ ಕಾಖರ್ಾನೆಯಲ್ಲಿ 60ಸಾವಿರ ಮೆಟ್ರಿಕ್ ಟನ್ಗಳಷ್ಟು ಉತ್ಪನ್ನ ಸಿದ್ಧವಾಗಿ ಅನೇಕ ವರ್ಷಗಳಿಂದ ಬಳಕೆದಾರನ ತಲುಪದೇ ಹಾಗೆಯೇ ಉಳಿದಿದೆ. ಇದನ್ನೇ ಮಾರಿಕೊಂಡರೂ ಕನಿಷ್ಠಪಕ್ಷ 300ಕೋಟಿ ದುಡಿಯಬಹುದೆಂದು ಸಂಸದ ರಾಘವೇಂದ್ರ ಕೇಂದ್ರಸಕರ್ಾರಕ್ಕೆ ಅಹವಾಲನ್ನೂ ಮಂಡಿಸಿದ್ದಾರೆ. ಆದರೆ ಈ ಕುರಿತ ಯಾವ ಪ್ರಕ್ರಿಯೆಯೂ ಜರುಗಿಲ್ಲ. 15 ವರ್ಷಗಳಲ್ಲಿ ಸ್ಟೀಲ್ ಅಥಾರಿಟಿ ಇದನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನೇ ಮಾಡದೇ ಭರವಸೆಯಷ್ಟು ಹೂಡಿಕೆಯನ್ನೂ ಮಾಡದೇ ಏಕಾಕಿ ಮಾರಹೊರಟಿರುವುದು ಸರಿಯಾ ಎನ್ನುವುದೇ ಈಗಿರುವ ಪ್ರಶ್ನೆ. ಇನ್ನೂ ವಿಶೇಷವೆಂದರೆ ಈ ಇಡಿಯ ಕಾಖರ್ಾನೆಗೆ ಸುಮಾರು 2000 ಎಕರೆಯಷ್ಟು ಜಾಗಿವಿದ್ದು ಸೂಕ್ತ ನಿರ್ವಹಣೆಯ ಕೊರತೆಯಿಂದ ಹರಿದು ಹಂಚಿಹೋಗಿಬಿಟ್ಟಿದೆ. ಲೆಕ್ಕಕ್ಕೆ ಸಿಗುವ ಜಾಗ 1000 ಎಕರೆಗಳಿಗಿಂತಲೂ ಕಡಿಮೆ. ಕೊನೆಯ ಪಕ್ಷ ಸಕರ್ಾರ ಕ್ರಮಕೈಗೊಂಡು ಅಷ್ಟೂ ಜಮೀನನ್ನು ಕ್ರೋಢೀಕರಿಸುವ ಪ್ರಯತ್ನ ಮಾಡಿದರೆ ಟಾಟಾ, ಮಿತ್ತಲ್ರಂತಹ ಬೃಹತ್ ಕಂಪೆನಿಗಳು ವಿಐಎಸ್ಎಲ್ ಅನ್ನು ಕೊಂಡುಕೊಳ್ಳಲು ಮುಂದೆ ಬರಬಹುದು. ಮತ್ತೊಂದು ಆಕರ್ಷಕ ಸಂಗತಿಯೇನು ಗೊತ್ತೇ? ಮಂಗಳೂರು ಮತ್ತು ಗೋವಾ ಬಂದರನ್ನು ಸಂಪಕರ್ಿಸಬಲ್ಲ ಆಯಕಟ್ಟಿನ ಜಾಗದಲ್ಲಿ ಈ ಕಾಖರ್ಾನೆಯಿದೆ. ಜೊತೆಗೆ ರೈಲು ಮತ್ತು ರಸ್ತೆಯ ಸಂಪರ್ಕ ಭದ್ರಾವತಿಗೆ ಆಕರ್ಷಕವೆನಿಸುವಂತಿದೆ. ಇಷ್ಟಾದರೂ ಇದನ್ನು ಸಮರ್ಥವಾಗಿ, ಕ್ರಿಯಾಶೀಲವಾಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡದೇ ಹೋದರೆ ಎಡವಟ್ಟಾದೀತು. 2015ರಲ್ಲಿ ಕೇಂದ್ರಮಂತ್ರಿ ನರೇಂದ್ರಸಿಂಗ್ ತೋಮರ್ 1000ಕೋಟಿ ರೂಪಾಯಿ ಹೂಡಿಕೆ ಮಾಡುವ ಭರವಸೆ ಕೊಟ್ಟು ಹೋಗಿದ್ದರು. ಆನಂತರ ಚೌದ್ರಿ ವೀರೇಂದ್ರಸಿಂಗ್ ಕೂಡ ಇಲ್ಲಿಗೆ ಭೇಟಿಕೊಟ್ಟು ಇದನ್ನು ಪುನರುಜ್ಜೀವನಗೊಳಿಸುವ ವಿಶ್ವಾಸ ತುಂಬಿಹೋಗಿದ್ದರು. ತಜ್ಞರ ಪ್ರಕಾರ 1000 ಕೋಟಿ ಹೂಡಿದರೆ ವಿಐಎಸ್ಎಲ್ ಮತ್ತೆ ಜೀವಂತಗೊಳ್ಳುತ್ತದೆ. 2000ಕೋಟಿ ಹೂಡಿಕೆ ಇದನ್ನು ರಾಷ್ಟ್ರದಲ್ಲೇ ಅಗ್ರಣಿಯಾಗಿಸುತ್ತದೆ. 15 ವರ್ಷಗಳಿಂದ ಹೂಡಿಕೆಯನ್ನೇ ಮಾಡದೇ ಅತ್ಯಾಧುನಿಕತೆಗೆ ಕಾಖರ್ಾನೆಯನ್ನು ಸಜ್ಜುಗೊಳಿಸದೇ ಈಗ ಕಣ್ಣೀರಿಟ್ಟರೇನಾಗುತ್ತದೆ ಹೇಳಿ? ಕನರ್ಾಟಕದ ಅಷ್ಟೂ ಸಂಸದರು ದನಿಯೆತ್ತಬೇಕಿದೆ. ಮುಖ್ಯಮಂತ್ರಿ, ಪ್ರಧಾನಮಂತ್ರಿಯೊಂದಿಗೆ ಕಿತ್ತಾಟಕ್ಕೆ ನಿಲ್ಲಬೇಕಿದೆ. ಕೊನೆಗೆ ಇಡಿಯ ರಾಜ್ಯ ವಿಐಎಸ್ಎಲ್ನ ಗೌರವವನ್ನು ಉಳಿಸಲು ಹೆಣಗಾಡಬೇಕಿದೆ.

ಬಿಳಿಯಾನೆಯಾಗಿರುವ ಸಾರ್ವಜನಿಕ ಉದ್ದಿಮೆಗಳನ್ನು ಮಾರುವುದು ಸರಿ, ಆದರೆ ಈಗಲೂ ಲಾಭಗಳಿಸಬಲ್ಲ ಸಾಮಥ್ರ್ಯವಿರುವ ಕಾಖರ್ಾನೆಗಳನ್ನು ನಷ್ಟಕ್ಕೆ ಮಾರಿಬಿಡುವುದು ಬುದ್ಧಿವಂತಿಕೆಯ ಲಕ್ಷಣವಲ್ಲ!

Comments are closed.

Leave a Reply