ವಿಭಾಗಗಳು

ಸುದ್ದಿಪತ್ರ


 

ಕಷ್ಟಗಳ ಮಳೆ- ಸಾಧನೆಯ ಹೊಳೆ

ಸ್ಟೀಫನ್ ದಿನಚರಿ 11 ಗಂಟೆಗೆ ಆರಂಭವಾಗುತ್ತದೆ. ಅವತ್ತಿನ ದಿನದ ಭೇಟಿಗಳ ಬಗ್ಗೆ ಸೆಕ್ರೆಟರಿ ವರದಿ ನೀಡಿದ ನಂತರ ವಿಜ್ಞಾನದೊಳಗೆ ಮುಳುಗಿ ಹೋಗುತ್ತಾನೆ. ಭೇಟಿಗೆ ಬಂದವರೊಡನೆ ಕಂಪ್ಯೂಟರಿನ ಮೂಲಕವೇ ಮಾತನಾಡಿಸುತ್ತಾನೆ. ಒಂದು ಗಂಟೆಯಾಯಿತೆಂದರೆ ಮಳೆಯೇ ಬರಲಿ, ಬಿರು ಬಿಸಿಲೇ ಇರಲಿ ತನ್ನ ಕಂಪ್ಯೂಟರೀಕೃತ ಗಾಲಿಕುಚರ್ಿಯನ್ನು ಕೊಠಡಿಯ ಹೊರತಂದು ಮನೆಯತ್ತ ಪಯಣ ಬೆಳೆಸುತ್ತಾನೆ.

ಅದನ್ನು ಏನಂತ ಬೇಕಾದರೂ ಕರೀರಿ. ಅದೊಂದು ಅದ್ಭುತ ಪವಾಡ ಅಷ್ಟೇ! ಮೃತ್ಯುವಿನ ಕುಣಿಕೆಯನ್ನು ಕೊರಳಿಗೆ ಸುತ್ತಿಕೊಂಡೇ, ಗೆಲುವಿನ ಗಂಟೆ ಬಾರಿಸುವುದು ತಮಾಷೆಯ ಮಾತಲ್ಲ. ಸ್ಟೀಫನ್ ಹಾಕಿಂಗ್ ಅದನ್ನು ಮಾಡಿ ತೋರಿಸಿದ್ದ. ಮದುವೆಯಾಗುವ ವೇಳೆಗೆ ಅವನಿಗೆ ಕೆಲಸವಿರಲಿಲ್ಲ. ಈಗಲೋ ಆಗಲೋ ಸಾಯುತ್ತಾನೆಂದುಕೊಂಡವರಿಗೆಲ್ಲ ಅಚ್ಚರಿಯಾಗುವಂತೆ ಮಕ್ಕಳಾದವು. ಮಗುವಿನ ಶಾಲೆಯ ಫೀಸು ತುಂಬುವಷ್ಟೂ ಸಂಬಳವಿರಲಿಲ್ಲ. ಅವನು ಬರೆದ ಒಂದು ಪ್ರಬಂಧ ಅವನ ಕೀತರ್ಿ ಪತಾಕೆಯನ್ನು ಎತ್ತರಕ್ಕೇರಿಸಿತು. ಆಮೇಲೆ ಅವನು ಹಿಂದಿರುಗಿ ನೋಡಿದ್ದೇ ಇಲ್ಲ.

ಈಗ ನೋಡಿ. ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ಮುಂದೆ ನಿಲ್ಲುವವನು ಸ್ಟೀಫನ್! ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅವನಿಗೆಂದೇ ವಿಶೇಷ ಕೊಠಡಿ ಮಾಡಲಾಗಿದೆ. ಅದರೊಳಗೆ ಪುಟ್ಟ ಆಸ್ಪತ್ರೆಯೇ ಇದೆ. ಕೋಣೆಯ ಒಳ ಹೊರಗೆ ಗಿಜಿಗುಡುವ ಸದ್ದು. ಅಲ್ಲಿ ವಿದ್ಯಾಥರ್ಿಗಳಿರುತ್ತಾರೆ ಇಲ್ಲವೇ ನಸರ್ುಗಳಿರುತ್ತಾರೆ, ಸ್ಟೀಫನ್ನ ಸೇವೆಗೆ ಸದಾ ಸಿದ್ಧರಾಗಿ!

ಸ್ಟೀಫನ್ ದಿನಚರಿ 11 ಗಂಟೆಗೆ ಆರಂಭವಾಗುತ್ತದೆ. ಅವತ್ತಿನ ದಿನದ ಭೇಟಿಗಳ ಬಗ್ಗೆ ಸೆಕ್ರೆಟರಿ ವರದಿ ನೀಡಿದ ನಂತರ ವಿಜ್ಞಾನದೊಳಗೆ ಮುಳುಗಿ ಹೋಗುತ್ತಾನೆ. ಭೇಟಿಗೆ ಬಂದವರೊಡನೆ ಕಂಪ್ಯೂಟರಿನ ಮೂಲಕವೇ ಮಾತನಾಡಿಸುತ್ತಾನೆ. ಒಂದು ಗಂಟೆಯಾಯಿತೆಂದರೆ ಮಳೆಯೇ ಬರಲಿ, ಬಿರು ಬಿಸಿಲೇ ಇರಲಿ ತನ್ನ ಕಂಪ್ಯೂಟರೀಕೃತ ಗಾಲಿಕುಚರ್ಿಯನ್ನು ಕೊಠಡಿಯ ಹೊರತಂದು ಮನೆಯತ್ತ ಪಯಣ ಬೆಳೆಸುತ್ತಾನೆ.

ಸ್ಟೀಫನ್ ಕುಚರ್ಿಗೆ ಮೋಟಾರು ಕೂರಿಸಿದ್ದಾರೆ. ಸ್ವಿಚ್ ಆನ್ ಮಾಡಿದರೆ ಸಾಕು ಗಾಲಿ ಕುಚರ್ಿ ತಂತಾನೆ ಚಲಿಸುತ್ತದೆ. ಸ್ಟೀಫನ್ ಆ ಕುಚರ್ಿಯನ್ನು ಅದೆಷ್ಟು ವೇಗವಾಗಿ ಓಡಿಸುತ್ತಾರೆಂದರೆ ದೂರದಿಂದ ನೋಡಿದವರಿಗೆ ರಸ್ತೆ ಅಪಘಾತದಲ್ಲಿಯೇ ಸತ್ತು ಬಿಡುತ್ತಾನೇನೋ ಎಂದು ಅಚ್ಚರಿಯಾಗುವಷ್ಟು! ಊಟ ಮುಗಿಸಿ ಬಂದ ಸ್ಟೀಫನ್ ಕೋಣೆಯೊಳಗೆ ಹೊಕ್ಕಾಕ್ಷಣ ಬಾಗಿಲ ಮೇಲೆ ‘ತೊಂದರೆ ಕೊಡಬೇಡಿ, ಯಜಮಾನ್ರು ಮಲಗಿದ್ದಾರೆ’ ಎಂಬ ಬೋಡರ್ು ನೇತಾಡತೊಡಗುತ್ತದೆ. ಸ್ಟೀಫನ್ ನಿದ್ದೆ ಮಾಡುತ್ತಿರುವುದಿಲ್ಲ. ವಿಶ್ವದ ಕಲ್ಪನೆಯಲ್ಲಿ ಮುಳುಗಿರುತ್ತಾನೆ. ಹೀಗಾಗಿಯೇ ಅಲ್ಲಿನ ಕಂಪನಿಯೊಂದು, ಕೋಣೆಯ ಒಳಭಾಗವನ್ನು ಆಕಾಶದ ರೂಪದಲ್ಲಿ ಸಿಂಗರಿಸಿದೆ. ಸಂಜೆ ಟೀ ಟೈಮಿಗೆ ಹರಟೆ ಕೊಚ್ಚಿ ರಾತ್ರಿಯವರೆಗೂ ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ಮಾಡುವ ವೇಳೆಗೆ ನಿದ್ದೆ ಬಂದುಬಿಟ್ಟಿರುತ್ತದೆ. ಮಲಗುವುದಕ್ಕೆ ಸ್ಟೀಫನ್ ಈಗ ಸಿದ್ಧ!

ಸ್ಟೀಫನ್ ಗೆ ಜಾಗತಿಕವಾಗಿ ಅತಿಪ್ರಾಮುಖ್ಯತೆ ಲಭಿಸಿದ್ದು ಇತ್ತೀಚೆಗಷ್ಟೇ. 80ರ ದಶಕದಲ್ಲಿ ಅಮೆರಿಕದ ಪ್ರಸಿದ್ಧ ಪತ್ರಿಕೆ ನ್ಯೂಸ್ ವೀಕ್ ಅವನ ಬಗ್ಗೆ ಮುಖಪುಟದಲ್ಲಿ ಚಿತ್ರ ಹಾಕಿ ಅಚ್ಚರಿಯ ಬರಹ ಬರೆಯಿತು. ಸ್ವತಃ ಇಂಗ್ಲೆಂಡಿನ ರಾಣಿ ‘ಕಂಪ್ಯಾನಿಯನ್ ಆಫ್ ಹಾನರ್ಸ್’ ಬಿರುದನ್ನು ಅವನಿಗೆ ನೀಡಿದಳು. ಸ್ಟೀಫನ್ನ ಪುಸ್ತಕ ಮಾರಾಟವಾದ ದಾಖಲೆಗಳನ್ನು ಪೇರಿಸಿಡುವುದೂ ಕಷ್ಟವಾಯಿತು. ಮಗಳ ಶಾಲೆಯ ಫೀಸು ಕಟ್ಟುವುದಕ್ಕೂ ಬಡಿದಾಡುತ್ತಿದ್ದವ ಈಗ ಪ್ರತಿಷ್ಠಿತ ಶಾಲೆಗೆ ಸೇರಿಸುವಷ್ಟು ಶ್ರೀಮಂತನಾಗಿದ್ದ. ಆಗಲೇ ಟಿ.ವಿಯ ಸಂದರ್ಶನವೊಂದರಲ್ಲಿ ಜೇನ್ ಹೇಳಿದ್ದು, ‘ಆರಂಭದಲ್ಲಿ ಸ್ಟೀಫನ್ ನಿರಾಶಾವಾದಿಯಾಗಿದ್ದ. ನನ್ನ ಆಶಾವಾದದ ಕಿಡಿಯನ್ನು ಅವನಿಗೆ ಹೊತ್ತಿಸಿಕೊಟ್ಟಿದ್ದೆ. ಈಗ ಅವನು ಅದೆಷ್ಟು ಆಶಾವಾದಿಯಾಗಿದ್ದನೆಂದರೆ ಎದುರಿಗೆ ಬಂದ ವಿಪತ್ತುಗಳನ್ನೆಲ್ಲ ಬಡಿದು ಗೆಲುವು ಪಡೆಯುತ್ತಿದ್ದಾನೆ. ಅವನ ಸ್ಪೀಡಿಗೆ ಹೊಂದಿಕೊಳ್ಳುವುದು ನನಗೇ ಕಷ್ಟವಾಗುತ್ತಿದೆ’.

ಅದು ಅಕ್ಷರಶಃ ಸತ್ಯವಾಗಿತ್ತು. ಸ್ಟೀಫನ್ ಈಗ ಜಗತ್ತಿಗೆ ಆದರ್ಶ ಪುರುಷನಾಗುವ ಎತ್ತರಕ್ಕೆ ಸಾಗುತ್ತಿದ್ದ. ಅಂಗವಿಕಲರಿಗಂತೂ ಅವನು ಆರಾಧ್ಯದೈವ. ಸಾವನ್ನೇ ಹೊಸ್ತಿಲ ಹೊರಗೆ ನಿಲ್ಲಿಸಿ ಸಾಧನೆಗಳ ಇತಿಹಾಸ ಬರೆದವ, ಯಾರಿಗೆ ಹೆಮ್ಮೆ ತರುವುದಿಲ್ಲ ಹೇಳಿ.

stephen-hawking-wife-600x468

ಸರಿಸುಮಾರು ಇದೇ ವೇಳೆಗೆ ಸ್ಟೀಫನ್-ಜೇನ್ ವಿಚ್ಛೇದನ ಪಡೆದು ಬೇರೆಯಾಗಿಬಿಟ್ಟರು. ತನ್ನ ನಸರ್ಾಗಿದ್ದ ಎಲೈನ್ ಮ್ಯಾಸನ್ಳನ್ನು ಸ್ಟೀಫನ್ ಮದುವೆಯಾದ. ಮಜಾ ಏನು ಗೊತ್ತೇ? ಸ್ಟೀಫನ್ಗೆ ಅತ್ಯಾಧುನಿಕ ಕಂಪ್ಯೂಟರೀಕೃತ ಗಾಲಿ ಕುಚರ್ಿ ಮಾಡಿಕೊಟ್ಟಿದ್ದನಲ್ಲ ಡೇವಿಡ್ ಮ್ಯಾಸನ್ ಅವನ ಹೆಂಡತಿಯೇ ಈ ಎಲೈನ್. ಮ್ಯಾಸನ್ ದಂಪತಿಗಳಿಗೂ ಈ ಹಿಂದೆಯೇ ಇಬ್ಬರು ಮಕ್ಕಳಿದ್ದರು. ಸ್ಟೀಫನ್-ಜೇನ್ ಬೇರೆಯಾಗಿದ್ದಕ್ಕೆ ಕಾರಣಗಳನ್ನು ಹುಡುಕುತ್ತ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ಆದರೂ ಅಬ್ಬೇಪಾರಿಯಾಗಿ ಅಲೆಯುತ್ತಿದ್ದವನನ್ನು ಮದುವೆಯಾಗಿ ಸತ್ತೇ ಹೋಗಬೇಕಿದ್ದವನನ್ನು ಮದುವೆಯಾಗಿ ಯಮನಿಂದ ಸತ್ಯವಾನನನ್ನು ಮರಳಿ ಪಡೆದ ಸಾವಿತ್ರಿಯಂತೆ ಉಳಿಸಿಕೊಂಡು, ಆತ್ಮವಿಶ್ವಾಸ ತುಂಬಿ ಶ್ರೇಷ್ಠ ವಿಜ್ಞಾನಿಯಾಗಿಸಿದಳಲ್ಲ ಆ ಜೇನ್ ಅವಳನ್ನು ಸ್ಟೀಫನ್ ಮರೆಯಬಾರದಿತ್ತು ಎನಿಸುತ್ತೆ. ಹಾಗಂತ ಆಕೆಯೇನೂ ಅದೇ ಕೊರಗಿನಲ್ಲಿದ್ದಳೆಂದಲ್ಲ. ಆಕೆಯೂ ಮತ್ತೊಂದು ಮದುವೆ ಮಾಡಿಕೊಂಡಳು. ಸ್ಟೀಫನ್ನೊಂದಿಗಿದ್ದ ವೈರುಧ್ಯಗಳನ್ನು ಬರೆದು ಪ್ರಕಟಿಸಿದಳು. ಅದೇ ಬಿಸಿ ದೋಸೆಯಂತೆ ಖಚರ್ಾಯಿತು.

ಇತ್ತ ಸ್ಟೀಫನ್-ಎಲೈನ್ ಹೊಸ ಬಂಗಲೆ ಕಟ್ಟಿಸಿ ಆರಾಮವಾಗಿ ಇರತೊಡಗಿದರು. ಇತ್ತೀಚೆಗೆ ಪತ್ರಿಕೆಗಳಲ್ಲಿ ಬಂದ ವರದಿಯಂತೆ ಅವರ ದಾಂಪತ್ಯವೂ ಮುರಿದು ಬೀಳುವ ಹಂತಕ್ಕೆ ಬಂದಿದೆ. ಆರಂಭದಲ್ಲಿ ಎಲೈನ್, ಸ್ಟೀಫನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಬರು ಬರುತ್ತಾ ಆಕೆಗೆ ಅಸಡ್ಡೆಯಾಯ್ತು. ಎಷ್ಟೋ ಬಾರಿ ಗಾಲಿ ಕುಚರ್ಿಯಿಂದ ಅವನನ್ನು ತಳ್ಳಿಬಿಡುತ್ತಿದ್ದಳಂತೆ.

ಬಿಡಿ. ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ನಮಗೆ ಆತನ ಧೈರ್ಯ-ಸಾಹಸಗಳು ಸ್ಫೂತರ್ಿ ತುಂಬಲಿ. ಆತ ಕಟ್ಟಿದ ವಿಜ್ಞಾನಸೌಧದ ಹಿಂದೆ ಆತ ಅನುಭವಿಸಿದ ನೋವು-ತೊಂದರೆಗಳು ನಮಗೂ ಶಕ್ತಿ ನೀಡಲಿ.

ನೀರು ನದಿಯಲ್ಲಿ ಹರಿಯುತ್ತಿದೆ ಅಂದ್ರೆ ಅದು ಕಲ್ಲುಗಳಿರೋದ್ರಿಂದ. ನದಿಯಲ್ಲಿ ಕಲ್ಲುಗಳಿರದೇ ಹೋಗಿದ್ರೆ ಅದು ನಿಂತು ಬಿಡುತ್ತಿತ್ತು. ಕೊಳಕಾಗಿ ನಾರುತ್ತಿತ್ತು. ಹಾಗಯೇ ಕಷ್ಟಗಳ ಕಲ್ಲುಗಳ ಮೇಲೆ ಸಾಧನೆಯ ನೀರು ಹರಿಯೋದು! ನೆನಪಿರಲಿ.

Comments are closed.