ವಿಭಾಗಗಳು

ಸುದ್ದಿಪತ್ರ


 

ಕಾಂಗ್ರೆಸ್ಸಿನ ಅವನತಿಯ ಮೂಲ ಎಲ್ಲಿದೆ?!

ಆದರೆ ಕಾಂಗ್ರೆಸ್ಸಿನ ಈ ಪರಿವಾರವಲಯ ಎಷ್ಟು ಬಲವಾಗಿದೆ ಎಂದರೆ ಅದರೊಳಗೆ ಅಧಿಕಾರ ನಡೆಸುವುದು ಹೇಗೆಂದು ಹೇಳಿಕೊಡುವ ಚತುರಮತಿಗಳಿದ್ದಾರೆ, ಸಕರ್ಾರದ ಒಳಗುಟ್ಟುಗಳನ್ನು ಬಿಟ್ಟುಕೊಡುವ ಅಧಿಕಾರಿವಲಯದವರಿದ್ದಾರೆ, ಈ ಪರಿವಾರವನ್ನು ಶತಾಯ-ಗತಾಯ ಶ್ರೇಷ್ಠವೆಂದು ಬಿಂಬಿಸುವ ಪತ್ರಕರ್ತರಿದ್ದಾರೆ, ಕೊನೆಗೆ ಇವರು ಏನು ಮಾತನಾಡಿದರೂ ಸತ್ಯವೆಂದು ನಂಬಿಸಿಬಿಡಬಲ್ಲ ಪ್ರೊಫೆಸರುಗಳು, ಬುದ್ಧಿಜೀವಿಗಳು ಗಲ್ಲಿಗೊಬ್ಬರಂತೆ ಕಾಯುತ್ತಾ ನಿಂತಿದ್ದಾರೆ.

ರಾಹುಲ್ ಇತ್ತೀಚೆಗೆ ಒಂದು ಹೇಳಿಕೆ ಕೊಟ್ಟಿದ್ದಾರೆ. ನರೇಂದ್ರಮೋದಿ ಮತ್ತವರ ತಂಡವನ್ನೆದುರಿಸಲು ಕಾಂಗ್ರೆಸ್ಸಿಗೆ ಸಿಕ್ಕಿರುವ 52 ಸಂಸದರು ಬೆಟ್ಟದಷ್ಟಾಯ್ತು ಅಂತ. 44 ರಿಂದ 52ಕ್ಕೇರಿದ್ದೇ ರಾಹುಲ್ ಪಾಲಿಗೆ ಹೆಮ್ಮೆ ಎನಿಸುತ್ತದೆ. ಸ್ವಾತಂತ್ರ್ಯ ಬಂದಾಗಿನಿಂದ ಮತ್ತೆ-ಮತ್ತೆ ಈ ಪರಿಯ ಹೊಡೆತವನ್ನು ಅನುಭವಿಸಿರುವ ಕಾಂಗ್ರೆಸ್ಸಿಗೆ ಈ ಬಾರಿಯ ಈ ಸೋಲನ್ನು ಜೀಣರ್ಿಸಿಕೊಳ್ಳುವುದು ಸುಲಭವಲ್ಲ. ಏಕೆಂದರೆ ವಿರೋಧ ಪಕ್ಷಗಳೆಲ್ಲ ಒಟ್ಟಾಗಿ ಹೋರಾಡಿದ ನಂತರವೂ ಆಡಳಿತ ಪಕ್ಷವನ್ನು ಮಣಿಸುವುದು ಸಾಧ್ಯವಾಗಲಿಲ್ಲವೆಂದಮೇಲೆ ಮುಂದಿನ ಐದು ವರ್ಷಗಳಲ್ಲಿ ಮತ್ತೆ-ಮತ್ತೆ ಕಿತ್ತಾಡಿಕೊಳ್ಳುವ ವಿಚ್ಛಿದ್ರ ಪ್ರತಿಪಕ್ಷಗಳು ಪ್ರಬಲ ಆಡಳಿತ ಪಕ್ಷವನ್ನು ಮಣಿಸಿ ಮನೆಗಟ್ಟುವ ಕಲ್ಪನೆ ಕಟ್ಟಿಕೊಳ್ಳುವುದು ಅಪಹಾಸ್ಯವೇ ಸರಿ. ಹಾಗಂತ ಭಾಜಪವೂ ಬೀಗುವಂತಿಲ್ಲ. ಅದರ ಎಲ್ಲ ಸಾಧನೆಯೂ ನರೇಂದ್ರಮೋದಿಯವರ ನಾಮಬಲದ ಮೇಲೆ ನಿಂತಿರುವುದೇ ಹೊರತು ಸ್ವಂತ ಬಲ ನಿಜಕ್ಕೂ ಏನೂ ಇಲ್ಲ. ಕನರ್ಾಟಕದಲ್ಲಿ 25 ಸಂಸತ್ ಸದಸ್ಯರನ್ನು ದೆಹಲಿಗೆ ಕಳುಹಿಸಿದ ಬಿಜೆಪಿ ಅದೇ ಗುಂಗಿನಲ್ಲಿ ಚುನಾವಣೆಗೆ ಹೋದ ನಂತರವೂ ಸ್ಥಳೀಯ ಸಂಸ್ಥೆಗಳಲ್ಲಿ ಗೆಲ್ಲಲು ಸಾಧ್ಯವಾಗಿದ್ದು ಕಾಂಗ್ರೆಸ್ಸಿನ ಅರ್ಧದಷ್ಟು ಮಾತ್ರ! ಅಂದರೆ ಜನ ದೇಶಕ್ಕೆ ಮೋದಿಯವರ ನಾಯಕತ್ವವನ್ನು ಬಯಸಿದರೂ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷವನ್ನು ಧಿಕ್ಕರಿಸಿದ್ದಾರೆ. ಇದು ಎರಡೂ ಪಾಳಯದವರಿಗೂ ಆತ್ಮಾವಲೋಕನಕ್ಕೆ ಸಕಾಲ.

5

ಕಾಂಗ್ರೆಸ್ಸಿನ ಸೋಲಿನ ಹಿಂದೆ ಗುಲಾಮಿ ಮಾನಸಿಕತೆಯೇ ದೊಡ್ಡ ಪಾತ್ರವನ್ನು ವಹಿಸಿದೆ. ಈ ಹೊಸ ಪೀಳಿಗೆ ಎಮಜರ್ೆನ್ಸಿಯ ನಂತರದ ಪೀಳಿಗೆ. ಅಂದಿನ ಆಕ್ರೋಶದ, ಹತಾಶೆಯ, ನೋವಿನ, ಗುಲಾಮಿತನದ ವಿರುದ್ಧದ ಮನೋಭಾವನೆಯ ಒಟ್ಟು ಮೊತ್ತವಾಗಿ ನಿಂತಿರುವ ಹೊಸಕುಡಿಗಳು ಇವರೆಲ್ಲ. ಪರಿವಾರವಾದ, ಭ್ರಷ್ಟಾಚಾರ ಇವೆಲ್ಲವನ್ನು ಮೆಟ್ಟಿನಿಂತು ವಿಕಾಸವಾದದ ಆಧಾರದ ಮೇಲೆ ಹೊಸ ರಾಷ್ಟ್ರ ಬೇಕೆನ್ನುವ ಪೀಳಿಗೆ ಇದು. ಎರಡು ಪೀಳಿಗೆಯ ಹಿಂದಿನ ಜನ ಹೀಗಿರಲಿಲ್ಲ. ಅವರಿಗೆ ಸ್ವಾತಂತ್ರ್ಯ ತಂದುಕೊಟ್ಟದ್ದಕ್ಕಾಗಿ ನೆಹರೂ ಮತ್ತವರ ಪರಿವಾರದವರ ಮೇಲೆ ಅಪಾರವಾದ ಗೌರವ ಇತ್ತಲ್ಲದೇ ಕೃತಜ್ಞತಾ ಭಾವವೂ ಮೈಯೆಲ್ಲಾ ತುಂಬಿಕೊಂಡಿತ್ತು. ಇಂದಿಗೂ ಮನೆಯಲ್ಲಿರುವ ವೃದ್ಧರು ಕಣ್ಣೆದುರಿಗಿರುವ ನೂರು ಚಿಹ್ನೆಗಳ ನಡುವೆಯೂ ಹಸ್ತವನ್ನು ಸ್ಪಷ್ಟವಾಗಿ ಗುರುತಿಸಬಲ್ಲರು. ಅವರಿಗೆ ಹಸ್ತಕ್ಕೆ ಮತ ಹಾಕುವುದೆಂದರೆ ತಮ್ಮ ಜೀವಿತಾವಧಿಯ ಉದ್ದೇಶ ಪೂರೈಸಿದಂತೆ. ಈ ಮಾನಸಿಕತೆಯನ್ನು ಮನಸ್ಸಿನಲ್ಲಿಟ್ಟುಕೊಂಡೇ ಕಾಂಗ್ರೆಸ್ಸನ್ನು ಹಂತ-ಹಂತವಾಗಿ ಆ ಪರಿವಾರದ ತೆಕ್ಕೆಯಲ್ಲಿಯೇ ಇಡುವ ಪ್ರಯತ್ನ ಮಾಡಲಾಯ್ತು. ನೆಹರೂ ನಂತರ ಲಾಲ್ಬಹದ್ದೂರ್ ಶಾಸ್ತ್ರಿ ಭರವಸೆ ಮೂಡಿಸಿದ್ದರಾದರೂ ಪೂರ್ಣಕಾಲಿಕವಾಗಿ ಅವರೇ ಪ್ರಧಾನಮಂತ್ರಿಯಾಗಿಬಿಟ್ಟಿದ್ದರೆ ಕಾಂಗ್ರೆಸ್ಸು ಪರಿವಾರದ ತೆಕ್ಕೆಯಿಂದ ಆಚೆ ಬಂದು ಹೊಸಗಾಳಿಯನ್ನು ಉಸಿರಾಡಿರುತ್ತಿತ್ತು. ಆದರೆ ಕಾಂಗ್ರೆಸ್ಸಿನ ಒಳಗಿರುವ ಲಾಬಿ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಒಬ್ಬ ಸಾಮಾನ್ಯ, ಬಡ ವ್ಯಕ್ತಿ ದೇಶವನ್ನು ಸಮರ್ಥವಾಗಿ ಆಳುವುದು ಸಾಧ್ಯವೇ ಇಲ್ಲವೆಂದು ಬಿಂಬಿಸಲು ನೆಹರೂ ಆಪ್ತಪಡೆ ಹಾತೊರೆಯುತ್ತಿತ್ತು. ಆದರೆ, ಶಾಸ್ತ್ರಿಜೀ ಅದಕ್ಕೆದುರಾಗಿ ಸಮರ್ಥವಾದ ಆಡಳಿತವನ್ನು ನೀಡಿ ದೇಶದ ಜನರ ವಿಶ್ವಾಸ ಗಳಿಸಿಬಿಟ್ಟಿದ್ದರು. ಕಾಂಗ್ರೆಸ್ಸು ಹೊಸ ದಿಕ್ಕಿನತ್ತ ಸಾಗುವ ಭರವಸೆ ಮೂಡಿಸಿತ್ತು. ದುರದೃಷ್ಟವಶಾತ್ ಲಾಲ್ಬಹದ್ದೂರ್ ಶಾಸ್ತ್ರಿಯವರು ತೀರಿಕೊಂಡರು. ಕೊಲೆಯಾಯ್ತು ಎಂಬುದಕ್ಕೂ ಸಾಕಷ್ಟು ಸಾಕ್ಷಿಗಳು ಇಂದು ಲಭ್ಯವಿವೆ. ನೆಹರೂ ಆಪ್ತವಲಯಕ್ಕೆ ಕಾಂಗ್ರೆಸ್ಸಿನ ಹಿಡಿತ ಪರಿವಾರದ ಕೈಲೇ ಇಡಬೇಕೆಂಬ ತುಡಿತವಿತ್ತು. ಇಂದಿರಾ ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿದರು. ಕಾಂಗ್ರೆಸ್ಸಿನೊಳಗೆ ಪ್ರತಿರೋಧದ ಕೂಗು ಮುಂದಿನ ದಿನಗಳಲ್ಲಿ ಎದ್ದಾಗಲೂ ಮೂಲ ಕಾಂಗ್ರೆಸ್ಸನ್ನೇ ಬಿಟ್ಟು ಇಂದಿರಾ ಕಾಂಗ್ರೆಸ್ಸನ್ನು ಸ್ಥಾಪಿಸಿಕೊಂಡು ಅದನ್ನೇ ಮೂಲಕಾಂಗ್ರೆಸ್ಸಾಗಿ ಪರಿವತರ್ಿಸಿಕೊಳ್ಳುವ ಸಾಮಥ್ರ್ಯ ಆಕೆಗಿತ್ತು. ತೀರಾ ಎಮಜರ್ೆನ್ಸಿಯಂತಹ ಭಯಾನಕ ಶಿಕ್ಷೆಯನ್ನು ಹೇರಿದಾಗಲೂ ಭಾರತೀಯರು ಆಕೆಯನ್ನು ಧಿಕ್ಕರಿಸಲಿಲ್ಲ. ನೆಹರೂ ಪರಿವಾರ ಈ ದೇಶಕ್ಕಾಗಿ ಮಾಡಿದ ತ್ಯಾಗ ಅಪಾರವೆನ್ನುವ ಭಾವನೆ ಭಾರತೀಯರೊಳಗೆ ತುಂಬಿಹೋಗಿತ್ತು. ಪ್ರತಿಪಕ್ಷಗಳು ಹಾಗೆಯೇ ಇದ್ದವು ಬಿಡಿ. ಎಮಜರ್ೆನ್ಸಿಯ ಬಳಿಕ ಜನತೆ ಅಧಿಕಾರವನ್ನು ಕೊಟ್ಟಾಗಲೂ ಗೌರವಯುತವಾದ ಸ್ವಚ್ಛ ಆಡಳಿತ ನೀಡಲಾಗದೇ ಬಡಿದಾಡಿಕೊಂಡು ಇಂದಿರಾರ ಎದುರಿಗೆ ಕೈಚಾಚಿಕೊಂಡು ನಿಲ್ಲುವಂತಹ ಪರಿಸ್ಥಿತಿ ಬಂದೊದಗಿಬಿಟ್ಟಿತ್ತು. ಆಳುವ ಕಲೆ, ಸಾಮಥ್ರ್ಯ, ಧಾಡಸಿತನ ಇವೆಲ್ಲವೂ ನೆಹರೂ ಪರಿವಾರದ ಆಸ್ತಿ ಎಂದು ಜನ ನಂಬಿಕೊಳ್ಳಲು ಇಷ್ಟು ಸಾಕಾಗಿತ್ತು. ಮುಂದೆ ಇಂದಿರಾ ಅಧಿಕಾರವನ್ನು ಸಮರ್ಥವಾಗಿ ಹಸ್ತಾಂತರಿಸುವ ಮುನ್ನವೇ ತೀರಿಕೊಂಡಾಗ ಹೊಸ ಹಾದಿಯನ್ನು ತುಳಿಯುವ ಎಲ್ಲ ಮಾರ್ಗವೂ ಕಾಂಗ್ರೆಸ್ಸಿನೆದುರಿಗೆ ನಿಚ್ಚಳವಾಗಿತ್ತು. ಅನೇಕ ನಾಯಕರು ಕಾಂಗ್ರೆಸಿನಲ್ಲಿ ಪ್ರಧಾನಿಯಾಗುವ ಅರ್ಹತೆಯುಳ್ಳವರೂ ಇದ್ದರು. ಆದರೆ ಪರಿವಾರದ ಆಪ್ತವಲಯ ಯಾವುದಕ್ಕೂ ಅವಕಾಶ ಮಾಡಿಕೊಡಲಿಲ್ಲ. ಹಾಗೆ ನೋಡಿದರೆ ಇಂದಿರಾ ಸಾವಿನ ನಂತರದ ಅನುಕಂಪದ ಅಲೆಯನ್ನು ಬಳಸಿಕೊಂಡು ಕಾಂಗ್ರೆಸ್ಸು ಹೊಸ ಸಮರ್ಥನಾಯಕನನ್ನು ಹುಟ್ಟುಹಾಕಿಬಿಡಬಹುದಿತ್ತು. ಹಾಗೆ ಮಾಡಲಿಲ್ಲ. ರಾಜಕೀಯದಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದ ಇಂದಿರೆಯ ಮಗ ಸಂಜಯ ತೀರಿಕೊಂಡಿದ್ದರು. ಹೀಗಾಗಿ ರಾಜಕೀಯದಲ್ಲಿ ಆಸಕ್ತಿಯೇ ಇರದಿದ್ದ ಪೈಲೆಟ್ ಆಗುವ ಕನಸನ್ನು ಸಾಕಾರಗೊಳಿಸಿಕೊಂಡಿದ್ದ ರಾಜೀವ್ ಅನ್ನು ಪರಿವಾರವಲಯ ಚುನಾವಣಾ ಕಣಕ್ಕೆ ಎಳೆದು ತಂದಿತ್ತು. ಸೋನಿಯಾ ಬಗ್ಗೆ ಯಾರು ಏನೇ ಹೇಳಲಿ, ಆದರೆ ಆ ಹೊತ್ತಿನಲ್ಲಿ ರಾಜಕೀಯದ ಇಚ್ಛೆ ಆಕೆಗೆ ಲವಲೇಶವೂ ಇರಲಿಲ್ಲವೆನ್ನುವುದು ಹಗಲಿನಷ್ಟೇ ಸತ್ಯ. ರಾಜೀವ್ನನ್ನು ಭಾರತ ಬಿಡಿಸಿ ಈ ರಾಜಕೀಯದ ಜಂಜಡಗಳಿಂದ ಮುಕ್ತಗೊಳಿಸಿ ವಿದೇಶಕ್ಕೊಯ್ದುಬಿಡಬೇಕೆನ್ನುವ ತವಕ ಆಕೆಗೆ ಖಂಡಿತ ಇತ್ತು. ತಾಯಿಯ ಸಾವಿನ ನಂತರ ಅನಿವಾರ್ಯವಾಗಿ ಹೆಗಲೇರಿದ ಈ ಕದನಕ್ಕೆ ರಾಜೀವ್ ಸೈನಿಕನಾಗಲೇಬೇಕಾಗಿ ಬಂತು. ಇಂದಿರೆಯ ಸಾವಿನ ಅನುಕಂಪ ರಾಜೀವ್ರನ್ನು ಪ್ರಧಾನಿಗಾದಿಯಲ್ಲಿ ಕೂರಿಸಿಯೇಬಿಟ್ಟಿತ್ತು. ಪ್ರಜಾಪ್ರಭುತ್ವದ ಹಾದಿಗೆ ಮರಳುವ ಅವಕಾಶವನ್ನು ಕಾಂಗ್ರೆಸ್ಸು ಮತ್ತೊಮ್ಮೆ ಕಳೆದುಕೊಂಡಿತ್ತು!

ರಾಜೀವ್ ರಾಜಕೀಯದ ಪಡಸಾಲೆಗೆ ನಿಜಕ್ಕೂ ಹೊಸಬರಾಗಿದ್ದರು. ಆದರೆ ಕಾಂಗ್ರೆಸ್ಸಿನ ಈ ಪರಿವಾರವಲಯ ಎಷ್ಟು ಬಲವಾಗಿದೆ ಎಂದರೆ ಅದರೊಳಗೆ ಅಧಿಕಾರ ನಡೆಸುವುದು ಹೇಗೆಂದು ಹೇಳಿಕೊಡುವ ಚತುರಮತಿಗಳಿದ್ದಾರೆ, ಸಕರ್ಾರದ ಒಳಗುಟ್ಟುಗಳನ್ನು ಬಿಟ್ಟುಕೊಡುವ ಅಧಿಕಾರಿವಲಯದವರಿದ್ದಾರೆ, ಈ ಪರಿವಾರವನ್ನು ಶತಾಯ-ಗತಾಯ ಶ್ರೇಷ್ಠವೆಂದು ಬಿಂಬಿಸುವ ಪತ್ರಕರ್ತರಿದ್ದಾರೆ, ಕೊನೆಗೆ ಇವರು ಏನು ಮಾತನಾಡಿದರೂ ಸತ್ಯವೆಂದು ನಂಬಿಸಿಬಿಡಬಲ್ಲ ಪ್ರೊಫೆಸರುಗಳು, ಬುದ್ಧಿಜೀವಿಗಳು ಗಲ್ಲಿಗೊಬ್ಬರಂತೆ ಕಾಯುತ್ತಾ ನಿಂತಿದ್ದಾರೆ. ಹೀಗಾಗಿಯೇ ರಾಜೀವ್ ಆಡಳಿತ ಕಷ್ಟವೆನಿಸಲಿಲ್ಲ. ರಾಜೀವ್ ಅಧಿಕಾರವನ್ನು ಅಥರ್ೈಸಿಕೊಂಡು ಅದನ್ನು ಸಮರ್ಥವಾಗಿ ಕೈಗೆತ್ತಿಕೊಳ್ಳುವ ವೇಳೆಗೆ ಅವರೇ ಉಳಿಯಲಿಲ್ಲ.

6

ಎಲ್ಟಿಟಿಇ ದಾಳಿಗೆ ರಾಜೀವ್ ಛಿದ್ರ-ಛಿದ್ರವಾಗಿ ಹೋದಾಗಲೂ ಸೋನಿಯಾಗೆ ಭಾರತವನ್ನು ಆಳಬೇಕೆಂಬ ಹಂಬಲವಿದ್ದದ್ದು ಅನುಮಾನವೇ. ರಾಜೀವ್ ಮೇಲಿನ ಆಕೆಯ ಪ್ರೀತಿಯನ್ನು ಅನುಮಾನಿಸುವುದು ಖಂಡಿತ ಅಸಾಧ್ಯ. ಖುದ್ದು ಕೆ.ಎನ್ ಗೋವಿಂದಾಚಾರ್ಯರು ಆಪ್ತವಾಗಿ ಮಾತನಾಡುತ್ತಿದ್ದಾಗ ಒಮ್ಮೆ ಹೇಳಿದರು, ‘ರಾಜೀವ್ರ ಕುರಿತಂತಹ ಚಚರ್ೆ ಸೋನಿಯಾ ಅವರೊಂದಿಗೆ ಮಾಡಿದಾಗ ಆಕೆಯ ಕಣ್ಣಲ್ಲಿ ನೀರು ಜಿನುಗುತ್ತಿತ್ತು’ ಅಂತ. ಪಕ್ಷ ಪರಿವಾರದಿಂದ ಇತರರ ತೆಕ್ಕೆಗೆ ಹೋಗುವ ಸಮಯವದು. ಕಾಂಗ್ರೆಸ್ಸಿನ ಭಾಗ್ಯ ಬದಲಾಗುವ ಹೊತ್ತೂ ಆಗಿತ್ತು. ರಾಜೀವ್ ಸಾವಿನ ಅನುಕಂಪದ ಅಲೆ ಕಾಂಗ್ರೆಸ್ಸನ್ನು ಚುನಾವಣೆಗಳಲ್ಲಿ ಬಲವಾಗಿಯೇ ಮೇಲೆತ್ತಿತ್ತು. ರಾಜಕೀಯ ಪಂಡಿತರ ಲೆಕ್ಕಾಚಾರದಂತೆ ರಾಜೀವ್ ಸಾಯದೇ ಹೋಗಿದ್ದಿದ್ದರೆ 91ರ ಚುನಾವಣೆಯಲ್ಲಿ ಕಾಂಗ್ರೆಸ್ಸು 89ರಲ್ಲಿ ಗಳಿಸಿದ್ದಕ್ಕಿಂತ ಕಡಿಮೆ ಸ್ಥಾನವನ್ನು ಗಳಿಸಿರುತ್ತಿತ್ತು. ಬಿಜೆಪಿ ಮೇಲ್ಮುಖವಾದ ಪಯಣಕ್ಕೆ ಸಿದ್ಧತೆ ನಡೆಸಿತ್ತು. 85ರಿಂದ ತನ್ನ ಸಂಸದರ ಸಂಖ್ಯೆಯನ್ನು ಬಿಜೆಪಿ 120ಕ್ಕೆ ಏರಿಸಿಕೊಂಡರೂ ಕಾಂಗ್ರೆಸ್ಸಿನ ಗೆಲುವನ್ನು ಮಾತ್ರ ತಡೆಯಲು ಸಾಧ್ಯವಾಗಲೇ ಇಲ್ಲ. ಈ ವೇಳೆಗೆ ಕಾಂಗ್ರೆಸ್ಸಿನ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದು ಪಿ.ವಿ ನರಸಿಂಹರಾಯರು. ಕಾಂಗ್ರೆಸ್ಸಿನ ಅಧ್ಯಕ್ಷತೆಯನ್ನು ಅವರು ಸ್ವೀಕರಿಸಿದ ನಂತರ ಮುಂದಿನ ಪ್ರಧಾನಿ ಅವರೇ ಆಗುತ್ತಾರೆಂಬ ಅಭಿಮಾನ ಆಂಧ್ರದ ಜನತೆಗೆ ಅದೆಷ್ಟಿತ್ತೆಂದರೆ ಅವರು ನರಸಿಂಹರಾಯರನ್ನು ಗೆಲ್ಲಿಸಲೇಬೇಕೆಂದು ಪಣತೊಟ್ಟಂತಿತ್ತು. ಪ್ರಬಲವಾದ ಪ್ರತಿಪಕ್ಷ ಅಲ್ಲಿದ್ದದ್ದು ತೆಲಗು ದೇಶಂ ಪಾಟರ್ಿ ಮಾತ್ರ. ಮೊದಲ ಹಂತದ ಚುನಾವಣೆಯಲ್ಲಿ 17 ಕ್ಷೇತ್ರದಲ್ಲಿ ತೆಲಗು ದೇಶಂ 13 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡರೆ ರಾಜೀವ್ ಹತ್ಯೆಯ ನಂತರದ ಚುನಾವಣೆಯ 24 ಕ್ಷೇತ್ರಗಳಲ್ಲಿ ಅವರು ಗಳಿಸಿದ್ದು 4 ಮಾತ್ರ. ಪಕ್ಷದ ಮುಖ್ಯಸ್ಥರಾಗಿದ್ದ ಎನ್.ಟಿ ರಾಮ್ರಾವ್ ಪ್ರಧಾನಿಯಾಗುವ ಅವಕಾಶ ಹೊಂದಿದ್ದ ಪಿ.ವಿ ನರಸಿಂಹರಾಯರ ವಿರುದ್ಧ ಯಾವ ಅಭ್ಯಥರ್ಿಯನ್ನೂ ನಿಲ್ಲಿಸದೇ ಅವರ ದಾರಿಯನ್ನು ಹೆಚ್ಚು-ಕಡಿಮೆ ಸುಗಮಗೊಳಿಸಿಬಿಟ್ಟರು. ನಂದ್ಯಾಲದಲ್ಲಿ ಆ ವರ್ಷ ಹಿಂದೆಂದೂ ಕಾಣದಷ್ಟು ಜನ ಮತಗಟ್ಟೆಗೆ ಬಂದು ನರಸಿಂಹರಾಯರಿಗಾಗಿ ವೋಟು ಹಾಕಿದರು. ಹೆಚ್ಚು-ಕಡಿಮೆ 90 ಪ್ರತಿಶತ ಜನ ವೋಟು ಮಾಡಲು ಬಂದಿದ್ದರು. ಈ ಗೆಲುವು ಎಂತಹ ಅಭೂತಪೂರ್ವ ವಿಜಯವಾಗಿತ್ತೆಂದರೆ ಅದು ಗಿನ್ನಿಸ್ ಪುಸ್ತಕದಲ್ಲಿ ದಾಖಲಾಯ್ತು. ಈ ಗೆಲುವಿಗೆ ಕೆಲವೇ ತಿಂಗಳ ಮುನ್ನ ರಾಜೀವ್ ಅವರಿಗೆ ಟಿಕೆಟ್ ಅನ್ನೇ ನಿರಾಕರಿಸಿದ್ದರು. ಆದರೀಗ ಅದೇ ನರಸಿಂಹರಾಯರು ಇಂಥದ್ದೊಂದು ವಿಜಯವನ್ನು ದಾಖಲಿಸಿ ಅಧಿಕಾರವನ್ನು ಬಲಗೊಳಿಸಿಕೊಂಡರು. ತಮ್ಮ ಚಾಕಚಕ್ಯತೆಯಿಂದಾಗಿಯೇ ಪ್ರತಿಪಕ್ಷದ ನೆರವನ್ನು ಪಡೆದುಕೊಂಡು ವಿಶ್ವಾಸವನ್ನು ಗಳಿಸಿ ಅಧಿಕಾರದಲ್ಲುಳಿದ ಅವರು ಪರಿವಾರದ ಕಪಿಮುಷ್ಟಿಯಿಂದ ಕಾಂಗ್ರೆಸ್ಸನ್ನು ಹೊರತರುವ ನಿಶ್ಚಯ ಬಲವಾಗಿಯೇ ಮಾಡಿದ್ದರು. 1992ರಲ್ಲಿ ಕಾಂಗ್ರೆಸ್ಸಿನ ಅಧಿವೇಶನವನ್ನು ನಡೆಸುವ ಇರಾದೆ ವ್ಯಕ್ತಪಡಿಸಿ ಅದಕ್ಕೂ ಮುಂಚೆಯೇ ಸಂಘಟನಾತ್ಮಕವಾದ ಚುನಾವಣೆಗಳನ್ನು ನಡೆಸುವಂತೆ ನಿರ್ಣಯ ಕೈಗೊಂಡರು. ಆ ವೇಳೆಗಾಗಲೇ ಈ ರೀತಿಯ ಚುನಾವಣೆಗಳನ್ನು ನಡೆಸಿ ದಶಕಗಳೇ ಉರುಳಿ ಹೋಗಿದ್ದವು. 1973ರಲ್ಲಿ ನಡೆದ ಚುನಾವಣೆಯ ನಂತರ ಪಕ್ಷವನ್ನು ಸಂಜಯ್ ಮತ್ತು ರಾಜೀವ್ ಪರಿವಾರದ ಆಸ್ತಿಯೆಂಬಂತೆ ನಡೆಸಿದ್ದರೆ ಹೊರತು ಎಂದಿಗೂ ಚುನಾವಣೆಗಳ ಮೂಲಕ ಮೇಲೆ ಬಂದಿರಲಿಲ್ಲ. ರಾಹುಲ್ನನ್ನೂ ಹೀಗೆಯೇ ಅಧ್ಯಕ್ಷಗಿರಿಗೆ ಆಯ್ಕೆ ಮಾಡಿದ್ದು ನಿಮಗೆ ನೆನಪಿರಬೇಕು.

7

ತಿರುಪತಿಯಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ಸಿನ ಈ ಅಧಿವೇಶನ ಐತಿಹಾಸಿಕವೇ ಆಗಿತ್ತು ಏಕೆಂದರೆ 1966ರಲ್ಲಿ ಪ್ರಧಾನಮಂತ್ರಿಯಾಗಿ ಲಾಲ್ಬಹದ್ದೂರ್ ಶಾಸ್ತ್ರಿ ಮತ್ತು ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಕೆ.ಕಾಮರಾಜ್ ಇದ್ದರು. ಹೀಗೆ ಪರಿವಾರದವರಲ್ಲದ ಪ್ರಧಾನಿ ಮತ್ತು ಕಾಂಗ್ರೆಸ್ಸಿನ ಅಧ್ಯಕ್ಷರು ಅಧಿವೇಶನ ನಡೆಸಿದ್ದು ಅದೇ ಕೊನೆ. ಅಂಥದ್ದೊಂದು ಇತಿಹಾಸ ನಿಮರ್ಾಣಕ್ಕೆ ನರಸಿಂಹರಾಯರು ಪ್ರತಿಬದ್ಧರಾಗಿದ್ದರು. ಇಂದಿರಾ ಕಾಂಗ್ರೆಸ್ ಎಂಬ ಹಣೆಪಟ್ಟಿಯನ್ನು ತೆಗೆದು ಮತ್ತೊಮ್ಮೆ ಇದನ್ನು ರಾಷ್ಟ್ರೀಯ ಕಾಂಗ್ರೆಸ್ ಮಾಡುವ ವಿಶ್ವಾಸ ಅವರಲ್ಲಿ ಖಂಡಿತವಾಗಿಯೂ ಇತ್ತು. ಆ ಕಾರಣಕ್ಕಾಗಿಯೇ ಪರಿವಾರದ ವಲಯದಲ್ಲಿಲ್ಲದ ಇತರರೂ ಕೂಡ ಸಂಘಟನೆಯ ದೃಷ್ಟಿಯಿಂದ ಮುಂದೆ ಬರಲೆಂದು ನರಸಿಂಹರಾಯರು ವಿಶೇಷ ಪ್ರಯತ್ನವನ್ನು ಹಾಕಿ ಕಾಂಗ್ರೆಸ್ಸಿಗೆ ಚುನಾವಣೆಗಳನ್ನು ಘೋಷಿಸಿದ್ದರು. ಕಾಂಗ್ರೆಸ್ಸಿನಲ್ಲಿ ಒಬ್ಬ ವ್ಯಕ್ತಿ ಎರಡು ಪದವಿಗಳನ್ನು ಹೊಂದಿರಬಾರದು ಎಂಬ ನಿರ್ಣಯವನ್ನು ಬಲವಾಗಿ ತೆಗೆದುಕೊಂಡಿದ್ದು ಆ ಹೊತ್ತಿನಲ್ಲಿಯೇ. ಇಲ್ಲವಾದಲ್ಲಿ ಇಂದಿರಾ ಮತ್ತು ರಾಜೀವ್ ಇಬ್ಬರೂ ತಾವು ಪ್ರಧಾನಿಯಾಗಿದ್ದಾಗಲೇ ಕಾಂಗ್ರೆಸ್ಸಿನ ಅಧ್ಯಕ್ಷರೂ ಆಗಿಬಿಟ್ಟಿದ್ದರು. ಸೋನಿಯಾ ಆಪ್ತರಾಗಿದ್ದ ಅಜರ್ುನ್ಸಿಂಗ್ನಂಥವರು ನರಸಿಂಹರಾಯರನ್ನು ಕಾಂಗ್ರೆಸ್ಸಿನ ಅಧ್ಯಕ್ಷಗಾದಿಯಿಂದ ಕೆಳಗಿಳಿಸಿಬೇಕೆಂದು ಹಠ ಹಿಡಿದಾಗ ಇವರೂ ಕೂಡ ಅಷ್ಟೇ ಮುಲಾಜಿಲ್ಲದೇ ಪ್ರಧಾನಿಯನ್ನು ಸದಸ್ಯರು ಆಯ್ಕೆ ಮಾಡುವಂತೆ ಅಧ್ಯಕ್ಷರನ್ನು ಎಲ್ಲರೂ ಸೇರಿಯೇ ಆಯ್ಕೆ ಮಾಡುವ ಪರಂಪರೆ ಆರಂಭವಾಗಲಿ ಎಂದು ಬಲವಾಗಿಯೇ ನಿಂತುಕೊಂಡುಬಿಟ್ಟರು.

ಆ ಬದಲಾವಣೆಗೆ ಕಾಂಗ್ರೆಸ್ಸು ಅಂದೇ ತೆರೆದುಕೊಂಡಿದ್ದರೆ ಇಂದು ಈ ಸ್ಥಿತಿ ಖಂಡಿತ ಬರುತ್ತಿರಲಿಲ್ಲ. ಹೀಗೇಕಾಯ್ತು ಎಂಬುದನ್ನು ಮುಂದಿನವಾರ ತಿಳಿಸುತ್ತೇನೆ.

Comments are closed.