ವಿಭಾಗಗಳು

ಸುದ್ದಿಪತ್ರ


 

ಕಾಂಗ್ರೆಸ್ಸು ಹಿಂದೆಂದೂ ಇಂತಹ ದೈನೀಸಿ ಸ್ಥಿತಿ ಕಂಡಿರಲಿಲ್ಲ!

a2

ತುತರ್ು ಪರಿಸ್ಥಿತಿಯ ನಂತರವೂ ಕೂಡ ಕಾಂಗ್ರೆಸ್ ಈ ಪರಿಸ್ಥಿತಿಗೆ ಹೋಗಿರಲಿಕ್ಕಿಲ್ಲ. ಅದಕ್ಕಷ್ಟೇ ಅಲ್ಲ. ಈ ದೇಶದ ಅನೇಕ ತುಷ್ಟೀಕರಣ ನಿರತ ಪಕ್ಷಗಳಿಗೆಲ್ಲ ಈಗ ಗೊಂದಲವೋ ಗೊಂದಲ. ಹಿಂದೂಗಳನ್ನು ಎಂದಿಗೂ ಒಗ್ಗಟ್ಟಾಗಿ ಕಾಣದ ಈ ಪಕ್ಷಗಳೆಲ್ಲಾ ಈಗ ಏಕಾಏಕಿ ಹಿಂದೂ ಮಂತ್ರ ಜಪಿಸಲು ಶುರುಮಾಡಿಬಿಟ್ಟಿವೆಯಲ್ಲದೇ ರಾಮ-ಕೃಷ್ಣರನ್ನೆಲ್ಲಾ ದೇವರೆಂದು ಭಾವಿಸುವ, ಪೂಜಿಸುವ ಮತ್ತು ರಥಯಾತ್ರೆಯನ್ನು ನಡೆಸುವ ಹಂತಕ್ಕೂ ಬಂದುಬಿಟ್ಟಿದೆ. ಅಧಿಕಾರದಲ್ಲಿದ್ದಷ್ಟೂ ಕಾಲ ರಾಮಮಂದಿರದ ಕುರಿತಂತೆ ಒಂದೂ ಮಾತನಾಡದಿದ್ದ ಅಖಿಲೇಶ್ ಯಾದವ್ ಈಗ ಏಕಾಕಿ ಕೃಷ್ಣ ನಗರಿಯ ಕುರಿತಂತೆ ಮಾಡನಾಡುತ್ತಿರುವುದು ಹಳೆಯ ಸಂಗತಿಯಾಯ್ತು. ಕಾಂಗ್ರೆಸ್ಸು ಮಧ್ಯಪ್ರದೇಶದಲ್ಲಿ ರಾಮ ವನ ಗಮನ ಪಥಯಾತ್ರ ಈಗ ಆರಂಭಿಸಿದೆ. ರಾಮ ಕಾಡಿಗೆ ಹೋದ ಮಾರ್ಗದುದ್ದಕ್ಕೂ ಅದು ಕ್ರಮಿಸುವುದಂತೆ. ಈ ಕುರಿತಂತೆ ಟ್ವೀಟ್ ಮಾಡಿ ಒಳ್ಳೆಯದಾಗಲೆಂದು ಹಾರೈಸಿದ್ದಕ್ಕೆ ಕಾಂಗ್ರೆಸ್ಸಿನ ಮಿತ್ರನೊಬ್ಬ ‘ರಾಮ ನಿಮ್ಮೊಬ್ಬರ ಸ್ವತ್ತಾ? ರಾಮಯಾತ್ರೆ ನಾವೂ ಮಾಡಬಾರದಾ?’ ಎಂದೆಲ್ಲಾ ಅರಚಾಡಿಕೊಂಡಿರುವುದನ್ನು ನೋಡಿ ಎಷ್ಟು ಹೊತ್ತು ನಕ್ಕೆನೋ ನಾನೇ ಬಲ್ಲೆ. ಇದನ್ನೇ ಅಸಲಿ ಮಿಚರ್ಿ ಅನ್ನೋದು. ಅದು ಮುಟ್ಟಿದರೂ ಉರಿ, ಮುಟ್ಟಿಬಿಟ್ಟಮೇಲೂ ಉರಿ.

ಇತ್ತೀಚೆಗೆ ತಾನೇ ಸುಪ್ರೀಂಕೋಟರ್ು ಕೆಳಹಂತದ ನ್ಯಾಯಾಲಯ ಬಹಳ ಹಿಂದೆಯೇ ಕೊಟ್ಟಿದ್ದ ನಿರ್ಣಯವೊಂದನ್ನು ಎತ್ತಿ ಹಿಡಿಯಿತು. ಮಸೀದಿಗಳು ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ ಎಂಬ ಈ ಸುಪ್ರೀಂ ನಿರ್ಣಯ ಬಹು ದೊಡ್ಡ ಬದಲಾವಣೆಗೆ ಕಾರಣವಾಗಬಲ್ಲಂಥದ್ದು. ಕನಿಷ್ಠ 40,000 ಮಂದಿರಗಳನ್ನು ಒಡೆದು ಹಾಕಿ ಆ ಜಾಗದಲ್ಲಿ ಮಸೀದಿ ನಿಮರ್ಿಸಿರುವ ಮುಸಲ್ಮಾನ ದೊರೆಗಳ ಕುರಿತಂತೆ ಮತ್ತೆ ಚಚರ್ೆ ಶುರುವಾದರೂ ಅಚ್ಚರಿ ಪಡಬೇಕಿಲ್ಲ. ಅಥವಾ ರಸ್ತೆ ಬದಿಯಲ್ಲಿರುವ ಯಾವುದೋ ಮಸೀದಿಯನ್ನು ರಸ್ತೆ ವಿಸ್ತಾರಕ್ಕಾಗಿ ಕೆಡವಬೇಕಾದಾಗ ಸಕರ್ಾರ ಬಹುವಾಗಿ ಯೋಚಿಸಬೇಕಾಗಿಯೂ ಇಲ್ಲ. ಯಾರ ಅನುಮತಿಗೂ ಕಾಯದಂತೆ ಮಂದಿರವನ್ನು ಹೇಗೆ ಉರುಳಿಸುವರೋ ಅದೇ ರೀತಿಯಲ್ಲೇ ಇನ್ನು ಮುಂದೆ ಮಸೀದಿಯನ್ನು ಬುಲ್ಡೋಜ್ ಮಾಡಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಬಹುದು. ದೂರಗಾಮಿ ಪರಿಣಾಮ ಹೊಂದಿರುವ ಇಂತಹ ನಿರ್ಣಯದ ವಿರುದ್ಧ ಕಾಂಗ್ರೆಸ್ಸು ಒಂದೇ ಒಂದು ಮಾತನಾಡಲಿಲ್ಲವೆಂಬುದು ಅಚ್ಚರಿಯ ಸಂಗತಿ. ಏಕೆಂದರೆ ಅದಕ್ಕೀಗ ಚೆನ್ನಾಗಿಯೇ ಗೊತ್ತಾಗಿದೆ. ‘ರಾಷ್ಟ್ರದಲ್ಲಿ ಹಿಂದುತ್ವದ ಅಲೆಯೆದ್ದಿದೆ. ಇದರ ವಿರುದ್ಧವಾಗಿ ಮಾತನಾಡುವುದು ತಮ್ಮ ಶಾಶ್ವತ ಸಮಾಧಿಗೆ ಕಾರಣವಾಗಬಲ್ಲುದು’.

a3

ಸುಪ್ರೀಂಕೋಟರ್ಿನ ನಿರ್ಣಯಗಳು ಈ ಹೊತ್ತಿನಲ್ಲಿ ವ್ಯತಿರಿಕ್ತವೆನಿಸುವಂತೆಯೇ ಬಂದವು. ಶಬರಿಮಲೈಯ ಕುರಿತಂತೆ ಬಂದ ನಿರ್ಣಯವು ಹಿಂದು ವಿರೋಧಿ ಎನಿಸುವಂತಿದ್ದರೂ ಆ ಒಂದು ಕಾರಣಕ್ಕಾಗಿಯೇ ಸುಪ್ರೀಂಕೋಟರ್ಿನ ರಾಮಮಂದಿರದ ಹಿನ್ನೆಲೆಯ ನಿರ್ಣಯವನ್ನು ಗಲಾಟೆ ಮಾಡದೇ ಮುಸಲ್ಮಾನ ಸಮಾಜ ಸ್ವೀಕರಿಸಬೇಕಾಯ್ತು. ಅತ್ತ ಕೇರಳದಲ್ಲಿ ಕಮ್ಯುನಿಸ್ಟ್ ಸಕರ್ಾರವಿದ್ದಾಗ್ಯೂ ಸಾವಿರಾರು ಜನ ತಾಯಂದಿರು ಬೀದಿಗೆ ಬಂದು ಸುಪ್ರೀಂಕೋಟರ್ಿನ ನಿರ್ಣಯದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಲ್ಲದೇ ರಾಜ್ಯ ಸಕರ್ಾರ ಇದರ ವಿರುದ್ಧ ಅಪೀಲು ಹಾಕಬೇಕೆಂದು ಆಗ್ರಹವನ್ನೂ ಮಾಡಿತು. ಕೇರಳ ಸಕರ್ಾರಕ್ಕೆ ಇದು ಸಾಮಾನ್ಯವಾದ ಫಜೀತಿಯಲ್ಲ. ಮೇಲ್ಮನವಿ ಹಾಕಿದರೆ ತಾನು ಇಷ್ಟೂ ದಿನ ನಂಬಿಕೊಂಡಂತಹ ಸಿದ್ಧಾಂತಗಳಿಗೆ ಎಳ್ಳು-ನೀರು ಬಿಟ್ಟಂತೆ. ಜನರ ಒತ್ತಾಯಕ್ಕೆ ಮಣಿಯದೇ ಮೇಲ್ಮನವಿ ಹಾಕದಿದ್ದರೆ ಅಧಿಕಾರಕ್ಕೇ ಎಳ್ಳು-ನೀರು ಬಿಟ್ಟಂತೆ. ಒಟ್ಟಿನಲ್ಲಿ ಗೊಂದಲದ ಗೂಡಾಗಿಬಿಟ್ಟಿದೆ. ದಿನೇ ದಿನೇ ಕೇರಳದಲ್ಲಿ ಹಿಂದುಳೆಲ್ಲ ಒಗ್ಗಟ್ಟಾಗುವ ರೀತಿ ನೋಡಿದರೆ ಸದ್ಯದಲ್ಲೇ ಕೇರಳ ಮುಕ್ತವಾಗಿ ಉಸಿರಾಡುವ ವಾತಾವರಣ ಕಾಣುವುದೆಂಬ ವಿಶ್ವಾಸ ಬಲವಾಗುತ್ತಿದೆ. ನರೇಂದ್ರಮೋದಿ ಎರಡನೇ ಬಾರಿಗೆ ಅಧಿಕಾರಕ್ಕೆ ಬರುವ ವೇಳೆಗೆ ಇಡಿಯ ರಾಷ್ಟ್ರದಲ್ಲಿ ಸೌಹಾರ್ದಯುತವಾಗಿ ಬದುಕುವ ಋಷಿ ಯುಗದ ಹೊಸ ಭಾರತದ ನಿಮರ್ಾಣಕ್ಕೆ ಅಡಿಪಾಯವಾಗುವುದೆಂಬುದರಲ್ಲಿ ಈಗಂತೂ ಯಾವ ಅನುಮಾನವೂ ಉಳಿದಿಲ್ಲ.

a4

ಇತ್ತ ಕೇರಳದಲ್ಲಿ ಹೀಗಾಗುತ್ತಿದ್ದರೆ ಅತ್ತ ಪಶ್ಚಿಮ ಬಂಗಾಳದಲ್ಲಿ ಹೊಸದೊಂದು ಸಮಸ್ಯೆ ತಲೆದೋರಿದೆ. ಮುಸಲ್ಮಾನರನ್ನು ಓಲೈಸುತ್ತಾ ರೋಹಿಂಗ್ಯಗಳಾದರೂ ಸರಿಯೇ ಬಂಗಾಳದಲ್ಲಿರಲಿ ಎನ್ನುತ್ತಿದ್ದ ದೀದಿ ಬಂಗಾಳದುದ್ದಕ್ಕೂ ಅಂತರಂಗದಲ್ಲಿ ಹರಿಯುತ್ತಿರುವ ಹಿಂದುತ್ವದ ಆಕ್ರೋಶದ ಲಾವ ಸ್ಫೋಟಿಸುವ ಮುನ್ನವೇ ತಣಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಬಜೆಟ್ನಿಂದ 28 ಕೋಟಿ ರೂಪಾಯಿಯನ್ನು ತೆಗೆದಿಟ್ಟು ಅದನ್ನು ದುಗರ್ಾ ಪೂಜೆ ನಡೆಸುವ ಪೆಂಡಾಲುಗಳಿಗೆ ತಲಾ 25,000 ಹಂಚುವ ಘೋಷಣೆ ಮಾಡಿದ್ದಾರೆ. ದೀದಿಗೆ ಇಂಥದ್ದೊಂದು ದೈನೇಸಿ ಸ್ಥಿತಿ ಬರಬಹುದೆಂದು ಯಾರೂ ಎಣಿಸಿರಲಿಲ್ಲ. ದೀದಿಯ ಈ ಘೋಷಣೆಯಿಂದ ಹಿಂದುಗಳು ಸಂತುಷ್ಟರಾದರೋ ಇಲ್ಲವೋ ಗೊತ್ತಿಲ್ಲ. ಮುಸಲ್ಮಾನ ಮೌಲ್ವಿಗಳಂತೂ ಬೀದಿಗೆ ಬಂದಿದ್ದಾರೆ. ದುಗರ್ಾದೇವಿಯ ಪೆಂಡಾಲುಗಳಿಗೆ ಕಲ್ಲೆಸೆದು ಇಡಿಯ ಬಂಗಾಳದಲ್ಲಿ ಮುಸಲ್ಮಾನ ಭೀತಿಯನ್ನು ಕಾಪಾಡಿಕೊಂಡು ಬಂದಿದ್ದ ಮೌಲ್ವಿಗಳಿಗೆ ಈಗ ಕೆಂಡದ ಮೇಲೆ ಕೂತಂತಹ ಅನುಭವ. ಸಕರ್ಾರದ ದುಡ್ಡನ್ನು ಪಡೆದು ಈ ಬಾರಿಯ ದುಗರ್ಾಪೂಜೆ ಮತ್ತೂ ವೈಭವವಾಗಿ ನಡೆದರೆ ಹಿಂದುಗಳನ್ನು ಅದುಮಿಡುವ ದೀರ್ಘಕಾಲದ ಮುಸಲ್ಮಾನರ ಪ್ರಯತ್ನಗಳೆಲ್ಲವೂ ವ್ಯರ್ಥವಾಗಿಬಿಡುತ್ತವೆ. ಹಾಗೆಂದೇ ದೀದಿಯ ವಿರುದ್ಧ ಘೋಷಣೆ ಕೂಗುತ್ತ ಈ ಮೌಲ್ವಿಗಳು ತಮಗೆ ನೀಡುತ್ತಿರುವ ಸಂಬಳವನ್ನು 2000 ದಿಂದ 5000 ಕ್ಕೆ ಏರಿಸಿ ಅಥವಾ ದುಗರ್ಾ ಪೆಂಡಾಲುಗಳಿಗೆ ನಿಲ್ಲಿಸಿ ಎಂಬ ಪ್ರತಿಭಟನೆಗಿಳಿದುಬಿಟ್ಟಿದ್ದಾರೆ. ದೆಹಲಿಯಲ್ಲಿ ಕುಳಿತು ನರೇಂದ್ರಮೋದಿ ತಮ್ಮ ಹಿಂದುತ್ವದ ಛವಿಯಿಂದ ಸೆಕ್ಯುಲರ್ ವೇಷಧಾರಿಗಳಿಗೆ ನಡುಕ ಹುಟ್ಟಿಸಿರುವ ಪರಿ ಇದು. ಮಹಾಘಟಬಂಧನದ ಎಲ್ಲ ಪಕ್ಷಗಳೂ ತಮಗರಿವಿಲ್ಲದಂತೆ ಬಲಿಯಾಗುತ್ತಿವೆ. ಇತ್ತ ಹಿಂದೂಗಳು ಜಾತಿ-ಮತ-ಪಂಥ ಮರೆತು ಒಟ್ಟಾಗುತ್ತಿರುವ ರೀತಿ ಅನೇಕರಲ್ಲಿ ನಡುಕವನ್ನಂತೂ ಹುಟ್ಟಿಸಿದೆ. ತಾತ್ಕಾಲಿಕ ಲಾಭಕ್ಕಾಗಿ ಕಾಯುತ್ತ ಕುಳಿತಿದ್ದ ಮುಸಲ್ಮಾನರಿಗೆ ಗಾಳಿ ಬೀಸಿದೆಡೆ ತಿರುಗಿ ನಿಲ್ಲುವ ಈ ಗೋಸುಂಬೆಗಳಿಗಿಂತ ನರೇಂದ್ರಮೋದಿಯವರನ್ನೇ ನಂಬುವುದೊಳಿತು ಎಂದೆನಿಸಿದರೂ ಅಚ್ಚರಿ ಪಡಬೇಕಿಲ್ಲ.

ಇವೆಲ್ಲದರ ನಡುವೆ ಕಾಂಗ್ರೆಸ್ಸಿನ ಜನ್ಮ ಜಾಲಾಡುತ್ತಿರುವ ಸುಬ್ರಮಣಿಯನ್ ಸ್ವಾಮಿ ಮಾತ್ರ ರಾಹುಲ್, ಸೋನಿಯಾ, ಚಿದಂಬರಂ ಇವರೆಲ್ಲರ ನಿದ್ದೆಯನ್ನೇ ಕಸಿದು ಬಿಟ್ಟಿದ್ದಾರೆ. ನ್ಯಾಶನಲ್ ಹೆರಾಲ್ಡ್ ಕೇಸಿನ ವಿಚಾರಣೆ ಕೋಟರ್ಿನಲ್ಲಿ ನಡೆಯುತ್ತಿರುವಾಗ ಕಾಂಗ್ರೆಸ್ಸಿನ ಪರವಾದ ವಕೀಲ ಸುಬ್ರಮಣಿಯನ್ ಸ್ವಾಮಿಯವರು ಸೋನಿಯಾ ಮತ್ತು ರಾಹುಲ್ರ ಕುರಿತಂತೆ ಮಾಡಿರುವ 2000 ಟ್ವೀಟುಗಳನ್ನು ಕೋಟರ್ಿನ ಮುಂದಿರಿಸಿ ಅದರಲ್ಲಿ ಸ್ವಾಮಿ ಸೋನಿಯಾರನ್ನು ತಾಟಕ ಎಂದು ಸಂಬೋಧಿಸುತ್ತಾರೆ ಎಂದೂ ರಾಹುಲ್ರನ್ನು ಬುದ್ಧು ಎಂದು ಸಂಬೋಧಿಸುತ್ತಾರೆಂದು ವಿವರಿಸುವಾಗ ನ್ಯಾಯಾಧೀಶರಾದಿಯಾಗಿ ಒಟ್ಟೂ ನ್ಯಾಯಾಲಯ ನಗೆಗಡಲಲ್ಲಿ ತೇಲುತ್ತಿತ್ತಂತೆ. ನ್ಯಾಯಾಧೀಶರು ಪ್ರಕರಣದುದ್ದಕ್ಕೂ ನಗುನಗುತ್ತಾ ವಿಚಾರಣೆಯನ್ನು ಮುಂದೂಡುವಾಗ ಕಾಂಗ್ರೆಸ್ಸಿನ ಇಂದಿನ ಸ್ಥಿತಿ ಕಣ್ಣಿಗೆ ರಾಚುವಂತೆ ವ್ಯಕ್ತವಾಗುತ್ತಿತ್ತು.

a5

ಬತ್ತಳಿಕೆಯಲ್ಲಿದ್ದ ಎಲ್ಲ ಬಾಣವನ್ನು ಕಳೆದುಕೊಂಡು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಘಡಗಳ ಚುನಾವಣೆಯನ್ನು ಎದುರಿಸಲು ಸಜ್ಜಾಗುತ್ತಿದೆ ಕಾಂಗ್ರೆಸ್ಸು. ಹಾಂ! ಹೇಳುವುದು ಮರೆತಿದ್ದೆ. ಭಾರತಕ್ಕೆ ಬಂದ ಪುತಿನ್ 2019 ರ ಸಪ್ಟೆಂಬರ್ನಲ್ಲಿ ನಡೆಯಲಿರುವ ವೈಶ್ವಿಕ ಸಮ್ಮೇಳನವೊಂದಕ್ಕೆ ಮೋದಿಯನ್ನು ಆಹ್ವಾನಿಸಿ ಹೋಗಿದ್ದಾರೆ. ಆ ವೇಳೆಗೆ ಈ ದೇಶದಲ್ಲಿ ಚುನಾವಣೆ ಮುಗಿದು ಹೊಸ ಸಕರ್ಾರ ರಚನೆಯಾಗಿರುತ್ತದೆಂಬುದು ಪುತಿನ್ರಿಗೆ ಗೊತ್ತಿರದ ಸಂಗತಿಯೇನಲ್ಲ! 2019 ರ ಫಲಿತಾಂಶ ಗೊತ್ತಾಯಿತಲ್ಲ! ಅಸಲಿ ಮಿಚರ್ಿ ಜೋರಾಗಿಯೇ ಇದೆ.

Comments are closed.