ವಿಭಾಗಗಳು

ಸುದ್ದಿಪತ್ರ


 

ಕಾಂಗ್ರೆಸ್ ಮುಕ್ತ ಭಾರತ, ಬಲು ಹತ್ತಿರದಲ್ಲಿ?!

ರಾಹುಲ್ಗೆ ನಾಯಕತ್ವದ ಗುಣಗಳಿವೆಯಾ ಎಂಬುದು ಖಂಡಿತವಾಗಿಯೂ ಕೋಟಿ ರೂಪಾಯಿ ಪ್ರಶ್ನೆ. ಬಹುಶಃ ರಾಜಕೀಯದ ಕುರಿತಂತೆ ಸೋನಿಯಾರಿಗಿದ್ದ ಅನಾಸಕ್ತಿ ಮತ್ತು ಅಜ್ಜಿಯ ಹಾಗೂ ತಂದೆಯ ಕೊಲೆಯನ್ನು ನೋಡಿದ ಹೆದರಿಕೆ ಇವೆರಡೂ ಸೇರಿ ರಾಹುಲ್ನನ್ನು ಹಾಗೆ ಮಾಡಿಬಿಟ್ಟಿರಬೇಕು.

ಕಾಂಗ್ರೆಸ್ಸನ್ನು ಉಳಿಸುವ ನೆಪದಲ್ಲಿ ಮತ್ತೊಂದು ಪ್ರಹಸನ ಶುರುವಾಗಿದೆ. ಗೆಲುವಿನ ಎಲ್ಲಾ ಶ್ರೇಯ ರಾಹುಲ್ಗೆ ಕೊಡುವಂತೆ ಸೋಲಿನ ಎಲ್ಲಾ ಹೊಣೆಗಾರಿಕೆಯನ್ನೂ ರಾಹುಲ್ಗೆ ಅಲ್ಲಿ ಕೊಡುವುದಿಲ್ಲ. ಅದನ್ನು ಸಾಮೂಹಿಕವಾಗಿ ಸ್ವೀಕಾರ ಮಾಡುತ್ತಾರೆ. ವಂಶದ ಕುಡಿಯನ್ನು ಉಳಿಸುವ ಪ್ರಯತ್ನವಿದು. ಕಾಂಗ್ರೆಸ್ಸು ನೆಹರೂ ಪರಿವಾರದವರ ಹಿಡಿತದಲ್ಲಿ ಮಾತ್ರ ಬದುಕಬಲ್ಲದು ಎಂಬುದು ಇವರೆಲ್ಲರ ಭಾವನೆ. ಹೀಗಾಗಿಯೇ ಶತಾಯ-ಗತಾಯ ಇನ್ನೊಬ್ಬರ ಕೈಗೆ ಕಾಂಗ್ರೆಸ್ಸಿನ ಚುಕ್ಕಾಣಿಯನ್ನು ಹಸ್ತಾಂತರಿಸದೇ ಅದನ್ನು ಜೀವಂತವಾಗಿರಿಸಿಕೊಳ್ಳುವ ಚಟುವಟಿಕೆ ಗರಿಗೆದರಿಬಿಟ್ಟಿದೆ.

2

ರಾಹುಲ್ಗೆ ನಾಯಕತ್ವದ ಗುಣಗಳಿವೆಯಾ ಎಂಬುದು ಖಂಡಿತವಾಗಿಯೂ ಕೋಟಿ ರೂಪಾಯಿ ಪ್ರಶ್ನೆ. ಬಹುಶಃ ರಾಜಕೀಯದ ಕುರಿತಂತೆ ಸೋನಿಯಾರಿಗಿದ್ದ ಅನಾಸಕ್ತಿ ಮತ್ತು ಅಜ್ಜಿಯ ಹಾಗೂ ತಂದೆಯ ಕೊಲೆಯನ್ನು ನೋಡಿದ ಹೆದರಿಕೆ ಇವೆರಡೂ ಸೇರಿ ರಾಹುಲ್ನನ್ನು ಹಾಗೆ ಮಾಡಿಬಿಟ್ಟಿರಬೇಕು. 14 ವರ್ಷದವನಿದ್ದಾಗ ಅಜ್ಜಿಯ ಕೊಲೆಯಾಗಿ ತಂದೆ ರಾಜಕಾರಣದ ಪಡಸಾಲೆಗಳಲ್ಲಿ ಅಡ್ಡಾಡುವಾಗ ರಾಹುಲ್, ಪ್ರಿಯಾಂಕಾರನ್ನು ಶಾಲೆಯಿಂದ ಬಿಡಿಸಿ ತರಲಾಗಿತ್ತು. ಅದು ಅವರಿಗಾಗಬಹುದಾದ ದಾಳಿಯ ಭಯದಿಂದ. ಸಹಜವಾಗಿಯೇ ಮುಕ್ತವಾಗಿ ಬದುಕಬೇಕಾಗಿದ್ದವರು ನಾಲ್ಕು ಗೋಡೆಗಳ ನಡುವೆಯೇ ಯಾರಿಗೂ ಗೊತ್ತಾಗದಂತೆ ಕದ್ದು-ಮುಚ್ಚಿ ಹೆದರಿ ಬದುಕಬೇಕಾದ ಸ್ಥಿತಿ ಇದೆಯಲ್ಲಾ, ಅದು ಎಂಥವನನ್ನೂ ಪೇಲವನನ್ನಾಗಿಸಿಬಿಡುತ್ತದೆ. ಹೀಗಾಗಿಯೇ ರಾಹುಲ್ ಬಾಲ್ಯದಿಂದಲೂ ಓಡಾಟ, ಅಡ್ಡಾಟವೆಂದರೆ ವಿದೇಶ ಪ್ರವಾಸ ಎಂದೇ ಭಾವಿಸಿರುವಂಥದ್ದು! ಈಗಲೂ ಒಂದಷ್ಟು ರ್ಯಾಲಿಗಳಲ್ಲಿ ಭಾಗವಹಿಸುವ ಆತ ಅದು ಮುಗಿದೊಡನೆ ಕಾಣೆಯಾಗಿಬಿಡುತ್ತಾರೆ. ಎಲ್ಲಿಗೆ ಹೋದರೆಂಬುದು ನಿಗೂಢ ಸಂಗತಿ. ಇಂತಹ ನಿಗೂಢತೆಗಳೇ ಜನಸಾಮಾನ್ಯರ ಕಣ್ಣಲ್ಲಿ ರಾಹುಲ್ನನ್ನು ಅಪರಾಧಿಯಾಗಿಸಿರೋದು.

3

ಅಜ್ಜಿಯ ಹತ್ಯೆಯ ದಶಕಗಳ ನಂತರ ತಂದೆಯ ಹತ್ಯೆಯೂ ಆಗಿಹೋಯ್ತು. ಆಗ ರಾಹುಲ್ಗೆ 24 ವರ್ಷ. ಕುಚರ್ಿಯೇ ಸಾವಿಗೆ ಆಹ್ವಾನ ಎಂದು ಅನಿಸಿರಲು ಸಾಕು. ಈ ಹೊತ್ತಿನಲ್ಲಿಯೇ ಕಾಂಗ್ರೆಸ್ಸು ನರಸಿಂಹರಾಯರ ಕೈಗೆ ಅಲ್ಲಿಂದ ಸೀತಾರಾಂ ಕೇಸರಿಯವರ ಕೈಗೆ ಜಾರಿದ್ದು. ಮಕ್ಕಳನ್ನು ರಾಜಕೀಯದಿಂದ ದೂರವಿಟ್ಟು ಬೆಳೆಸಬೇಕೆಂಬ ಸೋನಿಯಾರ ಆಸೆ ಕೊನೆಗೂ ಕೈಗೂಡಲಿಲ್ಲ. ಅನಿವಾರ್ಯವಾಗಿ ಆಕೆಯೇ ರಾಜಕೀಯಕ್ಕೆ ಧುಮುಕಬೇಕಾಯ್ತು. ಆಕೆಯ ಆಗಮನದೊಂದಿಗೆ ಪರೋಕ್ಷವಾಗಿ ರಾಹುಲ್ನ ಆಗಮನವೂ ಖಾತ್ರಿಯಾಯ್ತು. 2004ರಲ್ಲಿ ರಾಹುಲ್ ಅಧಿಕೃತವಾಗಿ ಅಮೇಥಿಯಲ್ಲಿ ಚುನಾವಣೆಗೆ ನಿಲ್ಲುವ ಮೂಲಕ ಆಗಮನವನ್ನು ಘೋಷಿಸಿದರು. ಬರೋಬ್ಬರಿ ತಂದೆ ತೀರಿಕೊಂಡ ಹತ್ತು ವರ್ಷಗಳ ನಂತರ! ಅಲ್ಲಿಯವರೆಗೂ ಸೋನಿಯಾ ರಾಜೀವ್ರ ಕ್ಷೇತ್ರವಾಗಿದ್ದ ಅಮೇಥಿಯನ್ನು ತಾವೇ ಪ್ರತಿನಿಧಿಸುತ್ತಿದ್ದರು. ಮಗನಿಗಾಗಿ ಆ ಕ್ಷೇತ್ರವನ್ನು ಬಿಟ್ಟುಕೊಡುವಲ್ಲಿ ಖಂಡಿತವಾಗಿಯೂ ಆಕೆಯ ದೂರದೃಷ್ಟಿಯಿತ್ತು. ರಾಹುಲ್ನನ್ನು ರಾಜೀವ್ರೊಂದಿಗೆ ಹೋಲಿಸಿ ಪ್ರಧಾನಿ ಅಭ್ಯಥರ್ಿಯಾಗಿಸಬೇಕೆಂಬುದು ಹಳೆಯ ಕಾಂಗ್ರೆಸಿಗರ ಬಯಕೆ ಕೂಡ. ಆ ವರ್ಷದ ಚುನಾವಣೆಯ ಗೆಲುವು ಕಾಂಗ್ರೆಸ್ಸಿಗೂ ಅಚ್ಚರಿಯೇ. ಅಟಲ್ಜೀಯವರ ಎಲ್ಲಾ ಸಾಧನೆಯನ್ನೂ ಬದಿಗೆ ಸರಿಸಿ ಜನ ಕಾಂಗ್ರೆಸ್ಸಿಗೆ ಹೆಚ್ಚು ಸ್ಥಾನ ಕೊಟ್ಟರು. ಆದರೆ ರಾಹುಲ್ ಆಗಿನ್ನೂ ಪ್ರಧಾನಿ ಪಟ್ಟಕ್ಕೆ ಎಳಸು. ರಾಹುಲ್ಗೇನಾದರೂ ಆಗಲೇ 40 ದಾಟಿಬಿಟ್ಟಿದ್ದರೆ ಮುಲಾಜಿಲ್ಲದೇ ಪ್ರಧಾನಿ ಪಟ್ಟದಲ್ಲಿ ಕೂರಿಸಿಯೇ ಬಿಡುತ್ತಿದ್ದರು. ಬಹುಶಃ ಕಾಂಗ್ರೆಸ್ಸಿಗೇ ಬಹುಮತ ಬಂದಿದ್ದರೂ ರಾಹುಲ್ ಪ್ರಧಾನಿಯಾಗಿಬಿಡುತ್ತಿದ್ದನೇನೋ. ಹಾಗಾಗಲಿಲ್ಲ. ಸೋನಿಯಾ ತಾವು ಪ್ರಧಾನಿಯಾಗುವುದು ಸಾಧ್ಯವಿಲ್ಲವೆಂದು ಅರಿವಾದಾಗ ತಮ್ಮ ಮಾತನ್ನು ಚಾಚೂ ತಪ್ಪದೇ ಪಾಲಿಸುವ ಮನಮೋಹನ ಸಿಂಗರನ್ನು ಪ್ರಧಾನಿ ಪಟ್ಟಕ್ಕೆ ಆಯ್ಕೆ ಮಾಡಿದರು. ಈ ಹಿಂದಿನ ಲೇಖನಗಳಲ್ಲಿ ವಿವರಿಸಿದಂತೆ ಆ ಹಂತದಲ್ಲಿ ಪ್ರಧಾನಿಯಾಗಬಲ್ಲ ಯೋಗ್ಯತೆ ಇದ್ದದ್ದು ಸ್ವತಃ ಪ್ರಣಬ್ ಮುಖಜರ್ಿಯವರಿಗೆ. ಆದರೆ ಅವರು ಹಿಡಿತಕ್ಕೆ ಸಿಕ್ಕಬಲ್ಲ ವ್ಯಕ್ತಿಯಲ್ಲವೆಂದು ಗೊತ್ತಿದುದರಿಂದಲೇ ಅವರನ್ನು ಬದಿಗೆ ಸರಿಸಲಾಯ್ತು. 2007ರಲ್ಲಿ ರಾಹುಲ್ನನ್ನು ಕಾಂಗ್ರೆಸ್ಸಿನ ಕಾರ್ಯದಶರ್ಿಯಾಗಿ ಆಯ್ಕೆ ಮಾಡಲಾಯ್ತು. ವಿದ್ಯಾಥರ್ಿ ಘಟಕಕ್ಕೂ ಆತನನ್ನು ಮುಖ್ಯಸ್ಥನನ್ನಾಗಿಸಲಾಯ್ತು. 2008ರಲ್ಲಿಯೇ ವೀರಪ್ಪಮೋಯ್ಲಿ ರಾಹುಲ್ನನ್ನು ಪ್ರಧಾನಮಂತ್ರಿ ಎಂಬರ್ಥದಲ್ಲಿ ಸಂಬೋಧಿಸಿ ಎಲ್ಲರ ಹುಬ್ಬೂ ಮೇಲೇರುವಂತೆ ಮಾಡಿದ್ದರು. ಆತನನ್ನು ನಾಯಕನೆಂದು ಬಿಂಬಿಸಲು ಇವರು ಮಾಡಿದ ಪ್ರಯತ್ನಗಳು ಒಂದೆರಡಲ್ಲ. ಕಾಂಗ್ರೆಸ್ಸಿನ ಯುವಾಘಟಕ, ವಿಧ್ಯಾಥರ್ಿ ಘಟಕದ ಜವಾಬ್ದಾರಿ ರಾಹುಲ್ಗೆ ಬಂದೊಡನೆ 2 ಲಕ್ಷದಷ್ಟಿದ್ದ ಸದಸ್ಯತ್ವ ಏಕಾಕಿ 25 ಲಕ್ಷವಾಗುವಂತೆ ಮಾಡಲಾಯ್ತು. ಆಗಿನಿಂದಲೂ ರಾಹುಲ್ ವ್ಯವಸ್ಥೆಯೊಳಗೆ ಬದಲಾವಣೆ ತರುವ ಪ್ರಯತ್ನ ಮಾಡುವಂತೆ ಬಿಂಬಿಸಲಾಗುತ್ತಿತ್ತು. ಯುವಾಕಾಂಗ್ರೆಸ್ಸಿಗೆ ಚುನಾವಣೆ ನಡೆಸುವುದು ರಾಹುಲ್ ಆದ್ಯತೆಯೆಂದು ಬಿಂಬಿಸಿ ಪ್ರಹಸನ ನಡೆಸಲಾಯಿತಾದರೂ ಮುಖ್ಯಸ್ಥಾನಕ್ಕೆ ಬಂದವರು ಮಾತ್ರ ಪರಿವಾರಕ್ಕೆ ಆಪ್ತರಾದವರೇ. ರಾಹುಲ್ನನ್ನು ತರುಣರ ಆರಾಧ್ಯವೆಂಬಂತೆ ಬಿಂಬಿಸಲು ನಡೆಸಿದ ಪ್ರಯತ್ನ ಒಂದೆರಡಲ್ಲ!

2009ರ ಚುನಾವಣೆಯಲ್ಲಿ ರಾಹುಲ್ ಅಮೇಥಿಯನ್ನು ಹೆಚ್ಚೂ-ಕಡಿಮೆ 4ಲಕ್ಷ ವೋಟುಗಳಿಂದ ಗೆದ್ದರು. ಉತ್ತರಪ್ರದೇಶದ ಗೆಲುವಿಗೆ ರಾಹುಲ್ರೇ ಹೊಣೆ ಎಂದು ಹೊಗಳಿ ಅಟ್ಟಕ್ಕೇರಿಸಿದ್ದೂ ಆಯ್ತು. ಅವರ ರ್ಯಾಲಿಗಳು ದೊಡ್ಡಮಟ್ಟದ ಪ್ರಭಾವವನ್ನು ಬೀರಿವೆ ಎಂಬುದು ಕಾಂಗ್ರೆಸ್ಸಿಗರು ತಮಗೆ ತಾವೇ ಮಾಡಿಕೊಳ್ಳುತ್ತಿದ್ದ ಮೋಸವೇ ಆಗಿತ್ತು. ಅದಾದ ಕೆಲವು ತಿಂಗಳಲ್ಲೇ ನಡೆದ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸೋಲು ಹೀನಾಯವಾಗಿತ್ತು. ಆದರೆ ಪಕ್ಷ ರಾಹುಲ್ಗೆ ಅದರ ಹೊಣೆ ನೀಡದೇ ಪರಿಸ್ಥಿತಿಯನ್ನು ದೂಷಿಸಿ ಸುಮ್ಮನಾಯ್ತು. ಆದರೆ ಈ ಬಾರಿಯೂ ರಾಹುಲ್ ಪ್ರಧಾನಿಯಾಗುವಂತಿರಲಿಲ್ಲ. ಜನಮಾನಸದಲ್ಲಿ ಬಲವಾಗಿ ಬೇರೂರಬೇಕೆಂದರೆ ಒಂದಷ್ಟು ಹೋರಾಟಗಳು ಆಗಲೇಬೇಕಿತ್ತು. ಆದರೆ ಸಕರ್ಾರವಿದ್ದದ್ದು ಅವರದ್ದೇ ಆಗಿದ್ದರಿಂದ ಹೋರಾಟಗಳು ಅಷ್ಟು ಸುಲಭವಾಗಿರಲಿಲ್ಲ. ಆಗ ಆತ ಆರಿಸಿಕೊಂಡ ಮಾರ್ಗವೇನು ಗೊತ್ತೇ? ತಮ್ಮದ್ದೇ ಆಳುವ ಸಕರ್ಾರವನ್ನು ವಿರೋಧಿಸಿಬಿಡುವುದು. 2014ರ ಮಹಾ ಚುನಾವಣೆಗೂ ಮುನ್ನ ರಾಹುಲ್ ಇಡೀ ದೇಶ ಹುಬ್ಬೇರಿಸುವಂತಹ ಕೆಲಸ ಮಾಡಿಬಿಟ್ಟರು.

4

ಕಳಂಕಿತ ಸಚಿವರನ್ನು ಹುದ್ದೆಯಲ್ಲಿ ಮುಂದುವರೆಸುವಂತಿಲ್ಲ ಎಂಬ ಸುಪ್ರೀಂಕೋಟರ್ಿನ ಆದೇಶವನ್ನು ಸದನದಲ್ಲಿ ಚಚರ್ೆ ನಡೆಸಿ ಸಕರ್ಾರ ಧಿಕ್ಕರಿಸಿತಲ್ಲದೇ ಸುಪ್ರೀಂಕೋಟರ್ಿನ ನಿರ್ಣಯಕ್ಕೆ ವಿರುದ್ಧವಾದ ಮಸೂದೆಯೊಂದನ್ನು ಜಾರಿಗೆ ತಂದಿತು. ಇದರ ಕುರಿತಂತೆ ಜನಮಾನಸದಲ್ಲಿ ಆಕ್ರೋಶ ರೂಪುಗೊಳ್ಳಲಾರಂಭಿಸಿದಾಗ ಕಾಂಗ್ರೆಸ್ಸಿನ ಅಜಯ್ ಮಾಕನ್ ಪತ್ರಿಕಾಗೋಷ್ಠಿ ಕರೆದಿದ್ದರು. ಅಲ್ಲಿಗೆ ಅಚಾನಕ್ಕಾಗಿ ಧಾವಿಸಿದ ರಾಹುಲ್ ವಿಧೇಯಕದ ಪತ್ರಕವೊಂದನ್ನು ಪತ್ರಕರ್ತರೆದುರಿಗೆ ಹರಿದು ಬಿಸಾಡಿ ಎಲ್ಲರೂ ಅವಾಕ್ಕಾಗುವಂತೆ ಮಾಡಿದರು. ಈ ವಿಧೇಯಕ ಮೂರ್ಖತನದ್ದು ಎಂದರು. ವಾಸ್ತವವಾಗಿ ಈ ವಿಧೇಯಕದ ಕುರಿತಂತೆ ಸದನದಲ್ಲಿ ಸಾಕಷ್ಟು ಚಚರ್ೆಯಾಗಿತ್ತಲ್ಲದೇ ಸೋನಿಯಾರೇ ಅಧ್ಯಕ್ಷರಾಗಿರುವ ಕಾಂಗ್ರೆಸ್ನ ಆಂತರಿಕ ತಂಡ ಇದನ್ನು ಒಪ್ಪಿಕೊಂಡ ನಂತರವೇ ವಿಧೇಯಕದ ಕುರಿತು ಮಾತನಾಡಲಾಗಿತ್ತು. ಈಗ ರಾಹುಲ್ ಏಕಾಕಿ ನಡೆಸಿದ ಈ ಪ್ರಹಸನ ಜನರು ಆಡಿಕೊಳ್ಳುವಂತಾಯ್ತು. ಬಹುಶಃ ಆತನ ನಾಯಕತ್ವದ ಮೊದಲ ಅಪಹಾಸ್ಯದ ಸಂಗತಿ ಇದೇ ಇರಬೇಕು. ಆತ ಇಲ್ಲಿ ಪತ್ರಕವನ್ನು ಹರಿಯುತ್ತಿರುವಾಗ ಪ್ರಧಾನಿ ಮನಮೋಹನ್ ಸಿಂಗ್ ಒಬಾಮಾರೊಂದಿಗೆ ವಿದೇಶದಲ್ಲಿ ಭೇಟಿಯಾಗುವ ಕಾರ್ಯಕ್ರಮವಿತ್ತು. ಆ ಮಾತುಕತೆಗೂ ಮುನ್ನ ಈ ವಿಚಾರವನ್ನು ಕೇಳಿ ಅವರೆಷ್ಟು ದಂಗು ಬಡಿದಿದ್ದರೆಂದರೆ ಒಬಾಮಾನೆದುರು ಮಾತನಾಡುವಾಗ ನೀರಿನಲ್ಲದ್ದಿದ್ದ ಬೆಕ್ಕಿನಂತಾಗಿಬಿಟ್ಟಿದ್ದರಂತೆ.

ಈ ತಯಾರಿ 2014ರ ಮಹಾ ಚುನಾವಣೆಯ ಕಸರತ್ತಿಗೆ ಪೂರಕವಾಗಿಯೇ ದೊರೆಯಿತು. ರಾಹುಲ್ ಈಗ ದೇಶದ ಜನರಿಗೆ ಒಂದು ದನಿಯಾಗಿಬಿಟ್ಟಿದ್ದ. ತರುಣರಿಗೆ ಆತನ ಈ ನೇರವಂತಿಕೆ ಹಿಡಿಸುತ್ತಿದೆ ಎಂದು ಕಾಂಗ್ರೆಸ್ ಭಾವಿಸಿಬಿಟ್ಟಿತ್ತು. ಚುನಾವಣೆಯಲ್ಲಿ ಎದುರಿಗೆ ನಿಲ್ಲುವ ಭಾಜಪದ ಅಭ್ಯಥರ್ಿ ಅಡ್ವಾಣಿಯರನ್ನು ಸೋಲಿಸಲು ತರುಣರ ಮನಗೆದ್ದ ರಾಹುಲ್ ಸೂಕ್ತರೆಂದು ಬಿಂಬಿಸಿ ಪ್ರಣಬ್ ಮುಖಜರ್ಿಯವರನ್ನು ರಾಷ್ಟ್ರಪತಿ ಮಾಡಿ ಕೈತೊಳೆದುಕೊಂಡುಬಿಟ್ಟಿತು. ಈಗ ಪ್ರಧಾನಿಯಾಗುವ ಎಲ್ಲ ಮಾರ್ಗಗಳು ಹೆದ್ದಾರಿಯಂತೆ ಕಂಗೊಳಿಸುತ್ತಿದ್ದವು. ಈ ದಾರಿಯಲ್ಲಿ ಬಲುದೊಡ್ಡ ಸ್ಪೀಡ್ ಬ್ರೇಕರ್ ಆಗಿ ಬಂದವರು ನರೇಂದ್ರಮೋದಿ.

5

ಕಾಂಗ್ರೆಸ್ಸಿನ ಪಾಲಿಗೆ ಮೋದಿ ಔಟ್ ಆಫ್ ಸಿಲಬಸ್ ಪ್ರಶ್ನೆ. ಅಲ್ಲಿಯವರೆಗೂ ತನ್ನ ಸಾಧನೆಗಳನ್ನು ಹೇಳಿಕೊಂಡು ಪ್ರಭಾವಿಯಾಗಿ ಬೆಳೆದಿದ್ದ ಮೋದಿ ದೇಶದ ಜನರಲ್ಲಿ ಕನಸುಗಳನ್ನು ಬಿತ್ತುವಲ್ಲಿ ಯಶಸ್ವಿಯಾಗಿಬಿಟ್ಟಿದ್ದರು. ಇತ್ತ ರಾಹುಲ್ ಕೂಡ ಪ್ರಧಾನಮಂತ್ರಿ ಅಭ್ಯಥರ್ಿ ಎಂದೇ ಬಿಂಬಿತನಾಗಿ ದೇಶದಾದ್ಯಂತ ಓಡಾಡಲಾರಂಭಿಸಿದರು. ಅಮೇಥಿಯಲ್ಲಿ ಅವರೆದುರಾಗಿ ಸ್ಮೃತಿ ಇರಾನಿ. ತಂದೆಯ ಕಾಲದಿಂದಲೂ ಕಾಂಗ್ರೆಸ್ಸಿಗೆ ಬಿಟ್ಟರೆ ಬೇರೆಯವರಿಗೆ ವೋಟು ಹಾಕದ ಅಮೇಥಿ ತನ್ನನ್ನು ಬಲುದೊಡ್ಡ ಅಂತರದಿಂದ ಗೆಲ್ಲಿಸುತ್ತದೆ ಎಂದೇ ಆತ ಭಾವಿಸಿದ್ದರು. ಫಲಿತಾಂಶ ಅಚ್ಚರಿಯಾಗಿತ್ತು. ಐದು ವರ್ಷಗಳ ಹಿಂದೆ ಸುಮಾರು 4 ಲಕ್ಷ ಅಂತರದಿಂದ ಗೆದ್ದಿದ್ದ ರಾಹುಲ್ ಈಗ ಒಂದು ಲಕ್ಷಕ್ಕಿಂತಲೂ ಸ್ವಲ್ಪವೇ ಹೆಚ್ಚು ಮತಗಳಿಂದ ಜಯಗಳಿಸಿದ್ದರು. ಅದಕ್ಕಿಂತಲೂ ಕೆಟ್ಟದ್ದೆಂದರೆ ಆಳುತ್ತಿದ್ದ ಕಾಂಗ್ರೆಸ್ಸು ಪ್ರತಿಪಕ್ಷ ನಾಯಕ ಸ್ಥಾನವನ್ನೂ ಪಡೆಯಲಾಗದಷ್ಟು ಕಡಿಮೆ ಸೀಟುಗಳನ್ನು ಪಡೆದು ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸೋಲುಂಡಿತು. ಆಗಲೂ ಕಾಂಗ್ರೆಸ್ಸು ರಾಹುಲ್ನನ್ನು ಹೊಣೆಯಾಗಿಸಲಿಲ್ಲ. ಆತ ಈಗ ಕೃಷಿಕರ ಸಮಸ್ಯೆಗಳಿಗೆ ದನಿಯಾಗುವ ಪ್ರಯತ್ನ ಮಾಡಿದ. ರ್ಯಾಲಿಗಳು ನಡೆದವು. ನರೇಂದ್ರಮೋದಿಯವರ ಸಕರ್ಾರವನ್ನು ಸೂಟ್ಬೂಟಿನ ಸಕರ್ಾರವೆಂದು ಕರೆದ ರಾಹುಲ್ ನಿಧಾನವಾಗಿ ಪ್ರಭಾವಿಯಾಗಲಾರಂಭಿಸಿದ ಅಥವಾ ಆತ ಪ್ರಭಾವಶಾಲಿ ಎಂದು ಸುತ್ತಲಿನವರು ಬಿಂಬಿಸಲಾರಂಭಿಸಿದರು. ಅದು ಯಾವಾಗಲೂ ಹಾಗೆಯೇ. ಇತರರು ಹೊಗಳಿದಾಗ ಒಪ್ಪಿಕೊಳ್ಳುವುದು ಸರಿಯೇ. ಆದರೆ ನಾವೇ ಅದನ್ನು ನಂಬಿಬಿಡಬಾರದಷ್ಟೇ. ರಾಹುಲ್ ರಫೇಲ್ನ ವಿಚಾರವಾಗಿ ಮೋದಿಯವರನ್ನು ಸದನದಲ್ಲಿ ಅಡ್ಡಹಾಕಲು ಪ್ರಯತ್ನಿಸಿದ. ಆತ ಎತ್ತಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕ ನಂತರವೂ ಅದೇ ಮಾತುಗಳನ್ನಾಡುವುದನ್ನು ಮಾತ್ರ ಅವ ಬಿಡಲೇ ಇಲ್ಲ. ಸ್ವತಃ ಸುಪ್ರೀಂಕೋಟರ್್ ಛೀಮಾರಿ ಹಾಕಬೇಕಾದ ಸ್ಥಿತಿ ಬಂತು. ಅತ್ತ ಮೋದಿ ಒಂದಾದಮೇಲೊಂದು ರಾಜ್ಯವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಾ ಹೋಗುತ್ತಿದ್ದರೆ ಕಾಂಗ್ರೆಸ್ಸು ಸೋಲಿನ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿತ್ತು. ಈ ವೇಳೆಗಾಗಲೇ ಕಾಂಗ್ರೆಸ್ಸಿನ ಉಪಾಧ್ಯಕ್ಷನಾಗಿದ್ದ ರಾಹುಲ್ ತನ್ನ ತಾಯಿಯ ತ್ಯಾಗದ ಬಲದಿಂದ ಅಧ್ಯಕ್ಷನಾದ. ಅಧ್ಯಕ್ಷ ಪಟ್ಟಕ್ಕೇರುವಾಗ ಕಾಂಗ್ರೆಸ್ಸಿನಲ್ಲಿ ಚುನಾವಣೆಗಳೇ ನಡೆದಿರಲಿಲ್ಲವೆಂಬುದು ಗಮನಾರ್ಹ ಸಂಗತಿ. ಮತ್ತೆ ಎಲ್ಲ ಸೋಲುಗಳನ್ನು ಕಾಂಗ್ರೆಸ್ಸು ತನ್ನ ಹೆಗಲಮೇಲೆ ಹೊತ್ತುಕೊಂಡು ರಾಹುಲ್ನನ್ನು ಮಾತ್ರ ಮೋಡಿಗಾರನೆಂಬಂತೆ ಉಳಿಸಿಕೊಂಡಿತು. 2019ರ ಚುನಾವಣೆ ಹಿಂದು ಹಿಂದೆಯೇ ಬಂತು. ಮೋದಿ ರಾಜಕಾರಣಕ್ಕೆ ಹೊಸ ರಂಗನ್ನು ತುಂಬಿಯಾಗಿತ್ತು. ಅವರ ಪ್ರಚಾರದ ಶೈಲಿಗೆ ಹತ್ತಿರವೂ ಬರಲಾಗದೇ ಕಾಂಗ್ರೆಸ್ಸು ಮತ್ತೆ ಕೆಟ್ಟ ಸೋಲಿಗೆ ಸಿದ್ಧವಾಯ್ತು. ರಾಹುಲ್ ಈ ಹಾದಿಯುದ್ದಕ್ಕೂ ಮಾಡದ ಪ್ರಯೋಗವೇ ಇಲ್ಲ. ಸಂಸತ್ತಿನಲ್ಲಿ ಮೋದಿಯನ್ನು ತಬ್ಬಿಕೊಂಡು ಪ್ರೇಮದ ರಾಜಕಾರಣ ಮಾಡುತ್ತೇನೆನ್ನುವ ಸಂದೇಶ ಕೊಡಲು ಹೋಗಿ ಅದೇ ಸದನದಲ್ಲಿ ಕಣ್ಣುಮಿಟುಕಿಸಿ ಎಡವಟ್ಟು ಮಾಡಿಕೊಂಡರು. ಭಾಷಣಗಳಲ್ಲಿ ಹೊಸತನ್ನು ಹೇಳುವ ನೆಪದಲ್ಲಿ ಅಂಕಿ-ಅಂಶಗಳು ಹೆಸರುಗಳನ್ನೆಲ್ಲಾ ತಪ್ಪು-ತಪ್ಪಾಗಿ ಕೊಟ್ಟು ಅಪಹಾಸ್ಯಕ್ಕೀಡಾದರು. ಬಹುಶಃ ಕಾಂಗ್ರೆಸ್ಸು ಆತನನ್ನು ಪ್ರಧಾನಿ ಅಭ್ಯಥರ್ಿ ಎಂದು ಬಿಂಬಿಸದೇ ಹೋಗಿದ್ದರೆ ಜನ ಶ್ರದ್ಧೆಯಿಂಂದ ವೋಟು ಹಾಕಿರುತ್ತಿದ್ದರೇನೋ. ಮೋದಿ ಎದುರು ರಾಹುಲ್ ಸರಿಸಮಾನ ಅಭ್ಯಥರ್ಿಯೇ ಅಲ್ಲವೆಂಬುದು ಕಾಂಗ್ರೆಸ್ಸಿಗರಿಗೂ ಗೊತ್ತಿತ್ತು. ಹೀಗಾಗಿಯೇ ಹೀನಾಯ ಸೋಲು ಅವರನ್ನು ಆವರಿಸಿದಾಗಲೂ ಕಾಂಗ್ರೆಸ್ಸು ತಡಬಡಾಯಿಸಲಿಲ್ಲ. ರಾಹುಲ್ ಮಾತ್ರ ಪರಿವಾರದ ಹಿಡಿತದಿಂದ ಕಾಂಗ್ರೆಸ್ಸನ್ನು ಹೊರತಂದರೊಳಿತು ಎನ್ನುತ್ತಾ ಅಧ್ಯಕ್ಷಗಿರಿಗೆ ಸೂಕ್ತ ವ್ಯಕ್ತಿಯನ್ನು ಹುಡುಕಾಡುವಂತೆ ಹಿರಿಯರ ಟೋಳಿಗೆ ಹೇಳಿದ. ಎಂದಿನಂತೆ ಪರಿವಾರದ ಕುಡಿಯನ್ನು ಬಿಡಲೊಪ್ಪದ ಆ ಹಿರಿಯರು ರಾಹುಲ್ನ ಮನವೊಲಿಸುತ್ತಿದ್ದಾರೆ. ಆತ ಕೆಲವು ದಿನಗಳ ಕಾಲ ತಾನು ಈ ಕೆಲಸ ಮಾಡುತ್ತೇನೆ ಎನ್ನುತ್ತಾ ಕಾಂಗ್ರೆಸ್ಸಿನ ಅಧ್ಯಕ್ಷಗಾದಿಯಲ್ಲಿಯೇ ಕುಳಿತಿದ್ದಾನೆ. ಕಾಂಗ್ರೆಸ್ಸನ್ನು ಪುನರುಜ್ಜೀವನಗೊಳಿಸುವ ಎಲ್ಲ ಅವಕಾಶಗಳನ್ನು ಕಾಂಗ್ರೆಸ್ಸೇ ಕಳೆದುಕೊಂಡಿದೆ. ಅವರ ಬಳಿ ಪ್ರಮುಖ ಅಸ್ತ್ರವಾಗಿದ್ದ ಪ್ರಿಯಾಂಕಳನ್ನೂ ಈ ಬಾರಿ ಅವರು ಪಣಕ್ಕಿಟ್ಟು ಕಳೆದುಕೊಂಡಾಗಿದೆ. ಹೀಗಾಗಿ ಅವನತಿ ಬಹಳ ದೂರದಲ್ಲೇನು ಇಲ್ಲ.

Comments are closed.