ವಿಭಾಗಗಳು

ಸುದ್ದಿಪತ್ರ


 

ಕಾಂಗ್ರೆಸ್ ವಿರೋಧದ ನಡುವೆಯೂ ಬಂತು ರಫೇಲ್!

ಇತ್ತೀಚೆಗೆ ನರೇಂದ್ರಮೋದಿಯವರು ವಿಶ್ವಸಂಸ್ಥೆಯನ್ನೇ ಪುನರ್ ರಚಿಸಬೇಕೆಂಬ ಸೂಕ್ಷ್ಮ ಸಂದೇಶ ಕೊಟ್ಟಿರುವುದೂ ಕೂಡ ಈ ಹಿನ್ನೆಲೆಯಲ್ಲಿ ಬಲು ಮಹತ್ವ ಪಡೆಯುತ್ತದೆ. ಅಬ್ದುಲ್ ಕಲಾಂರು ಹೇಳಿದ್ದರಲ್ಲ 2020ರ ನಂತರ ಭಾರತದ್ದೇ ಯುಗ ಅಂತ. ಪುಣ್ಯಾತ್ಮ ಅದ್ಯಾವ ನಂಬಿಕೆಯಿಂದ ಅದನ್ನು ಹೇಳಿದ್ದರೋ ದೇವರೇ ಬಲ್ಲ.

ರಫೇಲ್ನ ಮೊದಲ ಐದು ವಿಮಾನಗಳು ಫ್ರಾನ್ಸಿನಿಂದ ಹೊರಟಾಗಿದೆ. ಈ ಲೇಖನವನ್ನು ನೀವು ಓದುತ್ತಿರುವ ವೇಳೆಗಾಗಲೇ ಅದು ಭಾರತದ ಹತ್ತಿರಕ್ಕೂ ಬಂದುಬಿಟ್ಟಿರುತ್ತದೆ. ಚೀನಾ ಮತ್ತು ಭಾರತದ ನಡುವೆ ಯುದ್ಧದ ಕಾಮರ್ೋಡಗಳು ಮುಸುಕಿರುವ ಈ ಹೊತ್ತಿನಲ್ಲೇ ಈ ವಿಮಾನಗಳ ಆಗಮನ ಅದೆಷ್ಟು ಸ್ಫೂತರ್ಿದಾಯಕವಾಗಿದೆ ಎಂಬುದನ್ನು ವಣರ್ಿಸಲು ಸಾಧ್ಯವಿಲ್ಲ. ಇಡಿಯ ಸೇನಾಪಾಳಯ ಹರ್ಷದಿಂದ ಕುಣಿಯುತ್ತಿದೆ. ಚೀನಾದ ವಿರುದ್ಧ ಆಧುನಿಕ ಶಸ್ತ್ರಾಸ್ತ್ರಗಳ ಜಿದ್ದಿನಲ್ಲಿ ರಫೇಲ್ಗಳು ಖಂಡಿತವಾಗಿಯೂ ನಮ್ಮ ಶಕ್ತಿಯನ್ನು ಹೆಚ್ಚಿಸಲಿದೆ. ಗಾಲ್ವಾನ್ ಕಣಿವೆಯಲ್ಲಿ ನಡೆದ ಘಟನೆಯ ನಂತರ ಎರಡೂ ಪಡೆಗಳು ಎಲ್ಎಸಿಯಿಂದ ದೂರ ಸರಿಯಬೇಕು ಎಂದು ಮಾತುಕತೆಯಾಡಲಾಗಿತ್ತು. ಅನೇಕ ರಕ್ಷಣಾ ತಜ್ಞರು ಹೀಗೆ ಸಮಯ ಕೊಡುವುದು ಚೀನಾಕ್ಕೆ ಲಾಭದಾಯಕ ಎಂದು ಲೇಖನಗಳನ್ನು ಬರೆದರು. ಚೀನಾ ಯಾವಾಗಲೂ ಹಾಗೆಯೇ. ನೆಪಗಳನ್ನು ಮುಂದಿಟ್ಟುಕೊಂಡು ಕಾಲ ತಳ್ಳುತ್ತ ತನ್ನ ಬಯಕೆಯನ್ನು ಮಾತ್ರ ಈಡೇರಿಸಿಕೊಳ್ಳುತ್ತಲಿರುತ್ತದೆ. ಈ ಕಾರಣದಿಂದಾಗಿಯೇ ಎಲ್ಎಸಿಯಿಂದ ಹಿಂದೆ ಸರಿಯುವ ಚೀನಾದ ವೇಗ ಕೂಡ ಅತ್ಯಂತ ಕಡಿಮೆಯದ್ದಾಗಿದೆ. 1962ರ ಯುದ್ಧದ ಹೊತ್ತಿನಲ್ಲೂ ಹಿಗೆಯೇ ಆಗಿತ್ತು. ಭಾರತದಿಂದ ಸಾಕಷ್ಟು ಸಮಯವನ್ನು ಪಡೆದುಕೊಂಡ ಚೀನಾ ತನಗೆ ಅನುಕೂಲವಾದ ವಾತಾವರಣವಿದ್ದಾಗ ಆಕ್ರಮಣ ನಡೆಸಿಬಿಟ್ಟಿತ್ತು. ನಾವಿನ್ನೂ ಹಿಂದೂ-ಚೀನೀ ಭಾಯಿ-ಭಾಯಿ ಮಂತ್ರ ಜಪಿಸುತ್ತಾ ಮೈಮರೆತು ಮಲಗಿದ್ದೆವು! ಈ ಬಾರಿ ನಡೆದಿರುವ ಪ್ರಕ್ರಿಯೆ ಬಲು ವಿಭಿನ್ನ. ಚೀನಾದೊಂದಿಗೆ ಮಾತುಕತೆ ನಡೆಸುತ್ತಾ ಭಾರತವೇ ಒಂದಷ್ಟು ಕಾಲ ತಳ್ಳುತ್ತಿದೆಯೇನೋ ಎನಿಸುತ್ತಿದೆ. ಹಾಗೇ ಸುಮ್ಮನೆ ಹಳೆಯದನ್ನು ಮೆಲುಕು ಹಾಕಿ. ಗಾಲ್ವಾನ್ ಕಣಿವೆಯಲ್ಲಿ 20 ಸೈನಿಕರು ಹುತಾತ್ಮರಾದ ನಂತರ ಪ್ರಧಾನಿ ಮೋದಿ ತೀರಿಕೊಂಡವರ ಬಲಿದಾನ ವ್ಯರ್ಥವಾಗದು ಎಂದು ಆಕ್ರೋಶಭರಿತವಾಗಿ ನುಡಿಯುವಾಗಲೇ ಚೀನಾದೊಂದಿಗೆ ಮಾತುಕತೆಯನ್ನೂ ನಡೆಸುತ್ತಿದ್ದರು. ಅದೇ ವೇಳೆಗೆ ಫ್ರಾನ್ಸಿನೊಂದಿಗೆ ಚಚರ್ೆ ನಡೆಸಿ ಸಪ್ಟೆಂಬರ್ಗೆ ಬರಬೇಕಾಗಿದ್ದ ರಫೇಲ್ ಜುಲೈ ಕೊನೆಯ ವೇಳೆಗೆ ಪೂರೈಕೆಯಾಗುವಂತೆ ಒತ್ತಡ ಹೇರಿದರು. ಲಾಕ್ಡೌನಿನ ನಡುವೆಯೂ ಭಾರತದ ಬೇಡಿಕೆಯನ್ನು ಮನ್ನಿಸಿದ ಫ್ರಾನ್ಸ್ ನಿನ್ನೆ ಯುದ್ಧವಿಮಾನವನ್ನು ರವಾನಿಸಿದೆ. 7000 ಕಿ.ಮೀ ದೂರವನ್ನು ಕ್ರಮಿಸಿ ಅಂಬಾಲಾಕ್ಕೆ ಬಂದಿಳಿಯಲಿರುವ ಈ ವಿಮಾನಗಳನ್ನು ಹಾರಾಡಿಸುವ ತರಬೇತಿ ಕೂಡ ಫ್ರಾನ್ಸ್ನಲ್ಲಿ ಈಗ ನಡೆಯುತ್ತಿದೆ. ಈ ನಡುವೆ ರಕ್ಷಣಾ ಸಚಿವ ರಾಜ್ನಾಥ್ ಸಿಂಗರು ರಷ್ಯಾಕ್ಕೆ ಹೋಗಿದ್ದು ಮಿಸೈಲ್ ಆಕ್ರಮಣದಿಂದ ರಕ್ಷಣೆ ಪಡೆಯುವ ಎಸ್-400 ಸಿಸ್ಟಮ್ಗಳನ್ನು ಬೇಗ ನೀಡುವಂತೆ ಕೇಳಿಕೊಂಡು ಬಂದಿದ್ದಾರೆ. ರಷ್ಯಾ ಒಪ್ಪಿಗೆಯನ್ನೂ ಸೂಚಿಸಿದೆ. ಸೂಕ್ಷ್ಮವಾಗಿ ಗಮನಿಸಬಹುದಾದ ಮತ್ತೊಂದು ಸಂಗತಿ ಎಂದರೆ ಕೋವಿಡ್ ಕಿಟ್ಗಳನ್ನು ತಯಾರಿಸುವ ನೆಪದಲ್ಲಿ ಇಸ್ರೇಲಿನ ಒಂದಷ್ಟು ವಿಜ್ಞಾನಿಗಳು ಅದಾಗಲೇ ಭಾರತಕ್ಕೆ ಬಂದಿಳಿದಿದ್ದಾರೆ. ಮೇಲ್ನೋಟಕ್ಕೆ ಕೋವಿಡ್ ಕಾರಣ ಎನಿಸಿದರೂ ಒಳಗೆ ಬೇರೆಯದ್ದೇ ವಿಚಾರ ಇದ್ದಿರಬಹುದು. ಭಾರತ ಯಾವಾಗ ಯಾರೊಂದಿಗೆ ಯುದ್ಧಕ್ಕೆ ನಿಂತಾಗಲೂ ಇಸ್ರೇಲ್ ನಮಗೆ ಹೆಗಲಾಗಿ ನಿಂತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬೇಕಷ್ಟೆ!

6

ವಿಷಯ ಅದಲ್ಲ. ರಫೇಲ್ಗಳನ್ನು ಭಾರತ ಕೊಂಡುಕೊಳ್ಳಲು ಹೊರಟಾಗ ಕಾಂಗ್ರೆಸ್ಸಿನ ರಾಹುಲ್ ಬಲವಾಗಿ ವಿರೋಧಿಸಿದ್ದರು. ಅವ್ಯವಹಾರ ನಡೆದಿದೆ ಎಂದಿದ್ದರು. ಕಾಂಗ್ರೆಸ್ ಸಕರ್ಾರ ಮಾಡಿಕೊಂಡಿದ್ದ ಒಪ್ಪಂದದಲ್ಲಿ ರಫೇಲ್ನ ಬೆಲೆ ಬಲು ಕಡಿಮೆ ಇತ್ತು ಎಂದೂ ದೂರಿದ್ದರು. ದುರದೃಷ್ಟವಶಾತ್ ಕಡಿಮೆ ಬೆಲೆಯ ಆ ರಫೇಲ್ಗಳು ಭಾರತಕ್ಕೆ ಬಂದಿಳಿದಿರಲಿಲ್ಲ ಏಕೆಂದರೆ ಸ್ವತಃ ರಕ್ಷಣಾ ಸಚಿವ ಆಂಟನಿ ಹೇಳಿದಂತೆ ಸಕರ್ಾರದ ಬಳಿ ಕೊಂಡುಕೊಳ್ಳುವಷ್ಟು ಹಣವೇ ಇರಲಿಲ್ಲ! ಸೋನಿಯಾ ವಾದ್ರಾರನ್ನು ಹೊತ್ತೊಯ್ಯಲೆಂದು ಆಗಸ್ಟಾವೆಸ್ಟ್ಲ್ಯಾಂಡ್ ಹೆಲಿಕಾಪ್ಟರುಗಳ ಖರೀದಿಗೆ ಅವರ ಬಳಿ ಹಣವಿತ್ತು. ಯುದ್ಧಕ್ಕೆ ಬೇಕಾದ ರಫೇಲ್ಗಳ ಖರೀದಿಗಲ್ಲ! ದೇಶದ ವಾಯುಸೇನೆ ಹಳೆಯ ವಿಮಾನಗಳಿಂದ ಕೂಡಿದ್ದು ಯುದ್ಧವಾದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗಬಹುದು ಎಂಬ ವರದಿ ಇದ್ದಾಗ್ಯೂ ಅದನ್ನು ಆಧುನಿಕಗೊಳಿಸದೇ ಕೊನೆಗೆ ಭಾರತೀಯ ವಿಮಾನಗಳನ್ನು ತಯಾರಿಸುವಲ್ಲಿ ಬೇಕಾದ ಕ್ಷಮತೆಯನ್ನೂ ತೋರಿಸದೇ ಇಡಿಯ ರಕ್ಷಣಾ ಇಲಾಖೆಯನ್ನೇ ಹದಗೆಡಿಸಿಬಿಟ್ಟಿತ್ತು ಕಾಂಗ್ರೆಸ್ಸು. ಮೋದಿ ಅಧಿಕಾರಕ್ಕೆ ಬಂದೊಡನೆ ಚುರುಕುಗೊಳಿಸಿ ಫ್ರಾನ್ಸಿನೊಂದಿಗೆ ನಿರಂತರ ಮಾತುಕತೆ ನಡೆಸಿ ಅತ್ಯಾಧುನಿಕವಾದ ರಫೇಲ್ಗಳನ್ನು ತರಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಂಡರು. ಬಹುಮುಖಿ ಕೆಲಸಗಳನ್ನು ಏಕಕಾಲಕ್ಕೆ ನಿರ್ವಹಿಸಬಲ್ಲ ರಫೇಲ್ ಅತ್ಯಂತ ಕೆಳಮಟ್ಟದಲ್ಲಿದ್ದು ಆಕಾಶದಿಂದ ಆಕಾಶಕ್ಕೆ, ಆಕಾಶದಿಂದ ನೆಲದತ್ತ ಮಿಸೈಲುಗಳನ್ನು ಹಾರಿಸಬಲ್ಲದು. ವಿಮಾನದೊಳಗೆ ಅಮ್ಲಜನಕ ಉತ್ಪತ್ತಿಯ ವ್ಯವಸ್ಥೆಯಿದ್ದು ದ್ರವ ಆಮ್ಲಜನಕವನ್ನು ವಿಮಾನಕ್ಕೆ ತುಂಬಬೇಕಾದ ಅಗತ್ಯವನ್ನು ನಿವಾರಿಸುತ್ತದೆ. ಮುನರ್ಾಲ್ಕು ವಿಮಾನಗಳು ಮಾಡಬಹುದಾದ ಕೆಲಸವನ್ನು ಒಂದು ರಫೇಲ್ ಮಾಡಬಲ್ಲದು. ಮೋದಿ ರಫೇಲ್ಗಳಷ್ಟೇ ಅಲ್ಲದೇ ಅದರೊಟ್ಟಿಗೆ ಅತ್ಯಾಧುನಿಕವಾದ ಮಿಟಿಯೋರ್ ಮತ್ತು ಸ್ಕ್ಯಾಲ್ಪ್ ಮಿಸೈಲ್ಗಳನ್ನು ಜೋಡಿಸುವಂತಹ ಮಾತುಕತೆ ಮಾಡಿಕೊಂಡು ಬಂದಿದ್ದರು. ಸರಳವಾಗಿ ಹೇಳಬೇಕೆಂದರೆ ಈಗ ಬಂದಿರುವ ಈ ರಫೇಲ್ಗಳು ಹೈ ಎಂಡ್ ಫುಲ್ಲಿ ಲೋಡೆಡ್ ಗಾಡಿಗಳಿದ್ದಂತೆ. ಕಾಂಗ್ರೆಸ್ಸಿನದ್ದು ಅಕ್ಷರಶಃ ಬೇಸಿಕ್ ಮಾಡೆಲ್.

ಈ ಒಪ್ಪಂದ ಸಹಿ ಹಾಕಲ್ಪಟ್ಟು ತಯಾರಿ ಎಲ್ಲವೂ ಆರಂಭವದೊಡನೆ ವಾಯುಸೇನೆ ಕುಣಿದಾಡುತ್ತಿದ್ದರೆ ಕಾಂಗ್ರೆಸ್ಸಿಗೆ ತಳಮಳವಾಗುತ್ತಿತ್ತು. ಸುಳ್ಳು ಹೇಳುವಲ್ಲಿ ನಿಸ್ಸೀಮರಾಗಿರುವಂತಹ ಕಾಂಗ್ರೆಸ್ಸಿಗರು ರಕ್ಷಣಾ ಇಲಾಖೆಯ ವಿಚಾರದಲ್ಲೂ ಮುಲಾಜಿಲ್ಲದೇ ಪುಂಖಾನುಪುಂಖವಾಗಿ ಸುಳ್ಳುಗಳನ್ನು ಹೆಣೆದರು. ಚುನಾವಣಾ ಭಾಷಣಗಳಲ್ಲಿ ಅದೇ ವಸ್ತು. ಅಲ್ಲಿಗೂ ಸುಮ್ಮನಾಗದೇ ಸವರ್ೊಚ್ಚ ನ್ಯಾಯಾಲಯಕ್ಕೂ ಈ ವಿಚಾರವನ್ನು ಒಯ್ಯಲಾಯ್ತು. ಖರೀದಿಯಲ್ಲಿ ಯಾವ ಅವ್ಯವಹಾರವೂ ನಡೆದಿಲ್ಲವೆಂದು ನ್ಯಾಯಾಲಯ ಫೈಲನ್ನು ಪಕ್ಕಕ್ಕೆಸೆದ ಮೇಲೆಯೇ ದೇಶ ನಿರಾಳವಾಗಿದ್ದು. ಅಂದು ಮಾಡಿಕೊಂಡ ಒಪ್ಪಂದ ಇಂದು ಕೆಲಸಕ್ಕೆ ಬರುತ್ತಿದೆ. ಹತ್ತು ವರ್ಷಗಳ ಅವಧಿಯಲ್ಲಿ ರಕ್ಷಣಾ ಇಲಾಖೆಯನ್ನು ಕಾಂಗ್ರೆಸ್ಸು ಹಾಳುಗೆಡವಿತ್ತಲ್ಲ ಅದೇ ರೀತಿ ಮುಂದುವರೆದಿದ್ದರೆ ಇಂದು ಚೀನಾಕ್ಕೆ ಸೆಡ್ಡು ಹೊಡೆದು ನಿಲ್ಲುವುದು ಸಾದ್ಯವೇ ಇರುತ್ತಿರಲಿಲ್ಲ. ಭಾರತ ಈಗ ಬಲವಾಗಿದೆ ಹೀಗಾಗಿಯೇ ಚೀನಾದೆದುರು ನಾವೀಗ ಗುಟುರು ಹಾಕಬಲ್ಲೆವು!

7

ಇದೊಂದು ಪರ್ವ ಕಾಲ. ಭಾರತದ ಪುನರ್ ನಿಮರ್ಾಣದ ಹೊತ್ತೂ ಹೌದು. ಒಂದೆಡೆ ಜಿ-7 ರಾಷ್ಟ್ರಗಳ ಸಭೆಗೆ ಭಾರತವನ್ನು ಆಹ್ವಾನಿಸಿರುವುದಲ್ಲದೇ ಈಗಿರುವ ರಾಷ್ಟ್ರಗಳ ಗುಂಪು ಕೆಲಸಕ್ಕೆ ಬಾರದಾಗಿದ್ದು ಭಾರತವನ್ನೂ ಈ ತಂಡದೊಳಗೆ ಸೇರಿಸಬೇಕೆಂದು ಟ್ರಂಪ್ ಹೇಳಿದ್ದಾರೆ. ಮುಂದುವರೆದ ರಾಷ್ಟ್ರಗಳ ಈ ಗುಂಪಿಗೆ ಸೇರಿಕೊಳ್ಳುವುದು ಜಾಗತಿಕ ಭದ್ರತಾ ಮಂಡಳಿಗೆ ಸೇರಿಕೊಳ್ಳಲು ಪ್ರಮುಖ ಹೆಜ್ಜೆಯಾಗುವುದು. ಇತ್ತೀಚೆಗೆ ನರೇಂದ್ರಮೋದಿಯವರು ವಿಶ್ವಸಂಸ್ಥೆಯನ್ನೇ ಪುನರ್ ರಚಿಸಬೇಕೆಂಬ ಸೂಕ್ಷ್ಮ ಸಂದೇಶ ಕೊಟ್ಟಿರುವುದೂ ಕೂಡ ಈ ಹಿನ್ನೆಲೆಯಲ್ಲಿ ಬಲು ಮಹತ್ವ ಪಡೆಯುತ್ತದೆ. ಅಬ್ದುಲ್ ಕಲಾಂರು ಹೇಳಿದ್ದರಲ್ಲ 2020ರ ನಂತರ ಭಾರತದ್ದೇ ಯುಗ ಅಂತ. ಪುಣ್ಯಾತ್ಮ ಅದ್ಯಾವ ನಂಬಿಕೆಯಿಂದ ಅದನ್ನು ಹೇಳಿದ್ದರೋ ದೇವರೇ ಬಲ್ಲ. ಅದು ನಿಜಕ್ಕೂ ಸಾಕಾರವಾಗುತ್ತಿದೆ!!

Comments are closed.