ವಿಭಾಗಗಳು

ಸುದ್ದಿಪತ್ರ


 

ಕಾಂಗ್ರೆಸ್ ಹಾಳುಗೆಡವಿದ್ದ ರಕ್ಷಣಾ ಇಲಾಖೆಯನ್ನು ಮೋದಿ ನಾಲ್ಕೇ ವರ್ಷಗಳಲ್ಲಿ ಮರಳಿ ಹೇಗೆ ನಿರ್ಮಿಸಿದರು ಗೊತ್ತಾ?

ಮನಮೋಹನ್ ಸಿಂಗರು ಅಧಿಕಾರಕ್ಕೆ ಬಂದೊಡನೆ ಮತ್ತೆ ಅಧಿಕಾರಿಗಳ ಧಾಷ್ಟ್ರ್ಯ ಮೊದಲಿನಂತೆಯೇ ಶುರುವಾಗಿಬಿಟ್ಟಿತ್ತು. ಮುಂದೆ ರಾಷ್ಟ್ರಪತಿಗಳಾದ ಪ್ರಣಬ್ ಮುಖಜರ್ಿ ರಕ್ಷಣಾ ಸಚಿವರಾಗಿದ್ದಾಗ ಅಧಿಕಾರಿ ಮತ್ತು ಸೈನ್ಯದ ನಡುವಿನ ತಿಕ್ಕಾಟ ಮತ್ತೊಮ್ಮೆ ಬಯಲಿಗೆ ಬಂದಿತ್ತು. ಆದರೆ ಎ.ಕೆ ಆ್ಯಂಟನಿ ರಕ್ಷಣಾ ಇಲಾಖೆಯ ನೇತೃತ್ವ ವಹಿಸಿದ ನಂತರ ಸೈನ್ಯ ಮತ್ತು ಸಕರ್ಾರದ ಸಂಬಂಧ ಪೂರ್ಣ ಕಳಚಿಹೋಯ್ತು.

5

ಸ್ವಾತಂತ್ರ್ಯದ ಹೊಸ್ತಿಲಲ್ಲಿ ನಿಂತಿದ್ದೇವೆ. ಭತರ್ಿ 71 ವರ್ಷಗಳು ಮುಗಿದವು. ಸ್ವಾತಂತ್ರ್ಯವನ್ನು ಗಳಿಸಬೇಕಾದಾಗ ಪಟ್ಟ ಪಾಡು ಅಷ್ಟಿಷ್ಟಿರಲಿಲ್ಲ. ದೇಶದ ಮೂಲೆ-ಮೂಲೆಯಲ್ಲೂ ಜಾತಿ-ಮತ-ಪಂಥ-ಭೇದ ರಹಿತವಾಗಿ ಸ್ವಾತಂತ್ರ್ಯದ ಇಚ್ಛೆ ವ್ಯಕ್ತಗೊಂಡಿತ್ತು. ಗದರ್ನಂತಹ ಚಳುವಳಿಗಳು ವಿದೇಶದಲ್ಲೇ ಹುಟ್ಟಿ ಅಲ್ಲಿರುವ ಭಾರತೀಯರನ್ನು ಜೊತೆಗೂಡಿಸಿ ಬಲುದೊಡ್ಡ ವಿಕ್ರಮವನ್ನೇ ಮೆರೆದಿತ್ತು. ಸುಭಾಷರ ಐಎನ್ಎ ಹೋರಾಟ ಈ ಎಲ್ಲಾ ಸ್ವಾತಂತ್ರ್ಯ ಹೋರಾಟಗಳಿಗೂ ಕಿರೀಟ ಪ್ರಾಯವಾಗಿತ್ತು. ಆನಂತರದ ದಿನಗಳಲ್ಲಿ ಶಾಂತಿ ಮತ್ತು ಅಹಿಂಸೆಯಿಂದ ಸ್ವಾತಂತ್ರ್ಯ ಪಡೆದುಕೊಂಡೆವೆಂಬುದನ್ನು ಪದೇ ಪದೇ ಹೇಳಿಕೊಂಡದ್ದೇ ನಮ್ಮ ಬಲು ದೊಡ್ಡ ಅಪರಾಧವಾಯ್ತು. ಅದೊಂದು ರೀತಿ ಅನಗತ್ಯವಾಗಿ ಕುಡಿಸಿದ ಔಷಧಿಯಾಗಿ ಹೋಯ್ತು. ಭಾರತೀಯನಾದವನಿಗೆ ವಿಶೇಷವಾಗಿ ಹಿಂದುವಾದವನಿಗೆ ರಕ್ತಗತವಾಗಿ ಬಂದಿರುವಂಥದ್ದು ಶಾಂತಿ-ಅಹಿಂಸೆಗಳೆಲ್ಲ. ಆದರೆ ಅದನ್ನು ಮತ್ತೆ ಮತ್ತೆ ಹೇಳುವ ಮೂಲಕ ಆತನೊಳಗಿದ್ದ ಕ್ಷಾತ್ರತೇಜವನ್ನೇ ನಾಶಮಾಡಿಬಿಡಲಾಯ್ತು. ಗಾಂಧೀಜಿಯವರ ಮನಸ್ಸಿನಲ್ಲೇ ಹೀಗಿತ್ತಾ ಎಂದು ಹೇಳುವುದು ಅನುಮಾನ. ಆದರೆ ನೆಹರೂ ದೇಶದ ಅಖಂಡತೆ ಮತ್ತು ಸಾರ್ವಭೌಮತೆಗೆ ಬಲವಾದ ಪೆಟ್ಟುಕೊಟ್ಟಿದ್ದನ್ನಂತೂ ಅಲ್ಲಗಳೆಯಲು ಸಾಧ್ಯವೇ ಇಲ್ಲ. ಹೌದು. ನಾನು ಭಾರತೀಯ ಸೇನೆಯ ಬಗ್ಗೆಯೇ ಮಾತನಾಡುತ್ತಿದ್ದೇನೆ. ಲಾಲ್ ಬಹದ್ದೂರ್ ಶಾಸ್ತ್ರಿ ಬರುವವರೆಗೂ ಭಾರತೀಯ ಸೇನೆಗೆ ತನ್ನೊಳಗೊಂದು ಸತ್ವ ಅಡಗಿದೆ ಎಂಬುದು ಮರೆತೇ ಹೋಗಿತ್ತು. 1962 ರ ಅಪಮಾನಕರ ಸೋಲಿನ ನಂತರ ಭಾರತೀಯ ಸೇನೆ ಆತ್ಮಸ್ಥೈರ್ಯವನ್ನೇ ಕಳೆದುಕೊಂಡಿತ್ತು. ರಕ್ಷಣಾ ಮಂತ್ರಿಗಳಾಗಿ ಬಂದವರೆಲ್ಲಾ ಸೈನಿಕರನ್ನು ದ್ವಿತೀಯ ದಜರ್ೆ ನಾಗರಿಕರಾಗಿಯೇ ಕಾಣುತ್ತಿದ್ದರು. ಪ್ರತಿಯೊಬ್ಬ ನಾಯಕನೆದೆಯಲ್ಲೂ ಸೇನೆ ತಮ್ಮ ವಿರುದ್ಧ ತಿರುಗಿ ಬೀಳಲಿದೆ ಎಂಬ ಹೆದರಿಕೆಯೇ ಮನೆ ಮಾಡಿತ್ತು. ಮೊದಲ ಬಾರಿಗೆ ಸೇನೆಗೆ ಪೂರ್ಣ ಸ್ವಾತಂತ್ರ್ಯ ದೊರೆತಿದ್ದು ನೆಹರೂ ತೀರಿಕೊಂಡ ಮೇಲೆಯೇ. ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಆಳಿದ ನೆಹರೂ ಭಾರತವನ್ನು ಅಡ್ಡದಾರಿಗೆ ತಂದು ನಿಲ್ಲಿಸಿಬಿಟ್ಟಿದ್ದರು. ಅದನ್ನು ಸರಿಪಡಿಸುವ ಹೊಣೆ ಹೊತ್ತ ಶಾಸ್ತ್ರಿಜೀ ಆ ಕ್ಷಣದಲ್ಲೇ ಯುದ್ಧವನ್ನೂ ಎದುರಿಸಬೇಕಾಯ್ತು. ಜೈ ಜವಾನ್ ಜೈ ಕಿಸಾನ್ ಎನ್ನುತ್ತ ಶಾಸ್ತ್ರಿಜಿ ಅಗತ್ಯ ಬಿದ್ದರೆ ಪಾಕಿಸ್ತಾನದೊಳಕ್ಕೂ ನುಗ್ಗಿರಿ ಎಂಬ ಹೇಳಿಕೆ ಕೊಟ್ಟಿದ್ದಿತ್ತಲ್ಲ ಅದು ಸೈನಿಕರ ಆತ್ಮಶಕ್ತಿಯನ್ನು ನೂರ್ಮಡಿ ವೃದ್ಧಿಸಿತ್ತು. ಆನಂತರ ಇಂದಿರಾ ಫೀಲ್ಡ್ ಮಾರ್ಶಲ್ ಮಾಣಿಕ್ಷಾರೊಂದಿಗೆ ನಡೆದುಕೊಂಡ ರೀತಿ, ಸೈನಿಕರ ಅಗತ್ಯಗಳನ್ನು ಪೂರೈಸುವಲ್ಲಿ ಸೋತ ಸಕರ್ಾರಗಳು, ಕೊನೆಗೆ ಸೈನ್ಯಕ್ಕೆ ಮುಖ್ಯಾಧಿಕಾರಿಯನ್ನು ನೇಮಿಸುವಾಗ ಇರುವ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಬೇಕಾದವರನ್ನೇ ಆರಿಸಿಕೊಳ್ಳುವ ಪರಂಪರೆ ಇವೆಲ್ಲವೂ ಭಾರತೀಯ ಸೇನೆಯನ್ನು ಹತಭಾಗ್ಯವಾಗಿಸಿದ್ದವು. ಅದಕ್ಕೆ ಮತ್ತೊಮ್ಮೆ ಜೀವಕಳೆ ತುಂಬಿದವರೇ ಜಾಜರ್್ ಫನರ್ಾಂಡಿಸ್!

ಅಟಲ್ ಬಿಹಾರಿ ವಾಜಪೇಯಿಯವರ ಅವಧಿಯಲ್ಲಿ ರಕ್ಷಣಾ ಮಂತ್ರಿಯಾಗಿ ಬಂದ ಜಾಜರ್್ ಸೈನಿಕರ ಮತ್ತು ಸಕರ್ಾರದ ನಡುವೆ ಇರುವ ಅಧಿಕಾರಿ ವರ್ಗದ ಧಾಷ್ಟ್ರ್ಯವನ್ನು ತೆಗೆದೊಗೆಯಲು ಅಪಾರ ಪ್ರಯತ್ನ ಪಟ್ಟರು. ನೇರವಾಗಿ ರಕ್ಷಣಾ ಸಚಿವರೇ ಸೈನಿಕರನ್ನು ಭೇಟಿ ಮಾಡಿ ಮಾತನಾಡಿಸುವ, ಅವರು ಕೆಲಸ ಮಾಡುವ ಅತ್ಯಂತ ಕಠಿಣ ಪ್ರದೇಶಗಳಿಗೆ ತಾವೂ ಹೋಗುವ ರೂಢಿ ಮಾಡಿಕೊಂಡರು. ಸೈನಿಕರೊಂದಿಗೆ ಹಿಮದ ಬೆಟ್ಟಗಳಲ್ಲಿ ಕಾಣಿಸಿಕೊಂಡವರು ಜಾಜರ್್. ಪದೇ ಪದೇ ಪತನಗೊಳ್ಳುವ ವಿಮಾನಗಳು, ಪೈಲಟ್ಗಳ ಆತ್ಮಸ್ಥೈರ್ಯವನ್ನು ಕುಂದಿಸಿದಾಗ ಅಂಥದ್ದೇ ವಿಮಾನವೊಂದರಲ್ಲಿ ತಾನೂ ಕೂತು ಹಾರಾಟ ನಡೆಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿಬಿಟ್ಟಿದ್ದರು.

4

ಬಹಳ ಜನರು ಮರೆತೇ ಹೋಗಿರುವ ಸಂಗತಿಯೊಂದಿದೆ. ಸಿಯಾಚಿನ್ ಹಿಮ ಬಂಡೆಗಳಲ್ಲಿ ಕೆಲಸ ಮಾಡುವ ಸೈನಿಕರಿಗಾಗಿ ಮಂಜಿನ ಸ್ಕೂಟರ್ಗಳು ಬೇಕೆಂದು ಸೈನ್ಯ ಬೇಡಿಕೆ ಇಟ್ಟಿತ್ತು. ಆದರೆ ದೆಹಲಿಯಲ್ಲಿ ಎಸಿ ರೂಮಿನಲ್ಲಿ ಕುಳಿತ ಅಧಿಕಾರಿ ವರ್ಗಕ್ಕೆ ಸಿಯಾಚಿನ್ನ ಪರಿಸ್ಥಿತಿ ಅರ್ಥವಾಗಬೇಕಲ್ಲ. ಒಂದೂವರೆ ವರ್ಷಗಳ ಕಾಲ ಈ ಸ್ಕೂಟರ್ ಖರೀದಿಗೆ ನಾನಾ ಕಾರಣಗಳನ್ನು ಕೊಟ್ಟು ಖರೀದಿಯನ್ನು ತಡೆಹಿಡಿದಿತ್ತು. ವಿಚಾರ ಜಾಜರ್್ ಕಿವಿಗೆ ಬಿದ್ದೊಡನೆ ಕುಪಿತರಾಗಿ ಇದಕ್ಕೆ ಕಾರಣರಾದ ಮೂರು ಅಧಿಕಾರಿಗಳನ್ನು ಸಿಯಾಚಿನ್ನ ಮಂಜಿನ ಬೆಟ್ಟಗಳಿಗೆ ವಗರ್ಾಯಿಸುವ ನಿರ್ಣಯ ಕೈಗೊಂಡರು. ಅಧಿಕಾರ ವಲಯದಲ್ಲಿ ಈ ವಿಚಾರ ಆಕ್ರೋಶಕ್ಕೆ ಕಾರಣವಾಗಿತ್ತಾದರೂ ಸಿಯಾಚಿನ್ನ ತುದಿಯಲ್ಲಿ ಕೆಲಸ ಮಾಡುವ ಸೈನಿಕನ ಆತ್ಮವಿಶ್ವಾಸ ನೂರು ಪಟ್ಟು ಹೆಚ್ಚಾಗಿಬಿಟ್ಟಿತ್ತು. ಮೈನಸ್ 60 ಡಿಗ್ರಿ ತಾಪಮಾನದ ಸಿಯಾಚಿನ್ ಮತ್ತು ಪ್ಲಸ್ 50 ತಾಪಮಾನದ ರಾಜಸ್ಥಾನದ ಮರುಭೂಮಿಗಳಲ್ಲಿ ಒಂದೆರಡು ವರ್ಷ ಸೈನಿಕರ ಕುರಿತಂತೆ ನಿರ್ಣಯ ಕೈಗೊಳ್ಳುವ ಅಧಿಕಾರಿಗಳನ್ನು ಕೆಲಸ ಮಾಡಲು ಬಿಡಬೇಕು. ಆಗ ಅವರಿಗೆ ಆದ್ಯತೆಯ ಆಧಾರದ ಮೇಲೆ ಯಾವ ಕೆಲಸ ಮಾಡಬೇಕು ಎಂಬುದು ಅರಿವಾಗುತ್ತದೆ. 1948 ರಲ್ಲಿ ಮೊದಲ ಜೀಪ್ ಸ್ಕಾಂಡಲ್ ನಡೆದಾಗಿನಿಂದಲೂ ಸೈನ್ಯವನ್ನು ಅಧಿಕಾರಿಗಳೇ ತಮ್ಮ ತೆಕ್ಕೆಗೆ ತೆಗೆದುಕೊಂಡು ಬಿಟ್ಟಿದ್ದಾರೆ. ಅದಕ್ಕೆ ದೊಡ್ಡದೊಂದು ತಡೆ ಹಾಕಿದ್ದು ಅಟಲ್ ಬಿಹಾರಿ ವಾಜಪೇಯಿಯವರ ಸಕರ್ಾರವೇ!

ಆ ಸಕರ್ಾರ ಉರುಳಿ ಮನಮೋಹನ್ ಸಿಂಗರು ಅಧಿಕಾರಕ್ಕೆ ಬಂದೊಡನೆ ಮತ್ತೆ ಅಧಿಕಾರಿಗಳ ಧಾಷ್ಟ್ರ್ಯ ಮೊದಲಿನಂತೆಯೇ ಶುರುವಾಗಿಬಿಟ್ಟಿತ್ತು. ಮುಂದೆ ರಾಷ್ಟ್ರಪತಿಗಳಾದ ಪ್ರಣಬ್ ಮುಖಜರ್ಿ ರಕ್ಷಣಾ ಸಚಿವರಾಗಿದ್ದಾಗ ಅಧಿಕಾರಿ ಮತ್ತು ಸೈನ್ಯದ ನಡುವಿನ ತಿಕ್ಕಾಟ ಮತ್ತೊಮ್ಮೆ ಬಯಲಿಗೆ ಬಂದಿತ್ತು. ಆದರೆ ಎ.ಕೆ ಆ್ಯಂಟನಿ ರಕ್ಷಣಾ ಇಲಾಖೆಯ ನೇತೃತ್ವ ವಹಿಸಿದ ನಂತರ ಸೈನ್ಯ ಮತ್ತು ಸಕರ್ಾರದ ಸಂಬಂಧ ಪೂರ್ಣ ಕಳಚಿಹೋಯ್ತು. ಕಾಂಗ್ರೆಸ್ಗೆ ತನಗಂಟಿದ ಬೋಫೋಸರ್್ ಕಳಂಕವನ್ನು ಕಳೆದುಕೊಳ್ಳುವ ಇಚ್ಛೆ ಬಲು ತೀವ್ರವಾಗಿತ್ತು. ದೇಶದ ಸುರಕ್ಷತೆಯನ್ನು ಬಲಿಕೊಟ್ಟಾದರೂ ಬೋಫೋಸರ್್ನ ಕೊಳೆ ತೊಳೆಯಬಲ್ಲಂತ ವ್ಯಕ್ತಿಯನ್ನು ಅದು ಅರಸುತ್ತಿತ್ತು. ಹೀಗಾಗಿಯೇ ಕೇರಳದ ಪತ್ರಿಕೆಗಳಿಂದ ಮಿಸ್ಟರ್ ಕ್ಲೀನ್ ಎಂಬ ಬಿರುದು ಪಡೆದಿದ್ದ ಆ್ಯಂಟನಿಯನ್ನು ಆಕಾಶದಿಂದಿಳಿದ ನಕ್ಷತ್ರವೆಂಬಂತೆ ರಕ್ಷಣಾ ಇಲಾಖೆಗೆ ತಂದು ಕೂರಿಸಲಾಯ್ತು. ತಮ್ಮ ಇಡಿಯ ಅಧಿಕಾರಾವಧಿಯಲ್ಲಿ ಯಾವುದೇ ನಿರ್ಣಯವನ್ನು ಧೈರ್ಯವಾಗಿ ತೆಗೆದುಕೊಳ್ಳುವಲ್ಲಿ ವಿಫಲವಾದ ಆ್ಯಂಟನಿ ಧೈರ್ಯವಾಗಿ ತೆಗೆದುಕೊಳ್ಳುತ್ತಿದ್ದ ನಿರ್ಣಯ ಕಚೇರಿಯಲ್ಲಿ ಸಂಜೆ ಕುಡಿಯಲು ಟೀ ಬೇಕೋ, ಕಾಫಿ ಬೇಕೋ ಎನ್ನುವಲ್ಲಿ ಮಾತ್ರವೆಂದು ದೆಹಲಿಯ ಪಡಸಾಲೆಗಳಲ್ಲಿ ಜೋಕು ಹರಿದಾಡುತ್ತಿತ್ತು. ಏಳೂವರೆ ವರ್ಷಗಳ ಕಾಲ ರಕ್ಷಣಾ ಸಚಿವರಾಗಿ ಕಾರ್ಯ ನಿರ್ವಹಿಸಿದ ಆ್ಯಂಟನಿ ಭಾರತೀಯ ಸೇನೆಯನ್ನು ನೆಹರೂ ಕಾಲಕ್ಕಿಂತಲೂ ಕೆಟ್ಟ ಸ್ಥಿತಿಗೊಯ್ದುಬಿಟ್ಟರು. ಸೈನ್ಯದ ಕುರಿತಂತೆ ಎಲ್ಲ ನಿರ್ಣಯಗಳನ್ನು ದೆಹಲಿಯಲ್ಲಿ ಕುಳಿತ ಅಧಿಕಾರಿ ವರ್ಗವೇ ತೆಗೆದುಕೊಳ್ಳುತ್ತಿತ್ತು. ತಮ್ಮ ಕ್ಲೀನ್ ಇಮೇಜ್ ಉಳಿಸಿಕೊಳ್ಳುವ ಧಾವಂತದಲ್ಲಿ ಸೈನ್ಯಕ್ಕೆ ತುತರ್ಾಗಿ ಆಗಬೇಕಾಗಿದ್ದ ಖರೀದಿಗಳು ನಿಂತೇ ಹೋಗಿದ್ದವು. ಭಾರತ ಉಪಯೋಗಿಸುತ್ತಿದ್ದ ಟ್ಯಾಂಕುಗಳು, ಫೈಟರ್ ಜೆಟ್ಗಳು, ಯುದ್ಧ ನೌಕೆಗಳು 1980ರ ಕಾಲಘಟ್ಟದ್ದಾಗಿದ್ದವು. ಹೋವಿಡ್ಜರ್ ಅನ್ನು ನಾವು ಖರೀದಿಸಿದ್ದು 1987 ರಲ್ಲೇ ಕೊನೆಯಾಗಿತ್ತು. 1999 ರಿಂದ ಯುದ್ಧ ವಿಮಾನಗಳಿಗಾಗಿ ಮಂಡಿಸಿದ ಬೇಡಿಕೆ ಹಾಗೆಯೇ ಉಳಿದಿತ್ತು. ಸುಮಾರು ನೂರು ಶತಕೋಟಿ ಡಾಲರ್ಗಳಷ್ಟು ಸೈನಿಕ ಅವಶ್ಯಕತೆಗಳ ಪಟ್ಟಿಯಿತ್ತು. ಎರಡೆರಡು ಅಧಿಕಾರಾವಧಿಯನ್ನು ಕಂಡ ಯುಪಿಎ ವ್ಯವಸ್ಥಿತವಾಗಿ ಇವುಗಳನ್ನು ಪೂರೈಸುವ ಪ್ರಯತ್ನವನ್ನು ಎಂದಿಗೂ ಮಾಡಲೇ ಇಲ್ಲ. 32 ಶಸ್ತ್ರಾಸ್ತ್ರ ಕಾಖರ್ಾನೆ, 3 ಶಿಪ್ಯಾಡರ್್, 8 ಸೈನ್ಯಕ್ಕೆ ಸಂಬಂಧ ಪಟ್ಟಂತ ಪಬ್ಲಿಕ್ ಸೆಕ್ಟರ್ ಯುನಿಟ್ಗಳು, 52 ಡಿಆರ್ಡಿಒ ಪ್ರಯೋಗಾಲಯಗಳನ್ನು ಹೊಂದಿದ್ದರೂ, ಭಾರತ ಸೈನ್ಯಕ್ಕೆ ಸಂಬಂಧಪಟ್ಟ ಒಂದು ವಿಮಾನವನ್ನು ನಿಮರ್ಿಸಿ ಪೂರೈಸುವಲ್ಲಿ ಸೋತುಹೋಯ್ತು. ಇದಕ್ಕೆ ವಿಜ್ಞಾನಿಗಳು ಖಂಡಿತ ಕಾರಣರಲ್ಲ; ಬದಲಿಗೆ ನಿರ್ಣಯವನ್ನು ತೆಗೆದುಕೊಂಡು ಜವಾಬ್ದಾರಿ ಕೊಡಬಲ್ಲ ಸಮರ್ಥ ನಾಯಕನದ್ದೇ ಕೊರತೆ. ಆ್ಯಂಟನಿ ರಕ್ಷಣಾ ಸಚಿವರಾದಾಗ ಭಾರತ ಜಗತ್ತಿನ ಆರನೇ ದೊಡ್ಡ ಶಸ್ತ್ರಾಸ್ತ್ರ ಆಮದು ರಾಷ್ಟ್ರವಾಗಿತ್ತು. ಚೀನಾ ನಂಬರ್ ಒನ್ ಸ್ಥಾನದಲ್ಲಿತ್ತು. ಹತ್ತೇ ವರ್ಷಗಳಲ್ಲಿ ಭಾರತ ಜಗತ್ತಿನ ಅತಿ ದೊಡ್ಡ ಶಸ್ತ್ರ ಆಮದು ರಾಷ್ಟ್ರವಾಗಿ ಬೆಳೆದು ನಿಂತರೆ ಚೀನಾ ಜಗತ್ತಿನ ಐದನೇ ದೊಡ್ಡ ಶಸ್ತ್ರಾಸ್ತ್ರ ರಫ್ತು ರಾಷ್ಟ್ರವಾಗಿ ಬೆಳೆದಿದೆ. ಇದು ಮನಮೋಹನ್ಸಿಂಗರ ಸಕರ್ಾರ ನಮಗೆ ಕೊಟ್ಟಿರುವ ಕೊಡುಗೆ!

ಈ ಅವಧಿಯಲ್ಲೇ ಅಗಸ್ಟಾ ವೆಸ್ಟ್ಲ್ಯಾಂಡ್ನೊಂದಿಗೆ ಮಾಡಿಕೊಂಡ ವಿವಿಐಪಿ ಹೆಲಿಕಾಪ್ಟರ್ಗಳ ಡೀಲನ್ನು ಭಾರೀ ಹಗರಣ ಹೊರಬಂದಿದ್ದರಿಂದ ಭಾರತ ಮುರಿದುಕೊಂಡಿತು. ಟ್ರಾಟ್ರಾ ಟ್ರಕ್ ಖರೀದಿಯಲ್ಲಿ 14 ಕೋಟಿ ಲಂಚವನ್ನು ತನಗೆ ತೆಗೆದುಕೊಳ್ಳುವಂತೆ ಕೇಳಿಕೊಡಿದ್ದರೆಂದು ಜನರಲ್ ವಿ.ಕೆ ಸಿಂಗ್ ರಕ್ಷಣಾ ಸಚಿವರಿಗೆ ಖುದ್ದು ತಿಳಿಸಿದರೂ ಪರಿಣಾಮ ಕಂಡುಬಂದಿರಲಿಲ್ಲ. ಸದನದಲ್ಲಿ ಈ ಅವ್ಯವಹಾರದ ಕುರಿತಂತೆ ಗಲಾಟೆಯಾದಾಗ ತನಗೆ ಲಿಖಿತ ದೂರು ಬಂದಿರಲಿಲ್ಲವಾದ್ದರಿಂದ ತಾನು ನಿರ್ಣಯ ಕೈಗೊಳ್ಳಲಿಲ್ಲವೆಂದಿದ್ದರು ಆ್ಯಂಟನಿ. ಅವರ ಅವಧಿಯಲ್ಲೇ ಐಎನ್ಎಸ್ ಸಿಂಧುರತ್ನಕ್ಕೆ ಬೇಕಾಗಿರುವ ಸ್ವದೇಶಿ ನಿಮರ್ಿತ ಬ್ಯಾಟರಿಗಳನ್ನೂ ಕೊಂಡುಕೊಳ್ಳಲಾಗದಷ್ಟು ಅಸಹಾಯಕತೆಗೆ ಸಿಲುಕಿದ ಅಡ್ಮಿರಲ್ ಜೋಷಿ ಬಲು ಖೇದದಿಂದ ರಾಜಿನಾಮೆ ಕೊಟ್ಟಿದ್ದರು. ಹಳೆಯ ಬ್ಯಾಟರಿಗಳನ್ನೇ ಬಳಸುತ್ತಿದ್ದ ಪರಿಣಾಮ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ನೌಕಾಧಿಕಾರಿಗಳು ಮೃತಪಟ್ಟಿದ್ದು ದೇಶದಲ್ಲಿ ಬಲು ದೊಡ್ಡ ಚಚರ್ೆಗೆ ಗ್ರಾಸವಾಗಿತ್ತು. ಅಡ್ಮಿರಲ್ ಜೋಷಿ ರಾಜಿನಾಮೆ ಕೊಡುವಾಗ ‘ಇಸ್ತ್ರಿ ಮಾಡಿದ ಸಮವಸ್ತ್ರ ಧರಿಸಲು ನಾನು ಸೈನ್ಯದ ಮುಖ್ಯಸ್ಥನಾಗಿಲ್ಲ. ನನ್ನ ನಂಬಿರುವ ಸೈನಿಕರಿಗಾಗಿ ನಿರ್ಣಯ ತೆಗೆದುಕೊಳ್ಳಲಾಗದಿದ್ದರೆ ನನಗೆ ಈ ಹುದ್ದೆಯೇ ಬೇಡ’ ಎಂದಿದ್ದರು. ಅವರನ್ನು ರಮಿಸಿ ರಾಜಿನಾಮೆಯನ್ನು ಮರಳಿಕೊಟ್ಟು ವ್ಯವಸ್ಥೆ ಸರಿಪಡಿಸಬೇಕಿದ್ದ ಆ್ಯಂಟನಿ ತಕ್ಷಣವೇ ರಾಜಿನಾಮೆಯನ್ನು ಅಂಗೀಕರಿಸಿ ಮುಂದಿನ ಅನೇಕ ದಿನಗಳ ಕಾಲ ಆ ಹುದ್ದೆಗೆ ಯಾರನ್ನೂ ಕರೆತರದೆ ಭಾರತೀಯ ನೌಕಾಪಡೆಯನ್ನು ಅಕ್ಷರಶಃ ನಾಯಕ ರಹಿತವಾಗಿಸಿಬಿಟ್ಟಿದ್ದರು. ಅತ್ತ ಜನರಲ್ ವಿ.ಕೆ ಸಿಂಗ್ ರಕ್ಷಣಾ ಇಲಾಖೆಯನ್ನು ಕೋಟರ್ಿಗೆಳೆದು ತಂದಿದ್ದರು. ಅವರ ಪ್ರಾಮಾಣಿಕತೆಯ ಮೇಲೂ ಗೂಬೆ ಕೂರಿಸುವ ಪ್ರಯತ್ನವನ್ನು ಕಾಂಗ್ರೆಸ್ ಸಕರ್ಾರ ಮಾಡಿಯೇ ಇತ್ತು. ಬಹುಶಃ ದೇಶ ಕಂಡ ಅತ್ಯಂತ ಕೆಟ್ಟ ರಕ್ಷಣಾ ಸಚಿವರೆಂಬ ಅಭಿದಾನ ಆ್ಯಂಟನಿಯವರಿಗೇ ಸಿಗಬಹುದು. ಸಕರ್ಾರದೊಳಗೆ ಅಧಿಕಾರ ಕಳೆದುಕೊಳ್ಳುವ ಒಂದು ವರ್ಷಕ್ಕೂ ಮುನ್ನ ಸೈನ್ಯ ದಂಗೆಯೇಳಬಹುದೆಂಬ ಭಯವೂ ನಿಮರ್ಾಣವಾಗಿತ್ತೆಂದು ಆಪ್ತ ವಲಯದವರನೇಕರು ಈಗಲೂ ಹೇಳುತ್ತಾರೆ.

3

ಇಂತಹ ಪರಿಸ್ಥಿತಿಯಿಂದ ಭಾರತೀಯ ಸೇನೆಯನ್ನು ಮೇಲೆತ್ತುವ ಹೊಣೆಗಾರಿಕೆ ನರೇಂದ್ರಮೋದಿಯವರ ಹೆಗಲಿಗೇರಿತ್ತು. ಹೀಗಾಗಿಯೇ ಅವರು ಜನರಲ್ ವಿ.ಕೆ ಸಿಂಗ್ರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡಿದ್ದು. ಇದು ಹತ್ತು ವರ್ಷಗಳಿಂದ ಸೈನ್ಯದ ಮೇಲೆ ಮೆರೆಯುತ್ತಿದ್ದ ಅಧಿಕಾರಿಗಳಿಗೆ ಸ್ಪಷ್ಟವಾದ ಮೊದಲ ಸಂದೇಶವಾಗಿತ್ತು. ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮನೋಹರ್ ಪರಿಕ್ಕರ್ರವರ ಸರಳತೆಯನ್ನು ಅನೇಕರು ಆಡಿಕೊಂಡರಾದರೂ ಅವರ ಪ್ರಾಮಾಣಿಕತೆಯ ವಿಚಾರದಲ್ಲಿ ಮಾತ್ರ ಯಾರಿಗೂ ಅನುಮಾನವಿರಲಿಲ್ಲ. ಗೋವಾದ ಮುಖ್ಯಮಂತ್ರಿಯಾಗಿದ್ದ ಈ ಐಐಟಿ ಪಧವೀಧರನನ್ನು ಮೋದಿ ಹುಡುಕಿಯೇ ಕರೆದುಕೊಂಡು ಬಂದಿದ್ದರು. ಹಿಂದಿನ ಸಕರ್ಾರದ ದಶಕದಷ್ಟು ಹಳೆಯ ಪಾಪವನ್ನು ತೊಳೆಯುವ ಜವಾಬ್ದಾರಿಯನ್ನು ಹೊತ್ತ ಪರಿಕ್ಕರ್ ಸೈನ್ಯದೊಂದಿಗೆ ನೇರವಾದ ಸಂಪರ್ಕ ಬೆಸೆದುಕೊಂಡರು. ಕಶ್ಮೀರದಲ್ಲಿ ಕಾರ್ಯಚರಣೆಗೆ ನಿಂತಿರುವ ಸೈನಿಕರಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಲ್ಲದೇ ‘ಬಂದೂಕಿನೊಂದಿಗೆ ಭಾರತದೊಳಕ್ಕೆ ನುಸುಳುವ ಭಯೋತ್ಪಾದಕನನ್ನು ಪ್ರೇಮದಿಂದ ಅಪ್ಪಿಕೊಳ್ಳಬೇಕಾದ ಅಗತ್ಯವಿಲ್ಲ. ಅಗತ್ಯ ಬಿದ್ದರೆ ಭಯೋತ್ಪಾದಕನನ್ನು ಭಯೋತ್ಪಾದನೆಯಿಂದಲೇ ಮುಗಿಸುತ್ತೇವೆ’ ಎಂದಿದ್ದರು. ಮಯನ್ಮಾರಿಗೆ ನುಗ್ಗಿ ಅಲ್ಲಿ ಅಡಗಿರುವ ಉಗ್ರರನ್ನು ಕೊಲ್ಲಬೇಕೆಂಬ ಸೈನ್ಯದ ಬೇಡಿಕೆಗೆ ಪೂರ್ಣ ಸಹಮತ ವ್ಯಕ್ತಪಡಿಸಿದ ಪರಿಕ್ಕರ್ ಎಲ್ಲ ವ್ಯವಸ್ಥೆಗಳನ್ನೂ ನಿಮರ್ಿಸಿಕೊಟ್ಟಿದ್ದರು. ಪಿಒಕೆಯಲ್ಲಿ ನಡೆದ ಸಜರ್ಿಕಲ್ ಸ್ಟ್ರೈಕಿಗೂ ಕೂಡ ಸೈನಿಕರಿಗೆ ಅವರು ನೀಡಿದ ಮುಕ್ತ ಸ್ವಾತಂತ್ರ್ಯವೇ ಕಾರಣ. ಬಹುಶಃ ಜಾಜರ್್ ಫನರ್ಾಂಡಿಸ್ರ ನಂತರ ಸೈನಿಕರ ಪರವಾಗಿ ವಾದಿಸಿದ ಸಮರ್ಥ ರಕ್ಷಣಾ ಸಚಿವರು ಪರಿಕ್ಕರರೇ. ಈ ನಾಲ್ಕು ವರ್ಷಗಳಲ್ಲಿ ಭಾರತೀಯ ಸೇನೆಯ ಆತ್ಮಸ್ಥೈರ್ಯ ಅದೆಷ್ಟು ವೃದ್ಧಿಯಾಗಿದೆ ಎಂದರೆ ಮೇಜರ್ ಗೊಗೊಯ್ ಕಲ್ಲೆಸೆಯುತ್ತಿದ್ದ ಕಶ್ಮೀರಿ ಪುಂಡನನ್ನು ತನ್ನ ಜೀಪಿಗೆ ಕಟ್ಟಿ ಊರೆಲ್ಲ ಮೆರವಣಿಗೆ ಮಾಡಿಸಿಬಿಟ್ಟರು. ದೇಶದಲ್ಲೆಲ್ಲಾ ಈ ಕುರಿತಂತೆ ಬುದ್ಧಿಜೀವಿಗಳು ಆಕ್ರೋಶ ವ್ಯಕ್ತಪಡಿಸಿದಾಗ ಸೇನೆ ಮುಲಾಜು ನೋಡದೇ ಗೊಗೊಯ್ ಮಾಡಿದ್ದರಲ್ಲಿ ಯಾವ ತಪ್ಪಿಲ್ಲವೆಂದು ಘೋಷಿಸಿತು. ಈ ಆತ್ಮಶಕ್ತಿ ವೃದ್ಧಿಯಿಂದಾಗಿಯೇ ಕಶ್ಮೀರದಲ್ಲಿ ನಡೆಯುತ್ತಿರುವ ಆಪರೇಶನ್ ಆಲ್ ಔಟ್ ಇಂದು ಯಶಸ್ವಿ ಕಾಯರ್ಾಚರಣೆಯಾಗಿ ಮಾರ್ಪಟ್ಟಿರೋದು. ಮೋದಿ ಅಧಿಕಾರಕ್ಕೆ ಬಂದ ನಂತರವೇ ಸೈನಿಕರ ಬಹುಕಾಲದ ಬೇಡಿಕೆಯಾಗಿದ್ದ ಒಆರ್ಒಪಿಗೆ ಹಸಿರು ನಿಶಾನೆ ದೊರೆತಿದ್ದು. ಅವರು ತೆಗೆದುಕೊಂಡ ಕಠಿಣ ಆಥರ್ಿಕ ನೀತಿಯಿಂದಾಗಿಯೇ ಕಾಶ್ಮೀರದಲ್ಲಿ ಕಲ್ಲೆಸೆಯುತ್ತಿದ್ದ ತರುಣರಿಗೆ ಬಲುದೊಡ್ಡ ಪ್ರಮಾಣದಲ್ಲಿ ಆಥರ್ಿಕ ಸಹಾಯ ನಿಂತುಹೋಗಿದ್ದು. ಅಷ್ಟೇ ಅಲ್ಲ, ಈ ಅವಧಿಯಲ್ಲೇ 50,000 ಬುಲೆಟ್ ಪ್ರೂಫ್ ಜಾಕೆಟ್ಗಳ ಖರೀದಿಗೂ ಅನುಮತಿ ದೊರೆತಿದ್ದು. ಮೂನರ್ಾಲ್ಕು ವರ್ಷಗಳಿಂದ ಚೌಕಷಿಯಲ್ಲೇ ಕಳೆದಿದ್ದ ರಫೇಲ್ ಡೀಲ್ ಪೂರ್ಣಗೊಂಡು ಪೂರೈಕೆಯಾಗುವಂತ ಹಂತಕ್ಕೆ ಬಂದು ನಿಂತದ್ದು ಈ ಅವಧಿಯಲ್ಲೇ. ಮೇಕ್ ಇನ್ ಇಂಡಿಯಾದ ಮೂಲಕ ಶಸ್ತ್ರಾಸ್ತ್ರಗಳ ಶೇಕಡಾ 60 ರಷ್ಟು ಬಿಡಿಭಾಗವನ್ನು ಭಾರತದಲ್ಲೇ ನಿಮರ್ಿಸಿ ಅಷ್ಟು ಪ್ರಮಾಣದ ಆಮದನ್ನು ಕಡಿತಗೊಳಿಸಿದ್ದು ಈ ನಾಲ್ಕು ವರ್ಷಗಳ ಅವಧಿಯಲ್ಲೇ. ಆ್ಯಂಟನಿಯ ಕಾಲಕ್ಕೆ ಸರಿಯಾದ ಯೋಜನೆಯನ್ನು ರೂಪಿಸದೇ ಯದ್ವಾ ತದ್ವಾ ಖರೀದಿಗೆ ಮಾಡಿದ್ದ ಆಲೋಚನೆಯನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿ ವ್ಯವಸ್ಥಿತಗೊಳಿಸಿದ್ದರ ಪರಿಣಾಮ ಮಿಸೈಲ್ ಖರೀದಿಯೊಂದರಲ್ಲೇ ಭಾರತ 48 ಸಾವಿರ ಕೋಟಿ ರೂಪಾಯಿ ಉಳಿಸಿತು. ಅಮೆರಿಕಾದ ಖಾತೆಯೊಳಗೆ ಶಸ್ತ್ರಾಸ್ತ್ರ ಖರೀದಿಗೆಂದು 20,000 ಸಾವಿರ ಕೋಟಿ ರೂಪಾಯಿಯನ್ನು ಹಾಕಿ ರಕ್ಷಣಾ ಇಲಾಖೆ ಮರೆತೇಬಿಟ್ಟಿತ್ತು. ಹಳೆಯ ಕಡತಗಳನ್ನೆಲ್ಲಾ ತೆಗಿಸಿ ಅಧ್ಯಯನ ಮಾಡುವಾಗ ಈ ಹಣದ ವಿವರ ಪಡೆದ ಪರಿಕ್ಕರ್ ಆ ಹಣವನ್ನು ಮರಳಿ ತರಿಸಿಕೊಂಡು ರಕ್ಷಣಾ ಇಲಾಖೆಯ ಶಕ್ತಿಯನ್ನು ಹೆಚ್ಚಿಸಿದರು.

2

ಈಗ ಮತ್ತೊಬ್ಬ ಸಮರ್ಥ ನಾಯಕಿ ನಿರ್ಮಲಾ ಸೀತಾರಾಮನ್ ಆ ಸ್ಥಾನಕ್ಕೆ ಬಂದು ಕುಳಿತಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಭಾರತವನ್ನು ಸದಾ ಯುದ್ಧ ಸನ್ನದ್ಧವಾಗಿಡಬೇಕೆಂಬುದೇ ತನ್ನ ಗುರಿ ಎಂಬ ಮಾತನ್ನು ಬಲು ಸ್ಪಷ್ಟವಾಗಿ ಹೇಳುವ ಮೂಲಕ ಆಕೆ ನೆಹರು ಕಾಲದ ಸೈನಿಕ ಚಿಂತನೆಗಳನ್ನು ಮೂಲೆಗುಂಪು ಮಾಡಿ ನಿಂತಿದ್ದಾರೆ. ಮೋದಿಯ ಆಯ್ಕೆ ಸಾಮಾನ್ಯವಾದ್ದಲ್ಲ. ನಿರ್ಮಲಾ ಸೀತಾರಾಮನ್ ಪ್ರಾಮಾಣಿಕತೆಯ ವಿಚಾರದಲ್ಲಿ ಆ್ಯಂಟನಿಯಷ್ಟೇ ಗೌರವಕ್ಕೆ ಪಾತ್ರರು. ಆದರೆ ನಿರ್ಣಯಗಳನ್ನು ಕೈಗೊಳ್ಳುವ ವಿಚಾರದಲ್ಲಿ ಆ್ಯಂಟನಿಗಿಂತ ಸಾವಿರ ಪಾಲು ಸಮರ್ಥರು. ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯವನ್ನು ಇವರೆಲ್ಲರೂ ಸೇರಿ ಉಳಿಸಿಕೊಡಬಲ್ಲರೆಂಬ ಭರವಸೆ ಈಗ ನಿಶ್ಚಯವಾಗಿ ಭಾರತೀಯರಲ್ಲಿ ಮನೆ ಮಾಡಿದೆ.

ಅಂದಹಾಗೆ 72ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

Comments are closed.