ವಿಭಾಗಗಳು

ಸುದ್ದಿಪತ್ರ


 

ಕಾಫಿ ಮಾಂತ್ರಿಕನ ಸಾವು, ಎಷ್ಟೆಲ್ಲಾ ಪಾಠ!

ವ್ಯಾಪಾರ ಎನ್ನುವುದು ಇತರರಿಗೆ ದ್ರೋಹ ಮಾಡಿ ಬದುಕುವ ಮಾರ್ಗವಲ್ಲ. ಬದಲಿಗೆ ಎಲ್ಲರನ್ನೂ ಬೆಸೆಯುವ ರಾಜಮಾರ್ಗ. ವರ್ಣದ ದೃಷ್ಟಿಯಿಂದಲೇ ನೋಡುವುದಾದರೆ ಚಿಂತಕರನ್ನು, ಕದನ-ಕಲಿಗಳನ್ನು, ಶ್ರಮಿಕ ವರ್ಗವನ್ನು ಬೆಸೆಯಬಲ್ಲ ಏಕಮಾತ್ರ ಕೊಂಡಿ ವ್ಯಾಪಾರಿಗಳದ್ದೇ.

ಒಂದಿಡೀ ವಾರ ಕಾಫಿಡೇಯ ಸಿದ್ಧಾಥರ್್ ಅವರ ಸಾವಿನದ್ದೇ ಚಚರ್ೆ. ಅವರ ಸಾವು ನಿಸ್ಸಂಶಯವಾಗಿ ಮಾನಸಿಕ ಕ್ಷೊಭೆಯನ್ನು ಉಂಟುಮಾಡುವಂಥದ್ದೇ. ಸಾವಿರಾರು ಜನರಿಗೆ ಉದ್ಯೋಗ ಕೊಟ್ಟ ಉದ್ಯಮಿಯೊಬ್ಬ ಹೀಗೆ ಅನಾಥವಾಗಿ ಸಾಯುವುದು ದುರಂತವೇ ಸರಿ. ಇದು ವ್ಯಕ್ತಿಯೊಬ್ಬನ ಸಾವಲ್ಲ. ಆದರೆ ಉದ್ಯಮಶೀಲತೆಯ ಸಾವು. ಸ್ಟಾಟರ್್ಅಪ್ಗಳ ಕಲ್ಪನೆಯನ್ನು ಭಾರತ ವ್ಯಾಪಕಗೊಳಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಪ್ರಭಾವಿ ಉದ್ಯಮಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದು ಭಾರತದ ಆಥರ್ಿಕ ಬೆಳವಣಿಗೆಯ ದೃಷ್ಟಿಯಿಂದ ಆತಂಕಕಾರಿಯೇ. ಇಲ್ಲಿಗೆ ಪೀಠಿಕೆ ಮುಗಿಯಿತು. ಇನ್ನು ಮುಂದೆ ವಾಸ್ತವ ಸಂಗತಿಯ ಕಡೆ ಹೊರಳಬೇಕಿದೆ.

2

ನರೇಂದ್ರಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಉದ್ಯಮಿಗಳು ಒಂದೋ ದೇಶಬಿಟ್ಟು ಓಡಿಹೋಗುತ್ತಿದ್ದಾರೆ ಅಥವಾ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಮುಂದುವರಿದ ಭಾಗವಾಗಿ ಈಗ ಆತ್ಮಹತ್ಯೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಹಾಗೆಂದು ಭರ್ಜರಿ ಚಚರ್ೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಒಂದು ವಿದ್ಯಮಾನವನ್ನು ನಾವು ಗಮನಿಸಲೇಬೇಕು. ಡಿ.ಕೆ ಶಿವಕುಮಾರ್ ಅವರ ಮನೆಯ ಮೇಲೆ ತೆರಿಗೆ ದಾಳಿಯಾಗುತ್ತದೆ. ಈ ತೆರಿಗೆ ದಾಳಿ ಅನೇಕ ರಾಜಕಾರಣಿಗಳು, ಉದ್ಯಮಿಗಳನ್ನು ತನ್ನ ವ್ಯಾಪ್ತಿಗೆ ಎಳಕೊಂಡು ಬರುತ್ತದೆ. ಚುನಾವಣೆಯಲ್ಲಿ ಮೈತ್ರಿ ಸಕರ್ಾರಕ್ಕೆ ಭರ್ಜರಿ ಸೋಲುಂಟಾಗಿ ಪ್ರಸ್ತುತ ಸಕರ್ಾರವನ್ನು ಉಳಿಸಿಕೊಳ್ಳಲು ಅದೇ ಡಿಕೆಶಿ ತಿಪ್ಪರಲಾಗ ಹೊಡೆಯುತ್ತಾರೆ. ಮುಂಬೈಗೆ ಹೋಗಿ ಬಗೆ-ಬಗೆಯ ದೃಶ್ಯಾವಳಿಗಳನ್ನು ಸಮಾಜದ ಮುಂದೆ ನಿಮರ್ಿಸಲಾಗುತ್ತದೆ. ಪಕ್ಷ ಬಿಟ್ಟು ಹೋದವರನ್ನು ಮರಳಿ ತರಲು ಆಮಿಷಗಳ ಬೆಟ್ಟವನ್ನೇ ಮುಂದಿಡಲಾಗುತ್ತದೆ. ಯಾವುದೂ ಸಫಲತೆ ಕಾಣದೇ ಕೊನೆಗೂ ಸಕರ್ಾರ ಉರುಳುತ್ತದೆ. ಹೊಸ ಸಕರ್ಾರದ ಪರಿಪೂರ್ಣ ರಚನೆಯಾಗುವ ಮುನ್ನವೇ ಆತ್ಮಹತ್ಯೆಯ ವಿಚಾರ ದೇಶವನ್ನು ಆವರಿಸಿಕೊಳ್ಳುತ್ತದೆ. ಹರಡಿ ಹೋಗಿರುವ ಚುಕ್ಕಿಗಳನ್ನು ಸೇರಿಸಿದರೆ ಏನಾದರೂ ಸಂದೇಶ ಸಿಗಬಹುದೇ? ಕಾಂಗ್ರೆಸ್ಸಿನ ಸಕರ್ಾರವಿರುವವರೆಗೂ ವಿಶ್ವಾಸದ ಕೊನೆಯ ಹನಿ ಉಳಿಸಿಕೊಂಡಿದ್ದ ಸಿದ್ಧಾರ್ಥ ಹೊಸ ಸಕರ್ಾರ ರಚನೆಯಾದೊಡನೆ ಆತ್ಮಹತ್ಯೆಗೆ ಶರಣಾಗಿಬಿಟ್ಟರೇ? ಹಾಗೆಂದು ಬೆಂಗಳೂರಿನ ಚಾಟರ್ೆಡ್ ಅಕೌಂಟೆಂಟ್ ಒಬ್ಬರು ಪ್ರಶ್ನೆ ಕೇಳುವಾಗ ನಾನೂ ಒಂದು ಕ್ಷಣ ಅವಾಕ್ಕಾಗಿಬಿಟ್ಟೆ. ಇದಕ್ಕೆ ಪೂರಕವಾಗಿ ಬಿಡುಗಡೆಯಾದ ಸಿದ್ಧಾರ್ಥರದ್ದೆನ್ನಲಾದ ಪತ್ರದಲ್ಲಿ ಐಟಿ ಅಧಿಕಾರಿಗಳ ಕುರಿತಂತೆ ಪ್ರಮಾದಕಾರಿ ಪತ್ರವೊಂದು ಓಡಾಡಲಾರಂಭಿಸಿತು. ಈ ಪತ್ರದಲ್ಲಿ ಸಿದ್ಧಾರ್ಥರ ಸಹಿ ತಾಳೆಯಾಗುತ್ತಿಲ್ಲ ಎಂಬ ಸಂಗತಿಯನ್ನು ತೆರಿಗೆ ಅಧಿಕಾರಿಗಳು ಬಹಿರಂಗಗೊಳಿಸುವ ವೇಳೆಗಾಗಲೇ ಪತ್ರ ಸಾಕಷ್ಟು ಸದ್ದು ಮಾಡಿಬಿಟ್ಟಿತ್ತು. ತೆರಿಗೆ ಅಧಿಕಾರಿಗಳು ಪ್ರತಿ ಹೇಳಿಕೆಯೊಂದನ್ನು ಹೊರಡಿಸಿ ಸಿದ್ಧಾರ್ಥರಿಂದಾದ ತಪ್ಪುಗಳನ್ನು ಎಳೆ-ಎಳೆಯಾಗಿ ಬಿಡಿಸಿಟ್ಟರು. ಪ್ರಭಾವಿ ರಾಜಕಾರಣಿಗಳ ನಂಟು ಹೊಂದಿದ್ದ ಸಿದ್ಧಾರ್ಥ ಹವಾಲಾ ವ್ಯವಹಾರದಲ್ಲೂ ಭಾಗಿಯಾಗಿದ್ದು ನಿಧಾನವಾಗಿ ಹೊರಬರಲಾರಂಭಿಸಿತು. ಎಲ್ಲಕ್ಕೂ ಮಿಗಿಲಾಗಿ ತನ್ನ ಆಸ್ತಿ ಸಾಲಕ್ಕಿಂತಲೂ ಹೆಚ್ಚಿದ್ದಾಗ್ಯೂ ಆತ ಸಾವಿಗೆ ಶರಣಾಗಿದ್ದೇಕೆ ಎಂಬ ಪ್ರಶ್ನೆಗೆ ಮಾತ್ರ ಸಾಮಾನ್ಯರ್ಯಾರಿಗೂ ಇಂದಿಗೂ ಉತ್ತರ ಸಿಗುತ್ತಿಲ್ಲ!

3

ವ್ಯಾಪಾರ ಎನ್ನುವುದು ಇತರರಿಗೆ ದ್ರೋಹ ಮಾಡಿ ಬದುಕುವ ಮಾರ್ಗವಲ್ಲ. ಬದಲಿಗೆ ಎಲ್ಲರನ್ನೂ ಬೆಸೆಯುವ ರಾಜಮಾರ್ಗ. ವರ್ಣದ ದೃಷ್ಟಿಯಿಂದಲೇ ನೋಡುವುದಾದರೆ ಚಿಂತಕರನ್ನು, ಕದನ-ಕಲಿಗಳನ್ನು, ಶ್ರಮಿಕ ವರ್ಗವನ್ನು ಬೆಸೆಯಬಲ್ಲ ಏಕಮಾತ್ರ ಕೊಂಡಿ ವ್ಯಾಪಾರಿಗಳದ್ದೇ. ಸಮಾಜವೊಂದರ ಬೆಳವಣಿಗೆಗೆ ಇವರ ಕೊಡುಗೆ ಇತರೆಲ್ಲರಷ್ಟೇ ಮುಖ್ಯ. ಹೀಗಾಗಿಯೇ ಭಾರತದಲ್ಲಿ ಅರ್ಥವ್ಯವಸ್ಥೆಯ ಕುರಿತಂತೆ ಶುದ್ಧ ಕಲ್ಪನೆಗಳಿದ್ದವಲ್ಲದೇ ಅದನ್ನು ಗಳಿಸುವ, ಬಳಸುವ ಕುರಿತಂತೆ ಶಾಸ್ತ್ರಗಳೂ ನಿಮರ್ಾಣಗೊಂಡಿದ್ದವು. ಚಾಣಕ್ಯ ರಾಜ್ಯಪರಿಪಾಲನೆಯ ದಂಡನೀತಿಯನ್ನು ಸಾಕಷ್ಟು ವಿವರಿಸಿದ್ದರೂ ಆತನನ್ನು ಸಮಾಜ ಗುರುತಿಸುವುದು ಅರ್ಥಶಾಸ್ತ್ರದ ದೃಷ್ಟಿಯಿಂದಲೇ. ಉದ್ದಿಮೆಗಳು ಚೆನ್ನಾಗಿ ನಡೆಯುವಂತಹ ವಾತಾವರಣವನ್ನು ಯಾವ ಸಕರ್ಾರ ರೂಪಿಸಿಕೊಡುವುದೋ ಅದು ಇತರೆಲ್ಲರ ಯೋಗಕ್ಷೇಮವನ್ನೂ ಕೂಡ ಅಷ್ಟೇ ಚೆನ್ನಾಗಿ ನೋಡಿಕೊಳ್ಳಬಲ್ಲುದು. ಚಾಣಕ್ಯ ತೆರಿಗೆ ಪದ್ಧತಿಯ ಕುರಿತಂತೆ ವಿವರವಾಗಿ ಬರೆಯುತ್ತಾನಲ್ಲದೇ ವ್ಯಾಪಾರಿಗಳ ದುಡಿಮೆ ಹೇಗಿರಬೇಕು ಎಂಬುದಕ್ಕೂ ಎಚ್ಚರಿಕೆ ಕೊಡುತ್ತಾನೆ. ನಮ್ಮಲ್ಲಿ ಮಾರಾಟವಾಗುವ ಯಾವುದೇ ವಸ್ತುಗಳ ಮೇಲಿನ ಲಾಭವೂ ಶೇಕಡಾ ಮೂರ್ನಾಲ್ಕು ಪ್ರತಿಶತಕ್ಕಿಂತ ಹೆಚ್ಚಿರುತ್ತಿರಲಿಲ್ಲ. ಈಗ ಸಾವಿರಪಟ್ಟು ಲಾಭ ಕೊಡಬಲ್ಲಂತಹ ವಸ್ತುಗಳೂ ಮಾರುಕಟ್ಟೆಯಲ್ಲಿವೆ. ವಸ್ತುವಿನ ಮೂಲ ಬೆಲೆಗೂ, ಮಾರಾಟದ ಬೆಲೆಗೂ ಸಂಬಂಧವೇ ಇಲ್ಲದಷ್ಟು ದೂರ. ಇವೆಲ್ಲಕ್ಕೂ ಕಡಿವಾಣ ಹಾಕಬೇಕೆಂದೇ ಭಾರತ ಪುರುಷಾರ್ಥಗಳ ಕುರಿತಂತೆ ಮಾತನಾಡುವಾಗ ಅರ್ಥವನ್ನೂ ಅದರಲ್ಲಿ ಸೇರಿಸಿತ್ತು. ನಾಲ್ಕು ಪುರುಷಾರ್ಥಗಳಲ್ಲಿ ಧರ್ಮ ಎಲ್ಲಕ್ಕೂ ಮೂಲ. ಮತ್ತೆ ಈ ಧರ್ಮವನ್ನು ಇಸ್ಲಾಂ, ಕ್ರಿಶ್ಚಿಯಾನಿಟಿ ಇವುಗಳೊಂದಿಗೆ ಹೋಲಿಸಿಕೊಳ್ಳಬೇಡಿ. ಯಾವುದರ ಆಧಾರದ ಮೇಲೆ ಬದುಕು ನಡೆಯುವುದೋ ಅದು ಧರ್ಮ. ಇದನ್ನು ಮೀರಿ ನಡೆಯುವಂತಿಲ್ಲ. ಇದನ್ನು ಅಡಿಪಾಯವಾಗಿಟ್ಟುಕೊಂಡು ಗಳಿಸಬೇಕಾದ ಸಂಪತ್ತು ಪುರುಷಾರ್ಥಗಳಲ್ಲಿ ಎರಡನೆಯದ್ದು. ಧರ್ಮವಿಲ್ಲದೇ ಗಳಿಸಿದ ಸಂಪತ್ತಿಗೆ ಭಾರತೀಯ ಸಭ್ಯತೆಯಲ್ಲಿ ನಯಾಪೈಸೆಯಷ್ಟೂ ಕಿಮ್ಮತ್ತಿಲ್ಲ. ಚಂದ್ರಗುಪ್ತ ಮೌರ್ಯ ಯುದ್ಧವೊಂದನ್ನು ಗೆದ್ದು ಬಂದಾಗ ಚಾಣಕ್ಯ ಖುಷಿ ಪಡಲಿಲ್ಲ, ಬದಲಿಗೆ ಚಂದ್ರಗುಪ್ತ ಸೈನ್ಯಕ್ಕೆ ಧಾನ್ಯ ಪೂರೈಸಿದ ರೈತರಿಗೆ ಹಣಕೊಡಲಿಲ್ಲವೆಂಬ ಕಾರಣಕ್ಕೆ ಅವನನ್ನು ಚೆನ್ನಾಗಿ ಬೈದಿದ್ದ. ಅಂದರೆ ರಾಜ ಗಳಿಸಿರುವ ಸಂಪತ್ತೂ ಕೂಡ ಧರ್ಮಮಾರ್ಗವನ್ನು ಮೀರಿದೆ ಎಂದರೆ ಅದಕ್ಕೆ ಬೆಲೆ ಕೊಡಲಾಗದು. ಹೀಗಿರುವಾಗ ಇನ್ನು ಅರ್ಥವನ್ನು ಗಳಿಸಲೆಂದೇ ಉದ್ಯೋಗಶೀಲರಾಗಿರುವವರು ಧರ್ಮದ ನಡೆಯನ್ನು ಬಿಟ್ಟು ವಂಚನೆ ಮಾಡುತ್ತಾ ದೇಶದ ಬೊಕ್ಕಸಕ್ಕೆ ಕನ್ನ ಹಾಕಿದರೆ ಸಂಪತ್ತು ಎಷ್ಟು ಸಾವಿರ ಕೋಟಿ ಇದ್ದರೂ ಅದಕ್ಕೆ ಬೆಲೆಯಿಲ್ಲ. ಹೀಗೆ ಧರ್ಮಮಾರ್ಗದಲ್ಲಿ ಗಳಿಸಿದ ಸಂಪತ್ತಿನಿಂದಲೇ ಮನೋಕಾಮನೆಗಳನ್ನು ಇಡೇರಿಸಿಕೊಳ್ಳಬೇಕು ಎಂಬ ಕಾರಣದಿಂದಲೇ ಕಾಮ ಎಂಬುದು ಮೂರನೇ ಪುರುಷಾರ್ಥವಾಗಿ ನಮ್ಮ ಹಿರಿಯರು ನಮ್ಮ ಮುಂದಿಟ್ಟಿದ್ದಾರೆ. ಅನೇಕರು ಎಡವೋದು ಇಲ್ಲೇ. ಒಮ್ಮೆ ಕಾಮನೆಗಳನ್ನು ಪೂರೈಸಿಕೊಳ್ಳುವ ಭಿನ್ನ-ಭಿನ್ನ ಮಾರ್ಗಗಳನ್ನು ತಮ್ಮದಾಗಿಸಿಕೊಂಡ ಮೇಲೆ ಅಲ್ಲಿಂದ ಹಿಂದೆ ಬರುವುದು ಅವರಿಂದ ಸಾಧ್ಯವೇ ಆಗುವುದಿಲ್ಲ. ಸಿನಿಮಾ ರಂಗದವರೊಬ್ಬರು ತನಗೆ ಸೂಕ್ತ ಅವಕಾಶಗಳು ಸಿಗದಿರುವುದಕ್ಕೆ ತನ್ನ ಬಳಿಯಿರುವ ಸಾಮಾನ್ಯ ಕಾರು ಕಾರಣ ಎಂದು ಭಾವಿಸಿ ಹತ್ತಾರು ಲಕ್ಷರೂಪಾಯಿಯ ಕಾರನ್ನು ಕೊಂಡುಕೊಂಡು ಕಾಲಕ್ರಮದಲ್ಲಿ ಅದರ ಸಾಲವನ್ನೂ ತೀರಿಸಲಾಗದೇ ಚಡಪಡಿಸುತ್ತಿದ್ದುದನ್ನು ನಾನೇ ನೋಡಿದ್ದೇನೆ. ನಮ್ಮ ಮೇಲೆ ನಾವೇ ಆವಾಹಿಸಿಕೊಂಡ ಒಣಪ್ರತಿಷ್ಠೆಗಳು ಹಂತ-ಹಂತವಾಗಿ ನಮ್ಮನ್ನೇ ನುಂಗುತ್ತಿರುತ್ತವೆ ಎಂಬುದನ್ನು ಮರೆಯುವಂತಿಲ್ಲ. ಮಲ್ಯ ವಿದೇಶಕ್ಕೆ ಓಡಿಹೋಗಿದ್ದೇಕೆ ಎಂಬುದನ್ನು ಒಮ್ಮೆ ಅವಲೋಕಿಸಿದರೆ ನಿಮಗೇ ಅರಿವಿಗೆ ಬಂದೀತು. ಉದ್ದಿಮೆಯನ್ನು ಬೆಳೆಸಿದ ನಂತರ ಭಿನ್ನ-ಭಿನ್ನ ಕ್ಷೇತ್ರಗಳಲ್ಲಿ ಕೈಹಾಕಿ ಕೈ ಸುಡುತ್ತಿದೆ ಎಂದೆನಿಸಿದಾಗಲೂ ಆತ ಅವುಗಳಿಂದ ಹೊರಬರಲು ಸಾಧ್ಯವಾಗಲಿಲ್ಲ. ಸೋತಿದ್ದೇನೆಂದುಕೊಳ್ಳುವುದು ತನ್ನ ಪ್ರತಿಷ್ಠೆಗೆ ಹೊಡೆತ ಎಂದು ಆತ ಭಾವಿಸಿದ. ಒಂದು ಸೋಲನ್ನು ಮುಚ್ಚಿಕೊಳ್ಳಲು ಅನವಶ್ಯಕವಾದ ವೈಭವವನ್ನು ತಲೆಯ ಮೇಲೆಳೆದುಕೊಂಡ. ಕೊನೆಗೊಮ್ಮೆ ಪರಿಸ್ಥಿತಿ ಕೈಮೀರಿದಾಗ ದೇಶಬಿಟ್ಟು ಓಡಿಹೋದ. ಹಾಗೆ ಗಮನಿಸಿ ಆತನ ಕುರಿತಂತೆ ಬರೆಯುವಾಗ ಎಲ್ಲಿಯೂ ಬಹುವಚನವನ್ನು ಬಳಸಿಲ್ಲ. ಅದರರ್ಥ ಮನುಷ್ಯ ಸಮಾಜದ ಕಣ್ಣೆದುರಿಗೆ ಧರ್ಮಮಾರ್ಗದಿಂದ ವಿಮುಖನಾದರೆ ಸಣ್ಣವನೆನಿಸಿಕೊಂಡುಬಿಡುತ್ತಾನೆ, ಅಸಹಾಯಕನೂ ಆಗಿಬಿಡುತ್ತಾನೆ. ಹಣದ ಹರಿವು ಹೆಚ್ಚಾದಂತೆ ಅಧರ್ಮಮಾರ್ಗದಲ್ಲಿ ಅದರ ಗಳಿಕೆಯಾಗುತ್ತಿದ್ದಂತೆ ಅದಕ್ಕೆ ಪೂರಕವಾದ ನಮ್ಮ ಪ್ರತಿಷ್ಠೆಯೂ ಬಲವಾಗುತ್ತಾ ಸಾಗುತ್ತದೆ. ಆನಂತರ ಅದನ್ನು ಸಂಭಾಳಿಸಿಕೊಳ್ಳುವ ಧಾವಂತದಲ್ಲಿ ನಮ್ಮಿಂದ ಮತ್ತಷ್ಟು ಎಡವಟ್ಟುಗಳಾಗಲಾರಂಭಿಸುತ್ತವೆ. ಎಲ್ಲವೂ ನೆಟ್ಟಗಿದ್ದರೆ ಸಮಸ್ಯೆಯಿಲ್ಲ. ಸ್ವಲ್ಪ ಪರಿಸ್ಥಿತಿ ಸೊಟ್ಟಗಾಗುತ್ತದಲ್ಲ ಆಗ ನಮ್ಮ ರಕ್ಷಣೆಗೆ ಯಾರೂ ಬರಲಾರರು. ನಮ್ಮ ಅರ್ಥ ಸಂಪಾದನೆ ಧರ್ಮಮಾರ್ಗದಲ್ಲೇ ಇದ್ದುದಾದರೆ ನಿಸ್ಸಂಶಯವಾಗಿ ಅದೇ ಧರ್ಮ ನಮ್ಮನ್ನು ಕಾಪಾಡುತ್ತದೆ. ಸೋತು ಸುಣ್ಣವಾದಾಗಲೂ ಗೆಲ್ಲುವ ಮಾರ್ಗವೊಂದನ್ನು ತೋರಿಸಿಕೊಡುತ್ತದೆ. ಅದಕ್ಕಾಗಿಯೇ ನಮ್ಮ ಬದುಕಿನ ಮಹತ್ವದ ಘಟ್ಟವನ್ನು ಸವೆಸುವಾಗ ಎಲ್ಲವನ್ನೂ ಬಿಡುತ್ತೇವೆಂಬ ಭಾವನೆಯಿಂದಲೇ ಶುರುಮಾಡುವುದು ಒಳಿತು. ಹೀಗಾಗಿಯೇ ನಮ್ಮ ಪೂರ್ವಜರು ನಾಲ್ಕು ಆಶ್ರಮಗಳನ್ನು ಬದುಕಿಗೆ ರೂಪಿಸಿಕೊಟ್ಟಿದ್ದು. ಜ್ಞಾನಾರ್ಜನೆಯ ಬ್ರಹ್ಮಚರ್ಯ ಮಾರ್ಗದಲ್ಲಿ ನಡೆದ ಮೇಲೆ ಸಮಾಜಮುಖಿ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತೇವೆ. ಅಲ್ಲಿಂದಾಚೆಗೆ ತ್ಯಾಗದ ಬದುಕಿನ ತಯಾರಿಗೆ ವಾನಪ್ರಸ್ಥಿಗಳಾದರೆ ಬದುಕು ಕೊನೆಯಾಗುವ ಮುನ್ನ ಅಕ್ಷರಶಃ ಸನ್ಯಾಸಿಗಳಂತಾಗಿಬಿಟ್ಟಿರುತ್ತೇವೆ. ಯಾವಾಗ ಈ ದೃಷ್ಟಿಕೋನ ನಮ್ಮಲ್ಲಿ ಸಮರ್ಥವಾಗಿ ಮೂಡುವುದೋ ಆಗ ಗಳಿಸಿದ ಹಣವೂ ನಮಗೆ ತೊಂದರೆ ನೀಡಲಾರದು. ಇಂತಹ ವ್ಯಕ್ತಿಗೆ ಪುರುಷಾರ್ಥಗಳಲ್ಲಿ ಕೊನೆಯದ್ದಾದ ಮೋಕ್ಷ ಸಲೀಸಾಗಿ ಒದಗಬಲ್ಲದು!

ಪಶ್ಚಿಮದ ಚಿಂತನೆಗೂ ಹಿಂದೂ ವಿಚಾರಧಾರೆಗೂ ಇರುವ ಮೂಲಭೇದವೆಂದರೆ ಅಲ್ಲಿ ಬದುಕಿಗೆ ಈ ಜನ್ಮವೇ ಅಂತ್ಯ. ನಮ್ಮದ್ದು ಹಾಗಲ್ಲ. ಚಕ್ರೀಯ ಗತಿಯ ಬದುಕಿನಲ್ಲಿ ಹುಟ್ಟು, ಮರುಹುಟ್ಟುಗಳು ನಿರಂತರ. ನಮ್ಮ-ನಮ್ಮ ಸಂಚಿತ ಪ್ರಾರಬ್ಧಗಳ ಆಧಾರದ ಮೇಲೆ ಭವಿಷ್ಯ ನಿಧರ್ಾರಗೊಳ್ಳುತ್ತದೆ ಮತ್ತು ಮಾಡಿದ್ದನ್ನು ಅನುಭವಿಸಿಯೇ ನಮ್ಮ ಯಾತ್ರೆ ಕೊನೆಗೊಳ್ಳುತ್ತದೆ. ಪಶ್ಚಿಮ ಒಂದೇ ಜನ್ಮದಲ್ಲಿ ಎಲ್ಲವನ್ನೂ ಮುಗಿಸಬೇಕೆಂಬ ಧಾವಂತದಲ್ಲಿ ಪ್ರಪಂಚದೆಡೆಗೆ ಮುಖ ಮಾಡಿಕೊಂಡು ಕುಳಿತುಬಿಟ್ಟಿದೆ. ಹೀಗಾಗಿಯೇ ಅಲ್ಲಿ ಮೂರು ತಿಂಗಳ, ಆರು ತಿಂಗಳ ಲಾಭವನ್ನು ಗಂಭೀರವಾಗಿ ಲೆಕ್ಕ ಹಾಕಲಾಗುತ್ತದೆ. ಕಂಪೆನಿಯೊಂದರ ಆಸ್ತಿಯ ಆಧಾರದ ಮೇಲೆ ಅದರ ಭವಿಷ್ಯವನ್ನು ಗಣಿಸಲಾಗುತ್ತದೆ. ನಮ್ಮಲ್ಲಿ ಕಂಪೆನಿಯ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಅದರ ಸುದೀರ್ಘತೆಯನ್ನು ಅಳೆಯಲಾಗುತ್ತದೆ. ನಿರಂತರ ಆಕ್ರಮಣಗಳಿಗೆ ತುತ್ತಾಗಿ ನಾವು ಇತ್ತ ಮೌಲ್ಯಗಳನ್ನು ಉಳಿಸಿಕೊಳ್ಳಲಾಗದೇ ಅತ್ತ ಪ್ರಾಪಂಚಿಕತೆಗೆ ಪೂರ್ಣವಾಗಿ ತೊಡಗಿಸಿಕೊಳ್ಳಲಾಗದೇ ತೊಳಲಾಡುತ್ತಿದ್ದೇವೆ. ಹೀಗಾಗಿಯೇ ಒಂದೆಡೆ ಕೋಟಿ ಕೋಟಿರೂಪಾಯಿಗಳನ್ನು ಹೇಗಾದರೂ ಮಾಡಿ ಗಳಿಸಿಬಿಡುತ್ತೇವೆ. ಕೊನೆಗೆ ಸಾಯುವಾಗ ಮೌಲ್ಯಗಳ ಮಾತನಾಡುತ್ತಾ ಇಹಲೋಕ ತ್ಯಜಸಿಬಿಡುತ್ತೇವೆ!

Magnifying Glass and Tax

ನಾವೀಗ ಉದ್ಯಮಶೀಲತೆಯ ಕಲ್ಪನೆಯನ್ನು ಬಿತ್ತುತ್ತಿದ್ದೇವೆ. ಖಂಡಿತ ತಪ್ಪಲ್ಲ. ಒಂದು ಕಾಲದಲ್ಲಿ ಭಾರತ ತನ್ನ ವ್ಯಾಪಾರದ ಶೈಲಿಯಿಂದಲೇ ಜಗತ್ತನ್ನು ಬೆರಗುಗೊಳಿಸಿತ್ತು. ನಾವು ಜಗತ್ತಿನ ಮೂಲೆ-ಮೂಲೆಗಳನ್ನೂ ವ್ಯಾಪಾರಿಗಳ ಮೂಲಕವೇ ಸಂಪಕರ್ಿಸಿದ್ದೆವು. ಈ ವ್ಯಾಪಾರಿಗಳೊಂದಿಗೆ ಭಾರತದ ಮೌಲ್ಯಯುತ ಚಿಂತನೆಗಳೂ ಅವರನ್ನು ತಲುಪುತ್ತಿದ್ದವು. ಭಾರತದೆಡೆಗೆ ಜಗತ್ತು ಆಕಷರ್ಿತರಾಗಲು ಅವರೇ ಕಾರಣ. ನಿರಂತರ ದಾಳಿಗೆ ತುತ್ತಾಗಿ ಅದರಲ್ಲೂ ವಿಶೇಷವಾಗಿ ಜಗತ್ತಿನ ಅತ್ಯಂತ ಮೋಸಗಾರರ ಪಟ್ಟಿಯಲ್ಲಿರುವ ಬ್ರಿಟೀಷರ ವ್ಯವಸ್ಥಿತ ಆಕ್ರಮಣ ಭಾರತೀಯ ಉದ್ಯಮಶೀಲತೆಯನ್ನು ಧ್ವಂಸಗೊಳಿಸಿಬಿಟ್ಟಿತು. ನಾವೀಗ ಪಶ್ಚಿಮವನ್ನು ಅನುಕರಿಸುತ್ತಿದ್ದೇವೆಯೇ ಹೊರತು ನಮ್ಮದಾದುದನ್ನು ಆವಿಷ್ಕರಿಸುವಲ್ಲಿ ಸೋತಿದ್ದೇವೆ. ಮೋದಿಯ ಆಗಮನದೊಂದಿಗೆ ಶುರುವಾಗಿರುವ ಸ್ಟಾಟರ್್ಅಪ್ನ ಭರಾಟೆ ಸರಿಯಾದ ದಿಕ್ಕಿನಲ್ಲಿ ಸಾಗಬೇಕೆಂದರೆ ಸಿದ್ಧಾರ್ಥ ಅವರ ಸಾವು ಮಾರ್ಗದಶರ್ಿಯಾಗಿ ನಿಲ್ಲಬೇಕು. ಉದ್ಯಮಿ ರಾಷ್ಟ್ರದ ಜೀವನಾಡಿಗಳನ್ನು ಚುರುಕಾಗಿಡುವಲ್ಲಿ ಸಹಕರಿಸುತ್ತಾನೆ. ಸಕರ್ಾರ ಅವನನ್ನು ಹಿಂಡಿ-ಹಿಪ್ಪೆ ಮಾಡುವ ತೆರಿಗೆ ವ್ಯವಸ್ಥೆಯನ್ನು ರೂಪಿಸದೇ ಅವನೇ ಸ್ವಯಂ ಪ್ರೇರಣೆಯಿಂದ ತೆರಿಗೆ ಕಟ್ಟುವ ವ್ಯವಸ್ಥೆ ಮಾಡಿದರೆ ಒಳಿತಾದೀತು.

ನಮ್ಮ ಶಿಕ್ಷಣ ವ್ಯವಸ್ಥೆ ಕಾರಕೂನರನ್ನು ನಿಮರ್ಿಸುವುದಕ್ಕಿಂದ ಈ ಬಗೆಯ ಮೌಲ್ಯವನ್ನು ತನ್ನದಾಗಿಸಿಕೊಂಡ ಸಮರ್ಥ ವ್ಯಾಪಾರಿಗಳನ್ನು, ರಾಜಕಾರಣಿಗಳನ್ನು, ಶಿಕ್ಷಕರನ್ನು ನಿಮರ್ಿಸುವತ್ತ ದೃಷ್ಟಿ ಹರಿಸಬೇಕಿದೆ. ಇಲ್ಲವಾದರೆ ಬಲುಬೇಗ ಭಾರತ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಪಶ್ಚಿಮದ ಒಂದು ವಸಾಹತಾಗಿ ಮುಂದುವರೆಯುವುದರಲ್ಲಿ ಸಂಶಯವೇ ಇಲ್ಲ. ನಾವು ಅವರಂತೆ ಗಳಿಸಿದ ಕೂಡಿಟ್ಟ ಹಣವನ್ನು ಲೆಕ್ಕಮಾಡುತ್ತಾ ಉಳಿದುಬಿಡುತ್ತೇವೆಯೇ ಹೊರತು ಮುಂದಿನ ಪೀಳಿಗೆಗೆ ಬಿಟ್ಟುಹೋದದ್ದೇನು ಎಂಬುದನ್ನು ಮರೆತುಹೋಗುತ್ತೇವೆ!!

Comments are closed.