ವಿಭಾಗಗಳು

ಸುದ್ದಿಪತ್ರ


 

ಕಾರ್ಗಿಲ್ ಪಾಠ ಈಗ ಬಳಕೆಯಾಗುತ್ತಿದೆ!

ಭಾರತೀಯ ಸೇನೆ ಯಾವ ದೃಷ್ಟಿಯಿಂದ ನೋಡಿದರೂ ಪಾಕಿಸ್ತಾನಕ್ಕಿಂತಲೂ ಬಲಯುತವಾಗಿಯೇ ಕಂಡು ಬಂದಿತ್ತು. ಪ್ರತಿಕೂಲ ಪರಿಸ್ಥಿತಿಯಲ್ಲೂ ಶತ್ರುಗಳ ಕೈಯಿಂದ ಗೆಲುವನ್ನು ಕಸಿಯುವಲ್ಲಿ ಭಾರತೀಯರು ತೋರಿದ ಸಾಧನೆ ಕೊಂಡಾಡಲ್ಪಟ್ಟಿತ್ತು. ಈ ಇಡಿಯ ಕದನ ಮಾಧ್ಯಮಗಳಲ್ಲಿ ಸವಿವರವಾಗಿ ಪ್ರಕಟವಾಯ್ತಲ್ಲದೇ ಸೈನಿಕರ ಶವಯಾತ್ರೆಗಳು ಊರೂರಿನಲ್ಲಿ ಭರ್ಜರಿಯಾಗಿ ನಡೆದವು. ಸೈನಿಕರಿಗೂ ಜನಸಾಮಾನ್ಯರಿಗೂ ಒಂದು ಬಲವಾದ ಕೊಂಡಿ ಏರ್ಪಡಲು ಈ ಯುದ್ಧ ನಿಸ್ಸಂಶಯವಾಗಿ ಕಾರಣವಾಯ್ತು.

21 ವರ್ಷ ಭತರ್ಿ ಆಯ್ತು. ನಾವೆಲ್ಲ ಕಾಲೇಜಿಗೆ ಹೋಗುತ್ತಿದ್ದ ದಿನಗಳವು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ ರಾಷ್ಟ್ರದ ಮನಮೆಚ್ಚುವ ಕೆಲಸಗಳನ್ನು ಮಾಡುತ್ತಾ ಭಾರತದ ಇತಿಹಾಸಕ್ಕೆ ಹೊಸ ಭಾಷ್ಯವನ್ನೇ ಬರೆಯುತ್ತಿದ್ದರು. ಪಾಕಿಸ್ತಾನದೊಂದಿಗಿನ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಅವರಿಡುತ್ತಿದ್ದ ಒಂದೊಂದು ಹೆಜ್ಜೆಯೂ ರೋಚಕತೆಯಿಂದ ಕೂಡಿತ್ತು. ಪಾಕಿಸ್ತಾನಕ್ಕೆ ರೈಲು, ಬಸ್ಸುಗಳನ್ನು ಹೊರಡಿಸುವುದಾಗಲೀ ನವಾಜ್ ಶರೀಫ್ರೊಂದಿಗೆ ಮಾತುಕತೆ ನಡೆಸುವುದಾಗಲೀ ಎಲ್ಲದರಲ್ಲೂ ಅವರಿಟ್ಟದ್ದು ಅಪರೂಪದ ಹೆಜ್ಜೆಯೇ. ಅನೇಕ ಬಾರಿ ಕೋಪ ಬರುತ್ತಿದ್ದುದೂ ಉಂಟು. ಪಾಕಿಸ್ತಾನಕ್ಕೆ ನಾವು ತೋರಿಸುತ್ತಿರುವ ಪ್ರೀತಿ ಅತಿಯಾಯ್ತೇನೋ ಅಂತ. ಆದರೆ ಎಷ್ಟಾದರೂ ಬಾಂಧವ್ಯ ಹಳೆಯದ್ದಲ್ಲವೇ. ಒಳ್ಳೆಯ ಮಿತ್ರರಾಗಿಬಿಡಬಹುದೇನೋ ಎಂಬ ಕನಸೂ ಇತ್ತು. ಪಾಕಿಸ್ತಾನ ಹಾಗಾಗಲು ಬಿಡಲಿಲ್ಲ. ಪರವೇಜ್ ಮುಷರ್ರಫ್ ಲಾಹೋರ್ ಶೃಂಗಸಭೆಯಲ್ಲಿ ಅಟಲ್ಜಿ ಮತ್ತು ನವಾಜ್ ಷರೀಫ್ ಮಾತುಕತೆ ನಡೆಸುತ್ತಿರುವಾಗಲೇ ಭಾರತದ ಬೆನ್ನಿಗೆ ಚೂರಿ ಹಾಕುವ ಸಿದ್ಧತೆ ನಡೆಸಿದ್ದ! ಸ್ವತಃ ಅಟಲ್ಜೀ ಪಾಕಿಸ್ತಾನಕ್ಕೆ ಹೋಗಿದ್ದಾಗ ಏರ್ಪೋಟರ್ಿನಲ್ಲಿ ಸೆಲ್ಯೂಟ್ ಕೊಡಲು ನಿರಾಕರಿಸಿ ಆತ ಸಾಕಷ್ಟು ಸದ್ದು ಅದಾಗಲೇ ಮಾಡಿದ್ದ. ಮುಂದೆ ಆತ ಅಧ್ಯಕ್ಷನಾಗಿ ಭಾರತಕ್ಕೆ ಬಂದಾಗ ಭಾರತದ ಸೇನಾ ಮುಖ್ಯಸ್ಥರು ಸೆಲ್ಯೂಟ್ ಕೊಡದೇ ಸೇಡು ತೀರಿಸಿಕೊಂಡಿದ್ದು ಈಗ ನೆನಪಷ್ಟೇ.

2

ಭಾರತದ ಎಲ್ಲ ಪ್ರಯತ್ನಗಳನ್ನೂ ಮಣ್ಣುಮುಕ್ಕಿಸಿ ಸ್ನೇಹದ ಹಸ್ತವನ್ನು ಬದಿಗೆ ಸರಿಸಿದ್ದು ಪಾಕಿಸ್ತಾನವೇ. ಕಾಗರ್ಿಲ್ನ ಬೆಟ್ಟಗಳ ಮೇಲೆ 99ರ ಏಪ್ರಿಲ್ ತಿಂಗಳ ಕೊನೆಯ ಭಾಗದಲ್ಲಿ ಧಮರ್ಾಂಧ ಮುಜಾಹಿದ್ದೀನ್ಗಳನ್ನು ಮುಂದಕ್ಕೆ ಬಿಟ್ಟು ಹಿಂದು-ಹಿಂದೆಯೇ ಸೇನೆಯನ್ನು ಜಮಾವಣೆ ಮಾಡಿಬಿಟ್ಟಿತು. ಅಟಲ್ಜೀಯವರ ಪಾಕಿಸ್ತಾನ ಮಿತ್ರತ್ವದ ಕುರಿತಂತೆ ನಂಬಿಕೆ ಇರಿಸಿದ್ದ ಭಾರತೀಯ ಸೇನೆಯು ಪಾಕಿಸ್ತಾನದ ಇಂಥದ್ದೊಂದು ಪ್ರಯತ್ನವನ್ನು ಊಹಿಸಿಯೂ ಇರಲಿಲ್ಲ. ಮೇ ತಿಂಗಳ ಆರಂಭದಲ್ಲಿ ಬೆಟ್ಟದ ಮೇಲಿನ ಮಂಜು ಕರಗಿ ರಸ್ತೆಗಳು ಸೇನೆಯ ಓಡಾಟಕ್ಕೆ ತೆರೆದುಕೊಂಡೊಡನೆ ಭಾರತೀಯ ಸೇನೆ ಕಾಗರ್ಿಲ್ನ ಗುಡ್ಡಗಳ ಮೇಲೆ ಮುಜಾಹಿದ್ದೀನ್ಗಳ ಚಲನವಲನಗಳನ್ನು ಗುರುತಿಸಿತು. ಸಹಜವಾಗಿಯೇ ಇದನ್ನು ಒಳನುಸುಳುವಿಕೆ ಎಂದು ಭಾವಿಸಿದ ಸೇನೆ ಬಂದಿರುವವರ ಸಂಖ್ಯೆಯನ್ನು ತಿಳಿಯಲೆಂದು ಕ್ಯಾಪ್ಟನ್ ಸೌರಬ್ ಕಾಲಿಯಾ ನೇತೃತ್ವದಲ್ಲಿ ಪುಟ್ಟ ತಂಡವೊಂದನ್ನು ಕಳಿಸಿತು. ಮೇ ತಿಂಗಳ ಆರಂಭದಲ್ಲಿ ನಡೆದ ಈ ಘಟನೆಯಿಂದ ಕಕ್ಕಾಬಿಕ್ಕಿಯಾದ ಪಾಕಿಸ್ತಾನ ಭಾರತೀಯರನ್ನು ದಾರಿ ತಪ್ಪಿಸಲೆಂದೇ ಕ್ಯಾಪ್ಟನ್ ಸೌರಬ್ ಕಾಲಿಯಾರನ್ನು ಹಿಡಿದು ಭಯೋತ್ಪಾದಕರು ನಡೆದುಕೊಳ್ಳುವಂತೆ ನಡೆದುಕೊಂಡಿತು. ಅವರ ಸವರ್ಾಂಗಗಳನ್ನು ವಿರೂಪಗೊಳಿಸಿ ಭಾರತೀಯ ಸೇನೆಗೆ ಹಸ್ತಾಂತರಿಸಿತು! ಅವಾಕ್ಕಾದ ಸೇನೆಗೆ ಮುಂದೇನು ಮಾಡಬೇಕೆಂದು ತಕ್ಷಣಕ್ಕೆ ತೋಚಲಿಲ್ಲ. ಪೂರ್ಣ ಪ್ರಮಾಣದ ಪ್ರತಿಕ್ರಿಯೆ ಕೊಡೋಣವೆಂದರೆ ಅಲ್ಲಿರುವುದು ಪಾಕಿಸ್ತಾನೀ ಸೇನೆಯಲ್ಲ. ಹಾಗಂತ ದಾಳಿ ನಡೆಸೋಣವೆಂದರೆ ಮುಜಾಹಿದ್ದೀನ್ಗಳ ಸಂಖ್ಯೆ ಎಷ್ಟೆಂದು ಗೊತ್ತಿಲ್ಲ. ಆ ಇಡಿಯ ತಿಂಗಳು ಈ ಗೊಂದಲದಲ್ಲೇ ಕಳೆದು ಹೋಯ್ತಲ್ಲದೇ ಸ್ವತಃ ರಕ್ಷಣಾ ಸಚಿವ ಜಾಜರ್್ ಫನರ್ಾಂಡೀಸರು ನುಸುಳುಕೋರರು ಒಳಬಂದಿದ್ದಾರೆಂದೇ ಹೇಳಿಕೆ ಕೊಟ್ಟುಬಿಟ್ಟಿದ್ದರು. ಆಯಕಟ್ಟಿನ ಜಾಗಗಳನ್ನು ಪಾಕೀ ಸೈನಿಕರು ವಶಪಡಿಸಿಕೊಂಡಿದ್ದಾರೆ ಎಂದು ಗೊತ್ತಾದ ನಂತರ ಆಪರೇಶನ್ ವಿಜಯ್ ಏಕಾಕಿ ಘೋಷಿಸಲಾಯ್ತು. ನಿಜಕ್ಕೂ ಭಾರತೀಯ ಸೈನಿಕರ ಎಂಟೆದೆಯನ್ನು ಮೆಚ್ಚಲೇಬೇಕು. ಅಡಗಿ ಕುಳಿತವರು ಸೂಕ್ತ ತರಬೇತಿ ಇಲ್ಲದ ಭಯೋತ್ಪಾದಕರೋ ಅಥವಾ ಪಾಕಿಸ್ತಾನೀ ಸೈನಿಕರೋ ಅವರಿಗೆ ಗೊತ್ತಿರಲಿಲ್ಲ. ಗುಡ್ಡಗಳಲ್ಲಿ ಎಷ್ಟು ಸಂಖ್ಯೆಯ ಶತ್ರುಗಳಿದ್ದಾರೆ ಎಂಬ ಅಂದಾಜಿರಲಿಲ್ಲ. ಅವರ ತಯಾರಿ ಎಷ್ಟು, ಇರಬಹುದಾದ ಶಸ್ತ್ರಾಸ್ತ್ರಗಳೇನು ಎಂಬುದರ ಕುರಿತು ಜ್ಞಾನವಿರಲಿಲ್ಲ. ಗೊತ್ತಿದ್ದುದು ಒಂದೇ ಪಾಕಿಸ್ತಾನದ ತೆಕ್ಕೆಯಿಂದ ಗುಡ್ಡಗಳನ್ನು ಬಿಡಿಸಿಕೊಡಬೇಕು ಅಷ್ಟೇ! ಎಲ್ಲಕ್ಕೂ ಮುಖ್ಯವಾಗಿ ಭಾರತದ ಇತರೇ ಭಾಗವನ್ನು ಲಡಾಖ್ನೊಂದಿಗೆ ಬೆಸೆಯುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಒಂದರ ಮೇಲೆ ಪಾಕಿಸ್ತಾನಿಯರು ಹಿಡಿತ ಸಾಧಿಸಿದ್ದರು. ತೊಲೊಲಿಂಗ್ ಬೆಟ್ಟದ ಮೇಲೆ ಕುಳಿತುಕೊಂಡು ಈ ಹೆದ್ದಾರಿಯಲ್ಲಿ ಸಾಗುವ ಪ್ರತಿ ವಾಹನದ ಮೇಲೆಯೂ ದಾಳಿ ಮಾಡಬಲ್ಲ ಶಕ್ತಿಯನ್ನು ಅವರು ಪಡೆದುಕೊಂಡಿದ್ದರು. ಹೀಗಾಗಿ ಇಡಿಯ ಕಾಗರ್ಿಲ್ ಸೆಕ್ಟರ್ನಲ್ಲಿ ಯುದ್ಧವನ್ನು ಸಂಘಟಿಸುವುದು ಅಸಾಧ್ಯವೇ ಆಗಿತ್ತು. ಅಂತಹುದರಲ್ಲಿ ಭಾರತೀಯ ಸೇನೆಯ ತರುಣರು ಗುಡ್ಡವನ್ನೇರಿ ಜೂನ್ ತಿಂಗಳ ಮೊದಲ ವಾರದಲ್ಲಿ ತೊಲೊಲಿಂಗನ್ನು ತೆಕ್ಕೆಗೆ ಹಾಕಿಕೊಂಡರು. ಅದು ಧಿಮಾಕಿನ ಪಾಕಿಸ್ತಾನಕ್ಕೆ ಮೊದಲ ಸೋಲು. ಅದರ ಹಿಂದು ಹಿಂದೆಯೇ ಟೈಗರ್ ಹಿಲ್ ಅನ್ನು ವಶಪಡಿಸಿಕೊಳ್ಳುವ ತಯಾರಿ ಆರಂಭವಾಯ್ತು. ಆಯಕಟ್ಟಿನ ಜಾಗವಾಗಿದ್ದ ಈ ಗುಡ್ಡವನ್ನು ವಶಪಡಿಸಿಕೊಳ್ಳುವುದು ಅನಿವಾರ್ಯವೇ ಆಗಿತ್ತು. ಸಾಹಸೀ ಸೈನಿಕರು ಇದನ್ನು ವಶಪಡಿಸಿಕೊಂಡದ್ದಲ್ಲದೇ ಜೊತೆ-ಜೊತೆಗೇ ಪಾಯಿಂಟ್ 4875 ಅನ್ನೂ ತಮ್ಮ ತೆಕ್ಕೆಗೆ ಹಾಕಿಕೊಂಡರು. ನಾವು ಇಲ್ಲಿ ಹೇಳಿದಷ್ಟು ಸುಲಭವೇನೂ ಆಗಿರಲಿಲ್ಲ ಆ ಕದನ. ಕಡಿದಾದ ಬೆಟ್ಟಗಳನ್ನು ಏರಬೇಕಿತ್ತು. ಸೂಕ್ತ ಸ್ಥಳದಲ್ಲಿ ಸಂಗರ್ಗಳಲ್ಲಿ ಅಡಗಿ ಕೂತ ಪಾಕೀ ಸೈನಿಕರು ಭಾರತೀಯ ಸೈನಿಕರು ವ್ಯಾಪ್ತಿಗೆ ಬರುವವರೆಗೆ ಕಾದಿದ್ದು ಆನಂತರ ಆಕ್ರಮಿಸುತ್ತಿದ್ದರು. ನಮ್ಮವರ ದೈಹಿಕ ಸಾಮಥ್ರ್ಯವಲ್ಲದೇ ಬೌದ್ಧಿಕ ಶಕ್ತಿಗೂ ಇದೊಂದು ಸವಾಲಾಗಿತ್ತು. ಬೋಫೋಸರ್್ಗಳು ಸೂಕ್ತ ಜಾಗವನ್ನು ಆಕ್ರಮಿಸಿಕೊಂಡು ಎದುರಿನಿಂದ ಸಂಗರ್ಗಳ ಮೇಲೆ ನೇರ ಆಕ್ರಮಣ ನಡೆಸಿ ಪಾಕಿಸ್ತಾನಿಯರನ್ನು ಈ ಕದನದಲ್ಲಿ ವ್ಯಸ್ತರಾಗಿರಿಸಿದ್ದರೆ ಅತ್ತ ಭಾರತೀಯ ಸೇನೆಯ ಸಾಹಸೀ ಹುಡುಗರು ಹಿಂಬದಿಯಿಂದ ದಾಳಿ ಮಾಡುತ್ತಾ ಪಾಕಿಸ್ತಾನಿಯರನ್ನು ಧ್ವಂಸಗೊಳಿಸುತ್ತಿದ್ದರು. ಈ ಹಂತದಲ್ಲೇ ಅನೇಕ ಜೀವವನ್ನು ಕಳೆದುಕೊಂಡಿದ್ದೂ ಕೂಡ. ಬಟಾಲಿಕ್ ಸೆಕ್ಟರ್ನ ಕದನವೂ ಕೂಡ ಹೀಗೇ ನಡೆದಿದ್ದು. ಸ್ವಲ್ಪಮಟ್ಟಿಗೆ ಸವಾಲಾಗಿದ್ದು ಮುಷ್ಕೋಹ್ ಕಣಿವೆಯೇ. ಆದರೆ ಭಾರತೀಯ ಸೇನೆ ಕೊನೆಯ ಹಂತದವರೆಗೂ ಕಾದಾಡಿ ಆಯಾಕಟ್ಟಿನ ಜಾಗದಲ್ಲಿದ್ದ ಪಾಕಿಯರನ್ನು ಹೊಡೆದಟ್ಟಿಬಿಟ್ಟಿತು. ಎಂದಿನಂತೆ ಯುದ್ಧ ಆರಂಭವಾದಾಗ ತುಟಿಪಿಟಿಕ್ ಎನ್ನದ ಅಮೇರಿಕಾ ಪಾಕಿಸ್ತಾನದ ಮುಸುಡಿಗೆ ಭಾರತ ಬಲವಾಗಿ ಗುದ್ದಿದೊಡನೆ ಎರಡೂ ರಾಷ್ಟ್ರಗಳನ್ನು ಸಮಾಧಾನ ಮಾಡಿಸುವ ನೆಪ ಹೂಡಿದ್ದಲ್ಲದೇ ಪಾಕಿಸ್ತಾನಿಯರಿಗೆ ಮರಳಿ ತಮ್ಮ ದೇಶಕ್ಕೆ ಹೋಗಲು ಮುಕ್ತ ಅವಕಾಶವನ್ನು ನೀಡಬೇಕೆಂದು ಭಾರತಕ್ಕೆ ತಾಕೀತು ಮಾಡಿತು. ಆಗೆಲ್ಲಾ ನಾವು ಅಮೇರಿಕಾದ ಗೆಳೆತನವನ್ನು ಹೊಂದಿದ್ದ ರಾಷ್ಟ್ರವೇನಾಗಿರಲಿಲ್ಲ. ಜಾಗತಿಕ ರಾಜಕಾರಣದಲ್ಲಿ ಭಾರತದ ಹೆಸರು ಬಲವಾಗಿ ಏನೂ ಕೇಳಿ ಬರುತ್ತಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ಒತ್ತಡಕ್ಕೆ ಮಣಿಯಲೇಬೇಕಾಯ್ತು. ನಮ್ಮ ಸೈನಿಕರು ಬಂದೂಕು ಹಿಡಿದು ಕಾಯುತ್ತಾ ಪಾಕಿಸ್ತಾನಿಯರನ್ನು ತಮ್ಮ ದೇಶಕ್ಕೆ ಮರಳಲು ಬೇಕಾದ ವ್ಯವಸ್ಥೆ ಮಾಡಿಕೊಟ್ಟರು. ಈ ಒಟ್ಟಾರೆ ಧಾವಂತದಲ್ಲಿ ನನ್ನ ದೇಶದ 527 ಸೈನಿಕರ ಬಲಿದಾನವಾಗಿತ್ತು! ಐದು ಇನ್ಫೆಂಟರಿ ಡಿವಿಜನ್, ಐದು ಸ್ವತಂತ್ರ ಬ್ರಿಗೇಡುಗಳು ಕದನಭೂಮಿಯಲ್ಲಲ್ಲದೇ ಪ್ಯಾರಾ ಮಿಲಿಟರಿ ತಂಡದ 44 ಬೆಟಾಲಿಯನ್ಗಳು ಕಾಶ್ಮೀರದಲ್ಲಿ ನೆಲೆನಿಂತಿದ್ದವು. ಒಟ್ಟಾರೆ 7,30,000 ಜನ ಕದನಕ್ಕಾಗಿ ಸಿದ್ಧವಾಗಿದ್ದರು. ಆರಂಭದಲ್ಲಿ ಶತ್ರುಗಳ ಸಂಖ್ಯೆಯನ್ನು 500 ಇರಬಹುದೆಂದು ಅಂದಾಜಿಸಲಾಗಿತ್ತು. ಅದು ಸಾವಿರಕ್ಕೇರಿದ್ದು ಕೊನೆಗೆ 5000ಕ್ಕೂ ಹೆಚ್ಚು ಜನ ಆಯಕಟ್ಟಿನ ಜಾಗದಲ್ಲಿ ಕುಳಿತಿರಬಹುದೆಂದು ಊಹಿಸಲಾಯ್ತು. ಎಕೆ 47, ಮೋಟರ್ಾರ್ ಗನ್ನುಗಳು, ಆ್ಯಂಟಿ ಏರ್ಕ್ರಾಫ್ಟ್ ಗನ್ನುಗಳಲ್ಲದೇ ಸ್ಟಿಂಜರ್ ಮಿಸೈಲುಗಳನ್ನೂ ಪಾಕಿಸ್ತಾನ ಬಳಸಿತ್ತು. ಭಾರತದ ಕಡೆಯಿಂದ ದಾಳಿಯೇನೂ ಕಡಿಮೆಯಾಗಿರಲಿಲ್ಲ. 300 ಗನ್ನುಗಳು, ಮೋಟರ್ಾರ್ಗಳು, ಇತರೆ ಶಸ್ತ್ರಗಳು ಸೇರಿ 5000 ಕ್ಕೂ ಹೆಚ್ಚು ಶೆಲ್ ಬಾಂಬ್ ರಾಕೆಟ್ಗಳನ್ನು ಪ್ರತಿನಿತ್ಯ ಸಿಡಿಸುತ್ತಿದ್ದವು. ಹೀಗೆ ಒಟ್ಟಾರೆ ಸಿಡಿಸಿದ ಶೆಲ್ ಬಾಂಬ್ಗಳ ಸಂಖ್ಯೆ ಎರಡೂವರೆ ಲಕ್ಷ ದಾಟಿತ್ತು ಎಂಬುದೊಂದು ಅಂದಾಜಿದೆ. ದ್ವಿತೀಯ ಮಹಾಯುದ್ಧದ ನಂತರ ಇಷ್ಟು ತೀವ್ರತರದ ಕದನವನ್ನು ಜಗತ್ತು ಕಂಡಿರಲಿಲ್ಲ!

3

ಭಾರತೀಯ ಸೇನೆ ಯಾವ ದೃಷ್ಟಿಯಿಂದ ನೋಡಿದರೂ ಪಾಕಿಸ್ತಾನಕ್ಕಿಂತಲೂ ಬಲಯುತವಾಗಿಯೇ ಕಂಡು ಬಂದಿತ್ತು. ಪ್ರತಿಕೂಲ ಪರಿಸ್ಥಿತಿಯಲ್ಲೂ ಶತ್ರುಗಳ ಕೈಯಿಂದ ಗೆಲುವನ್ನು ಕಸಿಯುವಲ್ಲಿ ಭಾರತೀಯರು ತೋರಿದ ಸಾಧನೆ ಕೊಂಡಾಡಲ್ಪಟ್ಟಿತ್ತು. ಈ ಇಡಿಯ ಕದನ ಮಾಧ್ಯಮಗಳಲ್ಲಿ ಸವಿವರವಾಗಿ ಪ್ರಕಟವಾಯ್ತಲ್ಲದೇ ಸೈನಿಕರ ಶವಯಾತ್ರೆಗಳು ಊರೂರಿನಲ್ಲಿ ಭರ್ಜರಿಯಾಗಿ ನಡೆದವು. ಸೈನಿಕರಿಗೂ ಜನಸಾಮಾನ್ಯರಿಗೂ ಒಂದು ಬಲವಾದ ಕೊಂಡಿ ಏರ್ಪಡಲು ಈ ಯುದ್ಧ ನಿಸ್ಸಂಶಯವಾಗಿ ಕಾರಣವಾಯ್ತು. ಸೈನಿಕರ ಕಲ್ಯಾಣ ನಿಧಿಗಾಗಿ ಊರೂರಿನಲ್ಲಿ ಹಣ ಸಂಗ್ರಹಣೆಯಾಗುತ್ತಿದ್ದುದು ಇದಕ್ಕೊಂದು ಸಾಕ್ಷಿಯಾಗಿತ್ತಷ್ಟೇ. ಸ್ವತಃ ಪ್ರಧಾನಮಂತ್ರಿ ಸೈನಿಕರು ಚಿಕಿತ್ಸೆ ಪಡೆಯುತ್ತಿದ್ದ ಸ್ಥಳಕ್ಕೇ ಹೋಗಿ ಪ್ರೇರಣೆ ತುಂಬಿದರು. ರಕ್ಷಣಾ ಸಚಿವ ಜಾಜರ್್ ಫನರ್ಾಂಡೀಸರು ಸೈನಿಕರ ಆತ್ಮಸ್ಥೈರ್ಯ ವೃದ್ಧಿಸುವ ಯಾವ ಪ್ರಯತ್ನವನ್ನೂ ಕೈಬಿಡಲಿಲ್ಲ. ಇದಕ್ಕೆ ವಿರುದ್ಧವಾಗಿ ಪಾಕಿಸ್ತಾನೀ ಸೇನೆ ತನ್ನ ಸೈನಿಕರ ಶವಗಳನ್ನು ತನ್ನದ್ದೆಂದು ಒಪ್ಪಿಕೊಳ್ಳಲೂ ಹಿಂಜರಿಯಿತು. ಹಾಗೆ ಒಪ್ಪಿಕೊಂಡರೆ ತನ್ನ ಪಾತ್ರ ಇರುವುದು ಖಚಿತವಾದಂತೆ ಎಂಬುದು ಅದಕ್ಕೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿಯೇ ಭಾರತೀಯ ಸೈನಿಕರೇ ಆ ಶವಗಳಿಗೂ ಅಂತ್ಯಸಂಸ್ಕಾರ ನಡೆಸಬೇಕಾಗಿ ಬಂತು! ತನ್ನ ಸೈನಿಕರ ಕುರಿತಂತೆ ಪಾಕಿಸ್ತಾನ ತೋರುವ ಕಾಳಜಿ ಈ ಮಟ್ಟದ್ದು. ಚೀನಾದ ಕಥೆಯೂ ಇದಕ್ಕಿಂತ ಭಿನ್ನವೇನಲ್ಲ. ಗಾಲ್ವಾನ್ ಕಣಿವೆಯಲ್ಲಿ ತೀರಿಕೊಂಡ ಭಾರತದ ಸೈನಿಕರಿಗೆ ದೇಶದೆಲ್ಲೆಡೆ ಗೌರವ ದಕ್ಕಿದರೆ ಚೀನಾ ತನ್ನ ಸೈನಿಕರ ಹೆಸರನ್ನೂ ಕೂಡ ಪ್ರಕಟಿಸುವಲ್ಲಿ ಹಿಂದೇಟು ಹೊಡೆಯಿತು. ಅಷ್ಟೇ ಅಲ್ಲ, ಈ ಸೈನಿಕರ ಅಂತ್ಯ ಸಂಸ್ಕಾರವನ್ನು ನೆರವೇರಿಸಬಾರದೆಂದು ಅವರ ಕುಟುಂಬಗಳಿಗೆ ತಾಕೀತು ಮಾಡಿತು. ಏಕೆಂದರೆ ಸತ್ತವರ ಸಂಖ್ಯೆ ಜಗತ್ತಿಗೆ ತಿಳಿದರೆ ಕಷ್ಟ ಎಂಬ ಧಾವಂತ ಅದಕ್ಕೆ. ತನ್ನ ಮಾನ ಉಳಿಸಿಕೊಳ್ಳಲು ಸೈನಿಕರ ಪ್ರಾಣವನ್ನು ಒತ್ತೆಯಿಡುವ ರಾಷ್ಟ್ರಗಳು ಇವಾದರೆ ಸೈನಿಕರನ್ನೇ ರಾಷ್ಟ್ರದ ಮಾನವೆಂದು ಬಗೆದು ಅದರ ರಕ್ಷಣೆಗಾಗಿ ಒಟ್ಟಾಗುವ ರಾಷ್ಟ್ರ ಇನ್ನೊಂದೆಡೆ!

4

ಕಾಗರ್ಿಲ್ ಯುದ್ಧ ನಮಗೆ ಅನೇಕ ಪಾಠ ಕಲಿಸಿತ್ತು. ಪಾಕಿಸ್ತಾನ ನಮಗೆಂದಿಗೂ ಮಿತ್ರವಾಗಲಾರದು. ಚೀನಾ ಹೇಳಿದಂತೆ ನಡೆಯುವ ಚೀನಾದ ನಿಯತ್ತಿನ ರಾಷ್ಟ್ರ ಅದು. ಹೀಗಾಗಿ ಮಾತುಕತೆ ನಡೆಯುತ್ತಿರುವಾಗಲೂ ಯುದ್ಧಕ್ಕೆ ಸಿದ್ಧವಾಗಿರುವುದು ಅನಿವಾರ್ಯ. ಇನ್ನು ಭಾರತೀಯ ಸೈನಿಕರು ರಾಷ್ಟ್ರ ರಕ್ಷಣೆಗಾಗಿ ಯಾವ ಹಂತಕ್ಕೆ ಬೇಕಿದ್ದರೂ ಹೋಗಬಲ್ಲರು. ಶತ್ರಗಳ ಕೊರಳಲ್ಲಿದ್ದ ವಿಜಯಮಾಲೆಯನ್ನು ಸದ್ದಿಲ್ಲದೇ ತೆಗೆದು ತಾವೇ ಏರಿಸಿಕೊಳ್ಳುವ ತಾಕತ್ತು ಅವರಿಗಿದೆ. ಸೂಕ್ತ ಶಸ್ತ್ರಗಳನ್ನು ಕೈಗಿತ್ತರೆ ಯಾರನ್ನು ಬೇಕಿದ್ದರೂ ಕಡಿಯಬಲ್ಲ ಸಾಮಥ್ರ್ಯ ಅವರದ್ದು. ಮತ್ತು ಅಂತರ್ರಾಷ್ಟ್ರೀಯ ಒತ್ತಡಗಳಿಗೆ ಬಲಿಯಾಗದೇ ಅಥವಾ ಜಾಗತಿಕ ಅಭಿಪ್ರಾಯವನ್ನು ರೂಪಿಸಬಲ್ಲವರೊಂದಿಗೆ ಸೂಕ್ತ ಗೆಳೆತನವಿರಿಸಿಕೊಂಡು ಮುಂದಡಿಯಿಡಬೇಕು. ಇವಿಷ್ಟೂ ಪಾಠವನ್ನು ಮೋದಿ ಚೆನ್ನಾಗಿ ಕಲಿತಿದ್ದಾರೆ. ನವಾಜ್ ಶರೀಫರ ಮಗಳ ಮದುವೆಗೆ ಹೋಗಿ ಬಂದು ಭಾರತೀಯ ಸೈನಿಕರಿಗೆ ಯುದ್ಧ ಸನ್ನದ್ಧವಾಗಿರುವಂತೆ ಹೇಳುತ್ತಾರೆ. ಭಾರತೀಯ ಸೈನಿಕರ ಆತ್ಮಶಕ್ತಿಯನ್ನು ಭಿನ್ನ ಭಿನ್ನ ಸ್ವರೂಪಗಳಲ್ಲಿ ಹೆಚ್ಚಿಸುವುದಲ್ಲದೇ ಅವರಿಗಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡುತ್ತಿದ್ದಾರೆ. ಈ ವಿಶ್ವಾಸದ ಮೇಲೆಯೇ ಚೀನಾದ ಎದುರಿಗೂ ಧೈರ್ಯವಾಗಿ ನಿಂತಿರೋದು ಅವರು. ಇದೇ ವಿಶ್ವಾಸದಿಂದ ಪ್ರತಿಯೊಬ್ಬ ಭಾರತೀಯನೂ ಮುನ್ನುಗ್ಗುವುದು ಸಾಧ್ಯವಾದರೆ ಚೀನಾದೆದುರಿನ ಗೆಲುವು ಕೂಡ ಅಸಾಧ್ಯವಲ್ಲ. ನಿಸ್ಸಂಶಯವಾಗಿ ಗೆಲುವು ನಮ್ಮದೇ!!

Comments are closed.