ವಿಭಾಗಗಳು

ಸುದ್ದಿಪತ್ರ


 

ಕಾಶ್ಮೀರದ ಪಂಡಿತರು ಉಳಿದಿದ್ದು ಸಿಖ್ಖರ ಗುರುವಿನಿಂದ!

ಪಂಡಿತರೆಂದರೆ ಶಿಕ್ಷಿತರು ಎಂದೇ ಅರ್ಥ. ಟೆಂಟುಗಳಲ್ಲಿ ಬದುಕು ಅಸಹನೀಯವಾಗಿದ್ದರೂ ಮನೆಯ ಹಿರಿಯರು ಮಕ್ಕಳಿಗೆ ಪಾಠ ಮಾಡುವುದನ್ನು ಮರೆಯಲಿಲ್ಲ. ಓದಿಕೊಂಡವರು ಆ ಮಕ್ಕಳಿಗೆಂದೇ ಪುಟ್ಟ ಶಾಲೆಯನ್ನು ತೆರೆದು ಮುಂದಿನ ಪೀಳಿಗೆಯ ಪಂಡಿತತನಕ್ಕೆ ಕೊರತೆಯಾಗದಂತೆ ನೋಡಿಕೊಂಡರು. ಹೀಗಾಗಿಯೇ ಎಲ್ಲವನ್ನೂ ಕಳಕೊಂಡಮೇಲೂ ದೂರದೂರುಗಳಿಗೆ ಹೋಗಿ ನಾವು ಅಧ್ಯಯನ ಮುಂದುವರಿಸಿದ್ದೇವೆ’ ಎಂದ.

ಸುಮಾರು 25 ವರ್ಷಗಳ ಹಿಂದಿನ ಮಾತು. ನಾನು ವಿದ್ಯಾಥರ್ಿ ನಿಲಯದಲ್ಲಿದ್ದಾಗ ನನ್ನ ಜೊತೆಗಾರ ಸೂರಜ್ ಹಿಂದಿ ಬಿಟ್ಟರೆ ಬೇರೆ ಮಾತನಾಡುತ್ತಿರಲಿಲ್ಲ. ಇಂಗ್ಲೀಷು ಅವನದ್ದು ಚೆನ್ನಾಗಿತ್ತು. ಹೀಗೇ ಒಮ್ಮೆ ಕುಳಿತು ಅವನ ಊರು, ಅಲ್ಲಿನ ಜನ ಇವುಗಳ ಬಗ್ಗೆ ಮಾತನಾಡುವಾಗ ಅವನು ಹೇಳಿದ ಸಂಗತಿಗಳು ತಲ್ಲಣಿಸುವಂತಿದ್ದವು. ಆತ ಮೂಲತಃ ಕಾಶ್ಮೀರಿ ಪಂಡಿತರ ಕುಟುಂಬಕ್ಕೆ ಸೇರಿದವನು. ತನ್ನ ಪೂರ್ವಜರ ಮೇಲೆ ಆದ ಆಘಾತಗಳನ್ನು ಆತ ಎಲ್ಲರೊಂದಿಗೂ ಹೇಳಿಕೊಳ್ಳುತ್ತಿರಲಿಲ್ಲ. ಯಾರಾದರೂ ಆಸಕ್ತಿ ತೋರಿದರೆ ಮಾತ್ರ ಅದನ್ನು ಬಿಚ್ಚಿಡುತ್ತಿದ್ದ. ಅಷ್ಟು ಸ್ವಾಭಿಮಾನಿ ಅವನು ಮತ್ತು ಅವನ ವಂಶಜರು. ಅನವಶ್ಯಕವಾಗಿ ಕಣ್ಣೀರಿಡುವ ಜನಾಂಗವೇ ಅಲ್ಲ. ಆತ ಹೇಳಿದ ಒಂದು ಮಾತು ನನ್ನನ್ನು ಬಹುಕಾಲ ಕೊರೆಯಿತು. ತಮ್ಮ ಸ್ವಂತ ನಾಡನ್ನು ಬಿಟ್ಟುಬಂದ ಪಂಡಿತರು ಅನಾಥರಂತೆ ದೆಹಲಿಯ, ಜಮ್ಮುವಿನ ಟೆಂಟುಗಳಲ್ಲಿ ವಾಸಿಸಲಾರಂಭಿಸಿದರು. ಚೆನ್ನಾಗಿ ಬದುಕು ನಡೆಸಿದ್ದ, ಸಾಕಷ್ಟು ಜಮೀನಿನ ಒಡೆಯರೂ ಆಗಿದ್ದ ಸಾವಿರಾರು ಪರಿವಾರಗಳು ಪುಟ್ಟದಾದ ಟೆಂಟು ಮಾಡಿಕೊಂಡು ವಾಸಿಸಲಾರಂಭಿಸಿದ್ದವಂತೆ! ಅನೇಕ ದಶಕಗಳ ಕಾಲ ಆ ಟೆಂಟುಗಳಿಗೆ ತೇಪೆ ಹಚ್ಚಿಕೊಂಡೇ ಮನೆಯ ಹಿರಿಯರು ಕಾಲ ತಳ್ಳಿಬಿಟ್ಟರು. ಅವರ ಬೆಂಬಲಕ್ಕೆ ನಿಂತರೆ ಮುಸಲ್ಮಾನರ ವೋಟು ಕಳೆದುಕೊಳ್ಳುವ ಭಯದಿಂದ ಕಾಂಗ್ರೆಸ್ಸು ಒಂದಿಂಚೂ ಮುಂದುವರೆಯಲಿಲ್ಲ. ಹೀಗಾಗಿ ಆ ಪಂಡಿತರ ಬದುಕು ಮೂರಾಬಟ್ಟೆಯಾಯ್ತು. ಇಷ್ಟು ಬಹುತೇಕ ಎಲ್ಲರಿಗೂ ಗೊತ್ತಿರುವಂತಹ ವಿಚಾರವೇ. ಆದರೆ ಸೂರಜ್ ಆ ಟೆಂಟಿನ ಒಳಗಿನ ಬದುಕನ್ನು ಹೇಳಲಾರಂಭಿಸಿದ. ಗಂಡ-ಹೆಂಡತಿ, ಅಣ್ಣ-ಅತ್ತಿಗೆ, ಮೈದಾ-ನಾದಿನಿ ಹೀಗೆ ಪುಟ್ಟದೊಂದು ಟೆಂಟಿನಲ್ಲಿ ಮೂನರ್ಾಲ್ಕು ಜನ ಸಂಸಾರ ನಡೆಸಬೇಕಾದ ಪರಿಸ್ಥಿತಿ ಬಂದಿದ್ದರಿಂದ ಪಂಡಿತರ ಪರಿವಾರಗಳ ಖಾಸಗಿ ಬದುಕು ಕಳೆದೇಹೋಯ್ತು. ಅತ್ಯಂತ ಲಜ್ಜೆಯುಳ್ಳ ಪರಿವಾರಗಳಿಂದ ಬಂದಿದ್ದಂತಹ ಈ ಪಂಡಿತರು ಭವಿಷ್ಯದ ಪೀಳಿಗೆಯ ಸೃಷ್ಟಿಯ ಕಾರ್ಯಕ್ಕೂ ಕೂಡ ಸಾವಿರ ಬಾರಿ ಆಲೋಚಿಸುವಂತಾಯ್ತು. ಹೀಗಾಗಿಯೇ ತಮ್ಮ ಹೊಸ ಪೀಳಿಗೆಯಲ್ಲಿ ಯಾವ ತರುಣರೂ ಅಲ್ಲಿರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಅವರು ಹೊತ್ತರು. ಪ್ರತಿಯೊಬ್ಬರನ್ನೂ ನಾಡಿನ ಮೂಲೆ-ಮೂಲೆಗಳಿಗೂ ಅಟ್ಟಿಬಿಟ್ಟರು. ಇಂದು ದೇಶದ ಅನೇಕ ನಗರಗಳಲ್ಲಿ ಪಂಡಿತರ ಮಕ್ಕಳುಗಳಿದ್ದಾರೆ. ಅವರು ಆಯಾ ಊರಿನವರೊಂದಿಗೆ ಹೇಗೆ ಬೆರೆತುಬಿಡುತ್ತಾರೆಂದರೆ ನಿಮಗವರು ಕಾಶ್ಮೀರದಿಂದ ಬಂದವರೆಂದು ಗೊತ್ತೂ ಆಗುವುದಿಲ್ಲ. ಪಂಡಿತರ ಅಪರೂಪದ ಗುಣಗಳಲ್ಲೊಂದು ಇದು. ತಾವು ಹೋದ ಊರಿನಲ್ಲಿ ತಮ್ಮದ್ದೇ ಪ್ರತ್ಯೇಕವಾಗಿರುವಂತಹ ಬದುಕು ನಡೆಸಲು ಅವರೆಂದಿಗೂ ಪ್ರಯತ್ನಿಸುವುದಿಲ್ಲ. ಎಲ್ಲರೊಂದಿಗೆ ಒಂದಾಗಿ ತಾವಿರುವ ನಾಡಿನ ಗೌರವವನ್ನು ಹೆಚ್ಚಿಸುವ ಕೆಲಸದಲ್ಲಿ ಮಗ್ನರಾಗಿಬಿಡುತ್ತಾರೆ. ಇದಕ್ಕೆ ಪ್ರತಿಯಾಗಿ ಮುಸಲ್ಮಾನರ ಬದುಕನ್ನು ಒಮ್ಮೆ ಅವಲೋಕಿಸಿ ನೋಡಿ. ಯಾವುದಾದರೂ ಸಕರ್ಾರಿ ಜಾಗವನ್ನು ಒಬ್ಬ ಆಕ್ರಮಿಸಿಕೊಂಡರೆ ಸಾಕು ಕೆಲವೇ ತಿಂಗಳುಗಳಲ್ಲಿ ನೂರಾರು ಮನೆಗಳು ತಲೆಯೆತ್ತಿಬಿಡುತ್ತವೆ. ಹೀಗೆ ಒಮ್ಮೆ ಗುಂಪುಗೂಡಿಬಿಟ್ಟರೆ ತಮ್ಮದ್ದನ್ನು ಮಿನಿ ಪಾಕಿಸ್ತಾನವೆಂತಲೋ, ಮಿನಿ ಬಾಂಗ್ಲಾದೇಶವೆಂತಲೋ ಕರೆದುಕೊಳ್ಳುವುದಕ್ಕೂ ಅವರು ಹೇಸುವುದಿಲ್ಲ. ಕಾಲಕ್ರಮದಲ್ಲಿ ಅಂತಹ ಪ್ರದೇಶಗಳು ಅದೆಷ್ಟು ಭಯಾನಕವಾಗಿಬಿಡುತ್ತವೆಂದರೆ ಊರಿನ ಜನರಿರಲಿ ಸ್ವತಃ ಪೊಲೀಸರು ಆ ಜಾಗಗಳಿಗೆ ಹೋಗಲು ಹೆದರುವಂತಹ ವಾತಾವರಣ ನಿಮರ್ಾಣವಾಗಿಬಿಡುತ್ತದೆ! ಸೂರಜ್ ಇವೆಲ್ಲವನ್ನೂ ನನಗೆ ವಿವರಿಸುತ್ತಾ ಒಂದು ಅಪರೂಪದ ಮಾತನ್ನು ಹೇಳಿದ. ‘ಪಂಡಿತರೆಂದರೆ ಶಿಕ್ಷಿತರು ಎಂದೇ ಅರ್ಥ. ಟೆಂಟುಗಳಲ್ಲಿ ಬದುಕು ಅಸಹನೀಯವಾಗಿದ್ದರೂ ಮನೆಯ ಹಿರಿಯರು ಮಕ್ಕಳಿಗೆ ಪಾಠ ಮಾಡುವುದನ್ನು ಮರೆಯಲಿಲ್ಲ. ಓದಿಕೊಂಡವರು ಆ ಮಕ್ಕಳಿಗೆಂದೇ ಪುಟ್ಟ ಶಾಲೆಯನ್ನು ತೆರೆದು ಮುಂದಿನ ಪೀಳಿಗೆಯ ಪಂಡಿತತನಕ್ಕೆ ಕೊರತೆಯಾಗದಂತೆ ನೋಡಿಕೊಂಡರು. ಹೀಗಾಗಿಯೇ ಎಲ್ಲವನ್ನೂ ಕಳಕೊಂಡಮೇಲೂ ದೂರದೂರುಗಳಿಗೆ ಹೋಗಿ ನಾವು ಅಧ್ಯಯನ ಮುಂದುವರಿಸಿದ್ದೇವೆ’ ಎಂದ.

7

ಆಗಿನಿಂದಲೂ ಪಂಡಿತರ ಬವಣೆಯನ್ನು ಹತ್ತಿರದಿಂದ ಕಾಣಬೇಕೆಂಬ ಬಯಕೆ ಮೊಳಕೆಯೊಡೆದಿತ್ತು. ಏಳೆಂಟು ವರ್ಷಗಳ ಹಿಂದೆ ಅವಕಾಶ ಸಿಕ್ಕಾಗ ಕಾಶ್ಮೀರದ ಗಲ್ಲಿ-ಗಲ್ಲಿಗಳಲ್ಲಿ ಪಂಡಿತರ ಹಿರಿಯರನ್ನು ಹುಡುಕಿಕೊಂಡು ಅಲೆದಾಡಿದ್ದೆ. ಆಗ ಸಿಕ್ಕವರೇ ಪಂಡಿತ್ ಅಮರನಾಥ್ ವೈಷ್ಣವಿ. ಅವರನ್ನು ಪಂಡಿತರೆಲ್ಲಾ ತಮ್ಮ ಜನಾಂಗದ ಪಿತಾಮಹ ಎಂದೇ ಕರೆಯುತ್ತಾರೆ. 90ರ ದಶಕದ ಮುಸಲ್ಮಾನರ ಆಕ್ರಮಣದ ಕಾಲಕ್ಕೆ ತಮ್ಮ ಜನಾಂಗದವರೊಂದಿಗೆ ನಿಂತು ಅವರನ್ನು ಕರೆದುಕೊಂಡು ಜಮ್ಮುವಿಗೆ ಬಂದು ಸಕರ್ಾರದೊಂದಿಗೆ ಗುದ್ದಾಡಿ ಹಂತ-ಹಂತವಾಗಿ ಸವಲತ್ತುಗಳನ್ನು ಪಡೆಯುವಲ್ಲಿ ಅವರ ಪಾತ್ರ ಬಲುದೊಡ್ಡದ್ದು! ಅವರ ಮನೆಗೆ ಹೋದರೆ ಮನೆಯೆಂದು ಕರೆಯುವಷ್ಟು ದೊಡ್ಡದಲ್ಲದ ಪುಟ್ಟ ಕೋಣೆ ನಮ್ಮನ್ನು ಆಹ್ವಾನಿಸುತ್ತಿತ್ತು. ಒಟ್ಟಾರೆ ಮನೆ 10 ಅಡಿಗೆ 12 ಅಡಿ ಇರಬಹುದು ಅಷ್ಟೇ. ಅದರಲ್ಲೇ ಅಡುಗೆ, ಬಚ್ಚಲು ಮತ್ತು ವಿಸ್ತಾರವಾದ ಕೊಠಡಿ ಕೂಡ. ನೆಲದ ಮೇಲೆ ಹಾಸಿದ್ದ ಒಂದಡಿ ಎತ್ತರದ ಮಂಚದ ಮೇಲೆ ಬನಿಯನ್ನು ಹಾಕಿ ಕುಳಿತಿದ್ದ ಅಮರ್ನಾಥ್ ವೈಷ್ಣವಿಯವರು ನಮ್ಮ ವಿಚಾರಗಳನ್ನು ಕೇಳಿ ಮುಖ ಅಗಲಿಸಿಕೊಂಡರು. ಪಂಡಿತರ ಕುರಿತಂತೆ ತಿಳಿದುಕೊಳ್ಳುವ ಕಾಳಜಿಯುಳ್ಳ ಹೊಸಪೀಳಿಗೆಯೊಂದಿದೆ ಎಂಬುದೇ ಅವರ ವಿಶ್ವಾಸಕ್ಕೆ ನೀರೆರೆದಿತ್ತು. ಮಧ್ಯಾಹ್ನದ ಅವರ ಎಂದಿನ ನಿದ್ದೆಯನ್ನು ಬದಿಗಿಟ್ಟು ಮಾತಿಗೆ ಕುಳಿತರು. ಪಂಡಿತರ ಇತಿಹಾಸವನ್ನು ತಮಗೆ ನೆನಪಾಗುತ್ತಿದ್ದ ರೀತಿಯಲ್ಲಿ ಹೇಳುತ್ತ ಹೋದರು. ಅವರನ್ನು ಭೇಟಿಮಾಡಿದಾಗ ಅವರ ವಯಸ್ಸು ನಿಸ್ಸಂಶಯವಾಗಿ 90ರ ಆಸುಪಾಸಿನಲ್ಲಿತ್ತು. ಒಳಗಿನ ಕುದಿ ಮಾತ್ರ ಒಂದಿನಿತೂ ಕಡಿಮೆಯಾಗಿರಲಿಲ್ಲ! ಅವರು ಹೇಳುತ್ತ ಹೋಗುತ್ತಿದ್ದರು. ನಾವು ಮೈಯೆಲ್ಲಾ ಕಣ್ಣಾಗಿ ಕುಳಿತುಕೊಂಡಿದ್ದೆವು.

8

ಕಾಶ್ಮೀರ ಭೂಲೋಕದ ಸ್ವರ್ಗವೇ ಸರಿ. ಹಾಗಂತ ನಾವು-ನೀವಲ್ಲ ಅಲ್ಲಿಗೆ ಮೊದಲ ಬಾರಿಗೆ ಭೇಟಿ ಕೊಟ್ಟೊಡನೆ ಉದ್ಗರಿಸಿದ್ದವನು ಷಹಜಹಾನ್. ಹಿಮಾಲಯದ ತಪ್ಪಲಿನಲ್ಲಿದ್ದ ಈ ಪ್ರದೇಶ ಗುಡ್ಡ-ಬೆಟ್ಟಗಳಿಂದ ಸರೋವರಗಳಿಂದ ಆವೃತವಾಗಿ ಜಗತ್ತೆಲ್ಲವನ್ನೂ ಕೈಬೀಸಿ ಕರೆಯುವಂತಹ ವಾತಾವರಣವನ್ನು ತನ್ನದಾಗಿಸಿಕೊಂಡಿತ್ತು. ಇಲ್ಲಿನ ಮೂಲ ನಿವಾಸಿಗಳು, ಹಿಂದೂಗಳು ಇವರೆಲ್ಲರನ್ನೂ ಸೇರಿಸಿಯೇ ಪಂಡಿತರು ಎನ್ನೋದು. ಸಾಕ್ಷಾತ್ ಸರಸ್ವತಿಯ ವಾಸಸ್ಥಾನವೂ ಆಗಿರುವುದರಿಂದ ಆಕೆಯ ಸಂತಾನ ಪಂಡಿತವಲ್ಲದೆ ಮತ್ತೇನು? ಈ ಪಂಡಿತರಂತೂ ಪ್ರೇಮವೇ ಮೈವೆತ್ತ ಜನಾಂಗ. ಶತ್ರುಗಳನ್ನೂ ಮನೆಗೆ ಕರೆದು ಊಟ ಹಾಕಿಸಿ ಪ್ರೀತಿಯಿಂದ ಕಳಿಸುವ ವಿಶೇಷ ವ್ಯಕ್ತಿತ್ವ ಅವರದ್ದು! ಕಾಶ್ಮೀರದ ಜನರ ಗುಣ-ನಡತೆಯನ್ನು ಆಧಾರವಾಗಿಟ್ಟುಕೊಂಡು ಕಾಶ್ಮೀರಿಯತ್ತಿನ ಬಗ್ಗೆ ತುಂಬಾ ಚಚರ್ೆ ಮಾಡುತ್ತಾರಲ್ಲಾ ಅವೆಲ್ಲವೂ ಈ ಪಂಡಿತರೇ ನಿಮರ್ಿಸಿಕೊಟ್ಟ ಭೂಮಿಕೆ. ಈ ಪಂಡಿತರು ಅನೇಕ ಋಷಿಗಳನ್ನು, ಸಂತರನ್ನು, ಸಮಾಜಕಮರ್ಿಗಳನ್ನು, ಶ್ರೇಷ್ಠ ಆಡಳಿತಗಾರರನ್ನು ರಾಷ್ಟ್ರಕ್ಕೆ ಸಮಪರ್ಿಸಿದ್ದಾರೆ. ಎಲ್ಲಾ ಬಗೆಯ ಸಮಸ್ಯೆಗಳಿಗೂ ಪರಿಹಾರಕೊಡಬಲ್ಲ ಸಾಮಥ್ರ್ಯ ಈ ಕಾರಣಕ್ಕೆ ಕಾಶ್ಮೀರಕ್ಕೆ ಸಿದ್ಧಿಸಿತ್ತು. ದೇಹ-ಮನಸ್ಸುಗಳಿಗೆ ಆಯಾಸವೆನಿಸಿದರೆ ಕಾಶ್ಮೀರದ ಪರಿಸರ ಮುದಕೊಡುತ್ತಿತ್ತು, ಬೌದ್ಧಿಕ ಕಸರತ್ತು ಬೇಕೆನಿಸಿದರೆ ಪಂಡಿತರ ಚುರುಕುಬುದ್ಧಿ ಆಟವಾಡುತ್ತಿತ್ತು. ಬಿರುಗಾಳಿಯಂತೆ ಬಂದದ್ದು ಮುಸಲ್ಮಾನರ ಆಕ್ರಮಣ. 13ನೇ ಶತಮಾನದಿಂದೀಚೆಗೆ ಈ ಆಕ್ರಮಣ ಎಷ್ಟು ತೀವ್ರವಾಯ್ತೆಂದರೆ ಶಾಂತವಾಗಿದ್ದ ಪಂಡಿತರ ನಾಡು ಬೆಂಕಿಯುಂಡೆಯಾಯ್ತು. ಜುಲ್ಕಾದಿರ್ ಖಾನ್ ಎಂಬ ಟಾರ್ಟರ್ ಕಾಶ್ಮೀರದಲ್ಲಿ 8 ತಿಂಗಳುಗಳ ಕಾಲ ತನ್ನ ಅತ್ಯಾಚಾರವನ್ನು ನಡೆಸಿ ಲೂಟಿಗೈದು ಮಾನಭಂಗ ಮಾಡಿ ಕೊನೆಗೆ ಹತ್ತಾರು ಸಾವಿರ ಜನರನ್ನು ತನ್ನ ದೇಶದತ್ತ ಗುಲಾಮರನ್ನಾಗಿ ಎಳೆದುಕೊಂಡು ಹೋದ. ಆದರೆ ಹಿಮಾಲಯದ ಚಳಿಯನ್ನು ತಾಳಲಾಗದೇ ದೇವಸಾರ್ಪಾಸಿನ ಬಳಿ ಕೊನೆಯುಸಿರೆಳೆದ. ಹೀಗೆ ಆತ ಎಳೆದೊಯ್ದಿದ್ದ ಎಂಟ್ಹತ್ತು ಸಾವಿರ ಜನರ ಬದುಕು ಅಸಹನೀಯವಾಯ್ತು. ಚಳಿಯನ್ನು ತಾಳಲಾಗದೇ ಅವರೆಲ್ಲಾ ಅಲ್ಲಿಯೇ ಕೊನೆಯುಸಿರೆಳೆದರು! ಆ ಜಾಗವನ್ನು ಇಂದಿಗೂ ಇತಿಹಾಸ ಬಲ್ಲವರು ಬಟನ್ ಸಗಾನ್ ಎನ್ನುತ್ತಾರೆ. ಅದರರ್ಥ ಪಂಡಿತರ ಸಾವಿನ ಕುಲುಮೆ ಅಂತ. ಮುಂದೆ ಸಿಖಂದರ್ ಇದೇ ಕಾಶ್ಮೀರಿ ಪಂಡಿತರ ಮೇಲೆ ದಾಳಿಗೈದು ಅವರ ಪವಿತ್ರ ಗ್ರಂಥಗಳನ್ನೆಲ್ಲಾ ದಾಲ್ ಸರೋವರಕ್ಕೆಸೆದುಬಿಟ್ಟ. ಕಾಶ್ಮೀರದ ಕುರಿತಂತೆ ಬರೆದಿರುವ ಜೋನ್ರಾಜ್ನ ಇತಿಹಾಸವನ್ನು ಒಪ್ಪುವುದಾದರೆ ಸಿಖಂದರ್ ಒಂದುಲಕ್ಷಕ್ಕೂ ಹೆಚ್ಚು ಪಂಡಿತರನ್ನು ದಾಲ್ನಲ್ಲಿ ಮುಳುಗಿಸಿಯೇ ಕೊಂದುಬಿಟ್ಟ. ಶ್ರೀನಗರದ ರೇನ್ವಾರಿಯಲ್ಲಿ ಸಾವಿರಾರು ಜನ ಪಂಡಿತರನ್ನು ಸುಟ್ಟುಹಾಕಲಾಯ್ತು. ಆ ಜಾಗವನ್ನು ಪಂಡಿತರು ಇಂದಿಗೂ ಬಟನ್ ಮಜಾರ್ ಎಂದು ಕರೆಯುತ್ತಾರೆ. ಕಾಶ್ಮೀರಿ ಭಾಷೆಯಲ್ಲಿ ಅದರರ್ಥ ಪಂಡಿತರ ಸ್ಮಶಾನ ಅಂತ. ಈ ನಡುವೆ ಅನೇಕರು ಪಂಡಿತರ ಮೇಲೆ ಅತ್ಯಾಚಾರ ನಡೆಸಿದ್ದಾರೆ! ಆಗೆಲ್ಲಾ ಪಂಡಿತರು ಈ ಮುಸಲ್ಮಾನರ ಕ್ರೌರ್ಯವನ್ನು ತಾಳಲಾಗದೇ ಕಾಶ್ಮೀರವನ್ನು ಬಿಟ್ಟು ಓಡಿಯೇ ಹೋಗಿದ್ದಾರೆ. ತೀರಾ ಆಫ್ಘನ್ನಿಂದ, ತುಕರ್ಿಯಿಂದ ಬಂದವರೇ ಕ್ರೂರಿಗಳಾಗಬೇಕೆಂದಿಲ್ಲ. ಭಾರತೀಯರಾಗಿದ್ದು ಹಿಂದೂ-ಬೌದ್ಧರಾಗಿದ್ದವರೂ ಇಸ್ಲಾಮನ್ನು ಒಪ್ಪಿಕೊಂಡ ಮೇಲೆ ಕೆಟ್ಟಾಕ್ರೂರಿಗಳಾಗುವುದನ್ನು ಕಾಶ್ಮೀರದ ಇತಿಹಾಸ ಕಂಡಿದೆ. ಬುಲ್ಬುಲ್ಶಾನಿಂದ ಮತಾಂತರಕ್ಕೊಳಗಾಗಿ ಸದ್ರುದ್ದೀನ್ ಎಂಬ ಹೆಸರು ಪಡೆದುಕೊಂಡ ಬೌದ್ಧ ರಿಂಚೆನ್ ಪಂಡಿತರ ನಡುವೆ ಬೌದ್ಧನಾಗಿಯೇ ಕಾಣಿಸಿಕೊಂಡ. ಅವನ ಕಪಟತನವನ್ನರಿಯದೇ ಪಂಡಿತರು ಪ್ರೀತಿಯಿಂದಲೇ ಆತನನ್ನು ಆದರಿಸಿದರು. ಸಮಯ ಸಾಧಿಸಿದ ಆತ ಕಾಶ್ಮೀರಿ ಪಂಡಿತರ ಸೇನಾನಾಯಕನಾಗಿದ್ದ ರಾಮ್ಚಂದರ್ನನ್ನು ಕೊಂದು ಅಧಿಕಾರಕ್ಕೆ ಬಂದ. ಅವನ ಕ್ರೌರ್ಯದ ಇತಿಹಾಸವೂ ಕೂಡ ಪಂಡಿತರನ್ನು ತಲ್ಲಣಗೊಳಿಸುವಂಥದ್ದು. ಸ್ವಲ್ಪ ಅಕ್ಬರನ ಕಾಲಕ್ಕೆ ಕಾಶ್ಮೀರ ಶಾಂತಿಯನ್ನು ಕಂಡಿತ್ತು ಎನ್ನುತ್ತಾರೆ. ಕಾಶ್ಮೀರ ಬಿಟ್ಟು ಓಡಿಹೋಗಿದ್ದ ಪಂಡಿತರನೇಕರು ಸುಖಮಯ ಬದುಕಿನ ಕನಸು ಕಂಡು ಮರಳಿ ಬಂದಿದ್ದರಂತೆ. ಆದರೇನು? ಜಹಾಂಗೀರ್ ಪಟ್ಟಕ್ಕೆ ಬಂದೊಡನೆ ಮುಸ್ಲೀಮರ ಹಳೆಯ ಕ್ರೌರ್ಯ ಮತ್ತೆ ಮರುಕಳಿಸಿತು. ಷಹಜಹಾನ್ ಕೂಡ ಹಿಂದೆ ಬೀಳಲಿಲ್ಲ. ತನಗೆ ಮಾರ್ಗದರ್ಶನ ಮಾಡುತಿದ್ದ ಮೌಲ್ವಿಗಳ ಮಾತಿನಂತೆ ನಡೆದುಕೊಂಡ. ಮತ್ತೆ ಕಾಶ್ಮೀರದ ಪಂಡಿತರು ಅನಾಥರಾಗಿಬಿಟ್ಟರು. ಪಂಡಿತರೆಂದು ರಸ್ತೆಗಳಲ್ಲಿ ತಿರುಗಾಡುವುದೇ ಕಷ್ಟವಾಯ್ತು! ಮುಂದೆ ಔರಂಗಜೇಬ ಅಧಿಕಾರಕ್ಕೆ ಬಂದಾಗ ಅವನ ಪರವಾಗಿ ಇಫ್ತೆಕಾರ್ಖಾನ್ ಕ್ರೌರ್ಯದ ತಾಂಡವನೃತ್ಯವನ್ನೇ ನಡೆಸಿಬಿಟ್ಟ. ಪಂಡಿತ್ ಕೃಪಾರಾಮ್ರ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಮಂದಿ ಸಿಖ್ಖರ ಗುರು ತೇಗ್ಬಹದ್ದೂರರ ಬಳಿ ತಮ್ಮನ್ನು ರಕ್ಷಿಸುವಂತೆ ಕೇಳಿಕೊಂಡರು. ಪಂಡಿತರ ನೋವನ್ನು ಕೇಳಿ ಕಣ್ಣೀರಿಟ್ಟ ಗುರುಗಳು ಔರಂಗಜೇಬನಿಗೆ ಸವಾಲು ಹಾಕಿದರು, ತನ್ನ ಮತಾಂತರಿಸಿದರೆ ಪಂಡಿತರೂ ಮತಾಂತರವಾಗುತ್ತಾರೆ. ಇಲ್ಲವಾದರೆ ಅವರನ್ನು ಮುಟ್ಟುವಂತಿಲ್ಲ ಅಂತ! ಕ್ರೂರಿ ಔರಂಗಜೇಬ ಬಿಟ್ಟಾನೇನು? ಗುರುಗಳನ್ನು ದೆಹಲಿಗೆ ಎಳತಂದ. ಅನೇಕ ತಿಂಗಳುಗಳ ಕಾಲ ಅವರನ್ನು ಸೆರೆಮನೆಯಲ್ಲಿಟ್ಟ. ಅನ್ನ-ಆಹಾರಗಳನ್ನು ಕೊಡದೇ ಸತಾಯಿಸಿದ. ತೇಗ್ ಬಹದ್ದೂರರು ಯಾವುದಕ್ಕೂ ಜಗ್ಗದಿದ್ದಾಗ ಅವರ ಅನುಯಾಯಿಗಳಾಗಿದ್ದ ಭಾಯಿ ಮತಿದಾಸ್ರನ್ನು ಮರಕಡಿಯುವ ಯಂತ್ರಕ್ಕೆ ಹಾಕಿ ತುಂಡರಿಸಿ ಬಿಸಾಡಿಸಿದ. ಗುರುಗಳು ಒಂದಿಂಚೂ ಅಲುಗಾಡಲಿಲ್ಲ. ಮತ್ತೊಬ್ಬ ಅನುಯಾಯಿ ಭಾಯಿ ದಯಾಳ್ದಾಸರನ್ನು ಕುದಿಯುವ ನೀರಿಗೆ ತಳ್ಳಿ ಮುಳುಗಿಸಿ ಕೊಲ್ಲಲಾಯ್ತು. ಊಹ್ಞೂಂ! ಗುರುಗಳು ಆಗಲೂ ಸಹಿಸಿಕೊಂಡರು. ಕೊನೆಗೆ ಭಾಯಿ ಸತಿದಾಸರನ್ನು ಕೂಡ ಜೀವಂತವಾಗಿ ಸುಡಲಾಯ್ತು. ತೇಗ್ ಬಹದ್ದೂರರು ಆಗಲೂ ಮತಾಂತರವಾಗಲು ಒಪ್ಪಿಕೊಳ್ಳದಿದ್ದಾಗ ಭಕ್ತರೆದುರೇ ಅವರ ತಲೆಯನ್ನು ಕತ್ತರಿಸಿ ಬಿಸಾಡಲಾಯ್ತು. ಲಕ್ಷಾಂತರ ಪಂಡಿತರು ಮತಾಂತರವಾಗದೇ ಇಂದೂ ಉಳಿದಿದ್ದಾರೆಂದರೆ ಅದು ತೇಗ್ಬಹದ್ದೂರರ ಹೌತಾತ್ಮ್ಯದ ಪರಿಣಾಮ ಮಾತ್ರ!’ ಹಾಗೆನ್ನುತಾ ಅಮರ್ನಾಥ್ ವೈಷ್ಣವಿಯವರು ಮಾತು ನಿಲ್ಲಿಸಿಬಿಟ್ಟರು. ನಮ್ಮ ಹೃದಯಗಳೂ ಭಾರವಾಗಿಬಿಡುತ್ತಿದ್ದವು! ಆನಂತರವೂ ಒಂದೆರಡು ಗಂಟೆಗಳ ಕಾಲ ಮಾತುಕತೆ ಮುಂದುವರೆದಿತ್ತು. ಯಾಕೋ ಬದುಕು ಭಾರ ಎನಿಸಲಾರಂಭಿಸಿತು. ಸಂಜೆ ಏಳುಗಂಟೆಗೆ ಕೋಣೆಗೆ ಬಂದು ಈ ಕಥೆಗಳನ್ನೇ ಮೆಲುಕು ಹಾಕುತ್ತಿರುವಾಗ ಅಮರನಾಥ್ ವೈಷ್ಣವಿಯವರ ಆತ್ಮೀಯನೊಬ್ಬ ಕರೆ ಮಾಡಿದ. ಅಲ್ಲಿಂದ ಮಾತನಾಡುತ್ತಿದ್ದ ದನಿ ದುಃಖ ತುಂಬಿಕೊಂಡ ಭಾವದಲ್ಲಿ ‘ಈಗ ತಾನೇ ಅಮರ್ನಾಥ್ ವೈಷ್ಣವಿಯವರು ತೀರಿಕೊಂಡರು. ಮಧ್ಯಾಹ್ನದ ಅನೇಕ ಗಂಟೆಗಳಕಾಲ ನೀವು ಅವರೊಂದಿಗೆ ಮಾತನಾಡಿದ್ದೀರಿ ಎಂದು ಗೊತ್ತಾಯಿತು. ಹೀಗಾಗಿ ವಿಷಯ ಮುಟ್ಟಿಸಿದೆ. ಸಾಧ್ಯವಾದರೆ ಬನ್ನಿ’ ಎಂದು ಫೋನಿಟ್ಟ! ನನ್ನ ಕಿವಿಗಳನ್ನು ನಾನೇ ನಂಬಲಿಲ್ಲ. ಪಂಡಿತರ ಪಿತಾಮಹನ ಹೃದಯದ ತುಂಬ ಪಂಡಿತರ ವೇದನೆಯ ಇತಿಹಾಸ ಸಿಡಿಯಲು ಕಾಯುತ್ತಿತ್ತು. ಲಾವ ಹೊರಗೆ ಹರಿದು ಹೋದೊಡನೆ ಆ ಇಡಿಯ ಜ್ವಾಲಾಮುಖಿ ಶಾಂತವಾಯ್ತು!

9

ಪಂಡಿತರು ಮತ್ತು ಪಂಡಿತರ ಪಿತಾಮಹ ಇಂದಿಗೂ ನನ್ನನ್ನು ಕಾಡುತ್ತಾರೆ..

Comments are closed.